Brief Udupi News with Pictures


Richard Dsouza
Kemmannu News Network, 10-02-2018 11:34:07


Write Comment     |     E-Mail To a Friend     |     Facebook     |     Twitter     |     Print


ಕಾನೂನು ಸೇವಾ ಪ್ರಾಧಿಕಾರದಿಂದ ಬ್ಯಾಂಕ್‍ನಲ್ಲೇ ಜನತಾ ಅದಾಲತ್

ಉಡುಪಿ :- ಬ್ಯಾಂಕ್ ಗ್ರಾಹಕರ ಹಿತವನ್ನು ಗಮನದಲ್ಲಿರಿಸಿ ಹಾಗೂ ನ್ಯಾಯಾಲಯದಲ್ಲಿ ಅರ್ಜಿಗಳು ಸಣ್ಣ ಕಾರಣಗಳಿಂದ ಬಾಕಿ ಉಳಿಯಬಾರದೆಂಬ ಹಿನ್ನಲೆಯಲ್ಲಿ ಜನತಾ ಅದಾಲತನ್ನು ಬ್ಯಾಂಕ್‍ನಲ್ಲೇ ಆಯೋಜಿಸಲಾಗಿದೆ.  ವಿವಿಧ ಕಾರಣಗಳಿಂದ ಸಾಲ ಪಡೆದುಕೊಂಡ ಗ್ರಾಹಕರು ಅನಿವಾರ್ಯವಾಗಿ ಸಾಲ ಕಟ್ಟದ ಪರಿಸ್ಥಿತಿ ಬಗ್ಗೆ ಅರಿತು ರಾಜಿ ಸಂಧಾನ ಮೂಲಕ ಸಮಸ್ಯೆ ಬಗೆಹರಿಸÀಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಹೇಳಿದರು.

       ಅವರು ಇಂದು ಉಡುಪಿ ಸಿಂಡಿಕೇಟ್ ಬ್ಯಾಂಕ್, ಪ್ರಾದೇಶಿಕ ಕಚೇರಿಯ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ಸಿಂಡಿಕೇಟ್ ಬ್ಯಾಂಕ್, ಪ್ರಾದೇಶಿಕ ಕಚೇರಿ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜನತಾ ಅದಾಲತ್, ಮಧ್ಯಸ್ಥಿಕೆ ಮತ್ತು ಸಮಾಲೋಚನೆ ವಿಷಯವಾಗಿ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

         ಸಾಮಾನ್ಯ ಜನರಿಗೆ ನ್ಯಾಯಾಲಯ ಎಂದರೆ ಅಂಜಿಕೆ ಇರುತ್ತದೆ, ನ್ಯಾಯಾಲಯಕ್ಕೆ ಬರಲು ಅಂಜುತ್ತಾರೆ ನ್ಯಾಯಾಲಯದ ಬಗ್ಗೆ ಅವರಲ್ಲಿ ತಪ್ಪು ಕಲ್ಪನೆ ಬರುವುದರಿಂದ ಬ್ಯಾಂಕ್‍ಗಳಲ್ಲಿ ಜನತಾ ಅದಾಲತ್ ನಡೆಸಲಾಗುತ್ತಿದೆ. ಸಾಲ ಪಡೆದು ಕೊಂಡ ಗ್ರಾಹಕರು ಸಾಕಷ್ಟು ಸಮಸ್ಯೆಗಳಿಂದ ಸಾಲ ಮರುಪಾವತಿಸದೇ ಸಂಕಷ್ಟಕ್ಕೀಡಾಗುತ್ತಾರೆ. ಅಂಥವರಿಗೆ  ಬಡ್ಡಿಯಲ್ಲಿ ರಿಯಾಯಿತಿ, ತಮ್ಮ ಸ್ಥಿತಿಗತಿಗೆ ಅನುಗುಣವಾಗಿ ರಿಯಾಯಿತಿ, ಹಾಗೂ ಅದಾಲತ್‍ನಲ್ಲಿ ತೀರ್ಮಾನವಾಗುವ ಗ್ರಾಹಕಪರ ತೀರ್ಪಿನಿಂದ ಪರಿಹಾರ ದೊರಕುತ್ತದೆ ಎಂದರು.

