Brief Mumbai - Mangalore news with pictures


Rons Bantwal
Kemmannu News Network, 01-08-2018 16:50:29


Write Comment     |     E-Mail To a Friend     |     Facebook     |     Twitter     |     Print


Mumbai,August1, 2018:Tata Motors in line with its Group heritage has constantly looked at encouraging sports and promoting sporting talent across India and overseas. Continuing this tradition, the Commercial Vehicles Business Unit (CVBU) of Tata Motors today announced an all-encompassing three-year strategic partnership with Wrestling Federation of India (WFI) as ‘Principal Sponsor’ to encourage and promote the sport of wrestling and leverage the strong connect with the brands of its CV range. Beginning with the 2018 Asian Games in Jakarta, this partnership will continue till 2021 that will include the World Championship and World Cup, 2020 Olympic Games, besides other national and international wrestling events. In pic New offical Tata Yodha jersey for the Indian Wrestling Team was unveiled, L to R Mr. Girish Wagh, President - CVBU, Tata Motors Ltd., Olympic Medalist Sushil Kumar, Yogeshwar Dutt, Bajarang Punia, Sandeep Tomar, Satyawart Kadian, Geeta Phogat, sakshi Malik, Pooja Dhanda & Mr. R T Wasan, Vice President, Sales & Marketing - CVBU, Tata Motors Ltd.

Mumbai Aug. 01 :- Actor-producer-director Aamir Khan during inaugural session of 5th edition of the Indian Screenwriters Conference (ISC), in Mumbai on Wednesday

Mumbai Aug. 01 :- Taapsee Pannu, the Judwaa 2 actress launched her own app today on her birthday as a birthday gift to her fans.



ಆ.15: ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಯುವ ವಿಭಾಗದಿಂದ
ಜೂಯಿ ನಗರದ ಬಂಟ್ಸ್ ಸೆಂಟರ್‍ನಲ್ಲಿ ಬೃಹತ್ ರಕ್ತದಾನ ಶಿಬಿರ
ಮುಂಬಯಿ, ಜು.31: ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಯುವ ವಿಭಾಗವು ಯುವ ವಿಭಾಗಧ್ಯಕ್ಷ ಚರಣ್ ಆರ್.ಶೆಟ್ಟಿ ಮುಂದಾಳುತ್ವದಲ್ಲಿ ಇದೇ ಬರುವ ಆ.15ರ ಬುಧವಾರ ಭಾರತ ರಾಷ್ಟ್ರದ 72ನೇ ಸ್ವಾತಂತ್ರ್ಯ ದಿಣಾಚರಣೆಯ ಶುಭಾವಸರದಲ್ಲಿ ನವಿಮುಂಬಯಿ ಜೂಯಿ ನಗರದ ಸೆಕ್ಟರ್-24ರಲ್ಲಿರುವ ಬಂಟ್ಸ್ ಸೆಂಟರ್‍ನ ಬೃಹತ್ ರಕ್ತದಾನ ಶಿಬಿರ ಆಯೋಜಿಸಿದೆ.
ಅಂದು ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 4.00 ಗಂಟೆ ತನಕ ಅಪೆÇಲೋ ಆಸ್ಪತ್ರೆಯ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ. ನಾಡಿನ ಆಸಕ್ತ ಸರ್ವರಿಗೂ ಶಿಬಿರದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ರಕ್ತದಾನ ಮಾಡಿ ಮತ್ತೊಬ್ಬರ ಜೀವವನ್ನು ಉಳಿಸಿ. ರಕ್ತದಾನದ ಮೂಲಕ ನಗುವನ್ನು ಬೀರಿದಾಗಲೇ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ಪ್ರತೀಯೊಂದು ಕ್ಷಣಕ್ಕೂ ಅನೇಕರಿಗೆ ರಕ್ತದ ಅವಶ್ಯವಿರುತ್ತದೆ. ಅದಕ್ಕಾಗಿ ತಮ್ಮಮಹತ್ವದ ಕನಿಷ್ಟ ಹತ್ತು ನಿಮಿಷಗಳನ್ನು ಇಂತಹ ಪುಣ್ಯಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಕ್ತದಾನ ನಡೆಸಿ ಸಹಕರಿಸುವಂತೆ ಯುವ ವಿಭಾಗದ ಪದಾಧಿಕಾರಿಗಳು ತಿಳಿಸಿದ್ದಾರೆ.

ಅಧಿಕ ಮಾಹಿತಿಗಾಗಿ ಯುವ ವಿಭಾಗದ ಅಧ್ಯಕ್ಷ ಚರಣ್ ಆರ್.ಶೆಟ್ಟಿ (9819761711) ಮತ್ತು ಕೋಶಾಧಿಕಾರಿ ಧನಂಜಯ ಆರ್.ಶೆಟ್ಟಿ (9773273489) ಇವರನ್ನು ಸಂಪರ್ಕಿಸುವಂತೆ ಈ ಮೂಲಕ ಯುವ ವಿಭಾಗದ ಕಾರ್ಯದರ್ಶಿ ಸ್ಮೃತಿ ಶೆಟ್ಟಿ ವಿನಂತಿಸಿದ್ದಾರೆ.
.................................................................................................................


ಅ.05: ಆಲ್‍ಕಾರ್ಗೊ ಸಹಯೋಗದೊಂದಿಗೆ ಬಂಟವಾಳದ ಬಂಟರ ಸಂಘದಲ್ಲಿ
ಬೃಹತ್ ಶೈಕ್ಷಣಿಕ ವಿದ್ಯಾಥಿರ್sವೇತನ ವಿತರಣಾ ಕಾರ್ಯಕ್ರಮ
ಮುಂಬಯಿ, ಜು.30: ಬಂಟರ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿರುವ ಬಂಟರ ಸಂಘ ಬಂಟವಾಳ ತಾಲೂಕು (ರಿ.) ಇವರ ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿಯು ಮುಂಬಯಿ ಅಲ್ಲಿನ ಪ್ರತಿಷ್ಠಿತ ಆಲ್‍ಕಾರ್ಗೊ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯ ಸಹಯೋಗದೊಂದಿಗೆ 2018ರ ವಾರ್ಷಿಕ ಬೃಹತ್ ವಿದ್ಯಾಥಿರ್sವೇತನ ವಿತರಣಾ ಕಾರ್ಯಕ್ರಮವನ್ನು ಇದೇ ಅ.05ನೇ ಭಾನುವಾರ ಪೂರ್ವಾಹ್ನ 10.30 ಗಂಟೆಗೆ ತುಂಬೆ ವಳವೂರು ಇಲ್ಲಿನ ಬೋಳಂತೂರುಗುತ್ತು ಗಂಗಾಧರ ರೈ ಕಾಂಪ್ಲೆಕ್ಸ್‍ನ ಬಂಟ್ವಾಳದ ಬಂಟರ ಭವನದ ಬೆಳ್ಳೂರು ಪರಾರಿ ಪಿ.ವಿ ಶೆಟ್ಟಿ ಸಭಾಗೃಹದ (ಆಲ್‍ಕಾರ್ಗೋ ಶಶಿಕಿರಣ್ ಶೆಟ್ಟಿ ಮಾತೃಶ್ರೀ) ಸುಶೀಲ ಜನಾರ್ದನ ಶೆಟ್ಟಿ ವೇದಿಕೆಯಲ್ಲಿ ಆಯೋಜಿಸಿದೆ.

