Brief University College news with pictures


Kemmannu News Network, 23-04-2019 09:01:18


Write Comment     |     E-Mail To a Friend     |     Facebook     |     Twitter     |     Print


ವಿ.ವಿ ಕಾಲೇಜು: ಸ್ನಾತಕೋತ್ತರ ವಿಭಾಗಗಳ ವಾರ್ಷಿಕೋತ್ಸವ ಸಮಾರಂಭ
ಗುರಿ ಮುಟ್ಟುವ ತವಕ ಮತ್ತು ಸಮಯ ಪ್ರಜ್ಞೆಯೇ ಯಶಸ್ಸಿಗೆ ಕಾರಣ: ಡಾ.ರಾಜೇಂದ್ರ ಕುಮಾರ್

ಮಹಾನಗರ, ಎ. 22: ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಿಭಾಗಗಳ “ವಾರ್ಷಿಕೋತ್ಸವ ಸಮಾರಂಭ–2019” ರವೀಂದ್ರ ಕಲಾಭವನ ಸಂಕೀರ್ಣದಲ್ಲಿ ಸೋಮವಾರ ನಡೆಯಿತು. ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಹಾಗೂ ದ .ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮತ್ತು ಆಳ್ವಾಸ್ ಎಜ್ಯುಕೇಶನ್ ಫೌಂಡೇಶನಿನ ಅಧ್ಯಕ್ಷರಾದ ಡಾ. ಮೋಹನ್ ಆಳ್ವರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಡಾ. ರಾಜೇಂದ್ರ ಕುಮಾರ್ ಇವರು ಪ್ರತಿಯೊಬ್ಬ ವ್ಯಕ್ತಿಗೂ ಒಂದು ನಿರ್ದಿಷ್ಟವಾದ ಗುರಿಯಿರಬೇಕು. ಸಾಧನೆ ಮಾಡಬೇಕೆಂಬ ಛಲವಿರಬೇಕು. ಮಾನಸಿಕ ದೃಢತೆ ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯಬಹುದು. ಗುರಿ ಮುಟ್ಟುವ ತವಕ ಮತ್ತು ಸಮಯ ಪ್ರಜ್ಞೆಯೇ ಯಶಸ್ಸಿಗೆ ಕಾರಣ. ಸಾಮಾಜಿಕ ಕಳಕಳಿ, ಸಮಾನತೆ, ಏಕಾಗ್ರತೆ, ದೃಢಸಂಕಲ್ಪ, ಸಾಧನಾಶೀಲ ಮನೋಭಾವವು ಸಮಾಜದಲ್ಲಿ ಜಾಗೃತವಾಗಿರಬೇಕೆಂಬ ಸಂದೇಶವನ್ನಿತ್ತರು.

