Brief Mumbai News with Pictures


Kemmannu News Network, 04-01-2018 07:18:48


Write Comment     |     E-Mail To a Friend     |     Facebook     |     Twitter     |     Print


ಸಮಾಜದ ಕಡೆಯ ವ್ಯಕ್ತಿಗೂ ಸಂಪನ್ಮೂಲ ಒದಗಬೇಕು - ಸೇವಾ ಕಾರ್ಯ ಉದ್ಘಾಟಿಸಿ ಡಾ. ಪೆರ್ಲ ಹೇಳಿಕೆ 
ಮಂಗಳೂರು : ನಗರದಲ್ಲಿ ಕೇವಲ ಏಳು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ವಿನಿಶಾ ಚಾರಿಟೇಬಲ್ ಟ್ರಸ್ಟ್ ಸುಮಾರು ನೂರಾ ಅರವತ್ತು ಮಂದಿ ಅಶಕ್ತ ರೋಗಿಗಳಿಗೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ವಿಕಲಚೇತನರಿಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡುವುದರೊಂದಿಗೆ ಸಾಧಕರನ್ನೂ ಗುರುತಿಸಿ ಸನ್ಮಾನಿಸುವುದರ ಮೂಲಕ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷದ ಮೊದಲ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿತು.
ಕಾರ್ಯಕ್ರಮದ ಆರಂಭದಲ್ಲಿ ಯೋಗಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಇದುವರೆಗೆ ಬೇರೆ ಬೇರೆ ಕಡೆ ಸುಮಾರು ಇನ್ನೂರ ಮೂವತ್ತು ಯೋಗಶಿಬಿರಗಳನ್ನು ಏರ್ಪಡಿಸಿದ ಯೋಗಶಿಕ್ಷಕ ಜಗದೀಶ ಶೆಟ್ಟಿ ಅವರು ಯೋಗ ಶಿಬಿರ ನಡೆಸಿ ಕೊಟ್ಟರು.
ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕವಿ ಹಾಗೂ ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು, ವಿನಿಶಾ ಟ್ರಸ್ಟ್ ವತಿಯಿಂದ ಯೋಗ ಶಿಬಿರಗಳನ್ನು ಏರ್ಪಡಿಸಿ ದೇಹ, ಬುದ್ಧಿ, ಮನಸ್ಸುಗಳ ಆರೋಗ್ಯ ಕಾಪಾಡುವ ಕೆಲಸ ಮಾಡಲಾಗುತ್ತಿದೆ ಹಾಗೂ ಸಮಾಜದಲ್ಲಿ ಅಗತ್ಯವಿರುವವರಿಗೆ ಆರ್ಥಿಕ ಹಾಗೂ ವಸ್ತು ರೂಪದ ನೆರವಿನ ಹಸ್ತ ಚಾಚುವುದರ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಕೆಲಸವೂ ಆಗುತ್ತಿದೆ. ಕಲ್ಯಾಣರಾಜ್ಯ ನಿರ್ಮಾಣವಾಗುವಲ್ಲಿ ಇದು ದೊಡ್ಡ ಕೊಡುಗೆ ಎಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ರೆ. ಫಾ. ಆಂಡ್ರೂ ಡಿ’ಸೋಜಾ ವಹಿಸಿದ್ದರು. ಮಂದಾರಬೈಲಿನ ಧರ್ಮದರ್ಶಿ ಪ್ರಕಾಶ್ ಪಂಡಿತ್ ಹಾಗೂ ಕಟೀಲು ದೇವಳದ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಮರಿಯಾ ಪ್ರಿಯಾ ಮ್ಯಾಲೆಟ್ ಮತ್ತು ಇತರ ಪದಾಧಿಕಾರಿಗಳು ಹಾಜರಿದ್ದರು. 

Mumbai Jan.02: Dr. Tayaroa Lahane. addressing on media during on the Maa Tujhe Salaam Flim in Mumbai on Tuesday.