ಮುಂಬಯಿನ ಕೈಗಾರಿಕೋದ್ಯಮಿ, ಹೆಸರಾಂತ ಸಮಾಜ ಸೇವಕ, ಬಂಟರ ಸಂಘ ಬಂಟವಾಳ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ| (ಡಾ|) ಎಂ.ಶಾಂತಾರಾಮ ಶೆಟ್ಟಿ ಮತ್ತು ಗೌರವ ಅತಿಥಿsಗಳಾಗಿ ಮೈಟ್ ಮೂಡಬಿದ್ರೆ ಅಧ್ಯಕ್ಷ ರಾಜೇಶ್ ಚೌಟ, ನವಿಮುಂಬಯಿನ ನಿವೃತ್ತ ಪೆÇಲೀಸ್ ಅಧಿಕಾರಿ ಮತ್ತು ಆಲ್‍ಕಾರ್ಗೊ ಸಂಸ್ಥೆಯ ಸಿಎಸ್‍ಆರ್ ಸಲಹೆಗಾರ ಕೆ.ಎಲ್ ಪ್ರಸಾದ್ ಹಾಗೂ ಸಿಎಸ್‍ಆರ್ ಮುಖ್ಯಸ್ಥ ಡಾ| ನೀಲ್‍ರತ್ನ ಆರ್.ಶಿಂಧೆ ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕಾರ್ಯದರ್ಶಿ ಚಂದ್ರ್ರಹಾಸ ಡಿ.ಶೆಟ್ಟಿ ರಂಗೋಲಿ, ಕೋಶಾಧಿಕಾರಿ ಜಗಧೀಶ್ ಶೆಟ್ಟಿ ಇರಾ, ಜೊತೆ ಕಾರ್ಯದರ್ಶಿ ನವೀನ್‍ಚಂದ್ರ ಶೆಟ್ಟಿ ಮುಂಡಜೆಗುತ್ತು, ಶೈಕ್ಷಣಿಕ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಹೆಚ್.ಸಂಕಪ್ಪ ಶೆಟ್ಟಿ ಬಿ.ಸಿ ರೋಡ್, ಮಹಿಳಾ ವಿಭಾಗಧ್ಯಕ್ಷೆ ಆಶಾ ಪಿ.ರೈ ಮತ್ತಿತರÀರು ಉಪಸ್ಥಿತರಿದ್ದು ಎಲ್ಲಾ ಸಮುದಾಯ, ಜಾತಿಗಳ ಸುಮಾರು ಒಂದುವರೆ ಸಾವಿರಕ್ಕೂ ಅಧಿಕ ವಿದ್ಯಾಥಿರ್üಗಳಿಗೆ ಸುಮಾರು 40 ಲಕ್ಷಕ್ಕೂ ಮೊತ್ತದ ಶೈಕ್ಷಣಿಕ ದೇಣಿಗೆ ಈ ಬಾರಿ ವಿತರಿಸಲಿದೆ ಎಂದು ನಗ್ರಿಗುತ್ತು ವಿವೇಕ್ ಶೆಟ್ಟಿ ತಿಳಿಸಿದ್ದಾರೆ.


ಬಂಟರ ಸಂಘ ಬಂಟವಾಳ:
2005ರಲ್ಲಿ ಸಂಘವು ರೂಪುಗೊಂಡಿದ್ದು ಪ್ರಥಮ ಅಧ್ಯಕ್ಷರಾಗಿ ಕಿರಣ್ ಹೆಗ್ಡೆ ಅನಂತಾಡಿ ಸಂಘದ ಚುಕ್ಕಾಣಿಯನ್ನೀ -ಡಿದರು. ನಂತರ ದ್ವಿತೀಯ ಅಧ್ಯಕ್ಷರಾಗಿ ಲೋಕನಾಥ ಶೆಟ್ಟಿ ಮತ್ತು ತೃತೀಯ ಅಧ್ಯಕ್ಷರಾಗಿ ಬೋಳಂತೂರುಗುತ್ತು ಗಂಗಾಧರ ರೈ ಸಂಘವನ್ನು ದಕ್ಷತೆಯಿಂದಲೇ ಮುನ್ನಡೆಸಿದರು. 2014ರಲ್ಲಿ ಮೂರು ವರ್ಷಗಳ ಕಾಲಾವಧಿಗೆ ಚತುರ್ಥ ಅಧ್ಯಕ್ಷರಾಗಿ ನಗ್ರಿಗುತ್ತು ವಿವೇಕ್ ಶೆಟ್ಟಿ ಆಯ್ಕೆಗೊಂಡು ಯಶಸ್ವಿಯಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾ ಭಾರೀ ಜನಮನ್ನಣೆಗೆ ಪಾತ್ರರಾದರು. ಅಂತೆಯೇ 2017-2020ರ ಅವಧಿಗೂ ಎರಡನೇ ಬಾರಿ ಒಕ್ಕೊರಳ ಮತ್ತು ಒಮ್ಮತದ ಬೇಡಿಕೆಯಲ್ಲಿ ವಿವೇಕ್ ಶೆಟ್ಟಿ ಅವರೇ ಅಧ್ಯಕ್ಷರಾಗಿ ಮುನ್ನಡೆಯುವಂತಾಯಿತು. ತನ್ನ ಸಾರಥ್ಯದಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಸಹಯೋಗದಿಂದ 2016ರಲ್ಲಿ ಕೇವಲ ಒಂದುವರೆ ವರ್ಷದ ಅಲ್ಪಾವಧಿಯಲ್ಲೇ ಅತ್ಯಾಧುನಿಕ ಮತ್ತು ಅತ್ಯಾಕರ್ಷಕ ಬಂಟ್ವಾಳದ ಬಂಟರ ಭವನ ನಿರ್ಮಿಸಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರ ಅಭಯಾಸ್ತದಿಂದ ಸೇವಾರ್ಪಣೆ ಮಾಡಿ ನಗ್ರಿಗುತ್ತು ಜನನಾಯಕರಾಗಿ ಪ್ರಶಂಸೆಗೆ ಪಾತ್ರರಾದರು.

