`ಜಾಂವಂಯ್ ನಂಬರ್ ವನ್’ ಕೊಂಕಣಿ ಚಿತ್ರದ ಟ್ರೇಲರ್ ಮತ್ತು ಧ್ವನಿ ಸುರುಳಿ ಬಿಡುಗಡೆ


Rons Bantwal
Kemmannu News Network, 12-01-2018 06:30:27


Write Comment     |     E-Mail To a Friend     |     Facebook     |     Twitter     |     Print


`ಜಾಂವಂಯ್ ನಂಬರ್ ವನ್’ ಕೊಂಕಣಿ ಚಿತ್ರದ ಟ್ರೇಲರ್ ಮತ್ತು ಧ್ವನಿ ಸುರುಳಿ ಬಿಡುಗಡೆ - ಸಿನೆಮಾಗಳು ಸಂಸ್ಕೃತಿಗಳ ಉಳಿವಿಗೆ ಪೂರಕ : ನಟ ಸೌರಭ್ ಭಂಡಾರಿ

ಮುಂಬಯಿ, ಜ.08: ಚಿತ್ರ ನಿರ್ಮಾಣ ದೊಡ್ದ ಸಾಹಸವೇ ಸರಿ. ಇದನ್ನು ಸ್ವಅನುಭವಿಸಿದ್ದೇನೆ. ಸಿನೆಮಾಗಳು ಸಂಸ್ಕೃತಿಗಳ ಉಳಿವಿಗೆ ಪೂರಕವಾದಾಗ ಭಾಷಾ  ಮನ್ನಣೆಗೆ ಪಾತ್ರವಾಗಬಲ್ಲದು. ಅವಾಗಲೇ ಇಂತಹ ಚಿತ್ರಗಳು ಇತಿಹಾಸದ ಪುಟಗಳಲ್ಲಿ ಸೇರುವುದು. ಈ ಚಿತ್ರದ ಆಡಿಯೋ ಚೆನ್ನಾಗಿ ಕಂಡು ಬರುತ್ತಿದ್ದು. ಆಡಿಯೋನೇ ಇಷ್ಟು ಸುಂದರವಾಗಿದ್ದರೆ ಚಲನಚಿತ್ರ ಎಷ್ಟು ಒಳ್ಳೆಯದಿರಬಹುದು ಎನ್ನುವುದನ್ನು ನೀವೇ ಊಹಿಸಿ. ತುಳು, ಕೊಂಕಣಿ, ಕನ್ನಡಿಗರು ನಾವೆಲ್ಲಾ  ಒಂದೇ ಮಾತೆಯ ಮಕ್ಕಳಂತೆ. ಮಾತೃಭಾಷೆಯನ್ನು ಸರ್ವಸ್ವವಾಗಿಸಿ ಬಾಳುವವರು. ಭಾಷೆಯನ್ನು ಮಕ್ಕಳಂತೆ ಪ್ರೀತಿಸಿ ಭಾಷಾ ಮೂಲಕ ಒಗ್ಗೂಡುತ್ತಾ ಸಾಮರಸ್ಯದಿಂದ ಬಾಳುವವರು. ಈ ಸಿನಿಮಾ ಸಾಂಗತಿ ಕ್ರಿಯೇಶನ್ಸ್ ಬಳಗಕ್ಕೆ ಯಶಸ್ಸು ತಂದು ಕೊಡಲಿ. ಜೊತೆಗೆ  ತುಳು ಕೊಂಕಣಿ, ಯಾವುದೇ ಸಿನೆಮಾ ರಂಗ ವಿಶ್ವಾಸದಾಯಕವಾಗಿ ಬೆಳೆಯಲಿ ಎಂದು ತುಳು ಚಿತ್ರರಂಗದ ಸೂಪರ್‍ಸ್ಟಾರ್ ಪ್ರಸಿದ್ದಿಯ ಅಂಬರ್  ಕ್ಯಾಟರರ್ಸ್ ತುಳು ಸಿನೆಮಾದ ನಾಯಕ ನಟ ಸೌರಭ್ ಸುರೇಶ್ ಭಂಡಾರಿ ತಿಳಿಸಿದರು.

