Brief Mumbai - Mangalore news with pictures


Rons Bantwal
Kemmannu News Network, 19-07-2018 22:02:23


Write Comment     |     E-Mail To a Friend     |     Facebook     |     Twitter     |     Print


ಸುಮಾರು ಶತಮಾನದಿಂದ ಮುಂಬಯಿ ಅಲ್ಲಿನ ಪಶ್ಚಿಮ ರೈಲ್ವೇಯಲ್ಲಿ ಎಲ್ಫಿನ್‌ಸ್ಟನ್ ರೈಲು ನಿಲ್ದಾಣ ಎಂದೇ ಪ್ರಸಿದ್ಧಿಯ ಈ ರೈಲು ನಿಲ್ದಾಣಕ್ಕೆ ಪ್ರಭಾದೇವಿ ಎಂದು ನಾಮಕರಣ ಮಾಡಲಾಗುತ್ತಿದೆ. ದಾದರ್ ಮತ್ತು ಎಲ್ಫಿನ್‌ಸ್ಟನ್ ಮಧ್ಯೆ ಪ್ರಭಾದೇವಿಯಲ್ಲಿ ಸಿದ್ಧಿವಿನಾಯಕ ಮಂದಿರ ಇದ್ದು ಇದು ಭಾರೀ ಜನಮನ್ನಣೆ ಪಡೆದ ದೇವಸ್ಥಾನವಾಗಿದೆ. ರೋನ್ಸ್ ಬಂಟ್ವಾಳ್

Mumbai July 18 :- People enjoying high tide at Gateway of India, in Mumbai on Wednesday.

Mumbai July 18 :- The members of Watchdog Foundation named road leading from Saki Naka towards T Terminal, Sahar Airport, Mumbai after Municipal Commissioner BMC as "Ajoy Mehta Road". This road is frequented by many vehicles coming from Eastern Suburbs.  We also filled several potholes with construction debris. We need permanent solution and not temporary reliefs.

Mumbai July 18 :- Dams are over flowing in Kerala due to heavy rains. People are fishing. ( Pic by Rons Bantwal)

ವಿದ್ಯಾ ಪ್ರಸಾರಕ ಮಂಡಳದಲ್ಲಿ ಶಿಕ್ಷಕ ವರ್ಗಕ್ಕೆ  ಪುರಸ್ಕಾರ ಪ್ರದಾನ-ಅಭಿನಂದನಾ ಸಮಾರಂಭ  ವಿಶ್ವದ ಸಂಪನ್ಮೂಲಗಳ ಸಂಪತ್ತೇ ಶಿಕ್ಷಕರು-ಚೇತನ್.ಆರ್ ಶ್ಹಾ

ಮುಂಬಯಿ, ಜು.18: ವಿದ್ಯಾ ಪ್ರಸಾರಕ ಮಂಡಳವು ಹಮ್ಮಿಕೊಂಡಿದ್ದ ವಜ್ರಮಹೋತ್ಸವ ನಿಮಿತ್ತ ವಿ.ಪಿ.ಎಂ ಮಂಡಳದ ಮುಲುಂಡ್ ಮತ್ತು ಐರೋಳಿಯ ಬಾಲವಾಡಿಯಿಂದ ಮಹಾವಿದ್ಯಾಲಯ ವರೆಗಿನ ನಿವೃತ್ತ ಶಿಕ್ಷಕ ಮತ್ತು ಶಿಕ್ಷಕೇತರ ಉದ್ಯೋಗಿಗಳಿಗೆ, ಹಾಗೆಯೇ ಪ್ರಸ್ತುತ ಕಾರ್ಯನಿರತ ಉದ್ಯೋಗಿಗಳಿಗೆ ಸರ್ಟಿಫಿಕೆಟ್ ಮತ್ತು ಸ್ಮರಣಿಕೆ ನೀಡಿ ಪುರಸ್ಕಾರ ಪ್ರದಾನ-ಅಭಿನಂದನಾ ಸಮಾರಂಭ ಇತ್ತೀಚೆಗೆ ಆಯೋಜಿಸಿತ್ತು.

