Breif Mumbai and Mangalore news with pictures


Rons Bantwal
Kemmannu News Network, 18-03-2018 14:37:04


Write Comment     |     E-Mail To a Friend     |     Facebook     |     Twitter     |     Print


Mumbai Mar.16: Chief Minister Devendra Fadnavis today inaugurated 25 hybrid electric AC buses that will connect areas around Bandra Kurla Complex (BKC) on shorter routes and extend all the way till Thane, Navi Mumbai and Borivali on longer routes. The CM, along with Union Minister Anant Geete, launched the buses at an event at Sahyadri Guest House in Malabar Hill earlier today. The buses will hit the roads today and start plying on the shorter routes. 

Mumbai Mar. 17 :- The Big rongoli has been created on the Gangetic near bank of Ganga on ocassion of Hindu New year at Nashik .

ಸಾಹಿತ್ಯ ಬಳಗ ಮುಂಬಯಿ ರಜತ ಮಹೋತ್ಸವದ ವೈಚಾರಿಕ ಕಾರ್ಯಕ್ರಮ
ಮುಂಬಯಿ, ಮಾ.17:  ಸಾಹಿತ್ಯ ಬಳಗ ಮುಂಬಯಿ,ಇದರ  ರಜತ ಮಹೋತ್ಸವದ ಅಂಗವಾಗಿ ಇತ್ತೀಚೆಗೆ   ಸಾಹಿತ್ಯ ಬಳಗ, ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಪೇಜಾವರ ಮಠ ಮುಂಬಯಿ ಶಾಖೆಯ ಸಹಯೋಗದಲ್ಲಿ ವೈಚಾರಿಕ ಕಾರ್ಯಕ್ರಮವು ಸಾಂತಕ್ರೂಜ್ ಪೂರ್ವದಲ್ಲಿನ ಪೇಜಾವರ ಮಠದಲ್ಲಿ ಜರಗಿತು. 

ನಾಡಿನ ಖ್ಯಾತ ವಿದ್ವಾಂಸ ಲಕ್ಷ್ಮೀಶ  ತೋಲ್ಪಾಡಿ ಅವರು ಶಂಕರಾಚಾರ್ಯ ಭಗವತ್ಪಾದ ವಿರಚಿತ ಸೌಂದರ್ಯ ಲಹರಿಯ   ಮೊದಲನೇ ಭಾಗವಾದ ಆನಂದ ಲಹರಿಯ ಕುರಿತು ವೈಚಾರಿಕ ಹಿನ್ನೆಲೆಯಲ್ಲಿ  ಒಟ್ಟು ಐದು ದಿನ  ಸುದೀರ್ಘ  ಉಪನ್ಯಾಸ ನೀಡಿದರು. ಆರನೇ ದಿನದಂದು ಆಸಕ್ತರ ಅಪೇಕ್ಷೆಯ ಮೇರೆಗೆ ಶ್ರೀ ಚಕ್ರದ ಕುರಿತು ಕ್ಸ-ಕಿರಣ ಬೀರಿದರು. ಆ ಮೂಲಕ ಇದೊಂದು ಹೊರನಾಡಿನಲ್ಲಿ ನಡೆದ ಅಪೂರ್ವ ಕಾರ್ಯಕ್ರಮ ಎಂದು ಬಿಂಬಿಸಲ್ಪಟ್ಟಿತು.