ಇಂದಿಲ್ಲಿ ಸೋಮವಾರ ರಾತ್ರಿ ಅಂಧೇರಿ ಪೂರ್ವದ ಮರೋಲ್ ವಿಜಯನಗರ ಅಲ್ಲಿನ ವಿನ್ಸೆಂಟ್ ಡಿ’ಪಲೋಟ್ಟಿ ಚರ್ಚ್ ಸಭಾಗೃಹದಲ್ಲಿ ಸಾಂಗತಿ ಕ್ರಿಯೇಶನ್ಸ್ ಮುಂಬಯಿ ಪ್ರಸ್ತುತಿಯ ಪ್ರಪ್ರಥಮ ಚಲನಚಿತ್ರ `ಜಾಂವಂಯ್ ನಂಬರ್ ವನ್’ (ಅಳಿಯ ಸಂಖ್ಯೆ ಒಂದು) ಸಾಮಾಜಿಕ ಮತ್ತು ಹಾಸ್ಯಪ್ರಧಾನ ಕೊಂಕಣಿ ಚಲನಚಿತ್ರದ ಧ್ವನಿಸುರುಳಿ ಮತ್ತು ಚಿತ್ರದ ತುಣುಕು ಪ್ರದರ್ಶನ (ಟ್ರೇಲರ್) ಇಂದಿಲ್ಲಿ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿ ಉಪಸ್ಥಿತರಿದ್ದು ನಟ ಸೌರಭ್ ಮಾತನಾಡಿದರು.

ಶುದ್ಧಮನಸ್ಸು ಉಳ್ಳವರಿಂದ ಮಾತ್ರ ಮಾತೃಭಾಷಾ ಸಿನೆಮಾ ರಚನೆ ಸಾಧ್ಯ. ಕಾರಣ ಒಂದು ಸಿನೇಮಾ ನಿರ್ಮಾಣ ಎಂದರೆ ಪುನರ್ಜನ್ಮದ ಬದುಕು ಆಗಿರುತ್ತದೆ. ನಿಸ್ಪೃಹ ದುಡಿಮೆ, ಪರಿಶ್ರಮ, ತಾಳ್ಮೆವುಳ್ಳವರಿಂದ ಮಾತ್ರ ಸಿನೇಮ ರಚನೆ ಸಾಧ್ಯ. ಒಂದೊಂದು ಭಾಷೆಯ ಸಿನೆಮಾಗಳು ನಿರ್ಮಾಣ ಆದಾಗ ಆಯಾ ಭಾಷೆಯಲ್ಲಿನ ಹೊಸಹೊಸ ಅಭಿನಯಕರ ಅನಾವರಣ ಸಾಧ್ಯ. ಇದಕ್ಕೆ ನಾನೇ ಸಾಕ್ಷಿ ಆಗಿದ್ದೇನೆ ಎಂದೂ ನಟ ಸೌರಭ್ ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಹಿಂದಿ-ಮರಾಠಿ ಚಿತ್ರನಟ ಅನಂತ್ ಜೋಗ್, ಕೆ.ಕೆ ಗೋಸ್ವಾಮಿ, ಕನ್ನಡಿಗರ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಅಧ್ಯಕ್ಷ ಜೋನ್ ಡಿ’ಸಿಲ್ವಾ, ಮಾಜಿ ಅಧ್ಯಕ್ಷ ಪಿ.ಎನ್ ಶ್ಯಾನ್‍ಭಾಗ್, ಉದ್ಯಮಿ ರೋನಿ ಗೋವಿಯಸ್ ಗೌರವ್ವಾನಿತ ಅತಿಥಿüಗಳಾಗಿ ಹಾಗೂ ಬಾಲಿವುಡ್ ಮತ್ತು `ಜಾಂವಂಯ್ ನಂಬರ್ ವನ್’ ಚಿತ್ರದ ನಟಿ ವರ್ಷ ಉಸ್ಗಾಂವ್ಕರ್, ಚಿತ್ರ ಸಂಪಾದಕ ಅಭಿಷೇಕ್ ಮ್ಹಾಸ್ಕರ್, ಆ್ಯಕ್ಷನ್ ನಟ ಸುನೀಲ್ ರೋಡ್ರಿಗಸ್, ಚಲನಚಿತ್ರದ ರಚನೆಕಾರ, ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್ ಬಾರ್ಕೂರು, ಚಿತ್ರನಿರ್ಮಾಪಕ ಸಂಸ್ಥೆ ಸಾಂಗತಿ ಕ್ರಿಯೇಶನ್ಸ್ ಮುಂಬಯಿ ಇದರ ಮುಖ್ಯಸ್ಥರುಗಳಾದ ವಾಲ್ಟರ್ ಡಿ’ಸೋಜಾ ಕಲ್ಮಾಡಿ, ಸಿರಿಲ್ ಕಾಸ್ತೆಲಿನೋ ಹಾಗೂ ಲಿಯೋ ಫೆರ್ನಾಂಡಿಸ್ ಜೆರಿಮೆರಿ  ಉಪಸ್ಥಿತರಿದ್ದು ನೂತನ ಚಲನಚಿತ್ರದ ಧ್ವನಿಸುರುಳಿ ಮತ್ತು ಟ್ರೇಲರ್ ಬಿಡುಗಡೆ ಗೊಳಿಸಿದರು.

