ARTICLES
ಮರೆಯಾಗುತ್ತಿರುವ ತುಳುನಾಡ ಸಂಸ್ಕೃತಿ- ಜೀವನ ಪದ್ಧತಿ ಮತ್ತೆ ಕಂಗೊಳಿಸುತ್ತಿದೆ ಧರ್ಮ ಬೋಧಿಸುವ ನೆಲೆಯಲ್ಲಿ ; 15ಲಕ್ಷ ರೂ.ವೆಚ್ಚದಲ್ಲಿ ಕಲ್ಯಾಣಪುರ ಚರ್ಚ್ನಲ್ಲಿ ಮ್ಯೂಸಿಯಂ
Source : ವಿಶೇಷ ವರದಿ:ಜಯಪ್ರಕಾಶ್ ಕಿಣಿ, ಉಡುಪಿ.and English News DHNS


Antiques narrate saga of Tulunadu in Udupi

Tulunadu with affluent traditional and cultural history adorns the heritage of coastal area. The customs and rituals practiced in the era is edifice for artistic bequest.

Tulunadu had an exclusive civilisation with unique lifestyle. It is an incredible distinctive treasure of primordial evolution.

Here is a rare attempt to preserve and conserve the prosperous ethnicity of Tulunadu in the form of antiques that narrate the saga of Tulunadu. The museum exclusively dedicated to replicate the culture and tradition of Tulunadu is set up at Kalyanpur Milagres Church. Rev Fr Marcel Saldanha should be endorsed with the acclaims for venturing into an innovative perception never tried before.

Kalayanpur Milagres Church with its 330 years of spiritual legacy is now opening up to a new horizon in its attempt to introduce the stunning Tulunadu history to the outside world. Fr Marcel Saldanha was keen in his desire to start off with something that brings imperishable memories of Tulunadu back into reminiscence. The museum incorporates all the wonders of Tulunadu that unwrap the entire culture of an era before the viewers. Speaking to City Herald, Fr Saldanha informed that the main purpose of opening a museum with antique objects representing Tulunadu culture is to introduce school children to the rich culture that existed in this land once. “A committee will be set up in the coming days for the maintenance of museum. However, the problem before us is the safety of materials that are displayed here,” he added.

The museum is set up at a cost of Rs 1 lakh. Most of the things in museum are from in and around Kalyanpur. There are as many as 460 houses surrounding Milagres Church. Fr Saldanha had expressed his wish to open a museum and urged people in the neighbouring areas to contribute whatever seems to be historic. He himself visited about 120 houses and collected some priceless objects that were half buried and lost in the corners of the houses. ‘Kaikule,’ ‘kutthari,’ bamboo baskets, ‘onake’, clay pots, ‘chennamene,’ ‘beediru noga’, ‘seru’, ‘pavu’, cradle, ‘kalambi’, ‘kallina hande’, jewel box and ‘kaludeep’ exclusively substantiates the way of life of Tulunadu. Besides, the museum incorporates varieties of old radios, gramophone, tape recorders, typewriters, clocks, telephones, alarm, spectacles, cameras, watches, torches, wooden wash basin, glass bottles, sewing machines and so on.

Ancient church bell, battery less mouth organ, materials used to offer prayers, all these objects create a sort of nostalgia. Fish skeleton, wooden materials used in farming, utensils with primitive touch, varieties of knives, stilettos and swords, jaws of wild pig, varieties of ancient modelled chairs and tables, bronze and copper materials create the ambience of virtual bond with prehistoric civilisation. The fusion of culture and tradition is simulated in each object that is displayed in the museum. The museum is kept open for public viewing from July 4. Fr Saldanha himself is the curator of the museum at present. He elucidates the intricacies of each particulars stored in the museum. Indeed, the materials displayed in the museum are absolutely precious and visualises the magnificent endeavour of conserving the extinct legacy.

