ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಜರುಗಿದ ಷೋಡಶ ಪವಿತ್ರಾತ್ಮಕ ನಾಗಮಂಡಲ ವೈಭವೋತ್ಸವ


Rons Bantwal
Kemmannu News Network, 09-05-2018 22:43:53


Write Comment     |     E-Mail To a Friend     |     Facebook     |     Twitter     |     Print


ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಜರುಗಿದ ಷೋಡಶ ಪವಿತ್ರಾತ್ಮಕ ನಾಗಮಂಡಲ ವೈಭವೋತ್ಸವ ಹಿಂದು  ಸಮಾಜ ಎಂದೂ ಕೋಮುವಾದಿ ಆಗÀದು : ಡಾ| ಪ್ರಭಾಕರ ಭಟ್ ಕಲ್ಲಡ್ಕ

ಮುಂಬಯಿ, ಮೇ.08: ಉಡುಪಿ ಬಾರ್ಕೂರು ಅಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಷೋಡಶ ಪವಿತ್ರಾತ್ಮಕ ಸಂಪೂರ್ಣ ನಾಗಮಂಡಲ ವೈಭವೋತ್ಸವನ್ನು ಇಂದಿಲ್ಲಿ ಮಂಗಳವಾರ ವಿಧಿವತ್ತಾಗಿ ನೆರವೇರಿಸಿತು.

ಆ ಪ್ರಯುಕ್ತ ಮುಂಜಾನೆ ಶ್ರೀನಾಗೇಶ್ವರ ದೇವರಿಗೆ ಸಹಸ್ರ ಸೀಯಾಳಾಭಿಷೇಕ, ಬೆಳಿಗ್ಗೆ ಶ್ರೀ ನಾಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ ಪ್ರಾರಂಭಿಸಿ ಮಹಾಪೂಜೆ, ಮಧ್ಯಾಹ್ನ `ಮಹಾ ಅನ್ನಸಂತರ್ಪಣೆ’, ಸಾಯಂಕಾಲ ಶ್ರೀ ನಾಗೇಶ್ವರ ದೇವರಿಗೆ ರಂಗಪೂಜೆ ಅಷ್ಟಾವಿಧಾನ ಸೇವೆ ನಡೆಸಿ ರಾತ್ರಿ ಶ್ರೀ ನಾಗದೇವರ ಸನ್ನಿಧಿಯಲ್ಲಿ ದೀಪಾರಾಧನೆ ಪ್ರಸನ್ನ ಪೂಜಾ, ಸುಧಾಕುಂಭ ಪ್ರತಿಷ್ಠಾ ಪೂರ್ವಕ ಹಾಲಿಟ್ಟು ಸೇವಾ, ಸ್ವಸ್ತಿಗೆ ದೇವರನ್ನು ಕೂಡಿ ಪಲ್ಲಕ್ಕಿಯಲ್ಲಿ ನಾಗಮಂಡಲ ಮಂಟಪ ಪ್ರವೇಶ ಬಳಿಕ `ನಾಗ ಮಂಡಲ ಕಲ್ಪೋಕ್ತ ಪೂಜೆ’ನಡೆಸಲಾಯಿತು. ವೇ| ಮೂ| ಬಿ.ಎನ್ ರಾಮಚಂದ್ರ ಕುಂಜಿತ್ತಾಯ ನಾಗ ಮಂಡಲದ ಪೂಜಾವಿಧಿಗಳನ್ನು ನೆರವೇರಿಸಿದರು.  ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಬಿ.ಆರ್ ವಿಶ್ವನಾಥ ಶಾಸ್ತ್ರಿ ಪ್ರಸಾದ ವಿತರಿಸಿದರು.


ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ  ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಎನ್.ಬಾಲಕೃಷ್ಣ ವೈದ್ಯ ಮತ್ತು ನಟರಾಜ ವೈದ್ಯ ಇವರ  ನಾಗ ಕನ್ನಿಕೆಯರ ನರ್ತನದಲ್ಲಿ ಕಲ್ಲಂಗಳ ನಾಗಪಾತ್ರಿಗಳು ಹಾಗೂ ಶ್ರೀ ಕೃಷ್ಣ ಪ್ರಸಾದ ವೈದ್ಯ ಮತ್ತು ಬಳಗವು ಮುದ್ದೂರು ಅಲ್ಲಿನ ಶ್ರೀ ವೈದ್ಯನಾಥೇಶ್ವರ ಢಮರು ಮೇಳದೊಂದಿಗೆ ಲೋಕ ಕಲ್ಯಾಣಾರ್ಥಕವಾಗಿ ಅತಿ ವಿರಳ ಮತ್ತು ಅತ್ಯಪೂರ್ವವಾದ ಷೋಡಶ ಪವಿತ್ರಾತ್ಮಕ ವೈಭವೋಪೇತವಾದ `ಸಂಪೂರ್ಣ ನಾಗಮಂಡಲ’ ಉತ್ಸವ ಸೇವೆ, ನಾಗಮಂಡಲ ನಡೆಸಿದರು. ಬಳಿಕ ಹೂ ಸಿಂಗಾರ ಸೇವಾ ಸಮರ್ಪಣೆ ಜರುಗಿಸಿ ಬುಧವಾರ ಮುಂಜಾನೆ ಮಂಡಲ ಮಹಾ ಪ್ರಸಾದ ವಿತರಣೆ ನಡೆಸಲಾಯಿತು. ಬಳಿಕ ಸಂಪೆÇ್ರ್ರೀಕ್ಷಣ ಕಲಶಾಭಿಷೇಕ, ಮಂಗಲ ಗಣಯಾಗ, ಮಂಗಳ ಓಕುಳಿಸ್ನಾನ, ಕಂಕಣ ಬಂಧ ವಿಸರ್ಜನೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಸುವುದರೊಂದಿಗೆ ಪವಿತ್ರಾತ್ಮಕ ಸಂಪೂರ್ಣ ನಾಗಮಂಡಲ ವೈಭವೋತ್ಸವ ಸಮಾಪನ ಕಂಡಿತು.

ನಾಗಮಂಡಲ ನಿಮಿತ್ತ ಮಂಗಳವಾರ ಸಂಜೆ ಶ್ರೀ ನಾಗೇಶ್ವರ ಕಲಾ ವೇದಿಕೆಯಲ್ಲಿ ನಡೆಸಲ್ಪಟ್ಟ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್‍ನ ಆಡಳಿತ ಮೊಕ್ತೇಸರ ಮತ್ತು ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಸಭಾಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ವಿಶ್ವ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ದೀಪ ಬೆಳಗಿಸಿ ಧಾರ್ಮಿಕ ಸಭೆಗೆ ಚಾಲನೆಯನ್ನಿತ್ತರು. ಬಾರ್ಕೂರು ಮಹಾಸಂಸ್ಥಾನ ಭಾರ್ಗವಬೀಡು ಇದರ ಸಂತೋಷ ಭಾರತಿ ಸ್ವಾಮೀಜಿ ಆಶೀರ್ವಚನವನ್ನಿತ್ತರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ| ಪ್ರಭಾಕರ ಭಟ್ ಕಲ್ಲಡ್ಕ ಧಾರ್ಮಿಕ ಪ್ರವಚನ ನೀಡಿದರು.

ಇದೇ ಶುಭಾವಸರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ವೇ| ಮೂ| ಶ್ರೀ ಲಕ್ಷ್ಮಿನಾರಾಯಣ ಅಸ್ರಣ್ಣ ಸ್ವಾಗತ ಗೋಪುರವನ್ನು, ಮುಂಬಯಿನ ಪ್ರತಿಷ್ಠಿತ ಉದ್ಯಮಿ, ಆರ್ಗನಿಕ್ ಇಂಡಸ್ಟ್ರೀಸ್ ಸಮುಹದ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ ಅವರು ಭಂಡಾರಿ ಸಮುದಾಯ ಭವನ ಉದ್ಘಾಟಿಸಿದರು. ಮುಂಬಯಿನ ಉದ್ಯಮಿ ದಿವಾಕರ ಶೆಟ್ಟಿ ಮುದ್ರಾಡಿ `ಸಾಧನ ಸಂಭ್ರಮ’ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿ ಶುಭಾರೈಸಿದರು.

