ಕವಿಗಳು ಕಂಡ ಕುರ್ಕಾಲರು’, ಪಾರು ಪಕ್ಕಿಗ್ ಮುಗಲ್ದ ಪುಗೆಲ್’ ಮತ್ತು ಮೋಹನ್ ಸಿ.ಪೂಜಾರಿ’ ಕೃತಿಗಳ ಬಿಡುಗಡೆ
Kemmannu News Network, 16-10-2017 22:28:04
ಅಭಿಜಿತ್ ಪ್ರಕಾಶನದ `ಕವಿಗಳು ಕಂಡ ಕುರ್ಕಾಲರು’ಮತ್ತು ಅಕ್ಷಯ ಪ್ರಕಾಶನದ `ಪಾರು ಪಕ್ಕಿಗ್ ಮುಗಲ್ದ ಪುಗೆಲ್’ ಕೃತಿಗಳ ಬಿಡುಗಡೆ
ಮುಂಬಯಿ, ಅ.14: ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ಸಂಜೆ ನಡೆಸಲ್ಪಟ್ಟ ಅಕ್ಷಯ ಮಾಸಿಕದ ವಾರ್ಷಿಕ `ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭದ ಮಧ್ಯಾಂತರದಲ್ಲಿ ಹಿರಿಯ ಶಿಕ್ಷಕ, ಕವಿ ಬಿ.ಎಸ್ ಕುರ್ಕಾಲ್ ಬಗ್ಗೆ ವಿವಿಧ ಕವಿಗಳ ಕವನಗÀಳಿಂದ ರಚಿತ, ಸಾಹಿತಿ ಡಾ| ಕರುಣಾಕರ ಶೆಟ್ಟಿ ಪಣಿಯೂರು ಪ್ರಧಾನ ಸಂಪಾದಕತ್ವ ಮತ್ತು ಕನ್ನಡದ ಸೇನಾನಿ ಎಸ್.ಕೆ ಸುಂದರ್ ಸಂಪಾದಕದಲ್ಲಿ ಅಭಿಜಿತ್ ಪ್ರಕಾಶನ ಮುಂಬಯಿ ಪ್ರಕಾಶಿತ `ಕವಿಗಳು ಕಂಡ ಕುರ್ಕಾಲರು’, ಮತ್ತು ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ರಚಿತ, ಅಕ್ಷಯ ಪ್ರಕಾಶನ ಮುಂಬಯಿ ಪ್ರಕಾಶಿಸಿದ `ಪಾರು ಪಕ್ಕಿಗ್ ಮುಗಲ್ದ ಪುಗೆಲ್’ ಎರಡು ಕೃತಿಗಳÀು ಏಕಕಾಲಕ್ಕೆ ಅನಾವರಣ ಗೊಂಡವು.
ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ರಾಣಿ ಅಬ್ಬಕ್ಕ ತುಳು ಸಂಶೋಧನಾ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಪೆÇ್ರ| ತುಕರಾಮ ಪೂಜಾರಿ ಮತ್ತು ಲಕ್ಷಿ ್ಮೀ ಛಾಯಾ ವಿಚಾರ ವೇದಿಕೆ ಮುಂಬಯಿ ಸಂಚಾಲಕ, ಹಿರಿಯ ಕವಿ, ಬಿ.ಎಸ್ ಕುರ್ಕಾಲ್ ಅವರು ಕ್ರಮವಾಗಿ ಏಕಕಾಲಕ್ಕೆ ಎರಡು ಕೃತಿಗಳÀನ್ನು ಬಿಡುಗಡೆ ಗೊಳಿಸಿದರು. ಕೃತಿಕಾರ ಡಾ| ಕರುಣಾಕರ ಶೆಟ್ಟಿ ಪಣಿಯೂರು ಮತ್ತು ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ್ ಅಲೆವೂರು ಕೃತಿ ಪರಿಚಯಗೈದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹಿರಿಯ ಸಾಹಿತಿ ನ್ಯಾ| ವಸಂತ ಎಸ್.ಕಲಕೋಟಿ, ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್, ಎಂ.ಎಸ್ ರಾವ್ ಅಹ್ಮದಾಬಾದ್, ಅಸೋಸಿ ಯೇಶನ್ನ ಪದಾಧಿಕಾರಿಗಳು, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ವೇದಿಕೆಯಲ್ಲಿದ್ದರು.
