Brief Mumbai - Mangalore news with pictures


Rons Bantwal
Kemmannu News Network, 09-08-2018 11:23:58


Write Comment     |     E-Mail To a Friend     |     Facebook     |     Twitter     |     Print


Mumbai, Aug.07: Good Detection by CISF personnel on 06/08/18 It is intimated that around 1310 hrs a pax namely Mr. Asharaf Sarvadaka PP No G 0674951, Indian, arrived from Riyadh to Mumbai by Jet Airways flight no 9w 05190 and was supposed to further to fly to Mangalore by flight no 9W 0447 came to frisking booth no 11 dom SHA of T2. During frisking by ASI/E Manoj Kumar, the pax was detected with 02 nos of gold biscuit weighing around 232 gms (116×2) which he had concealed in an innovative manner in a specially created hollowed space in the trousers in the belt buckle area . The said pax was detained and handed over to AIU/Customs for further action along with the seized 02 nos of gold biscuit, passport and boarding pass. The app. value of the seized gold is Rs 6.33 lakh. This is an excellent detection by the frisker who had correctly referred the DFMD when the pax had crossed it.

Mumbai,Aug.07: Mumbai Press Club and Bombay News Photographers Association (BNPA) hold a protest meeting outside the Mumbai Press Club at 6.00 pm today, August 07, 2018 to draw attention to the brutality meted out to two eminent photo Journalists - Dhaka based Shahidul Alam and DNA’s Pravin Indrekar.

ಭಿಕ್ಷುಕರ ಕಾಟ ನಿವಾರಣೆ ಮಾಡುವಂತೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು: ನಗರದಲ್ಲಿ ಬೆಳದಿರುವ ಭಿಕ್ಷುಕರ ಸಮಸ್ಯೆಗಳಿಂದ ಜನರಿಗೆ ತೊಂದರೆಯಾಗುತ್ತಿದ್ದು, ಆದ್ದರಿಂದ ಭಿಕ್ಷುಕರ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಖಿಲ ಭಾರತ ಬ್ಯಾರಿ ಪರಿಷತ್ ಅಪರ ಜಿಲ್ಲಾಧಿಕಾರಿ ಕುಮಾರ್‍ಗೆ ಮನವಿ ಅರ್ಪಿಸಿತು. ಈ ಸಂದರ್ಭ ಅಖಲ ಭಾರತ ಬ್ಯಾರಿ ಪರಿಷತ್‍ನ ಅಧ್ಯಕ್ಷ ಜೆ. ಹುಸೇನ್, ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್, ಬಶೀರ್ ಮೊಂಟೆಪದವು, ಸಿದ್ದೀಕ್ ಫರಂಗಿಪೇಟೆ, ಅಬೂಬಕರ್ ಕಾಲಾಡಿ, ಹಸನಬ್ಬ ಫರಂಗಿಪೇಟೆ, ಮಹಮ್ಮದ್ ಜಸೀರ್ ಮೊದಲಾದವು ಉಪಸ್ಥಿತರಿದ್ದರು.


 ಎಡನೀರು ಮಠಾಧೀಶ ಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುರ್ಮಾಸ್ಯ  ಪ್ರಸಿದ್ದ ಕಲಾವಿದರ ಕೂಡುವಿಕೆಯೊಂದಿಗೆ ಶರಸೇತು ಬಂಧನ ಯಕ್ಷಗಾನ ತಾಳಮದ್ದಳೆ 

ಮುಂಬಯಿ (ಬದಿಯಡ್ಕ), ಆ.08:  ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಪಾದಂಗಳ 58ನೇ ಚಾತುರ್ಮಾಸ್ಯದ ಆರನೇ ದಿನವಾದ ಕಳೆದ ಮಂಗಳವಾರ ಶ್ರೀಮಠದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಶ್ರದ್ದಾ ಭಕ್ತಿಯಿಂದ ನೆರವೇರಿದವು.