ನಂತರ ಮಾತನಾಡಿದ ಡಾ. ಮೋಹನ್ ಆಳ್ವರವರು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸೌಂದರ್ಯ ಪ್ರಜ್ಞೆ, ಮೌಲ್ಯಭರಿತ ಅಂಶಗಳಿಗೆ ಪ್ರಾಮುಖ್ಯತೆಯನ್ನು ನೀಡಿ ದೇಶ, ಭಾಷೆ, ಕಲೆ, ಕಲಾವಿದರನ್ನು ಪ್ರೀತಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಮಾನವೀಯ ಮೌಲ್ಯಗಳು ಮಾರುಕಟ್ಟೆಯಿಂದ ಕೊಂಡುಕೊಳ್ಳುವ ವಸ್ತುವಲ್ಲ, ಬದಲಾಗಿ ಅದು ತನ್ನೊಳಗೆ ಬೆಳೆಯುವ ಗುಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಉದಯ ಕುಮಾರ್ ಎಂ.ಎ ಮಾತನಾಡಿ ವಿದ್ಯಾರ್ಥಿಗಳು ತಮ್ಮನ್ನು ಕೇವಲ ಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತಗೊಳಿಸದೆ ವೃತ್ತಿಗೆ ಸಂಬಂಧಪಟ್ಟ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ತಮಗೆ ಸಮಾಜ ಏನು ನೀಡುತ್ತದೆ ಎನ್ನುವುದರ ಬದಲಿಗೆ ತಾವು ಸಮಾಜಕ್ಕೆ ಹೇಗೆ ಕೊಡುಗೆ ನೀಡಬೇಕೆಂಬುದಾಗಿ ಚಿಂತಿಸಬೇಕು. ಸಮಾಜದ ಗಣ್ಯ ವ್ಯಕ್ತಿಗಳನ್ನು ಮಾದರಿಯಾಗಿರಿಸಿಕೊಂಡು ಸಮಾಜದ ನೋವುಗಳಿಗೆ ಸ್ಪಂದಿಸಬೇಕಾಗಿ ಕರೆ ನೀಡಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕರಾದ ಡಾ. ಎ. ಸಿದ್ಧಿಕ್ ಸ್ನಾತಕೋತ್ತರ ವಿಭಾಗಗಳ ವಾರ್ಷಿಕ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಸ್ನಾತಕೋತ್ತರ ವಿಭಾಗಗಳ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಮಂಗಳೂರು ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ಎಂ. ಎ ಹಿಂದಿ ವಿಭಾಗದ ಪ್ರಥಮ ರ್ಯಾಂಕ್ ಪಡೆದ ಅನುಶ್ರೀ, ಯೋಗ ವಿಜ್ಞಾನದ ಪ್ರಥಮ ರ್ಯಾಂಕ್ ಪಡೆದ ಡಾ. ಸೌಮ್ಯ ನಿಲೇಶ್ ಕೊಟ್ಯಾನ್, ಹಾಗೂ ತೃತೀಯ ರ್ಯಾಂಕ್ ಪಡೆದ ಗುಟ್ಟಿ ವಿಜಯಾ ಭಾರತಿ ಅವರನ್ನು ಸನ್ಮಾನಿಸಲಾಯಿತು. ಪ್ರಸ್ತುತ ವರ್ಷ ಎನ್.ಇ.ಟಿ/ಕೆ-ಸೆಟ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಕೂಡಾ ಸನ್ಮಾನಿಸಲಾಯಿತು. ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಸಂಯೋಜಕರಾದ ಡಾ. ಲಕ್ಷ್ಮಣ್, ಯೋಗ ವಿಜ್ಞಾನದ ಸಂಯೋಜಕ ಶ್ರೀ. ದಯಾಕರ್ ಉಪಸ್ಥಿತರಿದ್ದರು. ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕರಾದ ಡಾ. ಜಯವಂತ ನಾಯಕ್ ಸ್ವಾಗತಿಸಿದರು. ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಡಾ. ನಾಗರತ್ನ ರಾವ್ ವಂದಿಸಿದರು. ಕುಮಾರಿ ಶಹಲಾ ಕಾರ್ಯಕ್ರಮ ನಿರೂಪಿಸಿದರು. ನಂತರ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರತಿಭೆಯೊಂದಿಗೆ ಶಿಕ್ಷಣವೂ ಅವಶ್ಯಕ - ಜೆ ಪಿ ತುಮಿನಾಡು

ಜೀವನದಲ್ಲಿ ಗುರುವಿನ ಪಾತ್ರ ಮಹತ್ತರವಾಗಿದ್ದು,ಶಿಕ್ಷಣವು ಈ ಸ್ಥಾನವನ್ನು ತುಂಬುತ್ತದೆ. ಹತ್ತನೇ ತರಗತಿ ಕಲಿಯದೇ ಇದ್ದರೂ, ನಾಟಕ, ಸಿನೆಮಾ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಲು ಪ್ರತಿಭೆಯು ಕೈ ಹಿಡಿದಿದೆ, ಆದರೆ ಕೇವಲ ಪ್ರತಿಭೆಯೊಂದೆ ಸಾಲದು ಅದಕ್ಕೆ ಶಿಕ್ಷಣದ ಅವಶ್ಯಕತೆಯು ಇರುವುದನ್ನು ಅನುಭವದ ಮೂಲಕ ಮನಗೊಂಡಿದ್ದೇನೆ ಎಂದು ಇತ್ತಿಚೇಗೆ ಬಿಡುಗಡೆಯಾದ ಕಟಪಾಡಿ ಕಟ್ಟಪ್ಪ ತುಳು ಚಲನಚಿತ್ರದ ನಿರ್ದೇಶಕರು ಹಾಗೂ ರಂಗ ಕಲಾವಿದರೂ ಆದ ಜೆ.ಪಿ ತುಮಿನಾಡು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ದಿನಾಚರಣೆಯ ಪ್ರಯುಕ್ತ ಮುಖ್ಯ ಅತಿಥಿಗಳಾಗಿ ಜೆ.ಪಿ ತುಮಿನಾಡು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂಧರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ಎಂ.ಬಿ.ಎ (ಐ.ಬಿ) ವಿಭಾಗದ ಕುಮಾರಿ ಪೂಜಾ ಹಾಗೂ ಎಂ.ಎ ಕೊಂಕಣಿ ವಿಭಾಗದ ಶ್ರೀಮತಿ ಮೇಧಾ ಕಾಮತ್‍ರವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಬಿ.ಎಂ ಅವರು ಅಧ್ಯಕ್ಷತೆಯನ್ನು ವಹಿಸಿ, ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ವಿಭಾಗಗಳು ಹಲವಾರು ಅವಕಾಶ ವಂಚಿತರಿಗೆ ಆಶಾಕಿರಣವಾಗಿದ್ದು, ಬೆಳಿಗ್ಗೆಯಿಂದ ಸಂಜೆ ದುಡಿದು, ಸ್ವಂತ ಜೀವನ ಕಟ್ಟಿಕೊಳ್ಳುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಪೂರಕವಾಗಿ ಸ್ನಾತಕೋತ್ತರ ವಿಭಾಗಗಳು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು. ಎಂ.ಕಾಂ ಮತ್ತು ಎಂ.ಬಿ.ಎ (ಐ.ಬಿ) ವಿಭಾಗದ ಸಂಯೋಜಕರಾದ ಡಾ. ಎ.ಸಿದ್ದಿಕ್‍ರವರು ಸ್ನಾತಕೋತ್ತರ ವಿಭಾಗಗಳ ವಾರ್ಷಿಕ ವರದಿ ಮಂಡಿಸಿದರು.

