ಮೇ.4-9: ಬಾರ್ಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ


Rons Bantwal
Kemmannu News Network, 27-04-2018 20:17:34


Write Comment     |     E-Mail To a Friend     |     Facebook     |     Twitter     |     Print


ಮೇ.4-9: ಬಾರ್ಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ-ಷೋಡಶ ಪವಿತ್ರಾತ್ಮಕ ನಾಗಮಂಡಲ ವೈಭವೋತ್ಸವ

ಮುಂಬಯಿ, ಎ.26: ಉಡುಪಿ ಜಿಲ್ಲೆಯ ಬಾರ್ಕೂರು ಅಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯು ಇದೇ ಬರುವ ಮೇ.4 ರಿಂದ ಮೇ.9ರ ಆರು ದಿನಗಳಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಪೂರ್ವಕ ಬ್ರಹ್ಮಕಲಶೋತ್ಸವ ಮತ್ತು ಷೋಡಶ ಪವಿತ್ರಾತ್ಮಕ ಸಂಪೂರ್ಣ ನಾಗಮಂಡಲ ವೈಭವೋತ್ಸವ ನೆರವೇರಿಸÀಲಿದೆ.

ಮೇ.4 ಶುಕ್ರವಾರ ಸಂಜೆ  ನಾಗೇಶ್ವರ ದೇವಸ್ಥಾನದ ಭಂಡಾರಿ ಸಭಾಂಗಣದಲ್ಲಿ ಭಂಡಾರಿ ಸಮಾಜ ಬಾಂಧವರ ಭಜನಾ ಕಾರ್ಯಕ್ರಮದಿಂದ ಒಟ್ಟು ಸಂಭ್ರಮ ಆರಂಭಗೊಳ್ಳಲಿದೆ. ಬೆಳಿಗ್ಗೆ 8.00 ಗಂಟೆಯಿಂದ ಋತ್ವಿಜರ ಸ್ವಾಗತ, ಶ್ರೀ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಧಾರ್ಮಿಕ ಉಗ್ರಾಣ ಮುಹೂರ್ತ, ಅನ್ನ ಸಂತರ್ಪಣೆ ಉಗ್ರಾಣ ಮುಹೂರ್ತ, ಪುಣ್ಯಾಹ ವಾಚನ, ದೇವನಾಂದೀ, ಬ್ರಹ್ಮಕೂರ್ಚ ಹೋಮ, ಕೌತುಕ ಬಂಧನ, ಅರಣಿಯಲ್ಲಿ ಅಗ್ನಿ ಮಥನ, ಭದ್ರ ದೀಪ ಪ್ರತಿಷ್ಠೆ, ದ್ವಾದಶ ನಾಲಿಕೇರ ಆದ್ಯ ಗಣಯಾಗ, ಆಚಾರ್ಯಾದಿ ಋತ್ವಿಗ್ವರಣ, ಚತುರ್ವೇದ ಪಾರಾಯಣ, ಪುರಾಣತ್ರಯ ಪಾರಾಯಣ ಪ್ರಾರಂಭ. ಶ್ರೀ ದೇವರಿಗೆ ರುದ್ರಾಭಿಷೇಕ, ಪ್ರಸನ್ನ ಪೂಜೆ, ಸಹಸ್ರ ಬ್ರಾಹ್ಮಣ ಪಾದ ಪ್ರಕ್ಷಾಲನ ಪ್ರಾರಂಭ. ಸಂಜೆ 5.00 ಗಂಟೆಯಿಂದ ಭೂಶುದ್ಧಿ, ಸಪ್ತಶುದ್ಧಿ, ಪ್ರಾಸಾದಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಮೃತ್ತಿಕಾ ಹರಣ, ಅಂಕುರಾರೋಪಣ, ಪ್ರಾಕಾರ ಬಲಿ, ರಕ್ಷಾ ಕಲಶ ಪ್ರತಿಷ್ಠೆ ಹಾಗೂ ಸಂಜೆ 4.00 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆÉ.