ಅನನ್ಯ ಸಂಸ್ಕೃತಿ ಮತ್ತು ಶಿಕ್ಷಣಪ್ರೇಮಿ ಆಗಿರುವ ನಗ್ರಿಗುತ್ತು ಕಳೆದ ಎರಡು ವರ್ಷಗಳಿಂದ ಆಲ್‍ಕಾರ್ಗೊ ಸಂಸ್ಥೆಯ ಸಹಕಾರದಲ್ಲಿ ಕಳೆದ 2017ರ ಸಾಲಿನಲ್ಲಿ 30 ಲಕ್ಷ ರೂಪಾಯಿ ವಿದ್ಯಾಥಿರ್ü ವೇತನ ಹಾಗೂ ಸುಮಾರು 3 ಲಕ್ಷ ರೂಪಾಯಿ ಅಂಗವಿಕಲರಿಗೆ ಸಹಾಯಧನ ವಿತರಿಸಿ ತಮ್ಮ ಸೇವಾ ನಿಷ್ಠೆಯನ್ನು ಮೆರೆದಿದ್ದಾರೆ. ಕಳೆದ ವರ್ಷ ಅವರ ಹಸ್ತದಿಂದ ವೇತನ ವಿತರಿಸಿ ಈ ವಾರ್ಷಿಕ ಕಾರ್ಯಕ್ರಮಕ್ಕೆ ಇನ್ನಷ್ಟು ಪ್ರತಿಷ್ಠೆಯನ್ನು ತಂದೊದಗಿಸಿದ್ದಾರೆ. ಅಸಮಾನ್ಯ ಸಮಾಜ ಸೇವಕರೆಂದೇ ಗುರುತಿಸಿಕೊಂಡು ಕೊಡುಗೈದಾನಿ ಆಗಿರುವ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರ ಯಾವುದೇ ಕಾರ್ಯಕ್ರಮಗಳೂ ವಿಭಿನ್ನವೂ ಅರ್ಥಪೂರ್ಣ ಆಗಿರುತ್ತವೆ. ಸದಾ ಭೌಗೋಳಿಕವಾಗಿ ಚಿಂತಕರೆಣಿಸಿ ದೂರದೃಷ್ಠಿತವುಳ್ಳ ಸಾಮಾಜಿಕ ಕಳಕಳಿಯುಳ್ಳ ಅವರ ಯೋಚನೆಗಳು ಹಿರಿಯ ನಾಗರಿಕರಿಂದ ಯುವ ಪೀಳಿಗೆಯಲ್ಲೂ ಮನಾಕರ್ಷಣಾ ಮೋಡಿ ಮಾಡುವಂತಹದ್ದು. ಕಲಾತ್ಮಕ ಮನಸ್ಸುವುಳ್ಳವರಾಗಿದ್ದು ಆಧುನಿಕತೆಯಲ್ಲೂ ಪ್ರಾಚೀನತೆ ರೂಢಿಸಿ ಭವಿಷ್ಯತನ್ನು ರೂಪಿಸಬಲ್ಲ ಸಹೃದಯಿ. ಸರ್ವರಲ್ಲೂ ಸಮಾನತ್ವ ಕಾಯ್ದಿರಿಸಿ ಮುನ್ನಡೆಯುವ ಚಿಂತನಾಶೀಲರಾಗಿದ್ದು ಓರ್ವ ಅಪ್ಪಟ ಸಂಪ್ರದಯಸ್ಥರೇ ಸರಿ. ಆದುದರಿಂದಲೇ ನಗ್ರಿಗುತ್ತು ವಿವೇಕ್ ಶೆಟ್ಟಿ ಅಂದರೆ ವಿಭಿನ್ನತೆಗೆ ಒಂದು ಹೆಸರು ಎನ್ನುವುದು ವಾಸ್ತವ್ಯ.

ಗೋಕುಲ ಮಹಿಳಾ ವಿಭಾಗದ ಆಯೋಜನೆಯಲ್ಲಿ -  ಆಟಿಡೊಂಜಿ ದಿನ

ಬಿ.ಎಸ್. ಕೆ. ಬಿ. ಎಸೋಸಿಯೇಶನ್ , ಸಾಯನ್, ಗೋಕುಲದ  ಮಹಿಳಾ ವಿಭಾಗವು ರವಿವಾರ ದಿನಾಂಕ ೨೯.೭.೨೦೧೮ ರಂದು,   ಆಷಾಢಮಾಸ ವಿಶೇಷತೆಗಳು -  ಆಟಿಡೊಂಜಿ ದಿನವನ್ನು  ನೇರೂಲ್ ನಲ್ಲಿರುವ  ’ಆಶ್ರಯ’ ದಲ್ಲಿ   ಸಂಭ್ರಮದಿಂದ ಆಚರಿಸಿತು.

