Brief Mumbai News with Pictures


Rons Bantwal
Kemmannu News Network, 15-12-2017 19:21:21


Write Comment     |     E-Mail To a Friend     |     Facebook     |     Twitter     |     Print


Mumbai Dec. 15: Special School children’s are performing & enjoying annual Christmas Party during the organised by The National Centre for Performing Arts (NCPA), Mumbai.  Annual Christmas Party bringing over 170 children from four NGOs from across the city together.

Mumbai Dec.15: Nine Motorcycle were burned at Wadala in Mumbai. Police investigation.

Mumbai Dec.15: Portion of building collapse in Kalbadevi, Building belongs to MHADA & repairing was on. At the time of incident 9 workers were inside out of which 7 came out safely but 2 are still missing. Rescue operation on. In pic file photo of Missing/Victim.

ಡಾ| ಮನಮೋಹನ್ ಅತ್ತಾವರರವರ ನಿಧನಕ್ಕೆ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಸಂತಾಪ

ಇತ್ತೀಚೆಗೆ ನಿಧನ ಹೊಂದಿದ ಕೃಷಿ ಸಂಶೋಧಕ, ಸಾಧಕ ಡಾ| ಮನಮೋಹನ್ ಅತ್ತಾವರ ಇವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್‍ನ ಸ್ಠಾಪಕಾಧ್ಯಕ್ಷರಾದ         ಡಾ| ಮನಮೋಹನ್ ಅತ್ತಾವರರವರ ಮಗ ಶ್ರೀ ಸಂತೋಷ್ ಅತ್ತಾವರರವರಿಗೆ ಬರೆದ ಪತ್ರದಲ್ಲಿ ಸಂತಾಪ ಸೂಚಿಸಿದ್ದಾರೆ. ಶ್ರೀ ಅತ್ತಾವರರವರು ತನ್ನ ಕೊನೆಯ ಉಸಿರಿರುವವರೆಗೂ ಸಂಶೋಧನಾ ವಿದ್ಯಾರ್ಥಿಯಾಗಿ ದುಡಿಯುತ್ತಿದ್ದರು. ಹಾಗಿದ್ದರೂ ಅವರ ಹೃದಯ ಸದಾ ಕೃಷಿಕರ ಪರವಾಗಿ ತುಡಿಯುತ್ತಿತ್ತು. ತಮ್ಮ ಎಲ್ಲ ಸಂಶೋಧನೆಗಳನ್ನು ರೈತರ ಕೃಷಿಯಲ್ಲಿ ಅಳವಡಿಸಿವಲ್ಲಿ ಅವರು ಯಶಸ್ಸು ಪಡೆದಿದ್ದರು.  ಅಂಗಾಂಶ ಬಾಳೆ ಕೃಷಿ, ಅಧಿಕ ಇಳಿವರಿ ಬೀಜಗಳ ಸಂಶೋಧನೆಗಳಿಂದ ಡಾ| ಅತ್ತಾವರರವರು ಸದಾ ಕಾಲ ಸ್ಮರಣೆಯಲ್ಲಿರುತ್ತಾರೆ.  ಅವರ ಸಂಶೋಧನೆ ಕೇವಲ ಪ್ರಯೋಗಾಲಯಕ್ಕೆ ಸೀಮಿತವಾಗಿರದೇ, ರೈತರ ಮನೆ ಬಾಗಿಲಿಗೆ ಹೋಗುವಂತದ್ದೇ ಆಗಿತ್ತು.  ಕೃಷಿ ಕ್ಷೇತ್ರವು ನಷ್ಟವನ್ನು ಅನುಭವಿಸಿ, ಈ ಕ್ಷೇತ್ರಕ್ಕೆ ಬಂಡವಾಳವೇ ಬರದಂತಹ ದಿನಗಳಲ್ಲಿ ಡಾ| ಅತ್ತಾವರರವರು ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಖಾಸಗಿ ಬಂಡವಾಳವನ್ನು ತೊಡಗಿಸುವಂತೆ ಮಾಡಿದರು.        ಈ ಸಾಹಸದಿಂದಾಗಿ ಕೃಷಿ ಕ್ಷೇತ್ರದಲ್ಲಿ ನವೋತ್ಸಾಹ ಮೂಡಿತಲ್ಲದೇ ಇದಕ್ಕೆ ಅಗತ್ಯವಿರುವ ಬಂಡವಾಳದ ಹರಿವು ಸಾಧ್ಯವಾಯಿತು.  ಡಾ| ಅತ್ತಾವರರವರು ತಮ್ಮ ಬುದ್ಧಿವಂತಿಕೆಯಿಂದ ಕೃಷಿ ತಂತ್ರಜ್ಞಾನವನ್ನು ಸುಸ್ಥಿರವಾಗಿ ರೈತರ ಮನೆ ಬಾಗಿಲಿಗೆ ಮುಟ್ಟಿಸುವ ಕನಸನ್ನು ನನಸು ಮಾಡಿದ್ದಾರೆ.

