Brief Mumbai News with pictures


Rons Bantwal
Kemmannu News Network, 10-06-2018 20:03:45


Write Comment     |     E-Mail To a Friend     |     Facebook     |     Twitter     |     Print


Mumbai June 08 :- Union Minister Nitin Gadkari today Met Mr Salim Khan & Salman as apart of "Sampark for Samarthan" initiative at their home . Discussed with them the developmental initiatives of PM Narendra Modi’s govt in the last 4 years.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ   ಗುರುನಾರಾಯಣ ರಾತ್ರಿ ಹೈಸ್ಕೂಲ್‍ಗೆ 100% ಫಲಿತಾಂಶ

ಮುಂಬಯಿ, ಜೂ.08: ಮುಂಬಯಿ ಮಹಾನಗರದ ಪ್ರತಿಷ್ಠಿತ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಇದರ ಸಂಚಾಲಕತ್ವದಲ್ಲಿರುವ ಶ್ರೀ ಗುರುನಾರಾಯಣ ರಾತ್ರಿ ಕನ್ನಡ ಮಾಧ್ಯಮ ಹೈಸ್ಕೂಲು ಈ ಬಾರಿಯೂ ಮಹಾರಾಷ್ಟ್ರರಾಜ್ಯದ ಎಸ್.ಎಸ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶಕ್ಕೆ ಪಾತ್ರವಾಗಿದೆ.

ಮಾ| ಕಿಶೋರ್ ಶಂಕರ ಪವಾರ್ 77.2%, ಮಾ| ಅರ್ಜುನ್ ರಮೇಶ್ ಕಾಂಬ್ಳೆ 77%, ಮಾ| ಪ್ಯಾಟಿ ಗಂಗಾಧರ್ ದೇವೇಂದ್ರ 70% ಫಲಿತಾಂಶ ಪಡೆದು ಶಾಲೆಯಲ್ಲಿ ಸಂಸ್ಥೆಗೆ ಮತ್ತು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಹಾಗೂ ಬಿಲ್ಲವರ ಅಸೋಸಿಯೇಶನ್‍ನ ಮಾರ್ಗದರ್ಶಕ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ ಹಾಗೂ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಸ್ವರ್ಣಪದಕ ನೀಡಿ ಪೆÇ್ರೀತ್ಸಾಹಿಸುವ ಎಂ.ಬಿ ಕುಕ್ಯಾನ್, ವಿ.ಆರ್ ಕೋಟ್ಯಾನ್, ಶಾಲಾ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್ ಮತ್ತು ಮುಖ್ಯೋಪಾಧ್ಯಾಪಕ ಸಿ.ರಾಮಚಂದ್ರಯ್ಯ ಸೇರಿದಂತೆ ಗಣ್ಯರು ತೇರ್ಗಡೆಗೊಂಡ ಎಲ್ಲಾ ವಿದ್ಯಾಥಿರ್üಗಳಿಗೆ ಮತ್ತು  ಶಾಲಾ ಸಮಿತಿ ಮಂಡಳಿಗೆ ಶುಭಾರೈಸಿದ್ದಾರೆ.


ಗತ ಯಕ್ಷವರ್ಷದ ತಿರುಗಟ್ಟಕ್ಕೆ ಮಂಗಳವನ್ನಾಡಿದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ -ಸಾಯಿಕೇರ್ ಲಾಜಿಸ್ಟಿಕ್ಸ್ ಪ್ರಾಯೋಜಕತ್ವದಲ್ಲಿ ಪ್ರದರ್ಶಿಸಲ್ಪಟ್ಟ `ವಿದ್ಯುನ್ಮತಿ ಕಲ್ಯಾಣ’ ಬಯಲಾಟ 

ಮುಂಬಯಿ, ಜೂ.10: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯು ಗತ ಯಕ್ಷವರ್ಷದ ತಿರುಗಾಟಕ್ಕೆ ಕಳೆದ ಶನಿವಾರ ಸಂಜೆ ಮಂಗಳವನ್ನಾಡಿತು. ವೇಷಭೂಷಣಗಳ ಯಕ್ಷಚೌಕಿಗೆ ಪೂಜೆ ನೆರವೇರಿಸಿದ ಬಳಿಕ ಬಿಲ್ಲವರ ಭವನದ ಮಂದಿರದಲ್ಲಿ ಪ್ರತಿಷ್ಠಾಪಿತ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಪೂಜೆ ನೆರವೇರಿಸಿ ಆರತಿಗೈದ ಮಂಡಳಿ ಸದಸ್ಯರು ಹಾಗೂ ಯಕ್ಷಕಲಾವಿದರು ಕೊನೆಯಲ್ಲಿ ಸಾಯಿಕೇರ್ ಲಾಜಿಸ್ಟಿಕ್ಸ್ ಸಂಸ್ಥೆಯ ಸುರೇಂದ್ರ ಎ.ಪೂಜಾರಿ ಪರಿವಾರದ ಪ್ರಾಯೋಜಕತ್ವದಲ್ಲಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯು `ವಿದ್ಯುನ್ಮತಿ ಕಲ್ಯಾಣ’ ಯಕ್ಷಗಾನ ಬಯಲಾಟ ಪ್ರದರ್ಶಿಸಿದರು. 