        ಪ್ರತೀ ಎರಡು ತಿಂಗಳಿಗೊಮ್ಮೆ ಎರಡನೇ ಶನಿವಾರದಂದು ಜನತಾ ಆದಾಲತ್ ನಡೆಸಲಾಗುತ್ತದೆ. ಇದರ ಉದ್ದೇಶ ನ್ಯಾಯಾಲಯದಲ್ಲಿ ಬಾಕಿ ಇರುವ ವಿಷಯವನ್ನು ಅದಾಲತ್‍ನಲ್ಲಿ ಶಾಂತಿಯುತವಾಗಿ ಪರಿಹರಿಸಿ, ತೀರ್ಪನ್ನು ನೀಡಲಾಗುತ್ತದೆ. ಇಲ್ಲಿ ಕೈಗೊಳ್ಳುವ ತೀರ್ಪು ನ್ಯಾಯಾಲಯದಲ್ಲಿ ತೀರ್ಪುಗೊಳ್ಳುವಷ್ಟೇ ಪ್ರಾಮುಖ್ಯವಾಗಿರುತ್ತದೆ ಎಂದರು.

ಅದಾಲತ್ ನಡೆಸುವ ಮೊದಲು ಜನರಿಗೆ ಕಾನೂನಿನ ಮಾಹಿತಿ ಅಗತ್ಯ. ನ್ಯಾಯಾಲಯದಲ್ಲಿ ಕೇವಲ ನ್ಯಾಯಾಧೀಶರು ತೀರ್ಪು ಕೊಡುವುದು ಮಾತ್ರವಲ್ಲದೆ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಅತೀ ಶೀಘ್ರವಾಗಿ ಹೆಚ್ಚು ಖರ್ಚು ಇಲ್ಲದೆ, ಸ್ಲಲ್ಪ ಸಮಯದಲ್ಲಿ ಇತ್ಯರ್ಥಗೊಳಿಸುತ್ತಲು ಅದಾಲತ್‍ಗಳನ್ನು ನಡೆಸಲಾಗುತ್ತದೆ ಎಂಬುವುದನ್ನು ಸಾಮಾನ್ಯ ಜನರು ಅರಿತು ಕೊಳ್ಳಬೇಕು.

           ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ವಕೀಲರು ಹಾಗೂ ಮಧ್ಯಸ್ಥಿಕೆದಾರಾದ ಕೆ.ಶ್ರೀಶ ಆಚಾರ್ ಮಾತನಾಡಿ, ಜನತಾ ಆದಾಲತ್‍ನ ಮುಖ್ಯ ಉದ್ದೇಶ ನಮ್ಮಲ್ಲಿ ಇರುವ ಭಿನ್ನಾಭಿಪ್ರಾಯ ಹಾಗೂ ನಮಗೆ ಇರುವ ಕಷ್ಟವನ್ನು ನಾವೇ ನಿವಾರಿಸಿಕೊಳ್ಳುವುದು. ಅದಾಲತ್ ಅನ್ನೋದು ಕೇವಲ ಬ್ಯಾಂಕಿಗೆ ಮಾತ್ರ ಸೀಮಿತವಿರದೆ, ಕುಟುಂಬದಲ್ಲಿರುವ  ವೈವಾಹಿಕ ಜೀವನ, ಅಪಘಾತ ಪರಿಹಾರ, ಜಗಳ, ಆಸ್ತಿ ವಿಚಾರ, ಚೆಕ್‍ಗಳಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವುದು ಕೂಡ ಜನತಾ ಅದಾಲತ್‍ನ ಕಾರ್ಯಸೂಚಿಗಳಲ್ಲಿದೆ.