ಡಾ| ಮನಮೋಹನ್ ಅತ್ತಾವರರವರು ಬಹಳಷ್ಟು ಉತ್ಸಾಹಿಗಳಾಗಿದ್ದು, ಕ್ರಿಯಾಶೀಲರಾಗಿದ್ದರು.  ಇತ್ತೀಚೆಗಷ್ಟೇ ಕಾರ್ಕಳದಲ್ಲಿ ಅವರ ಸಂಸ್ಥೆಯಿಂದ ಸಂಶೋಧಿಸಲ್ಪಟ್ಟ ಭತ್ತದ ಬೀಜಗಳ ನಾಟಿ ಮಾಡಿಸುವಲ್ಲಿ ಅವರು ತೋರಿಸಿದ ಉತ್ಸಾಹವನ್ನು ಕಂಡು ಬೆರಗಾಗಿದ್ದೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಅಪಾರ ಅಭಿಮಾನಿಗಳಾಗಿದ್ದ ಅವರು ನನ್ನ ಸ್ನೇಹಿತರೂ ಆಗಿದ್ದು, ಶ್ರೇಷ್ಠ ಮಾನವ ಗುಣಗಳನ್ನು ಹೊಂದಿದ್ದರು. ಇವರ ನಿಧನ ವೈಯಕ್ತಿಕವಾಗಿ ತನಗೂ ಆದ ನಷ್ಟ ಎಂದು ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ. 

ಈ ಸಂದರ್ಭ ಡಾ. ಮನಮೋಹನ್ ಅತ್ತಾವರರವರು ಸ್ಥಾಪಿಸಿದ ಮಾತೃ ಸಂಸ್ಥೆ ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್‍ನ ಚುಕ್ಕಾಣಿ ಹಿಡಿದಿರುವ ಶ್ರೀ ಸಂತೋಷ್ ಅತ್ತಾವರರವರಿಗೆ ಶುಭ ಕೋರಿದ್ದಲ್ಲದೇ, ಡಾ| ಮನಮೋಹನ್ ಅತ್ತಾವರರವರ ಆತ್ಮಕ್ಕೆ ಶಾಂತಿಯನ್ನು ಕೋರಿದ್ದಾರೆ. ಅವರ ಕುಟುಂಬ ವರ್ಗ ಮತ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಸಂತಾಪ ಸೂಚಿಸಿರುತ್ತಾರೆ.

ಬೃಹನ್ಮುಂಬಯಿಗೆ ಚಿತ್ತೈಸಿದ ಶ್ರೀ ಜೈನಮಠದ ಪೀಠಾಧಿಪತಿ ಶಾಂತಿಭೂಷಣ ಸ್ವಸ್ತಿ ಶ್ರೀ ಲಕ್ಷಿ ್ಮಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ

ಮುಂಬಯಿ, ಡಿ.14: ಅಖಿಲ ಭಾರತೀಯ ದಿಗಂಬರ ಜೈನ ಮಹಾ ಸಭಾ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ ಕೀನ್ಯಾ ಇವರ ಜಂಟಿ ಆಶ್ರಯದಲ್ಲಿ, ಜೈನ ಮತ್ತು ಆಫ್ರಿಕನ್ ತತ್ವಜ್ಞಾನದ ಅಂತರಾಷ್ಟ್ರೀಯ ವಿಶ್ವಶಾಂತಿ ಸಮ್ಮೇಳನದಲ್ಲಿ ಭಾಗವಹಿಸಲು ಕೀನ್ಯಾದ ಕಿಸ್ಮು ನಗರಕ್ಕೆ ಪ್ರವಾಸದಲ್ಲಿರುವ ಸಿಂಹನಗದ್ದೆ  ಶ್ರೀ ಜೈನಮಠದ ಪೀಠಾಧಿಪತಿ ಶಾಂತಿಭೂಷಣ ಸ್ವಸ್ತಿ ಶ್ರೀ ಲಕ್ಷಿ ್ಮಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ
ಸ್ವಾಮೀಜಿ ಅವರು ಕಳೆದ ಸೋಮವಾರ ಬೃಹನ್ಮುಂಬಯಿಗೆ ಚಿತ್ತೈಸಿದರು.

ಮಹಾನಗರಕ್ಕೆ ಆಗಮಿಸಿದ ಶ್ರೀಗಳನ್ನು ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ಇದರ ಶ್ರಾವಕರು ಭಕ್ತಿಪೂರ್ವಕವಾಗಿ ಬರ ಮಾಡಿಕೊಂಡರು. ಸಂಘದ ಹಿರಿಯ ಸದಸ್ಯರಾದ ಸುಕುಮಾರ ಜೈನ್ ಅವರ ನಿವಾಸದಲ್ಲಿ ಸ್ವಾಮೀಜಿ ಅವರು ಶ್ರಾವಕರಿಗೆ ಆಶೀರ್ವಚನವನ್ನು ನೀಡಿದರು.

ಈ ಸಂಧರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ಪವನಂಜಯ ಬಲ್ಲಾಳ್, ಜೊತೆ ಕೋಶಾಧಿಕಾರಿ ಸಂಪತ್ ಜೈನ್ ಅಂಧೇರಿ, ಸದಸ್ಯರಾದ ಸನತ್ ಕುಮಾರ್  ಜೈನ್, ನಮಿರಾಜ್ ಜೈನ್, ಮುನಿರಾಜ ಜೈನ್, ಭರತ್‍ರಾಜ್ ಜೈನ್, ವೀಣಾ ಜೈನ್, ವತ್ಸಲಾ ಅರಿಗ, ಮಿತ್ರಾವತಿ ಜೈನ್, ಅಕ್ಷತಾ ಪಿ.ಜೈನ್, ಅಮರಾಜಿ ಜೈನ್, ವಿನೋದ ಎಸ್.ಜೈನ್ ಸುಪ್ರಿಯಾ ಬಹಿರ್ಶೇಟ್ ಮತ್ತಿತರರು ಉಪಸ್ಥಿತರಿದ್ದರು.

ತರುವಾಯ ಶ್ರೀಗಳು ಕೀನ್ಯಾದತ್ತ ಪ್ರಯಾಣ ಮುಂದುವರಿಸಿದ್ದು ಶ್ರಾವಕರು ಶುಭಪ್ರಯಾಣ ಹಾರೈಸಿದರು. ಶ್ರೀಗಳು ತಮ್ಮ ಪ್ರಥಮ ವಿದೇಶ ಯಾತ್ರೆಯಲ್ಲಿ, ವಿಶ್ವಶಾಂತಿ ಅಧಿವೇಶನದ ಜೊತೆಗೆ ಅಲ್ಲಿನ ಪುರಾತನ ಜಿನಮಂದಿರಗಳ ದರ್ಶನ ಹಾಗೂ ಅವುಗಳ ಪುರಾತತ್ವದ ಬಗ್ಗೆಯೂ ಅಧ್ಯಯನ ನಡೆಸಲಿದ್ದಾರೆ. ಈ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಪಂಚದ.ವಿವಿಧ ದೇಶಗಳಿಂದ ಸುಮಾರು 300ಕ್ಕೂ ಅಧಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಭರತ್ ರಾಜ್ ಜೈನ್ ತಿಳಿಸಿದ್ದಾರೆ.

