Brief Udupi News with Pictures


Richard Dsouza
Kemmannu News Network, 13-12-2017 22:51:21


Write Comment     |     E-Mail To a Friend     |     Facebook     |     Twitter     |     Print


ಕೃಷಿ ತಂತ್ರಜ್ಞಾನ ಸಪ್ತಾಹ - 2017 (ಜೈ ಕಿಸಾನ್ - ಜೈ ವಿಜ್ಞಾನ ಸಪ್ತಾಹ) (04.12.2017 ರಿಂದ 09.12.2017) ಅಂಗವಾಗಿ ಜಲ ಕೃಷಿಯಲ್ಲಿ ಹಸಿರು ಮೇವು ಉತ್ಪಾದನೆ


ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದಲ್ಲಿ ಕೃಷಿ ತಂತ್ರಜ್ಞಾನ ಸಪ್ತಾಹ - 2017                          

(ಜೈ ಕಿಸಾನ್ – ಜೈ ವಿಜ್ಞಾನ ಸಪ್ತಾಹ) ಅಂಗವಾಗಿ   ದಿನಾಂಕ 08.12.2017 ರಂದು “ಜಲ ಕೃಷಿಯಲ್ಲಿ ಹಸಿರು ಮೇವು ಉತ್ಪಾದನೆ” ತರಬೇತಿ ಕಾರ್ಯಕ್ರಮ ಕುರಿತು 1 ದಿನಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಈ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಎಸ್. ಯು ಪಾಟೀಲ್, ಸಹ ಸಂಶೋಧನಾ ಮತ್ತು ಸಹ ವಿಸ್ತರಣಾ ನಿರ್ದೇಶಕರು,  ವ,ಕೃ.ತೋ.ಸಂ.ಕೇ., ಬ್ರಹ್ಮಾವರ ಇವರು  ಉದ್ಘಾಟಿಸಿ ಈ ಜಲಕೃಷಿಯು ಮೊದಲಿಂದಲೂ ಇದ್ದಂತಹ ತಂತ್ರಜ್ಞಾನವಾಗಿದೆ.  ಇದು ಪ್ರಾಮುಖ್ಯತೆ ಪಡೆಯಲು ಮುಖ್ಯಕಾರಣ ಡೈರಿ.  ದನ ಸಾಕುವವರು ಅದಕ್ಕೆ ಬೇಕಾದ ಮಾರುಕಟ್ಟೆಯಲ್ಲಿ ಸಿಗುವ ಆಹಾರದಲ್ಲಿ ಹೆಚ್ಚಿನ ಪೋಷಕಾಂಶಗಳೂ ಇರುವುದಿಲ್ಲ  ಆಲ್ಲದೇ ಅದು ಸಹ ಜೀರ್ಣವಾಗುವುದಿಲ್ಲ ಎಲ್ಲಾ ಪೋಷಕಾಂಶಗಳು ಸಿಗುವಂತಹ ಹಸಿರು ಮೇವುಗಳನ್ನು ಕೊಟ್ಟರೆ ಉತ್ತಮ ಪೋಷಕಾಂಶಗಳು ಸಿಗುತ್ತದೆ ಎಂದು ತಿಳಿಸಿದರು.  ಹಸಿರು ಮೇವು ಕೊಟ್ಟಾಗ ಅತಿ ಹೆಚ್ಚಿನ ಹಾಲು ದೊರೆಯುತ್ತದೆ. 

