Brief Udupi News with Pictures


Richard Dsouza
Kemmannu News Network, 12-07-2018 12:23:13


Write Comment     |     E-Mail To a Friend     |     Facebook     |     Twitter     |     Print


ಯುವ ಜನತೆಗೆ ಸೂಕ್ತ ಮಾರ್ಗದರ್ಶನ ನೀಡಿ- ದಿನಕರ ಬಾಬು

      ಉಡುಪಿ :   ಇಂದಿನ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗುತ್ತಿದ್ದು, ಇದನ್ನು ತಪ್ಪಿಸುವ ಸಲುವಾಗಿ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಉತ್ತಮ ನೈತಿಕ ಶಿಕ್ಷಣ  ಹಾಗೂ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಅವಶ್ಯಕತೆಯಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

      ಅವರು ಮಂಗಳವಾರ, ಸಂತೆಕಟ್ಟೆಯ ಧನ್ವಂತರಿ ಸ್ಕೂಲ್ ಮತ್ತು ಕಾಲೇಜು ಆಫ್ ನರ್ಸಿಂಗ್ ನಲ್ಲಿ ,  ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಉಡುಪಿ ಧನ್ವಂತರಿ ಸ್ಕೂಲ್ ಮತ್ತು ಕಾಲೇಜು ಆಫ್ ನರ್ಸಿಂಗ್ ಸಂತೆಕಟ್ಟೆ, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಣೆ ನಿಷೇಧಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

      ಸಮಾಜದ ಸ್ವಾಸ್ಥ್ಯ ಕೆಡಿಸುವ ಮಾದಕ ವಸ್ತುಗಳ ಬಳಕೆ ವಿರುದ್ದ ಪ್ರತಿಯೊಬ್ಬರೂ ಹೋರಾಡಬೇಕಿದೆ, ಯುವ ಜನತೆ ಈ ವ್ಯಸನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಮೇಲೆ ಗಮನ ಕೊಡುವುದಕ್ಕಿಂತ ಹೆಚ್ಚಾಗಿ ಉತ್ತಮ ನೈತಿಕ ಮೌಲ್ಯಗಳನ್ನು ಕಲಿಸಬೇಕಿದೆ ಅಲ್ಲದೆ ಶಾಲೆಗಳಲ್ಲಿ ಶಿಕ್ಷಕರೂ ಸಹ ಸರಿಯಾದ ಮಾರ್ಗದರ್ಶನ ನೀಡಬೇಕು, ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಕುರಿತಂತೆ ಯುವ ಜನತೆಯಲ್ಲಿ ಅರಿವು ಮೂಡಿಸಬೇಕು ಎಂದು ದಿನಕರ ಬಾಬು ಹೇಳಿದರು.

      ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತನಾಡಿ,ಯುವ ಜನತೆ ಮಾನಸಿಕ ನಿಯಂತ್ರಣ ಹೊಂದಿದ್ದು, ಮಾದಕ ವಸ್ತುಗಳ ಕುರಿತಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರ್ಗಿ ಮಾತನಾಡಿ, ಮಾದಕ ವ್ಯಸನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅತೀ ಶ್ರೀಮಂತರು ಮತ್ತು ಅತೀ ಬಡವರಲ್ಲಿ ಕಂಡು ಬರುತ್ತಿದೆ, ಅತೀ ಶ್ರೀಮಂತಿಕೆ ಮತ್ತು ಶಿಕ್ಷಣದ ಕೊರತೆ ಇದಕ್ಕೆ ಕಾರಣ, ಪ್ರಾರಂಭದಲ್ಲಿ ಆಕರ್ಷಣೀಯವಾಗಿ ಕಂಡು ಬಂದ ಮಾದಕ ವಸ್ತು ಸೇವನೆ ಕ್ರಮೇಣ ವ್ಯಸನವಾಗುತ್ತದೆ, ಭಾರತದಲ್ಲಿ ಔಷದೀಯ ಬಳಕೆಗೆ ಮಾತ್ರ ಅನುಮತಿ ಇರುವ ಮಾದಕ ವಸ್ತುಗಳ ಬಳಕೆ , ಇತರೇ ರೂಪದಲ್ಲಿ ಸಂಪೂರ್ಣ  ನಿಷೇಧವಿದೆ, ಪಾಕಿಸ್ತಾನ ಮತ್ತು ಆಫ್‍ಘಾನಿಸ್ಥಾನದಂತಹ ದೇಶಗಳಲ್ಲಿ ಕಾನೂನಿನ ನಿಯಂತ್ರಣದಲ್ಲಿಲ್ಲದ್ದ ಮಾದಕ ವಸ್ತುಗಳ ಉತ್ಪಾದನೆ ಕಳ್ಳ ಸಾಗಣೆ ಮೂಲಕ ಭಾರತಕ್ಕೆ ಆಗಮಿಸಿ ಇಲ್ಲಿನ ಯುವ ಜನತೆಯನ್ನು ನಾಶ ಮಾಡುತ್ತಿದೆ, ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತರಾಗಿ,  ಸ್ವಯಂ ನಿಯಂತ್ರಣದಿಂದ ಮಾತ್ರ ಈ ವ್ಯಸನದಿಂದ ಮುಕ್ತವಾಗಬಹುದು , ಮಾದಕ ವ್ಯಸನ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಾತ್ರವಲ್ಲದೇ , ಇತರೆ ಎಲ್ಲಾ ಇಲಾಖೆಗಳು, ಇಡೀ ಸಮಾಜ, ಪೋಷಕರು, ಶಿಕ್ಷಕರು ಹಾಗೂ ಮಾಧ್ಯಮಗಳ ಪಾತ್ರ ಬಹು ಮುಖ್ಯ , ನಾಗರೀಕರು ಸಂವಿಧಾನ ನೀಡಿರುವ ಹಕ್ಕುಗಳ ಚಲಾವಣೆ ಜೊತೆಗೆ ತಮ್ಮ ಕರ್ತವ್ಯಗಳನ್ನೂ ಸಹ ಪಾಲಿಸಬೇಕು ಎಂದು ಹೇಳಿದರು.

       ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಸುರೇಂದ್ರ ಚಿಂಬಾಲ್ಕರ್, ವಿಶ್ವದಲ್ಲಿ 5.3 ಬಿಲಿಯನ್ ಜನ ಮಾದಕ ವ್ಯಸನಿಗಳಿದ್ದು, ಭಾರತದಲ್ಲಿ 7.3 ಕೋಟಿ ಮಂದಿ ವ್ಯಸನಿಗಳಿದ್ದಾರೆ, ಪ್ರತಿದಿನ 10 ಮಂದಿ ಈ ವ್ಯಸನದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.  ಮಾದಕ ವ್ಯಸನಿಗಳಲ್ಲಿ ಶೇ.89 ವಿದ್ಯಾವಂತರಿದ್ದು, ಅದರಲ್ಲಿ  ಶೇ. 83 ಉದ್ಯೋಗಿಗಳಾಗಿದ್ದು, ಇದರಲ್ಲಿ ಪುರುಷರ ಪ್ರಮಾಣ ಶೇ.99, ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ , ದೇಶದಲ್ಲಿ ಮಾದಕ ವಸ್ತುಗಳ ಮಾರಾಟ , ನಿಷೇಧ ಕುರಿತಂತೆ  ಎನ್.ಡಿ.ಪಿ.ಎಸ್ ಕಾಯಿದೆ ಜಾರಿಯಲ್ಲಿದ್ದು, ಇದನ್ನು ಉಲ್ಲಂಘಿಸುವುದು ಅಪರಾಧವಾಗಿದೆ ಎಂದು ಹೇಳಿದರು.

       ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ, ಮಾನಸಿಕ ತಜ್ಞ ಡಾ. ಮಾನಸ್ ಮಾತನಾಡಿ, 2016 ರ ಸಮೀಕ್ಷೆಯಂತೆ ವಿಶ್ವದಲ್ಲಿ 275 ಮಿಲಿಯನ್ ಮಾದಕ ವ್ಯಸನಿಗಳಿದ್ದು, ಇದು ವಿಶ್ವದ ಒಟ್ಟು ಜನಸಂಖ್ಯೆಯ ಶೇ. 5.6 ರಷ್ಟು, ಇದರಲ್ಲಿ 31 ಮಿಲಿಯನ್ ಮಂದಿ ಮಾದಕ ವ್ಯಸನ ಚಿಕಿತ್ಸೆ ಪಡೆಯುವ ಹಂತದಲ್ಲಿದ್ದಾರೆ, ಮಾದಕ ವ್ಯಸನದಿಂದ ವ್ಯಕ್ತಿಗಳಲ್ಲಿ ಖಿನ್ನತೆ ಮತ್ತು ಆತ್ಮಹತ್ಯೆ ಸಂಭüವಿಸುತ್ತಿದೆ ಇಂತಹ ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಮಾರ್ಗದರ್ಶನ ನೀಡಿದಲ್ಲಿ ವ್ಯಸನದಿಂದ ಹೊರ ತರಲು ಸಾದ್ಯವಿದೆ, ಯುವ ಜನತೆ ಈ ವ್ಯಸನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದು, ಮಾತ್ರೆಗಳು,  ಔಷಧ ಮತ್ತು ಆಪ್ತ ಸಮಾಲೋಚನೆ ಮೂಲಕ  ಚಿಕಿತ್ಸೆ ಲಭ್ಯವಿದೆ ಎಂದು ಹೇಳಿದರು.   

       ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಉಡುಪಿ ಧನ್ವಂತರಿ ಸ್ಕೂಲ್ ಮತ್ತು ಕಾಲೇಜು ಆಫ್ ನರ್ಸಿಂಗ್‍ನ ಪ್ರಾಂಶುಪಾಲೆ ಪ್ರತಿಭಾ ಬ್ರಾಗ್ಸ್ ಉಪಸ್ಥಿತರಿದ್ದರು.

       ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಸ್ವಾಗತಿಸಿದರು, ಕಾಲೇಜಿನ ಎನ್.ಎಸ್.ಎಸ್ ಸಂಯೋಜಕ ಶಿವ ಪ್ರಸಾದ್ ಪ್ರಭು ನಿರೂಪಿಸಿದರು.    

ಜುಲೈ 12 ರಂದು ನಂದಿನಿ ತೃಪ್ತಿ ಹಾಲು ಉಚಿತ

ಉಡುಪಿ :   ದಕ್ಷಿಣ ಕನ್ನಡ ಹಾಲು ಒಕ್ಕೂಟದ ಹಾಲು ಸಂಗ್ರಹಣೆ ಹೆಚ್ಚಾಗಿದ್ದು, ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲಿನ ಪ್ರಯೋಜನವನ್ನು ನಂದಿನಿ ಗ್ರಾಹಕರಿಗೆ ವಿಸ್ತರಿಸುವ ಉದ್ದೇಶದಿಂದ , ಜುಲೈ 12 ರಂದು, ಉಡುಪಿ ಮತ್ತು ಮಂಗಳೂರು ಜಿಲ್ಲೆಯಲ್ಲಿ  ಗ್ರಾಹಕರು ಖರೀದಿಸುವ ಪ್ರತಿ ಪ್ಯಾಕೆಟ್ ( 500 ಮಿಲೀ, 1 ಲೀ, 6 ಲೀ ) ನಂದಿನಿ ಹಾಲಿನ ಪ್ಯಾಕೇಟ್ ನೊಂದಿಗೆ , 90 ದಿನದಷ್ಟು  ದೀರ್ಘಕಾಲ ಬಾಳಕೆ ಬರುವ ,  ನಂದಿನಿ ತೃಪ್ತಿ ಹಾಲಿನ ಪ್ಯಾಕೆಟ್ ನ್ನು (180 ಮಿ.ಲೀ) ಉಚಿತವಾಗಿ ನೀಡಲು ಗ್ರಾಹಕ ಸ್ನೇಹಿ ಯೋಜನೆ ರೂಪಿಸಿದ್ದು, ನಂದಿನಿ ಗ್ರಾಹಕರಿಗೆ ಅಂದಾಜು 62 ಲಕ್ಷ ರೂ ಮೌಲ್ಯದ ತೃಪ್ತಿ ಹಾಲನ್ನು ಉಚಿತವಾಗಿ ನೀಡಲಾಗುವುದು ಎಂದು ದ.ಕನ್ನಡ ಹಾಲು ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.