 ಯಕ್ಷಗಾನ ಕ್ಷೇತ್ರದಲ್ಲಿ ಸ್ವತಃ ಭಾಗವತರಾದ ಶ್ರೀಕೇಶವಾನಂದ ಭಾರತೀ ಪಾದಂಗಳು ಸಾಂಸ್ಕøತಿಕತೆಯ ಮೂಲಕ ಮಧುರ ಸಮಾಜ ನಿರ್ಮಾಣದಲ್ಲಿ ತಮ್ಮದೇ ಕೊಡುಗೆಗಳನ್ನು, ಅಸಂಖ್ಯ ಶಿಷ್ಯರನ್ನು ಹೊಂದಿದ್ದು, ಶ್ರೀ ಎಡನೀರು ಮಠದಲ್ಲಿ ಮಂಗಳವಾರ ಸಂಜೆ ಪ್ರಸಿದ್ದ ಕಲಾವಿದರ ಕೂಡುವಿಕೆಯೊಂದಿಗೆ ಶರಸೇತು ಬಂಧನ ಯಕ್ಷಗಾನ ತಾಳಮದ್ದಳೆ ಜನಮನ ಸೆಳೆಯಿತು.

 ಹಿಮ್ಮೇಳದಲ್ಲಿ ಪದ್ಯಾಣ ಗಣಪತಿ ಭಟ್, ದಿನೇಶ್ ಅಮ್ಮಣ್ಣಾಯ, ಪದ್ಯಾಣ ಶಂಕರನಾರಾಯಣ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಕೃಷ್ಣಪ್ರಕಾಶ ಉಳಿಯತ್ತಾಯ, ಲವಕುಮಾರ ಐಲ ಹಾಗೂ ಮುಮ್ಮೇಳದಲ್ಲಿ ಡಾ| ರಮಾನಂದ ಬನಾರಿ (ವೃದ್ದ ಬ್ರಾಹ್ಮಣ), ವಿದ್ವಾನ್ ಉಮಾಕಾಂತ ಭಟ್ ಮೇಲುಕೋಟೆ (ಹನೂಮಂತ), ಉಜಿರೆ ಅಶೋಕ ಭಟ್ (ಅರ್ಜುನ) ಭಾಗವಹಿಸಿದರು.

 ಒಂದೇ ವೇದಿಕೆಯಲ್ಲಿ ತೆಂಕುತಿಟ್ಟಿನ ಹಿರಿಯ ಈರ್ವರು ಭಾಗವತರು ದ್ವಂದ್ವ ಭಾಗವತಿಕೆ ನಡೆಸಿದ್ದು ಹೊಸ ದಾಖಲೆಯಾಗಿ ಈ ಸಂದರ್ಭವ ಗುರುತಿಸಲ್ಪಟ್ಟಿತು.  
 ಬುಧವಾರ ಸಂಜೆ ಮೇಲುಕೋಟೆ ಸಂಸ್ಕøತ ವಿದ್ಯಾಲಯದ ಪ್ರಾಂಶುಪಾಲ ವಿದ್ವಾನ್ ಉಮಾಕಾಂತ ಭಟ್ ಅವರಿಂದ ಜ್ಞಾನಮೂರ್ತಿ ದಕ್ಷಿಣಾಮೂರ್ತಿ ಎಂಬ ವಿಷಯದಲ್ಲಿ ವಿಶೇಷೋಪನ್ಯಾಸ ನಡೆಯಿತು. ಗುರುವಾರ ಸಂಜೆ ಕಾಸರಗೋಡಿನ ಉಷಾ ಈಶ್ವರ ಭಟ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

All India Radio 3RD DAY STRIKE NEWS

ಆಕಾಶವಾಣಿ-ದೂರದರ್ಶನ ಜಂಟಿ ಕ್ರಿಯಾ ಸಮಿತಿಯ ಕರೆಯ ಪ್ರತಿಭಟನೆ - ಅಡ್‍ಹಾಕ್ ಸೇವಾವಧಿ ಸೇವಾ ಜೇಷ್ಠತೆಗೆ ಪರಿಗಣಿಸುವಂತೆ ಆಗ್ರಹ

ಮುಂಬಯಿ (ಮಂಗಳೂರು), ಆ.08: ಕಾರ್ಯಕ್ರಮ ಸಿಬ್ಬಂದಿಗಳ ಬಡ್ತಿ, ಕಾರ್ಯಕ್ರಮಕ್ಕೆ ಅನುದಾನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಕಾಶವಾಣಿ-ದೂರದರ್ಶನ ಜಂಟಿ ಕ್ರಿಯಾ ಸಮಿತಿಯ ಕರೆಯ ಮೇರೆಗೆ ದೇಶಾದ್ಯಂತ ನಡೆಸುತ್ತಿರುವ ಪ್ರತಿಭಟನೆಯ ಅಂಗವಾಗಿ ಮಂಗಳೂರು ಅಕಾಶವಾಣಿಯ ಮುಂಭಾಗದಲ್ಲಿ ಕಾರ್ಯಕ್ರಮ ಸಿಬ್ಬಂದಿಗಳ ಧರಣಿ ಮುಂದುವರಿದಿದೆ.