ಈ ಉಪನ್ಯಾಸದ ಅಂಗವಾಗಿ ವೈಚಾರಿಕ ವಿಷಯಗಳೊಂದಿಗೆ ಧಾರ್ಮಿಕ ಹಾಗೂ ಭಾವನಾತ್ಮಕವಾದ ವಿಷಯಗಳಿಗೆ  ಒತ್ತುನೀಡಬೇಕೆಂಬ ಉದ್ದೇಶದಿಂದ  ವಿದುಷಿಯರಾದ  ಡಾ| ಶ್ಯಾಮಲಾ ಪ್ರಕಾಶ್, ಸಹನಾ ಭಾರದ್ವಾಜ್, ಮತ್ತು ರೋಹಿಣಿ ಮಧ್ಯಸ್ಥ ಅವರಿಂದ ಕುಮಾರವ್ಯಾಸ ಭಾರತದ ವಿರಾಟಪರ್ವದ ಗಮಕ ವಾಚನ ಹಾಗೂ ವ್ಯಾಖ್ಯಾನ, ಲಲಿತಾ ಭಜನಾ ಮಂಡಳಿಯಿಂದ ಪುರಂದರದಾಸರ ಮತ್ತು ಕನಕದಾಸರ ಕೃತಿಗಳು, ವಿಠಲ ಭಜನಾ ಮಂಡಳಿಯಿಂದ ಗೋಪಾಲದಾಸರು ಮತ್ತು ಜಗನ್ನಾಥದಾಸರ ಕೃತಿಗಳು, ಮಧ್ವೆಶ ಮತ್ತು ವಾಗ್ದೇವಿ ಭಜನಾ ಮಂಡಳಿಗಳಿಂದ ಮಹಿಪತಿದಾಸರು ಮತ್ತು ವಿಜಯದಾಸರ ಕೃತಿಗಳು, ಗೋಕುಲ ಭಜನಾ ಮಂಡಳಿಯಿಂದ ವಿಜಯದಾಸರು, ಶ್ರೀಪಾದರಾಯರು ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ, ಕನಕ-ಪುರಂದರರು,  ಗೋಪಾಲದಾಸರು ಮುಂತಾದ ದಾಸರು ರಚಿಸಿದ ದೇವಿಸ್ತುತಿಗಳು ಹೀಗೆ   ದಾಸವರೇಣ್ಯರ  ವೈವಿಧ್ಯಮಯ  ಹಾಡುಗಳನ್ನು  ಪ್ರಸ್ತುತಪಡಿಸಿದರು.

ಕೊನೆಯದಿನ ವಿದ್ವಾನ್ ಎಂ.ಆರ್ ರಾಮಮೂರ್ತಿ ಮತ್ತು ವಿದ್ವಾನ್ ರಾಜಾರಾಮ ಮೂರ್ತಿ ಅವರಿಂದ ಕುಮಾರವ್ಯಾಸ ಭಾರತದ ಉದ್ಯೋಗಪರ್ವ ಗಮಕ ವಾಚನ ಹಾಗೂ ವ್ಯಾಖ್ಯಾನ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಸೌಂದರ್ಯ ಲಹರಿಯ ಮೂಲಕ ಆನಂದ ಲಹರಿಯನ್ನಿತ್ತ ವಿದ್ವಾನ್ ಲಕ್ಷೀಶ ತೊಲ್ಪಾಡಿಯವರಿಗೆ ಅತಿಥಿü  ಗಣ್ಯರು  ಗೌರವಾರ್ಪಣೆ ಗೈದರು.  ಒಟ್ಟಿನಲ್ಲಿ ಆರು ದಿವಸಗಳ ಒಂದು ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕಾರ್ಯಕ್ರಮದಲ್ಲಿ ಜ್ಞಾನಸತ್ರವು ನಡೆದಿತ್ತು. ಬಹಳ ಕ್ಲಿಷ್ಟವಾದ ವಿಷಯವಾದ್ದರಿಂದ ಆಸಕ್ತರು ಸಕ್ರಿಯವಾಗಿ ಭಾಗವಹಿಸಿದ್ದರು.

