Breif Mumbai News with Pictures


Rons Bantwal
Kemmannu News Network, 11-05-2018 10:33:27


Write Comment     |     E-Mail To a Friend     |     Facebook     |     Twitter     |     Print


ಸುಬ್ರಾಯ ಚೊಕ್ಕಾಡಿಯವರಿಗೆ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ (2018)

ಮುಂಬಯಿ, ಮೇ.09: ಅಕ್ಷಯ ಪತ್ರಿಕೆಯ ಮಾಜಿ ಗೌ| ಪ್ರ| ಸಂಪಾದಕರಾದ ಶ್ರೀ ಎಂ. ಬಿ. ಕುಕ್ಯಾನ್ ಅವರು ಪ್ರಾಯೋಜಿಸಿ ಬಿಲ್ಲವರ ಎಸೋಸಿಯೇಶನ್ ಸಂಯೋಜಿಸುತ್ತಿರುವ 2018ನೇ ಸಾಲಿನ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕವಿ, ವಿಮರ್ಶಕ  ಸುಬ್ರಾಯ ಚೊಕ್ಕಾಡಿ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು 25000/ ರೂ. ನಗದು, ಪ್ರಶಸ್ತಿ ಫಲಕ, ಸನ್ಮಾನ ಪತ್ರಗಳನ್ನೊಳಗೊಂಡಿದೆ. ಹಿರಿಯ ಸಾಹಿತಿಗಳಾದ ಡಾ| ಸುನೀತಾ ಶೆಟ್ಟಿ ಹಾಗೂ ಶ್ರೀ ವಿ.ಗ. ನಾಯಕನವರನ್ನೊಳಗೊಂಡ ಸಾಹಿತ್ಯ ಪ್ರಶಸ್ತಿ ನಿರ್ಣಾಯಕ ಸಮಿತಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.

ಈ ಪ್ರಶಸ್ತಿಯನ್ನು ಸುಬ್ರಾಯ ಚೊಕ್ಕಾಡಿಯವರು ಕನ್ನಡ ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ. ಸುಬ್ರಾಯ ಚೊಕ್ಕಾಡಿಯವರು ಪ್ರಸಿದ್ಧ ಕವಿ, ವಿಮರ್ಶಕರು ಹಾಗೂ ಶಿಕ್ಷಕರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ 29-06-1940 ರಂದು ಅಜನಗಡ್ಡೆ ಗಣಪಯ್ಯ ಹಾಗೂ ಸುಬ್ಬಮ್ಮ ದಂಪತಿಗಳಿಗೆ ಸುಪುತ್ರರಾಗಿ ಜನಿಸಿರುವ ಸುಬ್ರಾಯ ಚೊಕ್ಕಾಡಿಯವರು ತಮ್ಮ ಊರಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಪಂಜ ಹೊಸ್ಕೂಲ್‍ನಲ್ಲಿ ಎಸ್.ಎಸ್.ಎಲ್.ಸಿ. ಮುಗಿಸಿದರು. ಅನಂತರ ಟೀಚರ್ಸ್ ಟೆನಿಂಗ್ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವೀಧರರಾದರು. 1959 ರಲ್ಲಿ ಸುಳ್ಯ ತಾಲೂಕಿನ ಜಯವರ್ಧನ ಸ್ಕೂಲ್‍ನಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ, ಕುಕ್ಕುಎಡ್ಕ, ಪೈಲಾರು, ಹಾಸನಡ್ಕ ಶಾಲೆಗಳಲ್ಲಿ 39 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಸುಬ್ರಾಯ ಚೊಕ್ಕಾಡಿಯವರ ತಂದೆಯವರು ಯಕ್ಷಗಾನ ಭಾಗವತರು ಹಾಗಾಗಿ ಸುಬ್ರಾಯ ಚೊಕ್ಕಾಡಿ ಯಕ್ಷಗಾನಕ್ಕೆ ಆಕರ್ಷಿತರಾಗಿ ಯಕ್ಷಗಾನ ಹಾಗೂ ತಾಳ ಮದ್ದಳೆಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದರು. ಅಲ್ಲದೆ ನಾಟಕ ತಂಡ ಕಟ್ಟಿ ನಾಟಕಗಳನ್ನು ಪ್ರದರ್ಶಿಸಿ ನಟಿಸಿದ ಅನುಭವವೂ ಇವರಿಗಿದೆ.