ಸಿನೆಮಾಗಳು ಕಲೆಯೊಳಗಿನ ಬೆಳೆಯನ್ನು ಉತ್ಪಾಧಿಸುವಂತಾಗಬೇಕು. ಮಾತೃಭಾಷಾ ಸಿನೆಮಾಗಳಲ್ಲಿ ತನ್ನಲ್ಲಿನ ಸಂಸ್ಕೃತಿ ಕಂಡುಬರಬೇಕು. ಆವಾಗ ಮಾತ್ರ ಕೊಂಕಣಿ ಚಿತ್ರ ಮೌಲ್ಯಯುತವಾಗುವುದು. `ಜಾಂವಂಯ್ ನಂಬರ್ ವನ್’ನಲ್ಲಿ ಸಂಸ್ಕೃತಿ ಜೊತೆ ಸಂತಸವೂ ಕಾಣುತ್ತಿದೆ. ಈ ಸಿನೆಮಾ ಅತ್ಯುತ್ತಮ ಕೊಂಕಣಿ ಸಿನೆಮಾವಾಗಿ ತೆರೆ ಕಾಣಲಿ ಎಂದು ಪಾಲೆತ್ತಾಡಿ ನುಡಿದರು.

ಹ್ಯಾರಿ ಫೆರ್ನಾಂಡಿಸ್ ಓರ್ವ ನುರಿತ ಚಿತ್ರನಿರ್ದೇಶÀಕರಾಗಿದ್ದಾರೆ ಅಲ್ಲದೆ ಅವರೋರ್ವ ಸರ್ವೋತ್ತಮ ಚುರುಕುತನವುಳ್ಳ ಮಾರ್ಗದರ್ಶಕ. ಯಾವುದೇ ಸೂಚನೆ ಕೊಟ್ಟರೆ ಅದನ್ನು ಮನಪೂರ್ವಕವಾಗಿ ಸ್ವೀಕರಿ ಕಾರ್ಯರೂಪಕ್ಕೆ ತರುವ ಸಾಧಕ ಆದೇ ಅವರ ಒಳ್ಳೆಯ ಗುಣ. ಅವರ ನಿರ್ದೇಶನದ ತುಂಬಾ ಸೂಕ್ಷ ್ಮ ಮತ್ತು  ಅರ್ಥಗರ್ಭಿತವಾಗಿವೆ. ಅಂತೆಯೇ ಈ ಜಾಂವಯ್ ನಂಬರ್ ಒನ್ ಚಿತ್ರವೂ ಕೂಡಾ ನಂಬರ್ ಒನ್ ಸಿನೆಮಾವಾಗಿ ಮೂಡಿ  ಬರಲಿ ಎಂದು ಅನಂತ್ ಜೋಗ್ ಶುಭಕೋರಿದರು.