ತುಳುನಾಡಿನ  ವೈವಿಧ್ಯಮಯ   ತಿಂಡಿ- ತಿನಿಸುಗಳು, ವ್ಯಂಜನಗಳನ್ನು ಪ್ರೇಮಾ ರಾವ್,  ಸಹನಾ ಪೋತಿ,
 ರಾಜಶ್ರೀ ರಾವ್, ಲತಾ ಜಗದೀಶ್, ಅಂಜನಾ ರಾವ್,  ವಿಜಯಲಕ್ಷ್ಮಿ ರಾವ್, ಸುಚಿತ್ರ ರಾವ್, ಶಾಂತಲಾ ಉಡುಪ, ಗೀತಾ ರಾವ್, ಶಕುಂತಲಾ ಸಾಮಗ, ಸ್ಮಿತಾ ಭಟ್, ಭಾಗ್ಯಲಕ್ಷ್ಮಿ ಚಡಗ,  ಶಾಲಿನಿ ಉಡುಪ, ರಜನಿ ರಾವ್, ರಾಜೇಶ್ವರಿ ಭಟ್, ಭಾಗ್ಯಲಕ್ಷ್ಮಿ ಭಟ್, ಮತ್ತು ಸಪ್ನಾ  ಭಟ್ ರವರು ಉತ್ಸಾಹದಿಂದ
 ತಯಾರಿಸಿಕೊಂಡು  ಬಂದು   ಪ್ರದರ್ಶನಕ್ಕಿಟ್ಟಿದ್ದರು.
ಸ್ಮಿತಾ ಭಟ್ ರವರ ನಿರೂಪಣೆಯಲ್ಲಿ ನಡೆದ ಸಭಾಕಾರ್ಯಕ್ರಮದ ವೇದಿಕೆಯಲ್ಲಿ,  ಅಧ್ಯಕ್ಷರು ಡಾ. ಸುರೇಶ್ ಎಸ್ ರಾವ್, ಉಪಾಧ್ಯಕ್ಷ  ವಾಮನ್ ಹೊಳ್ಳ, ಕಾರ್ಯದರ್ಶಿ  ಎ.ಪಿ.ಕೆ. ಪೋತಿ, ಕೋಶಾಧಿಕಾರಿ  ಹರಿದಾಸ್ ಭಟ್, ಆಶ್ರಯ ಸಂಚಾಲಕಿ  ಚಂದ್ರಾವತಿ ರಾವ್ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರೇಮಾ ರಾವ್ ಮತ್ತು ಸಂಚಾಲಕಿ ಡಾ. ಸಹನಾ ಪೋತಿಯವರು ಉಪಸ್ಥಿತರಿದ್ದರು.  ಆಷಾಢ ಮಾಸದ ವಿಶೇಷತೆಗಳ ಬಗ್ಗೆ ಮಾಹಿತಿಗಳನ್ನು ಪ್ರಭಾವತಿ ರಾವ್, ಅಂಜನಾ ರಾವ್, ಅನಿತಾ ಆಚಾರ್ಯ, ಡಾ. ಸಹನಾ ಪೋತಿ ಮತ್ತು  ರಶ್ಮಿ ಭಟ್ ರವರು ನೀಡಿದರು.  

  ಡಾ. ಸುರೇಶ್ ಎಸ್ ರಾವ್ ರವರು   ಕಾರ್ಯಕ್ರಮದ ಬಗ್ಗೆ  ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ,  ಪ್ರತಿ ತಿಂಗಳಿನಲ್ಲಿ ಬರುವ ಹಬ್ಬ ಹರಿದಿನಗಳ ಮಹತ್ವವನ್ನು ತಿಳಿಸಿಕೊಡುವ ಇಂತಹಾ ಕಾರ್ಯಕ್ರಮಗಳನ್ನು   ಮುಂದೆಯೂ  ಆಯೋಜಿಸುತ್ತಿರಬೇಕು.  ನಮ್ಮ ಎಳೆಯರು  ಕಾರ್ಯಕ್ರಮದಲ್ಲಿ ಭಾಗವಹಿಸಿ,  ಗಮನವಿಟ್ಟು ಕೇಳಿ ತಿಳಿದುಕೊಂಡು, ನಮ್ಮ  ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು     ಎಂದು  ಕರೆ ನೀಡಿದರು.   

ಪ್ರೇಮಾ ರಾವ್ ರವರು ಮಾತನಾಡುತ್ತಾ, ಕಳೆದ ೨-೩ ವರ್ಷಗಳಿಂದ  ’ಆಟಿಡೊಂಜಿ ದಿನ’  ದಂತಹ ಕಾರ್ಯಕ್ರಮವನ್ನು  ಆಯೋಜಿಸಬೇಕೆಂಬ  ಅಧ್ಯಕ್ಷರ ಆಶಯದ ಮೇರೆಗೆ, ಇಂದು ಪ್ರಪ್ರಥಮವಾಗಿ ಆಟಿಡೊಂಜಿ ದಿನವನ್ನು ಹಮ್ಮಿಕೊಂಡಿದ್ದೇವೆ.  ನಮ್ಮ ನಿರೀಕ್ಷೆಗೂ ಮೀರಿ ಇಂದು  ಹೆಚ್ಚಿನ  ಮಹಿಳೆಯರು    ಅತ್ಯಂತ ಮುತುವರ್ಜಿಯಿಂದ ಇದರಲ್ಲಿ ಭಾಗವಹಿಸಿದ್ದಾರೆ. ಉತ್ತಮ ಸಂಖ್ಯೆಯಲ್ಲಿ  ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಮಹಿಳಾ ವಿಭಾಗವು  ಮುಂದಿನ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ  ಆಚರಿಸುವ ಪ್ರಯತ್ನ ಮಾಡುತ್ತದೆ  ಎಂದರು.
ಅಂದಿನ ವಿಶೇಷ ತಿಂಡಿಗಳನ್ನು ತಯಾರಿಸಿದ ಮಹಿಳೆಯರಿಗೆ,  ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನೆನಪಿನ ಕಾಣಿಕೆಯನ್ನಿತ್ತು ಪುರಸ್ಕರಿಸಿದರು.  ಅಂಜನಾ ರಾವ್ ಧನ್ಯವಾದ ಸಮರ್ಪಿಸಿದರು. ನಂತರ ಅಂದಿನ ವಿಶೇಷ ತಿಂಡಿಗಳನ್ನು  ಚಹಾದೊಂದಿಗೆ  ಸದಸ್ಯರಿಗೆ ವಿತರಿಸಲಾಯಿತು.
ಇದೇ ವೇದಿಕೆಯಲ್ಲಿ  ಡಾ. ಸುರೇಶ್ ಎಸ್ ರಾವ್ ರವರ ಅಧ್ಯಕ್ಷತೆಯಲ್ಲಿ  ಸಂಘದ  ವಾರ್ಷಿಕ ಸಭೆಯು  ಜರಗಿದ ನಂತರ  ತುಳುನಾಡಿನ ವಿಶೇಷ ಅಡುಗೆಯ ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.  ಪ್ರೀತಿ ಭೋಜನವನ್ನು ವಿ.ಕೆ. ಸುವರ್ಣರವರು ಪ್ರಾಯೋಜಿಸಿದ್ದರು.   ಸಂಘದ ಪದಾಧಿಕಾರಿಗಳು, ಕಾರ್ಯಕಾರೀ ಸಮಿತಿ ಸದಸ್ಯರುಗಳ ಸಹಿತ ನೂರಾರು ಮಂದಿ ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.



