Brief Udupi, Kemmannu news with pictures


Kemmannu News Network, 01-02-2018 09:31:59


Write Comment     |     E-Mail To a Friend     |     Facebook     |     Twitter     |     Print


ಅಣಬೆ ಬೇಸಾಯ ಕುರಿತು ತರಬೇತಿ ಕಾರ್ಯಕ್ರಮ

ಉಡುಪಿ : ಅಣಬೆ ಬೇಸಾಯದಿಂದ ಹೆಚ್ಚಿನ ಲಾಭವಿದೆ. ರೈತ ಮಹಿಳೆಯರು ಅಣಬೆ ಬೇಸಾಯದ ಬಗ್ಗೆ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯತ್ ಸದಸ್ಯರಾದ ಶಶಿಪ್ರಭಾ ಹೇಳಿದರು.

ಅವರಿಂದು ತೋಟಗಾರಿಕೆ ಇಲಾಖೆ, ಉಡುಪಿ ಹಾಗೂ ಜೇಸಿಐ, ಕಾಪು ಇವರ ಜಂಟಿ ಆಶ್ರಯದಲ್ಲಿ ಅಯ್ಯಣ್ಣ ಹಿರಿಯ ಪ್ರಾಥಮಿಕ ಶಾಲೆ, ಪಡಕಳತ್ತೂರಿನಲ್ಲಿ ನಡೆದ ಇಲಾಖಾ ಪ್ರಯೋಗ ಶಾಲೆಗಳ ಅಭಿವೃದ್ಧಿ ಯೋಜನೆಯಡಿ ಅಣಬೆ ಬೇಸಾಯ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮೂಡುಬಿದರೆ ಆಳ್ವಾಸ್ ಮಹಾವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಬಿ ರಾಘವೇಂದ್ರ ರಾವ್ ಸಂನ್ಮೂಲವ್ಯಕ್ತಿಯಾಗಿ ಭಾಗವಹಿಸಿ, ಅಣಬೆ ಬೇಸಾಯದ ಕುರಿತು ಪ್ರಾತ್ಯಕ್ಷತೆ ನೀಡಿ ಸಂಪೂರ್ಣ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಧೀರಜ್, ಒಕ್ಕೂಟ ಅಧ್ಯಕ್ಷ ಸಂಜೀವ್ ಕುಲಾಲ್,ಜೇಸಿಐ ಅಧ್ಯಕ್ಷ ರಮೇಶ್  ನಾಯ್ಕ್, ಮತ್ತಿತರು ಉಪಸ್ಥಿತರಿದ್ದರು.

 ತೋಟಗಾರಿಕೆಯ ಹಿರಿಯ ಸಹಾಯಕ ನಿರ್ದೇಶಕರು ಎಲ್.ಹೇಮಂತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು

Supermoon as seen by Dr. Avila D’zouza from Kemmannu.

Kemmannu, Jan 31, 2018: India along with North America, Hawaii, the Middle East, Russia, and Australia have witnessed a rare cosmic show by moon today. For the stargazers, the moon was 360,200 kilometers away at the peak of the eclipse, close enough for supermoon status.

It’s the first time in 35 years a blue moon has synced up with a supermoon and a total lunar eclipse. In India, the eclipse was seen by the people of North-East between 4:21 PM and 5:18 PM.

Rest part of India got a glimp ..

The eclipse lasted for more than an hour in the country.

NASA has called it a lunar trifecta: the first super blue blood moon since 1982. That combination won’t happen again until 2028 and the other one in 2037.
The second full moon in a calendar month is a blue moon. This one also happens to be an especially close and bright moon, or supermoon. Add a total eclipse, known as a blood moon for its red tint, and it’s a lunar showstopper.

A lunar eclipse occurs when the sun, Earth and moon line up perfectly, casting Earth’s shadow on the moon.
The celestial show was the result of the Sun, Earth, and Moon lining up perfectly for a lunar eclipse just as the Moon is near its closest orbit point to Earth, making it appear "super" large.
The "blood" in the name comes from the reddish brown color the Moon takes on when Earth enters between it and the Sun, cutting off the light rays that usually brighten the lunar surface.

Supermoon as seen by Dr. Avila D’zouza from Kemmannu.

Supermoon as seen by Dr. Avila D’zouza from Kemmannu.

Supermoon as seen by Dr. Avila D’zouza from Kemmannu.

ಜಿಲ್ಲಾ ಯೋಜನಾ ಸಮಿತಿ ಸಭೆ

ಉಡುಪಿ :- ಸ್ಥಳೀಯ ಸಂಸ್ಥೆಗಳ ಕ್ರಿಯಾ ಯೋಜನೆಯಡಿ 2017-18ನೇ ಸಾಲಿಗೆ ಪಂಚಾಯತ್‍ರಾಜ್ ಸಂಸ್ಥೆಗಳಿಗೆ ಸರ್ಕಾರದಿಂದ ಜಿಲ್ಲಾ ವಲಯ ಯೋಜನೆಯಡಿ ರೂ. 434.21 ಕೋಟಿ ಅನುದಾನ ನಿಗದಿಯಾಗಿದೆ.