ಮುಖ್ಯ ಅತಿಥಿüಯಾಗಿ ಗೌರವ ಅತಿಥಿüಗಳಾಗಿ ರಾಜ್ಯ ಪ್ರಶಸ್ತಿ ವಿಜೇತ ಸಮಾಜ ಸೇವಕ ಶಾಂತರಾಮ ಶೆಟ್ಟಿ ಬಾರ್ಕೂರು, ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ ವಿದ್ವಾನ್ ವಿಶ್ವನಾಥ ಭಟ್ ಕೈರಬೆಟ್ಟು, ಉಡುಪಿ ನಗರಸಭಾ ಸದಸ್ಯ ನವೀನ್ ಭಂಡಾರಿ, ಭಂಡಾರಿ ಮಹಾಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಅಂತರಾಷ್ಟ್ರೀಯ ಪ್ರಸಿದ್ಧ ಕೇಶ ವಿನ್ಯಾಸಗಾರ ಡಾ| ಶಿವರಾಮ ಕೆ.ಭಂಡಾರಿ ಮುಂಬಯಿ, ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಾಜಿ ಅಧ್ಯಕ್ಷ ಬಾಲಕೃಷ್ಣ ಪಿ.ಭಂಡಾರಿ, ಮಹಿಳಾ ವಿಭಾಗಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ, ಚಲನಚಿತ್ರ ನಟ ಕಡಂದಲೆ ಸೌರಭ್ ಎಸ್.ಭಂಡಾರಿ ಸಮಾಜ ಸೇವಕ ಶಂಭು ಶೆಟ್ಟಿ ವೇದಿಕೆಯನ್ನಲಂಕರಿಸಿದ್ದರು.

ಭಾರತದಲ್ಲಿ ಕೋಟಿಕೋಟಿ ದೇವರು ಸಾವಿರಾರು ಭಾಷೆ, ಸಂಸ್ಕೃತಿಗಳಿದ್ದು ಎಲ್ಲವನ್ನೂ ಇಲ್ಲಿ ಪೆÇ್ರೀತ್ಸಹಿಸಿ ಬೆಳೆಸಲಾಗುತ್ತಿದೆ ಅಂದಮೇಲೆ ಹಿಂದು ಸಮಾಜ ಎಂದೂ ಕೋಮುವಾದಿ ಆಗÀಲು ಸಾಧ್ಯವಿಲ್ಲ. ಹಿಂದೂ ಸಾಮರಸ್ಯದ ಧ್ಯೋತಕದವಾಗಿದ್ದು ಒಂದು ಜೀವನದ ಪದ್ಧತಿ ಆಗಿದೆ. ಎಲ್ಲರಿಗೂ ಒಳಿತಾಗಲಿ ಎನ್ನುವುದೇ ಹಿಂದೂ ಧರ್ಮವಾಗಿದೆ. ಇಲ್ಲಿನ ಜನತೆ ಪ್ರಕೃತಿಯ ಆರಾಧಕರಿದ್ದಾರೆ. ಧರ್ಮಗಳು ಸಮಾಜವನ್ನು ಒಟ್ಟು ಮಾಡಬೇಕು. ಎಲ್ಲರೂ ಒಂದಾಗಿ ಬಾಳಿದಾಗ ಹಿಂದು ಸಮಾಜ ಬಲಿಷ್ಠವಾಗುತ್ತದೆ. ಅದಕ್ಕಾಗಿ ಜಾತಿಗಳೊಳಗಿನ ಸ್ವಾರ್ಥ ಮರೆತು ಸಮಾಜ, ರಾಷ್ಟ್ರವನ್ನು ಬಲಪಡಿಸೋಣ ಎಂದು ಡಾ| ಪ್ರಭಾಕರ ಭಟ್ ಕರೆಯಿತ್ತರು.