ಆ.15: ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಯುವ ವಿಭಾಗದಿಂದ
ಜೂಯಿ ನಗರದ ಬಂಟ್ಸ್ ಸೆಂಟರ್‍ನಲ್ಲಿ ಬೃಹತ್ ರಕ್ತದಾನ ಶಿಬಿರ
ಮುಂಬಯಿ, ಜು.31: ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಯುವ ವಿಭಾಗವು ಯುವ ವಿಭಾಗಧ್ಯಕ್ಷ ಚರಣ್ ಆರ್.ಶೆಟ್ಟಿ ಮುಂದಾಳುತ್ವದಲ್ಲಿ ಇದೇ ಬರುವ ಆ.15ರ ಬುಧವಾರ ಭಾರತ ರಾಷ್ಟ್ರದ 72ನೇ ಸ್ವಾತಂತ್ರ್ಯ ದಿಣಾಚರಣೆಯ ಶುಭಾವಸರದಲ್ಲಿ ನವಿಮುಂಬಯಿ ಜೂಯಿ ನಗರದ ಸೆಕ್ಟರ್-24ರಲ್ಲಿರುವ ಬಂಟ್ಸ್ ಸೆಂಟರ್‍ನ ಬೃಹತ್ ರಕ್ತದಾನ ಶಿಬಿರ ಆಯೋಜಿಸಿದೆ.
ಅಂದು ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 4.00 ಗಂಟೆ ತನಕ ಅಪೆÇಲೋ ಆಸ್ಪತ್ರೆಯ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ. ನಾಡಿನ ಆಸಕ್ತ ಸರ್ವರಿಗೂ ಶಿಬಿರದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ರಕ್ತದಾನ ಮಾಡಿ ಮತ್ತೊಬ್ಬರ ಜೀವವನ್ನು ಉಳಿಸಿ. ರಕ್ತದಾನದ ಮೂಲಕ ನಗುವನ್ನು ಬೀರಿದಾಗಲೇ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ಪ್ರತೀಯೊಂದು ಕ್ಷಣಕ್ಕೂ ಅನೇಕರಿಗೆ ರಕ್ತದ ಅವಶ್ಯವಿರುತ್ತದೆ. ಅದಕ್ಕಾಗಿ ತಮ್ಮಮಹತ್ವದ ಕನಿಷ್ಟ ಹತ್ತು ನಿಮಿಷಗಳನ್ನು ಇಂತಹ ಪುಣ್ಯಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಕ್ತದಾನ ನಡೆಸಿ ಸಹಕರಿಸುವಂತೆ ಯುವ ವಿಭಾಗದ ಪದಾಧಿಕಾರಿಗಳು ತಿಳಿಸಿದ್ದಾರೆ.

ಅಧಿಕ ಮಾಹಿತಿಗಾಗಿ ಯುವ ವಿಭಾಗದ ಅಧ್ಯಕ್ಷ ಚರಣ್ ಆರ್.ಶೆಟ್ಟಿ (9819761711) ಮತ್ತು ಕೋಶಾಧಿಕಾರಿ ಧನಂಜಯ ಆರ್.ಶೆಟ್ಟಿ (9773273489) ಇವರನ್ನು ಸಂಪರ್ಕಿಸುವಂತೆ ಈ ಮೂಲಕ ಯುವ ವಿಭಾಗದ ಕಾರ್ಯದರ್ಶಿ ಸ್ಮೃತಿ ಶೆಟ್ಟಿ ವಿನಂತಿಸಿದ್ದಾರೆ.
.................................................................................................................
Bombay Bunts Association Youth Wing would like to invite you all to the Blood Donation Drive oganised on the occasion of 72nd Independence day. An opportunity for you to bring back smiles to the people who need the most.

Wednesday,15th August 2018. from 9:00 am to 4:00 pm at Bunts Center, Juinagar, Navi Mumbai. Anyone who would love to donate. Your one act of kindness can give someone a new lease of life. Donate Blood, Save Lives Be A Donor -Save Lives # bba Youth Wing. For Queries contact: Charan R Shetty 9819761711 and Dhananjay Shetty 9773273489

ಗುರುಪುರ ಬಂಟರ ಮಾತ್ರ ಸಂಘದ ವಾರ್ಷಿಕ ಸಮಾರಂಭ ಎಲ್ಲರ ನೋವು-ನಲಿವಿಗೆ ಶ್ರಮಿಸುವೆ : ಶಾಸಕ ಡಾ. ಭರತ್ ಶೆಟ್ಟಿ

ಮುಂಬಯಿ (ಗುರುಪುರ), ಜು.31: ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ, ಮಹಾಸಭೆ, ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅಭಿನಂದನಾ ಸಮಾರಂಭ ಭಾನುವಾರ ಗುರುಪುರ ಕುಕ್ಕದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ಜರುಗಿತು.

ಪ್ರತಿಯೊಬ್ಬ ಬಂಟರಲ್ಲಿ ನಾಯಕತ್ವ ಗುಣವಿದೆ. ಶಿಸ್ತಿನ ಸಮಾಜ ನಿರ್ಮಾಣಕ್ಕಾಗಿ ಇದು ಅವಶ್ಯ. ಶಿಸ್ತುಬದ್ಧ ಬಂಟರ ಸಮಾಜದಿಂದ ಭವಿಷ್ಯದಲ್ಲಿ ಏನನ್ನಾದರೂ ಸಾಧಿಸಬಹುದು. ಸಮಾಜದ ಏಳ್ಗೆಗಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಆಶೀರ್ವಚನ ನೀಡಿದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಹೇಳಿದರು.