ಮೇ.5 ಶನಿವಾರ ಬೆಳಿಗ್ಗೆ 8.00 ಗಂಟೆಯಿಂದ ಶಿವ ಪಂಚಾಕ್ಷರಿ, ಸರ್ಪತ್ರಯ, ಮೂಲಮಂತ್ರ ಜಪಾನುಷ್ಠಾನ ಪ್ರಾರಂಭ, ಅಂಕುರ ಪೂಜೆ, ವೇ| ಮೂ| ಶ್ರೀ ರಾಮಕೃಷ್ಣ ತಂತ್ರಿ ಕುಕ್ಕಿಕಟ್ಟೆ ಇವರಿಂದ ಮಹಾ ಗಣಪತ್ಯಥsÀರ್ವ ಶೀರ್ಷ ಗಣಯಾಗ, ಪೂರ್ಣನವಗ್ರಹ ಯಾಗ ವೇ| ಮೂ| ಶ್ರೀ ಗಂಗಾಧರ ಶರ್ಮ ಮೂಡಬಿದ್ರೆ ಇವರಿಂದ ಸಂಜೀವಿನಿ ಮಹಾಮೃತ್ಯುಂಜಯ ಯಾಗ ವೇ| ಮೂ| ಶ್ರೀ ಹರಿಪ್ರಸಾದ ಭಟ್ ಮಂಗಳೂರು ಇವರಿಂದ ಕ್ಷಾಲನಾದಿ ಬಿಂಬಶುದ್ಧಿ  ಪ್ರಕ್ರಿಯಾ ಪ್ರಸನ್ನ ಪೂಜೆ, ಸಾಯಂಕಾಲ 5.00 ಗಂಟೆಯಿಂದ  ನಾಗದೇವರ ಸನ್ನಿಧಿಯಲ್ಲಿ ವಾಸ್ತುವಿಧಿ, ನೂತನ ನಾಗ ಬಿಂಬಶುದ್ಧಿ ಪ್ರಕ್ರಿಯಾ, ಅದಿವಾಸ, ಶಯ್ಯ, ನೂತನ ಸ್ವಾಗತ ಗೋಪುರಕ್ಕೆ ವಾಸ್ತುವಿಧಿ, ನೂತನ ಸಭಾಭವನಕ್ಕೆ ವಾಸ್ತು ವಿಧಿ, ಶ್ರೀ ದೇವರಿಗೆ ನಾಳಶೋಧನೆ, ಸಂಹಾರ ಶಕ್ತಿ ಹೋಮ, ಅಷ್ಟಬಂದಾಧಿವಾಸ ಇತ್ಯಾದಿಗಳು ನಡೆಯಲಿವೆ. ಮಧ್ಯಾಹ್ನ ಬ್ರಹ್ಮಾವರದಿಂದ ಹಸಿರು ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ಆರಂಭವಾಗಲಿದೆ.

ಮೇ.6 ಆದಿತ್ಯವಾರ ಬೆಳಿಗ್ಗೆ 6.00 ಗಂಟೆಯಿಂದ ಶಕ್ತಿಯಾಗ, ಪೀಠಿಕಾಯಾಗ, 6.30 ಗಂಟೆಗೆ  ಒದಗುವ ಮೇಷ ಲಗ್ನ ಶುಭಮುಹೂರ್ತದಲ್ಲಿ ಶ್ರೀ ನಾಗೇಶ್ವರ ದೇವರಿಗೆ ಸಹಿತ ಶ್ರೀ ಮಹಾಗಣಪತಿ, ಶ್ರೀ ಅನ್ನಪೂರ್ಣೇಶ್ವರಿ ದೇವರುಗಳಿಗೆ ಅಷ್ಟಬಂಧ ಪ್ರತಿಷ್ಟೆ, ಜೀವ ಕುಂಭಾಭಿಷೇಕ, ನೂತನ ನಾಗಬಿಂಬ ಪ್ರತಿಷ್ಠೆ, ಪ್ರಸನ್ನ ಪೂಜೆ, ಸಾಮಾನ್ಯ ಶಾಂತಿ ಹೋಮ, ಸಾಮಾನ್ಯ ಪ್ರಾಯಶ್ಚಿತ್ತ ಹೋಮ, `ಶ್ರೀ ಮಹಾರುದ್ರಯಾಗ’ ವೇ| ಮೂ| ಶ್ರೀ ಶಿವಪ್ರಸಾದ್ ತಂತ್ರಿ ದೇರೆಬೈಲು ಮಂಗಳೂರು ಇವರಿಂದ ಶ್ರೀ ನಾಗ ದೇವರಿಗೆ ಅಯುತಾಸಂಖ್ಯಾ ಪ್ರಾಯಶ್ಚಿತ್ತ, ತಿಲಹೋಮ, ಕೂಷ್ಮಾಂಡಹೋಮ, ಪವಮಾನ ಹೋಮ, ಸುಕೃತಹೋಮ, ಶ್ರೀ ಮಹಾವಿಷ್ಣು ಯಾಗ ವೇ| ಮೂ| ಶ್ರೀ ಸೀತಾರಾಮ ಭಟ್ ಇವರಿಂದ ಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಸಲಾಗುವುದು. ಬೆಳಿಗ್ಗೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಾಯಂಕಾಲ 5.00 ಗಂಟೆಯಿಂದ ಬ್ರಹ್ಮಕಲಶ ಮಂಟಪ ಸಂಸ್ಕಾರ, ಮಂಡಲ ರಚನಾಪ್ರಾರಂಭ, ಶ್ರೀ ಚಕ್ರಾರಾಧನ ಪೂಜಾ ವೇದಮೂರ್ತಿ ಶ್ರೀ ರಾಘವೇಂದ್ರ ತಂತ್ರಿ ಕುಕ್ಕಿಕಟ್ಟೆ ಉಡುಪಿ ಇವರಿಂದ ಹಾಗೂ `ನಾಗ ತನುತರ್ಪಣ’ ಪ್ರಸನ್ನ ಪೂಜೆ, ದೇವರಿಗೆ ದೀಪಾರಾಧನೆ, 24 ಕನ್ನಿಕಾರಾಧನೆ, 48 ಸುವಾಸಿನಿ ಆರಾಧನೆ, 24 ದಂಪತಿ ಆರಾಧನೆ, 48 ಬ್ರಹ್ಮಚಾರಿ ಆರಾಧನೆ, ಆಚಾರ್ಯಪೂಜೆ ಮತ್ತು ಸಂಜೆ 4.00 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. 