ತುಕರಾಮ ಪೂಜಾರಿ ಮಾತನಾಡಿ ಮುಂಬಯಿ ಅಚ್ಚ ತುಳುಕನ್ನಡದ ನಾಡಿಗಿ ಬೆಳೆಯುತ್ತಿರುವುದು ಅಭಿಮಾನ ತರುತ್ತಿದೆ. ಸಾಹಿತ್ಯಾಭಿಮಾನಕ್ಕೆ ಹೆಸರಾದ ಮುಂಬಯಿಗರ ಕೃತಿ, ಸಂಕಲನಗಳು ತುಳುಕನ್ನಡದ ಸಾಹಿತ್ಯಕಿರೀಟದ ಮುತ್ತುಗಳಾಗಿ ಪ್ರಜ್ವಲಿಸುತ್ತಿವೆ. ತಮ್ಮ ಸಾಹಿತ್ಯಾಭಿಮಾನ ಸರ್ವರಿಗೂ ಮಾದರಿ ಎಂದರು.
ಸುನೀತಾ ಶೆಟ್ಟಿ ಪರಿಸರ ಮತ್ತು ರಾಷ್ಟ್ರಪ್ರೇಮವುಳ್ಳ ಸಜ್ಜನ ಸಾಹಿತಿ. ಸಂಸ್ಕೃತಿಯ ಬಗ್ಗೆ ಅಗಾಧ ಒಲವುವುಳ್ಳ ಇವರು ತನ್ನ ಬರವಣಿಗೆ ಮೂಲಕ ಭವಿಷ್ಯತ್ತಿನ ಪೀಳಿಗೆಗೆ ತಪುಪಿಸುವ ಪ್ರಯತ್ನ ಮಾಡುತ್ತಿರುವುದು ಪ್ರಶಂಸನೀಯ. ಇವರ ಸಾಹಿತ್ಯ ಸೇವೆ ಸಾರ್ಥಕ್ಯವಾಗಿದೆ ಎಂದು ಬಿ.ಎಸ್ ಕುರ್ಕಾಲ್ ಅಭಿಪ್ರಾಯಪಟ್ಟರು.
ಸುನೀತಾ ಶೆಟ್ಟಿ ಮಾತನಾಡಿ ನನ್ನ ಕವಿತೆಗಳು ಬೇರುಗಳನ್ನು ಕಳೆದುಕೊಂಡ ನನ್ನ ಮಣ್ಣಿನ ಅರ್ಥನಾದ ಎಂದು ಅರಿತರು ಸಾಕು. ಪ್ರಗತಿಯ ಹೆಸರಿನಲ್ಲಿ ಹಸಿರು ನಾಶಗೊಂಡಾಗ ಮಾನವ ಬದುಕಿನ ಅಂಗಾಂಗಗಳು ಕಳಚಿಕೊಂಡು ದುರ್ಬಲವಾಗುವುದನ್ನು ನಾನು ಗಮನಿಸಿದೆ. ರೈತ ಕುಟುಂಬದ ಒಂದು ಕುಡಿಯಾದ ನಾನು ನಗರದಲ್ಲಿದ್ದರು ನನ್ನ ಬಾಲ್ಯವನ್ನೇ ಕಳೆದುಕೊಂಡ ಅಸಹಾಯಕ ಸ್ಥಿತಿಯಿಂದ ಮರುಗಿದೆ. ನಗರದಲ್ಲಿ ವಾಸಿಸುವ ನನ್ನ ಮುಂದಿನ ಪೀಳಿಗೆಗೆ ನಾನು ಉಳಿಸಿಕೊಂಡಿದಾದರೆ ಏನು ಎಂಬ ದುಃಖ ನನ್ನಲ್ಲಿ ಇದೆ. ನನ್ನ ಕವನಗಳಲ್ಲಿ ಹತಾಶೆಯ ಬಾವಗಳನ್ನು ಗುರುತಿಸುವವರಿಗೆ ಇದೊಂದು ಹಿನ್ನಲೆಯಾಗಿದು. ಕವಿತೆ ಮಾತನಾಡುತ್ತದೆ ಎನ್ನುವ ಅಭಿಪ್ರಾಯವುಂಟು. ಈಗಾಗಿ ನನ್ನ ಕವಿತೆಗಳು ಕೇವಲ ಮೌನದ ಶಬ್ದಗಳಾಗಿ ಉಳಿಯದೆ ಅವು ನಿರಂತರ ಮಾತನಾಡುತ್ತಿರಬೇಕು ಎಂಬುದೇ ನನ್ನ ಪ್ರಯತ್ನ ಎಂದರು.
