ಬಂಟರ ಸಂಘ ಮುಂಬಯಿ: ವಾರ್ಷಿಕ ಬೃಹತ್ ಶೈಕ್ಷಣಿಕ-ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮ


Rons Bantwal
Kemmannu News Network, 12-06-2018 20:19:28


Write Comment     |     E-Mail To a Friend     |     Facebook     |     Twitter     |     Print


ಬಂಟರ ಸಂಘ ಮುಂಬಯಿ: ವಾರ್ಷಿಕ ಬೃಹತ್ ಶೈಕ್ಷಣಿಕ-ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮ  ಬಂಟರ ಸಾಧನೆಗಳು ಕೀರ್ತಿ ಪ್ರತಿಷ್ಠೆಯನ್ನು ಹೆಚ್ಚಿಸಿದೆ:ಅಜಿತ್‍ಕುಮಾರ್ ಶನದಿ

ಮುಂಬಯಿ,ಜೂ.10: ಸ್ವಸಮಾಜದ ಅಭಿವೃದ್ಧಿಯಿಂದ ಸಮೃದ್ಧಿ ಫಲಿಸುವುದು. ಬಂಟರು ಇಂತಹ ಮೌಲ್ಯಗಳನ್ನು ಮೈಗೂಡಿಸಿ ಮುನ್ನಡೆಯುವಲ್ಲಿ ಮೊದಲಿಗರು. ವಿನಯತೆಯೇ  ಮನುಷ್ಯನ ದೊಡ್ಡ ಗುಣ. ಪ್ರಕಾಶ್ ಶೆಟ್ಟಿ ಅವರು ಆಲದ ಮರ ಇದ್ದಹಾಗೆ. ಇಂತಹ ಶಕ್ತಿಯುಳ್ಳ ಪ್ರಕಾಶ್ ಶೆಟ್ಟಿ ರಾಜಕೀಯವಾಗಿ ಮುನ್ನಡೆಯಬೇಕು. ಅದಕ್ಕೆ ನಾನು ಕೂಡ ಅವರಿಗೆ ಬೆಂಬಲ ನೀಡುವೆ. ಶೈಕ್ಷಣಿಕ ಪೆÇ್ರೀತ್ಸಾಹ ಕಾರ್ಯಕ್ರಮ ಮತ್ತೊಬ್ಬರ ಭವಿಷ್ಯ ರೂಪಿಸಬಲ್ಲದು. ಆದುದರಿಂದ ಇದು ತುಂಬಾ ಮಹತ್ವವಾದುದು. ಬಂಟರ ಸಾಧನೆಗಳು ಕೀರ್ತಿ ಪ್ರತಿಷ್ಠೆಯನ್ನು ಹೆಚ್ಚಿಸಿದೆ ಎಂದು ಕರ್ನಾಟಕ ರಾಜ್ಯ ಬಿವರೆಜಸ್ ಕಾಪೆರ್Çೀರೇಶನ್ ಲಿಮಿಟೆಡ್ ಸಂಸ್ಥೆಯ ಕಾರ್ಯನಿರ್ವಹಣಾ ನಿರ್ದೇಶಕ ಅಜಿತ್‍ಕುಮಾರ್ ಹೆಗ್ಡೆ ಶನದಿ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದಲ್ಲಿನ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ತನ್ನ ಶಿಕ್ಷಣ ಮತ್ತು ಸಮಾಜ ಕಲ್ಯಾಣಾಭಿವೃದ್ಧಿ ಸಮಿತಿಯು ದಿ| ವಾಸು ಕೆ.ಶೆಟ್ಟಿ ಸ್ಮಾರಣಾರ್ಥ ಚರಿಷ್ಮಾ ಬಿಲ್ಡರ್ಸ್‍ನ ಆಡಳಿತ ನಿರ್ದೇಶಕ ಸುಧೀರ್ ವಿ.ಶೆಟ್ಟಿ ಪ್ರಾಯೋಜಿಸಲ್ಪಟ್ಟ ಸಂಘದ ವಾರ್ಷಿಕ ಬೃಹತ್ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಸಮಾಜದ ನೂರಾರು ವಿದ್ಯಾಥಿರ್üಗಳಿಗೆ ವಾರ್ಷಿಕ ವಿದ್ಯಾಥಿರ್ü ವೇತನ ಪ್ರದಾನಿಸಿ ಅಜಿತ್‍ಕುಮಾರ್ ನುಡಿದರು.

ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ದೀಪ ಪ್ರಜ್ವಲಿಸಿ ಚಾಲನೆಯನ್ನೀಡಿದರು.

ಗೌರವ ಅತಿಥಿüಯಾಗಿ ಚರಿಷ್ಮಾ ಬಿಲ್ಡರ್ಸ್‍ನ ಆಡಳಿತ ನಿರ್ದೇಶಕ ಸುಧೀರ್ ವಿ.ಶೆಟ್ಟಿ, ತುಂಗಾ ಹೊಟೇಲು ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗೂ ಸಮಾಜ ಕಲ್ಯಾಣ ಯೋಜನಾ ಸ್ಥಾಪಕ ರೂವಾರಿ ಸುಧಾಕರ್ ಎಸ್.ಹೆಗ್ಡೆ,  ಎಂಆರ್‍ಜಿ ಸಮೂಹ ಬೆಂಗಳೂರು ಕಾರ್ಯಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ವಿಕೇ ಸಮೂಹದ ಕಾರ್ಯಾಧ್ಯಕ್ಷ ಕರುಣಾಕರ್ ವಿ.ಶೆಟ್ಟಿ, ಬಂಟ್ಸ್ ಸಂಘದ ಮಾಜಿ ಅಧ್ಯಕ್ಷ, ಹಾಲಿ ವಿಶ್ವಸ್ಥ ಸದಸ್ಯ ಕರ್ನಿರೆ ವಿಶ್ವನಾಥ್ ಶೆಟ್ಟಿ, ಬಂಟ್ಸ್ ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ, ಗೌ| ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಆರ್.ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ.ಶೆಟ್ಟಿ ಉಪಸ್ಥಿತರಿದ್ದು ವಿದ್ಯಾಥಿರ್üಗಳ ದತ್ತು ಸ್ವೀಕಾರ, ಪ್ರತಿಭಾ ಸಂಪನ್ನ ವಿಕಲಚೇತನರಿಗೆ ಆಥಿರ್üಕ ಸಹಾಯ ಹಾಗೂ ವಿಧವಾ ಮಾಸಾಶನ ಸೇರಿದಂತೆ ಇನ್ನಿತರ ದೇಣಿಗೆಗಳನ್ನು ವಿತರಿಸಿ ಸಂದರ್ಭೋಚಿತವಾಗಿ ಮಾತನಾಡಿ ಶುಭಾರೈಸಿದರು.

ಇದೇ ಶುಭಾವಸರದಲ್ಲಿ ಮಾತೃಭೂಮಿ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ್ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು ಅವರನ್ನು ಅತಿಥಿüಗಳು ಸನ್ಮಾನಿಸಿ ಅಭಿನಂದಿಸಿದರು ಹಾಗೂ ದೇಣಿಗೆ ಪ್ರಾಯೋಜಕರನ್ನು ಗೌರವಿಸಿದರು.

ಸುಧೀರ್ ಶೆಟ್ಟಿ ಮಾತನಾಡಿ ಬಂಗಾರದ ತಟ್ಟೆಯಲ್ಲಿ ಬಂಟರು ವಡಾಪಾವ್ ತಿನ್ನುತ್ತಿದ್ದೇವೆ. ನಮಗೆ ಬೀಗರೂಟ ಉನ್ನುವ ಯೋಗ್ಯತೆವಿದೆ. ಆದುದರಿಂದ ನಾವು ವರ್ಷಂಪ್ರತಿ ಕನಿಷ್ಠ 5 ಕೋಟಿ ಮೊತ್ತವನ್ನದರೂ ಶೈಕ್ಷಣಿಕವಾಗಿ ನೀಡಬೇಕು. ನಮ್ಮಲ್ಲಿನ ಅಷ್ಟು ಜನರಿಗೆ ಆಥಿರ್sಕ ನೆರವಿನ ಅಗತ್ಯವಿದೆ. ಕೊಡುವಾಗ ಜನಸಂಖ್ಯೆ ಕಡಿಮೆಗೊಳಿಸಿದರೂ ನೀಡುವವರಿಗೆ ಲಕ್ಷಗಟ್ಟಲೆ ನೀಡಬೇಕು. ಅದರಿಂದ ಅವರಿಗೂ ಆ ದುಡ್ಡು ಕೆಲಸಕ್ಕೆ ಬರುತ್ತದೆ. ಮತ್ತೆ ಅವರಿಂದ ಸಮಾಜಕ್ಕೆ ವ್ಯಯಿಸಿಕೊಳ್ಳಬೇಕು. ಅದಕ್ಕಾಗಿ ಸಂಘದಲ್ಲಿ ಮಹಿಳೆಯರು ಪ್ರಧಾನ ಪಾತ್ರ ವಹಿಸಬೇಕು. ಮುಂದೊಂದು ದಿನ ಈ ಸಂಘಕ್ಕೆ ಮಹಿಳೆಯೂ ಅಧ್ಯಕ್ಷೆ ಆಗಬಹುದು ಎಂದು ಆಶಯ ವ್ಯಕ್ತ ಪಡಿಸಿದರು.