ದುಗ್ಗಪ್ಪ ಯು.ಕೋಟಿಯವರ್ ಅವರ `ಮುಂಬಯಿಯಲ್ಲಿ ಕನ್ನಡದ ಡಿಂಡಿಮ’ ಕೃತಿ ಬಿಡುಗಡೆ ಮುಂಬಯಿಗರ ಕನ್ನಡಭಾಷಾಭಿಮಾನ ಎಲ್ಲರಿಗೂ ಮಾದರಿ:ಡಾ| ಕೃಷ್ಣ ಕೊಲ್ಹಾರ 

ಮುಂಬಯಿ, ಡಿ.15: ಮುಂಬಯಿಗರು ಪಾರದರ್ಶಕ ಭಾಷಾಭಿಮಾನಿಗಳಾಗಿದ್ದಾರೆ. ಇವರಲ್ಲಿನ ಕನ್ನಡ ಭಾಷಾಶೈಲಿ, ಅವ್ಯಾಜ್ಯವಾದ ಸಂಸ್ಕೃತಿ ಪ್ರೇಮ ಕನ್ನಡಿಗರಿಗೆಲ್ಲರಿಗೂ ಮಾದರಿ. ಕನ್ನಡಾಭಿಮಾನವಂತೂ ಮನಸ್ಸು ತಟ್ಟುವಂಹದದ್ದು ಎಂದು ಹೆಸರಾಂತ ಸಂಶೋಧಕ, ಹಿರಿಯ ಸಾಹಿತಿ ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ ನುಡಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಇಂದಿಲ್ಲಿ ಶುಕ್ರÀವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಅಲ್ಲಿನ ಡಬ್ಲ್ಯೂಆರ್‍ಐಸಿ ಸಭಾಗೃಹದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿಜಿತ ಪ್ರಕಾಶನದ ದುಗ್ಗಪ್ಪ ಯು.ಕೋಟಿಯವರ್ ಅವರ `ಮುಂಬಯಿಯಲ್ಲಿ ಕನ್ನಡದ ಡಿಂಡಿಮ’ ಕೃತಿ ಬಿಡುಗಡೆಗೊಳಿಸಿ ಡಾ| ಕುಲಕರ್ಣಿ ಮಾತನಾಡಿದರು.

ಗಳಗನಾಥ ಮತ್ತು ರಾಜಪುರೋಹಿತ ಪ್ರತಿಷ್ಠಾನ ಹಾವೇರಿ ಅಧ್ಯಕ್ಷ ಪೆÇ್ರ| ದುಷ್ಯಂತ ನಾಡಗೌಡ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಾಹಿತಿ ಡಾ| ಶ್ಯಾಮಸುಂದರ್ ಬಿದರಕುಂದಿ ಅವರು ಪೆÇ್ರ. ಜಿ.ಸಿ ಕುಲ್ಕರ್ಣಿ ಅವರ ಕುಮಾರವ್ಯಾಸ ಭಾರತದ ಮರಾಠಿ ಅನುವಾದಿತ ಗ್ರಂಥವನ್ನು ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ, ವಿಜ್ಞಾನಿ ಡಾ| ವ್ಯಾಸರಾವ್ ನಿಂಜೂರು ಮತ್ತು ಮುಂಬಯಿ ವಿವಿ ಕನ್ನಡ ವಿಭಾಗದ ಸಹಾಯಕ ಉಪನ್ಯಾಸಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಉಪಸ್ಥಿತರಿದ್ದು, ರಮಾ ಉಡುಪ ಕೃತಿ ಪರಿಚಯಿಸಿದರು. 