ಪ್ರತೀಕ್ಷೆಗಳ ಜಗತ್ತಿನಲ್ಲಿರುವ ಆಧುನಿಕ ಜನತೆಗೆ ಕವನ, ಸಾಹಿತ್ಯ, ಬರವಣಿಗೆ ಮೂಲಕ ಮನ ಪರಿವರ್ತಿಸುವ ಪ್ರಯತ್ನ ಮಾಡುತ್ತಿರುವ ನಮ್ಮಲ್ಲಿನ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ಮತ್ತು ಹಿರಿಯ ಕವಿ ಬಿ.ಎಸ್ ಕುರ್ಕಾಲ್ ಅವರ ಸೇವೆ ಅನುಪಮವಾದದ್ದು. ಎಲ್ಲರಲ್ಲೂ ಸಂತೋಷ, ಸಮೃದ್ಧಿ ನೆಲೆಸಬೇಕೆನ್ನುವ ಉದ್ದೇಶದಿಂದ ತಮ್ಮ ಅನುಭವಗಳನ್ನು ಬರವಣಿಗೆ ಮೂಲಕ ಪ್ರಕಾಶಿಸಿ ಸ್ವಸ್ಥ ಸಾಮಾಜಿಕ ಜೀವನಕ್ಕೆ ಪ್ರೇರೆಪಿಸುತ್ತಿರುವುದು ಅಭಿನಂದನೀಯ ಎಂದು ನಿತ್ಯಾನಂದ ಕೋಟ್ಯಾನ್ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃತಿ ಪ್ರಕಾಶಿತ ನವೀನ್ ಪ್ರಿಂಟರ್ಸ್ ಮಾಲಿಕ ನಾರಾಯಣ ಆರ್.ಶೆಟ್ಟಿ, ಎಂ.ಎಸ್ ರಾವ್, ಎಸ್.ಕೆ ಸುಂದರ್, ಡಾ| ಕರುಣಾಕರ ಶೆಟ್ಟಿ ಮತ್ತಿತರರಿಗೆ ಪುಷ್ಪ, ಕೃತಿಯೊಂದಿಗೆ ಅಧ್ಯಕ್ಷರು ಗೌರವಿಸಿದರು. ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರ್ವಹಿಸಿ ಧನ್ಯವದಿಸಿದರು.
ಬಿಲ್ಲವ ಭವನದಲ್ಲಿ `ಅನನ್ಯ ಕಾರ್ಯ ಪ್ರವೃತ್ತ ಮೋಹನ್ ಸಿ.ಪೂಜಾರಿ’ ಕೃತಿ ಬಿಡುಗಡೆ ಸಾಧಕರ ಬದುಕು ಪರಿಚಯ ಅವಶ್ಯ : ಡಾ| ಸುನೀತಾ ಶೆಟ್ಟಿ
ಮುಂಬಯಿ, ಅ.14: ಹುಟ್ಟೂರಿನಿಂದ ಹೊಟ್ಟೆ ಪಾಡಿಗಾಗಿ ಮುಂಬಯಿ ಸೇರಿದ ಮೋಹನ್ ಪೂಜಾರಿ ಸದ್ಯ ಅಹ್ಮದಾಬಾದ್ನ ಹೆಸರಾಂತ ತುಳುಕನ್ನಡಿಗ ಉದ್ಯಮಿ. ಮುಂಬಯಿನಿಂದ ಗುಜರಾತ್ಗೆ ಪ್ರಯಾಣಿಸಿ ಕಷ್ಟನಷ್ಟಗಳನ್ನು ಅನುಭವಿಸಿಯೂ ಶೂನ್ಯದಿಂದ ಮೇಲಕ್ಕೇರಿ ಆಕಾಶದೆಡೆಗೆ ಕರಣ ಚಾಚುವ ಓರ್ವ ಮಹಾನುಭಾವ. ನಮ್ಮಲ್ಲಿ ಉದ್ದಿಮೆ ಎಂದರೆ ಟಾಟಾ, ಅಂಬಾನಿ ಅವರನ್ನು ಗುರುತಿಸುವುದೇ ಹೆಚ್ಚು. ಓರ್ವ ಉತ್ತಮ ಸಾಹಿತಿ ಆದರೆ ಅವನಿಗೊಂದು ಅಭಿನಂದನಾ ಗ್ರಂಥವಾದರೂ ಬಂದಿತ್ತು. ಆದರೆ ಉದ್ಯಮ ಕ್ಷೇತ್ರದ ಸಾಧಕರನ್ನು ಪರಿಚಯಿಸುವುದು ತೀರ ಕಡಿಮೆ. ಲೇಖಕ ಎಂ.