Brief Mumbai - Mangalore news with pictures


Rons Bantwal
Kemmannu News Network, 05-07-2018 18:37:28


Write Comment     |     E-Mail To a Friend     |     Facebook     |     Twitter     |     Print


ಜು.28: ಸಯಾನ್‍ನ ಮುಖ್ಯ ಅಧ್ಯಾಪÀಕ ಭವನದ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ  ಭಂಡಾರಿ ಸೇವಾ ಸಮಿತಿ 65ನೇ ವಾರ್ಷಿಕ ಮಹಾಸಭೆ

ಮುಂಬಯಿ, ಜು.04: ಬೃಹನ್ಮುಂಬಯಿಯಲ್ಲಿ ಸಮೂದಾಯಿಕ ಸಂಸ್ಥೆಯಾಗಿ ಸೇವಾ ನಿರತ ಭಂಡಾರಿ ಸೇವಾ ಸಮಿತಿ (ರಿ.) ಮುಂಬಯಿ ಇದರ 65ನೇ ವಾರ್ಷಿಕ ಮಹಾಸಭೆಯನ್ನು ಇದೇ ಜುಲಾಯಿ 28ನೇ ಶನಿವಾರ ಅಪರಾಹ್ನ 3.00 ಗಂಟೆಗೆ ಸಯಾನ್ ಪೂರ್ವದ ಮುಖ್ಯ ಅಧ್ಯಾಪÀಕ ಭವನದಲ್ಲಿನ ಶ್ರೀ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಸಮಿತಿ ಅಧ್ಯಕ್ಷ ನ್ಯಾಯವಾದಿ ಶೇಖರ ಎಸ್.ಭಂಡಾರಿ ಅಧ್ಯಕ್ಷತೆ ಯಲ್ಲಿ ನಡೆಸಲಾಗುವುದು ಎಂದು ಸಮಿತಿ ಉಪಾಧ್ಯಕ್ಷರುಗಳಾದ ಆರ್.ಎಂ ಭಂಡಾರಿ ಮತ್ತು ಪ್ರಭಾಕರ್ ಪಿ.ಭಂಡಾರಿ ತಿಳಿಸಿದ್ದಾರೆ.

ಮಹಾಸಭೆಯ ನಂತರ ಸಮಿತಿ ಸದಸ್ಯರುಗಳ ಮಕ್ಕಳಿಗೆ ಶೈಕ್ಷಣಿಕ ವಿದ್ಯಾಥಿರ್ü ವೇತನ ನೀಡಲಾಗುವುದು. 2018-19ರ ಸಾಲಿನಲ್ಲಿ ವಿದ್ಯಾಭ್ಯಾಸ ಪಡೆಯುವ ವೇತನ ಬಯಸುವ ಮಕ್ಕಳು ತಮ್ಮ ಭಾವಚಿತ್ರ ಹಾಗೂ ಶಾಲಾ ಕಾಲೇಜುಗಳ ಅಧಿಕೃತ ಮಾನ್ಯತಾಪತ್ರ, ಅಧಿಕೃತ ನಿವಾಸದ ಸಂಪೂರ್ಣ ವಿಳಾಸ ಇತ್ಯಾದಿ ಮಾಹಿತಿಗಳೊಂದಿಗೆ ತಮ್ಮ ಅರ್ಜಿಗಳನ್ನು ಇದೇ ಜು.20ನೇ ಶುಕ್ರವಾರ ಒಳಗಾಗಿ ಸಂಘದ ಕಚೇರಿ (ಭಂಡಾರಿ ಸೇವಾ ಸಮಿತಿ ಮುಂಬಯಿ, ಬಿ-5, ಲಕ್ಷ್ಮೀ ಸದನ್, ಪಾಟೀಲ್’ಸ್ ಸಾಯಿನಾಥ್ ಪ್ಲಾಜ್ಹಾ ಹಿಂಭಾಗ, ವೆಲಂಕಣಿ ಬ್ಯೂಟಿ ಪಾರ್ಲರ್ ಮುಂಭಾಗ, ಝವೇರ್ ರಸ್ತೆ ಮಡಿವು, ಮುಲುಂಡ್ ಪಶ್ಚಿಮ, ಮುಂಬಯಿ-400 080 ಇಲ್ಲಿಗೆ ತಲುಪಿಸುವಂತೆ ಸಮಿತಿ ಗೌರವ ಕೋಶಾಧಿಕಾರಿ ಕರುಣಾಕರ ಜಿ.ಭಂಡಾರಿ ಈ ಮೂಲಕ ತಿಳಿಸಿದ್ದಾರೆ.