ಮುಂಬಯಿ ಕನ್ನಡ ಸಾಹಿತ್ಯದ ಕೇಂದ್ರಸ್ಥಾನವಿದ್ದಂತೆ. ಇಲ್ಲಿರುವ ಕನ್ನಡಭಾಷಾಭಿಮಾನ, ಸಾಹಿತ್ಯಾಸಕ್ತಿ  ಒಳನಾಡ ಜನರಲ್ಲಿ ಕಾಣುತ್ತಿಲ್ಲ. ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಪೆÇ್ರೀತ್ಸಾಹ ಅನನ್ಯವಾದದ್ದು ಎಂದು ಅಧ್ಯಕ್ಷೀಯ ಭಾಷಣದಲ್ಲಿ ನಾಡಗೌಡ ತಿಳಿಸಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯಾಯ ಅವರು ಪ್ರಸ್ತಾವಿಕ ನುಡಿಗಳನ್ನಾಡಿ `ಮುಂಬಯಿಯಲ್ಲಿ ಕನ್ನಡದ ಡಿಂಡಿಮ’ ಇದು ನಮ್ಮದು 83ನೇ ಕೃತಿ. ಕೃತಿಕರ್ತ ದುಗ್ಗಪ್ಪ ಯು.ಕೋಟಿಯವರ್ ಅವರ ಶ್ರಮ ಅನನ್ಯವಾದದ್ದು. ದುಗ್ಗಪ್ಪರ ಸಾಧನಾಶೀಲಾ ಪ್ರಯತ್ನದ ಸಾರ್ಥಕತೆ ಇಂದು ತೆರೆದಿದೆ. ನಮ್ಮಲ್ಲಿನ ಅನೇಕರು ಕೃತಿಗಳನ್ನು ರಚಿಸಿದ ಬಳಿಕ ಸುಮ್ಮಗಿರ್ತಾರೆ. ಇದು ಸಲ್ಲದು. ಆದರೆ ಪೆÇ್ರ. ಕುಲ್ಕರ್ಣಿ ಅವರು ಕೃತಿಗಳನ್ನು ರಚಿಸಿ ಸಾವಿರ ಕೃತಿ ಮಾಡಿ ಹಂಚಿದ ಕೀರ್ತಿಕಾರ. ಕನ್ನಡದಲ್ಲಿ ಕುಮಾರವ್ಯಾಸನ ಸಾಹಿತ್ಯೋಪಾಸನಗೈದು ವ್ಯಾಸರಿಗೆ ಮರುಜೀವವನ್ನೀಡಿದ್ದಾರೆ. ಇಂತಹವರಿರುವ ತನಕ ಮುಂಬಯಿಯಲ್ಲಿ ಕನ್ನಡಕ್ಕೆ ಹಿನ್ನಡೆ ಅಸಾಧ್ಯ. ಆದುದರಿಂದ ಕನ್ನಡದ ಅಸ್ಮಿತೆ ಗಟ್ಟಿ ಗೊಳಿಸುವ ಕೆಲಸ ಕನ್ನಡ ವಿಶ್ವ ವಿದ್ಯಾಲಯ, ಸರಕಾರ ಮಾಡ ಬೇಕಾಗಿದೆ ಎಂದರು.