ಇದೇ ಸಂಧರ್ಭದಲ್ಲಿ ಸ್ನಾತಕೋತ್ತರ ವಿಭಾಗಗಳ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಎಂ.ಎ ತುಳು ವಿಭಾಗದ ಸಂಯೋಜಕರಾದ ಪ್ರೊ. ಶಿವರಾಮ ಶೆಟ್ಟಿ, ಎಂ.ಎ ಕೊಂಕಣಿಯ ಸಂಯೋಜಕರಾದ ಡಾ. ದೇವದಾಸ ಪೈ ಮತ್ತು ಎಂ.ಎ ಇಂಗ್ಲೀಷ್‍ನ ಸಂಯೋಜಕರಾದ ಡಾ. ಶ್ಯಾಮ ಭಟ್ ಉಪಸ್ಥಿತರಿದ್ದರು. ಎಂ.ಎ ತುಳು ವಿಭಾಗದ ಉಪನ್ಯಾಸಕರಾದ ಶ್ಯಾಮ ಸ್ವಾಗತಿಸಿದರು, ಸ್ನಾತಕೋತ್ತರ ವಿಭಾಗಗಳ ದಿನಾಚರಣೆಯ ಸಹ ಸಂಯೋಜಕರು ಹಾಗೂ ಎಂ.ಬಿ.ಎ(ಐ.ಬಿ) ವಿಭಾಗದ ಉಪನ್ಯಾಸಕರಾದ ಸ್ಟೀವನ್ ಡಿ’ಸೋಜಾ ವಂದಿಸಿದರು, ಎಂ.ಕಾಂ ವಿಭಾಗದ ಉಪನ್ಯಾಸಕಿ ಕಾವ್ಯ ಪಿ ಹೆಗ್ಡೆ ನಿರೂಪಿಸಿದರು