ಸಿಬ್ಬಂದಿ ಸಂಘದ ಕಾರ್ಯದರ್ಶಿ ಟಿ.ಶ್ಯಾಮ್ ಪ್ರಸಾದ್ ನೇತೃತ್ವದಲ್ಲಿ ಉಷಾಲತಾ ಸರಪಾಡಿ, ಸದಾನಂದ ಹೊಳ್ಳ, ಸೂರ್ಯನಾರಾಯಣ ಭಟ್, ಡಾ| ಸದಾನಂದ ಪೆರ್ಲ, ಶುಭದಾ ಡಿ.ರೈ, ದೇವು ಹನೇಹಳ್ಳಿ ಮತ್ತು ಡಾ| ಶರಭೇಂದ್ರ ಸ್ವಾಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

25-30 ವರ್ಷಗಳಿಂದ ಒಂದೂ ಪದೋನ್ನತಿಯನ್ನು ಪಡೆಯದೇ ಇರುವ ಸಿಬ್ಬಂದಿಗೆ ಸಿಗಬೇಕಾದ ಪದೋನ್ನತಿಯನ್ನು ಪೂರ್ವಾನ್ವಯವಾಗುವಂತೆ ಶೀಘ್ರವಾಗಿ ನೀಡುವರೇ ಬೇಡಿಕೆ ಇರಿಸಲಾಗಿದೆ.  ಅಡ್‍ಹಾಕ್ ಹಾಗೂ ಇನ್-ಸಿಟು ಸೇವಾವಧಿಯ ಸೇವಾಜೇಷ್ಠತೆ ಪರಿಗಣಿಸಿ, 20 ವರ್ಷಗಳ ಸೇವೆ ಸಲ್ಲಿಸಿದ ಪ್ರಸಾರ ನಿರ್ವಾಹಕರಿಗೆ 2 ಪದೊನ್ನತಿ ನೀಡಿ ಸಹಾಯಕ ನಿರ್ದೇಶಕರನ್ನಾಗಿ ಮಾಡಬೇಕು.
ಅಡ್‍ಹಾಕ್ ಸೇವಾವಧಿಯನ್ನು ಸೇವಾ ಜೇಷ್ಠತೆಗೆ ಪರಿಗಣಿಸಿ, 20 ವರ್ಷಗಳ ಸೇವೆ ಸಲ್ಲಿಸಿದ ಕಾರ್ಯಕ್ರಮ ನಿರ್ವಾಹಕರಿಗೆ 2 ಪದೋನ್ನತಿ ನೀಡಿ ನಿರ್ದೇಶಕರನ್ನಾಗಿ ಮಾಡಬೇಕು.
ನಾಲ್ಕು ವರ್ಷಗಳ ನಿಯಮಿತ ಸೇವೆ ಸಲ್ಲಿಸಿದ ಎಲ್ಲಾ ಕಾರ್ಯಕ್ರಮ ನಿರ್ವಾಹಕರಿಗೂ ವೇತನ ಭಡ್ತಿ ನೀಡಬೇಕು.
ಬೇರೆ ಬೇರೆ ಇಲಾಖೆಗಳಿಂದ ಅನರ್ಹ ಉನ್ನತ ಅಧಿಕಾರಗಳನ್ನು ಎರವಲು ಸೇವೆಯ ಮೇಲೆ ನಿಯೋಜಿಸಿರುವುದನ್ನು ತತ್‍ಕ್ಷಣ ಹಿಂದಕ್ಕೆ ಕರೆಸಿಕೊಳ್ಳಬೇಕು.
ಭಾರತೀಯ ಕಾರ್ಯಕ್ರಮ ಸೇವೆಗೆ ನಿಗದಿಗೊಳಿಸಿರುವ ಉನ್ನತ ಹುದ್ದೆಗಳಿಗೆ ತಾಂತ್ರಿಕ ಸೇವೆಯವರನ್ನು ನೇಮಿಸಬಾರದು. ಪ್ರಸಾರಭಾರತಿಯಲ್ಲಿ ಖಾಲಿ ಇರುವ ಎಲ್ಲಾ ಕಾರ್ಯಕ್ರಮ ಹುದ್ದೆಗಳನ್ನು ಅರ್ಹ ಕಾರ್ಯಕ್ರಮ ಸಿಬ್ಬಂದಿಗೆ ಒಂದು ಬಾರಿ ನಿಯಮ ಸಡಿಲಿಕೆ ಮಾಡಿ ಪದೋನ್ನತಿಯೊಂದಿಗೆ ಭರ್ತಿ ಮಾಡಬೇಕು.