ಮರೆಯಾಗುತ್ತಿರುವ ತುಳುನಾಡ ಸಂಸ್ಕೃತಿ- ಜೀವನ ಪದ್ಧತಿ ಮತ್ತೆ ಕಂಗೊಳಿಸುತ್ತಿದೆ ಧರ್ಮ ಬೋಧಿಸುವ ನೆಲೆಯಲ್ಲಿ ; 15ಲಕ್ಷ ರೂ.ವೆಚ್ಚದಲ್ಲಿ ಕಲ್ಯಾಣಪುರ ಚರ್ಚ್ನಲ್ಲಿ ಮ್ಯೂಸಿಯಂ


ಉಡುಪಿ:ಜು,14. ಮನೆಯ ಮೂಲೆಯಲ್ಲೊ,ಅಟ್ಟದ ಮೇಲೊ,ತರಕಾರಿ ತೋಟದ ನಡುವೆಯೊ ಬಿದ್ದು ಅಪಮೌಲ್ಯಕ್ಕೊಳಗಾಗುತ್ತಿದ್ದ ಅದೆಷ್ಟೋ ಅಪರೂಪದ ಸೊತ್ತುಗಳು ಇಲ್ಲಿ ಮರುಜೀವ ಪಡೆದು ಕೊಂಡಿವೆ. ಮರೆಯಾಗುತ್ತಿರುವ ತುಳುನಾಡ ಸಂಸ್ಕೃತಿ,ಜೀವನ ಪದ್ಧತಿ ಮತ್ತೆ ಕಂಗೊಳಿಸುತ್ತಿದೆ.ಧರ್ಮ ಬೋಧಿಸುವ ನೆಲೆ ಪ್ರಾಚೀನ ಪರಂಪರೆಯ ಸ್ಫೂರ್ತಿ ಸೆಲೆಯಾಗಿ ಹೊರ ಹೊಮ್ಮುತ್ತಿದೆ.

ಚರ್ಚ್¯ನ ಧರ್ಮಗುರು ಮಿಲಾಗ್ರಿಸ್ ವಿದ್ಯಾ ಸಂಸ್ಥೆಗಳ ಸಂಚಾಲಕ ರೆ.ಫಾ.ಮಾರ್ಸೆಲ್ ಸಲ್ದಾನರ ಹಲವು ವರ್ಷಗಳ ಪ್ರಯತ್ನದ ಫಲ ಈ ಮ್ಯೂಸಿಯಂ.ಅವರಲ್ಲಿ ಅಂತರ್ಗತವಾಗಿದ್ದ ಸಂಸ್ಕೃತಿಯ ಮೇಲಿನ ಅತೀವ ಪ್ರೀತಿ, ಪ್ರಾಚೀನ ವಸ್ತುಗಳ ಬಗೆಗಿನ ಕಾಳಜಿ ಇದರ ಹುಟ್ಟಿಗೆ ಕಾರಣ.330ವರ್ಷಗಳ ಇತಿಹಾಸ ಹೊಂದಿರುವ ಮಿಲಾಗ್ರಿಸ್ ಚರ್ಚ್, ಈ ಮ್ಯೂಸಿಯಂನಿಂ ದಾಗಿ ಪ್ರವಾಸಿ ತಾಣವಾಗಿಯೂ ಬೆಳೆಯುತ್ತಿದೆ.

ಈ ಮ್ಯೂಸಿಯಂ ತುಳುನಾಡಿನ ಪ್ರಾಚೀನ ಸಂಸ್ಕೃತಿ,ಕೃಷಿ ಪದ್ಧತಿ,ವ್ಯವಹಾರ, ಕೌಶಲಗಳು ಸೇರಿದಂತೆ ಹತ್ತು ಹಲವು ವಿಷಯಗಳ ಅದ್ಭುತ ಜಗತ್ತು. ಜನರ ನಿರ್ಲಕ್ಷಕ್ಕೆ ಒಳಗಾಗಿ ಕಣ್ಮರೆಯಾಗಿರುವ ಅದೆಷ್ಟೋ ಅಪರೂಪದ ವಸ್ತುಗಳನ್ನು ಇಲ್ಲಿ ಕಾಣಬಹುದು. ಇವು ಬಾಲ್ಯದ ನೆನಪನ್ನು ಮೆಲುಕು ಹಾಕಿಸುತ್ತದೆ. ಪೂರ್ವಜರ ಕೌಶಲ ಗಳ ಬಗ್ಗೆ ಬೆರಗು ಮೂಡಿಸುತ್ತವೆ.