ಸಮಾರಂಭಕ್ಕೆ ಮುಖ್ಯ ಅತಿಥಿüಯಾಗಿ ಮ್ಯಾರಥಾನ್ ರಿಯಾಲ್ಟಿ ಕಾರ್ಯಾಧ್ಯಕ್ಷ ಚೇತನ್ ಆರ್. ಶ್ಹಾ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ಶಿಕ್ಷಕರು ರಾಷ್ಟ್ರದ ಸಂಪತ್ತು, ವಿದ್ಯಾಥಿರ್üಗಳಿಗೆ ಪ್ರೇರೆಪಿಸುವ ಸಾಮಥ್ರ್ಯ ಮತ್ತು ಉತ್ಸಾಹವನ್ನು ಉಂಟು ಮಾಡುವ, ಸಂಪತ್‍ಭರಿತವಾದ ನವ ಪೀಳಿಗೆಯನ್ನು ಸೃಷ್ಟಿಸುವ ಶಕ್ತಿ,, ಯುಕ್ತಿಯ ಕುರಿತು ಪ್ರಸ್ಥಾಪಿಸಿದರು. ವಿಜ್ಞಾನ ಮಾಹಿತಿಯ ವಿಶ್ವ ಗ್ರಂಥಾಲಯದ ನಿಯಂತ್ರಣವು ಸಾಂಪ್ರದಾಯಿಕ ಪಾತ್ರದಿಂದ ಬಹುದೂರ ಹೋಗುತ್ತಿದ್ದರೂ ಸಹ ಅದರ ಕೀರ್ತಿ ಶಿಕ್ಷಕರಿಗೆ ಸಲ್ಲುತ್ತದೆ. ಜಾಗೃತ ಯುವ ಪೀಳಿಗೆಯನ್ನು ತಯಾರಿಸುವ ಮತ್ತು ಮೌಲ್ಯ ವ್ಯವಸ್ಥೆಯಿಂದ ಸವಾಲುಗಳನ್ನು ಎದುರಿಸುವ ಗುಣ ಕೇವಲ ಗುರುವಿನ ಸ್ಥಾನದಿಂದ ಮಾತ್ರ ಧಾರೆಯೆರೆದು ದಯಪಾಲಿಸಲಾಗುತ್ತದೆ ಎಂದು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಮರ್ಮವನ್ನು ಶಿಕ್ಷಕ ವೃಂದಕ್ಕೆ ಅಭಿನಂದಿಸತ್ತಾ ವಜ್ರ ಮಹೋತ್ಸವಕ್ಕೆ ಶುಭ ಹಾರೈಸಿದರು.

ಗೌರವ ಅತಿಥಿüಯಾಗಿ ಪ್ರಾಧ್ಯಾಪಕಿ ಶೈಲಜಾ ಶ್ಹಾ ಮಾತನಾಡಿ ವಿದ್ಯಾ ಪ್ರಸಾರಕ ಮಂಡಳವು ತಮ್ಮ ಪ್ರತಿಷ್ಠಿತ ಸೇವೆಯನ್ನು ಗುರುತಿಸಿ, ಗೌರವ ಮೆರವಣಿಗೆಯನ್ನು ವಾದ್ಯವೃಂದದ ಮೂಲಕ ಮಾನವೀಯತೆಯನ್ನು ಪ್ರದರ್ಶಿಸಿದೆ. ವಿಶ್ವದ ಶ್ರೇಷ್ಠ ಸಂಪನ್ಮೂಲಗಳ ವ್ಯವಸ್ಥಾಪಕರಾಗಿ ತಮ್ಮೆಲ್ಲರಿಗೂ ಸದವಕಾಶವನ್ನು ಕಲ್ಪಿಸಿ ಜವಾಬ್ದಾರಿಯನ್ನು ವಹಿಸಿದೆ. ಶ್ರೇಷ್ಠ ಸ್ಥಾನವನ್ನು ಅಲಂಕರಿಸಿದ ತಾವೂ ಉತ್ಸಾಹ ಮತ್ತು ಉಲ್ಲಾಸದಿಮದ ಮುಂದುವರೆಯಲು ಶಕ್ತಿ-ಸಾಮಥ್ರ್ಯವನ್ನು ಪ್ರಕಾಶಿಸಿರಿ ಎಂದು ಮನವಿ ಮಾಡಿದ ಅವರು ಶುಭ ಕೊರಿದರು.