ಸಮಿತಿಯ ಸರ್ವ ಸದಸ್ಯರು, ಭಂಡಾರಿ ಸಮಾಜ ಬಾಂಧÀವರು ಕ್ಲಪ್ತ ಸಮಯಕ್ಕೆ ಹಾಜರಾಗಿ ಮಹಾಸಭೆಯನ್ನು ಯಶಸ್ವಿ ಗೊಳಿಸುವಂತೆ ಹಾಗೂ ಫಲಾನುಭವಿ ವಿದ್ಯಾಥಿರ್üಗಳೂ ಕಾರ್ಯಕ್ರಮದಲ್ಲಿ ಸಕಾಲದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್.ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಕಡಂದಲೆ ಈ ಮೂಲಕ ವಿನಂತಿಸಿದ್ದಾರೆ.

ಜುಲೈ.8 ರಂದು ಉಡುಪಿಯಲ್ಲಿ ನನ್ನ ಹಾಡು ನನ್ನದು ಸುಗಮ ಸಂಗೀತ ಸ್ಪರ್ಧೆ

ಉಡುಪಿ: ದಿಶಾ ಕಮ್ಯೂನಿಕೇಷನ್ಸ್ ಟ್ರಸ್ಟ್ ಕಟಪಾಡಿ-ಉಡುಪಿ, ಕಲಾನಿಧಿ ಸಾಂಸ್ಕøತಿಕ ಕಲಾ ಸಂಸ್ಥೆ (ರಿ.) ಉಡುಪಿ, ರಾಗವಾಹಿನಿ (ರಿ.) ಉಡುಪಿ, ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಉಡುಪಿ  ಇವರ ಸಂಯುಕ್ತ ಆಶ್ರಯದಲ್ಲಿ ನನ್ನ ಹಾಡು ನನ್ನದು ಸುಗಮ ಸಂಗೀತ ಗೀತಾಗಾಯನ ಸ್ಪರ್ಧೆ ಸೀಸನ್-2 ಸುಗಮ  ಸಂಗೀತ ಗೀತಗಾಯನ ಸ್ಪರ್ಧೆ -2018 ಜುಲೈ. 8 ರಂದು ಬೆಳಗ್ಗೆ 9ಕ್ಕೆ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಲಿದೆ. ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಲಿರುವರು.

ಹಿರಿಯ ಸಂಗೀತ ನಿರ್ದೇಶಕ ನಾದವೈಭವಂ ಉಡುಪಿ ವಾಸುದೇವ ಭಟ್ ಅಧ್ಯಕ್ಷತೆ ವಹಿಸುವರು. ಉಡುಪಿ ತುಳುಕೂಟದ ಅಧ್ಯಕ್ಷ,ಬಡಗುಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಮುಡುಸಗ್ರಿ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಆಪ್ತ ಕಾರ್ಯದರ್ಶಿ ಕುಸುಮ ನಾಗರಾಜ್ ಆಚಾರ್ಯ, ಬಾರ್ಕೂರಿನ ಹಿರಿಯ ಸಾಹಿತಿ ಪ್ರಕಾಶ ಆಚಾರ್ಯ ವಡ್ಡರ್ಸೆ, ಉಡುಪಿ ತುಳುಕೂಟದ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಮುಖ್ಯಅತಿಥಿಗಳಾಗಿ ಭಾಗವಹಿಸಲಿರುವರು. ಸುಗಮ ಸಂಗೀತ ಗೀತಾಗಾಯನ ಸ್ಪರ್ಧೆಯು 15ರಿಂದ 60 ವರ್ಷ ವಯಸ್ಸಿನವರಿಗಾಗಿ ಮೂರು ಹಂತದÀಲ್ಲಿ ನಡೆಯಲಿದ್ದು, ಜು.8 ರಂದು ಪ್ರಥಮ ಸುತ್ತಿನ ಆಯ್ಕೆ ಮತ್ತು ಸೆಮಿಫೈನಲ್ ಸ್ಪರ್ಧೆ ನಡೆಯಲಿದೆ. ಸೆಮಿಫೈನಲ್‍ನಲ್ಲಿ ಆಯ್ಕೆಯಾದ 10ಮಂದಿ ಅಂತಿಮ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದಲ್ಲಿ 10ಸಾವಿರ ರೂ.ನಗದು, ಟ್ರೋಫಿ ಸಮೇತ ಅತ್ಯುತ್ತಮ ಗಾಯಕ ಪ್ರಥಮ ಪ್ರಶಸ್ತಿ ಹಾಗೂ 5 ಸಾವಿರ ರೂ.ನಗದು, ಟ್ರೋಫಿ ಸಮೇತ ಅತ್ಯುತ್ತಮ ಗಾಯಕ ದ್ವಿತೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾಯಿಸಲು ಮೊಬೈಲ್: 9964019229, 9964107067, 9483802494, ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

 

Mumbai, Jul 05 (ANI): Dia Mirza, who works with ‘Save the Child’ foundation, talked about the importance of education for poor children. She is supporting the foundation in its new campaign ‘The Invisible’. The actress expressed her views on how poor children are never called by their names and hence lose their identity. She supports the cause to make ‘The Invisible’ visible and help them get their own identity.

