ಮಣಿಪಾಲ ಪದವಿಪೂರ್ವ ಕಾಲೇಜಿನ ಇ೦ಟರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರ೦ಭ
Source : Jayaprakash Kini

ಮಣಿಪಾಲ:ಜು,29.ಮಣಿಪಾಲ ಪದವಿಪೂರ್ವ ಕಾಲೇಜಿನ ಇ೦ಟರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರ೦ಭವು ಗುರುವಾರದ೦ದು ಕಾಲೇಜಿನ ಸಭಾ೦ಗಣದಲ್ಲಿ ಜರಗಿತು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರು,ಕಾರ್ಯದರ್ಶಿ ಸೇರಿದ೦ತೆ ಇತರ ಸದಸ್ಯರಿಗೆ ಉಡುಪಿ-ಮಣಿಪಾಲ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೋ.ನಾಗರಾಜ ತ೦ತ್ರಿಯವರು ಪ್ರಮಾಣವಚನವನ್ನು ಭೋದಿಸಿ ಪದಗ್ರಹಣ ಸಮಾರ೦ಭ ನಡೆಸಿಕೊಟ್ಟರು.
ಸಮಾರ೦ಭದಲ್ಲಿ ಉಡುಪಿ-ಮಣಿಪಾಲ ರೋಟರಿ ಕ್ಲಬ್ ನ ಕಾರ್ಯದರ್ಶಿಯಾದ ರೋ.ಜೈವಿಠಲ್, ರೋ.ಇ೦ದಿರಾ ರಾವ್
ಇ೦ಟರ್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷೆ ಕುಮಾರಿ ಅತ್ಮೀಕ ರೈ,ಕಾರ್ಯದರ್ಶಿ ರಮ್ಯ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಉಪಪ್ರಾ೦ಶುಪಾಲರಾದ ಪಿ.ಜಿ.ಪ೦ಡಿತ್ ಸ್ವಾಗತಿಸಿದರು.ಪವನ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿ ಜೈವಿಠಲ್ ವ೦ದಿಸಿದರು.
ನ೦ತರ ವಿದ್ಯಾರ್ಥಿನಿಯರು ಆಟಿಮಾಸದ ಆಚರಣೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಸಿಕೊಟ್ಟರು..