ಭಾರತೀಯ ಪ್ರಸಾರ ಸೇವೆಯ 810 ಉನ್ನತ ಹುದ್ದೆಗಳಿದ್ದು ಖಾಯಂ ಆಗಿ 8 ಹಾಗೂ ಪ್ರಭಾರಿಯಾಗಿ 260 ಮಾತ್ರ ಹಾಲಿ ಕೆಲಸದಲ್ಲಿದ್ದಾರೆ. ಉಳಿದ ಹುದ್ದೆಗಳಿಗೆ ಬೇರೆ ಇಲಾಖೆಯಿಂದ ಎರವಲು ಸೇವೆಯ ಮೇರೆಗೆ ತಂದು ತುಂಬುವ ಕೆಲಸ ಪ್ರಸಾರ ಭಾರತಿ ಮಾಡುತ್ತಿದೆ. ನಿಗದಿತ ಸಮಯದಲ್ಲಿ ಎಲ್ಲಾ ಹುದ್ದೆಗಳನ್ನು ತುಂಬದೆ, ಇರುವವರಿಗೆ ಇಲಾಖಾ ಬಡ್ತಿ ಪ್ರಕ್ರಿಯೆ ಮಾಡದೆ ಆಕಾಶವಾಣಿ ದೂರದರ್ಶನ ಸಮಸ್ಯೆ ಎದುರುಸುತ್ತಿದೆ.

ಮಾಧ್ಯಮ ಪೈಪೆÇೀಟಿಯ ಸಂದರ್ಭದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಇದ್ದ ಸಿಬ್ಬಂದಿಗಳಿಗೆ ನ್ಯಾಯಯುತ ಭಡ್ತಿ ನೀಡದೆ ಕಾರ್ಯಕ್ರಮ ಗುಣಮಟ್ಟ ಸೊರಗುವಂತೆ ಮಾಡಿದ ಆಡಳಿತ ವೈಖರಿ ಖಂಡನೀಯ. ಪ್ರಸಾರ ಭಾರತೀಯ ಒಟ್ಟು ಬಜೆಟ್‍ನ ಶೇ.15 ರಷ್ಟು ಮಾತ್ರ ಕಾರ್ಯಕ್ರಮಕ್ಕಾಗಿ ವೆಚ್ಚ ಮಾಡಲಾಗುತ್ತಿದ್ದು ಅನುದಾನ ಹೆಚ್ಚಿಸುವಂತೆ  ಒತ್ತಾಯಿಸಲಾಗಿದೆ.

ಅಲ್ ಮದೀನ ಸಿಲ್ವರ್ ಜುಬಿಲಿ: ಸಂಘಟನಾ ಸಮಿತಿ ಅಸ್ತಿತ್ವಕ್ಕೆ

ನರಿಂಗಾನ: 2019 ಫೆಬ್ರವರಿ 1 ರಿಂದ 3 ರ ತನಕ ನಡೆಯಲಿರುವ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ರಜತ ಮಹೋತ್ಸವದ ಸಿದ್ದತೆ, ಪ್ರಚಾರ ಹಾಗೂ ಯೊಜನಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಸಮ್ಮೇಳನ ಸಂಘಟನಾ ಸಮಿತಿ ರಚನಾ ಸಭೆಯು ಅಲ್ ಮದೀನ ಕ್ಯಾಂಪಸಿನ ಮಸ್ಜಿದ್ ನಲ್ಲಿ ಬಹಳ ವಿಜೃಂಭಣೆಯಿಂದ ನಿನ್ನೆ ಜರುಗಿತು. ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಯ್ಯಿದ್ ಇಸ್ಮಾಯಿಲ್ ಅಲ್ ಹಾದೀ ತಂಙಳ್ ಉಜಿರೆ ದುಆ ಮೂಲಕ ಚಾಲನೆಗೈದರು. ದ.ಕ.ಉಸ್ತುವಾರಿ ಸಚಿವ ಜನಾಬ್ ಯು.ಟಿ.ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಬೆಳ್ಳಿಹಬ್ಬದ ಸೇವಾ ಯೋಜನೆಗಳಾದ 25 ಜೋಡಿ ಸಾಮೂಹಿಕ ವಿವಾಹ, 25 ಬಾವಿ ನಿರ್ಮಾಣ ಸಹಿತ 25 ಸೇವಾ ಯೋಜನೆಗಳನ್ನು ವಿವರಿಸಿದರು.