ಅಪರಾಹ್ನ ನಡೆದ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಡಾ. ಭರತ್ ಶೆಟ್ಟಿ, ಬಂಟರ ಸಂಘದ ಅಭಿನಂದನೆ ನನ್ನ ಜವಾಬ್ದಾರಿ ಹೆಚ್ಚಿಸಿದೆ. ನಿಮ್ಮೆಲ್ಲರ ನೋವು-ನಲಿವುಗಳಿಗೆ ಸ್ಪಂದಿಸಬೇಕೆಂಬ ಏಕೈಕ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ. ಯಾವತ್ತಾದರೂ ನನ್ನಿಂದ ಕೆಲಸವಾಗುತ್ತಿಲ್ಲ ಎಂದಾದರೆ ಆ ದಿನವೇ ನಾನು ರಾಜಕೀಯ ಬಿಟ್ಟು ವೈದ್ಯ ವೃತ್ತಿಯಲ್ಲಿ ಮುಂದುವರಿಯುವೆ ಎಂದರು.

ಮುಂಬೈ ಹೋಟೆಲ್ ಉದ್ಯಮಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡುತ್ತ, ಬಂಟ ಸಮಾಜದಲ್ಲಿ ಹಣವಿದ್ದರು ಮತ್ತು ಏನೂ ಇಲ್ಲದರಿದ್ದಾರೆ. ನಾವೆಲ್ಲರೂ ಬಡವರ ಏಳ್ಗೆಗೆ ಶ್ರಮಿಸಬೇಕು ಮತ್ತು ಬಂಟರೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಆಗಲೇ ನಮ್ಮ ಶ್ರೀಮಂತ ಪರಂಪರೆಯ ಅನಾವರಣಗೊಳ್ಳಲಿದೆ ಎಂದು ಹೇಳಿದರು.

ಸುಬ್ಬಯ್ಯ ಶೆಟ್ಟಿ ಲಿಂಗಮಾರುಗುತ್ತು(ಸಮಾಜಸೇವೆ), ಅಶ್ವಿನ್ ನಾಯ್ಕ್ ಮಿಜಾರು(ಕ್ರೀಡೆ-ಎಫ್‍ಐಎ ಯುರೋಪಿಯನ್ ರ್ಯಾಲಿ ಚಾಂಪಿಯನ್), ರಾಜೇಂದ್ರ ಮೇಂಡ ಮೊಗರುಗುತ್ತು(ಕೃಷಿ), ವಿಜಯಲಕ್ಷ್ಮೀ ಶೆಟ್ಟಿ ಮೊಗರುಗುತ್ತು(ರಾಜಕೀಯ), ಸುರೇಂದ್ರ ಮಲ್ಲಿ ದೋಣಿಂಜೆಗುತ್ತು(ಯಕ್ಷಗಾನ), ರಕ್ಷಿತ್ ಶೆಟ್ಟಿ ಗುರುಪುರ(ಕ್ರೀಡೆ) ಮತ್ತು ಗಣೇಶ ಶೆಟ್ಟಿ ಅಡ್ಡೂರು(ಶ್ರಮಿಕ ಕ್ಷೇತ್ರ) ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಜೊತೆಗೆ ಐಕಳ ದಂಪತಿಗೆ ಮೈಸೂರು ಪೇಟ ತೊಡಗಿಸಿ ಸನ್ಮಾನಿಸಲಾಯಿತು. ಗುರುಪುರ ಬಂಟರ ಮಾತೃ ಸಂಘದ ಐದನೇ ವರ್ಷದ ಸ್ಮರಣ ಸಂಚಿಕೆ `ಪಂಚಮ’ ಬಿಡುಗಡೆಗೊಂಡಿತು.

ವೇದಿಕೆಯಲ್ಲಿ ಬಂಟ ಸಮಾಜದ ಗಣ್ಯರಾದ ಅಜಿತ್ ಕುಮಾರ್ ರೈ ಮಾಲಾಡಿ, ಸದಾನಂದ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಮಂಜುನಾಥ ಭಂಡಾರಿ ಮೂಡುಶೆಡ್ಡೆ, ಶಶಿಧರ ಹೆಗ್ಡೆ(ಮಾಜಿ ಮೇಯರ್), ಗಿರೀಶ್ ಶೆಟ್ಟಿ, ವಿಜಯಪ್ರಸಾದ್ ಆಳ್ವ, ಜಯರಾಮ ಸಾಂತ, ದೇವಿಚರಣ ಶೆಟ್ಟಿ, ರವೀಂದ್ರನಾಥ ಮಾರ್ಲ, ಉಮೇಶ್ ರೈ ಮೇಗಿನಮನೆ, ಪದ್ಮನಾಭ ಆಳ್ವ ಕೊಂಬೆಲ್, ರಾಜಗೋಪಾಲ ರೈ, ವಿನಯಕುಮಾರ್ ಶೆಟ್ಟಿ ಮೊದಲಾದವರಿದ್ದರು. ಸಂಘದ ಪದಾಧಿಕಾರಿ ಸುದರ್ಶನ ಶೆಟ್ಟಿ ಪೆರ್ಮಂಕಿ ಪ್ರಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ರಾಜೀವ ಶೆಟ್ಟಿ ಸಲ್ಲಾಜೆ, ನಯನಾ ಶೆಟ್ಟಿ ಗುರಪುರ ಹಾಗೂ ಕವಿತಾ ಪಕ್ಕಳ ಪೆರ್ಮಂಕಿಗುತ್ತು ಕಾರ್ಯಕ್ರಮ ನಿರೂಪಿಸಿದರು.

ಗುರುಪುರ ಬಂಟರ ಮಾತೃ ಸಂಘ ವಾರ್ಷಿಕೋತ್ಸವ- ಯುವಜನರು ಮಾದಕ ವ್ಯಸನಿಗಳಾಗದೆ ಸಮಾಜದ - ಮೇಲಿನ ಕಳಕಳಿ ಬೆಳೆಸಿಕೊಳ್ಳಬೇಕು : ಕೃಪಾ ಆಳ್ವ

ಮುಂಬಯಿ (ಗುರುಪುರ), ಜು.31: ದೀಪಗಳು ಹಲವಿದ್ದಾಗ ಹೆಚ್ಚು ಬೆಳಕು ಸಿಗುತ್ತದೆ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಬಲ ಬರುತ್ತದೆ. ಮಹಿಳೆಯರಿಗೆ ಗೌರವ ನೀಡುವ ಸಂಘ ಬೆಳೆಯುತ್ತದೆ. ಗುರುಪುರ ಬಂಟರ ಮಾತೃ ಸಂಘ ಅದಕ್ಕೊಂದು ನಿದರ್ಶನ. ಯುವಜನರು ಮಾದಕ ವ್ಯಸನಿಗಳಾಗದಂತೆ ಜಾಗೃತಿ ಮೂಡಿಸಿ, ಅವರು ಇಂತಹ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಭವಿಷ್ಯದಲ್ಲಿ ನಮ್ಮ ಸಂಸ್ಕøತಿಯ ಅವಿಭಾಗ್ಯ ಅಂಗವಾಗಿರುವ ಮಕ್ಕಳು ಬಂಟ ಸಂಸ್ಕøತಿ ಮುಂದುವರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವ ಅಭಿಪ್ರಾಯಪಟ್ಟರು.