MUMBAI: Bollywood actor & producer Dia Mirza with street children at the Felicitation of Child Champions from the streets of Mumbai and an Aadhaar Camp to provide an identity to the Invisible, in Mumbai on Wednesday

ಮಕ್ಕಳಿಗೆ ಸಂಸ್ಕøತಿ-ಸಂಸ್ಕಾರಗಳ ಅರಿವು ಬಾಲ್ಯದಲ್ಲೇ ಲಭಿಸಲಿ - ಉಪ್ಪಳ ಚಿಣ್ಣರ ಕಲರವಕ್ಕೆ ಚಾಲನೆ ನೀಡಿ ಪ್ರದೀಪ್ ಕುಮಾರ್ ಕಲ್ಕೂರ

ಮುಂಬಯಿ, ಜು.05: ಮಾತೃಭಾಷೆ, ಸಂಸ್ಕøತಿಯ ಸಂವರ್ಧನೆಗೆ ಯುವ ತಲೆಮಾರನ್ನು ತಯಾರು ಗೊಳಿಸುವ ಹೊಣೆ ಎಲ್ಲರಮೇಲಿದೆ. ಸಂಸ್ಕøತಿ-ಸಂಸ್ಕಾರಗಳ ಅರಿವು ಎಳೆಯ ಪ್ರಾಯದಲ್ಲಿ ಲಭ್ಯವಾದಾಗ ಅಂತಹ ಮಕ್ಕಳ ಭವಿಷ್ಯ ಉಜ್ವಲವಾಗಿ ಬೆಳೆದು ತೃಪ್ತ ಬದುಕು ಸಾಕಾರವಾಗುವುದೆಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಸರಗೋಡುನ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯು ಸುಬ್ಬಯ್ಯಕಟ್ಟೆಯ ತರಂಗಿಣಿ ಆರ್ಟ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಸಹಯೋಗದಲ್ಲಿ ಗುರುವಾರ ಕುಡಾಲು ಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ "ಚಿಣ್ಣರ ಕಲರವ" ಸರಣಿ ಕಾರ್ಯಕ್ರಮ ಉದ್ಘಾಟಿಸಿ ಕಲ್ಕೂರ ಮಾತನಾಡಿದರು.

ಗಡಿನಾಡು ಕಾಸರಗೋಡುನ ವರ್ತಮಾನದ ಭಾಷಾ ತಲ್ಲಣಗಳ ಮಧ್ಯೆ ಹೊಸ ತಲೆಮಾರನ್ನು ಕೊಂಡೊಯ್ಯುವ ಕವಲು ಹಾದಿಯಲ್ಲಿ ಮುನ್ನಡೆಸಲಾಗುವ ವಿವಿಧ ಕನ್ನಡ ಭಾಷಾ ಚಟುವಟಿಕೆಗಳು ತನ್ನದೇ ಪ್ರಭಾವದಿಂದ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ ಅವರು ಸಂಸ್ಕøತಿ ಸಂವರ್ಧನೆಯಲ್ಲಿ ಪರಂಪರೆ ಸಾಗಿಬಂದ ನಡಾವಳಿಗಳು, ಜೀವನ ಕ್ರಮ, ಸಾಂಸ್ಕøತಿಕ ಸೊಗಡು ಮತ್ತು ಅದು ಮಣ್ಣಿನೊಂದಿಗೆ ತೊಡಗಿಸಿಕೊಂಡಿರುವ ಹೊಕ್ಕುಬಳಸುವಿಕೆಯನ್ನು ಯುವ ಜನರಿಗೆ-ಪುಟಾಣಿಗಳಿಗೆ ತೋರಿಸಿಕೊಡುವ ಕೈಂಕರ್ಯ ಮಹತ್ವದ ಸಾಧನೆ ಎಂದು ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಡಿನಾಡು ಸಾಹಿತ್ಯ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಮಾತನಾಡಿ, ತಿಳಿಯಾದ ನೀರಿನ ಹೊಳಪಿನಂತೆ, ಹರಡಿದ ಆಕಾಶದಂತೆ ನಿಷ್ಕಲ್ಮಶ ಮನಸ್ಸಿನ ಪುಟ್ಟ ಮಕ್ಕಳ ಅರಳುವಿಕೆಗೆ ಸ್ವಸ್ಥ ಸಮಾಜ ಪ್ರಯತ್ನಿಸಬೇಕು. ನಮ್ಮ ಸಂಸ್ಕøತಿ, ಜೀವನ ಮೌಲ್ಯಗಳನ್ನು ಮಕ್ಕಳಲ್ಲಿ ಪ್ರತಿಬಿಂಬಿಸಿದಾಗ ಬದುಕಿಗೆ ವಿಶೇಷ ಅರ್ಥಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ಗಮಕ ಕಲಾ ಪರಿಷತ್ತಿನ ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್ ಮುಖ್ಯ ಅತಿಥಿüಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.