ದೇವಸ್ಥಾನದ ನಾಡು ಬಾರ್ಕೂರು. ಇಲ್ಲಿ ಧರ್ಮವಿಶಾಲತೆಯಿದೆ. ಇಲ್ಲಿ ನೆಲೆನಿಂತ ನಾಗೇಶ್ವರ ದೇವರು ಎಲ್ಲರಿಗೂ ಸೇರಿದವರಾಗಿದ್ದಾರೆ. ಆದುದರಿಂದ ದೇವರ ಸಮ್ಮುಖದಲ್ಲಿ ನಾವೆಲ್ಲರೂ ಸಮಾನರು. ನಮ್ಮೊಳಗಿನ ಭೇದ ವ್ಯತ್ಯಾಸಗಳನ್ನು ನಾವೇ ಸರಿಪಡಿಸಬೇಕು. ದೇವಸ್ಥಾನಗಳು ಸಮಾಜೋದ್ಧಾರಕ್ಕಾಗಿ ಶ್ರಮಿಸಬೇಕು. ಆದುದರಿಂದ ಧರ್ಮದಲ್ಲಿ ರಾಜಕೀಯ ಬೇಡ. ರಾಜಕೀಯದಲ್ಲಿ ಧರ್ಮವಿರಲಿ ಎಂದು ಸಲಹಿದರು.

ಇದೊಂದು ಅಮೃತಮಯ ಕಾರ್ಯಕ್ರಮ. ಇದು ಇಲ್ಲಿನ ಮಣ್ಣಿನ ಗುಣ ಅಥವಾ ನಾಗೇಶ್ವರದ ಅನುಗ್ರಹ ಆಗಿರಬಹುದು. ಕೌಟುಂಬಿಕ ವಾತಾವರಣಕ್ಕೆ ಈ ಕಾರ್ಯಕ್ರಮ ಮಾದರಿ. ದೇವರನ್ನು ಸುಂದರಗೊಳಿಸಿದಾಗ ದೇವರು ನಮ್ಮ ಬದುಕನ್ನೇ ಸುಂದರೀಕರಿಸುತ್ತಾರೆ. ಸಾನಿಧ್ಯದ ಶಕ್ತಿಯನ್ನು ವೃದ್ಧಿಸುವಲ್ಲಿ ಭಕ್ತರ ಪಾತ್ರ ಹಿರಿದಾಗಿದ್ದು ಇದಕ್ಕೆ ತಾವೆಲ್ಲರೂ ಕಾರಣಕರ್ತರಾಗಿದ್ದೀರಿ. ಇಂತಹ ಪಾವಿತ್ರ ್ಯತಾ ಮತ್ತು  ಐತಿಹಾಸಿಕ ಕಾರ್ಯಕ್ರಮ ಆಯೋಜನೆ ಒಂದು ಸಾಧನೆಯೇ ಸರಿ. ಈ ಮೂಲಕ ಎಲ್ಲರೂ ಸಹಬಾಳ್ವೆಯಿಂದ ಬಾಳುವಂತಾಗಲಿ ಎಂದು ಅಸ್ರಣ್ಣರು ಆಶಯ ಪಟ್ಟರು.

ಭಂಡಾರಿ ಸಮಾಜ ಎಷ್ಟೋ ಲಕ್ಷ ವರ್ಷಗಳ ಹಿಂದಿನದ್ದಾಗಿದೆ. ಬಹುಶಃ ದೇವತೆಗಳೂ ಕೇಶ ವಿನ್ಯಾಸ ಮಾಡಿಸುತ್ತಿದ್ದ ಕಾರಣ ದೇವತೆಗಳು ಹುಟ್ಟಿದ ಕಾಲದಲ್ಲೇ ಭಂಡಾರಿ ಸಮಾಜ ಹುಟ್ಟಿದೆ ಅಂದುಕೊಂಡಿದ್ದೇನೆ. ಇದೊಂದು ಸಂಬಂಧಗಳನ್ನು ಜೊತೆಯಲ್ಲಿರಿಸಿ ಬಾಳಿಕೊಂಡ ಸಮಾಜ. ವಾಕ್‍ಚಾತುರ್ಯರೂ ಆಗಿರುವ ಭಂಡಾರಿಗಳ ಕೈಚಳಕದಿಂದ ಮನುಷ್ಯ ಚೆಂದವಾಗಿ ಕಾಣುತ್ತಾನೆ. ಹುಟ್ಟನ್ನು ಜಾತಿಯಿಂದ ಗುರುತಿಸಲಾಗುವುದು. ಆದುದರಿಂದ ಎಲ್ಲಾ ಜಾತಿಗಳ ಕೂಡುವಿಕೆಯಿಂದ ಹಿಂದೂ ಸಮಾಜ ಬೆಳೆಸಬೇಕು. ಭಂಡಾರಿಗಳಿಗೂ ಈ ಬಾರ್ಕೂರು ಸಂಸ್ಥಾನ ಗುರುಪೀಠವಾಗಿರುತ್ತದೆ ಎಂದು ಸ್ವಾಮೀಜಿ ಮನವರಿಸಿದರು.