     ಅವರು ಬುಧವಾರ, ಮಣಿಪಾಲದ ಕೆಎಂಎಫ್ ಡೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

    ಜುಲೈ 12 ರಂದು ನೀಡಲಾಗುವ ಉಚಿತ ತೃಪ್ತಿ ಹಾಲನ್ನು ಮನೆ ಮನೆಗೆ ವಿತರಿಸುವವರಿಗೂ ಸಹ ಗ್ರಾಹಕರಿಗೆ ವಿತರಿಸುವಂತೆ ಸೂಚನೆ ನೀಡಲಾಗಿದೆ, ಎಲ್ಲಾ ಡೀಲರ್ ಗಳಿಗೆ ಸಹ ಉಚಿತ ಹಾಲು ವಿತರಣೆ ಕುರಿತಂತೆ ಮಾಹಿತಿ ನೀಡಲಾಗಿದ್ದು, ಅಗತ್ಯ ವಿರುವ ಒಟ್ಟು 6.5 ಲಕ್ಷ ನಂದಿನಿ ತೃಪ್ತಿ ಹಾಲಿನ ಪ್ಯಾಕೆಟ್ ಗಳನ್ನು ಸಿದ್ದಪಡಿಸಲಾಗಿದ್ದು, ಗ್ರಾಹಕರಿಗೆ ಸಮರ್ಪಕ ರೀತಿಯಲ್ಲಿ ವಿತರಣೆಯಾಗುವುದನ್ನು ಪರಿಶೀಲಿಸಲು ಉಸ್ತುವಾತಿ ತಂಡಗಳನ್ನು ರಚಿಸಲಾಗಿದೆ, ಗ್ರಾಹಕರಿಗೆ ಯಾವುದೆ ಲೋಪವಾಗದಂತೆ ಎಲ್ಲರಿಗೂ ಪ್ರಯೋಜನ ದೊರಕಿಸಿಕೊಡಲು ಉದ್ದೇಶಿಸಲಾಗಿದೆ, ಹಾಲು ಉತ್ತಮ ಸಮತೋಲಿತ ಆಹಾರವಾಗಿದ್ದು,  ಉತ್ತಮ ಆರೋಗ್ಯದ ದೃಷ್ಠಿಯಿಂದ , ಕಲಬೆರಕೆಯಿಲ್ಲದೇ ಅತ್ಯಂತ ಪರಿಶುದ್ದವಾಗಿರುವ ನಂದಿನಿ ಹಾಲನ್ನು ಮಕ್ಕಳಿಂದ ವಯೋ ವೃದ್ದರ ವರೆಗೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಳಸುವಂತೆ  ರವಿರಾಜ್ ಹೆಗ್ಡೆ ಹೇಳಿದರು.

     ಉಪ್ಪೂರು ನಲ್ಲಿ ಅಂದಾಜು 100 ಕೋಟಿ ರೂ  ವೆಚ್ಚದಲ್ಲಿ  ನಿರ್ಮಾಣವಾಗುತ್ತಿರುವ 2.50 ಲಕ್ಷ ಲೀ ಸಾಮಥ್ರ್ಯದ  ನೂತನ ಡೇರಿ ಸ್ಥಾವರ ಈ ವಷಾಂತ್ಯದ ವೇಳೆಗೆ ಉದ್ಘಾಟನೆಯಾಗಲಿದ್ದು, ಸಂಪೂರ್ಣ ಆಟೋಮೇಟಿಕ್ ವ್ಯವಸ್ಥೆಯಿಂದ ಕೂಡಿರಲಿದೆ ಎಂದು ಅಧ್ಯಕ್ಷರು ಹೇಳಿದರು.

        ಪತ್ರಿಕಾಗೊಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷರಾದ, ಕಾಪು ದಿವಾಕರ ಶೆಟ್ಟಿ, ಸೂರ್ಯ ಶೆಟ್ಟಿ, ಹದ್ದೂರ್ ರಾಜೀವ ಶೆಟ್ಟಿ, ಒಕ್ಕೂಟದ ವ್ಯವಸ್ಥಾಪಕ ಡಾ.ಬಿ.ವಿ ಸತ್ಯ ನಾರಾಯಣ್,  ಪ್ರಭಾರ ವ್ಯವಸ್ಥಾಪಕ ಜಯದೇವಪ್ಪ ಕೆ ಹಾಗೂ ಮಣಿಪಾಲ ಘಟಕದ ವ್ಯವಸ್ಥಾಪಕ  ಲಕ್ಕಪ್ಪ ಉಪಸ್ಥಿತರಿದ್ದರು.

ಹೊಸ ರೇಶನ್ ಕಾರ್ಡ್, ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

ಉಡುಪಿ:-ರಾಜ್ಯ ಸರಕಾರವು ಹೊಸ ರೇಶನ್ ಕಾರ್ಡ್‍ಗೆ ಅರ್ಜಿ ಸಲ್ಲಿಸಲು ಹಾಗೂ ಈಗಿನ ರೇಶನ್ ಕಾರ್ಡ್‍ಗೆ ಹೆಸರು ಸೇರಿಸಲು ಮತ್ತು ತಿದ್ದುಪಡಿಗೆ ಅವಕಾಶ ನೀಡಿದೆ.

ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಉಡುಪಿ ಜಿಲ್ಲಾ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಈ ವಿಷಯ ತಿಳಿಸಿದರು.

   ಚುನಾವಣೆ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿತ್ತು. ಇದೀಗ ಈ ಪ್ರಕ್ರಿಯೆಯನ್ನು ಮುಂದುವರಿಸಲು ರಾಜ್ಯ ಸರಕಾರ ಸೂಚನೆ ನೀಡಿದೆ. ಗ್ರಾಮೀಣ ಪ್ರದೇಶದ ನಾಗರೀಕರು ಆಯಾ ಗ್ರಾಮ ಪಂಚಾಯತ್‍ಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಇದಕ್ಕಾಗಿ ಗುರುತಿಸಿರುವ ಕೇಂದ್ರಗಳಲ್ಲಿ ಹೊಸ ರೇಶನ್ ಕಾರ್ಡ್‍ಗೆ ಅರ್ಜಿ ಅಥವಾ ಹೆಸರು ಸೇರ್ಪಡೆ, ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರು ಸಭೆಗೆ ತಿಳಿಸಿದರು.

 ರಾಷ್ಟ್ರೀಯ ಉದ್ಯೋಗ ಖಾತ್ರಿ(ನರೇಗಾ) ಯೋಜನೆಯಡಿ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿದ್ದರೂ, ಉಡುಪಿ ಜಿಲ್ಲೆಯಲ್ಲಿ ಕೆಲಸ ಮಾಡಲು ಜನರು ಮುಂದೆ ಬರುತ್ತಿಲ್ಲ. ಕೆಲವು ಗ್ರಾಮ ಪಂಚಾಯತಿಗಳು, ನರೇಗಾ ಯೋಜನೆಯಲ್ಲಿ ತಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಲಸ ಮಾಡಲು ಜನರು ಲಭ್ಯವಿಲ್ಲ ಎಂದು ಲಿಖಿತವಾಗಿಯೇ ತಿಳಿಸಿದ್ದಾರೆ. ಕೃಷಿ, ತೋಟಗಾರಿಕೆ ಕ್ಷೇತ್ರಗಳ್ಲೂ ನರೇಗಾ ಅಡಿ ಕೆಲಸ ಮಾಡಲು ಅವಕಾಶ ಇರುವುದರಿಂದ ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

  108 ಅಂಬ್ಯುಲೆನ್ಸ್‍ಗಳಲ್ಲಿ ನರ್ಸ್ ಸೇರಿದಂತೆ ಅಗತ್ಯ ಸಿಬ್ಬಂದಿಗಳ ಕೊರತೆ ಕಂಡುಬರುತ್ತಿದೆ. ತುರ್ತು ಸಂದರ್ಭಗಳಲ್ಲಿ ಅಂಬ್ಯುಲೆನ್ಸ್‍ಗಳಲ್ಲಿ ಇವರ ಸೇವೆ ಅಗತ್ಯವಿದೆ. ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಆರೋಗ್ಯ ಇಲಾಖೆಗೆ ಸೂಚಿಸಿದರು.