ತರಂಗಿಣಿ ಆಟ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಕಾರ್ಯದರ್ಶಿ ಬಿ.ಎ.ಲತೀಫ್, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದು ಶುಭಾಶಂಸನೆಗೈದರು.

ಕ್ಲಬ್ ಸದಸ್ಯ ಅಶೋಕ್ ಭಂಡಾರಿ, ಶೋಭಾನೆ ಹಾಡುಗಾರರಾದ ಗಿರಿಜಾ ಎಂ. ಭಟ್ ಎಡಮಲೆ,ಜನಾರ್ಧನ ಹಂದೆ, ಎಸ್.ಕೆ.ಬಾಲಕೃಷ್ಣ, ಗಡಿನಾಡು ಕಲಾ ಸಾಂಸ್ಕøತಿಕ ಅಕಾಡೆಮಿ ಸದಸ್ಯೆ ಸಂಧ್ಯಾಗೀತಾ ಬಾಯಾರು, ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಮುಖಂಡರಾದ ಸೀತಾರಾಮ ಶೆಟ್ಟಿ, ಝಡ್.ಎ ಕಯ್ಯಾರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಮಾಧ್ಯಮ ಪ್ರಶಸ್ತಿ ವಿಜೇತ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರನ್ನು ಅಭಿನಂದಿಸಲಯಿತು. ಜೊತೆಗೆ ಅವರು ಬರೆದಿರುವ ನೆಲದ ಧ್ಯಾನ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಅಕಾಡೆಮಿ ವತಿಯಿಂದ ಶಾಲಾ ಲೈಬ್ರರಿಗೆ ಉಚಿತವಾಗಿ ವಿವಿಧ ಪುಸ್ತಕಗಳನ್ನು ನೀಡಲಾಯಿತು.

ಗಡಿನಾಡ ಸಾಹಿತ್ಯ ಸಾಂಸ್ಕøತಿಕ ವೇದಿಕೆಯ ಉಪಾಧ್ಯಕ್ಷ ಪೆÇ್ರ| ಎ.ಶ್ರೀನಾಥ್ ಸ್ವಾಗತಿಸಿದರು.ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್ ನಂಬೂದಿರಿ ವಂದಿಸಿದರು. ಬಳಿಕ ಶೋಭಾನೆ ಗೀತೆಗಳ ಸಹಿತ ಕನ್ನಡ ಗೀತಗಾಯನ ಪ್ರಾತ್ಯಕ್ಷಿಕೆ ನಡೆಯಿತು.