ಅಪರೂಪದ ಹಲವು ಕೃಷಿ ಪರಿಕರಗಳ ಸಂಗ್ರಹ ಎಲ್ಲರ ಗಮನ ಸೆಳೆಯುತ್ತವೆ.ಬೇರಿನಿಂದ ಮೂಡಿದ ನೊಗ, ವಿವಿಧ ಮಾದರಿಯ ಹಾಗೂ ಗಾತ್ರದ ನೊಗ,ಏತ,ಅಕ್ಕಿಮುಡಿ ಕಟ್ಟಲು ಬಳಸುವ ಕೊಡಂಚಿ,ಮುಡಿಯಿಂದ ಅಕ್ಕಿ ತೆಗೆದು ಪರೀಕ್ಷಿಸುವ ಟೆಸ್ಟರ್,ಕೈಕುಳೆ,ಕೋಣ ಕಟ್ಟುವ ಸಲಕರಣೆ,ಕೋಣ ಓಡಿಸುವ ಕನಪಾಲೆ,ಗದ್ದೆ ಸಮತಟ್ಟು ಮಾಡುವ ಮರದ ಸಲಕರಣೆ,ವಿವಿಧ ಕತ್ತಿ,ಹಾರೆಗಳು ಗ್ರಾಮೀಣ ಸೊಗಡನ್ನು ಬಿಂಬಿಸುತ್ತವೆ. ದೋಣಿ, ಮೀನು ಹಿಡಿಯುವ ಕುತ್ತರಿ, ದೊಡ್ಡ ಗಾತ್ರದ ಮೀನಿನ ಅಸ್ತಿಪಂಜರ ಇತ್ಯಾದಿಗಳು ಆಕರ್ಷಕವಾಗಿವೆ.

ಪ್ರಾಚೀನ ತುಳು ಜನಜೀವನ ಪದ್ಧತಿ ಯನ್ನು ಪ್ರತಿಬಿಂಬಿಸುವ ಅಪರೂಪದ ವಸ್ತುಗಳ ಸಂಗ್ರಹ ಇಲ್ಲಿದೆ.ಬಿದಿರಿನಿಂದ ತಯಾರಿಸಿರುವ ಮೆಣಸು ಹಾಕುವ ಬೃಹತ್ ಬುಟ್ಟಿ, ಸೇರು,ಪಾವು,ಸಾಂಬಾರು ಹಾಕಿಡುವ ಮರದ ಕರಡಿಗೆ,ಒನಕೆ, ಮಣ್ಣಿನ ಬಿಸಾಲೆ,ಓಡು,ಅಕ್ಕಿ ಅಳತೆ ಮಾಡುವ ಕಲಸಿ,ಗಂಜಿ ಬಸಿಯುವ ಸಾಮಗ್ರಿ, ವಿವಿಧ ಬಗೆಯ ಮರದ ಆಕರ್ಷಕ ತೊಟ್ಟಿಲು, ಸ್ಟವ್, ಚೆನ್ನೆಮಣೆ, ಮರದ ಪೆಟ್ಟಿಗೆಗಳು,ಲಾಟಿನ್, ಇಡೀ ಮರವನ್ನು ಕೊರೆದು ರಚಿಸಿರುವ ಬಹುಪಯೋಗಿ ಕಳಂಬಿ,ರಾಗಿ-ಅಕ್ಕಿ ಬೀಸುಕಲ್ಲುಗಳು, ಮಾವಿನಹಣ್ಣು, ಹಲಸಿನ ತೊಳೆಗಳನ್ನು ಹಾಳಾಗದಂತೆ ಕಾಪಿಡಲು ಬಳಸುವ ದೊಡ್ಡ ಮಡಕೆಗಳು,ವಿವಿಧ ವಿನ್ಯಾಸದ ಕಾಲುದೀಪಗಳು,ಪಿಂಗಾಣಿ ಮನೆ ಬಳಕೆ ವಸ್ತುಗಳು, ಟ್ರಂಕ್¯ಗಳು, ಕಲ್ಲಿನ ಕಿಟಕಿ, ಕುದುರೆಗೆ ಹುರುಳಿ-ನೀರು ಹಾಕುವ ಕಲ್ಲಿನಿಂದ ತಯಾರಿಸಿದ ಹಂಡೆ, ಕುರ್ಚಿ, ಚಿನ್ನಾಭರಣ ಹಾಕಿಡುವ ಹಳೆಯ ತಾಮ್ರದ ಸಣ್ಣ ಪೆಟ್ಟಿಗೆಗಳು... ಹೀಗೆ ನಾವು ಮರೆತೇ ಬಿಟ್ಟಿರುವ ಅಥವಾ ಕಣ್ಮರೆಯಾಗಿರುವ ಅದೆಷ್ಟೋ ದಿನಬಳಕೆಯ ವಸ್ತುಗಳನ್ನು ನಾವಿಲ್ಲಿ ಕಾಣಬಹುದು.