ಬಂಟರು ಮತ್ತು ಭಂಡಾರಿ ಸಮೀಪ್ಯದ ಸಂಬಂಧಿಗಳು. ಬಂಟರ ಕಷ್ಟಸುಖಕ್ಕೆ ಭಂಡಾರಿ ಬಂಧುಗಳ ಯೋಗ ಕ್ಷೇಮತೆ ಅನನ್ಯವಾದುದು. ಭಂಡಾರಿ ಸಮುದಾಯದವರು ಸರಳಸಜ್ಜನಿಕರು ಮತ್ತು ನಿಷ್ಠಾವಂತರು. ಮುಂಬಯಿ ಜಾತ್ಯಾತೀತ ನಗರವಾಗಿದ್ದು ಅಲ್ಲಿ ಎಲ್ಲರೂ ಬಂಧುಭಗಿನಿಯರಂತೆ ನಾವು ಬಾಳುತ್ತಿದ್ದೇವೆ. ಇಂತಹ ಸಂಬಂಧಗಳಿಂದಲೇ ಬದುಕು ಪಾವನವಾಗುವುದು ಎಂದು ಐಕಳ ಹರೀಶ್ ತಿಳಿಸಿದರು.

ಕಚ್ಚೂರು ನಾಗೇಶ್ವರ ದೇವರ ಸನ್ನಿಧಿಯಲ್ಲಿ ಸಮಾಜ ಬಂಧುಗಳು ಸಕ್ರೀಯವಾಗಿ ಸೇವೆಗಿಳಿದ 1989ರಿಂದ ಸಮುದಾಯವೂ, ಕ್ಷೇತ್ರವೂ ದಿನೇ ದಿನೇ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಧಾರ್ಮಿಕ ಶ್ರದ್ಧಾ ಕೇಂದ್ರದ ಪುನರ್ ನಿರ್ಮಾಣದಿಂದ ಸಮಾಜವೂ ಪುನರುಸ್ಥಾವಗೊಂಡಿದೆ. ಕುಲದೇವರ ಆರಾಧನೆಯಿಂದ ಸಮಾಜದ ಉನ್ನತಿ ಸಾಧ್ಯ ಎನ್ನುವುದಕ್ಕೆ ಕಚ್ಚೂರು ನಾಗೇಶ್ವರ ದೇವಸ್ಥಾನ ಸಾಕ್ಷತ್ ಸಾಕ್ಷಿಯಾಗಿದೆ. ಜೀವನದ ಸುಖ ಶಾಂತಿ ನೆಮ್ಮದಿಗಾಗಿ ಶ್ರದ್ದಾ ಕೇಂದ್ರದ ಅಗತ್ಯವಿದೆ. ಭಂಡಾರಿ ಬಂಧುಗಳು ಎಲ್ಲ ಸಮಾಜಗಳ ಪ್ರೀತಿಗೆ ಪಾತ್ರರಾಗಿ ಒಗ್ಗಟ್ಟಿನಿಂದ ಮುನ್ನಡೆದು ಇತರ ಸಮಾಜಕ್ಕೂ ಮಾದರಿ ಆಗಬೇಕು ಎನ್ನುವುದೇ ನಮ್ಮ ಆಶಯ ಎಂದು ಸುರೇಶ್ ಭಂಡಾರಿ ತಿಳಿಸಿದರು.

