Brief Mumbai News with Pictures


Rons Bantwal
Kemmannu News Network, 22-11-2017 19:24:49


Write Comment     |     E-Mail To a Friend     |     Facebook     |     Twitter     |     Print


ಎಸ್‍ಕೆಬಿ ಅಸೋಸಿಯೇಶನ್ ಸಂಸ್ಥೆಯಿಂದ ನೆರೂಲ್‍ನ `ಆಶ್ರಯ’ದಲ್ಲಿ ಮಕ್ಕಳ ದಿನಾಚರಣೆ 

ಮುಂಬಯಿ, ನ. 21: ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ) ಸಂಸ್ಥೆಯು ಕಳೆದ ಶನಿವಾರ ನವಿಮುಂಬಯಿ ನೆರೂಲ್ ಅಲ್ಲಿರುವ ಹಿರಿಯ ನಾಗರಿಕರ ವಾಸಧಾಮ `ಆಶ್ರಯ’ದ ಸಭಾಗೃಹದಲ್ಲಿ ಮಕ್ಕಳ ದಿನಾಚರಣೆ ಆಚರಿಸಿತು. ಬಿಎಸ್‍ಕೆಬಿಎ ಉಪಾಧ್ಯಕ್ಷ ವಾಮನ್ ಹೊಳ್ಳ ಹಾಗೂ ಪದಾಧಿಕಾರಿಗಳು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಕಾರ್ಯಕ್ರಮದಲ್ಲಿ 2 ವರ್ಷದವರೆಗಿನ ಮಕ್ಕಳಿಗಾಗಿ `ಆರೋಗ್ಯಯುತ ಮಗು ಸ್ಪರ್ಧೆ’, 2 ರಿಂದ ಮೇಲ್ಪಟ್ಟ ಚಿಣ್ಣರು ಮತ್ತು ಮಕ್ಕಳಿಗಾಗಿ ಗುರಿ ಎಸೆತ, ಶಿಶುಗೀತೆಗಳು, ಶ್ಲೋಕ ಪಠನೆ, ಚಿತ್ರಕಲೆ, ರಸಪ್ರಶ್ನೆ, ನೃತ್ಯ, ಛದ್ಮವೇಷ  ಇತ್ಯಾದಿ ಹಲವಾರು  ಸ್ಪರ್ಧೆಗಳನ್ನು ಯುವ ವಿಭಾಗವು ಆಯೋಜಿಸಿತ್ತು. ಸ್ಪರ್ಧೆಗಳ ತೀರ್ಪುಗಾರರಾಗಿ ಆಶಾ ಭಟ್, ಜಯಾ  ಹೊಳ್ಳ, ಪ್ರೇಮಾ ರಾವ್, ಭೂಮಿಕಾ ಥಾಪರ್, ಕೃಷಾ ಕುರುಪ್, ಜನೆಟ್ ಡಿಕ್ರೂಜ್, ಡಾ. ಪ್ರಮೋದ್ ಧನವಡೆ, ಡಾ. ಗಿರೀಶ್ ಕುಲಕರ್ಣಿ,  ವಿ.ಕೆ.ಸುವರ್ಣ ಹಾಗೂ  ರವಿ ಆಚಾರ್ಯ ರವರು ಸಹಕರಿಸಿದರು.

ಕೊನೆಯಲ್ಲಿ ಅಸೋಸಿಯೇಶನ್‍ನ ಅಧ್ಯಕ್ಷರ ಡಾ| ಸುರೇಶ್ ಎಸ್.ರಾವ್, ಉಪಾಧ್ಯಕ್ಷ ವಾಮನ್ ಹೊಳ್ಳ  ಮತ್ತು ಇತರ ಪದಾಧಿಕಾರಿಗಳು ವಿಜೇತ ಮಕ್ಕಳಿಗೆ ಮತ್ತು ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪೆÇ್ರೀತ್ಸಾಹಕರ  ಬಹುಮಾನಗಳನ್ನು ನೀಡಿ  ಶುಭಾರೈಸಿದರು.