ಎಳವೆಯಲ್ಲೇ ಸಾಹಿತ್ಯಾಸಕ್ತರಾದ ಸುಬ್ರಾಯ ಚೊಕ್ಕಾಡಿಯವರು ಈ ವರೆಗೆ 10 ಕವನ ಸಂಕಲನ, ಒಂದು ಸಮಗ್ರ ಕಾವ್ಯ, ಒಂದು ಕಾದಂಬರಿ, ಒಂದು ಕಥಾ ಸಂಕಲನ, 4 ವಿಮರ್ಶಾಕೃತಿ, 4 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. 20 ಸಿಡಿಗಳಲ್ಲಿ ಇವರ ಸ್ವರಚಿತ ಹಾಡುಗಳು ಧ್ವನಿಮುದ್ರಿತವಾಗಿದೆ. ಸಾಹಿತ್ಯ ಪರಿಷತ್ತು ಅಕಾಡೆಮಿ, ಆಳ್ವಾಸ್ ನುಡಿಸಿರಿ, ಕಾಂತಾವರ ಕನ್ನಡ ಸಂಘಗಳಿಂದ ಇವರು ಸನ್ಮಾನಿತರಾಗಿದ್ದಾರೆ. ಹಲವು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಅಲಂಕರಿಸಿದ್ದಾರೆ.

ಬಿಲ್ಲವ ಭವನದಲ್ಲಿ ತಾ. 26-05-2018ನೇ ಶನಿವಾರದಂದು ಸಮಯ ಸಂಜೆ 4.30 ಗಂಟೆಗೆ ಜರಗಲಿರುವ  ಸಮಾರಂಭದಲ್ಲಿ ಶ್ರೀ ಗುರುನಾರಾಯಣ ಪ್ರಶಸ್ತಿಯನ್ನು ಶ್ರೀ ಸುಬ್ರಾಯ ಚೊಕ್ಕಾಡಿಯವರಿಗೆ ಪ್ರದಾನಿಸಲಾಗುವುದು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಪತ್ರಕರ್ತ, ಸಾಹಿತಿ ಲಕ್ಷಣ ಕೊಡಸೆಯವರು ಪ್ರಶಸ್ತಿ ಪ್ರದಾನ ಗೈಯಲಿದ್ದಾರೆ. ಇದೇ ಸಂದರ್ಭದಲ್ಲಿ  ಡಾ| ಈಶ್ವರ ಅಲೆವೂರು ರಚಿಸಿದ `ಪ್ರಗತಿಪರ ಚಿಂತನೆಯ ಸಾಹಿತಿ ಎಂ.ಬಿ. ಕುಕ್ಯಾನ್’ ಕೃತಿಯನ್ನು ಡಾ| ಸುನೀತಾ ಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ. ಪ್ರಶಸ್ತಿ ಪ್ರಾಯೋಜಕರಾಗಿರುವ ಹಿರಿಯ ಸಾಹಿತಿ ಶ್ರೀ ಎಂ.ಬಿ. ಕುಕ್ಯಾನ್‍ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಕಾರ್ಯಕ್ರಮವನ್ನು ಬಿಲ್ಲವರ ಮಹಾಮಂಡಳದ ಅಧ್ಯಕ್ಷರಾದ ಜಯ ಸಿ. ಸುವರ್ಣರು ಉದ್ಘಾಟಿಸಲಿದ್ದಾರೆ. ಬಿಲ್ಲವರ ಎಸೋಸಿಯೇಶನ್ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಮನೋರಂಜನಾ ಕಾರ್ಯಕ್ರಮದ ಪ್ರಯುಕ್ತವಾಗಿ ಶ್ರೀ ಗುರುನಾರಾಯಣ ರಾತ್ರಿ ಶಾಲಾ ಹಳೆ ವಿದ್ಯಾರ್ಥಿಗಳಿಂದ ನಾಟ್ಯ ಕಾರ್ಯಕ್ರಮ ಮತ್ತು ನಾಲಾಸೋಪಾರ - ವಿರಾರ್ ಸ್ಥಳೀಯ ಸದಸ್ಯರಿಂದ ಮರಾಠಿ ಮೂಲದ ತುಳು ನಾಟಕ `ಕುಡೊಂಜಿ ಕತೆ’ (ಗುರುನಾರಾಯಣ ನಾಟಕೋತ್ಸವದಲ್ಲಿ ಪ್ರಥಮ ಪ್ರಶಸ್ತಿ ಪುರಸ್ಕøತ ನಾಟಕ) ಪ್ರದರ್ಶಿಸಲಾಗುವುದು.