ಸಮಾರಂಭದಲ್ಲಿ ಈ ಬೃಹತ್ ಕಾರ್ಯಕ್ರಮವನ್ನು ನಿಸಾರ್ಥವಾಗಿ ತನ್ನ ಸಾರಥ್ಯದಲ್ಲಿ ಪೂರೈಸಿದ ಸುರೇಶ್ ಭಂಡಾರಿ ಅವರನ್ನು ಶೋಭಾ ಸುರೇಶ್, ಸೌರಭ್ ಭಂಡಾರಿ, ಮೇಘ ಸೌರಭ್, ಕು| ಅನಘ ಎಸ್.ಭಂಡಾರಿ ಅವರನ್ನು ಒಳಗೊಂಡು ಸೇವಾ ಟ್ರಸ್ಟ್ ಮತ್ತು ಭಂಡಾರಿ ಮಹಾಮಂಡಲದ ಪದಾಧಿಕಾರಿಗಳು ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಹಾಗೂ ಇತರ ಪದಾಧಿಕಾರಿಗಳನ್ನು ಮತ್ತು ಮಹಾದಾನಿಗಳನ್ನು ಸತ್ಕರಿಸಿ ಅಭಿವಂದಿಸಿದರು.

ಕಾರ್ಯಕ್ರಮದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್‍ನ ಉಪಾಧ್ಯಕ್ಷರುಗಳಾದ ಯು.ಗಣೇಶ್ ಹಳೆಯಂಗಡಿ ಮತ್ತು ವರಲಕ್ಷ್ಮೀ ನಾಗೇಶ್, ಕೋಶಾಧಿಕಾರಿ ಸಂಜೀವ ಭಂಡಾರಿ ಬನ್ನಂಜೆ, ಜೊತೆ ಕಾರ್ಯದರ್ಶಿ ಪೂರ್ಣಿಮಾ ಶಿವರಾಮ್ ಭಂಡಾರಿ, ಜೊತೆ ಕೋಶಾಧಿಕಾರಿ ವಾರಿಜ ವಾಸುದೇವ ಭಂಡಾರಿ, ಬ್ರಹ್ಮಕಲಶೋ ತ್ಸವ ಸಮಿತಿ ಉಪಾಧ್ಯಕ್ಷರಾದÀ ಸುಭಾಶ್ ಭಂಡಾರಿ ಉಡುಪಿ, ಕುತ್ಪಾಡಿ ಅಶೋಕ್ ಭಂಡಾರಿ, ಶಾರದಾ ವಿಠಲ್ ಭಂಡಾರಿ, ಕೋಶಾಧಿಕಾರಿ ಸತೀಶ್ ಭಂಡಾರಿ ಕಾಡಬೆಟ್ಟು, ಸಂಚಾಲಕರಾದ ಮಾಧವ ಭಂಡಾರಿ ಕೂಳೂರು, ವಿಶ್ವನಾಥ ಭಂಡಾರಿ ಕಾಡಬೆಟ್ಟು, ವಿಜಯ ಭಂಡಾರಿ ಬೈಲೂರು, ಬಿರ್ತಿ ಗಂಗಾಧರ ಭಂಡಾರಿ, ಭಂಡಾರಿ ಮಹಾಮಂಡಲ, ಭಂಡಾರಿ ಸೇವಾ ಸಮಿತಿ ಮುಂಬಯಿ ಸೇರಿದಂತೆ ದೇಶವಿದೇಶಗಳಲ್ಲಿನ ಭಂಡಾರಿ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದರು.

ಕಡಂದಲೆ ಸುರೇಶ್ ಭಂಡಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಸುನೀತಾ ಸತೀಶ್ ಭಂಡಾರಿ ಪ್ರಾರ್ಥನೆಯನ್ನಾಡಿದರು. ಪಧಾಧಿಕಾರಿಗಳು ಅತಿಥಿüಗಳಿಗೆ ಸ್ಮರಣಿಕೆ, ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಸಂಧ್ಯಾ ಭಂಡಾರಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದ್ದು, ಸೇವಾ ಟ್ರಸ್ಟ್‍ನ ಗೌರವ ಕಾರ್ಯದರ್ಶಿ ಸೋಮಶೇಖರ ಎಂ.ಭಂಡಾರಿ ವಂದನಾರ್ಪಣೆಗೈದರು.