ಸುಧಾಕರ ಹೆಗ್ಡೆ ಮಾತನಾಡಿ ಅಂದು ಮಳೆ ಕಾಲದ ಸ್ಥಿತಿಗತಿ ಪರಾಮರ್ಶಿಸಿ ಸುಮಾರು 60 ಲಕ್ಷ ಮೊತ್ತವನ್ನು ಒಗ್ಗೂಡಿಸಿ ಜನಸೇವೆಗೆ ವಿನಿಯೋಗಿಸಿದ್ದು, ಇಂದು ಸುಮಾರು 1.75ಲಕ್ಷ ಜಮಾಯಿಸಿ ಸೇವೆಗೆ ಒದಗಿಸುತ್ತಿರುವುದು ಪ್ರಶಂಸನೀಯ. ಮುಂಬಯಿ ಜನರ ಕೊಡುಗೆ ಇಲ್ಲದೆ ಯಾವುದೇ ಪರಿಪೂರ್ಣವಾಗದು. ನಮ್ಮೆಲ್ಲಿನ ಕಂಕಣ ಭಾಗ್ಯ ಯೋಜನೆ ಪ್ರಗತಿಯಲ್ಲಿ ಸಾಗಬೇಕು. ಪಾಪದವರಿಗೆ ಸಹಾಯ ಮಾಡುವ ಬಂಟರ ಸಂಘ ಇನ್ನೂ ಉತ್ಸುಕತೆ ತೋರಬೇಕು. ತೆಗೆದುಕೊಳ್ಳುವವರು ಇದ್ದಾಗಲೇ ಕೊಡುವವರು ಮುಂದೆ ಬರುತ್ತಾರೆ. ಸೂಟುಬೂಟುಧಾರಿಗಳಿದ್ದರೆ ಮಾತ್ರ ಕೊಡ ಮಾಡಲು ಸಾಧ್ಯ ಎಂದರು.

ಪ್ರಕಾಶ್ ಶೆಟ್ಟಿ ಮಾತನಾಡಿ ಇದೊಂದು ಎಲ್ಲಾ ಸಂಘಗಳಿಗೆ ಮಾದರಿಯಾಗುವ ಕಾರ್ಯಕ್ರಮ. ಬಂಟರು ಸ್ವಾಭಿಮಾನಿಗಳು. ನಮ್ಮ ಸಮಾಜ ಸ್ವಾಭಿಮಾನದ ಸಮಾಜ. ನಮಗೆ ಎಷ್ಟು ಕಷ್ಟ ಬಂದರೂ ಇನ್ನೊಬ್ಬರಿಗೆ ತಿಳಿಸುವುದಿಲ್ಲ. ಸಮಾಜದ ಋಣ ತಿರಿಸಲೆಂದು ನನ್ನ ಕೈಯಿಂದ ಆದ ಸಹಾಯವನ್ನು ನೀಡುತ್ತೇನೆ. ಸಮಾಜದ ಎಲ್ಲಾ ಜನರ ಪ್ರೀತಿ ಆಶೀರ್ವಾದ ಸದಾ ನನ್ನ ಮೇಲೆ ಇರಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಸುಂದರಾಮ್ ಶೆಟ್ಟಿ ಮೂಲ್ಕಿ ಅವರ ಸಾಧನೆ ಬಣ್ಣಿಸಿ ಬಂಟ ಸಮಾಜಕ್ಕೆ ಅವರ ಅನನ್ಯ ಕೊಡುಗೆಯನ್ನು ಮೆಲುಕುಹಾಕಿದÀರು.