​ಗೋಕುಲವಾಣಿ ವಿಶೇಷಾಂಕ ಅಖಿಲ ಭಾರತ ಕನ್ನಡ ಕಥಾ ಸ್ಪರ್ಧೆ-ಕಥೆಗಳಿಗೆ ಆಹ್ವಾನ

ಮುಂಬಯಿ, ಜು.06: ಬಿ.ಎಸ್.ಕೆ.ಬಿ ಅಸೋಸಿಯೇಶನ್ ಮುಂಬಯಿ ತನ್ನ ಮುಖವಾಣಿಯಾಗಿ ಪ್ರಕಟಿಸುತ್ತಿರುವ `ಗೋಕುಲವಾಣಿ’ ಮಾಸಪತ್ರಿಕೆ ನವಂಬರ್  2018ರ ಸಂಚಿಕೆಯನ್ನು ದೀಪಾವಳಿ ವಿಶೇಷ ಸಂಚಿಕೆಯಾಗಿ ಹೊರತರುತ್ತಿದೆ. ಆ ಪ್ರಯುಕ್ತ ಅಖಿಲ ಭಾರತ ಮಟ್ಟದ ಕನ್ನಡ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ಕಥೆಗಳಿಗೆ ಪ್ರಥಮ(ರೂ. 10,000/-), ದ್ವಿತೀಯ (ರೂ. 5,000/-) ಹಾಗೂ ತೃತೀಯ (ರೂ.3,000/-) ಬಹುಮಾನವನ್ನು ಅರ್ಹ ಕಥೆಗಳಿಗೆ ನೀಡಲಾಗುತ್ತದೆ. ತೀರ್ಪುಗಾರರ ಮೆಚ್ಚುಗೆ ಪಡೆದ ಎರಡು ಕಥೆಗಳಿಗೆ ತಲಾ ರೂ. 1,000/- ಬಹುಮಾನ ಕೊಡಲಾಗುವುದು ಎಂದು `ಗೋಕುಲವಾಣಿ’ ಗೌರವ ಸಂಪಾದಕ ಡಾ| ವ್ಯಾಸರಾಯ ನಿಂಜೂರು ತಿಳಿಸಿದ್ದಾರೆ.

ಸ್ಪರ್ಧೆಗೆ ಕೆಲವೊಂದು ನಿಯಮಗಳು ಇದ್ದು, ಕಥೆ ಸ್ವರಚಿತವಾಗಿರಬೇಕು. ಅನುವಾದ, ರೂಪಾಂತರ, ಅನುಕರಣೆಗಳಿಗೆ ಆಸ್ಪದವಿಲ್ಲ. ಓರ್ವ ಲೇಖಕರು ಒಂದೇ ಕಥೆ ಕಳುಹಿಸತಕ್ಕದ್ದು. ಕಥೆ 2000 ಶಬ್ದಗಳ ಮಿತಿಯಲ್ಲಿ ಇರಬೇಕು.  ಕಾಗದದ ಒಂದೇ ಮಗ್ಗುಲಲ್ಲಿ ಕೈಬರಹ ಅಥವಾ ಕಂಪ್ಯೂಟರೀಕೃತ ರೂಪದಲ್ಲಿರುವ  ಕಥೆಗಳನ್ನು ಸ್ಪೀಡ್ ಪೆÇೀಸ್ಟ್ ಅಥವಾ ಈಮೇಲ್ ಮುಖಾಂತರ ಕೆಳಗೆ ನೀಡಿದ ವಿಳಾಸಕ್ಕೆ ಕಳಿಸಬಹುದು.  ಪ್ರವೇಶ ಶುಲ್ಕವಿಲ್ಲ. ಲೇಖಕರ ಹೆಸರನ್ನು ಪ್ರತ್ಯೇಕ ಹಾಳೆಯೊಂದರಲ್ಲಿ ಲಗತ್ತೀಕರಿಸಬೇಕು. ಇದರಲ್ಲಿ ಕಥೆಯ ಹೆಸರು, ಲೇಖಕರ ಹೆಸರು, ವಿಳಾಸ, ಮೊಬೈಲ್ ನಂಬರ್, ಈಮೇಲ್  ನಮೂದಿಸಬೇಕು. ಕಥೆಯ ಯಾವುದೇ ಪುಟದಲ್ಲಿ ಲೇಖಕರ ಹೆಸರು ಇದ್ದಲ್ಲಿ ಕಥೆ ಅಸ್ವೀಕೃತವಾಗುತ್ತದೆ.

ಸ್ಪರ್ಧೆಗೆ ಬಂದ  ಕಥೆಗಳನ್ನು ಹಿಂತಿರುಗಿಸಲಾಗುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ. ಯಾವುದೇ ಪತ್ರ ವ್ಯವಹಾರ, ದೂರವಾಣಿ ಕರೆ ನಿಷಿದ್ಧ. ಕಥೆಗಳನ್ನು ಅಂತಿಮವಾಗಿ  25.9.2018.  ಸ್ವೀಕರಿಸಲಾಗುವುದು. ಸ್ಪರ್ಧೆಯ ಫಲಿತಾಂಶ ಗೋಕುಲವಾಣಿ ವಿಶೇಷಾಂಕ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.  ಕಥೆಗಳನ್ನು ಇಜiಣoಡಿ, ಉoಞuಟಚಿvಚಿಟಿi, ಏಚಿಟಿಟಿಚಿಜಚಿ ಒoಟಿಣhಟಥಿ, ಃSಏಃ  ಂssoಛಿiಚಿಣioಟಿ, Pಟoಣ ಓo. 273, ಉoಞuಟ ಒಚಿಡಿg, Sioಟಿ (ಇ), ಒumbಚಿi 400 022. ಇmಚಿiಟ: goಞuಟಚಿvಚಿಟಿi@bsಞbಚಿ.ಛಿom ಇಲ್ಲಿಗೆ ಕಳುಹಿಸಿ ಕೊಡುವರೇ ವಿನಂತಿ.