Mumbai : Bollywood Actors Amitabh Bachchan with Rishi Kapoor address
media to celebrate the success of their film 102 Not Out in Mumbai on
Thursday.

Mumbai May 10 :- Gaurav Kapoor, Ajay Jadeja & Ashish Nehra with the newly weds bollywood actress Neha Dhupia & Angad Bedi.

Mumbai May 10 :- Former Maha Deputy CM Chhagan Bhujbal finally steps out from K E M today morning at 10 am and headed towards his residence in Santacruz west in Mumbai.In pic interact with media his residence.

Mumbai May 10 :- Renowned South African Cricketer Quinton De Kock, & Promoter of Spintechs, Mr. Brett Hillary, Partner - Zwingo & Vijay Patel Managing Director, Ometex Healthcare at the launched of Spintechs to help batsmen tackle spin at MIG Club, Bandra in Mumbai. In pic South African Cricketer Quinton De Kock showing live demo on field.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Welcome to Thonse Naturecure Hospital
View More

Prayer ServicePrayer Service
ಹಂಪನಕಟ್ಟೆ ಫ್ರೆಂಡ್ಸ್: "9ನೇ ವಾರ್ಷಿಕೋತ್ಸವದ ಸಂಭ್ರಮ" - ಶ್ರೀಮತಿ ರತ್ನಾ ಗಾಣಿಗ ಇವರಿಗೆ ನೂತನ ಮನೆಯನ್ನುಹಸ್ತಂತಾರಿಸಲಾಗುದು.ಹಂಪನಕಟ್ಟೆ ಫ್ರೆಂಡ್ಸ್:
Mount Rosary Church Annoucement for the weekMount Rosary Church Annoucement for the week
AN ODE TO YOU, O DEATH! - Tribute to My DADAN ODE TO YOU, O DEATH! -  Tribute to My DAD
Maria TravelsMaria Travels
Kemmannu Kambala on 9th December - InvitationKemmannu Kambala on 9th December - Invitation
Rozarich Gaanch September- 2018Rozarich Gaanch September- 2018
Karaval Milan Sports Event on 23rd December at Milagres Ground, Kallianpur.Karaval Milan Sports Event on 23rd December at Milagres Ground, Kallianpur.
Rozarich Gaanch September- 2018Rozarich Gaanch September- 2018
Milarchi-Lara-September-2018Milarchi-Lara-September-2018
Welcome to Thonse Naturecure HospitalWelcome to Thonse Naturecure Hospital
Santhosh Villa short film by youth of Udupi Parish and ICYM.Santhosh Villa short film by youth of Udupi Parish and ICYM.
Crossland College, Year book 2017-18Crossland College, Year book 2017-18
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India