ಎಸ್ ರಾವ್ ಇಲ್ಲೊಂದು ಅಪರೂಪದ ಕೆಲಸ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಹೊರನಾಡುಗಳಿಂದ ಬಂದು ಏಕಾಂಗಿಯಾಗಿ ಅತ್ಯುನ್ನತ ಸಾಧನೆ ಮಾಡಿದವರ ಬದುಕಿನ ಪರಿಚಯ ನೀಡುವ ಸಾಹಸ ಮಾಡಿರುವುದು ಅಭಿನಂದನೀ ಯ. ನಾಳಿನ ಜನಾಂಗಕ್ಕೆ ಈ ಹೆಜ್ಜೆ ಗುರುತುಗಳು ಮಾದರಿಯಾಗಬೇಕು ಎಂಬಾ ಈ ಪ್ರಯತ್ನವು ಶ್ಲಾಘನೀಯ. ಮೂಡನಂಬಿಕೆ ಅಂಧಶ್ರದ್ಧೆಯಿಂದ ಬಹು ದೂರವಿರುವ ಮೋಹನ್ ಪೂಜಾರಿ ಅವರು ಸ್ವಾರ್ಥ, ಹೊಣ, ಹೆಮ್ಮೆ, ಅಹಂ ಇವುಗಳನ್ನು ದ್ವೇಷಿಸುತ್ತಾರೆ ಎಂಬ ವಾಕ್ಯ ಅವರ ಬದುಕಿನ ವ್ಯಾಖ್ಯಾನ ಎಂದು ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ತಿಳಿಸಿದರು.
ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃ ಹದಲ್ಲಿ ಅಕ್ಷಯ ಮಾಸಿಕದ ವಾರ್ಷಿಕ `ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭದ ಮಧ್ಯಾಂತರದಲ್ಲಿ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹೃದಯ ಶ್ರೀಮಂತ ಸಮಾಜ ಸೇವಕ, ಅನನ್ಯ ಕಾರ್ಯಸಾಧಕ, ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಅವರ ಬದುಕುಶೈಲಿಯ ಲೇಖಕ, ಹಿರಿಯ ಪತ್ರಕರ್ತ ಎಂ.ಎಸ್ ರಾವ್ ಅಹ್ಮದಾಬಾದ್ ಬರಹದ, ಸಂತೃಪ್ತಿ ಪಬ್ಲಿಕೇಶನ್ ಅಹ್ಮದಾಬಾದ್ ಪ್ರಕಾಶಿಸಿತ ಕೃತಿ `ಅನನ್ಯ ಕಾರ್ಯ ಪ್ರವೃತ್ತ ಮೋಹನ್ ಸಿ.ಪೂಜಾರಿ’ ಕೃತಿ ಬಿಡುಗಡೆ ಗೊಳಿಸಿ ಸುನೀತಾ ಶೆಟ್ಟಿ ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ಕವಿ ಬಿ.ಎಸ್ ಕುರ್ಕಾಲ್, ಹಿರಿಯ ಸಾಹಿತಿ ನ್ಯಾ| ವಸಂತ ಎಸ್.