Mangalore: National Conference on Higher Education on Jan 11th


Subhashini Srivatsa
Kemmannu News Network, 10-01-2020 09:21:44


Write Comment     |     E-Mail To a Friend     |     Facebook     |     Twitter     |     Print


“ಉನ್ನತ ಶಿಕ್ಷಣದ ಸವಾಲುಗಳು ಮತ್ತು ಶಿಕ್ಷಕರ ತೊಡಗುವಿಕೆ” –ವಿಚಾರ ಸಂಕಿರಣ
 
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ), ಮಂಗಳೂರು ಘಟಕವು ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ನ್ಯಾಕ್ ಬೆಂಗಳೂರು ಇವುಗಳ ಸಹಯೋಗದೊಂದಿಗೆ “ಉನ್ನತ ಶಿಕ್ಷಣದ ಸವಾಲುಗಳು: ಶಿಕ್ಷಕರ ತೊಡಗುವಿಕೆ” ಎಂಬ  ವಿಷಯದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳೂರಿನ ಎಸ್.ಡಿ.ಎಂ. ಕಾನೂನು ಕಾಲೇಜಿನ ಸಭಾಂಗಣದಲ್ಲಿ ಜನವರಿ 11, 2020 ರಂದು ಆಯೋಜಿಸುತ್ತಿದೆ.

ಈ ವಿಚಾರ ಸಂಕಿರಣವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಇವರು ಉದ್ಘಾಟಿಸಲಿದ್ದು, ಉತ್ತರ ಪ್ರದೇಶದ ನೋಯಿಡಾದ ಗೌತಮ ಬುದ್ಧ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಭಗವತಿ ಪ್ರಸಾದ್ ಶರ್ಮ ಇವರು ದಿಕ್ಸೂಚಿ ಭಾಷಣ ಮಾಡಲಿರುವರು. ಕೆ.ಆರ್.ಎಂ.ಎಸ್.ಎನ್ ನ ರಾಜ್ಯಾಧ್ಯಕ್ಷರಾದ ಡಾ.ರಘು ಅಕ್ಮಂಚಿಯವರು ಪ್ರಾಸ್ಥವಿಕವಾಗಿ ಮಾತನಾಡಲಿರುವರು. ಎಸ್.ಡಿ.ಎಂ. ಸೊಸೈಟಿಯ ಕಾರ್ಯದರ್ಶಿಗಳಾದ ಡಾ.ಬಿ.ಯಶೋವರ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.

ಗುಣಮಟ್ಟದ ರೂಪು ರೇಷೆಗಳು - ಶಿಕ್ಷಕರ ತೊಡಗುವಿಕೆ- ಪಠ್ಯಕ್ರಮ ಈ ವಿಷಯಗಳ ಬಗ್ಗೆ ತಾಂತ್ರಿಕ ಚರ್ಚಾ ಗೋಷ್ಠಿಯಲ್ಲಿ ದೆಹಲಿಯ ವಿಶ್ವವಿದ್ಯಾಲಯಗಳ ಅನುದಾನ ಆಯೋಗದ ಸದಸ್ಯ ಪ್ರೊ.ಗೋಪಾಲ ರೆಡ್ಡಿಯವರು ಅಧ್ಯಕ್ಷರಾಗಿದ್ದು ನ್ಯಾಕ್ ಬೆಂಗಳೂರು ಇದರ ಸಲಹೆಗಾರರಾದ ಡಾ.ದೇವೇಂದ್ರ ಕಾವಡೆ ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ ಇದರ ಯು.ಜ.ಸಿ. - ಹೆಚ್.ಆರ್.ಡಿ. ನಿರ್ದೇಶಕರಾದ ಪ್ರೊ.ಹರೀಶ್ ರಾಮಸ್ವಾಮಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ.
ಗುಣಮಟ್ಟ - ಪಠ್ಯಕ್ರಮ - ನೈತಿಕತೆಯ ವಿಷಯಗಳಲ್ಲಿ 5 ವಿಭಾಗಗಳಲ್ಲಿ ಪ್ರಬಂಧಗಳ ಮಂಡನೆಯಾಗಲಿದ್ದು ಪ್ರೊ.ಪಿ.ಎಲ್ ಧರ್ಮ ನಿರ್ದೇಶಕರು ಕಾಲೇಜು ಅಭಿವೃದ್ಧಿ ಮಂಡಳಿ ಮಂಗಳೂರು ವಿ.ವಿ., ಪ್ರೊ.ಮುನಿರಾಜು, ವಾಣಿಜ್ಯ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ, ಡಾ.ಡಿ.ಶಿವಲಿಂಗಯ್ಯ ಪೂರ್ವತನ ಕುಲಪತಿಗಳು ಕ.ರಾ.ಮು.ವಿ.ವಿ., ಡಾ.ಹರೀಶ್ ಜೋಯಿಸ, ಗ್ರಾಮೀಣ ಅಭಿವೃದ್ಧಿ ಪೀಠದ ಸಂಯೋಜನಾಧಿಕಾರಿಗಳು ಮಣಿಪಾಲ ವಿ.ವಿ. ಹಾಗೂ ಡಾ.ಅನಸೂಯ ರೈ, ವಾಣಿಜ್ಯ ವಿಭಾಗ ವಿ.ವಿ.ಕಾಲೇಜು ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ನಿರ್ವಹಿಸಲಿರುವರು.

