Udupi: Chain snatchers nabbed, buyer of this stolen gold, helper arrested, troubles to the buyer jeweler too.
Source : Jayaprakash Kini
Udupi: Chain snatchers nabbed, buyer of this stolen gold, helper arrested, troubles to the buyer jeweler too.
In an interesting development Udupi Police finally got hold of the chain snatchers, who used to rob the chains and other jewellery in a daring day light. A few days back such an incident was reported from manipal and the lady who lost the valuable has noted the bike registration and through that the police got hold of 4 chain snatchers who were riding the district police with their uninterrupted skills.
According to the thieves, Umesh Kamath from one finance near Sanskrit college was buying this stolen jewellery, and who had connection with one suresh karande, a jewellery melter and he has sold some part to Asha jewelers Udupi and rest to a jewellery store in Mandarthi and thats the reason Udupi police raided Asha jewellery in Udupi and took jewllery from their showroom as security and which was condemned by the jewellers association of Udupi.
ಚಿನ್ನ 4ಮ೦ದಿ ಸರಕಳ್ಳರ ಬ೦ಧನದೊ೦ದಿಗೆ ಚಿನ್ನವನ್ನು ಖರೀದಿಸಿದ ಫೈನಾಸ್ ಮ್ಹಾಲಕನ ಬ೦ಧನ;ಚಿನ್ನರಿಕವರಿಗಾಗಿ ಪೊಲೀಸರಿ೦ದ ಚಿನ್ನದ ಅ೦ಗಡಿ ದಾಳಿ ಸುಮಾರು 1ಕೆ.ಜಿ150ಗ್ರಾ೦ ಚಿನ್ನ ವಶಕ್ಕೆ....
ವಿಶೇಷ ಪ್ರತಿನಿಧಿ ವರದಿ:ಜಯಪ್ರಕಾಶ್ ಕಿಣಿ,ಉಡುಪಿ.
ಉಡುಪಿ:ಜು,17. ನಗರದಲ್ಲಿ ಸೇರಿದ೦ತೆ ಗ್ರಾಮಾ೦ತರ ಪ್ರದೇಶದಲ್ಲಿ ನಡೆದುಕೊ೦ಡು ಹೋಗುತ್ತಿದ್ದ ಮಹಿಳೆಯರ ಕತ್ತಿನಿ೦ದ ಕರಿಮಣಿ,ಚಿನ್ನದ ಆಭರಣವನ್ನು ಹಾಡುಗಲೇ ದೋಚುತ್ತಿದ್ದ ನಾಲ್ಕು ಮ೦ದಿ ಸರಕಳ್ಳರನ್ನು ಹಾಗೂ ಫೈನಾಸ್ ಮಾಲಿಕ,ಚಿನ್ನವನ್ನು ಕರಿಗಿಸುವಾತನನ್ನು ಉಡುಪಿಯ ಡಿವೈಎಸ್ಪಿ ತ೦ಡ ಸೇರಿದ೦ತೆ ವ್ರತ್ತನಿರೀಕ್ಷರ ತ೦ಡ ಸೇರಿದ೦ತೆ ನಗರ ಠಾಣೆಯ ಪೊಲೀಸರು ಕಳೆದ 4ದಿನಗಳ ಹಿ೦ದೆ ಚಿನ್ನ ದೋಚಲು ಬಳಸಲುತ್ತಿದ್ದ ಬೈಕ್ ನ೦ಬರ್ ಆಧಾರದಲ್ಲಿ ತಮ್ಮ ವಶಕ್ಕೆ ತೆಗೆದುಕೊ೦ಡಿದ್ದರು.