ಶತಮಾನ ಕಂಡ ಬ್ಯಾಟರಿ ರಹಿತ ಆರ್ಗನ್, ಚರ್ಚ್¯ನಲ್ಲಿ ಹೋಲಿಕ್¯ನಲ್ಲಿ ಬಾರಿಸುವ ಶತಮಾನ ಕಂಡ ಗಂಟೆಯ ಮಾದರಿ,ಮನೆಯಲ್ಲಿಡುವ ದೇವರ ಗದ್ದಿಗೆ, ಹಲವು ದಶಕಗಳಷ್ಟು ಹಳೆಯದಾದ ಟೇಪ್ ರೆಕಾರ್ಡರ್, ಗ್ರಾಮಫೋನ್, ಟೈಪ್¯ರೈಟರ್, ರೇಡಿಯೋ, ಗಡಿಯಾರಗಳು,ಪ್ರಾಚೀನ ಟೆಲಿ ಫೋನ್¯ಗಳು,ಅಲರಾಂ,ಕನ್ನಡಕ, ಕ್ಯಾಮೆರಾ, ಟಾರ್ಚ್, ವಾಚುಗಳು, ಗೋಲಿ ಸೋಡಾ ತಯಾರಿ ಸುವ ಯಂತ್ರ, ಮರದ ವಾಶ್¯ಬೇಸಿನ್, ಗಾಜಿನ ಬಾಟಲಿ ಗಳು, ಹೊಲಿಗೆ ಯಂತ್ರಗಳು... ಪ್ರತಿಯೊಂದು ವಸ್ತುವೂ ಮೂಕವಿಸ್ಮತ ರನ್ನಾಗಿಸುತ್ತದೆ.

ಹಳೆಯ ತೂಕದ ಸಾಮಾನು, ಹಾಲು ಅಳೆಯುವ ಸಲಕರಣೆಗಳು, ಪಾಯಸ ಬಡಿ ಸುವ ಮರದ ಸೌಟು, ಮರ ಹಾಗೂ ಮಣ್ಣಿನ ಹಲವು ಗೃಹ ಬಳಕೆಯ ಸೊತ್ತುಗಳು, ಬಾವಿ ಯಿಂದ ನೀರು ಸೇದುವ ಬೃಹತ್ ರಾಟೆ, ಕಾಡು ಹಂದಿಯ ದವಡೆ ನಿಬ್ಬೆರಗುಗೊಳಿಸು ವಂತಿದೆ. ಚರ್ಚ್¯ಗಳಲ್ಲಿ ಬಳಸುತ್ತಿದ್ದ ಹಲವು ವಸ್ತುಗಳ ಸಂಗ್ರಹವೂ ಇಲ್ಲಿದೆ.

ಸಂಗ್ರಹಾಲಯದ ವಸ್ತುಗಳೆಲ್ಲ ಕಲ್ಯಾಣಪುರದ್ದೇ!



ಮ್ಯೂಸಿಯಂನಲ್ಲಿ ಸಂಗ್ರಹಿಸಿರುವ ಅಪರೂಪದ ಪ್ರಾಚೀನ ವಸ್ತುಗಳೆಲ್ಲವೂ ಕಲ್ಯಾಣಪುರ ಮಿಲಾಗ್ರಿಸ್ ಚರ್ಚ್ ವ್ಯಾಪ್ತಿಯ ಮನೆಗಳದ್ದೇ ಎಂದು ನಂಬುವುದು ಕಷ್ಟವಾದರೂ ಇದು ಸತ್ಯ!.

ಈ ಚರ್ಚ್ ವ್ಯಾಪ್ತಿಯಲ್ಲಿ ಸುಮಾರು ೪೬೦ ಕ್ರಿಶ್ಚಿಯನ್ನರ ಮನೆಗಳಿವೆ.ರೆ.ಫಾ.ಮಾರ್ಸೆಲ್ ಸಲ್ದಾನ ಪ್ರಾಚೀನ ವಸ್ತು ಸಂಗ್ರಹಾಲಯದ ಅಭಿಲಾಷೆಯನ್ನು ಚರ್ಚ್¯ನಲ್ಲಿ ಕೆಲವು ತಿಂಗಳ ಹಿಂದೆ ಪ್ರಕಟಿಸಿದ್ದರು. ತಾನೇ ಖುದ್ದಾಗಿ ತಮ್ಮ ಮನೆಗಳಿಗೆ ಬಂದು ಅವುಗಳನ್ನು ಪಡೆದುಕೊಳ್ಳು ವುದಾಗಿ ತಿಳಿಸಿದ್ದರು.