ಗುರುಪುರದಲ್ಲಿ ಶ್ರೀ ವೈದ್ಯನಾಥ ಸಭಾಗೃಹದಲ್ಲಿ ಭಾನುವಾರ ಆಯೋಜಿಸಲಾದ ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದೊಮ್ಮೆ ಸಂವೃದ್ಧಿಯಿಂದ ಕೂಡಿದ್ದ ನಮ್ಮ ತುಳು ಸಂಸ್ಕøತಿ ಈಗ ಪಾಶ್ಚಾತ್ಯ ಪ್ರಭಾವದಿಂದ ಕಳೆಗುಂದುತ್ತಿದೆ. ಪಾಶ್ಚಾತ್ಯ ಅನುಕರಣೆ ಹೆಚ್ಚಾಗುತ್ತಿದ್ದು, ಇದರ ನೇರ ಪರಿಣಾಮ ತುಳು ಭಾಷೆ ಮೇಲಾಗುತ್ತಿದ್ದು, ತುಳು ಭಾಷೆ ಉಳಿಯುತ್ತದೋ ಎಂಬ ಭೀತಿ ಉಂಟಾಗಿದೆ. ತುಳು ಭಾಷೆ, ಸಂಸ್ಕøತಿ ಉಳಿಸುವುದು ನಮ್ಮ-ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಬಂಟ ಸಮಾಜದ ಮಕ್ಕಳಿಗೆ ನಮ್ಮ ಸಂಸ್ಕøತಿ ತಿಳಿದುಕೊಳ್ಳಲು ಅವಕಾಶ ಕಲ್ಪಿಸಬೇಕು. ಬಂಟರು ಗುರುಹಿರಿಯರು, ಕುಟುಂಬಿಕರ ಗೌರವಿಸುವ ಪರಂಪರೆ ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ಶ್ರೀ ದೇವಿ ಎಜ್ಯುಕೇಶನ್ ಟ್ರಸ್ಟ್ ಉಪಾಧ್ಯಕ್ಷೆ ಮೈನಾ ಶೆಟ್ಟಿ ಹೇಳಿದರು.

ನಮ್ಮಲ್ಲಿರುವ ಲೋಪದೋಷ, ತಪ್ಪು ಸರಿಪಡಿಸಿಕೊಂಡು ನಾವು ಸಶಕ್ತೀಕರಣಗೊಳ್ಳಬೇಕು. ಸಶಕ್ತೀಕರಣವೆಂದರೆ ಇನ್ನೊಬ್ಬರನ್ನು ತುಳಿದು ನಾವು ಮೇಲೆ ಹೋಗುವುದೆಂದಲ್ಲ. ಭಿನ್ನಾಭಿಪ್ರಾಯ ಸಹಜ. ಆದರೆ ಅಂತಹ ಸಂದರ್ಭದಲ್ಲೂ ಸಂಘಟನೆಯನ್ನು ಹಿಡಿದಿಟ್ಟುಕೊಂಡು ಮುನ್ನಡೆಸುವುದು ಮುಖ್ಯ. ನಾವೆಲ್ಲರೂ ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ಉತ್ತಮ ಬದುಕಿನ ಬಗ್ಗೆ ಚಿಂತಿಸಬೇಕು. ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬ ನಮ್ಮೊಳಗಿನ ದ್ವಂದ್ವ ನೀತಿಯಿಂದ ಹೊರಬರಬೇಕು ಎಂದು ಆಸರೆ ಚಾರಿಟೇಬಲ್ ಟ್ರಸ್ಟಿನ ಆಶಾಜ್ಯೋತಿ ರೈ ಹೇಳಿದರು.

ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಉದ್ಯಮಿ ಉಮೇಶ್ ಮುಂಡ, ಸಂಘದ ಅಧ್ಯಕ್ಷ ತಿಂಗುಮಾರುಗುತ್ತು ರಾಜಕುಮಾರ್ ಶೆಟ್ಟಿ, ಮಹಿಳಾ ಘಟಕದ ಕಾರ್ಯದರ್ಶಿ ರೇವತಿ ಆಳ್ವ, ಉದ್ಯಮಿ ರವಿರಾಜ್ ಶೆಟ್ಟಿ ಇದ್ದರು. ಸ್ವಾಗತಿಸಿದ ಪ್ರಶಾಂತಿ ರೈ ವಂದಿಸಿದರು. ಇದಕ್ಕಿಂತ ಮುಂಚೆ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.

-------------------------------------------

ಚರ್ಚಾಗೋಷ್ಠಿ

ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮದ ಬಳಿಕ `ಸಮಕಾಲೀನ ಸಂದರ್ಭದಲ್ಲಿ ಬಂಟರ ಅಭಿವೃದ್ಧಿಯಲ್ಲಿ ಬಂಟ ಸಂಘಟನೆಗಳ ಕೊಡುಗೆ’ ವಿಷಯದಲ್ಲಿ ಚರ್ಚಾಗೋಷ್ಠಿ ನಡೆಯಿತು. ಇದರಲ್ಲಿ ನವನೀತ ಶೆಟ್ಟಿ ಕದ್ರಿ, ಡಾ. ಸಾಯಿಗೀತಾ ಶೆಟ್ಟಿ(ವಿಭಾಗ ಮುಖ್ಯಸ್ಥೆ, ಮಾನವಿಕಾ ವಿಭಾಗ ನಿಟ್ಟೆ ವಿದ್ಯಾಲಯ, ಮಂಗಳೂರು), ತುಳು ವಿದ್ವಾಂಸ ಡಾ. ಗಣನಾಥ ಎಕ್ಕಾರು ಮತ್ತು ಸತೀಶ್ ಅಡಪ ಸಂಕಬೈಲು(ಮಂಗಳೂರು ಬಂಟರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ) ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷ ತಿರುವೈಲುಗುತ್ತು ರಾಜಕುಮಾರ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳಾದ ಪರುಷೋತ್ತಮ ಮಲ್ಲಿ, ಸುದರ್ಶನ ಶೆಟ್ಟಿ ಪೆರ್ಮಂಕಿ, ಸತ್ಯಾನಂದ ಶೆಟ್ಟಿ, ಹರೀಶ್ ಶೆಟ್ಟಿ, ಸುನೀತಾ ಶೆಟ್ಟಿ, ನಳಿನಿ ಶೆಟ್ಟಿ ಮೊದಲಾವವರು ಕಾಶರ್ಯಕ್ರಮ ಸಂಯೋಜಕರಾಗಿ ಕೆಲಸ ಮಾಡಿದರು.

---------------------------------------

ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷರಾಗಿ- ರಾಜಕುಮಾರ್ ಶೆಟ್ಟಿ ಆಯ್ಕೆ

ಇದೇ ವೇಳೆ  2018-2020ನೇ ಸಾಲಿಗೆ ಸಂಘದ ಅಧ್ಯಕ್ಷರಾಗಿ ರಾಜಕುಮಾರ್ ಶೇಟ್ಟಿ ತಿರುವೈಲುಗುತ್ತು ಪುನರಾಯ್ಕೆಯಾದರು. ಪದಾಧಿಕಾರಿಗಳಾಗಿ ಸಂತೋಷ ಶೆಟ್ಟಿ ಶೆಡ್ಡೆ ಹೊಸಲಕ್ಕೆ(ಉಪಾಧ್ಯಕ್ಷ), ಜಯರಾಮ ರೈ, ಉಳಾಯಿಬೆಟ್ಟು(ಕಾರ್ಯದರ್ಶಿ), ಕೃಷ್ಣಕಾಂತ ಶೇಣವ ನಾರಳಗುತ್ತು(ಜೊ.ಕಾ), ಸತ್ಯಾನಂದ ಶೆಟ್ಟಿ ಗುರುಪುರ(ಕೋಶಾಧಿಕಾರಿ), ಹರೀಶ ಶೆಟ್ಟಿ ಉಪ್ಪುಗೂಡು(ಸಂಘಟನಾ ಕಾರ್ಯದರ್ಶಿ), ಉಮಾಶಂಕರ್ ಸುಲಯ ಮಟ್ಟಿ ಮಳಲಿ(ಸಂಘಟನಾ ಕಾರ್ಯದರ್ಶಿ ಹಾಗೂ ಸುನಿತಾ ಶೆಟ್ಟಿ(ಅಧ್ಯಕ್ಷೆ, ಮಹಿಳಾ ಘಟಕ), ಉದಯ ಕುಮಾರ್ ಶೆಟ್ಟಿ ಬೆಳ್ಳೂರುಗುತ್ತು(ಅಧ್ಯಕ್ಷ, ಯುವ ವಿಭಾಗ) ಆಯ್ಕೆಯಾದರು.

ಯೋಜನೆಯ ಸಿಬ್ಬಂದಿಗಳ “ಆಟಿ ಕೂಟ ಕಾರ್ಯಕ್ರಮ”

ದಿನಾಂಕ.28.07.2018 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳ ಆಟಿಕೂಟ ಕಾರ್ಯಕ್ರಮವನ್ನು ಮಹೋತ್ಸವ ಸಭಾಭವನದಲ್ಲಿ ನಡೆಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಯೋಜನೆಯ ಅಧ್ಯಕ್ಷರಾದ ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಸಿಬ್ಬಂದಿಗಳು ತಮ್ಮ ಕರ್ತವ್ಯ ನಿರ್ವಹಣೆಯ ಜೊತೆಗೆ ಇತರೆ ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳುವಂತೆ ತಿಳಿಸಿದರು. ಕೆಲಸದ ಜೊತೆಗೆ ಮನರಂಜನೆಯು ಇದ್ದಾಗ ಜೀವನ ಪರಿಪೂರ್ಣವಾಗುವುದೆಂದು ತಿಳಿಸಿದರು.

ಸಿಬ್ಬಂದಿಗಳಿಗೆ ಆಟೋಟ ಸ್ಪರ್ಧೆಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳ ಪ್ರದರ್ಶನ, ವೈವಿಧ್ಯಮಯ ಸೊಪ್ಪುಗಳ ಪ್ರದರ್ಶನ, ತುಳುನಾಡಿನ ಸಾಂಪ್ರದಾಯವನ್ನು ಪ್ರತಿಬಿಂಬಿಸುವ ಪ್ರಾಚೀನ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಶ್ರೀಮತಿ ಹೇಮಾವತಿ ವೀ ಹೆಗ್ಗಡೆ ಹಾಗೂ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್‍ರವರು ತಿಂಡಿ ತಿನಿಸುಗಳ ಪ್ರದರ್ಶನ, ಪ್ರಾಚೀನ ವಸ್ತುಗಳ ಪ್ರದರ್ಶನವನ್ನು ವೀಕ್ಷಿಸಿ ಸಿಬ್ಬಂದಿಗಳನ್ನು ಹಾರೈಸಿದರು.

ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್.ಮಂಜುನಾಥ್‍ರವರು ಮಾತನಾಡುತ್ತಾ ಆಟಿಯ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು ಹಾಗೂ ಬಾಲ್ಯದ ದಿನಗಳ ಆಟೋಟಗಳನ್ನು ನೆನಪು ಮಾಡಿಕೊಂಡು ಇವುಗಳನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಹೋಗುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಯೋಜನೆಯ ಕೇಂದ್ರಕಚೇರಿಯ ಎಲ್ಲಾ ಪ್ರಾದೇಶಿಕ ನಿರ್ದೇಶಕರು, ನಿರ್ದೇಶಕರು, ಎಲ್ಲಾ ಸಿಬ್ಬಂದಿಗಳು, ಶ್ರೀಕ್ಷೇತ್ರದ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | UdupiFinal Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, KemmannuVespers 2024 | St. Theresa’s Church, Kemmannu
Annual Church Feast 2024 | St. Theresa’s Church, KemmannuAnnual Church Feast 2024 | St. Theresa’s Church, Kemmannu
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | UdupiCHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From KemmannuAnnual Day 2023 | Carmel English School, Live From Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, UdupiEaster 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, UdupiFocus Studio, Near Hotel Kidiyoor, Udupi