 

ಯಕ್ಷಧ್ರುವ ಪಟ್ಲ ಸಂಭ್ರಮ 2018 ಕಾರ್ಯಕ್ರಮದ ಪೂರ್ವಭಾವಿ ಸಭೆ ಅಡ್ಯಾರ್‍ಗಾರ್ಡ್‍ನಲ್ಲಿ ತೃತೀಯ ವರ್ಷದ ವಾರ್ಷಿಕೋತ್ಸವ

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‍ನ 3ನೇ ವರ್ಷದ ವಾರ್ಷಿಕೋತ್ಸವ ‘ಯಕ್ಷಧ್ರುವ ಪಟ್ಲ ಸಂಭ್ರಮ’ 2018 ಕಾರ್ಯಕ್ರಮ ಮೇ 27ರಂದು ಭಾನುವಾರ ಅಡ್ಯಾರ್‍ಗಾರ್ಡ್‍ನಲ್ಲಿ ಜರಗಲಿದ್ದು ಕಾರ್ಯಕ್ರಮದ ಪೂರ್ವಭಾವಿ ಸಭೆಯು ಅಡ್ಯಾರ್‍ಗಾರ್ಡ್‍ನಲ್ಲಿ ಜರಗಿತು.
ಸಭೆಯಲ್ಲಿ `ಪಟ್ಲ ಸಂಭ್ರಮ’ದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಕಾರ್ಯಕ್ರಮದ ಜವಾಬ್ದಾರಿಗಳ ಹಂಚಿಕೆಯ ಬಗ್ಗೆ ಮಾಹಿತಿಯನ್ನು ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ  ಪುರುಷೋತ್ತಮ  ಭಂಡಾರಿ ಅಡ್ಯಾರ್ ಸಭೆಗೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್‍ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ವಹಿಸಿದ್ದರು.  ಪಟ್ಲ ಫೌಂಡೇಶನ್  ಟ್ರಸ್ಟ್‍ನಿಂದ ಈವರೆಗೆ ಸುಮಾರು ಒಂದೂವರೆ ಕೋಟಿಗೂ ಹೆಚ್ಚಿನ ಮೊತ್ತದ ಸೇವಾ ಯೋಜನೆಗಳನ್ನು ಅಶಕ್ತ ಕಲಾವಿದರಿಗೆ ನೀಡಲಾಗಿದೆ ಎಂದವರು ತಿಳಿಸಿದರು.

ಈವರೆಗೆ 29 ಘಟಕಗಳ ರಚನೆಯಾಗಿದ್ದು, ಈ ಬಾರಿ ಎಲ್ಲಾ ಘಟಕಗಳಿಗೂ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
ನಾಯಕತ್ವದ ಗುಣ ಎಲ್ಲರಲ್ಲೂ ಇರುವುದಿಲ.್ಲ ಪಟ್ಲರಲ್ಲಿ ನಾಯಕತ್ವದ ಗುಣ ಇದೆ. ಹೀಗಾಗಿ ಒಬ್ಬ ವ್ಯಕ್ತಿ ಕೇಂದ್ರೀಕೃತನಾಗಿ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿ ಕಲಾವಿದರ ಬಗ್ಗೆ ಕಾಳಜಿ ವಹಿಸಿ ಅವರು ಪಾರದರ್ಶಕವಾಗಿ ಕಲಾಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಖ್ಯಾತ ಕಲಾವಿದ ಜಬ್ಬಾರ್ ಸಮೋ ತಿಳಿಸಿದರು.

ಸಭೆಯಲ್ಲಿ ಪಟ್ಲಗುತ್ತು ಮಹಾಬಲ  ಶೆಟ್ಟಿ, ಸೀತಾರಾಮ ರೈ ಸವಣೂರು, ಭುಜಬಲಿ, ಪಿ.ಆರ್.ಶೆಟ್ಟಿ ಉಪ್ಪಲ, ನಿಟ್ಟೆಗುತ್ತು ರವಿರಾಜಶೆಟ್ಟಿ, ಚಿಕ್ಕಪ್ಪ ನಾೈಕ್, ದಿನೇಶ್  ಶೆಟ್ಟಿ ದುಬಾಯಿ, ಪದ್ಮನಾಭ ಗೌಡ, ಕೇಂದ್ರೀಯ ಘಟಕದ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಉಪಾಧ್ಯಕ್ಷರಾದ ಡಾ. ಮನುರಾವ್, ಜತೆ ಕಾರ್ಯದರ್ಶಿಗಳಾದ ಉದಯ ಕುಮಾರ್  ಶೆಟ್ಟಿ ಕುಂದಾಪುರ, ರಾಜೀವ ಪೂಜಾರಿ ಕೈಕಂಬ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಆರತಿ ಆಳ್ವ , ಲೀಲಾಕ್ಷ ಕರ್ಕೇರ, ಅಶೋಕ್ ಮಜಿಲ, ದಿವಾಕರ ನಾೈಕ್ ಉಪಸ್ಥಿತರಿದ್ದರು.

