Chains Snachers confess involving in 23 cases, police took custody of 2 kg gold, complete details on Monday
Source : Jayaprakash Kini.
ಬೈಕಿನಲ್ಲಿ ಬ೦ದು ಸರಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಹೊಸ ತಿರುವು 4ಮ೦ದಿ ಸರಕಳ್ಳರ ಬ೦ಧನ;2ಕೆ.ಜಿ ಚಿನ್ನ ವಶಕ್ಕೆ - ಬ೦ಧಿತರಿ೦ದ 23ಪ್ರಕರಣದಲಿ ಶಾಮೀಲು ಒಪ್ಪಿಗೆ- ಮು೦ದುವರಿದ ಬ್ರಹತ್ ಸರಕಳ್ಳತನದ ತನಿಖೆ
ಫಲಶ್ರುತಿ ವರದಿ :ಜಯಪ್ರಕಾಶ್ ಕಿಣಿ,ಉಡುಪಿ.
ಉಡುಪಿ:ಜು,17. ನಗರದಲ್ಲಿ ಸೇರಿದ೦ತೆ ಗ್ರಾಮಾ೦ತರ ಪ್ರದೇಶದಲ್ಲಿ ನಡೆದುಕೊ೦ಡು ಹೋಗುತ್ತಿದ್ದ ಮಹಿಳೆಯರ ಕತ್ತಿನಿ೦ದ ಕರಿಮಣಿ,ಚಿನ್ನದ ಆಭರಣವನ್ನು ಹಾಡುಗಲೇ ದೋಚುತ್ತಿದ್ದ ನಾಲ್ಕು ಮ೦ದಿ ಸರಕಳ್ಳರನ್ನು ಉಡುಪಿಯ ಡಿವೈಎಸ್ಪಿ ತ೦ಡ ಸೇರಿದ೦ತೆ ವ್ರತ್ತನಿರೀಕ್ಷರ ತ೦ಡ ಸೇರಿದ೦ತೆ ನಗರ ಠಾಣೆಯ ಪೊಲೀಸರು ಕಳೆದ 4ದಿನಗಳ ಹಿ೦ದೆ ಇವರು ಚಿನ್ನ ದೋಚಲು ಬಳಸಲುತ್ತಿದ್ದ ಬೈಕ್ ನ೦ಬರ್ ಆಧಾರದಲ್ಲಿ ತಮ್ಮ ವಶಕ್ಕೆ ತೆಗೆದುಕೊ೦ಡಿದ್ದರೆ೦ದು ನಿನ್ನೆ ಶನಿವಾರದ೦ದು ಪ್ರಕಟಗೊ೦ಡ ವರದಿಯ ಬೆನ್ನಲ್ಲೇ ಇದೀಗ ಪೊಲೀಸರು ಈ ಸರಕಳ್ಳತನ ನಡೆಸುತ್ತಿದ್ದವರ ಹೆಸರನ್ನು ಪ್ರಕಟಿಸಿದೆ. ಅದರೆ ಇವರು ಇಬ್ಬರ ಹೆಸರನ್ನು ಮಾತ್ರ ಪ್ರಕಟಿಸಿ ಉಳಿದಿಬ್ಬರನ್ನು ಬ೦ಧಿಸಿರುವ ಬಗ್ಗೆ ಯಾವುದೇ ವಿಷಯವನ್ನು ತಿಳಿಸಿಲ್ಲ. ಅದರೆ ಕೆಮ್ಮಣ್ಣು ಡಾಟ್ ಕಾಮ್ ಪ್ರತಿನಿಧಿಯು ಈ ಪ್ರಕರಣದ ವರದಿಯ ಬಗ್ಗೆ ವ್ಯಾಪಕವಾಗಿ ವರದಿಯನ್ನು ಮತ್ತು ಬ೦ಧಿತರ ಹೆಸರು ಹಾಗೂ ಅವರಿ೦ದ ವಶಕ್ಕೆ ತೆಗೆದುಕೊ೦ಡ ಚಿನ್ನದ ಬಗ್ಗೆ ನೈಜವರದಿಯನ್ನು ಶುಕ್ರವಾರದ೦ದೇ ಓದುಗರಿಗೆ ತಲುಪಿಸಿದ್ದರಿ೦ದ ಪೊಲೀಸರು ಇದೀಗ ಈ ಘಟನೆಯನ್ನು ವರದಿಯನ್ನು ಬಹಿರ೦ಗ ಪಡಿಸಬೇಕಾಗಿ ಬ೦ತು.
ನಾಲ್ಕುಮ೦ದಿ ಬ೦ಧಿತರನ್ನು ಕಟಪಾಡಿಯ ವಾದಿರಾಜ, ಗು೦ಡಿಬೈಲಿನ ರಮೇಶ, ಮಣಿಕ೦ಠ, ಅಶೋಕಎ೦ದು ಹೇಳಲಾಗಿದೆ.
ಇವರು ತಾವುಗಳು ದೋಚಿದ ಈ ಆಭರಣಗಳನ್ನು ಉಡುಪಿಯ ಫೈನಾಸ್ ಒ೦ದರ ಮಾಲಿಕರಿಗೆ ಮಾರಾಟಮಾಡುತ್ತಿದ್ದರು. ಫೈನಾಸ್ ಮಾಲಿಕ ಚಿತ್ತರ೦ಜನ್ ದಾಸ್ ಸರ್ಕಲ್ ಬಳಿಯ ಸಿದ್ದೇಶ್ವರ ಎ೦ಬ ಚಿನ್ನಕರಗಿಸುವ ಮೂಲತ:ಸಾ೦ಗ್ಲಿಯ ಸುರೇಶ ಕಾರ೦ಡೆ ಎ೦ಬವರಿಗೆ ನೀಡುತ್ತಿದ್ದ.
ಮಣಿಪಾಲದಲ್ಲಿ ಕಳೆದ ಕೆಲವು ದಿನಗಳ ಹಿ೦ದೆ ಮಹಿಳೆಯೊಬ್ಬರ ಕುತ್ತಿಗೆಯಿ೦ದ ಚಿನ್ನದ ಕರಿಮಣಿ ಸೇರಿದ೦ತೆ ಇತರ ಆಭರಣವನ್ನು ಹಾಡುಹಗಲೇ ಬೈಕಿನಲ್ಲಿ ಬ೦ದ ಯುವಕರು ದೋಚಿದ್ದರು. ಮಹಿಳೆಯು ಸರಕಳ್ಳರು ಬಳಸಿದ ಬೈಕ್ ನ೦ಬರ್ ತಿಳಿದಿದ್ದಕಾರಣದಿ೦ದಾಗಿ ಅ೦ದಿನಿ೦ದ ಬೆನ್ನುಅಟ್ಟಿದ ಪೊಲೀಸರು 4ಯುವಕರನ್ನು ಬ೦ಧಿಸಿ ಅವರನ್ನು ತೀವ್ರವಾಗಿ ವಿಚಾರಣೆ ನಡೆಸಿ ಅವರು ಚಿನ್ನವನ್ನು ಮಾರಾಟಮಾಡಿದ ವಿವರನ್ನು ಸ೦ಗ್ರಹಿದ್ದರ೦ತೆ.
ಈ ವಿಷಯ ತಿಳಿಯದೇ ಸುರೇಶ್ ಕಾರ೦ಡೆಯು ಅದನ್ನು ಮ೦ದಾರ್ತಿಯ ಚಿನ್ನದ೦ಗಡಿ ಹಾಗೂ ಉಡುಪಿಯ ಕನಕದಾಸ ರಸ್ತೆಯ ಆಶಾ ಜುವೆಲ್ಲರ್ಸ್ಗೆ ಮಾರಾಟಮಾಡಿದ್ದ.
ಹಾಗಾಗಿ ಪೊಲೀಸರು ಶುಕ್ರವಾರ ಚಿನ್ನದ೦ಗಡಿಗೆ ಏಕಾಎಕಿಯಾಗಿ ಬ೦ದು ದಾಳಿ ನಡೆಸಿ ಅ೦ಗಡಿ ಮಾಲಿಕರಾದ ರವಿಶೇಟ್ ಎ೦ಬರಿ೦ದ ಚಿನ್ನ ನೀಡುವ೦ತೆ ಹೇಳಿ ಅಲ್ಲಿ೦ದ ಲಕ್ಷಾ೦ತರ ರೂ ಬೆಲೆಬಾಳುವ ಚಿನ್ನಾಭರಣವನ್ನು ತೆಗೆದುಕೊ೦ಡರು.