ಅದರಂತೆ ಸುಮಾರು 120ಮನೆಗಳಿಗೆ ಟೆಂಪೊ ಗೊತ್ತು ಮಾಡಿಕೊಂಡು ಹೋದ ಫಾ.ಮಾರ್ಸೆಲ್, ಪ್ರಾಚೀನ ವಸ್ತುಗಳಿಗಾಗಿ ಮನೆಯ ಮೂಲೆ ಮೂಲೆ ಹುಡುಕಾಡಿದರು. ಮನೆಯವರಿಗೇ ಗೊತ್ತಿಲ್ಲದಂತೆ ಪಾಳು ಬಿದ್ದಿದ್ದ ಹಲವು ಅಮೂಲ್ಯ ವಸ್ತುಗಳನ್ನು ಗುರು ತಿಸಿದರು. ಹೀಗೆ ಸಂಗ್ರಹಿತ ಸಾವಿರಾರು ವಸ್ತುಗಳಿಗೆ ಫಾ.ಮಾರ್ಸೆಲ್ ವ್ಯವಸ್ಥಿತ ನೆಲೆ ಒದಗಿಸಿದರು.

ಪಾದ್ರಿಯವರಿ೦ದ ಸಂಸ್ಕೃತಿ ಉಳಿಸುವ ಯತ್ನ:

ಅಪರೂಪದ ಪ್ರಾಚೀನ ವಸ್ತುಗಳ ಸಂಗ್ರಹ ರೆ.ಪಾ.ಮಾರ್ಸೆಲ್ ಸಲ್ದಾನರ ನೆಚ್ಚಿನ ಹವ್ಯಾಸ. ಕಳೆದ 20ವರ್ಷಗಳ ಅವರ ಈ ಹವ್ಯಾಸ ಈಗ ಮ್ಯೂಸಿಯಂ ಆರಂಭಕ್ಕೆ ಕಾರಣವಾ ಗಿರುವುದು ಜನಮೆಚ್ಚುಗೆಗೆ ಪಾತ್ರವಾಗಿದೆ.

ಮೂಲತಃ ಮೂಡಬಿದ್ರೆಯ ಶಿರ್ತಾಡಿಯವರಾದ ಫಾ.ಮಾರ್ಸೆಲ್, ಕಳೆದ ಆರು ವರ್ಷಗಳಿಂದ ಮಿಲಾಗ್ರಿಸ್ ಚರ್ಚ್¯ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರೋಮ್, ಈಜಿಪ್ಟ್, ಧರ್ಮಸ್ಥಳಗಳಲ್ಲಿರುವ ಮ್ಯೂಸಿಯಂಗಳಿಗೆ ಭೇಟಿ ನೀಡಿದ್ದ ಅವರಿಗೆ ತಾನೂ ಆ ರೀತಿಯ ಮ್ಯೂಸಿಯಂ ಸ್ಥಾಪಿಸುವ ಆಲೋಚನೆ ಮೂಡಿತ್ತು. ಅವರ ಕನಸಾಗಿ ರೂಪು ತಳೆದ ಮ್ಯೂಸಿಯಂನ್ನು ಜು.೪ರಿಂದ ಸಾರ್ವಜನಿಕ ಕ್ಷಣೆಗೆ ತೆರೆದಿಡಲಾಗಿದೆ. ಸದ್ಯಕ್ಕೆ ಗೈಡ್ ಆಗಿ ಫಾ. ಮಾರ್ಸೆಲ್¯ರೇ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಳೆದ 6ತಿಂಗಳಿಂದ ತನ್ನ ಬಿಡುವಿನ ಸಮಯವನ್ನು ಮ್ಯೂಸಿಯಂ ವ್ಯವಸ್ಥೆಗೊಳಿಸುವುದ ಕ್ಕಾಗಿ ಅವರು ವ್ಯಯಿಸುತ್ತಿದ್ದಾರೆ. ಈ ಸೊತ್ತುಗಳನ್ನು ಸಂಗ್ರಹಿಸಿ, ಇಲ್ಲಿ ವ್ಯವಸ್ಥೆಗೊಳಿಸಲು ಸುಮಾರು 15ಲಕ್ಷ ರೂ. ವೆಚ್ಚವಾಗಿದೆ ಎಂದವರು ಹೇಳುತ್ತಾರೆ.