ಹ್ಯಾರಿ ಫೆರ್ನಾಂಡಿಸ್ ಮಾತನಾಡಿ ಚಲನಚಿತ್ರ ನಿರ್ಮಾಣಕ್ಕೆ ಹಣವೇ ಮುಖ್ಯ. ಆದರೆ ನಿರ್ಮಾಪಕರು ಹೂಡಿದ ಹಣ ವಾಪಾಸು ಬರುತ್ತದೆಯೋ ಇಲ್ಲವೋ ಎಂಬ ಭರವಸೆ ಇರುವುದಿಲ್ಲ, ಆದರೆ ಸಾಂಗಾತಿ ಮೀಡಿಯಾ  ಮಾತೃ ಭಾಷೆಯ ಅಭಿಮಾನದಿಂದ ಈ ಚಿತ್ರಕ್ಕೆ ಹಣ ಹೂಡಿದೆ ಎನ್ನುವುದೇ ಅಭಿಮಾನ. ಅವರಿಗೆ ನನ್ನ ಧನ್ಯವಾದಗಳು. ನನಗೆ ಇನ್ನೂ ಅನೇಕ ಕೊಂಕಣಿ ಚಲನಚಿತ್ರಗಳನ್ನು ರಚಿಸುವ ಆಶೆಯಿದೆ. ಈ ಚಲನಚಿತ್ರ ತುಂಬಾ ಒಳ್ಳೆಯ ಚಿತ್ರವಾಗಿ ಮೂಡಿದ್ದು ಪ್ರೇಕ್ಷಕರರು ವೀಕ್ಷಿಸಿ ಕೊಂಕಣಿ ಭಾಷೆಗೆ ಈ ಚಿತ್ರ ವಜ್ರದಂತಾಗುವಲ್ಲಿ ಸಹಕರಿಸಿ ಎಂದು ಕರೆಯಿತ್ತರು.

ಕೊಂಕಣಿ ಭಾಷೆ ಬೆಳವಣಿಗೆ ಇಂತಹ ಸಿನೆಮಾಗಳ ಅಗತ್ಯವಿದೆ. ಮಾತೃಭಾಷೆಯಲ್ಲಿ ಅನೇಕ ಸಿನೆಮಾಗಳು ಮೂಡಿ ಬರಲಿ. ಅವಾಗ ನವ ನಟ ನಟಿಯರಿಗೆ ತಮ್ಮ ಪ್ರತಿಭೆ ಪ್ರಕಾಶಮಾನವಾಗಿಸಲು ಅವಕಾಶ ದೊರೆಯಲಿದೆ. ಈ ಚಿತ್ರ ಉತ್ತಮ ಪ್ರದರ್ಶನ ನೀಡಲಿದೆ ಎಂದು ಜಾನ್ ಡಿಸಿಲ್ವಾ ಭರವಸೆ ವ್ಯಕ್ತ ಪಡಿಸಿದರು.

ಕೆ.ಕೆ ಗೋಸ್ವಾಮಿ ಮಾತನಾಡಿ ಸೌರಭ್ ಭಂಡಾರಿ ಅವರು ಏನೂ ಮಾತಾನಾಡಿದರು ಎಂದು ತಿಳಿದಿಲ್ಲ. ಆದರೆ ಅವರ ಭಾವನೆಗಲನ್ನು ಅವರ ಮಾತನಾಡಿದ ರೀತಿ ಶೈಲಿಯಲ್ಲೇ ನನಗೆ ಅರ್ಥವಾಯಿತು. ಸಿನೇಮಾಕ್ಕೆ ಭಾಷೆಕ್ಕಿಂತ ತಿಳಿಪಡಿಸುವ ಭಾವನೆಗಳೇ ಮುಖ್ಯ. ಭಾಷೆ ಎನ್ನುವ ತಾರತಮ್ಯ ಬೇಡ. ನಿಷ್ಠೆ ಮತ್ತು ಪೆÇ್ರೀತ್ಸಾಹ ನೀಡಿ ಚಿತ್ರರಂಗವನ್ನು ಪ್ರೀತಿಸೋಣ ಎಂದರು.

ಮಾತೃಭಾಷೆಯಿಂದ ನಾಲ್ಕೂರುಗಳು ಸಮೀಪಿಸುತ್ತವೆ ಎಂದು ಅರಿತ ನನಲ್ಲೂ ಮಾತೃಭಾಷೆಯಲ್ಲಿ ಸಿನೆಮಾ ಮಾಡುವ ಇಚ್ಛೆ ಮೊದಲಿನಿಂದಲೂ ಇತ್ತು. ಆದರೆ ಅದಕ್ಕೆ ಈಗ ಸಮಯ ಕೂಡಿ ಬಂತು. ಈ ಚಿತ್ರದಲ್ಲಿ ನನಗೆ ಸರಿಯದ ಸಮಯಕ್ಕೆ ಭೂಮಿಕೆ ದೊರೆಯಿತು. ಕಲಾಕಾರರಿಗೆ ಪೆÇ್ರೀತ್ಸಾಹ ದೊರೆತಾಗ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯ. ಚಿತ್ರ ನಿರ್ಮಾಣ ನಮ್ಮ ಕೈಯಲ್ಲಿದೆ, ಆದರೆ ಅದನ್ನು ಸೂಪರ್ ಹಿಟ್ ಮಾಡುವುದು ಪ್ರೇಕ್ಷಕರ ಜವಾಬ್ದಾರಿ. ಇಲ್ಲಿನ ನಿರ್ಮಾಪಕರು ಈ ಚಿತ್ರಕ್ಕೆ ಮನಪೂರ್ವಕವಾಗಿ ಖರ್ಚು ಮಾಡಿದ್ದಾರೆ. ಇಂತಹ ಭಾಷಾಭಿಮಾನಿಗಳಿಂದ ಇನ್ನೂ ಕೊಂಕಣಿ ಭಾಷಾ ಸಿನೆಮಾಗಳು ಸೃಷ್ಠಿಯಾಗಲಿ ಇವಕ್ಕೆಲ್ಲಾ ಪ್ರೇಕ್ಷಕರ ಪೆÇ್ರೀತ್ಸಾಹವೇ ಸಿನೆಮಾಗಳ ಆಗಿದೆ.