ಕಲಕೋಟಿ, ವಿದ್ವಾಂಸ, ಪೆÇ್ರ| ತುಕರಾಮ ಪೂಜಾರಿ, ಹಿರಿಯ ಉದ್ಯಮಿ ಜಯ ಪೂಜಾರಿ, ಡಾ| ಕರುಣಾಕರ ಶೆಟ್ಟಿ ಪಣಿಯೂರು, ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ್ ಅಲೆವೂರು, ಸುನಂದ ಮೋಹನ್ ಪೂಜಾರಿ, ವಾಸು ವಿ.ಸುವರ್ಣ ಬರೋಡಾ, ಮನೋಜ್ ಎಂ.ಪೂಜಾರಿ, ಹರೀಶ್ ಎಂ.ಪೂಜಾರಿ, ಕವಿತಾ ಎಂ.ಪೂಜಾರಿ, ಸವಿತಾ ಎಂ.ಪೂಜಾ ರಿ, ಭರತ್ಕುಮಾರ್ ಪಾಂಡೇಶ್ವರ್, ಮೋಹನ್ರ ಪರಿವಾರ, ಬಿಲ್ಲವರ ಅಸೋಸಿಯೇಶನ್ನ ಉಪಾಧ್ಯಕ್ಷರಾದ ಭಾಸ್ಕರ ವಿ.ಬಂಗೇರ, ಪುರುಷೋತ್ತಮ ಎಸ್.ಕೋಟ್ಯಾ ನ್, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಹರೀಶ್ ಜಿ.ಪೂಜಾರಿ ಕೊಕ್ಕರ್ಣೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೃತಿಕಾರ ಎಂ.ಎಸ್ ರಾವ್ ಅಹ್ಮದಾಬಾದ್ ಕೃತಿ ಪರಿಚಯಿಸುತ್ತಾ ದಾಷ್ರ್ಟಿಕ ಹಾಗೂ ಉದ್ವೇಕಕಾರ ಜೀವನಯಾತ್ರೆ ಮೋಹನ್ ಪೂಜಾರಿ ಅವರದ್ದು. ಕಿತ್ತುತಿನ್ನುವ ಬಡತನದಿಂದ ಪಾರಾಗಲು ಎಳೆಯ ವಯಸ್ಸಿನಲ್ಲೇ ಜೀವನೋಪಾಯ ಅರಸಿ ಮುಂಬಯಿನ ಫುಟ್ಪಾತ್ನಲ್ಲಿ ಹರಿದ ಬನಿಯಾನ್, ಇಜಾರು ಧರಿಸಿ ಬೆವರು ಸುರಿಸಿ ಸ್ವಂತಿಕೆಯ ಪ್ರತಿಷ್ಠೆ ಬೆಳೆಸಿದವರು. ಇಂತಹ ಸಾಹಸಧಾರಿ ಓರ್ವನ ಕ್ಲಿಷ್ಟ ಬದುಕಿನ ವ್ಯಕ್ತಿತ್ವವನ್ನು ಬರವಣಿಗೆಯಲ್ಲಿ ಪೆÇೀಣಿಸಿ ಕೃತಿಯಾಗಿಸುವ ಭಾಗ್ಯ ನನ್ನ ಪಾಲಿನ ಶ್ರೇಷ್ಠತೆಯಾಗಿದೆ ಎಂದರು.
ಮೋಹನ್ ಸಿ.ಪೂಜಾರಿ ಮಾತನಾಡಿ ನನ್ನದು ಬಡತನ ಹುಟ್ಟು, ಪರಿಶ್ರಮದ ಸಾಧನೆಯೇ ನನ್ನ ಏಳಿಗೆಯ ಗುಟ್ಟು. ಮುಂಬಯಿನ ಫುಟ್ಪಾತ್ನಲ್ಲಿ ದಿನ ಕಳೆದು ಬೆಳೆದು ಕ್ರಮೇಣ ಗುಜರಾತ್ ಸೇರಿದವನು. ನನ್ನ ಜೀವನ ಕೃತಿಯಾಗಿ ಪ್ರಕಟಿಸಲು ಎಷ್ಟು ಯೋಗ್ಯನೆಂದು ತಿಳಿದಿಲ್ಲ. ಆದರೆ ನನ್ನ ಅವಿರತ ಪರಿಶ್ರಮದ ಜೀವನ ಆ ಮೂಲಕದ ಯಶಸ್ಸು ಪ್ರಸಕ್ತ ಯುವಜನತೆಗೆ ಪ್ರೇರಣೆ ಆಗಬಲ್ಲದು ಎನ್ನುವ ಆಶಯ ನನ್ನದಾಗಿದೆ. ಸಾಧನೆ ಎಂದರೇನು ಎನ್ನುವುದಕ್ಕೆ ಈ ಕೃತಿ ಸಾಕ್ಷಿಯಾಗಲಿದೆ ಎಂದರು.