ಉತ್ತಮವಾದ ಹಾಲು ಸಿಗುತ್ತದೆ ಎಂದು ತಿಳಿಸಿದರು.  ಮುಖ್ಯ ಅತಿಥಿಗಳಾದ ಡಾ. ಸುಧೀರ್ ಕಾಮತ್, ಪ್ರಾಂಶುಪಾಲರು, ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ, ಬ್ರಹ್ಮಾವರ ಇವರು  ಜಲಕೃಷಿಯಲ್ಲಿ ಇತ್ತಿಚೆಗೆ ಹೆಚ್ಚು ಹೆಸರುವಾಸಿಯಾಗುತ್ತಿರುವ ಕೃಷಿ.  ಕೃಷಿ ಮತ್ತು ಹೈನುಗಾರಿಕೆ ಒಂದು ನಾಣ್ಯದ ಎರಡು ಮುಖಗಳಂತೆ ಅದು ಒಟ್ಟಿಗೆ ಹೋದರೆ ಮಾತ್ರ ಹೆಚ್ಚಿನ ಲಾಭಗಳಿಸಬಹುದು.  ದನಗಳು ತಿನ್ನುವ  ಹುಲ್ಲಿಗಳನ್ನು  ಬೆಳೆಸಲು ನಮಗೆ ಸಾಕಷ್ಟು ಜಾಗ, ನೀರು ಮತ್ತು ಗೊಬ್ಬರ ಬೇಕಾಗುತ್ತದೆ.  ಆದುದರಿಂದ ಹಸಿರು ಮೇವಿಗೆ ನೀರಿನ ಕೊರತೆ ಇರುವುದರಿಂದ ಉತ್ತಮವಾದ ಸುಲಭವಾದ ತಾಂತ್ರಿಕತೆ ಎಂದರೆ ಜಲಕೃಷಿಯಲ್ಲಿ ಹಸಿರು ಮೇವಿನ ಉತ್ಪಾದನೆ.  ಮೆಕ್ಕೆಜೋಳವನ್ನು ಮೊಳಕೆ ಕಟ್ಟಿ ಉಪಯೋಗಿಸುವುದರಿಂದ ಜೀವಸತ್ವಗಳು ಹೆಚ್ಚಾಗಿರುವುದರಿಂದ ದನಗಳ ಆರೋಗ್ಯ ಉತ್ತಮವಾಗಿರುತ್ತದೆ.  ಹಾಲಿನ ಇಳುವರಿ ಸಹ ಪ್ರತಿ ದಿನಕ್ಕೆ 1 ಲೀಟರ್ ಜಾಸ್ತಿ ಆಗುತ್ತದೆ.  ಹಾಗೂ ಇದನ್ನು ಮಾಡುವ ವಿಧಾನ ಅತಿ ಸುಲಭವಾಗದೆ ಎಂದು ತಿಳಿಸಿದರು.

ಇನ್ನೊರ್ವ ಮುಖ್ಯ ಅತಿಥಿಗಳಾದ                 ಡಾ. ಶಂಕರ ಎಂ. ಹಿರಿಯ ಕ್ಷೇತ್ರ ಅಧೀಕ್ಷಕರು, ವ.ಕೃ.ತೋ.ಸಂ.ಕೆ., ಬ್ರಹ್ಮಾವರ ಇವರು ಈ ತರಬೇತಿ ಕಾರ್ಯಕ್ರಮವು ಒಂದು ಉತ್ತಮವಾದ ಕಾರ್ಯಕ್ರಮವಾಗಿದೆ. ರೈತರು ಕೃಷಿಯಲ್ಲಿ ಹೆಚ್ಚಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ ಅದನ್ನು ಕಡಿಮೆ ಮಾಡಲು ಈ ಜಲಕೃಷಿ ಉತ್ಪಾದನೆಯಿಂದ ಡೈರಿಯಲ್ಲಿ ಅಧಿಕ ಲಾಭಗಳಿಸಬಹುದೆಂದು ತಿಳಿಸಿದರು.  ಅಲ್ಲದೇ ಬೇರೆ ಬೆಳೆಗಳಿಗಿಂತ ಹಾಲಿನ ಸಂಸ್ಕರಣೆಯಲ್ಲಿ ಹೆಚ್ಚಿನ ಲಾಭ ಗಳಿಸಬಹುದೆಂದು ತಿಳಿಸಿದರು.  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಧನಂಜಯ ಬಿ. ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ಕೆ.ವಿ.ಕೆ., ಬ್ರಹ್ಮಾವರ ಇವರು ಇಲ್ಲಿ ನೆರದಿದ್ದ ಎಲ್ಲಾ ಮುಖ್ಯಅತಿಥಿಗಳು ಈ ಹಸಿರು ಮೇವು ಉತ್ಪಾದನಾ ತಾಂತ್ರಿಕತೆಯಲ್ಲಿ  ತುಂಬಾ ಅನುಭವಿಗಳೇ ಆದ್ದರಿಂದ ಇವರ ಮಾತುಗಳನ್ನು ಮನದಟ್ಟು ಮಾಡಿಕೊಳ್ಳಬೇಕೆಂದು ತಿಳಿಸಿದರು.  ಅದನ್ನು ಮನೆಯ ಅಂಗಳದಲ್ಲಿ ಒಂದು ಟ್ರೇಯನ್ನು ಇಟ್ಟು ಸ್ಪ್ರೇ ಮೂಲಕ್ ನೀರನ್ನು ಕೊಡುವುದರಿಂದ ಈ ಹಸಿರು ಮೇವು ಬೆಳೆಸಬಹುದು ಎಂದು ತಿಳಿಸಿದರು ಹಾಗೂ ಇದರಿಂದ ಹಾಲಿನ ಉತ್ಪಾದನೆ ಗುಣಮಟ್ಟದಲ್ಲಿ ಸಹ ಉತ್ತಮವಾಗುತ್ತದೆ ಎಂದು ತಿಳಿಸಿದರು. 