ಸಂಕಿರಣದ ಸಮಾರೋಪ ಕಾರ್ಯಕ್ರಮದಲ್ಲಿ ನೀತಿ ರಚನೆಕಾರರೊಂದಿಗೆ ಸಂವಾದ ನಡೆಯಲಿದ್ದು, ಇದರಲ್ಲಿ ಕರ್ನಾಟಕ ಸರಕಾರದ ಎಂ.ಎಲ್.ಸಿ. ಶ್ರೀ ಅರುಣ್ ಶೆಹಪುರ್, ಮಾಜಿ ಎಂ.ಎಲ್.ಸಿ. ಬಾಲಕೃಷ್ಣ ಭಟ್, ಕೆ.ಆರ್.ಎಂ.ಎಸ್.ಎಸ್. ಕಾರ್ಯದರ್ಶಿ ಜಿ.ಸಿ.ರಾಜಣ್ಣ, ಮಾಜಿ ವಿಧಾನ ಸಭಾ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಂಗಳೂರು ವಲಯದ ಕಾಲೇಜು ಶಿಕ್ಷಣ ನಿರ್ದೇಶನಾಲಯ ಜಂಟಿ ನಿರ್ದೇಶಕರಾದ - ಡಾ.ಅಪ್ಪಾಜಿ ಗೌಡ ಎಸ್.ಪಿ. ಇವರುಗಳು ಭಾಗವಹಿಸಲಿರುವರು. ಸಮಾರೋಪ ಭಾಷಣವನ್ನು ಅಖಿಲ ಭಾರತೀಯ ರಾಷ್ಟ್ರೀಯ ಶಿಕ್ಷಕ ಮಹಾ ಸಂಘದ ಉನ್ನತ ಮಟ್ಟದ ಪ್ರಮುಖರಾದ ಶ್ರೀ ಮಹೇಂದ್ರ ಕುಮಾರ್ ಇವರು ನೀಡಲಿರುವರು.
ಈ ವಿಶೇಷ ಸಂಕಿರಣವು ಉನ್ನತ ಶಿಕ್ಷಣ ವಲಯದಲ್ಲಿ ನೂತನ ಕ್ರಾಂತಿಗೆ ನಾಂದಿಯಾಗುವುದೆಂಬ ಅಭಿಲಾಷೆಯನ್ನು ಹೊಂದಿದ್ದು, ನ್ಯಾಕ್ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಿದ್ಯಾ ಸಂಸ್ಥೆಗಳಾದ ನಿಟ್ಟೆ ಶಿಕ್ಷಣ ಸಮೂಹ ಸಂಸ್ಥೆಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಸಂಸ್ಥೆಗಳು ಈ ಕಾರ್ಯಕ್ರಮದ ಸಹ ಪ್ರಾಯೋಜಕತ್ವವನ್ನು ವಹಿಸಿಕೊಂಡಿವೆ. ನಗರದ ಶೈಕ್ಷಣಿಕ ವಲಯದ ಸಂಸ್ಥೆಗಳು, ಶಿಕ್ಷಕರು, ಪೋಷಕರು, ಸಂಶೋಧನಾಸಕ್ತರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಬಹುದೆಂದು ಈ ಮೂಲಕ ಪ್ರಕಟಿಸಲಾಗಿದೆ.

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Children’s Day Competition LIVE - St. Theresa’
View More

Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Obituary: Patrick Oliveira (83), KemmannuObituary: Patrick Oliveira (83), Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
ಶ್ರೀ ಬ್ರಹ್ಮ ಬೈದರ್ಕಳ ಪ೦ಚಧೂಮಾವತಿ ಗರೋಡಿ, ತೋನ್ಸೆ. ವಾರ್ಷಿಕ ನೆಮೋತ್ಸವಕ್ಕೆ ಆದರದ ಸ್ವಾಗತಶ್ರೀ ಬ್ರಹ್ಮ ಬೈದರ್ಕಳ ಪ೦ಚಧೂಮಾವತಿ ಗರೋಡಿ, ತೋನ್ಸೆ. ವಾರ್ಷಿಕ  ನೆಮೋತ್ಸವಕ್ಕೆ ಆದರದ ಸ್ವಾಗತ
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | UdupiFinal Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, KemmannuVespers 2024 | St. Theresa’s Church, Kemmannu
Annual Church Feast 2024 | St. Theresa’s Church, KemmannuAnnual Church Feast 2024 | St. Theresa’s Church, Kemmannu
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | UdupiCHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From KemmannuAnnual Day 2023 | Carmel English School, Live From Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, UdupiEaster 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, UdupiFocus Studio, Near Hotel Kidiyoor, Udupi