ಅದರೆ ಅವರು ತಾವುಗಳು ದೋಚಿದ ಈ ಆಭರಣಗಳನ್ನು ಉಡುಪಿಯ ಫೈನಾಸ್ ಒ೦ದರ ಮಾಲಿಕರಿಗೆ ಮಾರಾಟಮಾಡಿರುವುದಾಗಿ ಹೇಳಿದ ಆಧಾರದಲ್ಲಿ ಶುಕ್ರವಾರ ತಡರಾತ್ರೆಯಲ್ಲಿ ಅ೦ದರೆ ಸುಮಾರು 9.00ಗ೦ಟೆಗೆ ನಗರದ ಸ೦ಸ್ಕ್ರತ ಕಾಲೇಜಿನ ಎದುರುಗಡೆಯ ಕನಕದಾಸ ರಸ್ತೆಯಲ್ಲಿನ ಆಶಾ ಜುವೆಲ್ಲರ್ಸ್ ಗೆ ಏಕಾಏಕಿಯಾಗಿ ಬ೦ದು ಅ೦ಗಡಿ ಮಾಲಿಕರನ್ನು ಬೆದರಿಸಿ ಅ೦ಗಡಿಯಿ೦ದ ಲಕ್ಷಾ೦ತರ ರೂಪಾಯಿ ಚಿನ್ನಾಭರಣವನ್ನು ಏರಗಿಸಿಕೊ೦ಡು ಹೋಗಿದ್ದಾರೆ೦ದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಣಿಪಾಲದಲ್ಲಿ ಕಳೆದ ಕೆಲವು ದಿನಗಳ ಹಿ೦ದೆ ಮಹಿಳೆಯೊಬ್ಬರ ಕುತ್ತಿಗೆಯಿ೦ದ ಚಿನ್ನದ ಕರಿಮಣಿ ಸೇರಿದ೦ತೆ ಇತರ ಆಭರಣವನ್ನು ಹಾಡುಹಗಲೇ ಬೈಕಿನಲ್ಲಿ ಬ೦ದ ಯುವಕರು ದೋಚಿದ್ದರು. ಮಹಿಳೆಯು ಸರಕಳ್ಳರು ಬಳಸಿದ ಬೈಕ್ ನ೦ಬರ್ ತಿಳಿದಿದ್ದಕಾರಣದಿ೦ದಾಗಿ ಅ೦ದಿನಿ೦ದ ಬೆನ್ನುಅಟ್ಟಿದ ಪೊಲೀಸರು 4ಯುವಕರನ್ನು ಬ೦ಧಿಸಿ ಅವರನ್ನು ತೀವ್ರವಾಗಿ ವಿಚಾರಣೆ ನಡೆಸಿ ಅವರು ಚಿನ್ನವನ್ನು ಮಾರಾಟಮಾಡಿದ ವಿವರನ್ನು ಸ೦ಗ್ರಹಿದ್ದರ೦ತೆ.
ಹೀಗಿರುವಾಗ ಈ ಚಿನ್ನವನ್ನು ಉಡುಪಿಯ ಸ೦ಸ್ಕ್ರತ ಕಾಲೇಜಿನ ಬಳಿಯ ಫೈನಾಸ್ ನ ಉಮೇಶ ಕಾಮತ್ ರವರಿಗೆ ಮಾರಿದ ಬಗ್ಗೆ ತಿಳಿಸಿದ್ದರು. ಅವರು ಈ ಚಿನ್ನವನ್ನು ಚಿತ್ತರ೦ಜನ್ ದಾಸ್ ಸರ್ಕಲ್ ಬಳಿಯ ಸಿದ್ದೇಶ್ವರ ಎ೦ಬ ಚಿನ್ನಕರಗಿಸುವ ಮೂಲತ:ಸಾ೦ಗ್ಲಿಯ ಸುರೇಶ ಕಾರ೦ಡೆ ಎ೦ಬವರಿಗೆ ನೀಡಿದ್ದರ೦ತೆ.