ಮಂಡಳದ ಪ್ರಧಾನ ಗೌರವ ಕಾರ್ಯದರ್ಶಿ ಡಾ| ಪಿ.ಎಂ ಕಾಮತ್ ಅವರು ಗಣ್ಯರಿಗೆ ಪುಷ್ಪಗುಚ್ಛವಿತ್ತು ಗೌರವಿಸಿ, ಕಾರ್ಯಕ್ರಮಕ್ಕೆ ಅನುಮೊದನೆಯನ್ನು ಪ್ರಾಪ್ತಗೊಳಿಸಿ, ಸದಸ್ಯರ ಸಾಧನೆಯ ಆದರ್ಶದ ಸ್ಮರಣೆಯ  ಪ್ರಾಮಾಣಿಕತೆ, ಪರಕಾಷ್ಠತೆಯ  ಪಾರದರ್ಶಕತೆಯ ಕುರಿತು  ವಿವರಿಸಿದÀರು ಹಾಗೂ ಶಾಲೆ ಬೆಳೆದು ಬಂದ ಬಗೆಯನ್ನು ಅನಾವರಣ ಗೊಳಿಸಿದರು. ವಿದ್ಯಾ ಪ್ರಸಾರಕ ಮಂಡಳಕ್ಕೆ 1962ರಲ್ಲಿ ಅಗತ್ಯವಿದ್ದಾಗ ಉದಯೋನ್ಮುಖ ಮತ್ತು ಸೃಷ್ಟಿಯಲ್ಲಿನ ಸಮರ್ಥ,  ಸದೃಡ, ಅಹರ್ನಿಸಿ, ಪಾರದರ್ಶಕತೆಯ ವ್ಯಕ್ತಿಯಾಗಿ ಸಂಸ್ಥೆಯನ್ನು ಆಲದ ಮರದ ಹಾಗೆ ಬೆಳೆಯುವಂತೆ ಮಾಡಿ, ಶೈಕ್ಷಣಿಕ ಕ್ರಾಂತಿಯನ್ನೆ ಪ್ರಹಾರಗೊಳಿಸಿದರು. ನೀರಿಕ್ಷಣೆಗೂ ಮೀರಿದ ಆಧುನಿಕ ಸೌಕರ್ಯಗಳನ್ನು ಹೊಂದಿರುವ ಶಾಲಾ ಕಟ್ಟಡದ ಮರು ಅಭಿವೃದ್ಧಿ ಬಗ್ಗೆ ಪ್ರೇಕ್ಷಕರ ಗಮನಕ್ಕೆ ತಂದರು.

ವೇದಿಕೆಯಲ್ಲಿ ಮಂಡಳದ ಗೌರವ ಕಾರ್ಯದರ್ಶಿ ಬಿ.ಹೆಚ್ ಕಟ್ಟಿ, ಖಜಾಂಚಿ ಪೆÇ್ರ| ಸಿ.ಜೆ ಪೈ, ಸಹ ಖಜಾಂಚಿ ಎನ್.ಎಂ ಗುಡಿ ಆಸೀನರಾಗಿದ್ದರು.