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು -  ಪ್ರವೇಶಾತಿ ಆರಂಭ
ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು 2019-20 ನೇ ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ಪದವಿ ತರಗತಿಗಳಿಗೆ ಪ್ರವೇಶಾತಿ ಆರಂಭವಾಗಿರುತ್ತದೆ. ನಗರದ ಹೃದಯ ಭಾಗದಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾಗಿದ್ದು ವಿಶ್ವವಿದ್ಯಾನಿಲಯದ ನೇರ ಆಡಳಿತಕ್ಕೆ ಒಳಪಟ್ಟಿರುತ್ತದೆ. 2015 ರಲ್ಲಿ ಆರಂಭಗೊಂಡು 2016-17 ರಲ್ಲಿ ಪ್ರಥಮ ವರ್ಷದ ಪದವಿ ತರಗತಿಗಳು ಆರಂಭಗೊಂಡು ಈ ಶೈಕ್ಷಣಿಕ ವರ್ಷದಲ್ಲಿ ಮೂರನೇ ಶೈಕ್ಷಣಿಕ ವರ್ಷಗಳನ್ನು ಯಶಸ್ವೀಯಾಗಿ ಪೂರೈಸಿದ್ದು, ಕಳೆದ ಎರಡು ವರ್ಷಗಳಿಂದ ಉತ್ತಮ ಫಲಿತಾಂಶಗಳನ್ನು ಗಳಿಸಿಕೊಂದು ಬಂದಿರುತ್ತದೆ. ಅನಿವಾರ್ಯ ಕಾರಣಗಳಿಂದ ವಿದ್ಯಾಭ್ಯಾಸವನ್ನು ಪದವಿ ಪೂರ್ವ ಹಂತದಲ್ಲೇ ಮೊಟಕುಗೊಳಿಸಿದ ಹಾಗೂ ಇತರೆ ಕಾರಣಗಳಿಂದ ಹಗಲು ತರಗತಿಗಳಿಗೆ ಪ್ರವೇಶ ಪಡೆದುಕೊಳ್ಳಲು ಸಾಧ್ಯವಾಗದ ವಿದ್ಯಾಕಾಂಕ್ಷಿಗಳಿಗೆ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಉತ್ತಮ ಆಯ್ಕೆಯಾಗಿರುತ್ತದೆ.   
ಪ್ರಸ್ತುತ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ ಹಾಗೂ ಬಿ.ಸಿ.ಎ ಪದವಿ ತರಗತಿಗಳು ಲಭ್ಯವಿದ್ದು ಬಿ.ಎ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ ಹಾಗೂ ಪತ್ರಿಕೋದ್ಯಮ ವಿಷಯಗಳಿದ್ದು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಹಾಗೂ ಇಂದಿನ ಬೆಳೆಯುತ್ತಿರುವ ಮಾಧ್ಯಮ ಪ್ರಪಂಚದಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಲು ಪತ್ರಿಕೋದ್ಯಮ ಹಾಗೂ ಇತರೆ ವಿಷಯಗಳು ಸಹಕಾರಿಯಾಗಲಿದೆ. ಪದವಿ ಪೂರ್ವ ಹಂತದ ಬಳಿಕ ಸಿ.ಎ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ  ಸಂಜೆ ಹೊತ್ತಿನಲ್ಲಿ ಬಿಕಾಂ ಪದವಿಯನ್ನು ಕೂಡ ಪೂರ್ಣಗೊಳಿಸಿಕೊಳ್ಳಬಹುದಾಗಿದೆ. ಸಂಧ್ಯಾ ಕಾಲೇಜಿನ ಪದವಿಗೂ ಹಗಲು ಕಾಲೇಜುಗಳ ಪದವಿಯ ಮೌಲ್ಯಕ್ಕೂ ಯಾವುದೇ ರೀತಿಯ ವ್ಯತ್ಯಾಸವಿರುವುದಿಲ್ಲ.  ಸಂಧ್ಯಾ ಕಾಲೇಜಿನಲ್ಲಿ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶಗಳಿದ್ದು, ಕಾಲೇಜಿನ ವಿದ್ಯಾರ್ಥಿಗಳು ಹಲವಾರು ಅಂತರ್ ಕಾಲೇಜು ಸ್ಪರ್ಧೆ, ಕ್ರೀಡಾಕೂಟಗಳಲ್ಲಿ ಬಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗುವಂತಹ ಸುಸಜ್ಜಿತ ಕೊಠಡಿಗಳು, ಕಂಪ್ಯೂಟರ್ ಮತ್ತು ಮಾಧ್ಯಮ ಪ್ರಯೋಗಾಲಯಗಳು ಲಭ್ಯವಿದ್ದು ಅತೀ ಕಡಿಮೆ ಶುಲ್ಕದಲ್ಲಿ ವಿದ್ಯಾರ್ಥಿಗಳು ಪದವಿ ಶಿಕ್ಷಣವನ್ನು ಪಡೆಯಬಹುದಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಅವಶ್ಯಕ ದಾಖಲೆಗಳೊಂದಿಗೆ ಕಚೇರಿ ಸಮಯದಲ್ಲಿ ಕಾಲೇಜು ಕಚೇರಿಯಿಂದ ಅರ್ಜಿಗಳನ್ನು ಪಡೆದುಕೊಂಡು ತಾವು ಇಚ್ಚಿಸಿದ  ಪದವಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಬಿ.ಎಂ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi