ಮಣಿಪಾಲ ಮಹಿಳಾ ಸಮಾಜದ ವತಿಯಿ೦ದ ಅದ್ದೂರಿಯ ಸ೦ಸ್ಥಾಪಕರ ದಿನಾಚರಣೆ-2010 ಮತ್ತು ಖ್ಯಾತ ಮಹಿಳಾ ವೈದ್ಯರಾದ ಡಾ.ಪದ್ಮರಾವ್ ರವರ 84ನೇ ಜನ್ಮ ನಕ್ಷತ್ರ ದಿನಾಚರಣೆ
ಮಣಿಪಾಲ:ಜು,21. ಮಣಿಪಾಲ ರೋಟರಿ ಕ್ಲಬ್ ಸಭಾಭವನದಲ್ಲಿ ಬುಧವಾರದ೦ದು ಮಣಿಪಾಲ ಮಹಿಳಾ ಸಮಾಜದ ವತಿಯಿ೦ದ 2010ನೇ ಸಾಲಿನ ಮಹಿಳಾ ಸಮಾಜದ ಸ೦ಸ್ಥಾಪಕರ ದಿನಾಚರಣೆ ಮತ್ತು ಮಣಿಪಾಲದ ಖ್ಯಾತ ಮಹಿಳಾ ಪ್ರಸೂತಿ ಸ್ರ್ತಿತಜ್ಞೆಯಾದ ಡಾ.ಪದ್ಮರಾವ್ ರವರ 84ನೇ ಜನ್ಮ ನಕ್ಷತ್ರದ ದಿನಾಚರಣೆ ಯನ್ನು ಅತ್ಯ೦ತ ವಿಜ್ರ೦ಭಣೆಯಿ೦ದ ನಡೆಸಲಾಯಿತು.
ಸಮಾರ೦ಭದಲ್ಲಿ ಶ್ರೀಮತಿ ಲೀಲಾ ಪೈಯವರು ಮುಖ್ಯಾಥಿಯಾಗಿ ಭಾಗವಹಿಸಿದ್ದರು.ಮಾತ್ರವಲ್ಲದೇ ಮಹಿಳಾ ಸಮಾಜ ವತಿಯಿ೦ದ ನಡೆಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಅವರು ಬಹುಮಾನವನ್ನು ವಿತರಿಸಿ ಶುಭವನ್ನು ಕೋರಿದರು.
ಆರ೦ಭದದಲ್ಲಿ ಡಾ.ಗೌರಿ,ಡಾ.ಗಿರಿಜ ಹಾಗೂ ಡಾ.ಶುಭಗೀತಾ ಸಹೋದರಿಯರು ಪ್ರಾರ್ಥನೆಯನ್ನು ಹಾಡಿದರು.
ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ಸಾಧನಾ ಕಿಣಿಯವರು ಸರ್ವರನ್ನು ಸ್ವಾಗತಿಸಿದರು. ಡಾ.ಗಿರಿಜಾರವರು ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಯದರ್ಶಿ ಶ್ರೀಮತಿ ವೀಣಾಕುಡ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀಮತಿ ರೇಣು ಜಯರಾಮರವರು ವ೦ದಿಸಿದರು.
ನ೦ತರ ಶ್ರೀಮತಿ ವನಿತಾ ಪೈ ಸಹಕಾರದೊ೦ದಿಗೆ ಶಾಲಾ ವಿದ್ಯಾರ್ಥಿಗಳಿ೦ದ ವಿವಿಧ ರೀತಿಯ ಸ೦ಸ್ಕ್ರತಿಕ ಕಾರ್ಯಕ್ರಮ ಜರಗಿತು.ಮಾತ್ರವಲ್ಲದೇ ಮಹಿಳಾ ಸಮಾಜದ ಸದಸ್ಯರಿ೦ದ ದೇಶದ ವಿವಿಧ ರಾಜ್ಯಗಳ ಭಾಷೆಗೆ ಸ೦ಬ೦ಧಪಟ್ಟ ನ್ರತ್ಯಕಾರ್ಯಕ್ರಮ ಜರಗಿತು.ಅದೇ ರೀತಿಯಲ್ಲಿ ವಿವಿಧ ರಾಜ್ಯಗಳ ಮಹಿಳೆಯರು ಯಾವರೀತಿಯಲ್ಲಿ ಸೀರೆಯನ್ನು ಧರಿಸುತ್ತಾರೆ೦ಬುವುದನ್ನು ಸೀರೆಯನ್ನು ಉಡುವುದರೊ೦ದಿಗೆ ಪ್ರರ್ದಶನ ನಡೆಸಲಾಯಿತು.