ಸಮಾರಂಭದಲ್ಲಿ ಮಂಡಳದ ಪದಾಧಿಕಾರಿಗಳು, ಎಲ್ಲಾ ವಿಭಾಗದ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯ ರು, ಪರಿವೀಕ್ಷಕರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದು, ನಿವೃತ್ತ ಶಿಕ್ಷಕರ ಯಾದಿಯನ್ನಯ ಆಯಾ ವಿಭಾಗದ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಸುವನಾ ಶೆಟ್ಟಿ, ಡಾ| ಸಾಯಿನಾಥ್ ಶೆಣೈ, ಮಹಾವಿದ್ಯಾಲಯದ ಪ್ರಾಚಿರಾವ ರಾಣಿ ಮತ್ತು ಸಂಧ್ಯಾ ಸೊಂಡೂರ ಓದಿದರು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಗಿ ವಂದೇ ಮಾತರಂ ಗೀತೆಯೊಮದಿಗೆ ಸಮಾರೋಪ ಗೊಂಡಿತು. ಅಶ್ವಿನಿ ಬಂಗೇರಾ ಸ್ವಾಗತಿಸಿ ಶಿಕ್ಷಕರ ವಿಶಿಷ್ಟವಾದ ವ್ಯಕ್ತಿ ಚಿತ್ರಣದ ಪ್ರದರ್ಶನದಿಂದ ಪರಿಚಯಿಸಿದರು. ಪ್ರಮೀಳಾ ಪರೇರಾ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.

ಜು.28-30: ಸಾಂತಕ್ರೂಜ್‍ನ ಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ಶ್ರೀ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಭೇಟಿ

ಮುಂಬಯಿ, ಜು.16: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಇದೇ ಜು.28 ರಿಂದ ಜು.30ರ ಮೂರು ದಿನಗಳಲ್ಲಿ ಮುಂಬಯಿ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಅಲ್ಲಿನ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ಮೊಕ್ಕ ಹೂಡಲಿದ್ದಾರೆ ಎಂದು ಮಠದ ಪ್ರಧಾನ ಶಾಖಾಧಿಕಾರಿ ರಾಮದಾಸ ಉಪಾಧ್ಯಾಯ ರೆಂಜಾಳ ತಿಳಿಸಿದ್ದಾರೆ.

ತಮ್ಮ ಐತಿಹಾಸಿಕ ಐದನೇ ಪರ್ಯಾಯ ಪೂರೈಸಿ ಇದೇ ಮೊದಲ ಬಾರಿಗೆ ಮಹಾನಗರ ಮುಂಬಯಿಗೆ ಆಗಮಿಸಲಿರುವ ಶ್ರೀಗಳನ್ನು ಜು.28ರ ಶನಿವಾರ ಸಂಜೆ 5.00 ಗಂಟೆಗೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಿಂದ ಭವ್ಯ ಶೋಭಾಯಾತ್ರೆಯೊಂದಿಗೆ ಭಕ್ತಿಪೂರ್ವಕವಾಗಿ ಬರಮಾಡಿ ಕೊಳ್ಳಲಾಗುವುದು. ಬಳಿಕ 6.00 ಗಂಟೆಗೆ ಶ್ರೀ ಪೇಜಾವರ ಮಠದ ಶಾಖೆಯಲ್ಲಿ ಶ್ರೀ ಪೇಜಾವರ ಕಿರಿಯಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಮಾರ್ಗದರ್ಶನ, ಮುಂಬಯಿಯಲ್ಲಿನ ತುಳು-ಕನ್ನಡಿಗರ, ಕರ್ನಾಟಕ ಜನತೆಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಮಹಾಪೌರ (ಮೇಯರ್) ಪೆÇ್ರ. ವಿಶ್ವನಾಥ್ ಮಹಾದೇಶ್ವರ್ ಹಾಗೂ ಗಣ್ಯಾಧಿಗಣ್ಯರ ಉಪಸ್ಥಿತಿಯಲ್ಲಿ ವಿಶ್ವೇಶತೀರ್ಥ ಶ್ರೀಗಳಿಗೆ ರಜಕ ತುಲಭಾರ ಸೇವೆ, ಸಾರ್ವಜನಿಕ ಸನ್ಮಾನ ನಡೆಸಲಾಗುವುದು.