ಈ ತರಬೇತಿ ಕಾರ್ಯಕ್ರಮದಲ್ಲಿ ಡಾ. ನವೀನ್ ಎನ್. ಈ, ವಿಜ್ಞಾನಿ (ಬೇಸಾಯ ಶಾಸ್ತ್ರ) ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ನಿರೂಪಣೆಯನ್ನು ಶ್ರೀ ಚೈತನ್ಯ ಹೆಚ್. ಎಸ್.,  ವಿಜ್ಞಾನಿ(ತೋಟಗಾರಿಕೆ) ನೆರವೇರಿಸಿದರು.  ಮತ್ತು ವಂದನಾರ್ಪಣೆಯನ್ನು ಶ್ರೀ ಸಿದ್ದರೂಢ ಪಡ್ಡೆಪ್ಪಗೊಳ, ವಿಜ್ಞಾನಿ(ಗೃಹವಿಜ್ಞಾನ)  ನೆರವೇರಿಸಿ ಕೊಟ್ಟರು.     ಈ ಕಾರ್ಯಕ್ರಮದಲ್ಲಿ 30 ಕ್ಕೂ ಹೆಚು  ರೈತರು ಹಾಗೂ ರೈತಮಹಿಳೆಯರು ಭಾಗವಹಿಸಿ ಈ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದು ಕೊಂಡರು.


ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ 20 ಕೋಟಿ ವೆಚ್ಚ- ಪ್ರಮೋದ್

ಉಡುಪಿ :  ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಿಂಟಿ ಅಣೆಕಟ್ಟುಗಳ ನಿರ್ಮಾಣಕ್ಕೆ ತಮ್ಮ ಅವಧಿಯಲ್ಲಿ 20 ಕೋಟಿ ರೂ ಗಳಿಗೆ ಅಧಿಕ ಅನುದಾನವನ್ನು ವೆಚ್ಚ ಮಾಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ , ಮೀನುಗಾರಿಕೆ  ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

     ಅವರು ಬುಧವಾರ, ಚಾಂತಾರು ಅಂಗಡಿನೆಟ್ಟು ನಲ್ಲಿ  ಕಿಂಡಿ ಅಣೆಕಟ್ಟು ಕಾಮಗಾರಿ ಉದ್ಘಾಟನೆ ಮತ್ತು  ನೀಲಾವರ- ಕೆಳ ಕುಂಜಾಲು ಉಳ್ಳೂರು ಮನೆ ಬಳಿ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

     ಕೃಷಿಗೆ ಅಗತ್ಯ ನೀರು ಒದಗಿಸಲು ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ದೃಷ್ಠಿಯಿಂದ ಕ್ಷೇತ್ರದಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲಗಳಾಗಿದ್ದು, ನೀರಿನ ಅಂರ್ತಜಲ ಮಟ್ಟ ಏರಿಕೆಯಾಗಿದೆ ಅಲ್ಲದೆ ಕುಡಿಯುವ ಹಾಗೂ ಕೃಷಿಗೆ ಬಳಸುವ ನೀರಿಗೆ , ಉಪ್ಪು ನೀರು ಬೆರೆಯುವ ಪ್ರಮಾಣ ಕಡಿಮೆಯಾಗಿದೆ ಎಂದು ಸಚಿವರು ಹೇಳಿದರು.