ಉದಾರ ಮನಸ್ಸಿಗೆ ಮೋಹನ್ ಸಿ.ಪೂಜಾರಿ ಮೇರುವ್ಯಕ್ತಿ ಆಗಿದ್ದಾರೆ. ಕಡು ಬಡತನದಿಂದ ಹೊರಹೊಮ್ಮಿ, ಪ್ರಾಮಾಣಿಕತೆ, ನಿಷ್ಠೆ, ಶ್ರಮಜೀವಿಗಾಗಿ ಬದುಕು ಕಂಡು ಜಾತಿಧರ್ಮ ಮತಗಳನ್ನು ಮೀರಿ ಬಾಳಿದ ಸಹೃದಯಿ. ಇಂತಹ ವ್ಯಕ್ತಿತ್ವದ ಬದುಕು ಕೃತಿರೂಪವಾಗಿ ಅದೂ ಈ ಬಿಲ್ಲವರ ಭವನದಲ್ಲಿ ಬಿಡುಗಡೆ ಆಗುತ್ತಿರುವುದು ಅಭಿಮಾನ ತಂದಿದೆ ಎಂದು ನಿತ್ಯಾನಂದ ಕೋಟ್ಯಾನ್ ಅಧ್ಯಕ್ಷೀಯತೆಯಲ್ಲಿ ತಿಳಿಸಿದರು.
ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್ ಹೆಜ್ಮಾಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಾಹಿಸಿದರು. ಸತೀಶ್ ಎನ್.ಬಂಗೇರ ಕೃತಜ್ಞತೆ ಸಮರ್ಪಿಸಿದರು.
ಗುಜರಾತ್ ರಾಜ್ಯದ ಅಹ್ಮದಾಬಾದ್ನ ಹಿರಿಯ ಉದ್ಯಮಿ, ಕೊಡುಗೈದಾನಿ, ಸಮಾಜ ಸೇವಕರಾದ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಇವರು ಉಡುಪಿ ಅಲ್ಲಿನ ತೆಂಕ ಎರ್ಮಾಳ್ನ ಹೆಸರಾಂತ ಕೃಷಿಕ ಚಂದು ಪೂಜಾರಿ ಮತ್ತು ರಾಧು ಸಿ.ಪೂಜಾರಿ (ಸದ್ಯ ಸ್ವರ್ಗಸ್ಥರು) ಇವರ ಸುಪುತ್ರರಾಗಿದ್ದು ಅಹ್ಮದಾಬಾದ್ನ ಕೊಡುಗೈದಾನಿ ಎಂದೇ ಪರಿಚಿತರು. ಇವರ ಜೀವನ ಚಿತ್ರಣದ `ಅನನ್ಯ ಕಾರ್ಯ ಪ್ರವೃತ್ತ ಮೋಹನ್ ಸಿ.ಪೂಜಾರಿ’ ಕೃತಿ ಎಂ.ಎಸ್ ರಾವ್ ಅವರ 12ನೇ ಕನ್ನಡ ಕೃತಿ. ಈ ಪಯ್ಕಿ ಐದು ಪ್ರ್ದಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬರೆದ ಕೃತಿಗಳಾಗಿವೆ. ಗುಜರಾತ್ನಲ್ಲಿ ಪ್ರಥಮ ಕನ್ನಡ ಪುಸ್ತಕ ಬರೆದು ಇಲ್ಲೇ ಮುದ್ರಿಸಿ ದಾಖಲೆ ಸೃಷ್ಟಿ ಮಾಡಿದ ಸಾಧನೆ ಎಂ.ಎಸ್. ರಾವ್ ಅವರದ್ದು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link