ಪ್ರೇಮಾ ರಾವ್ ಅವರ ಗಣೇಶ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಹರಿದಾಸ್ ಭಟ್ ವಿಜೇತ ಮಕ್ಕಳ ಯಾದಿ ವಾಚಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪುಟಾಣಿಗಳಿಗೆ ಕರತಾಡನದ ಪೆÇ್ರೀತ್ಸಾಹಿಸಿದರು. ಯುವ ವಿಭಾಗದ ಅಧ್ಯಕ್ಷ ಹರಿದಾಸ್ ಭಟ್, ಪ್ರಶಾಂತ್ ಹೆರ್ಲೆ ಮತ್ತು ಚೈತ್ರಾ ಪೆÇೀತಿ ಕಾರ್ಯಕ್ರಮ ನಿರೂಪಿಸಿ ಅಭಾರ ಮನ್ನಿಸಿದರು.

 

Ms Hasti Sethiya studying in Std. VIII at St Xaviers’ High School,Borivli (East) showcased her creative skills during Morning Assembly in School.Ms  Hasti on the spot drew a beautiful painting on canvass based on monthly value Graciousness in 15 minutes in front of all students.Students gave wonderful comments on the painting and appreciated her talent.Long way to go for her.

ಬಿಜೆಪಿ ದಕ್ಷಿಣ ಭಾರತೀಯ ಮಹಾರಾಷ್ಟ್ರ ರಾಜ್ಯದ ಕಾರ್ಯದರ್ಶಿ ಆಗಿ ಗಣೇಶ ಎ.ಶೆಟ್ಟಿ ಆಯ್ಕೆ

ಮುಂಬಯಿ, ನ.21: ಭಾರತೀಯ ಜನತಾ ಪಕ್ಷ (ಬಿಜೆಪಿ) ಇದರ ದಕ್ಷಿಣ ಭಾರತೀಯ ಮಹಾರಾಷ್ಟ್ರ ರಾಜ್ಯದ ಕಾರ್ಯದರ್ಶಿ ಆಗಿ ಗಣೇಶ ಎ.ಶೆಟ್ಟಿ ಆಯ್ಕೆ ಆಗಿದ್ದಾರೆ. ಉತ್ತರ ಕನ್ನಡದ ಮುರ್ಡೇಶ್ವರ ಇಲ್ಲಿನ ಅಂತಯ್ಯ ಶೆಟ್ಟಿ ಮತ್ತು ಸಾಧಮ್ಮ ಶೆಟ್ಟಿ ದಂಪತಿ ಸುಪುತ್ರರಾದ ಗಣೇಶ ಶೆಟ್ಟಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುರ್ಡೇಶ್ವರ ಇಲ್ಲಿ ಮತ್ತು ಕಾಲೇಜು ವಿದ್ಯಾಭ್ಯಾಸವನ್ನು ಧಾರವಾಡದಲ್ಲಿ ಪೂರೈಸಿದ್ದಾರೆ.

ಹಲವಾರು ವರ್ಷಗಳಿಂದ ಹಿಂದೂಪರ ಹೋರಾಟ ನಡೆಸುತ್ತಿರುವ ಗಣೇಶ್, ಆರ್‍ಎಸ್‍ಎಸ್ ಇತ್ಯಾದಿ ಹಿಂದೂ ಸಂಘಟನೆಯಲ್ಲಿ ಶ್ರಮಿಸಿರುತ್ತಾರೆ.  ಅವರು ಇತ್ತೀಚೆಗೆ ರಾಜ್ಯದ ಬಿಜೆಪಿ ಕಚೇರಿ ನಡೆಸಲಾದ ಬಿಜೆಪಿ ಸಮಿತಿ ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷ ರಾವ್‍ಸಾಹೇಬ್ ಪಾಟೇಲ್ ದನ್ವಿ, ಸಚಿವ ದಿಲೀಪ್ ಕಾಬ್ಳೆ ಉಪಸ್ಥಿತಿಯಲ್ಲಿ ಅಧಿಕಾರವನ್ನು ಸ್ವೀಕರಿಸಿದರು.

ನೆರೂಲ್ ಅಲ್ಲಿನ ಬಿಎಸ್‍ಕೆಬಿ ಅಸೋಸಿಯೇಶನ್‍ನ ಆಶ್ರಯದಲ್ಲಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಶಾಖೆ ಉದ್ಘಾಟನೆ

ಮುಂಬಯಿ, ನ. 21: ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಇದರ  774ನೇ,  ಮಹಾರಾಷ್ಟ್ರದಲ್ಲಿನ 50ನೇ ಶಾಖೆಯು ಬಿಎಸ್‍ಕೆಬಿ ಅಸೋಸಿಯೇಶನ್ ಇದರ ನೆರೂಲ್ ಅಲ್ಲಿರುವ ಹಿರಿಯ ನಾಗರಿಕರ ವಾಸಧಾಮ `ಆಶ್ರಯ’ ದ ತಳ ಮಜಲಿನಲ್ಲಿ ಇತ್ತೀಚಿಗೆ ಲೋಕಾರ್ಪಣೆಗೊಂಡಿತು. 

ವಿಶೇಷ ಅತಿಥಿüಯಾಗಿ ಸಿಡ್ಕೋ ಸಸ್ಥೆಯ ಜಂಟಿ ಆಡಳಿತ ನಿರ್ದೇಶಾಧಿಕಾರಿ, ಆರ್.ಆರ್ ಚವ್ಹಾಣ್ ಆಗಮಿಸಿ ರಿಬ್ಬನ್ ಕತ್ತರಿಸಿ ಶಾಖೆಯನ್ನು ಉದ್ಘಾಟಿಸಿದರು. ಹಾಗೂ ಕರ್ನಾಟಕ ಬ್ಯಾಂಕ್‍ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್ ಅವರು ಎ.ಟಿ.ಎಂ ಯಂತ್ರವನ್ನು ಉದ್ಘಾಟನೆಗೈದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್‍ನ ಮುಂಬಯಿ ವಿಭಾಗೀಯ ಉಪ ಮಹಾ ಪ್ರಬಂಧಕ ರಾಜಕುಮಾರ್ ಪಿ.ಹೆಚ್., ಬಿಎಸ್‍ಕೆಬಿ ಅಸೋಸಿಯೇಶನ್‍ನ ಅಧ್ಯಕ್ಷರ ಡಾ| ಸುರೇಶ್ ಎಸ್.ರಾವ್, ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ ಹಾಗೂ ಇನ್ನಿತರ ಪದಾಧಿಕಾರಿಗಳ ಉಪಸ್ಥಿತರಿದ್ದರು.

ಮಹಾಬಲೇಶ್ವರ ಅವರು ಸಭಾ ಕಾರ್ಯಕ್ರಮವನ್ನುದ್ದೇಶಿ ಮಾತನಾಡೊ ಕರ್ನಾಟಕ ಬ್ಯಾಂಕ್ ನ ಪ್ರಗತಿಯ ಹಾದಿಯ ಬಗ್ಗೆ ವಿಸ್ತಾರವಾಗಿ ತಿಳಿಸುತ್ತಾ ಚವಾಣ್ ಹಾಗೂ ಸುರೇಶ್ ರಾವ್ ಅವರನ್ನು  ಶಾಲು ಹೊದಿಸಿ, ಸ್ಮರಣಿಕೆ, ಪುಷ್ಪಗುಚ್ಚ, ಸ್ಮರಣಿಕೆಗಳನ್ನಿತ್ತು  ಸನ್ಮಾನಿಸಿದರು. 

ಅಸೋಸಿಯೇಶನ್ ನ ಪರವಾಗಿ ಸುರೇಶ್ ರಾವ್,  ಮಹಾಬಲೇಶ್ವರ್ ಎಂ. ಎಸ್, ಚವಾಣ್, ಅಂತೆಯೇ ಬ್ಯಾಂಕ್‍ನ ಅಂತರಿಕ ರೂಪುರೇಷೆಗಳನ್ನು ರೂಪಿಸಿದ ಆರ್ಕಿಟೆಕ್ಟ್ ಹಿತೇನ್ ಸೇಥಿ ಅವರನ್ನು ಸತ್ಕರಿಸಿದರು.
ಉಪಾಧ್ಯಕ್ಷ ವಾಮನ್ ಹೊಳ್ಳ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ಡಿ.9-10: ಮಂಗಳೂರುನಲ್ಲಿ `ಅಂತಾರಾಷ್ಟ್ರೀಯ ಬಂಟರ ಪೆÇ್ರ ಕಬಡ್ಡಿ’ಪದ್ಮನಾಭ ಎಸ್.ಪಯ್ಯಡೆ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ

ಮುಂಬಯಿ, ನ.22: ಯೂತ್ ಬಂಟ್ಸ್ ಮಂಗಳೂರು ಇದೇ ಡಿ.9 ಮತ್ತು 10ರಂದು ಮಂಗಳೂರುನ ನೆಹರೂ ಮೈದಾನದಲ್ಲಿ ಆಯೋಜಿಸಿದ `ಅಂತಾರಾಷ್ಟ್ರೀಯ ಬಂಟರ ಪೆÇ್ರ ಕಬಡ್ಡಿ’ ಪಂದ್ಯಾಟದ ಸಭೆಯನ್ನು ಇಂದಿಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಕಾರ್ಯಕ್ರಮ ಉದ್ಘಾಟಿಸಿದರು. ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದರು.

ಪುತ್ತೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಚಂದ್ರಹಾಸ ರೈ, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರತನ್ ಶೆಟ್ಟಿ, ಉಳ್ಳಾಲ ವಲಯ ಬಂಟರ ಸಂಘ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು, ಜಯಕರ್ನಾಟಕ ಯುವ ಮುಖಂಡ ಸಹಜ್ ರೈ ಬಳಜ್ಜ, ಜಪ್ಪಿನಮೊಗರು ಯುವ ಬಂಟರ ಸಂಘ ಅಧ್ಯಕ್ಷ ಸುನೀಲ್ ಶೆಟ್ಟಿ ಉಪಸ್ಥಿತರಿದ್ದರು.

ಯೂತ್ ಬಂಟ್ಸ್ ಮಂಗಳೂರು ಅಧ್ಯಕ್ಷ ಕೃಷ್ಣ ಶೆಟ್ಟಿ ತಾರೆಮಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಇರಾ ಪ್ರಸ್ತಾವಿಸಿದರು. ನಿತೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನ ಕಾರ್ಯದರ್ಶಿ ಸುಖೇಶ್ ಭÀಂಡಾರಿ ಇರಾ ವಂದಿಸಿದರು.

8 ತಂಡಗಳ ಪಂದ್ಯಾಟ
ಡಿ.9 ಹಾಗೂ 10ರಂದು ನಡೆಯುವ ಪಂದ್ಯಾಟದಲ್ಲಿ ದೇಶ ವಿದೇಶಗಳ 8 ಜನ ಮಾಲೀಕರ, 8 ತಂಡಗಳು ಭಾಗವಹಿಸಲಿವೆ. ಸತೀಶ್ಚಂದ್ರ ಶೆಟ್ಟಿ ಮಾಲೀಕತ್ವದ `ಗೋಲ್ಡನ್ ಲೇಔಟ್ ಬಂಟ್ಸ್ ಸಿಗ್ದಲ್’, ರಾಕೇಶ್ ಶೆಟ್ಟಿ ದುಬೈ ಅವರ `ದುಬೈ ಬಂಟ್ಸ್’, ಎನ್.ಚಂದ್ರಹಾಸ್ ಶೆಟ್ಟಿ ಮಾಲೀಕತ್ವದ `ಮುನ್ನಲಾಯಿ ಸಿಜ್ಲರ್ಸ್ ಪುತ್ತೂರು’, ಬಂಟ್ವಾಳ ಬಂಟ್ಸ್ ಸಂಘದ `ಬಂಟ್ವಾಳದ ಬಂಟರು’, ಶ್ರೀಕಾಂತ್ ಶೆಟ್ಟಿ ಮಸ್ಕತ್ ಅವರ `ಬಂಟ್ಸ್ ಪ್ಯಾಂಥರ್ಸ್ ಮಸ್ಕತ್’, ಮಂಗಳೂರು ಯೂತ್ ಬಂಟ್ಸ್‍ನ `ಮಂಗಳೂರು ಬಂಟ್ಸ್’, ಸುರೇಶ್ ಶೆಟ್ಟಿ ಕುಂಜತ್ತೂರು, ರವಿ ಶೆಟ್ಟಿ ಉಜಾರ್ ಮಾಲೀಕತ್ವದ `ಯೂತ್ ಬಂಟ್ಸ್ ಕಾಸರಗೋಡು, ಸಹಜ್ ರೈ ಬಳಜ್ಜ ಅವರ ’ಆ್ಯಕ್ಷನ್ ಬಂಟ್ಸ್ ಪುತ್ತೂರು’ ತಂಡಗಳು ಸ್ಪರ್ಧಿಸಲಿವೆ.

ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ `ಬಂಟ್ಸ್ ಟ್ರೋಫಿ’ ಹಾಗೂ 1 ಲಕ್ಷ ರೂ. ನಗದು ಬಹುಮಾನ ಸಿಗಲಿದೆ. ರನ್ನರಪ್ ತಂಡಕ್ಕೆ ಬಂಟ್ಸ್ ಟ್ರೋಫಿ ಹಾಗೂ 75ಸಾವಿರ ರೂ, ತೃತೀಯ ಹಾಗೂ ಚುತುರ್ಥ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ಹಾಗೂ 40 ಸಾವಿರ ರೂ. ನಗದು ದೊರೆಯಲಿದೆ.

ಪಂದ್ಯಾಟಕ್ಕೆ ಕನ್ನಡ ತುಳು ಚಿತ್ರರಂಗದ ನಟ ನಟಿಯರು ತಾರಾಮೆರಗು ನೀಡಿಲಿದ್ದಾರೆ. ಡಿ.9ರಂದು ಸಂಜೆ 6ಕ್ಕೆ ಎ.ಸದಾನಂದ ಶೆಟ್ಟಿ ಉದ್ಘಾಟಿಸಲಿದ್ದು, ಬಂಟರ ಯಾನೇ ನಾಡವರ ಮಾತೃ ಸಂಘ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟರ ಸಂಘ ಹೆಬ್ರಿ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಬಹುಮಾನ ವಿತರಿಸಲಿದ್ದಾರೆ. ಹಲವು ಗಣ್ಯರು ಎರಡೂ ದಿನದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ. (ರೋನಿಡಾ, ಮುಂಬಯಿ)

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | UdupiFinal Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, KemmannuVespers 2024 | St. Theresa’s Church, Kemmannu
Annual Church Feast 2024 | St. Theresa’s Church, KemmannuAnnual Church Feast 2024 | St. Theresa’s Church, Kemmannu
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | UdupiCHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From KemmannuAnnual Day 2023 | Carmel English School, Live From Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, UdupiEaster 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, UdupiFocus Studio, Near Hotel Kidiyoor, Udupi