    ಕಿಂಡಿ ಅಣೆಕಟ್ಟುಗಳ ನಿರ್ಮಾಣದ ಬಗ್ಗೆ , ಹಲಗೆಗಳ ಗುಣಮಟ್ಟ ಹಾಗೂ ನೀರು ಸೋರಿ ಹೋಗುವ ಬಗ್ಗೆ ಕೆಲವು ಕಡೆ ಸಾರ್ವಜನಿಕರಿಂದ ದೂರುಗಳನ್ನು ಬಂದಿದ್ದು, ಅಂತಹ ಕಿಂಡಿ ಅಣೆಕಟ್ಟುಗಳನ್ನು ಕೂಡಲೇ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ ಸಚಿವರು, ಯಾವುದೇ ಕಾರಣಕ್ಕೂ ಕಾಮಗಾರಿಗಳ ಗುಣಮಟ್ಟದಲ್ಲಿ ವ್ಯತ್ಯಾಸವಾಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ  ಕಾರ್ಯ ನಿರ್ವಹಿಸುವಂತೆ ಪ್ರಮೋದ್ ಎಚ್ಚರಿಕೆ ನೀಡಿದರು. 

     ಇಂದು ಒಟ್ಟು 4.25 ಕೋಟಿ ವೆಚ್ಚದ 15 ವಿವಿಧ ಕಿಂಡಿ ಅಣೆಕಟ್ಟು ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮವನ್ನು ಸಚಿವರು ನೆರವೇರಿಸಿದರು.

    ಕಾರ್ಯಕ್ರಮದಲ್ಲಿ ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ನಾಯಕ್, ನೀಲಾವರ ಗ್ರಾಮ ಪಂಚಾಯತ್ ಅದ್ಯಕ್ಷೆ ಆಶಾ ಕೋಟ್ಯಾನ್, ಉಪಾಧ್ಯಕ್ಷ ರಮೇಶ್ ಪೂಜಾರಿ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಪಾಲಣ್ಣ ಮತ್ತಿತರರು ಉಪಸ್ಥಿತರಿದ್ದರು.

ಫಲಾನುಭವಿಗಳಿಗೆ ನೇರವಾಗಿ ಸವಲತ್ತು - ಸೊರಕೆ

ಉಡುಪಿ : ಸಾಮಾನ್ಯ ಜನರಿಗೆ ಸರಕಾರದಿಂದ ಸಿಗುವ  ಸವಲತ್ತುಗಳನ್ನು ಪಡೆಯಲು ಕಚೇರಿ ಕಚೇರಿ ಅಲೆದಾಡಬಾರದು. ಫಲಾನುಭವಿಗಳಿಗೆ  ಅದು ನೇರವಾಗಿ  ಲಭಿಸಬೇಕು  ಎಂದು  ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ವಿನಯ ಕುಮಾರ್ ಸೊರಕೆ ಹೇಳಿದರು.