ಸಮಾಜ ಸೇವೆಯ 90ರ ನಡಿಗೆಯ ಬಂಟ್ಸ್ ಸಂಘ ಶ್ರೇಷ್ಠ ಸೇವೆಗೆ ಬದ್ಧವಾಗಿ ಮುನ್ನಡೆಯುತ್ತಿದೆ. ಈ ಬಾರಿಯೂ ಸುಮಾರು 40ಲಕ್ಷ ದೇಣಿಗೆ ಸಂಗ್ರಹಿಸಿ ಸಾವಿರಾರು ವಿದ್ಯಾಥಿರ್sಗಳಿಗೆ, ಅಂಗವಿಕಲರಿಗೆ, ವಿಧವೆಯರಿಗೆ ನೀಡಲಾಗುತ್ತಿದೆÉ. ನಮ್ಮ ಶ್ರಮದ ಫಲ ಅರ್ಹರಿಗೆ ಸಿಗಬೇಕು ಎನ್ನುವುದೇ ನಮ್ಮ ಆಶಯ. ಇದಕ್ಕೆ ಪಾಲಕರ ಸಹಯೋಗ ಅಗತ್ಯವಿದೆ ಎಂದು ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಧ್ಯಕ್ಷ ಉಳ್ತೂರು ಮೋಹನದಾಸ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದು ಯೋಜನೆ ಮತ್ತು ತನ್ನ ಯೋಚನೆ ಬಗ್ಗೆ ಮಾಹಿತಿಯನ್ನಿತ್ತರು.

ಅಂದು ಒಕ್ಕಲುತನದಿಂದ ಎಬ್ಬಿಸಲ್ಪಟ್ಟ ನಾವು ಪರವೂರಲ್ಲಿ ಸೇರಿಯೂ ಇಲ್ಲಿ ಸಾಂಘಿಕವಾಗಿ ಬೆಳೆದಿದ್ದೇವೆ. ಆದುದರಿಂದ ಸಮಾಜ ಕಲ್ಯಾಣ ಸಮಿತಿ ಮೂಲಕ ಸಮಾಜದ ಮಕ್ಕಳಿಗೆ ವಿದ್ಯಾಥಿರ್sವೇತನ ಪೂರೈಸಲು ಸಾಧ್ಯವಾಗಿದೆ. ಎಲ್ಲರೂ ಸಂಘದ ಸೇವೆ ತಿಳಿದು ಸಂಘವನ್ನು ಎತ್ತರಕ್ಕೆ ಬೆಳೆಸಬೇಕು.  ಆ ಮೂಲಕ ಸಮಾಜಕ್ಕೆ ಪ್ರೇರಣೆ ಆಗಬೇಕು. ನಮ್ಮ ದಾನಿಗಳೇ ಸಂಘದ ದೇವರುಗಳು. ಕಷ್ಟ ಬಾರದೆ ಎನೂ ಸಾಧಿಸಲಾಗದು ಮತ್ತು ವಿರೋಧವನ್ನು ಎದುರಿಸಿದಾಗಲೇ ವಿಜಯ ಸಿದ್ಧಿ ಆಗುವುದು ಎಂದು ಐಕಳ ಹರೀಶ್ ಅಭಿಪ್ರಾಯಪಟ್ಟರು.

ಜೀವನ ಸಮರ್ಪಣೆಯಿಂದ ಸಾಧನೆ ಸಿದ್ಧಿ. ಇದನ್ನೇ ನಮ್ಮ ದಾನಿಗಳು ಸಾಧಿಸಿ ತೋರಿಸಿದ್ದಾರೆ. ಅವರ ಶ್ರಮದ ಫಲವೇ ಇಂತಹ ದಾನ ನೀಡುವ ಕಾರ್ಯಕ್ರಮಕ್ಕೆ ಪೂರಕವಾಗಿದೆ ಎಂದು ರತ್ನಾಕರ ಮುಂಡ್ಕೂರು ತಿಳಿಸಿದರು.

ಆಥಿರ್üಕ ಸಂಕಷ್ಟ ಮಾನವ ಜೀವನದ ಒಂದು ಭಾಗವಾಗಿದ್ದು, ಅಂತಹವರನ್ನು ಸಧೃಡಗೊಳಿಸುವಲ್ಲಿ ಬಂಟರ ಸಂಘದ ಸೇವೆ ಮಹತ್ವದ್ದಾಗಿದೆ. ಇದೊಂದು ಸಮಾಜಮುಖಿ ಯೋಜನೆ. ಸಮಾಜಕ್ಕೆ ನೆರವು ನೀಡಬೇಕೆಂಬ ಸತ್ಯದ ಅರಿವು ಮೂಡಿಸಿದ ನಮ್ಮವರ ಕನಸು ಈ ಮೂಲಕ ನನಸಾಗುತ್ತಿದೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಪದ್ಮನಾಭ ಪಯ್ಯಡೆ ತಿಳಿಸಿದರು. 

ಥಂಡರ್ ಗೈಯ್ಸ್ ಫೌಂಡೇಶನ್ ಬಜ್ಪೆ (ಮಂಗಳೂರು) ತಂಡವು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ರಾಜೇಂದ್ರ ಪ್ರಸಾದ್ ಈ ಕಾರ್ಯಕ್ರಮ ನಿರೂಪಿಸಿದ್ದು, ಬಂಟಗೀತೆಯೊಂದಿಗೆ ಸಮಾರಂಭ ಆದಿಗೊಂಡಿತು. ವಿನೋದಾ ಆರ್.ಕೆ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು.  ಸಮಾಜ ಕಲ್ಯಾಣ ಸಮಿತಿ ಉಪ ಕಾರ್ಯಧ್ಯಕ್ಷ ಸುಬ್ಬಯ ಎ.ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ಕಾರ್ಯದರ್ಶಿ ಖಾಂದೇಶ್ ಭಾಸ್ಕರ್ ಶೆಟ್ಟಿ ದಾನಿಗಳ ಪಟ್ಟಿ ವಾಚಿಸಿ ವಂದಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Welcome to Thonse Naturecure Hospital
View More

Blood donation camp at Manipal on 19th Feb.Blood donation camp at Manipal on 19th Feb.
Kemmannu Church - Weekly Announcements.Kemmannu Church - Weekly Announcements.
Funeral on 18 Feb.Funeral on 18 Feb.
Mount Rosary Church Annoucement for the weekMount Rosary Church Annoucement for the week
40th Wedding Anniversary Wishes to Dr. Frank and Mrs. Alice Fernandes40th Wedding Anniversary Wishes to Dr. Frank and Mrs. Alice Fernandes
ಖಾಝಿ ಉಸ್ತಾದ್ ಅಹಮದ್ ಸಾಹೇಬ್ ನಿಧನ.ಖಾಝಿ ಉಸ್ತಾದ್ ಅಹಮದ್ ಸಾಹೇಬ್ ನಿಧನ.
Free Eye Camp at Mount Rosary, KallianpurFree Eye Camp at Mount Rosary, Kallianpur
Veez Konkani Weekly e-Magazine # 58Veez Konkani Weekly e-Magazine # 58
An Appeal from vittal churchAn Appeal from vittal church
Foundation Stone Laying Ceremony of Nayaab Residency by B. M. Zaffer & fly, Dubai, UAE.Foundation Stone Laying Ceremony of Nayaab Residency by B. M. Zaffer & fly, Dubai, UAE.
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Pedruchi Chavi January 2019Pedruchi Chavi January 2019
Konkani writters workshop in Udupi on 17th Feb.Konkani writters workshop in Udupi on 17th Feb.
Delite Catering, SanthekatteDelite Catering, Santhekatte
Milarchi Laram - Issue Jan 2019Milarchi Laram - Issue Jan 2019
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Funeral Photographs:

Robert lewis (92), St. Theresa B ward, Kemmannu<font color=red><center>Funeral Photographs:<P> </font color=red></center> Robert lewis (92), St. Theresa  B ward, Kemmannu
ROZARICHO GAANCH DECEMBER 2018ROZARICHO GAANCH DECEMBER 2018
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India