 ಸರಕಾರಿ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಳಕೆ ಇಲ್ಲ : ಉಡುಪಿ ಜಿಲ್ಲೆಯಲ್ಲಿ ನಡೆಯುವ ಸರಕಾರಿ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿ, ಹೂವಿನ ಬೊಕ್ಕೆ, ಲೋಟೆ ಮತ್ತಿತರ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಈಗಾಗಲೇ ಎಲ್ಲಾ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧಿಕಾರಿಗಳಿಗೆ ಸೂಚಿಸಿದರು.

ಉಜ್ವಲ ಯೋಜನೆಯಲ್ಲಿ ಅಕ್ರಮ: ತನಿಖೆಯಲ್ಲಿ: ಕೇಂದ್ರ ಸರಕಾರದ ಉಜ್ವಲ ಯೋಜನೆಯಡಿ ಜಿಲ್ಲೆಯ ಕೆಲವು ಗ್ಯಾಸ್ ಏಜನ್ಸಿಗಳು ಅಕ್ರಮ ಸಂಪರ್ಕ ನೀಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಬಗ್ಗೆ ತನಿಖೆಯ ಪ್ರಗತಿಯ ಬಗ್ಗೆ ಅಧ್ಯಕ್ಷರು ಸಭೆಯಲ್ಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರು, ಜಿಲ್ಲೆಯ ಎರಡು ಗ್ಯಾಸ್ ಏಜನ್ಸಿಗಳು ಫಲಾನುಭವಿಗಳ ಹೆಸರಿನಲ್ಲಿ ಬೇರೆಯವರಿಗೆ ಸಂಪರ್ಕ ನೀಡಿರುವ ಬಗ್ಗೆ ದೂರುಗಳು ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ, ತನಿಖೆಗೆ ಸೂಚಿಸಿದ್ದಾರೆ. ಉಜ್ವಲ ಯೋಜನೆಗೆ ಉಡುಪಿ ಜಿಲ್ಲೆಯಲ್ಲಿ ಎಚ್.ಪಿ.ಸಿ.ಎಲ್. ಸಂಸ್ಥೆಯು ನೋಡಲ್ ಆಗಿದ್ದು, ಈ ಪ್ರಕರಣದ ಬಗ್ಗೆ ಎಚ್‍ಪಿಸಿಎಲ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಉಜ್ವಲ ಫಲಾನುಭವಿಗಳ ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.

 ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ, ಜಿ.ಪಂ. ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ , ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಮತ್ತಿತರರು ಉಪಸ್ಥಿತರಿದ್ದರು.

ಜನಸಂಖ್ಯಾ ಸ್ಪೋಟ ನಿಯಂತ್ರಣ ಅಗತ್ಯ - ದಿನಕರ ಬಾಬು

ಉಡುಪಿ :   ಹೆಚ್ಚುತ್ತಿರುವ ಜನಸಂಖ್ಯೆ ವಿಶ್ವದ ಪ್ರಮುಖ ಸಮಸ್ಯೆಯಾಗಿದೆ, ಜನಸಂಖ್ಯಾ ಸ್ಪೋಟದಿಂದ ನಾಗರೀಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಎಲ್ಲಾ ರಾಷ್ಟ್ರಗಳಿಗೂ ಸಮಸ್ಯೆಯಾಗಿದೆ  ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