ಎಸ್.ಡಿ.ಎಂ. ಕಾಲೇಜಿನ “ಮಾರಿಕಾಡು” ನಾಟಕ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

ಉಜಿರೆ: ಚೆನ್ನೈನಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಭಾರತ ಅಂತರ ವಿ.ವಿ. ಯುವಜನೋತ್ಸವದಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ರಂಗ ಅಧ್ಯಯನ ಕೇಂದ್ರದ “ಮಾರಿಕಾಡು” ನಾಟಕ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
    ಡಾ. ಚಂದ್ರಶೇಖರ ಕಂಬಾರ ರಚಿಸಿದ “ಮಾರಿಕಾಡು” ನಾಟಕ ಮೂಲತಃ ವಿಲಿಯಂ ಶೇಕ್ಸ್‍ಪಿಯರ್‍ನ ಮ್ಯಾಕ್‍ಬೆತ್ ನಾಟಕದ ಕನ್ನಡ ರೂಪಾಂತರವಾಗಿದೆ.
    ಎಸ್.ಡಿ.ಎಂ. ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಶಿವಶಂಕರ್ ಮಾರ್ಗದರ್ಶನದಲ್ಲಿ 13 ವಿದ್ಯಾರ್ಥಿಗಳ ತಂಡ ನಾಟಕ ಪ್ರದರ್ಶನ ನೀಡಿದೆ. ವಿದ್ಯಾರ್ಥಿಗಳಾದ ಅನ್ವಿತ್ ಗೌಡ, ಅಂಕಿತ್ ಆಚಾರ್ಯ, ಶಶಿಪ್ರಭಾ, ಸಂಪದ ಎಸ್. ಭಾಗವತ್, ಚೇತನಾ ಡಿ., ಪದ್ಮರೇಖಾ ಕೆ. ಭಟ್, ನಿಶಾ ಭಟ್, ಅರ್ಚನಾ, ಶಿಲ್ಪಶ್ರೀ, ಶರಣ್ ಕುಮಾರ್, ಸಿಂಧುಲಕ್ಷ್ಮೀ, ಆದಿತ್ಯಾ ಪಾತ್ರಧಾರಿಗಳಾಗಿ ಉತ್ತಮ ನಿರ್ವಹಣೆ ಮಾಡಿದ್ದಾರೆ.

ಎಸ್.ಡಿ.ಎಂ. ವಸತಿ ಕಾಲೇಜು: ರಾಜ್ಯಮಟ್ಟದಲ್ಲಿ ಪ್ರಥಮ
ಚಿತ್ರಶೀರ್ಷಿಕೆ: ಹರ್ಷಿತ್ ಬಿ. ನಾಯರ್
ಉಜಿರೆ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಇಂಗ್ಲೀಷ್ ಚರ್ಚಾ ಸ್ಪರ್ಧೆಯಲ್ಲಿ ಉಜಿರೆಯ ಎಸ್.ಡಿ.ಎಂ. ವಸತಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ ಹರ್ಷಿತ್ ಬಿ. ನಾಯರ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಅಭಿನಂದನೆ
ಚಿತ್ರಶೀರ್ಷಿಕೆ: ಹೆಗ್ಗಡೆಯವರು ಸುವರ್ಣ ಪದಕ ವಿಜೇತ ನಿತಿನ್ ಅವರನ್ನು ಅಭಿನಂದಿಸಿದರು.

ಉಜಿರೆ: ಮಲೇಶ್ಯಾದಲ್ಲಿ ಇತ್ತೀಚೆಗೆ ನಡೆದ ಏಶಿಯನ್ ನೆಟ್‍ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾರತ ತಂಡದ ಉಪನಾಯಕ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಎಂ.ಕಾಂ. ದ್ವಿತೀಯ ವರ್ಷದ ವಿದ್ಯಾರ್ಥಿ ನಿತಿನ್ ಮಂಗಳವಾರ ಧರ್ಮಸ್ಥಳದಲ್ಲಿ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಆತನ ಸಾಧನೆಗೆ ಅಭಿನಂದಿಸಿ ಹೆಗ್ಗಡೆಯವರು ಉಜ್ವಲ ಭವಿಷ್ಯವನ್ನು ಹಾರೈಸಿದರು.