     ಜಿಲ್ಲಾ ಪಂಚಾಯತ್‍ಗೆ 148.60 ಕೋಟಿ, ತಾಲೂಕು ಪಂಚಾಯತ್‍ಗೆ 267.84 ಕೋಟಿ,  ಗ್ರಾಮಪಂಚಾಯತ್‍ಗೆ 17.76 ಕೋಟಿ ಅನುದಾನಕ್ಕೆ ಸಂಬಂಧಿಸಿ ಕ್ರಿಯಾಯೋಜನೆ ತಯಾರಿಸಿ 22.6.17ರಂದು ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಿವರಿಸಿದರು.

       ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆ ಇಂದು ಜಿಲ್ಲಾ ಪಂಚಾಯತ್‍ನ ಡಾ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಿತು.

    ತಾಲೂಕು ಪಂಚಾಯತ್ ಅನುದಾನಕ್ಕೆ ಸಂಬಂದಿಸಿದಂತೆ ಕ್ರಿಯಾ ಯೋಜನೆಯಡಿ ಉಡುಪಿಗೆ 111.83 ಕೋಟಿ, ಕುಂದಾಪುರ 98.56 ಕೋಟಿ, ಕಾರ್ಕಳದಲ್ಲಿ 57.45 ಕೋಟಿ ಒಟ್ಟು 267.84 ಕೋಟಿ ಯೋಜನೆಗೂ ಅನುಮೋದನೆ ಪಡೆಯಲಾಯಿತು.

        ಗ್ರಾಮ ಪಂಚಾಯತ್ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಉಡುಪಿ ಶಾಸನಬದ್ಧ ಅನುದಾನ 648 ಲಕ್ಷ, 14ನೇ ಹಣಕಾಸಿನಡಿ 685.55 ಲಕ್ಷ, ಕುಂದಾಪುರ 685, 659.76, ಕಾರ್ಕಳ 356, 1695.86 ಲಕ್ಷ ರೂ.ಗಳಿಗೆ ಅನುಮೋದನೆ ಪಡೆಯಲಾಗಿದೆ.

      ಇಂದು ನಡೆದ ಸಭೆ ಜಿಲ್ಲಾ ಯೋಜನಾ ಸಮಿತಿಯ ಎರಡನೇ ಸಭೆಯಾಗಿದ್ದು, ಕ್ರಿಯಾ ಯೋಜನೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಎಸ್ ಜನಾರ್ಧನ್, ಎನ್ ಎಸ್ ಶೆಟ್ಟಿ ಅವರು ಮಾಹಿತಿ ನೀಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ವ್ಯವಸ್ಥೆಯ ಧ್ಯೇಯ,ತ್ರಿಸ್ತರ ಆಡಳಿತ ವ್ಯವಸ್ಥೆಯ ಪಾತ್ರದ ಬಗ್ಗೆ ವಿವರಿಸಿದ ಅವರು, ಯೋಜನಾ ಸಮಿತಿ ಹೆಚ್ಚು ಕ್ರಿಯಾಶೀಲವಾಗಿರಬೇಕು. ಇಲ್ಲಿ ರೂಪಿಸಿದ ಯೋಜನೆಗಳ ರಾಜ್ಯ ಬಜೆಟ್‍ನಲ್ಲಿ ಪ್ರತಿಬಿಂಬಿತವಾಗಬೇಕೆಂದರು.

     ಗ್ರಾಮ ಮಟ್ಟದಲ್ಲಿ ಯೋಜನೆಗಳ ಯಶಸ್ವಿಯಾಗಬೇಕಾದರೆ ಮೂರು ಮುಖ್ಯ ಘಟಕಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಅನುಷ್ಠಾನ ಶಕ್ತಿ ದೊರೆಯಬೇಕೆಂದರು.

ಕಳೆದ ಸಾಲಿಗಿಂತ 46.47 ಕೋಟಿ ಅನುದಾನ ಹೆಚ್ಚುವರಿಯಾಗಿ ಕೋರಲಾಗಿದ್ದು, ನಮ್ಮ ಜಿಲ್ಲೆಯ  ನಮ್ಮ ಗ್ರಾಮ ನಮ್ಮ ಯೋಜನೆ ‘ಉತ್ತಮ ಮಾದರಿ’ಯಾಗಿದೆ ಎಂದರು.