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಅಲ್ಲಿನ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಮಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತರಿದ್ದು ಕರ್ನಾಟಕದ ಗಂಡುಕಲೆ ಯಕ್ಷಗಾನ ಕಲೆಯ ಉಳಿವಿಗೆ ಹಗಳಿರುಲು ಎನ್ನದೆ ಶ್ರಮಿಸುವ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮತ್ತು ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಶ್ರಮ ಹಾಗೂ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯು ಜಯ ಸಿ.ಸುವರ್ಣ ಅವರ ಮಾತೃಶ್ರೀ ದಿ| ಅಚ್ಚು ಸಿ.ಸುವರ್ಣ ಸ್ಮರಣಾರ್ಥ ವಾರ್ಷಿಕವಾಗಿ ಕೊಡಮಾಡುವ ಯಕ್ಷಗಾನ ಕಲಾ ಪ್ರಶಸ್ತಿ ಆಗಲಿ, ಅಸೋಸಿಯೇಶನ್‍ನ ಸಾಂಸ್ಕೃತಿಕ ಉಪಸಮಿತಿ ಆಯೋಜಿಸುತ್ತಿರುವ ಶ್ರೀ ಗುರುನಾರಾಯಣ ತುಳು ನಾಟಕ ಸ್ಪರ್ಧೆ ಅನುಕರನೀಯ. ಒಟ್ಟಾರೆಯಾಗಿ ಈ ಬಿಲ್ಲವರ ಅಸೋಸಿಯೇಶನ್ ವಿಶ್ವದ ಬಿಲ್ಲವರ ಆಸ್ತಿಯಾದರೆ ನಾಡಿನ ಸಮಸ್ತ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಶುಭಾನುಗ್ರಹಿಸಿದರು. 

ಅಂತೆಯೇ ಬರುವ ಸೆಪ್ಟೆಂಬರ್‍ನಲ್ಲಿ ಕನ್ಯಾಡಿ ಕ್ಷೇತ್ರದಲ್ಲಿ ಆಯೋಜಿಸಿರುವ ತನ್ನ ಪಟ್ಟಾಭೀಷೇಕ ದಶಮಾನೋತ್ಸವ ಸಂಭ್ರಮ ನಿಮಿತ್ತ ಶ್ರೀರಾಮ ತಾರಕ ಮಂತ್ರ ಯಜ್ಞ ಹಾಗೂ ಧರ್ಮ ಸಂಸದ್‍ನ ಯಶಸ್ಸಿಗೆ ಮುಂಬಯಿವಾಸಿ ತುಳುಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸುವಂತೆ ಶ್ರೀಗಳು ಹೆಚ್ಚಿನ ಮಾಹಿತಿಗಾಗಿ ನಿಮ್ಮವರೇ ಆದ ಹಾಗೂ ಭಾರತ್ ಬ್ಯಾಂಕ್‍ನ ನಿರ್ದೇಶಕ ಗಂಗಾಧರ್ ಜೆ.ಪೂಜಾರಿ ಅವರನ್ನು ಸಂಪರ್ಕಿಸುವಂತೆ ತಿಳಿಸಿದರು. ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್  ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಮತ್ತು ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಶ್ರೀಗಳಿಗೆ ಫಲಪುಷ್ಫಗಳಿಂದ ಗೌರವಿಸಿದರು.

ಸಭೆಯಲ್ಲಿ ಕನ್ಯಾಡಿ ಕ್ಷೇತ್ರದ ಸಂಚಾಲಕ ಕೃಷ್ಣಪ್ಪ ಪೂಜಾರಿ, ಅಸೋಸಿಯೇಶನ್‍ನ ಪದಾಧಿಕಾರಿಗಳನೇಕರು, ಮಾಜಿ ಅಧ್ಯಕ್ಷ ಎಲ್.ವಿ ಅಮೀನ್, ಮಾಜಿ ಗೌ| ಪ್ರ| ಕೋಶಾಧಿಕಾರಿ ಎನ್.ಎಂ ಸನೀಲ್, ಭಾರತ್ ಬ್ಯಾಂಕ್‍ನ ನಿರ್ದೇಶಕರು ಉಪಸ್ಥಿತರಿದ್ದು  ಧಾರ್ಮಿಕ ಉಪಸಮಿತಿ ಕಾರ್ಯದರ್ಶಿ ರವೀಂದ್ರ ಶಾಂತಿ ಮತ್ತು ಬಳಗ ಭಜನೆ ನೆರವೇರಿಸಿತು. ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ದಯಾನಂದ್ ಆರ್.ಪೂಜಾರಿ ಸುಖಾಗಮನ ಬಯಸಿದರು. ಗೌ| ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ಧನ್ಯವದಿಸಿದರು.

Met Mr Rana Kapoor ji ,MD & CEO Yes Bank and his wife Smt Kapoor ji as part of "Sampark for Samarthan" initiative at their home . Discussed with them the developmental initiatives of PM Narendra Modi’s govt in the last 4 years.