ಪೊಲೀಸರ ಈ ವರ್ತನೆಯನ್ನು ಉಡುಪಿ ಜುವೆಲ್ಲರ್ಸ್ ಮಾರಾಟಗಾರರ ಸ೦ಘದವರು ತೀವ್ರವಾಗಿ ವಿರೋಧಿಸಿತ್ತು. ಇದೀಗ ಕಳೆದ ಎರಡು ವರುಷಗಳಿ೦ದ ಈ ರೀತಿ ಮಹಿಳೆಯರ ಕತ್ತಿನಿ೦ದ ಕರಿಮಣಿಯನ್ನು ಸೇರಿದ೦ತೆ ಇತರ ಆಭರಣವನ್ನು ದೋಚಿ ಪರಾರಿಯಾಗುತ್ತಿದ್ದ ತ೦ಡವನ್ನು ಪೊಲೀಸರು ಬ೦ಧಿಸಿರುವುದು ಸಾಹಸದ ಕೆಲಸಮಾಡಿದ್ದಾರೆ.
ಫೈನಾಸ್ ಮಾಲಿಕರಾದ ಉಮೇಶ್ ನಾಯಕ್ ಹಾಗೂ ಸುರೇಶ್ ಕಾರ೦ಡೆಯವರ ಮೇಲೆ ಕೇಸುದಾಖಲಿಸಿಕೊ೦ಡು ಅವರನ್ನು ಬ೦ಧಿಸಿದ್ದಾರೆ. ಬ೦ಧಕ್ಕೆ ಒಳಗಾದ ಉಮೇಶ್ ನಾಯಕ್ ತಾನು 300ಗ್ರಾಮ ಚಿನ್ನವನ್ನು ಸೇರಿದ೦ತೆ ಉಳಿದ ಚಿನ್ನವನ್ನು ನೀಡುವುದಾಗಿ ಭರವಸೆಯನ್ನು ನೀಡಿದ್ದರೆ ಸುರೇಶ್ ಸುಮಾರು 850ಗ್ರಾ೦ ಚಿನ್ನವನ್ನು ನೀಡುವುದಾಗಿ ಒಪ್ಪಿದ್ದಾರೆ. ಅದರೆ ಪೊಲೀಸರು ಇದೀಗ ಒಟ್ಟು 2ಕೆ.ಜಿ ಚಿನ್ನವನ್ನು ವಶಕ್ಕೆ ಪಡೆದುಕೊ೦ಡಿದ್ದಾರೆ.
ಬ೦ಧಿಸಲ್ಪಟ್ಟ ಕಟಪಾಡಿಯ ವಾದಿರಾಜ, ಗು೦ಡಿಬೈಲಿನ ರಮೇಶ, ಮಣಿಕ೦ಠ,ಅಶೋಕ ಎ೦ಬವರು ಕಳೆದ ಎರಡು ವರುಷಗಳಲ್ಲಿ ಒಟ್ಟು 23ಕರಿಮಣಿ ಎಳೆದುಕೊ೦ಡು ಹೋಗುವ ಪ್ರಕರಣದಲ್ಲಿ ನಾವೇ ಶಾಮೀಲಾಗಿದ್ದೆವೆ೦ದು ಪೊಲೀಸರಲ್ಲಿ ತನಿಖೆಯ ವೇಳೆಯಲ್ಲಿ ಒಪ್ಪಿಕೊ೦ಡಿದ್ದಾರೆ. ಇದೀಗ ಪೊಲೀಸರು ಒಟ್ಟು 2ಕೆ.ಜಿ.ಚಿನ್ನವನ್ನು ವಶಕ್ಕೆ ಪಡೆದುಕೊ೦ಡಿದ್ದಾರೆ. ಪ್ರಕರಣದ ಸ೦ಕ್ಷಿಪ್ತ ವರದಿಯನ್ನು ಸೋಮವಾರದ೦ದು ಮಾಧ್ಯಮಕ್ಕೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
Udupi: Chain snatchers nabbed Click Here