Tree fall down at CP office in Mumbai.

ಆಕಾಶವಾಣಿಯ ಸ್ವರಮಂಟಮೆಗೆ `ಅಮ್ಮೆರ್ ಪೆÇಲೀಸ್’

ಮುಂಬಯಿ, ಜು.05: ಮಂಗಳೂರು ಆಕಾಶವಾಣಿಯ ತುಳು ವಿಭಾಗದ ಸ್ವರಮಂಟಮೆ ಪುಸ್ತಕ-ಧ್ವನಿಸುರುಳಿ ಬಿಡುಗಡೆಯ ನೇರ ಪ್ರಸಾರದ 18ನೇ ಕಾರ್ಯಕ್ರಮ ಜುಲೈ.7 ರಂದು ಶನಿವಾರ ಬೆಳಿಗ್ಗೆ 10.30 ರಿಂದ 11.30 ಗಂಟೆ ವರೆಗೆ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದಲ್ಲಿ ಸಾನ್ವಿ ಕ್ರಿಯೇಷನ್‍ನವರ ‘ಅಮ್ಮೆರ್ ಪೊಲೀಸ’ ಸಿನಿಮಾದ ಹಾಡುಗಳ ಅನಾವರಣ ಹಾಗೂ ಸಿನೆಮಾ ಕುರಿತು ವಿಶೇಷ ಕಾರ್ಯಕ್ರಮ ಬಿತ್ತರವಾಗಲಿದೆ. ಲಕುಮಿ ಕ್ರಿಯೆಷನ್‍ನ ಲಯನ್ ಕಿಶೋರ್ ಡಿ.ಶೆಟ್ಟಿ, ಚಿತ್ರ ನಿರ್ಮಾಪಕ ಸಾನ್ವಿ ಕ್ರಿಯೇಷನ್‍ನ ರಾಜೇಶ್ ಶೆಟ್ಟಿ, ನಿರ್ದೇಶಕ ಸೂರಜ್ ಶೆಟ್ಟಿ, ನಾಯಕ ನಟ ರೂಪೇಶ್ ಶೆಟ್ಟಿ, ನಾಯಕಿ ನಟಿ ಪೂಜಾ ಶೆಟ್ಟಿ, ವಿಸ್ಮಯ ವಿನಾಯಕ, ಪಿಂಗಾರ ಪತ್ರಿಕೆ ಸಂಪಾದಕ ರೇಮಂಡ್ ಡಿ.ಕುನ್ಹಾ, ಕವಯತ್ರಿ ಪಲ್ಲವಿ ಪ್ರಶಾಂತ್ ನರಿಕೊಂಬು, ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ತುಳು ವಿಭಾಗದ ಕಾರ್ಯಕ್ರಮ ನಿರ್ವಾಹಕರಾದ ಡಾ| ಸದಾನಂದ ಪೆರ್ಲ ನಡೆಸಿಕೊಡಲಿದ್ದಾರೆ.

ಕೇಳುಗರು ಅತಿಥಿü ಕಲಾವಿದರ ಜೊತೆ ಸಿನಿಮಾದ ಬಗ್ಗೆ ಸಂವಾದ ಮಾಡಲು (0824) 2211999, ಮೊಬೈಲ್ 8277038000 ದೂರವಾಣಿಗಳನ್ನು ಸಂಪರ್ಕಿಸಬಹುದೆಂದು ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ಉಷಾಲತಾ ಸರಪಾಡಿ ತಿಳಿಸಿದ್ದಾರೆ.

ಜು.07: ಉಡುಪಿಯಲ್ಲಿ ಮಲ್ಪೆ ರಾಮದಾಸ ಸಾಮಗ ಸ್ಮರಣಾರ್ಥ ಪ್ರಶಸ್ತಿ ಪ್ರದಾನÀ

ಯಕ್ಷಗಾನ ಕಲಾವಿದ ಕೆ.ಶಿವರಾಮ ಜೋಗಿಗೆ ಮಲ್ಪೆ ರಾಮದಾಸ ಸಾಮಗ ಪ್ರಶಸ್ತಿ
ಮುಂಬಯಿ,ಜು.05:  ಪರ್ಯಾಯ ಶ್ರೀ ಪಲಿಮಾರು ಮಠ, ಶ್ರೀಕೃಷ್ಣ ಮಠಉಡುಪಿ ಇದರಆಶ್ರಯದಲ್ಲಿ ತುಳುಕೂಟ ಉಡುಪಿ (ರಿ.) ವತಿಯಿಂದ ಮಲ್ಪೆರಾಮದಾಸ ಸಾಮಗ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಹಾಗೂ ತುಳು ಯಕ್ಷಗಾನ ಕಾರ್ಯಕ್ರಮ ಜುಲೈ 7ರಂದು ಸಂಜೆ 6.30ಕ್ಕೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.

ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹಾಗೂ ಶ್ರೀ ಅದಮಾರು ಮಠದ ಕಿರಿಯಯತಿ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿ ಮತ್ತು ಆಶೀರ್ವಚನದೊಂದಿಗೆ ಕಾರ್ಯಕ್ರಮ ನಡೆಯಲಿದೆ. ತುಳುಕೂಟ ಉಡುಪಿ (ರಿ.) ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು.

ಮುಖ್ಯ ಅತಿಥಿüಗಳಾಗಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಇದರ ಸದಸ್ಯ ಐರೋಡಿ ರಾಜಶೇಖರ ಹೆಬ್ಬಾರ್ ಹಾಗೂ ಯಕ್ಷಾಭಿಮಾನಿ ಮತ್ತು ಉದ್ಯಮಿ ವಿಶ್ವನಾಥ ಶೆಣೈ ಭಾಗವಹಿಸಲಿರುವರು. ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಕೆ.ಶಿವರಾಮ ಜೋಗಿ ಅವರಿಗೆ ಮಲ್ಪೆ ರಾಮದಾಸ ಸಾಮಗ ಪ್ರಶಸ್ತಿ ಮತ್ತು ನಗದುರೂ.10,000/- ನೀಡಿ ಗೌರವಿಸಲಾಗುವುದು. ಸಭಾಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಗಣೇಶ ಕೊಲೆಕಾಡಿ ವಿರಚಿತ `ಗೇಲ್ದಬೀರೆ ವಾಲಿ’ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಹಿರಿಯ ಯಕ್ಷಗಾನ ಕಲಾವಿದ ಕೆ. ಶಿವರಾಮಜೋಗಿ:

ತೆಂಕುತಿಟ್ಟಿನ ಯಕ್ಷಗಾನಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಖ್ಯಾತರಾಗಿರುವ ಹಿರಿಯ ಯಕ್ಷಗಾನ ಕಲಾವಿದ ಕೆ.ಶಿವರಾಮ ಜೋಗಿ ಅವರು ಸುಮಾರು 60ವರ್ಷ ವಿವಿಧ ಮೇಳಗಳಲ್ಲಿ ಕಲಾಸೇವೆ ಮಾಡಿರುತ್ತಾ ರೆ. ಪ್ರಸಿದ್ಧ ಯಕ್ಷಗಾನ ಗುರುಗಳಾದ ಶೇಣಿ ಗೋಪಾಲಕೃಷ್ಣ ಭಟ್, ವಿಟ್ಲ ಗೋಪಾಲಕೃಷ್ಣ ಜೋಷಿ ಮತ್ತು ಕುಡಾಣ ಗೋಪಾಲಕೃಷ್ಣ ಭಟ್‍ಇವರಿಂದಯಕ್ಷಗಾನದಅನುಭವವನ್ನು ಪಡೆದು ಕೊಂಡು ಕುಣಿತ, ಅರ್ಥಗಾರಿಕೆ, ರಂಗನಡೆ ಇತ್ಯಾದಿಗಳನ್ನು ಅಭ್ಯಸಿಸಿ ಕೊಂಡಿದ್ದಾರೆ. ಸುರತ್ಕಲ್ ಮೇಳ ಒಂದರಲ್ಲಿ 40 ವರ್ಷ ದುಡಿದ ಇವರುಇತರ ಮೇಳಗಳಾದ ಕೂಡ್ಲು, ಮುಲ್ಕಿ, ಕರ್ನಾಟಕ, ಮಂಗಳಾದೇವಿ, ಎಡನೀರು, ಕುಂಟಾರು, ಹೊಸನಗರ ಮೇಳಗಳಲ್ಲಿ 63 ವರ್ಷ ಬಣ್ಣ ಹಚ್ಚಿದ್ದಾರೆ.ಯಕ್ಷಗಾನದಲ್ಲಿಇವರದುಶ್ಶಾಸನ, ಹಿರಣ್ಯಾಕ್ಷ, ದುಶ್ಯಂತ, ರಾವಣ, ಕರ್ಣ, ಕೋಟಿಇಂತಹ ಒಳ್ಳೆಯ ಪ್ರಮುಖ ಪಾತ್ರಗಳು ಸೇರಿದಂತೆ ಅನೇಕ ಪ್ರಸಂಗಳಲ್ಲಿ ಮಿಂಚಿದ್ದಾರೆ. ಬಂಟ್ವಾಳದ ಗುರುವಪ್ಪ  ಜೋಗಿ ಹಾಗೂ ಸೀತಮ್ಮ ಜೋಗಿ ದಂಪತಿಗಳ ಮಗನಾಗಿ 1941ರಲ್ಲಿ ಜನಿಸಿ 6ನೇ ತರಗತಿತನಕ ವಿದ್ಯಾಭ್ಯಾಸ ಮಾಡಿತಮ್ಮ 13ನೇ ವಯಸ್ಸಿನಲ್ಲಿ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದ ಮಹಾನ್ ಕಲಾವಿದ. ಪತ್ನಿ ಲತಾ ಜೋಗಿ ಮಕ್ಕಳಾದ ಸೌಮ್ಯ ಹಾಗೂ ಸುಮಂತ್‍ರಾಜ್ ಅವರೊಂದಿಗಿನ ಸಂತೃಪ್ತ ಸಂಸಾರದೊಂದಿಗೆ ಸುಖಜೀವನ ನಡೆಸುತ್ತಿದ್ದಾರೆ.

