ಕೊಂಕಣಿ ಮಾನ್ಯತಾ ದಿನಾಚರಣೆಯ ಬೆಳ್ಳಿ ಹಬ್ಬ ಸಂಭ್ರಮಾಚರಣೆ:


Media Release

Write Comment     |     E-Mail To a Friend     |     Facebook     |     Twitter     |     Print


ಕೊಂಕಣಿ ಮಾನ್ಯತಾ ದಿನಾಚರಣೆಯ ಬೆಳ್ಳಿ ಹಬ್ಬ ಸಂಭ್ರಮಾಚರಣೆ:

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿಗೆ ಮಾನ್ಯತೆ ದೊರೆತು 25 ವರ್ಷಗಳು ಸಂದಿರುವ ಈ ಸುಸಂದರ್ಭ ದಲ್ಲಿ ರಾಜ್ಯದ ವಿವಿಧಕಡೆಗಳಲ್ಲಿ  ಕೊಂಕಣಿ ಮಾನ್ಯತಾ ದಿನಾಚರಣೆಯ 25 ವೈವಿಧ್ಯಮಯ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ.

ಈ ವರೆಗಿನ ಕಾರ್ಯಕ್ರಮಗಳು
ಅದರಂತೆ ಈ ಆಚರಣೆಯ ಸರಣಿ ಕಾರ್ಯಕ್ರಮವಾಗಿ ಈಗಾಗಲೇ ಏಳು ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆಸಿದ್ದು ಅವುಗಳ ವಿವರ ಈ ಕೆಳಗಿನಂತಿದೆ.

(1) ಒಂದನೇ ಕಾರ್ಯಕ್ರಮವನ್ನು ದಿನಾಂಕ 20-8-2017ರಂದು ಕುಮಟಾದಲ್ಲಿ ಕೊಂಕಣಿ ಪರಿಷತ್ ಇವರ ಸಹಕಾರದಲ್ಲಿ “ಕೊಂಕಣಿ ಮಾನ್ಯತಾ ದಿನಚಾರಣೆಯ ಬೆಳ್ಳಿ ಹಬ್ಬ” ದಿನಾಚರಣೆಯನ್ನು ನಡೆಸಲಾಯಿತು.

(2)ಎರಡನೇ ಕಾರ್ಯಕ್ರಮವನ್ನು ಮುಂಡಗೋಡದಲ್ಲಿ ದಿ.22-9-2017 ರಂದು ಸಿಂಚನಾ ಸಂಸ್ಥೆಯವರ ಸಹಕಾರದಲ್ಲಿ “ಕೊಂಕಣಿ ಭಾಷೆ-ವಿಚಾರಧಾರೆ” ಎಂಬ ಶಿರ್ಷಿಕೆಯಲ್ಲಿ ನಡೆಸಲಾಯಿತು.

 

(3)ಮೂರನೇ ಕಾರ್ಯಕ್ರಮವನ್ನು ದಿನಾಂಕ 23-9-2017 ರಂದು ಯಲ್ಲಾಪುರದಲ್ಲಿ ಮೈತ್ರಿ ಕಲಾಬಳಗ ಇವರ ಸಹಕಾರದಲ್ಲಿ “ಕೊಂಕಣಿ ಜಾನಪದ ಕಲಾ ಸಾಹಿತ್ಯೋತ್ಸವ” ಕಾರ್ಯಕ್ರಮವನ್ನು ನಡೆಸಲಾಯಿತು.

(4)ನಾಲ್ಕನೇ ಕಾರ್ಯಕ್ರಮವನ್ನು ವಿಶೇಷವಾಗಿ ಯುವಜನರಿಗೆ ಕೊಂಕಣಿ ಭಾಷೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ದಿ.24-9-2017 ರಂದು ಗೇರುಸೊಪ್ಪದಲ್ಲಿ ಅಮ್ಚಿ ಕೊಂಕಣಿ ಸಂಘಟನ ಸಂಸ್ಥೆಯ ಸಹಕಾರದಲ್ಲಿ ಯುವಜನರಿಗೆ ಕೊಂಕಣಿ ಸಾಹಿತ್ಯ ಬರವಣಿಗೆ ಪರಿಚಯ ನೀಡಲು “ಕೊಂಕಣಿ ಭಾಷಾ ಕಾರ್ಯಾಗಾರ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು

(5)ಐದನೇ ಸರಣಿ ಕಾರ್ಯಕ್ರಮ “ಕೊಂಕಣಿ ಭಾಷಾ ಸಾಹಿತ್ಯ ಸಂಸ್ಕೃತಿ ಸಮ್ಮಿಲನ್”ವನ್ನು ದಿನಾಂಕ 15-10-2017 ರಂದ ದಾರವಾಡದ ಸಾಂಸ್ಕೃತಿಕ ಸಮುಚ್ಚಯ ಭವನ ಧಾರವಾಡ ಇಲ್ಲಿ ನಡೆಸಲಾಯಿತು.