ಸೈಂಟ್ ಜೋನ್ ಕೊಂಕಣಿ ಸಮುದಾಯ ಮರೋಲ್ ಸಂಸ್ಥೆಯಿಂದ ಬಾಂದ್ರಾ ಪೂರ್ವದಲ್ಲಿನ ಬಿಇಸಿಸಿ ಅನಾಥಾಶ್ರಮಕ್ಕೆ ಭೇಟಿ

ಮುಂಬಯಿ, ಸೆ.10: ಅಂಧೇರಿ ಪೂರ್ವದ ಮರೋಲ್ ಅಲ್ಲಿನ ಸೈಂಟ್ ಜೋನ್ ಎವಂಜಲಿಸ್ಟ್ ಚರ್ಚ್ ಇದರ ಸೈಂಟ್ ಜೋನ್ ಕೊಂಕಣಿ ಸಮುದಾಯವು ಬಾಂದ್ರಾ ಪೂರ್ವದಲ್ಲಿನ ಬಿಇಸಿಸಿ ಅನಾಥಾಶ್ರಮಕ್ಕೆ ಭೇಟಿ ಅಲ್ಲಿನ ಅನಾಥ ಮಕ್ಕಳೊಂದಿಗೆ ನೂತನ ವರ್ಷಾಚರಣೆ ಸಂಭ್ರಮಿಸಿತು.

ತೆರೆಮರೆಯ ನಿಷ್ಠಾವಂತ ಸಮಾಜ ಸೇವಕ, ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಲ್ಲೋರ್ವರಾದ ಕ್ಲೋಡಿ ಮೊಂತೇರೊ ಮೊಡಂಕಾಪು ನೇತೃತ್ವದಲ್ಲಿ ಕಳೆದ ಸೋಮವಾರ ಹೊಸವರ್ಷದ ದಿನ ಸಮುದಾಯದ ಪದಾಧಿಕಾರಿಗಳು ಮತ್ತು ಸದಸ್ಯರು ಬಾಂದ್ರಾ ಈಸ್ಟ್ ಕಮ್ಯೂನಿಟಿ ಸೆಂಟರ್‍ಗೆ ತೆರಳಿ ಅಕ್ಕಿ, ಸಕ್ಕರೆ, ಚಾಹುಡಿ, ಬಿಸ್ಕೇಟ್, ಸಾಬೂನು ಅಲ್ಲದೆ ಇನ್ನಿತರ ಆಹಾರವಸ್ತುಗಳನ್ನು ನೀಡಿದರು ಹಾಗೂ ಅಲ್ಲಿನ ಮಕ್ಕಳೊಡನೆ ಸಂಗೀತಮಯವಾಗಿ ಸಮಯ ಕಳೆಯುತ್ತಾ ಮಕ್ಕಳ ಮನಗಳಿಗೆ ಮುದವನ್ನಿತ್ತರು. ಬಿಇಸಿಸಿ ನಿರ್ದೇಶಕ ಫಾ| ಪ್ರೇಮ್ ಆರೋಕ್ಯನ್ ಸುಖಾಗಮನ ಬಯಸಿ ಮಕ್ಕಳ ಮೇಲಿನ ದಯಾಧೋರಣೆಗಾಗಿ ವಂದಿಸಿ ಹರಸಿದರು.

ಈ ಸಂದರ್ಭದಲ್ಲಿ  ಕೊಂಕಣಿ ಸಮುದಾಯದ ಕಾರ್ಯದರ್ಶಿ ಮೇರಿ ಫೆರ್ನಾಂಡಿಸ್, ಕೋಶಾಧಿಕಾರಿ ಜೇಮ್ಸ್ ಡೆ’ಸಾ, ಸದಸ್ಯರುಗಳಾದ ತೆಲ್ಮಾ ಡೆಸಾ, ಕ್ಲೋಡಿ ಮೊಂತೇರೊ, ಜಯವೀರ ಪಾಲಡ್ಕ, ಹಿಲ್ಡಾ ಪಿರೇರ, ಗ್ರೆಟ್ಟಾ ಡಿ’ಸಿಲ್ವಾ, ಆಲಿಸ್ ಡಿ’ಸೋಜಾ, ಡೆನಿಸ್ ಡಿ’ಸಿಲ್ವಾ, ಗ್ರೇಸಿ ದಾಂತಿಸ್, ರೆಜಿನಾ ಡಿ’ಸಿಲ್ವಾ, ಲಿಡ್ವಿನ್ ಮಿನೇಜಸ್ ಪೆÇವಾಯಿ ಮತ್ತಿತರು ಉಪಸ್ಥಿತರಿದ್ದರು.

ಕÀರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ (ಕೆಪಿಸಿಸಿ) ಕಾರ್ಯದರ್ಶಿ ಆಗಿ ಡಾ| ರಾಜಶೇಖರ ಆರ್.ಕೋಟ್ಯಾನ್ ಮುಂಬಯಿ ನೇಮಕ
ಮುಂಬಯಿ, ಜ.04: ಎಐಸಿಐ ಅಧ್ಯಕ್ಷ ರಾಹುಲ್ ಗಾಂಧಿ ಆದೇಶದಂತೆ ಕÀರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ (ಕೆಪಿಸಿಸಿ) ಕಾರ್ಯದರ್ಶಿ ಆಗಿ ನೇಮಕಗೊಂಡಿರುವ ಡಾ| ರಾಜಶೇಖರ ಆರ್.ಕೋಟ್ಯಾನ್ ಅವರು ಇಂದಿಲ್ಲಿ ಬೆಂಗಳೂರು ಸದಾಶಿವ ನಗರದಲ್ಲಿನ ರಾಷ್ಟ್ರೀಯ ಕಾಂಗ್ರೇಸ್ ಐ) ಪಕ್ಷದ ರಾಜ್ಯಧ್ಯಕ್ಷರ ಅಧಿಕೃತ ನಿವಾಸಕ್ಕೆ ತೆರಳಿ  ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್ ಅವರಿಗೆ ಪುಷ್ಪಗುಪ್ಛವನ್ನಿತ್ತು ಅಭಿವಂದಿಸಿದರು.

ಇತ್ತೀಚೆಗಷ್ಟೇ ತನ್ನ ಬೆಂಗಲಿಗ ಪಡೆಯೊಂದಿಗೆ ಡಾ| ರಾಜಶೇಖರ್ ಅವರು ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೇಸ್ ಪಕ್ಷ ಸೇರಿದ್ದು,  ವಿಶ್ವದಾದ್ಯಂತ ಸೇವಾ ನಿರತ ಬಿಲ್ಲವ ಸಮುದಾಯದ ವಿವಿಧ ಸಂಘ ಸಂಸ್ಥೆಗಳ ಸಾಂಘಿಕತ್ವದಲ್ಲಿ ಮೂಲ್ಕಿಯಲ್ಲಿ ಬಿಲ್ಲವ ಕ್ರೀಡಾ ಸಮಿತಿ ಮುಖೇನ ಆಯೋಜಿಸಿದ್ದ ಎರಡು ದಿನಗಳ ಬಿಲ್ಲವರ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟದ ನಂತರ ಭಾರೀ ಪ್ರಸಿದ್ಧಿಗೆ ಬಂದಿರುವ ಸರಳ ಸಜ್ಜನಿಕಾ, ನಿಷ್ಠಾವಂತ ಯುವ ನಾಯಕರಾಗಿ ಇದೀಗ ಸಕ್ರೀಯ ರಾಜಕೀಯಕ್ಕೆ ಪ್ರವೇಶಗೈದಿದ್ದಾರೆ. ಇವರ ಸೇವಾನಿಷ್ಠೆಯನ್ನು ತಿಳಿದ ಅಭಿಮಾನಿ ಬಳಗವು ಕಳೆದ ಡಿ.09ರಂದು ಮಂಗಳೂರುನ ಡಾ| ಟಿ.ಎಂ.ಎ ಪೈ ಸಭಾಗೃಹದಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭ ಏರ್ಪಡಿಸಿ ಅಭಿನಂದಿಸಿ ಡಾ| ರಾಜಶೇಖರ್‍ಗೆ ಭವ್ಯ ರಾಜಕೀಯ ಭವಿಷ್ಯವನ್ನು ಹಾರೈಸಿತ್ತು.