         ನ್ಯಾಯಾಲಯಗಳನ್ನು ವಿಷಯ ಮಂಡನೆ ಮಾಡಿ, ಅದರ ಬಗ್ಗೆ ಸಮಾಲೋಚನೆ ನಡೆಸಿ ತೀರ್ಪು ನೀಡಿದರೆ ಅದನ್ನು ಮತ್ತೆ ಮೇಲ್ಮನವಿಗೆ ಸಲ್ಲಿಸಿ, ಅಲ್ಲಿ ಅರಿಶೀಲಿಸಬೇಕಾಗುತ್ತದೆ.  ಆದರೆ ಅದಾಲತ್‍ನಲ್ಲಿ ತೀರ್ಪು ಸಿಕ್ಕಿದ ಬಳಿಕ ಅದು ಅಲ್ಲಿಯೇ ಇತ್ಯರ್ಥಗೊಳ್ಳತ್ತದೆ. ಇದರಿಂದ ವ್ಯಕ್ತಿಗೆ ಮಾನಸಿಕವಾಗಿ ಗೆಲುವು ಸಿಗುತ್ತದೆ ಹಾಗೂ ಸಾಲ ಕೊಟ್ಟವನಿಗೆ ನೆಮ್ಮದಿ ಸಿಕ್ಕಿದಂತಾಗುತ್ತದೆ ಎಂದರು.

       ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಕಿನ ಪ್ರಾದೇಶಿಕ ಕಚೇರಿಯ ಡೆಪ್ಯುಟಿ ಜನರಲ್ ಮೆನೇಜರ್ ಎಸ್.ಎಸ್.ಹೆಗಡೆ, ಸಿಂಡಿಕೇಟ್ ಬ್ಯಾಂಕಿನ ಮುಖ್ಯ ಪ್ರಬಂಧಕರು ಡೇಸಿಯಂ ಡಿಸೋಜಾ, ಉಡುಪಿ ವಕೀಲರ ಸಂಘದ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ ಉಪಸ್ಥಿತರಿದ್ದರು.

    ಉಡುಪಿ ಸಿಂಡಿಕೇಟ್ ಬ್ಯಾಂಕಿನ ಮುಖ್ಯ ಪ್ರಬಂಧಕರಾದ ಡೇಸಿಯಂ ಡಿಸೋಜಾ ಸ್ವಾಗತಿಸಿದೆ. ರೇಖಾ ಹಾಗೂ ತನುಶ್ರಿ ಪ್ರಾರ್ಥಿಸಿದರು. ಅಸಿಸ್ಟೆಂಟ್ ಮ್ಯಾನೇಜರ್ ರಾಮಚಂದ್ರ ಮುದ್ದೋಡಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ರಸ್ತೆ ಸುರಕ್ಷತಾ ಸಮಿತಿ ಸಭೆ

ಉಡುಪಿ:- ಉಡುಪಿ ನಗರದ ಬ್ರಹ್ಮಗಿರಿ ವೃತ್ತದಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲು ಇಂದು ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯಲ್ಲಿ ನಿರ್ಧರಿಸಲಾಯಿತು. 

     ಅಪರ ಜಿಲ್ಲಾಧಿಕಾರಿ ಅನುರಾಧ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಸೂಚಿಯನ್ನು ಮಂಡಿಸಿದ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ರಮೇಶ್ ವರ್ಣೇಕರ್ ಅವರು, ಒಟ್ಟು 13 ವಿಷಯಗಳನ್ನು ಸಭೆಯಲ್ಲಿ ಮಂಡಿಸಿದರು.

      ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯ ನಾಲ್ಕು ಶಾಲೆಗಳ ಬಳಿ ನಿಧಾನವಾಗಿ ಚಲಿಸಿ ಎನ್ನುವ ಸೂಚನಾ ಫಲಕ ಅಳವಡಿಸಲು ಕೋರಿ ಬಂದಿದ್ದ ಮನವಿಗೆ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಸಂತೆಕಟ್ಟೆ ಕೆಜಿ ರೋಡ್ ಮಧ್ಯೆ ಬಸ್ಸು ನಿಲುಗಡೆ ಕೋರಿ ಬಂದ ಮನವಿಯನ್ನು ರಸ್ತೆ ಕಾಮಗಾರಿ ಬಳಿಕ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

       ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ನಿಟ್ಟೂರು ಆಭರಣ ಮೋಟಾರ್ಸ್ ಶೋ ರೂಂ ಮುಂಭಾಗದ ಬಸ್ಸು ನಿಲುಗಡೆಯನ್ನು ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಉಪ ನಿರೀಕ್ಷಕರು ಉಡುಪಿ ನಗರ ಪೊಲೀಸ್ ಠಾಣೆಯವರಿಂದ ಬಂದ ಮನವಿಗೆ ಸಭೆ ಸಮ್ಮತಿ ವ್ಯಕ್ತಪಡಿಸಿತು.

      ಎಂಟಿಆರ್ ಹೋಟೇಲ್ ಬಳಿ ರಿಕ್ಷಾ ನಿಲ್ದಾಣ ಅನುಮತಿ ಕೋರಿದ ಚರ್ಚೆ ನಡೆಸಿದ್ದು, ಅಲ್ಲಿ ಸಾಕಷ್ಟು ಜಾಗ ಇಲ್ಲದ ಕಾರಣ ರಿಕ್ಷಾ ನಿಲ್ದಾಣಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಚರ್ಚಿಸಲಾಯಿತು. ಎಂಜಿಎಂ ಕಾಲೇಜು ಕ್ರೀಡಾಂಗಣದ ಹತ್ತಿರ ಶಾರದಾ ರೆಸಿಡೆನ್ಸಿಯಲ್  ಸ್ಕೂಲ್ ಹಾಸ್ಟೆಲ್ ಎದುರು ರಸ್ತೆಗೆ ಹಂಪ್ಸ್‍ನ್ನು ನಿರ್ಮಿಸಲು ಸಭೆಯಲ್ಲಿ ಸೂಚಿಸಲಾಯಿತು ಹಾಗೂ ನಗರ ಸಭಾ ವ್ಯಾಪ್ತಿಯ ಕಸ್ತೂರ್ ಬಾ ನಗರ ವ್ಯಾಪ್ತಿಗೆ ಸೇರಿದೆ ಡಯಾನಾ ಟಾಕೀಸ್ ಹತ್ತಿರ ಅಟೊ ನಿಲ್ದಾಣವನ್ನು ರಚನೆ ಮಾಡಿಕೊಳ್ಳಲು ಅನುಮತಿ ಕೋರಿದ್ದು, ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು.

          ಉಡುಪಿ ನಗರ ಸಭಾ ವ್ಯಾಪ್ತಿಯ ಪರ್ಕಳ ರಿಕ್ಷಾ ನಿಲ್ದಾಣದ ಬಳಿ ಹೆಚ್ಚುವರಿ ನಿಲ್ದಾಣಕ್ಕೆ ಅನುಮತಿ ನೀಡಬೇಕಾಗಿ ಮನವಿ ಸಲ್ಲಿಸಿದ್ದು, ಅಲ್ಲಿ ಜಾಗವಿಲ್ಲದ ಕಾರಣ ಹೆಚ್ಚುವರಿ ನಿಲ್ದಾಣ ಅಸಾಧ್ಯವಾಗುತ್ತದೆ. ಅಂಬಾಗಿಲು ಮೀನು ಮಾರ್ಕೆಟ್ ಬಳಿ ಆಟೋ ನಿಲ್ದಾಣ ಅನುಮತಿ ಹಾಗೂ ಅಂಬಾಗಿಲು ಮೀನು ಮಾರ್ಕೆಟ್ ಹತ್ತಿರ ಆಟೋ ನಿಲ್ದಾಣವನ್ನು ತೆರವುಗೊಳಿಸಲು ಬಂದ ಮನವಿಯನ್ನು ಪರಿಶೀಲಿಸಲಾಯಿತು. ನಿಟ್ಟೆ ಗ್ರಾಮದ ಪರಪ್ಪಾಡಿ ಜಂಕ್ಷನ್ ಬಳಿ ರಾಜ್ಯ ಹೆದ್ದಾರಿಯಲ್ಲೇ ವೇಗ ತಡೆಯನ್ನು ಅಳವಡಿಸುವ ಕುರಿತು ಚರ್ಚೆ ನಡೆಸಲಾಯಿತು.