(6)ಆರನೇ ಕಾರ್ಯಕ್ರಮ “ಕೊಂಕಣಿ ಲೋಕ್ ವೇದ್ ಸಂವ್ಸಾರ್”ವನ್ನು ದಿನಾಂಕ 27-10-2017ರಂದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಕುಣಬಿ ಭವನದಲ್ಲಿ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಶ್ರೀ ಆರ್ ಎಲ್ ಭಟ್   ರವರು ಕಾರ್ಯಕ್ರಮ ಉದ್ಘಾಟಿಸಿ ಭಾಷೆಗಳು ಉಳಿಯಬೇಕು. ಭಾಷೆಗಳಲ್ಲಿರುವ ಸಂಸ್ಕೃತಿ ಸಾಹಿತ್ಯವನ್ನು ಸಂರಕ್ಷಿಸಬೇಕಾಗಿದೆ ಎಂದರು.

(7)ಏಳನೇ ಕಾರ್ಯಕ್ರಮ “ಕೊಂಕಣಿ ಸಂಭ್ರಮ್” ದಿನಾಂಕ 29-10-2017ರಂದು ಪುತ್ತೂರಿನ ಶ್ರೀ ಭುವನೇಂದ್ರ ಕಲಾಭವನದಲ್ಲಿ ನಡೆಸಲಾಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಕುಂತಲಾ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಇದೀಗ ಆಕಾಡೆಮಿಯ ಮಾನ್ಯತಾ ಸರಣಿ ಕಾರ್ಯಕ್ರಮದ ಎಂಟನೇ ಕಾರ್ಯಕ್ರಮವನ್ನು ಕೊಂಕಣಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನಾಗಿ ದಿನಾಂಕ 16.11.2017 ರಂದು ಮಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಈ ಕಾರ್ಯಕ್ರಮದ ವಿವರ ಈ ಕೆಳಗಿನಂತಿದೆ.

ಕೊಂಕಣಿ ಮಕ್ಕಳ ದಿನಾಚರಣಿ 2017

ದಿನಾಂಕ 16-11-2017 ರಂದು ಮಂಗಳೂರಿನ ಪುರಭವನದಲ್ಲಿ ಬೆಳಿಗ್ಗೆ 9.00 ರಿಂದ ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾರ್ಥಿಗಳ “ಕೊಂಕಣಿ ಮಕ್ಕಳ ದಿನಾಚರಣೆ”ಯ ಸಹಿತವಾಗಿ ದಿನ ಪೂರ್ತಿ ರಾತ್ರಿ 8.00ರ ತನಕ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಬೆಳಿಗ್ಗೆ 9 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಸವಿತಾ ಸನಿಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ.ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಮಂಗಳೂರು ನಗದ ಪೆÇೀಲಿಸ್ ಆಯುಕ್ತರಾದ ಶ್ರೀ ಟಿ.ಆರ್.ಸುರೇಶ್ ಮುಖ್ಯ ಅತಿಥಿಯಾಗಿ ಭಾವಗಹಿಸಲಿರುವರು. ಆಯ್ದ ಶಾಲಾ, ಕಾಲೇಜು ಕಲಾತಂಡಗಳಿಂದ ಪ್ರತಿಭಾ ಪ್ರಧರ್ಶನ ನಡೆಯಲಿದೆ. ಶಾಲಾ ಮಕ್ಕಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಎರಡು ವಿಭಾಗಗಳಲ್ಲಿ ನಾಟಕ, ರೂಪಕ, ಸಮೂಹಗಾಯನ, ಜನಪದ ನೃತ್ಯ/ಆಚರಣೆ, ಭಾಷಣ, ಏಕಪಾತ್ರಾಬಿನಯಕ್ಕೆ ಅವಕಾಶ ಕಲ್ಪಿಸಲಾಗಿದೆ.  

ಅಪರಾಹ್ನ 5.00 ಗಂಟೆಗೆ ಕಾಲೇಜು ವಿದ್ಯಾರ್ಥಿಗಳಿಗಾಗಿ “ಕೊಂಕಣಿ ಮಾನ್ಯತಾ ರಜತ ವರ್ಷಾಚರಣೆ” ಬಗ್ಗೆ ಒಂದು ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ  ಶ್ರೀ ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್ ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸಚಿವರಾದ ಶ್ರೀ ಯು.ಟಿ ಖಾದರ್, ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕರಾದ ಶ್ರೀ ಜೇ.ಆರ್.ಲೋಬೊ, ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕರಾ ಶ್ರೀ ಅಭಯಚಂದ್ರ ಜೈನ್, ವಿಧಾನ ಪರಿಷತ್, ಮುಖ್ಯ ಸಚೇತಕರಾದ ಶ್ರೀ ಐವನ್ ಡಿಸೋಜ, ದ.ಕ ಜಿಲ್ಲಾಪಂಚಾಯರ್ ಅಧ್ಯಕ್ಷರಾದ ಶ್ರೀ ಮೀನಾಕ್ಷಿ ಶಾಂತಿಗೋಡು, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಕುಂತಲಾ ಶೆಟ್ಟಿ, ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್,ಮಂಗಳೂರು ಉತ್ತರದ ಶಾಸಕರಾದ ಶ್ರೀ. ಬಿ ಎ ಮೊಹಿಯುದ್ದೀನ್ ಬಾವ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಬಿ.ಎಚ್.ಖಾದರ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ಮಹಮ್ಮದ್ ಮೋನು ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎ.ಸಿ ಭಂಡಾರಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.

ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ ಶ್ರೀ ಬಸ್ತಿವಾಮನ್ ಶೆಣೈ, ಶ್ರೀ ಎರಿಕ್ ಒಝೇರಿಯೊ, ಶ್ರೀ ಕುಂದಾಪುರ ನಾರಾಯನ ಖಾರ್ವಿ, ಶ್ರೀ ಕಾಸರಗೋಡು ಚಿನ್ನಾ ಹಾಗೂ ಶ್ರೀ ರೋಯ್ ಕ್ಯಾಸ್ತೆಲಿನೊ ಗಣ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ತದನಂತರ ಪದವಿಪೂರ್ವ ಮತ್ತು ಕಾಲೇಜು ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನಡೆಯಲಿದೆ. ಅಕಾಡೆಮಿಯ ಸದಸ್ಯರಾದ ಶ್ರೀ ಜೋಕಿಂ ಸ್ಟ್ಯಾನಿ  ಅಲ್ವಾರಿಸ್ ಇವರು ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿರುತ್ತಾರೆ. ಈ ಕಾರ್ಯಕ್ರಮಕ್ಕೆ ಕೊಂಕಣಿ ಪ್ರಚಾರ ಸಂಚಾಲನ(ರಿ) ಮಂಗಳೂರು ಇವರು ಸಹಯೋಗ ನೀಡಲಿದ್ದಾರೆ.

ಕೊಂಕಣಿ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕೊಂಕಣಿ ಭಾಷೆಗೆ ದೊರೆತ ಮಾನ್ಯತೆಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಲು ಮನವಿ ಮಾಡಲಾಗಿದೆ.

 

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Traffic chaos in Santhekatee-Kallianpura-Nejar Roa [2 Comments]
View More

Rozaricho Gaanch December 2017Rozaricho Gaanch December 2017
First Death Anniversary Mass InvitaionFirst Death Anniversary Mass Invitaion
Milarchi Laram - Issue Jan 2018Milarchi Laram - Issue Jan 2018
"GOOD NEWS FOR NON RESIDENT INDIANS" SHORT TERM RENTAL FULLY FURNISHED ACCOMMODATION AVAILABLE AT UDUPI NOW"
Land for Sale in Ashwathakatte, Santhekatte-Kemmannu Main Road.Land for Sale in Ashwathakatte, Santhekatte-Kemmannu Main Road.
HOUSE SITES FOR SALE AT GARDENIA RESIDENCY, REGO COMPOUND, NEAR ASHWATHAKATTE, NEJARHOUSE SITES FOR SALE AT GARDENIA RESIDENCY, REGO COMPOUND, NEAR ASHWATHAKATTE, NEJAR
Now Open - Vegetarian Restaurant “Hotte Thumba” at Ekta Towers, Santhekatte CrossNow Open - Vegetarian Restaurant “Hotte Thumba” at Ekta Towers, Santhekatte Cross
Souza’s Mega Festival SaleSouza’s Mega Festival Sale
Read online Uzvaad:<font color=red> Read online Uzvaad</font color=red>:
Visit Axis Bank Now open in Kallianpura, SanthekatteVisit Axis Bank Now open in Kallianpura, Santhekatte
For all your travel needs contact Sequeira TouristFor all your travel needs contact Sequeira Tourist
Become a professional or part time trader or take Forex Trading as a hobby. We will provide our assistance to you in your success. Click here to know more....Become a professional or part time trader or take Forex Trading as a hobby. We will provide our assistance to you in your success. Click here to know more....
Power Care Services, MoodubellePower Care Services, Moodubelle
Contact Little Flower Tours and TravelsContact Little Flower Tours and Travels
Ganapahti Co-operative Agricultural BankGanapahti Co-operative Agricultural Bank
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India
Mangalorean Fertility Physician in New York

 

Mangalorean Fertility Physician in New York

 

For information, please email nigelepereira.wcmc@gmail.com or contact Megi Zeku at 646-962-7499, prompt 3.

 

 

Thank you from Kemmannu.comContact for all your Travel, Tours and For Rent a Car

Contact Maria Travels  for all your Travel, Tours and For Rent a Car Mob: 9980889512 or 9819444307

Thanksgiving to St. Lawrance

Thanksgiving to St. Lawrance

SAHARA

Sponsored Albums