      ಯೋಜನ ಸಮಿತಿ ಸಭೆಯಲ್ಲೂ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಘನ ಮತ್ತು ದ್ರವ ತ್ಯಾಜ್ಯ ವಿಲೇ ಬಗ್ಗೆ ಸವಿವರ ಚರ್ಚೆ ನಡೆಯಿತಲ್ಲದೆ, ತ್ಯಾಜ್ಯ ಸಂಪನ್ಮೂಲವಾಗಿ ಪರಿವರ್ತನೆಯಾದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

      ಯೋಜನೆ ಅನುಷ್ಠಾನ ಕೋಟೇಶ್ವರ, ಸಾಲಿಗ್ರಾಮ, ಗಂಗೊಳ್ಳಿಯಂತಹ ಪಂಚಾಯತ್‍ಗಳಲ್ಲಿ ಅನುಷ್ಠಾನಗೊಳ್ಳಲು ಮುಖ್ಯ ಯೋಜನಾಧಿಕಾರಿಗಳು ಖುದ್ದು ಭೇಟಿ ನೀಡಿ ಪಿಡಿಒಗಳನ್ನು ಬೆಂಬಲಿಸುವ ಕೆಲಸವಾಗಬೇಕೆಂದು ಶಾಸಕರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
        ಸೀತಾನದಿಯನ್ನು ಕೋಳಿತ್ಯಾಜ್ಯದಿಂದ ಕಲುಷಿತಗೊಳಿಸುತ್ತಿರುವ ಬಗ್ಗೆ ತಾಲೂಕು ಪಂಚಾಯತ್ ಸದಸ್ಯರು ಗಮನಸೆಳೆದಾಗ ವಾರಂಬಳ್ಳಿ ಮಾದರಿಯನ್ನು ಅಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯ ಯೋಜನಾಧಿಕಾರಿ ಶ್ರೀನಿವಾಸರಾವ್ ವಿವರಿಸಿದರು.

      ಕ್ರಿಯಾ ಯೋಜನೆಯಲ್ಲಿ ಕೃಷಿಗೆ ನೀರು ಪೂರೈಕೆ ಬಗ್ಗೆ ಏನು ಕ್ರಮಕೈಗೊಳ್ಳಲಾಗಿದೆ ಎಂದು ತಾಲೂಕು ಪಂಚಾಯತ್ ಸದಸ್ಯರಾದ ಭುಜಂಗ ಶೆಟ್ಟಿ ಅವರು ಪ್ರಶ್ನಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಯೋಜನಾ ಸಮಿತಿ ಸದಸ್ಯ ಕಾರ್ಯದರ್ಶಿಗಳೂ ಆದ ಶಿವಾನಂದ ಕಾಪಶಿ, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಸಭೆಯಲ್ಲಿದ್ದರು.

ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು, ನಗರ ಸ್ಥಳೀಯ ಸಂಸ್ಥೆಯ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Kemmannu Main Road [Work-in-progress, Pictures upd
View More

Need your helping hand...Need your helping hand...
Mount Rosary Church Annoucement for the weekMount Rosary Church Annoucement for the week
Blood Drive - 2 at Kemmannu on March 4.Blood Drive - 2 at Kemmannu on March 4.
Rozaricho Gaanch December 2017Rozaricho Gaanch December 2017
Milarchi Laram - Issue Jan 2018Milarchi Laram - Issue Jan 2018
"GOOD NEWS FOR NON RESIDENT INDIANS" SHORT TERM RENTAL FULLY FURNISHED ACCOMMODATION AVAILABLE AT UDUPI NOW"
Souza’s Mega Festival SaleSouza’s Mega Festival Sale
Read online Uzvaad:<font color=red> Read online Uzvaad</font color=red>:
Visit Axis Bank Now open in Kallianpura, SanthekatteVisit Axis Bank Now open in Kallianpura, Santhekatte
For all your travel needs contact Sequeira TouristFor all your travel needs contact Sequeira Tourist
Become a professional or part time trader or take Forex Trading as a hobby. We will provide our assistance to you in your success. Click here to know more....Become a professional or part time trader or take Forex Trading as a hobby. We will provide our assistance to you in your success. Click here to know more....
Power Care Services, MoodubellePower Care Services, Moodubelle
Ganapahti Co-operative Agricultural BankGanapahti Co-operative Agricultural Bank
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India
Mangalorean Fertility Physician in New York

 

Mangalorean Fertility Physician in New York

 

For information, please email nigelepereira.wcmc@gmail.com or contact Megi Zeku at 646-962-7499, prompt 3.

 

 

Thank you from Kemmannu.comContact for all your Travel, Tours and For Rent a Car

Contact Maria Travels  for all your Travel, Tours and For Rent a Car Mob: 9980889512 or 9819444307

Thanksgiving to St. Lawrance

Thanksgiving to St. Lawrance

SAHARA

Sponsored Albums