ಶ್ರೀಪಾದದ ಬೃಹತ್ ಯೋಜನೆಯಲ್ಲಿ ಒಂದಾದ ಮಧ್ವಚಾರ್ಯರ ಜನ್ಮಸ್ಥಳ ಕುಂಜಾರುಗಿರಿ ಪಾದಕ ಕ್ಷೇತ್ರದಲ್ಲಿ ಇಂಜಿನೀಯರಿಂಗ್ ಕಾಲೇಜು ನಿರ್ಮಾಣ ಮತ್ತು ಬೆಂಗಳೂರು ಮಾರ್ಥಾಹಳ್ಳಿಯಲ್ಲಿ ಸುಮಾರು ಮೂರು ಎಕ್ರೆ ಸ್ಥಳದಲ್ಲಿ ರೂಪಿಸುವ ಕೃಷ್ಣ ಸೇವಾಶ್ರಮದ ಮಲ್ಟಿ ಸ್ಪೆಶಲಿಟಿ ಆಸ್ಪತ್ರೆಗೆ ರಜಕ ತುಲಭಾರ ಸೇವೆಯ ಕೊಡುಗೆ ಶ್ರೀಗಳು ವಿನಿಯೋಗಿಸಲಿದ್ದಾರೆ.

ಜು.29ರ ಭಾನುವಾರ ಮತ್ತು ಜು.30ರ ಸೋಮವಾರ ಈ ಎರಡು ದಿನಗಳಲ್ಲಿ ಶ್ರೀಪಾದರು ಮಠದಲ್ಲೇ ಇರಲಿದ್ದು ಅಂದು ಭಕ್ತಾಭಿಮಾನಿಗಳ ದರ್ಶನ, ಪಟ್ಟದ ದೇವರಾದ ಶ್ರೀ ರಾಮವಿಠಲ ದೇವರ ಮಹಾಪೂಜೆ, ತೀರ್ಥಪ್ರಸಾದ, ಆಶೀರ್ವಚನ ನಡೆಸಲಿದ್ದಾರೆ. ಸೋಮವಾರ ಸಂಜೆ ಮತ್ತೆ ಶ್ರೀಗಳು ಬೆಂಗಳೂರುಗೆ ನಿರ್ಗಮಿಸಲಿದ್ದಾರೆ ಎಂದು ಶಾಖೆಯ ಪ್ರಬಂಧಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ, ಹರಿ ಭಟ್, ನಿರಂಜನ್ ಗೋಗ್ಟೆ ಈ ಮೂಲಕ ತಿಳಿಸಿದ್ದಾರೆ.

ನಾಡಿನ ಸಮಸ್ತ ಭಕ್ತಾಭಿಮಾನಿಗಳು ಶ್ರೀಗಳ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಭಾಗಿಗಳಾಗಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾಗುವಂತೆ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿ ಹಾಗೂ ಪೇಜಾವರ ಮಠ ಮುಂಬಯಿ ಪರವಾಗಿ ರಾಮದಾಸ ಉಪಾಧ್ಯಾಯ ಈ ಮೂಲಕ ವಿನಂತಿಸಿದ್ದಾರೆ. ಅಧಿಕ ಮಾಹಿತಿಗಾಗಿ ಪೇಜಾವರ ಮಠದ ದೂರವಾಣಿ 26126614 ಯಾ 9892697670 ಸಂಖ್ಯೆಗಳಿಗೆ ಸಂಪರ್ಕಿಸುವಂತೆ ಕೋರಲಾಗಿದೆ.