ಪ್ರಸ್ತುತ ಹನುಮಗಿರಿ ಮೇಳದಲ್ಲಿ ತನ್ನ 77ನೇ ವಯಸ್ಸಿನಲ್ಲಿ ಕಲಾಸೇವೆ ಮಾಡುತ್ತಿರುವಇವರು ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ತಮ್ಮದಾಗಿಸಿದ್ದಾರೆ. ಕರ್ನಾಟಕರಾಜ್ಯಜಿಲ್ಲಾರಾಜ್ಯೋತ್ಸವ ಪ್ರಶಸ್ತಿ, ಶೇಣಿ ಪ್ರಶಸ್ತಿ, ಕೀಳಾರು ಗೋಪಾಲಕೃಷ್ಣ ಪ್ರಶಸ್ತಿ ಪಡೆದಿರುವ ಶಿವರಾಮ ಜೋಗಿ ಅವರು ಈ ಬಾರಿಯ ತುಳುಕೂಟ ಉಡುಪಿ (ರಿ.) ವತಿಯಿಂದ ಕೊಡಲ್ಮಾಡುವ ಮಲ್ಪೆ ರಾಮದಾಸ ಸಾಮಗ ಪ್ರಶಸ್ತಿಗೆ ಆಯ್ಕೆ ಆಗಿರುತ್ತಾರೆ ಎಂದು ತುಳುಕೂಟ ಉಡುಪಿ (ರಿ.) ಇದರ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಮಲ್ಪೆ ರಾಮದಾಸ ಸಾಮಗ ಸ್ಮರಣಾರ್ಥ ಪ್ರಶಸ್ತಿ ಸಂಚಾಲಕ ಎಸ್.ವಿ.ಭಟ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Welcome to Thonse Naturecure Hospital
View More

Funeral Details: Alice Sequeira (78), BarkurFuneral Details: Alice Sequeira (78), Barkur
Kemmannu Church - Weekly Announcements.Kemmannu Church - Weekly Announcements.
Mount Rosary Church Annoucement for the weekMount Rosary Church Annoucement for the week
Free Eye Camp at Mount Rosary, KallianpurFree Eye Camp at Mount Rosary, Kallianpur
An Appeal from vittal churchAn Appeal from vittal church
Foundation Stone Laying Ceremony of Nayaab Residency by B. M. Zaffer & fly, Dubai, UAE.Foundation Stone Laying Ceremony of Nayaab Residency by B. M. Zaffer & fly, Dubai, UAE.
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Pedruchi Chavi January 2019Pedruchi Chavi January 2019
Delite Catering, SanthekatteDelite Catering, Santhekatte
Milarchi Laram - Issue Jan 2019Milarchi Laram - Issue Jan 2019
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Funeral Photographs:

Robert lewis (92), St. Theresa B ward, Kemmannu<font color=red><center>Funeral Photographs:<P> </font color=red></center> Robert lewis (92), St. Theresa  B ward, Kemmannu
ROZARICHO GAANCH DECEMBER 2018ROZARICHO GAANCH DECEMBER 2018
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India