ಸಾಂಗಾತಿ ವಿೂಡಿಯಾ ಎಲ್ಲಾ ಸದಸ್ಯರಿಗೆ ನಮ್ಮ ಅಭಿನಂದನೆಗಳು. ಎಲ್ಲಾ ಕೊಂಕಣಿಗರು ಸಿನೆಮಾವನ್ನು ವೀಕ್ಷಿಸಿ ಪೆÇ್ರೀತ್ಸಾಹಿಸಬೇಕು. ಈ ತಂಡದಿಂದ ಇನ್ನೂ ನೂರಾರು ಸಿನೇಮಾಗಳು ನಿರ್ಮಾಣವಾಗಲಿಎಂದು ಆ್ಯಂಟನಿ ಹಾರೈಸಿದರು.

ಕೊಂಕಣಿ ಸಂಗೀತ ಬಳಗ ಜೆರಿಮೆರಿ ತಂಡವು ಸ್ವಾಗತಗೀತೆಯನ್ನಾಡಿದರು. ಸಿರಿಲ್ ಕಾಸ್ತೆಲಿನೋ ಅತಿಥಿüಗಳನ್ನು ಪರಿಚಯಿಸಿದರು. ಜೋಸೆಫ್ ಪತ್ರಾವೊ, ಆಶ್ವಿನಿ ವಾಲ್ಟರ್ ಡಿ’ಸೋಜಾ, ಲಿಲ್ಲಿ ಲಿಯೋ ಫೆರ್ನಾಂಡಿಸ್, ಡೈನ ಸಿರಿಲ್ ಕಾಸ್ತೆಲಿನೋ, ರೋಕ್ ಡಿ’ಕುನ್ಹಾ, ಬ್ಲ್ಯಾನಿ ಡಿ’ಕೋಸ್ತಾ, ಲ್ಯಾನ್ಸಿ ಡಿ’ಸೋಜಾ, ಜೆರೋಮ್ ಲೋಬೊ, ಹೆಲೆನ್ ನೊರೋನ್ಹಾ, ಟೋನಿ ಮಾರ್ಟಿಸ್, ಪೀಟರ್ ರೆಬೆರೋ, ಜೋರ್ಜ್ ಡಿ’ಸೋಜಾ ಭಯಂದರ್, ಫ್ರಾನ್ಸಿಸ್ ಒಲಿವೆರಾ, ಲೆವಿನ್ ಲಿಯೋ ಫೆರ್ನಾಂಡಿಸ್, ಗ್ರೆಗೋರಿ ನಿಡ್ಡೋಡಿ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಸ್ಟೀವನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. ಲಿಯೋ ಫೆರ್ನಾಂಡಿಸ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ವಂದನಾರ್ಪಣೆಗೈದರು.