ಮೇ.7ನೇ ಸೋಮವಾರ ಬೆಳಿಗ್ಗೆ ಗಂಟೆ 6.00 ಗಂಟೆಯಿಂದ ವೇ| ಮೂ| ಶ್ರೀ ನಂದಕುಮಾರ ತಂತ್ರಿ ಬೆಳ್ತಂಗಡಿ  ಇವರಿಂದ ವಿಶೇಷ ಶಾಂತಿ ಹೋಮ, ವಿಶೇಷ ಪ್ರಾಯಶ್ಚಿತ್ತ ಹೋಮ, ಅಧ್ಬುತ ಶಾಂತಿ ಹೋಮ, ಶ್ರೀ ಮಹಾಗಣಪತಿ ದೇವರು ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನಿಗೆ 109 ಕಲಶಾಧಿವಾಸ, ಅಧಿವಾಸ ಹೋಮ, `ಬ್ರಹ್ಮಕಲಶಾಭಿಷೇಕ’, `ಶ್ರೀ ಚಂಡಿಕಾಯಾಗ’ ಮತ್ತು 108 ಕಾಯಿ ಗಣಯಾಗ. ವೇ| ಮೂ|  ಶ್ರೀ ವೇದವ್ಯಾಸ ಐತಾಳ ಸಗ್ರಿ ಇವರಿಂದ ತತ್ತ್ವ ಕಲಾಹೋಮ, ತತ್ತ್ವ ಕಲಶಾಭಿಷೇಕ, ಪ್ರಸನ್ನ ಪೂಜೆ, ಪರಿವಾರ ದೈವಗಳಿಗೆ ಕಲಶಾಭಿಷೇಕ ಪ್ರಸನ್ನ ಪೂಜೆ, ಪ್ರತ್ಯಕ್ಷ ಗೋದಾನ, ದಶದಾನ. ಸಂಜೆ 05 ಗಂಟೆಯಿಂದ ವೇ| ಮೂ| ಶ್ರೀ ಮಧುಸೂದನ ತಂತ್ರಿ ಬಡಾನಿಡಿಯೂರು ಇವರಿಂದ ಭದ್ರಕ ಮಂಡಲ ಪೂಜೆ, ಬ್ರಹ್ಮಕಲಶ ಮಂಡಲ ಪೂಜೆ, ವೇ| ಮೂ| ಮಾಯಗುಂಡಿ ಶ್ರೀ ಗೋಪಾಲ ಕೃಷ್ಣಭಟ್ ಇವರಿಂದ ಬ್ರಹ್ಮಕಲಶ ಸಹಿತ ಸಹಸ್ರ ಕಲಶ ಪಂಚವಿಂಶತಿ ದ್ರವ್ಯ ಮೀಳಿತ ಕಲಶಾಧಿವಾಸ ಹಾಗೂ ನವಕುಂಡಗಳಲ್ಲಿ ಅಧಿವಾಸ ಹೋಮ, ನಾಗಮಂಡಲ ಮಂಟಪಕ್ಕೆ ವಾಸ್ತು ವಿಧಿ `ಶ್ರೀ ಭುವನೇಶ್ವರಿ’ ಪೂಜೆ. ಬೆಳಿಗ್ಗೆ ಭರತನಾಟ್ಯ ಮತ್ತು ನೃತ್ಯಗಳು, ಮಧ್ಯಾಹ್ನ ಗದಾಯುದ್ಧ ಯಕ್ಷಗಾನ, ಅಪರಾಹ್ನ ಕೈರಬೆಟ್ಟು ವಿಶ್ವನಾಥ್ ಭಟ್ ಅವರಿಂದ ಸಮುದ್ರ ಮಥನ-ಅಮೃತೋದ್ಭವ ಹರಿಕಥೆ ಸಂಕೀರ್ತನೆ, ಸಂಜೆ ಆಳ್ವಾಸ್ ವಿದ್ಯಾ ಸಂಸ್ಥೆ ಮೂಡಬಿದ್ರೆ ಇದರ ವಿದ್ಯಾಥಿರ್üಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.