ಅವರು ಇಂದು ಹಿರಿಯಡಕ ಸಾಂಸ್ಕøತಿಕ ಕಲಾ ಮಂದಿರದಲ್ಲಿ ನಡೆದ ಬೊಮ್ಮರಬೆಟ್ಟು, ಕೊಡಿಬೆಟ್ಟು, ಬೈರಂಪಳ್ಳಿ, ಆತ್ರಾಡಿ, ಪೆರ್ಡೂರು, 80 ಬಡಗುಬೆಟ್ಟು, ಅಲೆವೂರು, ಉದ್ಯಾವರ, ಮಣಿಪುರ, ಕುಕ್ಕೆಹಳ್ಳಿ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯ  ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರಕಾರದಿಂದ ಅರ್ಹ ಫಲಾನುಭವಿಗಳಿಗೆ ಹಲವಾರು ಸವಲತ್ತುಗಳು  ಲಭಿಸುತ್ತಿದ್ದು, ಇದನ್ನು ಫಲಾನುಭವಿಗಳು ಪಡೆಯಲು ಕಚೇರಿ ಕಚೇರಿಗೆ ಅಲೆದಾಡುವುದರಿಂದ ಜನರಲ್ಲಿ ನಿರಾಸೆ ಉಂಟಾಗುತ್ತದೆ. ಸರಕಾರದ ಸೌಲಭ್ಯಗಳನ್ನು ನೇರವಾಗಿ ಪಡೆಯಲು  ಹಾಗೂ ಇಲಾಖೆಗಳ ನಡುವಿನ ಅಲೆದಾಟವನ್ನು ಜನಸ್ಪಂದನ ಕಾರ್ಯಕ್ರಮ ತಪ್ಪಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ವತಿಯಿಂದ 92 ಮಂದಿಗೆ ಮನೆ ಮಂಜೂರಾತಿ ಪತ್ರ, 36 ಜನರಿಗೆ ಶೇ.25 ಅನುದಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 35 ಸ್ತ್ರೀ ಶಕ್ತಿ ಗುಂಪುಗಳಿಗೆ ಸುತ್ತುನಿಧಿ, 105 ಜನರಿಗೆ ಅರಣ್ಯ ಇಲಾಖೆ ವತಿಯಿಂದ ಹೆಬ್ರಿ ವಲಯದವರಿಗೆ ಗ್ಯಾಸ್ ವಿತರಣೆ, ಪಶುಸಂಗೋಪನಾ ಇಲಾಖೆ ವತಿಯಿಂದ 13 ಜನರಿಗೆ ಅನುದಾನ, ಕೃಷಿ ಇಲಾಖೆಯಿಂದ 8 ಜನರಿಗೆ ಹುಲ್ಲು ಕತ್ತರಿಸುವ ಯಂತ್ರ ಹಾಗೂ ಅನುದಾನ, ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದಿಂದ 7 ಜನರಿಗೆ ಅನುದಾನ, ಮೀನುಗಾರಿಕೆ ಇಲಾಖೆಯಿಂದ 3 ಜನ ಫಲಾನುಭವಿಗಳಿಗೆ ಅನುದಾನ ಹಾಗೂ ಕಂದಾಯ ಇಲಾಖೆಯಿಂದ 143 ಜನರಿಗೆ 94ಸಿಸಿ ಮತ್ತು 94ಸಿ ಅನ್ವಯ ಹಕ್ಕುಪತ್ರ, 96 ಜನರಿಗೆ ವಿವಿಧ ವೇತನ, 3 ಜನರಿಗೆ ಪ್ರಾಕೃತಿಕ ವಿಕೋಪ ಅನುದಾನ, 2 ಜನರಿಗೆ ರಾಷ್ಟ್ರೀಯ ಕುಟುಂಬ ವೇತನ ಹಾಗೂ 2 ಜನರಿಗೆ ಇತರ ಅನುದಾನ ಒಟ್ಟು 555 ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಮೋಹನ್ ರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ತಹಶೀಲ್ದಾರ್ ಪ್ರದೀಪ್ ಕೆ, ಅಲ್ಪಸಂಖ್ಯಾತ ನಿಗಮದ ಮುಖ್ಯಸ್ಥ ಇಸ್ಮಾಯಿಲ್,  ಜಿಲ್ಲಾ ಪಂಚಾಯತ್ ಸದಸ್ಯ ಮೈರ್ಮಾಡಿ ಸುಧಾಕರ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಸಂಧ್ಯಾಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮೀ ನಾರಾಯಣ, ಬೊಮ್ಮರಬೆಟ್ಟು, ಕೊಡಿಬೆಟ್ಟು,ಬೈರಂಪಳ್ಳಿ, ಆತ್ರಾಡಿ, ಪೆರ್ಡೂರು, 80 ಬಡಗುಬೆಟ್ಟು, ಅಲೆವೂರು, ಉದ್ಯಾವರ, ಮಣಿಪುರ, ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೈರಂಪಳ್ಳಿ ಗ್ರಾಮ ಪಂಚಾಯತ್ ಪಿ.ಡಿ.ಒ ಪ್ರವೀಣ್ ಸ್ವಾಗತಿಸಿದರು. ಶ್ರೀಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Kallianpur: Students Suffer during rain.
View More

Veez Konkani Illustrated - Weekly e-MagazineVeez Konkani Illustrated - Weekly e-Magazine
Month’s MindMonth’s Mind
Mount Rosary Church Annoucement for the weekMount Rosary Church Annoucement for the week
Rozaricho Gaanch Easter 2018Rozaricho Gaanch Easter 2018
Milarchi Lara - Issue April - 2018Milarchi Lara - Issue April - 2018
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
Visit Axis Bank Now open in Kallianpura, SanthekatteVisit Axis Bank Now open in Kallianpura, Santhekatte
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India
Kemmann.com Face Book

Click here for Kemmannu Knn Facebook Link

Mangalorean Fertility Physician in New York

 

Mangalorean Fertility Physician in New York

 

For information, please email nigelepereira.wcmc@gmail.com or contact Megi Zeku at 646-962-7499, prompt 3.

 

 

Thank you from Kemmannu.comContact for all your Travel, Tours and For Rent a Car

Contact Maria Travels  for all your Travel, Tours and For Rent a Car Mob: 9980889512 or 9819444307

Thanksgiving to St. Lawrance

Thanksgiving to St. Lawrance

Sponsored Albums