        ತ್ರಾಸಿ ಬಳಿಯ ಮೋವಾಡಿ ಕ್ರಾಸ್ ಜಂಕ್ಷನ್‍ನಲ್ಲಿ ಖಾಸಗಿ ಬಸ್ಸುಗಳ ನಿಲುಗಡೆ ಸೌಲಭ್ಯ ಕಲ್ಪಿಸುವ ಕುರಿತು ಮನವಿ ಬಗ್ಗೆ ಚರ್ಚಿಸಲಾಯಿತು. ಉಡುಪಿ ರೈಲ್ವೇ ನಿಲ್ದಾಣದಲ್ಲಿ ಟೂರಿಸ್ಟ್ ಟ್ಯಾಕ್ಸಿ ಪ್ರೀಪೈಡ್ ಕೌಂಟರ್‍ನ್ನು ಪ್ರಾರಂಭಿಸುವ ಬಗ್ಗೆ ಬಂದ ಮನವಿಗೆ ಅನುಮತಿಯನ್ನು ನೀಡಲಾಗಿದೆ ಎಂದರು.

        ಅಡಿಷನಲ್ ಎಸ್ ಪಿ ಕುಮಾರಚಂದ್ರ, ಕೆಎಸ್‍ಆರ್‍ಟಿಸಿ ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ ದೀಪಕ್ ರಾವ್, ಜೈಶಾಂತ್, ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Watch Full Video:Inauguration Udupi of Diocese
View More

Prayer ServicePrayer Service
ಹಂಪನಕಟ್ಟೆ ಫ್ರೆಂಡ್ಸ್: "9ನೇ ವಾರ್ಷಿಕೋತ್ಸವದ ಸಂಭ್ರಮ" - ಶ್ರೀಮತಿ ರತ್ನಾ ಗಾಣಿಗ ಇವರಿಗೆ ನೂತನ ಮನೆಯನ್ನುಹಸ್ತಂತಾರಿಸಲಾಗುದು.ಹಂಪನಕಟ್ಟೆ ಫ್ರೆಂಡ್ಸ್:
Mount Rosary Church Annoucement for the weekMount Rosary Church Annoucement for the week
AN ODE TO YOU, O DEATH! - Tribute to My DADAN ODE TO YOU, O DEATH! -  Tribute to My DAD
Maria TravelsMaria Travels
Kemmannu Kambala on 9th December - InvitationKemmannu Kambala on 9th December - Invitation
Rozarich Gaanch September- 2018Rozarich Gaanch September- 2018
Karaval Milan Sports Event on 23rd December at Milagres Ground, Kallianpur.Karaval Milan Sports Event on 23rd December at Milagres Ground, Kallianpur.
Rozarich Gaanch September- 2018Rozarich Gaanch September- 2018
Milarchi-Lara-September-2018Milarchi-Lara-September-2018
Welcome to Thonse Naturecure HospitalWelcome to Thonse Naturecure Hospital
Santhosh Villa short film by youth of Udupi Parish and ICYM.Santhosh Villa short film by youth of Udupi Parish and ICYM.
Crossland College, Year book 2017-18Crossland College, Year book 2017-18
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India