ಕಾರ್ಯಕ್ರಮ ವೈಶಿಷ್ಟ ್ಯತೆ:
ಅಜ್ಜಿಗೂ ಮಜ್ಜಿಗೆ ಭಾಗ್ಯ: ಸುಡುಬಿಸಿಲ ಝಳಕದಲ್ಲೂ ಆಗಮಿಸುತ್ತಿದ್ದ ಸಾವಿರಾರು ಭಕ್ತರ ಬಾಯರಿಕೆ ನೀಗಿಸಲು ಹಾಲಿನ ವಾಹನ (ಟ್ಯಾಂಕರ್ ಟ್ಯಾಂಕರ್‍ಗಳಲ್ಲಿ)ದÀಲ್ಲೇ ತಂಪಾದ ಸ್ವಾಧಿಷ್ಟಕರ ಮಜ್ಜಿಗೆ ಪೂರೈಕೆ ಎಲ್ಲರನ್ನೂ ಸಂತುಷ್ಟ ಪಡಿಸುವಂತಿತ್ತು. ಈ ಮಜ್ಜಿಗೆ ಮೊಸರು ಎಲ್ಲರಲ್ಲೂ ಹೆಸರುವಾಸಿ ಆಯ್ತು. 48 ತಾಸುಗಳಲ್ಲೂ ನಿರಂತರ ಊಟೋಪಚಾರ, ಚ್ಹಾ, ತಿಂಡಿ ವ್ಯವಸ್ಥೆ, ಲಕ್ಷಕ್ಕೂ ಮೀರಿದ ಭಕ್ತರ ಸೇರುವಿಕೆಯ ಮಧ್ಯೆಯೂ ಪ್ರತೀಯೊಬ್ಬರಲ್ಲಿ ಶಿಸ್ತುಬದ್ಧ ನಡತೆ, ಕಡಿಮೆ ಮಾತುಕತೆ ಒಂದೆಡೆಯಾದರೆ, ಯುವಕರು ಮತ್ತು ಮಕ್ಕಳು ಮೊಬಾಯ್ಲ್‍ಗೆ ಅಂಟಿಕೊಳ್ಳುವ ಬದಲು ವಿವಿಧ ಸೇವೆಗಳಲ್ಲಿ ತೊಡಗಿಸಿಕೊಂಡು ಸೇವಾ ಪ್ರೇರಣೆಯೊಂದಿಗೆ ಅಚ್ಚರಿ ಮೂಡಿಸಿದರು. ಲಕ್ಷ ಭಕ್ತರ ಮಧ್ಯೆಯೂ ಸ್ವಚ್ಛತೆ, ಶುಚಿತ್ವದತ್ತ ಲಕ್ಷ ್ಯ ನೀಡುತ್ತಾ ವಾತಾವರಣ ಸ್ವಚ್ಛತೆ ಕಪಾಡುತ್ತಾ ಸ್ವಚ್ಛ ಭಾರತ್‍ಗೆ ಮಾದರಿಯಾಗಿತ್ತು. ಹನಿಹನಿ ನೀರನ್ನೂ ಪೆÇೀಲು ಮಾಡದೆ ಜಲಸಂರಕ್ಷಣೆಯ ಹೊಣೆ ನಮ್ಮದು ಎಂದು ಸಾರುತ್ತಿತ್ತು. ಕೆಮಿಕಲ್‍ಮುಕ್ತ ಬಣ್ಣಗಳು, ಅರಸಿನ, ಕುಂಕುಮ, ಪ್ರಸಾದರೂಪವಾಗಿ ನೀಡಲ್ಪಟ್ಟ ಅಪ್ಪಟ ತುಪ್ಪದ (ಫ್ಯೂರ್ ಗೀ) ಬೂಂದಿ ಲಡ್ಡು, ಅತೀವ ಶಬ್ದ ಮಾಲಿನ್ಯಕ್ಕೂ ಕಡಿವಾಣ ಹಾಕಲಾಗಿ ಗರ್ನಾಲ್, ಪಟಾಕಿಮುಕ್ತÀ ಸಂಭ್ರಮ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತ್ತು. ನಾಗಮಂಡಲ ವೈಭವೋತ್ಸವ ಆರಂಭದ ಮುನ್ನ ವರುಣನೂ ಗುಡುಗು ಸಿಡಿಲು ಸಹಿತ ಅಬ್ಬರಿಸಿ ಭಾರೀ ಸೆಖೆಯಿಂದ ಬೆವರಿಳಿಸಿ ಒದ್ದಾಡುತ್ತಿದ್ದ ಭಕ್ತಸಾಗರಕ್ಕೆ ತಂಪೆರೆದು ಬೆಳಿಗ್ಗಿನ ವರೆಗೂ ತಂಪಾಗಿನ ವಾತಾವರಣ ನಿರ್ಮಿಸಿ ಮಳೆರಾಯನು ಅಭಿವೃದ್ಧಿಯ ಸಂಕೇತವಾಗಿ ಧರೆಗಿಳಿದು ಹರಸಿದ್ದು ಒಟ್ಟು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕು| ಮೇಘಮಾಲ ಪೂಜಾರಿ ಅವರು ಭರತನಾಟ್ಯ ಮತ್ತು ನೃತ್ಯಗಳನ್ನು ಹಾಗೂ ಹೆಸರಾಂತ ಕಲಾವಿದರು `ಗದಾಯುದ್ಧ’ ಯಕ್ಷಗಾನ ಪೌರನಿಕ ಪ್ರಸಂಗವನ್ನು ಪ್ರದರ್ಶಿಸಿದರು. ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ ವಿದ್ವಾನ್ ವಿಶ್ವನಾಥ ಭಟ್ ಕೈರಬೆಟ್ಟು ಅವರು `’ ಸಮುದ್ರ ಮಥನ-ಅಮೃತೋದ್ಭವ’ ಹರಿಕಥೆ ಸಂಕೀರ್ತನೆ ಹಾಗೂ ಆಳ್ವಾಸ್ ವಿದ್ಯಾಸಂಸ್ಥೆ ಮೂಡಬಿದ್ರೆ ಇದರ ವಿದ್ಯಾಥಿರ್üಗಳು ಸಾಂಸ್ಕೃತಿಕ ವೈಭವ ಪ್ರಸ್ತುತ ಪಡಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Kemmannu Main Road [Work-in-progress, Pictures upd [2 Comments]
View More

Dist & State Level Yoga Competiton at the Thonse Health Centre on 28th May.Dist & State Level Yoga Competiton at the Thonse Health Centre on 28th May.
Mount Rosary Church Annoucement for the weekMount Rosary Church Annoucement for the week
Rozaricho Gaanch Easter 2018Rozaricho Gaanch Easter 2018
Milarchi Lara - Issue April - 2018Milarchi Lara - Issue April - 2018
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Milarchi Laram - Issue Jan 2018Milarchi Laram - Issue Jan 2018
Souza’s Mega Festival SaleSouza’s Mega Festival Sale
Read online Uzvaad:<font color=red> Read online Uzvaad</font color=red>:
Visit Axis Bank Now open in Kallianpura, SanthekatteVisit Axis Bank Now open in Kallianpura, Santhekatte
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India
Mangalorean Fertility Physician in New York

 

Mangalorean Fertility Physician in New York

 

For information, please email nigelepereira.wcmc@gmail.com or contact Megi Zeku at 646-962-7499, prompt 3.

 

 

Thank you from Kemmannu.comContact for all your Travel, Tours and For Rent a Car

Contact Maria Travels  for all your Travel, Tours and For Rent a Car Mob: 9980889512 or 9819444307

Thanksgiving to St. Lawrance

Thanksgiving to St. Lawrance

Sponsored Albums