     ಅವರು ಬುಧವಾರ, ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ,  ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಡಾ.ಜಿ.ಶಂಕರ್.ಸ.ಮ.ಪ್ರ.ದ.ಕಾಲೇಜು ಮತ್ತು ಸ್ನಾ.ಅ.ಕೇ.ರಾ.ಸೇ.ಯೋ.ಅಜ್ಜರಕಾಡು, ಲಯನ್ಸ್ ಕ್ಲಬ್ ಉಡುಪಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ  ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಜನಸಂಖ್ಯಾ ಸಮಸ್ಯೆಯಿಂದಾಗಿ ಸರ್ಕಾರಗಳು ತಮ್ಮ ನಾಗರೀಕರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸುವುದು ಕಷ್ಟಕರವಾಗಿದೆ, ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ನಿರುದ್ಯೋಗ ಸೃಷ್ಠಿಯಾಗಿ ದೇಶದ ಯುವ ಸಂಪತ್ತು , ಸಂಪಾದನೆಗಾಗಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುತ್ತವೆ, ಭಾರತ ಜನಸಂಖ್ಯೆಯಲ್ಲಿ ವಿಶ್ವದಲ್ಲಿ 2 ನೇ ಸ್ಥಾನದಲ್ಲಿದ್ದು, ಇಲ್ಲಿನ ಯುವ ಸಂಪತ್ತು ಇತರೇ ರಾಷ್ಟ್ರಗಳಿಗಿಂತ ಅಧಿಕವಾಗಿದ್ದು, ಈ ಯುವ ಸಂಪತ್ತಿನ ಸದ್ಬಳಕೆ ಆಗಬೇಕು, ಜನಸಂಖ್ಯೆಯನ್ನು ನಿಯಂತ್ರಿಸುವುದು ಇಂದಿನ ಅಗತ್ಯವಾಗಿದ್ದು, ಕುಟುಂಬ ಯೋಜನಾ ಕ್ರಮಗಳು ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರ ಸೀಮಿತವಾಗದೆ ಎಲ್ಲರೂ ಪಾಲಿಸುವಂತಾಗಬೇಕು,ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಕುಟುಂಬ ಯೋಜನಾ ಕ್ರಮಗಳ ಬಗ್ಗೆ  ಸೂಕ್ತ ಮಾಹಿತಿ ನೀಡುತ್ತಿದ್ದು, ಅವರ ಕಾರ್ಯ ಅಭಿನಂದನಾರ್ಹ ಎಂದು ದಿನಕರ ಬಾಬು ಹೇಳಿದರು.

   ಜನಸಂಖ್ಯಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

   ಜನಸಂಖ್ಯಾ ನಿಯಂತ್ರಣ ಕುರಿತ ಕರಪತ್ರವನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಶೆಟ್ಟಿ ಬಿಡುಗಡೆ ಮಾಡಿದರು.

     ಕಾರ್ಯಕ್ರಮದಲ್ಲಿ ಸ್ವಾಗತಿಸಿ , ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, 2001 ರಲ್ಲಿ ಭಾರತದ ಜನಸಂಖ್ಯೆ 1.02 ಬಿಲಿಯನ್ ಇದ್ದು, 2011 ರಲ್ಲಿ 1.21 ಬಿಲಿಯನ್ ಗೆ ಏರಿಕೆಯಾಗಿದೆ, ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ 5.28 ಕೋಟಿ ಇದ್ದದ್ದು 6.10 ಕೋಟಿ ಗೆ ಏರಿಕೆಯಾಗಿದೆ, ಉಡುಪಿಯಲ್ಲಿ 11.77 ಲಕ್ಷ ಜನಸಂಖ್ಯೆ ಇದೆ , ದೇಶದಲ್ಲಿ ಲಿಂಗಾನುಪಾತದ ಪ್ರಮಾಣ 933 ರಿಂದ 943 ಕ್ಕೆ ಏರಿಕೆಯಾಗಿದ್ದು, ಕರ್ನಾಟಕದಲ್ಲಿ 965 ರಿಂದ 973 ಕ್ಕೆ ಏರಿದೆ , 2011 ಕ್ಕೆ ಜನಸಂಖ್ಯಾ ಪ್ರಮಾಣ ಭಾರತದಲ್ಲಿ 17.5% ಏರಿಕೆಯಾಗಿದ್ದು, ಕರ್ನಾಟಕದಲ್ಲಿ 15.6% ರಷ್ಟು ,ಉಡುಪಿಯಲ್ಲಿ  5.85% ಏರಿಕೆಯಾಗಿದೆ. ಕರ್ನಾಟಕದಲ್ಲಿ ಪ್ರತಿ 1000 ಕ್ಕೆ 200 ಮಂದಿ 15 ರಿಂದ 45 ವಯೋಮಾನದವರಿದ್ದಾರೆ ಎಂದು ಡಿಹೆಚ್ ಓ ಹೇಳಿದರು.

     ವಿವಿಧ ರೀತಿಯ ಜನಸಂಖ್ಯಾ ನಿಯಂತ್ರಣ ವಿಧಾನಗಳು ಇಂದು ಎಲ್ಲಡೆ ಸುಲಭವಾಗಿ ಲಭ್ಯವಾಗುತ್ತಿದ್ದು, ಸರಿಯಾದ ವಿಧಾನವನ್ನು ಯೋಚಿಸಿ ಅಳವಡಿಸಿಕೊಳ್ಳುವಂತೆ ತಿಳಿಸಿದ ಡಾ. ರೋಹಿಣಿ, ಜನಸಂಖ್ಯೆ ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ಮಾತ್ರವಲ್ಲದೇ ಪ್ರತಿಯೊಬ್ಬರೂ ಪಾತ್ರವೂ ಮುಖ್ಯವಾಗಿದೆ ಎಂದು ಹೇಳಿದರು.

      ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಡಾ.ಜಿ.ಶಂಕರ್ ಸರಕಾರಿ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಪ್ರಕಾಶ್ ಕ್ರಮಧಾರಿ, ಲಯನ್ಸ್ ಕ್ಲಬ್ ಅಧ್ಯಕ್ಷ ಮನೋಜ್ ಪ್ರಭು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್ ,  ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಉಪಸ್ಥಿತರಿದ್ದರು.

 ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿಜಯಾಬಾಯಿ ನಿರೂಪಿಸಿದರು.

    ಇದಕ್ಕೂ ಮೊದಲು ಜೋಡುಕಟ್ಟೆಯಿಂದ ನಡೆದ ಜಾಥಾ ಕಾರ್ಯಕ್ರಮವನ್ನು ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ  ಉದ್ಘಾಟಿಸಿದರು.

ಡಾ.ಜಿ.ಶಂಕರ್ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರಿಂದ ಜನಸಂಖ್ಯಾ ನಿಯಂತ್ರಣ ಕುರಿತು ಕಿರು ನಾಟಕ ನಡೆಯಿತು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Welcome to Thonse Naturecure Hospital
View More

Funeral Details: Alice Sequeira (78), BarkurFuneral Details: Alice Sequeira (78), Barkur
Kemmannu Church - Weekly Announcements.Kemmannu Church - Weekly Announcements.
Mount Rosary Church Annoucement for the weekMount Rosary Church Annoucement for the week
Free Eye Camp at Mount Rosary, KallianpurFree Eye Camp at Mount Rosary, Kallianpur
An Appeal from vittal churchAn Appeal from vittal church
Foundation Stone Laying Ceremony of Nayaab Residency by B. M. Zaffer & fly, Dubai, UAE.Foundation Stone Laying Ceremony of Nayaab Residency by B. M. Zaffer & fly, Dubai, UAE.
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Pedruchi Chavi January 2019Pedruchi Chavi January 2019
Delite Catering, SanthekatteDelite Catering, Santhekatte
Milarchi Laram - Issue Jan 2019Milarchi Laram - Issue Jan 2019
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Funeral Photographs:

Robert lewis (92), St. Theresa B ward, Kemmannu<font color=red><center>Funeral Photographs:<P> </font color=red></center> Robert lewis (92), St. Theresa  B ward, Kemmannu
ROZARICHO GAANCH DECEMBER 2018ROZARICHO GAANCH DECEMBER 2018
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India