ಮೇ.08ನೇ ಮಂಗಳವಾರ ಪ್ರಾತಃ ಕಾಲ ಶ್ರೀನಾಗೇಶ್ವರ ದೇವರಿಗೆ ಸಹಸ್ರ ಸೀಯಾಳಾಭಿಷೇಕ, ಬೆಳಿಗ್ಗೆ 5.00 ಗಂಟೆಯಿಂದ ಶ್ರೀ ನಾಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ ಪ್ರಾರಂಭ, 9.55 ಗಂಟೆಯಿಂದ ಒದಗುವ ಮಿಥುನ ಲಗ್ನ ಶುಭ ಮುಹೂರ್ತದಲ್ಲಿ `ಬ್ರಹ್ಮಕುಂಭಾಭಿಷೇಕ’, ನ್ಯಾಸ ಪೂಜೆ, ಶ್ರೀ ನಾಗದೇವರಿಗೆ ಸರ್ಪತ್ರಯ ಮಂತ್ರ ಹೋಮ, ಅಷ್ಠನಾಗಗಾಯತ್ರೀ ಮಂತ್ರ ಹೋಮ,109 ಕಲಶಾಧಿವಾಸ, ಅಧಿವಾಸ ಹೋಮ, ಕಲಶಾಭಿಷೇಕ `ಆಶ್ಲೇಷಾಬಲಿ ಸೇವೆÀ’ ವೇ| ಮೂ| ಶ್ರೀ ಕೆ.ವಿಠಲ್ ಭಟ್ ಕಲ್ಮಂಜೆ ಇವರಿಂದ. ಪೂರ್ವಾಹ್ನ 11 ಗಂಟೆಗೆ ಮಹಾಪೂಜೆ ಪಲ್ಲಪೂಜೆ, ಮಧ್ಯಾಹ್ನ 12.00 ಗಂಟೆಯಿಂದ ಬ್ರಾಹ್ಮಣ, ವಟು-ಕನ್ನಿಕಾ, ಸುವಾನಿನಿ ಸಂತರ್ಪಣೆ, ಮಧ್ಯಾಹ್ನ 12.30 ರಿಂದ `ಮಹಾ ಅನ್ನಸಂತರ್ಪಣೆ’, ಸಾಯಂಕಾಲ 6.00 ಗಂಟೆಯಿಂದ ಶ್ರೀ ನಾಗೇಶ್ವರ ದೇವರಿಗೆ ದೀಪಾರಾಧನೆ, ರಂಗಪೂಜೆ ಅಷ್ಟಾವಿಧಾನ ಸೇವೆ, ರಾತ್ರಿ 8.00 ಗಂಟೆಯಿಂದ ಶ್ರೀ ನಾಗದೇವರ ಸನ್ನಿಧಿಯಲ್ಲಿ ದೀಪಾರಾಧನೆ ಪ್ರಸನ್ನ ಪೂಜಾ, ಸುಧಾಕುಂಭ ಪ್ರತಿಷ್ಠಾ ಪೂರ್ವಕ ಹಾಲಿಟ್ಟು ಸೇವಾ, ಸ್ವಸ್ತಿಗೆ ದೇವರನ್ನು ಕೂಡಿ ಪಲ್ಲಕ್ಕಿಯಲ್ಲಿ ನಾಗಮಂಡಲ ಮಂಟಪ ಪ್ರವೇಶ, ರಾತ್ರಿ ಗಂಟೆ 10.30 ಗಂಟೆಯಿಂದ `ನಾಗ ಮಂಡಲ ಕಲ್ಪೋಕ್ತ ಪೂಜೆ’, ರಾತ್ರಿ ಗಂಟೆ 11 ಗಂಟೆಯಿಂದ ವೇ| ಮೂ| ಶ್ರೀ ಬಿ.ಎನ್ ರಾಮಚಂದ್ರ ಕುಂಜಿತ್ತಾಯ, ನಾಗಪಾತ್ರಿಗಳು ಕಲ್ಲಂಗಳ ಹಾಗೂ ಶ್ರೀ ಕೃಷ್ಣ ಪ್ರಸಾದ ವೈದ್ಯ ಮತ್ತು ಬಳಗ, ಶ್ರೀ ವೈದ್ಯನಾಥೇಶ್ವರ ಢಮರು ಮೇಳ ಮುದ್ದೂರು, ನಾಗ ಕನ್ನಿಕೆಯಾಗಿ ಶ್ರೀ ಎನ್. ಬಾಲಕೃಷ್ಣ ವೈದ್ಯ ಮತ್ತು ನಟರಾಜ ವೈದ್ಯ ಇವರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥಕವಾಗಿ ಅತಿ ವಿರಳ ಮತ್ತು ಅತ್ಯಪೂರ್ವವಾದ ಷೋಡಶ ಪವಿತ್ರಾತ್ಮಕ ವೈಭವೋಪೇತವಾದ `ಸಂಪೂರ್ಣ ನಾಗಮಂಡಲ’ ಉತ್ಸವ ಸೇವೆ, ನರ್ತನ ಹೂ ಸಿಂಗಾರ ಸೇವಾ ಸಮರ್ಪಣೆ ಜರುಗಿಸಿ ಬೆಳಿಗ್ಗೆ 5.00 ಗಂಟೆಯಿಂದ ಮಂಡಲ ಮಹಾ ಪ್ರಸಾದ ವಿತರಣೆ ನಡೆಸಲಾಗುವುದು. ಮೇ.09ನೇ ಬುಧವಾರ ಬೆಳಿಗ್ಗೆ 9.00 ಗಂಟೆಯಿಂದ ಸಂಪೆÇ್ರ್ರೀಕ್ಷಣ ಕಲಶಾಭಿಷೇಕ, ಮಂಗಲ ಗಣಯಾಗ, ಮಂಗಳ ಓಕುಳಿಸ್ನಾನ, ಕಂಕಣ ಬಂಧ ವಿಸರ್ಜನೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಸಲಾಗುವುದು.

ಧಾರ್ಮಿಕ ಸಭಾ ಕಾರ್ಯಕ್ರಮ:
ಮೇ.07ರ ಸೋಮವಾರ ಸಂಜೆ 4.00 ಗಂಟೆಗೆ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್‍ನ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಸಲಾಗುವುದು. ಉದ್ಯಮಿ ಮನೋಹರ ಶೆಟ್ಟಿ ಉಡುಪಿ ಕಾರ್ಯಕ್ರಮ ಉದ್ಘಾಟಿಸಲಿದ್ದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ  ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡುವರು.           

ಮುಖ್ಯ ಅತಿಥಿüಯಾಗಿ ಭಂಡಾರಿ ಮಹಾಮಂಡಲ ಇದರ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಗೌರವ ಅತಿಥಿüಗಳಾಗಿ ಮುಂಬಯಿನ ಉದ್ಯಮಿಗಳಾದ  ಪುತ್ತೂರು ಬಾಲಕೃಷ್ಣ ಭಂಡಾರಿ (ಪುಣೆ), ಸುರೇಶ ಆರ್. ಕಾಂಚನ್, ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಅಧ್ಯಕ್ಷ ನ್ಯಾ| ಶೇಖರ್ ಎಸ್.ಭಂಡಾರಿ, ಮಾಜಿ ಅಧ್ಯಕ್ಷ ನ್ಯಾ| ಸುಂದರ ಜಿ.ಭಂಡಾರಿ, ಮುಂಬಯಿನ ಯುವೋದ್ಯಮಿ ಮತ್ತು ಚಲನಚಿತ್ರ ನಟ ಕಡಂದಲೆ ಸೌರಭ್ ಎಸ್.ಭಂಡಾರಿ,  ಪಡುಬಿದ್ರೆಯ ಹೆಸರಾಂತ ಸಮಾಜ ಸೇವಕ ನವೀನ್‍ಚಂದ್ರ ಶೆಟ್ಟಿ, ಉದ್ಯಮಿಗಳಾದ ಪ್ರದೀಪ್‍ಚಂದ್ರ ಕುತ್ಪಾಡಿ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ 9.00 ಗಂಟೆಯಿಂದ ಮುಂಬಯಿ ಸಮಾಜ ಬಾಂಧವರಿಂದ ನಿರಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.