ಪುರಾತನ ವಸ್ತುಗಳ ಕುರಿತಂತೆ ಶಾಲಾ ಮಕ್ಕಳಿಗೆ ತಿಳಿಸಬೇಕೆಂಬ ಉದ್ದೇಶದಿಂದ ಈ ಮ್ಯೂಸಿಯಂನ್ನು ತೆರೆದಿದ್ದೇನೆ. ಮುಂದೆ ಇದಕ್ಕೊಂದು ಸಮಿತಿ ರಚಿಸಿ, ಆ ಮೂಲಕ ಇದರ ನಿರ್ವಹಣೆಗೆ ಉದ್ದೇಶಿಸಲಾಗಿದೆ. ಇಲ್ಲಿನ ಸೊತ್ತುಗಳಿಗೆ ಭದ್ರತೆ ಒದಗಿಸುವುದೇ ದೊಡ್ಡ ಚಿಂತೆಯಾಗಿದೆ.ಎನ್ನುತ್ತಾರೆ ಫಾ.ಮಾರ್ಸೆಲ್ ಸಲ್ದಾನ.

  • Milagres Musuem Full photographs from Milagreans.com Click Here

  • Email to a friend Send your feedback Print this article

    Comments on this article:5
    Melroy,  Dubai Date:SEP 7, 2010
    cost of 15 lakhs?!!!
    Clara Lewis,  Dubai,U.A.E Date:SEP 4, 2010
    Very good effort by Rev. Fr. Marcel Saldana to collect and preserve antique peices for the future generation,

    some of the things in the collection we used in our day to day life in our childhood is now antique to younger generation.

    Richard Crasto,  India Date:AUG 26, 2010
    Well done Fr Marcel cheers for your difficult task.

    Collection of antiques is your hobbies you represent the past to the present generation by exhibiting grand fatherļæ½s belongings by doing this you bring harmony amongst people.

    Thanks once again and let there be more spiritual collections in your account....

    nelson jernis,,   kuwait Date:JUL 14, 2010
    Its a great achievment of Fr. Saldanha,
    Naveen,  Dubai Date:JUL 14, 2010
    A Very Good article and nice informations

    A praiseworthy effort by Rev. Fr. Marcel Saldanha to preserver the treasures of 300 years and above.

    God Bless you dear Fr.



    Please fill in the form below with your comments.

    * mark fields are compolsory

    News Heading:
    Your Name:  *
    E-mail:  *
    Present Country:  *
    Contact Deatils :
    Comments :
     


      Monthi Fest Celebrated at Infant Jesus Shrine Bikarnakatte, Mangalore. - 9/8/2010
      Monthi Fest Celebrations 2010 - 9/8/2010
    Sponsored Links
    'BINDAS BOLLYWOOD' thriller on Oct.29 in Dubai

    Rakno Konkani Weekly Magazine Read Online

    Monti Fest celebrations by Mount Rosary Gulf Association in Dubai on 17th Sep, 2010.

    Rakno Konkani Weekly Magazine Read Online This Week(02-09-2010)

    Monti Fest - Church Of Our Lady Of Rosary Doha-Qatar on Sept 8, 2010

    MCA, Qatar Celebrates Monti Fest on 17th Sep, 2010.

    Yego Pisolya by Stany Mendonca

    Towards the 3rd Floor, EDEN HERITAGE Work in progress, have a LOOK & BOOK now.

    Al Nof Household Appliances Trading LLC for quality goods and competitive prices

    The First World Konkani Cultural Convention a 25-days Festival of Konkani Culture (from November 25 to December 19, 2010),

    Dubai: Art & Image Saloon - to Enhance Your Looks...
    Main Sponsor
    Sponsors

    Best Wishes



    A Venture by: Kemmannu Flowers, UAE.
    For all Website related - Email:
    kemmannu@gmail.com
    kemannu@yahoo.com
    Kemmannu Contact: kemmannucontact@yahoo.com
    Disclaimer | Contact Us
    Copyright ©2005 - 2010. All rights reserved, www.kemmannu.com.
    Vision by : Richard Crasto, Designed by : Jaanavi.com, Dubai