ಕಲ್ಕೂರ ಪ್ರತಿಷ್ಠಾನ ಕೃಷ್ಣ ಕಥಾ ಚಿತ್ರ ಸ್ಪರ್ಧೆ

ಶ್ರೀ ಕೃಷ್ಣ ವೇಷ ಸ್ಪರ್ಧೆ ಎನ್ನುವ ರಾಷ್ಟ್ರೀಯ ಮಕ್ಕಳ ಉತ್ಸವವನ್ನು ಸಂಯೋಜಿಸುತ್ತಿರುವ ‘ಕಲ್ಕೂರ ಪ್ರತಿಷ್ಠಾನ’ದ ನೆರಳಲ್ಲಿ ವಿದ್ಯಾರ್ಥಿಗಳಿಗೆ ‘ಶ್ರೀ ಕೃಷ್ಣ ಕಥಾ ಚಿತ್ರ ಬಿಡಿಸುವ ಸ್ಪರ್ಧೆ ಜರಗಲಿದೆ. ಆಯ್ಕೆಯಾದ ಚಿತ್ರಗಳನ್ನು ‘ಶ್ರೀ ಕೃಷ್ಣ ದರ್ಶನ’ ಚಿತ್ರಕಥಾ ಮಾಲಿಕೆ ಪುಸ್ತಕದಲ್ಲಿ ಪ್ರಕಟಿಸಲಾಗುವುದು.

ಸ್ಪರ್ಧಾ ಸ್ವರೂಪ
ಶ್ರೀ ಕೃಷ್ಣನ ಜನ್ಮ, ಬಾಲ್ಯ, ಸಾಹಸ, ಮಹಿಮೆಗಳನ್ನು ಸಾರುವ ದೃಶ್ಯಗಳನ್ನು ಚಿತ್ರಿಸಬೇಕು.
ಚಂದಮಾಮ, ಬಾಲಮಿತ್ರ, ಅಮರ ಚಿತ್ರಕಥೆ ಮಾದರಿಯ ಚಿತ್ರಗಳಾಗಿರಬೇಕು.
ವಾಟರ್ ಕಲರ್ ಚಿತ್ರಗಳಾಗಿರಬೇಕು
ಚಿತ್ರಕ್ಕೆ ಶಿರ್ಷಿಕೆ ಎರಡು ಸಾಲಿನ ಕಥಾ ವಿವರಣೆ ಬರೆದಿರಬೇಕು
ಉದಾ: ಕಾಳಿಂಗ ಮರ್ದನ: ಕಾಳಿಂದಿ ಮಡುವಿನÀಲ್ಲಿ ಬಾಲಕೃಷ್ಣ ಕಾಳಿಂಗವನ್ನು ಮರ್ದಿಸುತ್ತಿದ್ದಾನೆ ಕಾಳಿಂಗನ ಪತ್ನಿಯರು ಭಯದಿಂದ ಬೇಡಿಕೊಳ್ಳುತ್ತಿದ್ದಾರೆ.

ಸ್ಪರ್ಧಾ ವಿಭಾಗಗಳು/ನಿಯಮಗಳು
6ನೇ ತರಗತಿ ಮೇಲ್ಪಟ್ಟು ಪಿ.ಯು.ಸಿ. ತನಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.
 ಚಿತ್ರದ ಅಳತೆ 10x14 ಇಂಚು ಇರತಕ್ಕದ್ದು
ಮೊದಲ ಸುತ್ತಿನ ಸ್ಪರ್ಧೆ: ಮಕ್ಕಳು ಚಿತ್ರ ಬಿಡಿಸಿ ಅಂಚೆ/ಕೊರಿಯರ್ ಮೂಲಕ ಸಂಚಾಲಕ ಶ್ರೀ ಜಾನ್ ಚಂದ್ರನ್ (9844284175) ಕಲ್ಕೂರ ಪ್ರತಿಷ್ಠಾನ ಶ್ರೀ ಕೃಷ್ಣ ಸಂಕೀರ್ಣ  ಕೊಡಿಯಾಲ್‍ಬೈಲ್ ಮಂಗಳೂರು ಈ ವಿಳಾಸಕ್ಕೆ ಚಿತ್ರಗಳನ್ನು ತಾ. 29-7-2018 ರ ಮುಂಚಿತವಾಗಿ ತಲುಪಿಸಬೇಕು.
ಮೊದಲ ಸುತ್ತಿನಲ್ಲಿ ಆಯ್ಕೆಯಾದ ಚಿತ್ರಗಾರರಿಗೆ ಅಂತಿಮ ಹಂತದ ಸ್ಪರ್ಧೆಯನ್ನು ಮಂಗಳೂರು/ಉಡುಪಿಯಲ್ಲಿ ನಡೆಯಲಿರುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi