ಬಿಲ್ಲವರ ಅಸೋಸಿಯೇಶನ್‍ನ ನವಿಮುಂಬಯಿ ಸ್ಥಳೀಯ ಕಚೇರಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ


Rons Bantwal
Kemmannu News Network, 11-12-2017 23:04:52


Write Comment     |     E-Mail To a Friend     |     Facebook     |     Twitter     |     Print


ಬಿಲ್ಲವರ ಅಸೋಸಿಯೇಶನ್‍ನ ನವಿಮುಂಬಯಿ ಸ್ಥಳೀಯ ಕಚೇರಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ - ಸಾನ್ಪಾಡದಲ್ಲಿ ನಾರಾಯಣ ಗುರುಗಳ ಮಂದಿರ ನಮ್ಮೆಲ್ಲರ ಭಾಗ್ಯ-ಸಂತೋಷ್ ಡಿ.ಶೆಟ್ಟಿ

ಮುಂಬಯಿ,ಡಿ.08: ನವಿ ಮುಂಬಯಿ ನಗರದಲ್ಲಿ ಎಲ್ಲಾ ಸಮಾಜ ಬಂಧುಗಳು ಸಾಮರಸ್ಯರಾಗಿ ನೆಲೆಯಾಗಿದ್ದು ಆ ಮೂಲಕ ನವಿ ಮುಂಬಯಿ ಮಿನಿ ಭಾರತ ಎಂದೇ ಜನಜನಿತವಾಗಿದೆ. ಇದಕ್ಕೆಲ್ಲಾ ಸಿಡ್ಕೊ ಸಂಸ್ಥೆ ರಾಷ್ಟ್ರದ ಎಲ್ಲಾ ರಾಜ್ಯಗಳ ಜನರ ಧಾರ್ಮಿಕ, ಸಾಮಾಜಿಕ ಕಾರ್ಯಕ್ಕೆ ಸ್ಪಂದಿಸುತ್ತಿರುವುದು ಕಾರಣ. ಇಂತಹ ನಗರದಲ್ಲಿ ನಾರಾಯಣ ಗುರುಗಳ ಆರಾಧನಾ ಮಂದಿರ ನಮ್ಮೆಲ್ಲರ ಭಾಗ್ಯವೇ ಸರಿ. ಹೊಟ್ಟೆ ಪಾಡನ್ನು ಅರಸಿ ಪರಊರುಗಳಿಂದ ಮುಂಬಯಿಗೆ ಬಂದವರಲ್ಲಿ ಬಿಲ್ಲವರೂ ಸೇರಿದ್ದು ಸ್ವಾತಂತ್ರ್ಯ ಪೂರ್ವದಲ್ಲೇ ಬಿಲ್ಲವರ ಅಸೋಸಿಯೇಶನ್ ಸ್ಥಾಪನೆ ಗೊಳಿಸಿ ಸೇವಾ ನಿರತರಾಗಿ ದ್ದಾರೆ. ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಹಿರಿಯರು ಈ ಸಂಸ್ಥೆಯನ್ನು ಕಟ್ಟಿಕೊಂಡಿದ್ದು ಇಂತಹ ಶುಭಾವಸರದÀ ಲ್ಲಿ ಅವರನ್ನು ಸ್ಮರಣೆ ಮಾಡುವ ಅಗತ್ಯವಿದೆ. ನಾರಾಯಣ ಗುರುಗಳ ತತ್ವದಂತೆ ಸೇವೆಯಲ್ಲಿ ತೊಡಗಿಸಿರುವ ಈ ಸಂಸ್ಥೆಯ ಮುಂದಾಳುಗಳ ತ್ಯಾಗಮಯ ಸೇವೆಯಿಂದ ಸಮುದಾಯವು ಸ್ವಂತಿಕೆಯ ಪ್ರತಿಷ್ಠೆಗೆ ಪಾತ್ರವಾಗಿದೆ ಎಂದು ನವಿಮುಂಬಯಿಯ ಮಾಜಿ ನಗರ ಸೇವಕ ಸಂತೋಷ್ ಡಿ.ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಸೋಮವಾರ ಪೂರ್ವಾಹ್ನ ನವಿಮುಂಬಯಿ  ಸೆಕ್ಟರ್ 10ರ ಸಾನ್ಪಾಡಾ ಪೂರ್ವದ ಪ್ಲಾಟ್ ಸಂಖ್ಯೆ 32ರಲ್ಲಿ ಅಸೋಸಿಯೇಶನ್‍ನ ಜಾಗದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ನವಿಮುಂಬಯಿ ಇದರ ಗುರುಮಂದಿರದ ಮತ್ತು ಸ್ಥಳೀಯ ಕಚೇರಿಯ ನೂತನ ಕಟ್ಟಡಕ್ಕೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ತಮ್ಮ ದಿವ್ಯ ಹಸ್ತದಿಂದ ಭೂಮಿಪೂಜೆ ನೆರವೇರಿಸಿದ ಬಳಿಕ ಶಿಲಾನ್ಯಾಸ ನೆರವೇರಿಸಿ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಸಂತೋಷ್ ಶೆಟ್ಟಿ ಮಾತನಾಡಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ  ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಸಭಾ ಕಾರ್ಯಕ್ರಮದಲ್ಲಿ ಎನ್‍ಎಂಎಂಸಿನ ಮಹಾಪೌರ ಜಯಂತ್ ಸುತಾರ್, ಎನ್‍ಎಂಎಂಸಿನ ನಗರಸೇವಕರಾದ ಸೋಮನಾಥ ವಾಸ್ಕರ್ ಮತ್ತು ವಿೂರಾ ಸಂಜಯ್ ಪಾಟೀಲ್, ಶ್ರೀ ಮೂಕಾಂಬಿಕ ಮಂದಿರ ಘನ್ಸೋಲಿ ಇದರ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ ಇಂಡಸ್ಟ್ರಿ ಸಂಸ್ಥೆಯ ಅಧ್ಯಕ್ಷ ಎನ್.ಟಿ ಪೂಜಾರಿ, ಸಮಾಜ ಸೇವಕರುಗಳಾದ ಎಸ್.ಕೆ ಕೋಟ್ಯಾನ್, ಸುರೇಂದ್ರ ಎ.ಪೂಜಾರಿ, ಆಶಾ ಅಂಚನ್, ರೇಷ್ಮಾ ರವಿರಾಜ್ ಪೂಜಾರಿ ಗೌರವ ಅತಿಥಿüಗಳಾಗಿ ಉಪಸ್ಥಿತರಿದ್ದರು.

ಅಸೋಸಿಯೇಶನ್‍ನ ನವಿಮುಂಬಯಿ ಸ್ಥಳೀಯ ಕಚೇರಿ ಸ್ಥಾಪನೆಯಾದ 11 ವರ್ಷದ ನಂತರ ಸ್ವತಿಕೆಯ ಕಚೇರಿ ಮತ್ತು ಗುರುಮಂದಿರಕ್ಕೆ ಶಿಲಾನ್ಯಾಸದ ಕಾಲ ಕೂಡಿ ಬಂದಿರುವುದು ಅಭಿನಂದನೀಯ.  ಈ ಜಾಗ ದೊರಕಲು ಸಂತೋಷ್ ಶೆಟ್ಟಿ ಅವರ ಅಪಾರ ಶ್ರಮವಿದೆ. ಬಿಲ್ಲವ ಸಮಾಜ ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ. ಸಾಧನೆ ಮಾಡಿದರೆ ನಾವೂ ಏನೂ ಸಾಧಿಸಲು ಸಾಧ್ಯ ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿ. ಬಿಲ್ಲವರ ಅಸೋಸಿಯೇಶನ್‍ನಲ್ಲಿ ಶ್ರೀಮಂತರೂ ಬಡವರೂ ಇದ್ದಾರೆ. ಎಲ್ಲರೂ ಒಂದು ಇಟ್ಟಿಗೆ, ಚಿನ್ನ, ಬೆಳ್ಳಿ, ತಾಮ್ರವನ್ನಿತ್ತಾದರೂ ಗುರುಮಂದಿರದ ರಚನೆಗೆ ತಮ್ಮ ದೇಣಿಗೆ ನೀಡಬಹುದು. ಹೀಗೆ ಸಹಾಯಸ್ತ ನೀಡುವುದರಿಂದಲೇ ಶೀಘ್ರವೇ ನವಿ ಮುಂಬಯಿಯಲ್ಲಿ ಬಿಲ್ಲವ ಭವನ ನಿರ್ಮಾಣ ಸಾಧ್ಯವಾಗುವುದು ಎಂದು ಜಯ ಸುವರ್ಣ ಆಶಯ ವ್ಯಕ್ತ ಪಡಿಸಿದರು.

ಬಿಲ್ಲವರ ಅಸೋಸಿಯೇಶನ್ ಸುಮಾರು 28,000 ಸದಸ್ಯರಿರುವ ದೊಡ್ಡ ಸಂಸ್ಥೆ . ಈ ಸಂಸ್ಥೆಯಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಕಲೆ  ಕಾರ್ಯಕ್ರಮಗಳ ಮೂಲಕ ಸೇವಾನಿರತವಾಗಿರುವುದು ಅಭಿನಂದನೀಯ. ಇದೀಗ ನಾರಯಣ ಗುರುಗಳ ಮಂದಿರ ನಿರ್ಮಾಣಕ್ಕೆ ಭವ್ಯ ಸಂಕುಲ ರಚಿಸುತ್ತಿರುವುದು ದೊಡ್ಡ ಸಾಧನೆಯೇ ಸರಿ. ಸಂಕುಲನ ಸರ್ವರಿಗೂ ಆದರ್ಶ ಸಂಕುಲನವಾಗಿ ರೂಪುಗೊಳ್ಳ್ಳಲಿ ಎಂದು ಜಯವಂತ್ ಸುತಾರ್ ಹಾರೈಸಿದರು.

ಅಣ್ಣಿ ಶೆಟ್ಟಿ ಮಾತನಾಡಿ ನಮ್ಮ ಜನ್ಮಭೂಮಿ ತೊರೆದು ದೈವದೇವರುಗಳ ಅನುಗ್ರಹದಿಂದ ಕರ್ಮಭೂಮಿಗೆ ಬಂದಿದ್ದೇವೆ. ಮಹಾರಾಷ್ಟ್ರ ಒಂದು ಪವಿತ್ರ ್ಯತೆಯ ಭೂಮಿ. ಇಲ್ಲಿ ನಾವು ಸಂಘಸಂಸ್ಥೆ, ಮಠಮಂದಿರಗಳನ್ನು ಕಟ್ಟಿ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯನ್ನು ನೀಡುತ್ತಿರುವುದು ಮರಾಠಭೂಮಿಗೆ ಪೂರಕವಾಗಿದೆ.ಇಂತಹ ಒಗ್ಗಟ್ಟಿನಿಂದ ಸಮಗ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು. 

ಬಿಲ್ಲವರ ಅಸೋಸಿಯೇಶನ್ ಇನ್ನೊಂದು ಮೈಲುಗಲ್ಲಿಗೆ ಸಾಕ್ಷಿಯಾಗಿದೆ. ಗುರುಗಳ ಇಚ್ಛೆಯಂತೆ ಇಲ್ಲಿ ಭವನ ನಿರ್ಮಾಣವಾಗುತ್ತಿರುವುದು ತುಂಬಾ ಸಂತೋಷ. ಮಂದಿರಕ್ಕಾಗಿನ ಶ್ರದ್ಧೆಗೆ ಮಹಿಳಾಶಕ್ತಿ ಎದ್ದು ಕಾಣುತ್ತಿದೆ. ಶೀಘ್ರವೇ ಯೋಜಿತ ಯೋಜನೆ ಯಶಕಾಣಲಿ ಎಂದು ಎನ್.ಟಿ ಪೂಜಾರಿ ನುಡಿದರು.

ಬಿಲ್ಲವರ ಅಸೋಸಿಯೇಶನ್ 1998ರಲ್ಲಿ 8ಸ್ಥಳೀಯ ಕಚೇರಿಗಳನ್ನು ಹೊಂದಿದ್ದು, ಈಗ 22ಕ್ಕೆ ಏರಿಕೆ ಕಂಡಿವೆ. ಅವುಗಳÀಲ್ಲಿ 19ಸ್ವಂತ ಕಚೇರಿಗಳನ್ನು ಹೊಂದಿದೆ. ಈಗ ನವಿ ಮುಂಬಯಿಯಲ್ಲಿ ಭವ್ಯವಾದ ಭವನ ನಿರ್ಮಾಣ ಮೂಲಕ ತಮ್ಮ ಅಸ್ತಿತ್ವಕ್ಕೆ ಮೆರುಗು ನೀಡಲಿದೆ. ಭವಿಷ್ಯದ್ದಲ್ಲೂ ಸೇವೆಯ ಮೂಲಕ  ಬಿಲ್ಲವರು ಇತರ ಸಮಾಜಕ್ಕೆ ಆದರ್ಶ ಸಮಾಜವಾಗಿ ಮೂಡಿ ಬರಬೇಕು ಎಂದು ಅಧ್ಯಕ್ಷೀಯ ಭಾಷಣದಲ್ಲಿ ನಿತ್ಯಾನಂದ್ ಕೋಟ್ಯಾನ್ ತಿಳಿಸಿದರು.

ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ರಾಜ ವಿ.ಸಾಲ್ಯಾನ್ (ಕೇಂದ್ರ ಕಚೇರಿಯ ಸ್ಥಳೀಯ ಸಮಿತಿ ಪ್ರತಿನಿಧಿ), ಪುರುಷೋತ್ತಮ ಎಸ್.ಕೋಟ್ಯಾನ್ ಮತ್ತು ಮಹೇಂದ್ರ ಸೂರು ಕರ್ಕೇರ ಹಾಗೂ ನವಿ ಮುಂಬಯಿ ಸ್ಥಳೀಯ ಕಚೇರಿ ಕಾರ್ಯಾಧ್ಯಕ್ಷ ಧರ್ಮದರ್ಶಿ ರಮೇಶ್ ಎಂ.ಪೂಜಾರಿ, ಗೌ| ಕೋಶಾಧಿಕಾರಿ ಜಯರಾಮ ಪಿ.ಪೂಜಾರಿ, ಜತೆ ಕಾರ್ಯದರ್ಶಿ ಎನ್.ಕೆ ಪೂಜಾರಿ, ಜತೆ ಕೋಶಾಧಿಕಾರಿ ಶೇಖರ್ ಬಿ.ಪಾಲನ್, ಎನ್.ಎಂ ಸನೀಲ್, ಸಿ.ಟಿ ಸಾಲ್ಯಾನ್, ಗಂಗಾಧರ್ ಜೆ.ಪೂಜಾರಿ, ಚಿನ್ನಯ ಗೌಡ, ಶ್ರೀನಿವಾಸ್ ಆರ್.ಕರ್ಕೇರ, ರಜಿತ್ ಸುವರ್ಣ, ಪ್ರೇಮನಾಥ್ ಪಿ.ಕೋಟ್ಯಾನ್, ಜೆ.ಎಂ ಕೋಟ್ಯಾನ್, ದೇವರಾಜ್ ಎಸ್.ಪೂಜಾರಿ, ಬೋಳ ರವಿ ಪೂಜಾರಿ, ಮೋಹಿನಿ ಆರ್.ಪೂಜಾರಿ, ಕೇಂದ್ರ ಕಚೇರಿಯ ಸ್ಥಳೀಯ ಸಮಿತಿ ಪ್ರತಿನಿಧಿ ಉಮೇಶ್ ಎನ್.ಕೋಟ್ಯಾನ್, ಸೇರಿದಂತೆ ನೂರಾರು ಬಿಲ್ಲಬ ಬಂಧುಗಳು, ಹಿತೈಷಿಗಳು ಉಪಸ್ಥಿತರಿದ್ದರು.

ಉಪ ಕಾರ್ಯಾಧ್ಯಕ್ಷ ವಿಶ್ವನಾಥ್ ಕೆ.ಪೂಜಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಜಯಂತಿ ಶಿವರಾಮ ಪೂಜಾರಿ ಪಂಗಡ ಪ್ರಾರ್ಥನೆಯನ್ನಾಡಿದರು. ಸತೀಶ್ ಎರ್ಮಾಳ್ ಅತಿಥಿüಗಳನ್ನು ಪರಿಚಯಿಸಿದರು. ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಅಸೋಸಿಯೇಶನ್‍ನ ಗೌ| ಪ್ರ| ಧರ್ಮಪಾಲ ಜಿ.ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಕಚೇರಿ ಗೌ| ಕಾರ್ಯದರ್ಶಿ ವಿ.ಕೆ ಸುವರ್ಣ ವಂದನಾರ್ಪಣೆಗೈದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | UdupiFinal Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, KemmannuVespers 2024 | St. Theresa’s Church, Kemmannu
Annual Church Feast 2024 | St. Theresa’s Church, KemmannuAnnual Church Feast 2024 | St. Theresa’s Church, Kemmannu
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | UdupiCHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From KemmannuAnnual Day 2023 | Carmel English School, Live From Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, UdupiEaster 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, UdupiFocus Studio, Near Hotel Kidiyoor, Udupi