ಮೇ.08ರ ಮಂಗಳವಾರ ಸಂಜೆ 4.00 ಗಂಟೆಗೆ  ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್‍ನ ಆಡಳಿತ ಮೊಕ್ತೇಸರ ಮತ್ತು ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಸಭಾಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು ವಿಶ್ವ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಬಾರ್ಕೂರು ಮಹಾಸಂಸ್ಥಾನ ಭಾರ್ಗವ ಬೀಡು ಇದರ ವಿದ್ಯಾ ವಾಚಸ್ಪತಿ ವಿಶ್ವ ಸಂತೋಷ ಭಾರತಿ ಆಶೀರ್ವಚನ ನೀಡುವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ| ಪ್ರಭಾಕರ ಭಟ್ ಕಲ್ಲಡ್ಕ ಧಾರ್ಮಿಕ ಪ್ರವಚನ ನೀಡುವರು.

ಮುಂಬಯಿನ ಪ್ರತಿಷ್ಠಿತ ಉದ್ಯಮಿ ಆನಂದ ಶೆಟ್ಟಿ ಭಂಡಾರಿ ಸಮುದಾಯ ಭವನ ಉದ್ಘಾಟಿಸುವರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ವೇ| ಮೂ| ಶ್ರೀ ಲಕ್ಷ್ಮಿನಾರಾಯಣ ಅಸ್ರಣ್ಣ ಸ್ವಾಗತ ಗೋಪುರವನ್ನು, ಆಳ್ವಾಸ್ ವಿದ್ಯಾಸಂಸ್ಥೆ ಮೂಡಬಿದ್ರೆ ಇದರ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ ನವೀಕೃತ ಭೋಜನ ಶಾಲೆ ಉದ್ಘಾಟಿಸಲಿದ್ದು, ಭವಾನಿ ಫೌಂಡೇಶನ್ ನವಿ ಮುಂಬಯಿ ಸಂಸ್ಥೆಯ ಸಂಸ್ಥಾಪಕಾಧ್ಯಕ್ಷÀ ಕೆ.ಡಿ ಶೆಟ್ಟಿ `ಸಾಧನ ಸಂಭ್ರಮ’ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಲಿದ್ದಾರೆ.

ಮುಖ್ಯ ಅತಿಥಿüಯಾಗಿ ಮುಂಬಯಿನ ಉದ್ಯಮಿ ದಿವಾಕರ ಶೆಟ್ಟಿ, ಮುದ್ರಾಡಿ, ಗೌರವ ಅತಿಥಿüಗಳಾಗಿ ರಾಜ್ಯ ಪ್ರಶಸ್ತಿ ವಿಜೇತ ಸಮಾಜ ಸೇವಕ ಶಾಂತರಾಮ ಶೆಟ್ಟಿ ಬಾರ್ಕೂರು, ಉಡುಪಿ ನಗರ ಸಭಾ ಸದಸ್ಯ ನವೀನ್ ಭಂಡಾರಿ,  ಭಂಡಾರಿ ಮಹಾಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಹಿಳಾ ವಿಭಾಗಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ, ಅಂತರಾಷ್ಟ್ರೀಯ ಪ್ರಸಿದ್ಧ ಕೇಶ ವಿನ್ಯಾಸಗಾರ ಡಾ| ಶಿವರಾಮ ಕೆ.ಭಂಡಾರಿ ಮುಂಬಯಿ  ಆಗಮಿಸಲಿದ್ದಾರೆ.

ವಿಶ್ವ ಭಂಡಾರಿ ಸಮಾಜ ಸಂಘಟನೆಗಳ ಒಕ್ಕೂಟ ಆಗಿರುವ ಭಂಡಾರಿ ಮಹಾ ಮಂಡಲ (ರಿ.) ಬಾರ್ಕೂರು ಮತ್ತು ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯ ಸಹಯೋಗ, ಸಮಾಜದ ಮುಖವಾಣಿ ಕಚ್ಚೂರುವಾಣಿ ಮಾಸಿಕ ಹಾಗೂ ಕಚ್ಚೂರು ಕೋ.ಆಪರೇಟಿವ್ ಸೊಸೈಟಿ, ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಲ್ಲಿನ ಭಂಡಾರಿ ಸಮಾಜದ ಸಂಸ್ಥೆಗಳು, ಭಂಡಾರಿ ಸಮಾಜ ಮಹಿಳಾ ಸಂಘಟನೆಗಳು, ಭಂಡಾರಿ ಸಮಾಜ ಬಳಗಗಳು,  ಸೇರಿದಂತೆ ಅನ್ಯ ಸಮುದಾಯ, ಕೋಮುಗಳ ಸಂಸ್ಥೆಗಳ ಸಹಕಾರ ಮತ್ತು ದೇಶ ವಿದೇಶಗಳಲ್ಲಿನ ಸಮುದಾಯದ ಸಂಘಟನೆಗಳ ಸಾಂಘಿಕತೆಯಲ್ಲಿ ಆರ್ಚಕ ವೃಂದ ಮತ್ತು ಸಿಬ್ಬಂದಿ ವರ್ಗ, ವಲಯವಾರು ಬ್ರಹ್ಮಕಲಶೋತ್ಸವ ಸಂಚಾಲಕರನ್ನೊಳಗೊಂಡು ಸ್ವಾಗತ ಸಮಿತಿ ಜೊತೆಗೆ ಸುಮಾರು ಮೂವತ್ತು ಉಪಸಮಿತಿಗಳ ಹಾಗೂ ಊರ, ಪರವೂರ, ನಾಡಿನ ಹತ್ತು ಸಮಸ್ತರ ಸೇವೆಗಳೊಂದಿಗೆ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಧಾರ್ಮಿಕ ವೈಭವೋತ್ಸವ ಜರುಗಿಸಲಿದೆ. ಮೇ.8 ಮತ್ತು 9ರ ವಿಶೇಷ ದಿನಗಳಲ್ಲಿ ಬ್ರಹ್ಮಾವರದಿಂದ ದೇವಸ್ಥಾನಕ್ಕೆ ಹಾಗೂ  ದೇವಸ್ಥಾನದಿಂದ ಬ್ರಹ್ಮಾವರಕ್ಕೆ ನಿರಂತರ ಬಸ್ಸು ವ್ಯವಸ್ಥೆಯೂ ಮಾಡಲಾಗಿದೆ.

ದೇವಸ್ಥಾನಗಳ ಬೀಡು ಬಾರ್ಕೂರಿನ ಭಂಡಾರಿ ಸಮಾಜದ ಕುಲದೇವರಾದ ಸಪರಿವಾರಕ ಕಚ್ಚೂರು ಶ್ರೀ ನಾಗೇಶ್ವರ ಸನ್ನಿಧಿಯಲ್ಲಿ ಒಂದು ಗುರುಚಾರಕ್ಕೆ ಒಂದು ಬಾರಿಯಂತೆ ಆಗಮಶಾಸ್ತ್ರದಲ್ಲಿ ವಿಹಿತವಾದ ಅಷ್ಠಬಂಧ ನವೀಕರಣ ಸಹಿತ ಬ್ರಹ್ಮ ಕಲಶಾಭಿಷೇಕವನ್ನು ಬ್ರಹ್ಮಶ್ರೀ ವೇದಮೂರ್ತಿ ಶ್ರೀಕಾಂತ ಸಾಮಗ, ಧರ್ಮದರ್ಶಿ ಶ್ರೀ ವಾಸುಕಿ ಆನಂತ ಪದ್ಮಾನಾಭ ದೇವಸ್ಥಾನ ಬಡಗುಪೇಟೆ, ಉಡುಪಿ,ಇವರ ಪ್ರಧಾನ ನೇತೃತ್ವದಲ್ಲಿ ಮತ್ತು ಬಿ.ಆರ್ ವಿಶ್ವನಾಥ ಶಾಸ್ತ್ರಿ, ಪ್ರಧಾನ ಅರ್ಚಕರು, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ, ಬಾರ್ಕೂರು ಇವರ ಅರ್ಚಕತ್ವದಲ್ಲಿ ಹಾಗೂ ವೇದಾಗಮಜ್ಞರಾದ ಋತ್ವಿಜರ ಸಹಯೋಗದೊಂದಿಗೆ ಸೇವೆಯನ್ನು ಬಿ.ಎನ್ ರಾಮಚಂದ್ರ ಕುಂಜಿತ್ತಾಯ, ನಾಗಪಾತ್ರಿ, ಶ್ರೀಕ್ಷೇತ್ರ ಕಲ್ಲಂಗಳ ಹಾಗೂ ಕೃಷ್ಣಪ್ರಸಾದ ವೈದ್ಯ ಮತ್ತು ಬಳಗ, ಶ್ರೀ ವೈದ್ಯನಾಥೇಶ್ವರ ಢಮರುಮೇಳ ನಾಲ್ಕೂರು ಇವರ ಸಹಯೋಗದೊಂದಿಗೆ ನಾಗಕನ್ನಿಕೆಯರಾಗಿ ಎನ್.ಬಾಲಕೃಷ್ಣ ವೈದ್ಯ ಮತ್ತು ನಟರಾಜ್ ವೈದ್ಯ ಇವರುಗಳಿಂದ ನಡೆಸಲಾಗುವುದು. 

ಈ ದೇವತಾ ಕಾರ್ಯದಲ್ಲಿ ತಾವುಗಳು ಸಕುಟುಂಬ ಸಮೇತರಾಗಿ ಆಗಮಿಸಿ ನಮ್ಮೊಂದಿಗೆ ಸಹಕರಿಸಿ, ಶ್ರೀ ನಾಗೇಶ್ವರ ದೇವರ ಹಾಗೂ ಶ್ರೀ ನಾಗದೇವರ ಸಿರಿಮುಡಿ-ಗಂಧ, ಮಂಡಲ ಪ್ರಸಾದ ಸ್ವೀಕರಿಸಿ ಪುಣ್ಯಭಾಜನರಾಗಬೇಕಾಗಿ ವಿಶ್ವಾಸ ಪೂರ್ವಕವಾಗಿ ಸಮಸ್ತ ಭಂಡಾರಿ ಸಮಾಜ ಬಾಂಧವರ ಪರವಾಗಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ, ಉಪಾಧ್ಯಕ್ಷರುಗಳಾದ ಯು.ಗಣೇಶ್ ಹಳೆಯಂಗಡಿ ಮತ್ತು ವರಲಕ್ಷ್ಮೀ ನಾಗೇಶ್ ಮಂಗಳೂರು, ಗೌರವ ಕಾರ್ಯದರ್ಶಿ ಸೋಮಶೇಖರ ಎಂ. ಭಂಡಾರಿ, ಕೋಶಾಧಿಕಾರಿ ಸಂಜೀವ ಭಂಡಾರಿ ಬನ್ನಂಜೆ, ಜೊತೆ ಕಾರ್ಯದರ್ಶಿ ಪೂರ್ಣಿಮಾ ಶಿವರಾಮ್ ಭಂಡಾರಿ, ಜೊತೆ ಕೋಶಾಧಿಕಾರಿ ವಾರಿಜ ವಾಸುದೇವ ಭಂಡಾರಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ (ಅಧ್ಯಕ್ಷರು, ಭಂಡಾರಿ ಮಹಾಮಂಡಲ), ಉಪಾಧ್ಯಕ್ಷರುಗಳಾದ ಸುಭಾಶ್ ಭಂಡಾರಿ ಉಡುಪಿ, ಕುತ್ಪಾಡಿ ಅಶೋಕ್ ಭಂಡಾರಿ, ಶಾರದಾ ಭಂಡಾರಿ ಕೊಪ್ಪ, ಕೋಶಾಧಿಕಾರಿ ಯು.ಸತೀಶ್ ಭಂಡಾರಿ ಕಾಡಬೆಟ್ಟು, ಸಂಚಾಲಕರುಗಳಾದ ಮಾಧವ ಭಂಡಾರಿ ಕೂಳೂರು, ವಿಶ್ವನಾಥ ಭಂಡಾರಿ ಕಾಡಬೆಟ್ಟು, ವಿಜಯ ಭಂಡಾರಿ ಹಳೆಯಂಗಡಿ, ವಿಜಯ ಭಂಡಾರಿ ಹಳೆಯಂಗಡಿ, ಬಿರ್ತಿ ಗಂಗಾಧರ ಭಂಡಾರಿ, ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾ| ಶೇಖರ್ ಆರ್.ಭಂಡಾರಿ ಮತ್ತು ಸರ್ವ ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ. : ರೋನ್ಸ್ ಬಂಟ್ವಾಳ್

Comments on this Article
James Fernandes, Barkur Chicago Sat, April-28-2018, 6:27
Faith of our ancestors living still. Tremendously well detailed program. Hope they will capture and put in YouTube. Success be yours.
Agree[0]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Kallianpur: Students Suffer during rain.
View More

A CORDIAL INVITATIONA CORDIAL INVITATION
Get Well Through nature, Keep clean ThonseGet Well Through nature, Keep clean Thonse
Watch Eye to Eye by Avila D’souzaWatch Eye to Eye by Avila D’souza
Udupi CIty Municipal Council Election 2018Udupi CIty Municipal Council Election 2018
Veez Konkani Illustrated - Weekly e-MagazineVeez Konkani Illustrated - Weekly e-Magazine
Rozaricho Gaanch Easter 2018Rozaricho Gaanch Easter 2018
Milarchi Lara - Issue April - 2018Milarchi Lara - Issue April - 2018
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
Visit Axis Bank Now open in Kallianpura, SanthekatteVisit Axis Bank Now open in Kallianpura, Santhekatte
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India
Kemmann.com Face Book

Click here for Kemmannu Knn Facebook Link

Mangalorean Fertility Physician in New York

 

Mangalorean Fertility Physician in New York

 

For information, please email nigelepereira.wcmc@gmail.com or contact Megi Zeku at 646-962-7499, prompt 3.

 

 

Contact for all your Travel, Tours and For Rent a Car

Contact Maria Travels  for all your Travel, Tours and For Rent a Car Mob: 9980889512 or 9819444307

Thanksgiving to St. Lawrance

Thanksgiving to St. Lawrance

Sponsored Albums