Mumbai June 08 :- Union Minister Nitin Gadkari today Met Mr Salim Khan & Salman as apart of "Sampark for Samarthan" initiative at their home . Discussed with them the developmental initiatives of PM Narendra Modi’s govt in the last 4 years.

ಡಾ| ರಜನಿ ವಿ.ಪೈ ಅವರಿಗೆ ಡಾಕ್ಟರೇಟ್ ಪ್ರದಾನ
ಮುಂಬಯಿ, ಜೂ.10: ಇಂಡಿಯನ್ ವ್ಹರ್ಚುವಲ್ ಯುನಿವರ್ಸಿಟಿ ಫಾರ್ ಪೀಸ್ ಆ್ಯಂಡ್ ಎಜ್ಯುಕೇಶನ್ ಬೆಂಗಳೂರು ಕರ್ನಾಟಕ ಶಿಕ್ಷಣ ಸಂಸ್ಥೆಯು ಕಳೆದ ಶನಿವಾರ ಸಂಜೆ ಧಾರವಾಡ ವಿಶ್ವವಿದ್ಯಾಲಯದ ಸಭಾಗೃಹದಲ್ಲಿ  ಆಯೋಜಿಸಿರುವ ಘಟಿಕೋತ್ವದ ಮತ್ತು ಪದವಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮುಂಬಯಿನ ಸಮಾಜ ಸೇವಕಿ ಡಾ| ರಜನಿ ವಿನಾಯಕ ಪೈ ಅವರಿಗೆ ಡಾಕ್ಟರೇಟ್ ಸನದು  ಪ್ರದಾನಿಸಿ ಗೌರವಿಸಿತು.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಸಿದ್ಧಿ ನಿವಾಸಿಯಾದ ರಜನಿ ಮುಂಬಯಿ ಉಪನಗರದ ಮುಲುಂಡ್ ಪಶ್ಚಿಮದಲ್ಲಿ ನೆಲೆಸಿದ್ದು ಕಳೆದ ಒಂದು ದಶಕದಿಂದ ಬಡವರ ಕಾಳಜಿ ಮತ್ತು ನಿರ್ಗತಿಕರಿಗೆ ಸಹಾಯಹಸ್ತಗೈದು ತೆರೆಮರೆಯಲ್ಲೇ ಸಮಾಜ ಸೇವಕಿಯಾಗಿ ಸೇವಾ ನಿರತರಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಸಕ್ರೀಯ ಕಾರ್ಯಕರ್ತೆಯಾಗಿ ಸ್ಥಾನೀಯವಾಗಿ ಗುರುತಿಸಿ ಕೊಂಡಿರುವ ಇವರು ಮಹಾರಾಷ್ಟ್ರ ರಾಜ್ಯದ ಪಡಿತರ (ರೇಶನಿಂಗ್) ಸಮಿತಿ ಸದಸ್ಯೆಯಾಗಿ, ಸ್ವರಾಂಜಲಿ ಪ್ರತಿಷ್ಠಾನದ ಆನಂದಯಾತ್ರಿ ಮೂಲಕ ದೃಷ್ಟಿಹೀನ ಮಕ್ಕಳ ಸೇವೆಯಲ್ಲಿ ತೊಡಗಿಸಿದ್ದಾರೆ.

ರಜನಿ ಕನ್ನಡ ಸಂಘ ಮುಂಬಯಿ ಇದರ ಸಕ್ರೀಯ ಕಾರ್ಯಕರ್ತೆಯಾಗಿ, ಸದ್ಯ ಮಹಿಳಾ ವಿಭಾಗಧ್ಯಕ್ಷೆಯಾಗಿ ಶ್ರಮಿಸುತ್ತಿದ್ದಾರೆ. ಡಾ| ಪೈ ಅವರಿಗೆ ಮುಂಬಯಿ ಕನ್ನಡ ಸಂಘ ಅಧ್ಯಕ್ಷ ಜಿ.ಎಸ್.ನಾಯಕ್, ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ ಮತ್ತು ಸರ್ವ ಪದಾಧಿಕಾರಿಗಳು, ಸದಸ್ಯರು ಅಭಿನಂದಿಸಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Nirmala Thonse organizes Awareness Campaign agains
View More

Mount Rosary Church Annoucement for the weekMount Rosary Church Annoucement for the week
Newly constructed House for sale at Nejar near Santhekatte.Newly constructed House for sale at Nejar near Santhekatte.
Maria TravelsMaria Travels
Rozarich Gaanch September- 2018Rozarich Gaanch September- 2018
Karaval Milan Sports Event on 23rd December at Milagres Ground, Kallianpur.Karaval Milan Sports Event on 23rd December at Milagres Ground, Kallianpur.
Rozarich Gaanch September- 2018Rozarich Gaanch September- 2018
Milarchi-Lara-September-2018Milarchi-Lara-September-2018
Welcome to Thonse Naturecure HospitalWelcome to Thonse Naturecure Hospital
Santhosh Villa short film by youth of Udupi Parish and ICYM.Santhosh Villa short film by youth of Udupi Parish and ICYM.
Crossland College, Year book 2017-18Crossland College, Year book 2017-18
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India