ಫೌಂಡೇಶನ್ ಟ್ರಸ್ಟ್ ಮತ್ತು ಆಯಾ ಘಟಕದವರು ಈವರೆಗೆ ಮಾಡಿಕೊಂಡು ಬಂದಿರುವ ಕಾರ್ಯಕ್ರಮಗಳ ಪ್ರಮುಖ ಅಂಶಗಳ ಸಾಕ್ಷ್ಯ ಚಿತ್ರದ ತುಣುಕುಗಳನ್ನು ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಲಾಯಿತು.

ಟ್ರಸ್ಟ್‍ನ ಕಾರ್ಯವೈಖರಿಯನ್ನು ಮೆಚ್ಚಿ ಯತೀಶ್ ರೈ ಫೌಂಡೇಶನ್‍ಗೆ ಒಂದು ಲಕ್ಷ ರೂ ನೀಡಿ ಟ್ರಸ್ಟಿಯಾದರು ಪಟ್ಲ ಸತೀಶ್ ಶೆಟ್ಟಿಯವರ ಪುತ್ರಿ ರಿತ್ವಿಕಾ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದಳು.

ಯಕ್ಷಗಾನ ಹಾಸ್ಯ ವೈಭವದಲ್ಲಿ ನಾಟಕ, ಯಕ್ಷಗಾನದ ಹಾಸ್ಯ ದಿಗ್ಗಜರು

ಮೇ. 27ರಂದು ಅಡ್ಯಾರ್ ಗಾರ್ಡ್‍ನಲ್ಲಿ ಜರಗುವ ಪಟ್ಲ ಸಂಭಮದಲ್ಲಿ ನಡೆಯುವ ಯಕ್ಷಗಾನ ಹಾಸ್ಯ ವೈಭವದಲ್ಲಿ  ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಬಂಟ್ವಾಳ ಜಯರಾಮ ಆಚಾರ್ಯ ಭಾಗವತಿಕೆ ಮಾಡಲಿದ್ದಾರೆ. ಕುಸೇಲ್ದರಸೆ ನವೀನ್ ಡಿ ಪಡೀಲ್. ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ಮೊದಲಾದವರು ಸೀತಾರಾಮ ಕುಮಾರ್, ಹಳ್ಳಾಡಿ, ಕಡಬ, ಕೊಡಪದವುರೊಂದಿಗೆ ಹಾಸ್ಯ ಪಾತ್ರದಲ್ಲಿ ಮಿಂಚಲಿದ್ದಾರೆ.
ತಾರಾಮೆರುಗು
ಈ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಋಷಬ್ ಶೆಟ್ಟಿ, ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಮೊದಲಾದವರು ಭಾಗವಹಿಲಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | UdupiFinal Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, KemmannuVespers 2024 | St. Theresa’s Church, Kemmannu
Annual Church Feast 2024 | St. Theresa’s Church, KemmannuAnnual Church Feast 2024 | St. Theresa’s Church, Kemmannu
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | UdupiCHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From KemmannuAnnual Day 2023 | Carmel English School, Live From Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, UdupiEaster 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, UdupiFocus Studio, Near Hotel Kidiyoor, Udupi