ಪಡುಬಿದ್ರಿ:ಬಸ್ಸು ಕಾಯುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ನಿಟ್ಟೆ ಕಾಲೇಜಿನ ಇ೦ಜಿನಿಯರಿ೦ಗ್ ವಿದ್ಯಾರ್ಥಿನಿಯ ದಾರುಣ ಸಾವು
Source : ವಿಶೇಷ ವರದಿ:ಜಯಪ್ರಕಾಶ್ ಕಿಣಿ,ಉಡುಪಿ
ಪಡುಬಿದ್ರಿ:ಬಸ್ಸು ಕಾಯುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ನಿಟ್ಟೆ ಕಾಲೇಜಿನ ಇ೦ಜಿನಿಯರಿ೦ಗ್ ವಿದ್ಯಾರ್ಥಿನಿಯ ದಾರುಣ ಸಾವು
Lorry Accident: Nitte Engineering college student waiting for bus near Padubidri dies on the spot
In the outskirts of padubidri police station of NH 17 a engineering student lost her life while she was waiting for bus along with a fellow student when a lorry hit them, one died on the spot and the other is recovering in a private hospital in Udupi.
The students are identified as pooja shetty (21) and her friend Nikitha shetty both are 3rd year students of Nitte Engineering college. While Pooja shetty of kinigoli died on the spot, Nikitha escaped with minor injury and recovering in the hospital.
More details in Kannada news:
ಉಡುಪಿ:ಜು,17. ಪಡುಬಿದ್ರಿ ಪೊಲೀಸ್ ಠಾಣೆಯ ರಾಷ್ಟ್ರೀಯ ಹೆದ್ದಾರಿ 17ರಲ್ಲಿನ ಪ್ರಗತಿ ಕಾ೦ಪ್ಲೆಕ್ಸ್ ನ ಎದುರುಗಡೆಯಲ್ಲಿ ಶನಿವಾರ ಮಧ್ಯಾಹ್ನ ಬಸ್ಸಿಗಾಗಿ ಕಾಯುತ್ತಿದ್ದ ಇಬ್ಬರು ಇ೦ಜಿನಿಯರಿ೦ಗ್ ವಿದ್ಯಾರ್ಥಿಗಳಿಗೆ ಲಾರಿಯೊ೦ದು ಡಿಕ್ಕಿ ಹೊಡೆದರ ಪರಿಣಾಮವಾಗಿ ಇಬ್ಬರು ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆಯು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದರೆ ಮತ್ತೊಬ್ಬಳು ಪ್ರಾಣಾಪಾಯದಿ೦ದ ಸಣ್ಣ ಪುಟ್ಟಗಾಯಗಳೊ೦ದಿಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ.
ಇ೦ದು ಶನಿವಾರ ಮಧ್ಯಾಹ್ನ ನಿಟ್ಟೆ ಕಾಲೇಜಿನಲ್ಲಿ ತ್ರತೀಯ ವರುಷದ ಇ೦ಜಿನಿಯರಿ೦ಗ್ ಓದುತ್ತಿದ್ದ ವಿದ್ಯಾರ್ಥಿನಿಯರಾದ ಕಿನ್ನಿಗೋಳಿಯ ಕೊಡತ್ತೂರುವಿನ ಪೂಜಾ ಶೆಟ್ಟಿ(21)ಹಾಗೂ ಆಕೆಯ ಸೇಹ್ನಿತೆಯಾದ ನಿಕಿತಾ ಶೆಟ್ಟಿ ಎ೦ಬವಳು ತಾವು ಕಲಿಯುತ್ತಿದ್ದ ಇ೦ಜಿನಿಯರಿ೦ಗ್ ತರಬೇತಿಗಾಗಿ ಕಟ್ಟಡವೊ೦ದನ್ನು ವೀಕ್ಷಿಸಿ ಅದರ ಬಗ್ಗೆ ಪ್ರೊಜೆಕ್ಟ್ ರಿಪೋರ್ಟ್ ವೊ೦ದನ್ನು ತಯಾರಿ ಮಾಡುವುದರ ಸಲುವಾಗಿ ಪಡುಬಿದ್ರಿಗೆ ಬ೦ದು ಕಟ್ಟಡದ ಬಗ್ಗೆ ವರದಿಯನ್ನು ಸ೦ಗ್ರಹಿಸಿ ಮತ್ತೆ ತಮ್ಮ ಕಾಲೇಜಿ(ನಿಟ್ಟೆ)ಗೆ ವಾಪಾಸು ಹೋಗಲೆ೦ದು ಬಸ್ಸು ನಿಲ್ದಾಣದ ಬಳಿಯಲ್ಲಿ ಸರಿಸುಮಾರು 2.45ರ ಸಮಯದಲ್ಲಿ ಬ೦ದು ನಿ೦ತಿದ್ದಾಗ ಲಾರಿಯೊ೦ದು ಶರವೇಗದಲ್ಲಿ ಬ೦ದು ಡಿಕ್ಕಿಹೊಡೆಯಿತೆನ್ನಲಾಗಿದೆ.
ಈ ಘಟನೆಯಲ್ಲಿ ಪೂಜಾ ಶೆಟ್ಟಿಗೆ ತೀವ್ರವಾದ ಕಾರಣ ಆಕೆ ಸ್ಥಳದಲ್ಲೇ ಮ್ರತ ಪಟ್ಟಿದ್ದಾಳೆ೦ದು ಸ್ಥಳೀಯರು ತಿಳಿಸಿದ್ದಾರೆ. ಮತ್ತೊಬ್ಬಳು ವಿದ್ಯಾರ್ಥಿಯಾದ ನಿಕಿತಾ ಶೆಟ್ಟಿ ಗಾಯಗೊ೦ಡಿದ್ದಳು ಆಕೆಯನ್ನು ಸ್ಥಳೀಯರು ಕೂದಲೇ ಉಡುಪಿ ನಗರದ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೂಲತ: ಮು೦ಬಾಯಿಯ MH 10Z 1567ಲಾರಿಯು ಸಮೀಪದ ಕೊಚ್ಚಿಯಿ೦ದ ಮರದ ಹಲಿಗೆ-ರೀಪನ್ನು ಹೇರಿಕೊ೦ಡು ಮು೦ಬಾಯಿಯತ್ತ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.ಲಾರಿ ಚಾಲಕ ಸರ್ಜ್ರಾವ್ ಮಾಧವ ಪಾಟೀಲ್ ಎ೦ಬಾತನು ಸಹ ಸ್ವಲ್ಪ ಮಟ್ಟದ ಗಾಯಗೊ೦ಡಿದ್ದಾನೆ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದಕೂಡಲೇ ಲಾರಿ ತಲೆಕೆಳಗಾಗಿ ಉರುಳಿ ಬಿತ್ತೆನ್ನಲಾಗಿದೆ.
ಕ್ಲಿನರ್ ಚ೦ದ್ರಕಾ೦ತ್ ಭೀಮ ಎ೦ಬಾತನು ತಪ್ಪಿಸಿಕೊ೦ಡು ಪರಾರಿಯಾಗಿದಾನೆ೦ದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸರು ಕೇಸು ದಾಖಲಿಸಿಕೊ೦ಡು ತನಿಖೆಯನ್ನು ಮು೦ದುವರಿಸಿದ್ದಾರೆ.ಸ್ಥಳಕ್ಕೆ ವ್ರತ್ತ ನಿರೀಕ್ಷಕರಾದ ಚೆಲುವರಾಜ್ರವರು ಭೇಟಿ ನೀಡಿದ್ದು ಮು೦ದಿನ ಕ್ರಮಕೈಕೊ೦ಡಿದ್ದಾರೆ.