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಸ್ಯಾಂಡಲ್‍ವುಡ್ ನಟ, ನಿರ್ಮಾಪಕÀ, ನಿರ್ದೇಶಕ, ಡಾ| ರಾಜಶೇಖರ ಕೋಟ್ಯಾನ್ ಮುಂಬಯಿನ ಯುವ ಹೊಟೇಲು ಉದ್ಯಮಿ ಆಗಿ, ಪುತ್ತೂರು ಪಡುಮಲೆ ಅಲ್ಲಿನ ಬಡಗನ್ನೂರು ಗ್ರಾಮದ ದೇಯಿ ಬೈದ್ಯೆತಿ, ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‍ಲ್’ನ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರಮಿಸುತ್ತಿದ್ದಾರೆ.

ವಜ್ರಮಹೋತ್ಸವ ಸಂಭ್ರಮದಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಜ.6: ಬಿಲ್ಲವ ಭವನದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ
ಮುಂಬಯಿ, ಜ.03: ಕನ್ನಡ ಸಂಘ ಸಾಂತಾಕ್ರೂಜ್ (ರಿ). ಸಂಸ್ಥೆಯು ವಜ್ರಮಹೋತ್ಸವ ಸಂಭ್ರಮದಲ್ಲಿದ್ದು ಈ ಉತ್ಸವವನ್ನು ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಆಚರಿಸುವ ಸಿದ್ಧತೆಯಲ್ಲಿದೆ.

ಆ ಪ್ರಯುಕ್ತ ಇದೇ ಜ.06ನೇ ಶನಿವಾರ ಸಂಜೆ 4.00 ಗಂಟೆಗೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ ಸಂಘದÀ ಅಧ್ಯಕ್ಷ ಎಲ್.ವಿ ಅಮೀನ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಆಯೋಜಿಸಲಾಗಿದೆ.

ವಜ್ರಮಹೋತ್ಸವ ಯಶಸ್ಸಿಗಾಗಿ ನಡೆಯಲಿರುವ ಸಭೆಯಲ್ಲಿ ಉಪ ಸಮಿತಿಗಳ ರಚನೆ, ಸದಸ್ಯರು, ಹಿತೈಷಿಗಳ ಅಭಿಮತಗಳೊಂದಿಗೆ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳ ಆಯೋಜನೆ ಇತ್ಯಾದಿಗಳ ಬಗ್ಗೆ ಚರ್ಚಿಸಲಾಗುವುದು. ಆ ಪ್ರಯುಕ್ತ ಸಂಘದ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರು ಪಾಲ್ಗೊಂಡು ಸಭೆಯನ್ನು ಯಶಸ್ವಿ ಗೊಳಿಸುವಂತೆ ಗೌ| ಪ್ರ|  ಕಾರ್ಯದರ್ಶಿ  ಸುಜಾತಾ ಆರ್.ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Watch Full Video:Inauguration Udupi of Diocese
View More

Veez Konkani Illustrated - Weekly e-MagazineVeez Konkani Illustrated - Weekly e-Magazine
Month’s MindMonth’s Mind
Mount Rosary Church Annoucement for the weekMount Rosary Church Annoucement for the week
Rozaricho Gaanch Easter 2018Rozaricho Gaanch Easter 2018
Milarchi Lara - Issue April - 2018Milarchi Lara - Issue April - 2018
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
Visit Axis Bank Now open in Kallianpura, SanthekatteVisit Axis Bank Now open in Kallianpura, Santhekatte
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India
Kemmann.com Face Book

Click here for Kemmannu Knn Facebook Link

Mangalorean Fertility Physician in New York

 

Mangalorean Fertility Physician in New York

 

For information, please email nigelepereira.wcmc@gmail.com or contact Megi Zeku at 646-962-7499, prompt 3.

 

 

Thank you from Kemmannu.comContact for all your Travel, Tours and For Rent a Car

Contact Maria Travels  for all your Travel, Tours and For Rent a Car Mob: 9980889512 or 9819444307

Thanksgiving to St. Lawrance

Thanksgiving to St. Lawrance

Sponsored Albums