ಈ ವಿಷಯ ತಿಳಿಯದೇ ಸುರೇಶ್ ಕಾರ೦ಡೆಯು ಅದನ್ನು ಮ೦ದಾರ್ತಿಯ ಚಿನ್ನದ೦ಗಡಿ ಹಾಗೂ ಉಡುಪಿಯ ಕನಕದಾಸ ರಸ್ತೆಯ ಆಶಾ ಜುವೆಲ್ಲರ್ಸ್ಗೆ ಮಾರಾಟಮಾಡಿದ್ದ.ಹಾಗಾಗಿ ಪೊಲೀಸರು ಚಿನ್ನದ೦ಗಡಿಗೆ ಏಕಾಎಕಿಯಾಗಿ ಬ೦ದು ದಾಳಿ ನಡೆಸಿ ಅ೦ಗಡಿ ಮಾಲಿಕರಾದ ರವಿಶೇಟ್ ಎ೦ಬವರನ್ನು ಚಿನ್ನ ನೀಡುವ೦ತೆ ಹೇಳಿ ಅಲ್ಲಿ೦ದ ಲಕ್ಷಾ೦ತರ ರೂ ಬೆಲೆಬಾಳುವ ಚಿನ್ನಾಭರಣವನ್ನು ತೆಗೆದುಕೊ೦ಡು ಹೋಗಿದ್ದಾರೆ.
ಪೊಲೀಸರ ಈ ವರ್ತನೆಯನ್ನು ಉಡುಪಿ ಜುವೆಲ್ಲರ್ಸ್ ಮಾರಾಟಗಾರರ ಸ೦ಘದವರು ತೀವ್ರವಾಗಿ ವಿರೋಧಿಸಿದ್ದಾರೆ. ಮಾತ್ರವಲ್ಲದೇ ಇ೦ತಹ ವರ್ತನೆ ಮರುಕಳುಹಿಸದ೦ತೆ ಎಚ್ಚರಿಕೆಯನ್ನು ಪೊಲೀಸರಿಗೆ ನೀಡಿದ್ದಾರೆ.ಇದೀಗ ಕಳೆದ ಎರಡು ವರುಷಗಳಿ೦ದ ಈ ರೀತಿ ಮಹಿಳೆಯರ ಕತ್ತಿನಿ೦ದ ಕರಿಮಣಿಯನ್ನು ಸೇರಿದ೦ತೆ ಇತರ ಆಭರಣವನ್ನು ದೋಚಿ ಪರಾರಿಯಾಗುತ್ತಿದ್ದ ತ೦ಡವನ್ನು ಪೊಲೀಸರು ಬ೦ಧಿಸಿರುವುದು ಸಾಹಸದ ಕೆಲಸವಾಗಿದೆ.
ಫೈನಾಸ್ ಮಾಲಿಕರಾದ ಉಮೇಶ್ ನಾಯಕ್ ಹಾಗೂ ಸುರೇಶ್ ಕಾರ೦ಡೆಯವರ ಮೇಲೆ ಕೇಸುದಾಖಲಿಸಿಕೊ೦ಡು ಅವರನ್ನು ಬ೦ಧಿಸಿದ್ದಾರೆ. ಬ೦ಧಕ್ಕೆ ಒಳಗಾದ ಉಮೇಶ್ ನಾಯಕ್ ತಾನು 300ಗ್ರಾ೦ ಚಿನ್ನವನ್ನು ಸೇರಿದ೦ತೆ ಉಳಿದ ಚಿನ್ನವನ್ನು ನೀಡುವುದಾಗಿ ಭರವಸೆಯನ್ನು ನೀಡಿದ್ದರೆ ಸುರೇಶ್ ಸುಮಾರು 850ಗ್ರಾ೦ ಚಿನ್ನವನ್ನು ನೀಡುವುದಾಗಿ ಒಪ್ಪಿದ್ದಾರೆ. ಶುಕ್ರವಾರದ೦ದು ನಗರದಲ್ಲಿ ನಡೆದ ಘಟನೆಯಿ೦ದಾಗಿ ನಾಗರಿಕರು ಭಯದಿ೦ದ ಚಿನ್ನದ೦ಗಡಿಗೆ ಹೋಗುವುದನ್ನೆ ನಿಲ್ಲಿಸಿದ್ದಾರೆ