ಜಾಂವಂಯ್ ನಂಬರ್ ವನ್:
ಬೋಜ್‍ಪುರಿ, ಬಾಲಿವುಡ್ ಹಾಗೂ ಕೊಂಕಣಿ ಚಲನಚಿತ್ರಗಳನ್ನು ನಿರ್ದೇಶಿಸಿದ ಅನುಭವೀ ಚಿತ್ರನಿರ್ದೇಶಕ ಹ್ಯಾರಿ ಫೆರ್ನಾಂಡಿಸ್ ಬಾರ್ಕೂರು ಕಥೆ ರಚನೆÉ ಹಾಗೂ ಸ್ವನಿರ್ದೇಶನದಲ್ಲಿ `ಜಾಂವಂಯ್ ನಂಬರ್ ವನ್’ ಸಿದ್ಧಗೊಂಡಿದೆ. ಸಂಗಾತಿ ಕ್ರಿಯೇಶನ್ಸ್ ಮುಂಬಯಿ ನಿರ್ಮಾಪಕತ್ವದಲ್ಲಿ ತಯಾರಾದ ಚಿತ್ರದಲ್ಲಿ ಹಾಸ್ಯಪ್ರಧಾನ ಕೊಂಕಣಿ ಚಿತ್ರದಲ್ಲಿ ದೀಪಕ್ ಪಾಲಡ್ಕ ನಾಯಕ ನಟನಾಗಿ ಮತ್ತು ಜೊಸಿಟಾ ಅನೊಲ್ ರೋಡ್ರಿಗಸ್ ನಾಯಕಿ ನಟಿ ಪಾತ್ರ ನಿಭಾಯಿಸಿ ದ್ದಾರೆ. ಪ್ರಿನ್ಸ್ ಜಾಕೋಬ್ ಗೋವಾ, ರಂಜಿತಾ ಲೂಯಿಸ್, ಸ್ಟಾ ್ಯನಿ ಅಲ್ವಾರಿಸ್, ಕೆವಿನ್ ಡಿ’ಮೆಲ್ಲೊ, ಕ್ಲ್ಯಾನ್‍ವಿನ್ ಫೆರ್ನಾಂಡಿಸ್ ಮತ್ತಿತರ ಸಹಕಲಾವಿದರು ಅಭಿನಯಿಸಿದ್ದಾರೆ. ಬೃಹನ್ಮುಂಬಯಿಯಲ್ಲಿ `ತ್ರಿಮೂರ್ತಿ ಕಲಾ ಸಂಘಟಕರು’ ಎಂದೇ ಪ್ರಸಿದ್ಧ ವಾಲ್ಟರ್ ಡಿ’ಸೋಜಾ  ಕಲ್ಮಾಡಿ, ಸಿರಿಲ್ ಕಾಸ್ತೆಲಿನೋ ಹಾಗೂ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಇವರ `ಸಾಂಗತಿ ಕ್ರಿಯೇಶನ್ಸ್ ಮುಂಬಯಿ’ ಬ್ಯಾನರ್‍ನಡಿ ತಯಾರಾಗಿದೆ. ಜೆರಿ ಬೋಂದೆಲ್, ಲಾಯ್ಡ್ ರೆಗೋ, ಹ್ಯಾರಿ ಫೆರ್ನಾಂಡಿಸ್ ರಚಿತ ಹಾಡುಗಳಿಗೆ ಎರಿಕ್ ಓಝೇರಿಯೊ, ಜೆರಿ ಬೋಂದೆಲ್, ಗುಣ್‍ವಂತ್ ಸೆನ್ ಸಂಗೀತ ನೀಡಿದ್ದಾರೆ. ಶಫೀಕ್ ಶೇಖ್ ಅವರ ಛಾಯಾಗ್ರಹಣ ನಿರ್ದೇಶನ (ಡಿಒಪಿ)ದಲ್ಲಿ ಮೂಡಿವ ಚಿತ್ರಕ್ಕೆ ನವೀನ್ ಆರ್ಯಾನ್ ಕೋರಿಯೋಗ್ರಾಫಿ ಮಾಡಿರುವರು. ಅಭಿಷೇಕ್ ಮ್ಹಾಸ್ಕರ್ ಸಂಪಾದಕರಾಗಿ, ಸುನೀಲ್ ರೋಡ್ರಿಗಸ್ ಸಾಹಸ ಅಭಿನಯ ನೀಡಿದ್ದು ಡಿಜಿಲೋಕ್ಸ್ ಚಿತ್ರ ರಚಿಸಿದೆ. ಕರೆಲ್ ಪ್ರೇಮ್ ಡಿ’ಸೋಜಾ ಚಿತ್ರ ಉತ್ಪನ್ನ ಮೇಲ್ವಿಚರಾಕರಾಗಿ ಶ್ರಮಿಸಿದ್ದಾರೆ.

Comments on this Article
James Fernandes, Barkur Chicago Sat, January-13-2018, 12:59
Bravo Harry Fernandes; You are an embodiment to prove "The humble ARE exaulted."
Agree[1]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi