Brief mumbai news with pictures


Rons Bantwal
Kemmannu News Network, 16-10-2017 22:49:52


Write Comment     |     E-Mail To a Friend     |     Facebook     |     Twitter     |     Print


Mumbai Oct. 15 :- Yuva Sena Chief Aditya Thackeray, Zee News Editor-in Chief Sudhir Chaudhary, Bollywood actors Akshay Kumar & Katrina Kaif at a Kudo tournament in Mumbai on Saturday night.

Mumbai Oct. 16 :- BMC gardner making peacock effigy from various colourful of flowers at BMC head quarter to celebrate Diwali Festival in Mumbai on Monday.

ದಹಿಸರ್‍ನ ಅದಮಾರು ಪೂರ್ಣಪ್ರಜ್ಞ ಎಜ್ಯುಕೇಶನ್ ಸೆಂಟರ್‍ಗೆ ಪಲಿಮಾರುಶ್ರೀ ಭೇಟಿ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಭಕ್ತಾಭಿಮಾನಿಗಳ ಭವ್ಯ ಸ್ವಾಗತ  

ಮುಂಬಯಿ, ಅ.14: ಉಪನಗರ ದಹಿಸರ್ ಪೂರ್ವದ ಅದಮಾರು ಮಠ ಶಿಕ್ಷಣ ಕೇಂದ್ರ ಸಂಚಾಲಿತ ಪೂರ್ಣಪ್ರಜ್ಞ ಎಜ್ಯುಕೇಶನ್ ಸೆಂಟರ್‍ಗೆ ಈ ಶಿಕ್ಷಣ ಕೇಂದ್ರದ ಮುಖ್ಯಸ್ಥರೂ, ಉಡುಪಿ ಪರ್ಯಾಯ ಪೀಠ  ಅಲಂಕರಿಸಲಿರುವ ಪಲಿಮಾರು ಮಠಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು  ಇದಿಲ್ಲಿ ಶನಿವಾರ ಸಂಜೆ ಪಾದಾರ್ಪಣೆಗೈದರು. ಶ್ರೀಪಾದರನ್ನು ಶಾಲಾ ಮಂಡಳಿ, ವಿದ್ಯಾಥಿರ್üಗಳು ಹಾಗೂ ಸ್ಥಾನೀಯ ನಾಗರೀಕರು ತುಳುಕನ್ನಡಿಗ ಭಕ್ತಾಭಿಮಾನಿಗಳು ಭವ್ಯ ಮೆರವಣಿಗೆಯಲ್ಲಿ ಹೈಸ್ಕೂಲು ಸಭಾಂಗಣಕ್ಕೆ  ಭಕ್ತಿಪೂರ್ವಕ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ಪರ್ಯಾಯ ಸಮಿತಿ ಮುಂಬಯಿ ಗೌರವಾಧ್ಯಕ್ಷರಾದ ಡಾ| ಸುರೇಶ್ ಎಸ್.ರಾವ್ ಕಟೀಲು, ಎಜ್ಯುಕೇಶನ್ ಸೆಂಟರ್‍ನ ಕಾರ್ಯಾಧ್ಯಕ್ಷ ಎನ್.ಹೆಚ್ ಕುಸ್ನೂರು ಮತ್ತು ಕಾರ್ಯದರ್ಶಿ ಬಿ.ಜೆ ಶೆಣೈ, ಶ್ರೀ ಅದಮಾರು ಮಠ ಮುಂಬಯಿ ಶಾಖಾ ದಿವಾನ, ವಿದ್ಯಾ ಕೇಂದ್ರದ ಜೊತೆ ಕಾರ್ಯದರ್ಶಿ ಲಕ್ಷಿ ್ಮೀನಾರಾಯಣ ಮಚ್ಚಿಂತಾಯ ಸೇರಿದಂತೆ ಆಸುಪಾಸಿನ ನೂರಾರು ಶಿಕ್ಷಣ ಪ್ರಿಯರು ಮತ್ತು ಭಕ್ತಾಭಿಮಾನಿಗಳು, ವಿದ್ಯಾಥಿರ್üಗಳ ಪಾಲಕರು ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಸಾ.ದಯಾ ಅವರ `ಗಗ್ಗರ’ ಕಥಾ ಸಂಕಲನ ಕವಿ ಗೋಪಾಲ್ ತ್ರಾಸಿ ಅವರ `ಬೇಚಾರ ಶಹರು’ ಕವನ ಸಂಕಲನ ಬಿಡುಗಡೆ

ಮುಂಬಯಿ, ಅ.15: ಮುಂಬಯಿ ಮಹಾನಗರದ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ, ಕವಿ ಸಾ.ದಯಾ (ದಯಾನಂದ್ ಸಾಲ್ಯಾನ್) ಅವರ ಪ್ರಥಮ ಕಥಾ ಸಂಕಲನ `ಪಾಟಕ್’ ಮತ್ತು ಕವಿ, ಕತೆಗಾರ ಗೋಪಾಲ ತ್ರಾಸಿ ಅವರ ಮೂರನೇ ಕವನ ಸಂಕಲನ `ಬೇಚಾರ ಶಹರು’ ಕೃತಿಗಳು ಇಂದಿಲ್ಲಿ ಭಾನುವಾರ ಪೂರ್ವಾಹ್ನ  ಬೆಂಗಳೂರು ಜೆ.ಪಿ ನಗರದ ಕಪ್ಪಣ್ಣ ಅಂಗಳದಲ್ಲಿ ಬಿಡುಗಡೆ ಗೊಂಡವು.

ಜಯಲಕ್ಷಿ ್ಮೀ ಪಾಟೀಲ್ ಸಂಚಾಲಕತ್ವದಲ್ಲಿ ನಡೆಸಲಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡಿನ ಹೆಸರಾಂತ ವಿಮರ್ಶಕ ಡಾ| ಎಸ್.ಆರ್ ವಿಜಯಶಂಕರ ಸುವರ್ಣಗಿರಿ ಪ್ರಕಾಶನ ಮಂಗಳೂರು ಪ್ರಕಟಿತ `ಪಾಟಕ್’ ಕೃತಿಯನ್ನು ಕವಿ ಡಾ| ಹೆಚ್. ಎಲ್ ಪುಷ್ಪಾ ಮತ್ತು ಇರುವೆ ಪ್ರಕಾಶನ ಮಂಗಳೂರು ಪ್ರಕಾಶಿತ `ಬೇಚಾರ ಶಹರು’ ಕೃತಿಯನ್ನು ಕತೆಗಾರ ನಾಗರಾಜ್ ವಸ್ತಾರೆ ಅನಾವರಣ ಗೊಳಿಸಿದರು.

ಮುಂಬಯಿಯಲ್ಲಿ ಆಕರ್ಷಣೆ ಮತ್ತು ವಿಕರ್ಷಣೆಗಳಿವೆ. ಅವುಗಳ ನಡುವೆ ಬದುಕುವುದುದಕ್ಕೆ, ಸಹ ಮಾಡಿಕೊಳ್ಳುವುದಕ್ಕೆ,  ಉಸಿರಾಟ ಮಾಡುವುದಕ್ಕೆ ಸಾಹಿತ್ಯದ ಅಗತ್ಯವಿದೆ. ಈ ಎರಡೂ ಲೇಖಕರ ಕೃತಿಗಳನ್ನು ಗಮನಿಸಿದಾಗ ಅನುಭವಕ್ಕೆ ಬರುತ್ತದೆ. ತಾವೂ ತಮ್ಮನ್ನು ಕಂಡುಕೊಳ್ಳುವುದಕ್ಕೆ ಅಸ್ಮಿತೆಯನ್ನು ಕಂಡುಕೊಳ್ಳುವುದಕ್ಕೆ ಇವರಿಗೆ ಸಾಹಿತ್ಯ ಅನಿವಾರ್ಯ. ಎಲ್ಲಾ ರೀತಿಯಲ್ಲಿ ವಲಸೆ ಬರುವವರನ್ನು ಸಮಾನವಾಗಿ ಕಾಣುವ ಮನೋಭಾವ ಮುಂಬಯಿಗಿದೆ ಆದರೆ ಇದು ಬೆಂಗಳೂರಿನಲ್ಲಿ ಇಲ್ಲ ಎಂದು ಎಸ್.ಆರ್ ವಿಜಯಶಂಕರ ತಿಳಿಸಿದರು.

ಇಲ್ಲಿನ ಕವಿತೆಗಳಲ್ಲಿ ಬದುಕು ನಿತ್ಯ ಜೀವನದ ಯಾಂತ್ರಿಕತೆ ಇಲ್ಲಿ ಬಿಚ್ಚಿಕೊಳ್ಳುವುದನ್ನು ನಾವೂ ಕಾಣಬಹುದು. ಜನಸಾಮಾನ್ಯರ ಭಾಷೆಗಳನ್ನು ಕಟ್ಟಿಕೊಂಡೆ ಲೋಕವನ್ನು ಕಟ್ಟಿಕೊಡುವ ರೀತಿ ಮೆಚ್ಚುಗೆ ಗಳಿಸುತ್ತದೆ. ಇಲ್ಲಿ ಕೆಲವೊಂದು ಪ್ರಯೋಗಶೀಲ ರಚನೆಗಳು ಕೂಡ ಪ್ರಿಯವಾಗುತ್ತದೆ ಎಂದು ಹೆಚ್. ಎಲ್ ಪುಷ್ಪಾ ತಿಳಿಸಿದರು.

ನಾಗರಾಜ್ ವಸ್ತಾರೆ  ಮಾತನಾಡಿ ಇಲ್ಲಿನ ಕತೆಗಳು ಚೆನ್ನಾಗಿ ಓದಿಸಿಕೊಳ್ಳುತ್ತದೆ. ಕನ್ನಡವನ್ನು ದುಡಿಸಿಕೊಳ್ಳುವ ಪರಿ ತುಂಬಾ ಖುಷಿಕೊಡುತ್ತದೆ. ಓದಿ ಆದ ಮೇಲೆ ಹೊಸ ಹೊಸ ಅರ್ಥವನ್ನು ಇಲ್ಲಿನ ಕತೆಗಳು ಕೊಡುತ್ತವೆ ಎಂದು ನುಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕ ಈ ಹೊತ್ತಿಗೆಯ ಜಯಲಕ್ಷ್ಮೀ ಪಾಟೀಲ್ ಮತ್ತು ಪಾಟೀಲ್ ಪರಿವಾರ, ಉಷ್ ರೈ, ಗಿರಿಧಾರ ಕಾರ್ಕಳ, ಕೃಷ್ಣಮೂರ್ತಿ ಕವತ್ತಾರ್, ರಘುವೀರ ಭಟ್, ಸತೀಶ್ ಪಿ.ಪಿ, ಭಾಸ್ಕರ ಸರಪಾಡಿ, ಶ್ರೀನಿವಾಸ್ ಜಿ.ಕಪ್ಪಣ್ಣ, ಚೇತನಾ ಭಟ್, ಸಂಜೀವ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ತೇಜಸ್ವಿನಿ ಹೆಗ್ಗಡೆ ಸ್ವಾಗತಿಸಿದರು. ಕವಿ ಆನಂದ ಕುಂಚನೂರ ಕಾರ್ಯಕ್ರಮ ನಿರೂಪಿಸಿದರು. ಸಹನಾ ಹೆಗ್ಡೆ ವಂದಿಸಿದರು.

 

ಉಳ್ಳಾಲದ ಪ್ರಸಿದ್ಧ ನಾಟಿ ವೈದ್ಯೆ ಶ್ರೀಮತಿ ಯು.ಎಚ್ ಲಲಿತ ನಿಧನ

ಮುಂಬಯಿ, ಅ.15: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ,  ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ  ಡಾ| ಯು.ಧನಂಜಯ ಕುಮಾರ್, ಇವರ ಮಾತೃಶ್ರೀ, ದಿ| ಕೃಷ್ಣಪ್ಪ ಉಳ್ಳಾಲ ಇವರ ಧರ್ಮಪತ್ನಿ ಉಳ್ಳಾಲದ ಪ್ರಸಿದ್ಧ ನಾಟಿ ವೈದ್ಯೆ ಶ್ರೀಮತಿ ಯು.ಎಚ್ ಲಲಿತ (74.) ಅವರು ಗುರುವಾರ (12.10.2017) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಉಳ್ಳಾಲ ಉಚ್ಚಿಲದ ಸ್ವನಿವಾಸದಲ್ಲಿ  ನಿಧನರಾದರು.

ಮೃತರು ನಾಲ್ಕು ಗಂಡು, ಎಂಟು ಹೆಣ್ಣು ಮಕ್ಕಳು, ಬಂಧುಬಳಗ ಅಗಲಿದ್ದಾರೆ. ಶ್ರೀಮತಿ ಯು.ಎಚ್.ಲಲಿತ ಅವರು  ಪ್ರಸಿದ್ಧ ವಂಶ ಪಾರಂಪರಿಕ ನಾಟಿ ವೈದ್ಯರಾಗಿದ್ದು, ರೋಟರಿ ಕ್ಲಬ್ ದೇರಳಕಟ್ಟೆ ಸಂಸ್ಥೆಯು ಇವರಿಗೆ ರೋಟರಿ ಸೇವಾಶ್ರಿ  ಪ್ರಶಸ್ತಿ ನೀಡಿ ಗೌರವಿಸಿದೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Kallianpur: Students Suffer during rain.
View More

Save SwarnaSave Swarna
@ Rosario Grounds, Mangalore@ Rosario Grounds, Mangalore
Photo Album:

Ronald Andrade (67), laid to Rest.
Comments:

Obituary: Ronald Andrade (67), Kambla Thota, Kemmannu
Rozarich Gaanch September- 2018Rozarich Gaanch September- 2018
Flat For Sale in BrahmavarFlat For Sale in Brahmavar
Milarchi-Lara-September-2018Milarchi-Lara-September-2018
Welcome to Thonse Naturecure HospitalWelcome to Thonse Naturecure Hospital
Santhosh Villa short film by youth of Udupi Parish and ICYM.Santhosh Villa short film by youth of Udupi Parish and ICYM.
Crossland College, Year book 2017-18Crossland College, Year book 2017-18
Watch Eye to Eye by Avila D’souzaWatch Eye to Eye by Avila D’souza
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India