ಕೃತಿಕಾರ ದುಗ್ಗಪ್ಪ ಯು.ಕೋಟಿಯವರ್ ಮಾತನಾಡಿ ಮುಂಬಯಿ ಮಹಾನಗರ ಪಾಲಿಕೆಯ ಕನ್ನಡ ಶಾಲೆಯಲ್ಲಿ ಆಧ್ಯಾಪಕನಾಗಿ ಕೆಲಸಕ್ಕೆ ಸೇರಿಕೊಂಡು ಸೊಲ್ಲಾಪುರ ವಿವಿಯಿಂದ ಬಿ.ಎ, ಎಂ.ಎ ಪಡೆದು, ಮುಂಬಯಿ ಕನ್ನಡ ವಿಭಾಗದಲ್ಲಿ ಎಂ.ಎಲ್ ಮಾಡಬೇಕೆಂಬ ಯೋಚನೆಯೊಂದಿಗೆ  ವಿಭಾಗದ ಮುಖ್ಯಸ್ಥ ಡಾ| ಜಿ.ಎನ್.ಉಪಾಧ್ಯರ ಭೇಟಿಯಾದೆ. ಅವರು ನನಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಾಧನೆಯ ಕುರಿತು ಎಂ.ಫಿಲ್ ಅಧ್ಯಯನಕ್ಕೆ ಬೇಕಾದ ಎಲ್ಲಾ ಗ್ರಂಥಗಳನ್ನು ನೀಡಿ, ಮಾರ್ಗದರ್ಶನ ನೀಡಿ ಪೆÇ್ರೀತ್ಸಾಹಿಸಿದ ಫಲವೇ ಈ ಕೃತಿಯಾಗಿದೆ. ನನ್ನ ಬರಹಗಳನ್ನು ಅಭಿಜಿತ ಪ್ರಕಾಶನ ಮುಖಾಂತರ ಪ್ರಕಟವಾಗುವಂತೆ ಹಾಗೂ ಕೃತಿಗೆ ಮುನ್ನುಡಿಯ ತೊರಣ ಕಟ್ಟಿ ಹರಿಸಿದ ಡಾ| ಉಪಾಧ್ಯ ಅವರಿಗೆ ಕೃತಜ್ಞತೆಗಳು. ಬೆನ್ನಡಿ ಬರೆದು ಬೆನ್ನುತಟ್ಟಿದ ಡಾ| ಭರತ್‍ಕುಮಾರ್ ಪೆÇಲಿಪು ಹಾಗೂ ಮುಖಪುಟ ಚಿತ್ರಿಸಿಕೊಟ್ಟ ಕಲಾವಿದ ಜಯ ಸಿ.ಸಾಲ್ಯಾನ್ ಅವರಿಗೆ ವಂದಿಸುವೆ ಎಂದÀರು.

ಕಾರ್ಯಕ್ರಮದಲ್ಲಿ ದುಗ್ಗಪ್ಪ ಅವರ ಮಾತಾಪಿತರಾದ ಭೀಮವ್ವ ಮತ್ತು ಯಲ್ಲಪ್ಪ ಕೋಟಿಯವರ್, ಪತ್ನಿ ಲಕ್ಷ್ಮೀ ಡಿ.ಕೋಟಿಯವರ್, ಮಕ್ಕಳಾದ ಸಮರ್ಥ ಹಾಗೂ ವನಿತಾ ಡಿ.ಕೋಟಿಯವರ್ ಹಾಗೂ ಪರಿವಾರದ ಅನೇಕರು ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.

ಸುರೇಖಾ ಆರ್.ನಾಯ್ಕ, ಡಾ| ಜಿ.ವಿ ಕುಲಕರ್ಣಿ, ಲಲಿತಪ್ರಭಾ ಅಂಗಡಿ, ಗಿರಿಜಾ ಶಾಸ್ತ್ರಿ, ನಾರಾಯಣ ರಾವ್, ಕುಮುದಾ ಆಳ್ವ, ಗೀತಾ ಮಂಜುನಾಥ್, ಪರಸಪ್ಪ ಡಿ.ಹರಿಜನ, ಶಿವರಾಜ್ ಎಂ.ಜೆ., ರೇವಣಸಿದ್ಧಿ ಕೌಟಗಿ ಸೇರಿದಂತೆ ನೂರಾರು ಸಾಹಿತ್ಯಸಕ್ತರು ಉಪಸ್ಥಿತರಿದ್ದರು. ವೈ.ಬಿ ಮಧುಸೂದನ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಾಹಿಸಿ ಧನ್ಯವದಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | UdupiFinal Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, KemmannuVespers 2024 | St. Theresa’s Church, Kemmannu
Annual Church Feast 2024 | St. Theresa’s Church, KemmannuAnnual Church Feast 2024 | St. Theresa’s Church, Kemmannu
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | UdupiCHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From KemmannuAnnual Day 2023 | Carmel English School, Live From Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, UdupiEaster 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, UdupiFocus Studio, Near Hotel Kidiyoor, Udupi