ಅಲ್ ಮದೀನ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು. ಬಿ.ಎಸ್.ಅಬ್ದುಲ್ಲ ಕುಂಞÂ ಫೈಝಿ, ಮುಹಮ್ಮದಲಿ ಸಖಾಫಿ ಸುರಿಬೈಲ್, ಎಸ್.ಪಿ. ಹಂಝ ಸಖಾಫಿ, ಸುಲೈಮಾನ್ ಕರಿವಳ್ಳೂರು ಶುಭ ಹಾರೈಸಿದರು. ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಇವರ ನೇತೃತ್ವದ, ಸಾದಾತುಗಳು, ವಿದ್ವಾಂಸರನ್ನೊಳಗೊಂಡ ಸಿಲ್ವರ್ ಜುಬಿಲಿ ನಿರ್ದೇಶಕ ಮಂಡಳಿಯನ್ನು ರಚಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಹಾಜಿ ಮುಮ್ತಝಲಿ ಕೃóಷ್ಣಾಪುರ, ಕನ್ವೀನರ್ ಆಗಿ ಎಂಎಸ್‍ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಫೈನಾನ್ಸ್ ಸೆಕ್ರೆಟರಿಯಾಗಿ ಅಬ್ದುರ್ರಹ್ಮಾನ್ ಕಣಚೂರು ಹಾಗೂ ವರ್ಕಿಂಗ್ ಕನ್ವೀನರ್ ಆಗಿ ಉಮರ್ ಸಖಾಫಿ ಕೊಡಗು ಇವರನ್ನು ಆರಿಸಲಾಯಿತು. ಉಳಿದಂತೆ; ಸಾಮೂಹಿಕ ವಿವಾಹ ಸಮಿತಿ, ಪ್ರಚಾರ ಸಮಿತಿ, ಫೈನಾನ್ಸ್ ಸಹಿತ ವಿವಿಧ ಸಮಿತಿಗಳನ್ನು ರಚಿಸಲಾಯಿತು.

ಮುಖ್ಯ ಅತಿಥಿಗಳಾಗಿ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಶರೀಫ್ ಸಖಾಫಿ ದಾರುಲ್ ಇರ್ಶಾದ್, ಇಸ್ಮಾಯಿಲ್ ಮೀನಂಕೋಢಿ, ಎಸ್.ಕೆ.ಖಾದರ್ ಹಾಜಿ, ಹಾಜಿ ಎನ್.ಎಸ್.ಕರೀಂ, ಹಾಜಿ ಅಬ್ದುಲ್ಲ ಮೋರ್ಲ, ಹಾಜಿ ಅಲಿಕುಂಞÂ ಪಾರೆ, ಯೂಸುಫ್ ಹಾಜಿ ಕೊಣಾಜೆ, ಎಂ.ಪಿ.ಅಶ್ರಫ್ ಸಅದಿ ಮಲ್ಲೂರು, ಮೂಸ ಸಖಾಫಿ ಕಳತ್ತೂರು, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಉಸ್ಮಾನ್ ಸಅದಿ ಪಟ್ಟೋರಿ, ಅಬ್ದುರ್ರಹ್ಮಾನ್ ಮೊಗರ್ಪಣೆ, ಸಿದ್ದೀಖ್ ಸಖಾಫಿ ಮೂಳೂರು, ಏಶಿಯನ್ ಬಾವ ಹಾಜಿ, ಶೌಕತ್ ಹಾಜಿ, ಇಬ್ರಾಹೀಂ ಬಾವ ಹಾಜಿ ಪಡಿಕ್ಕಲ್, ಫಾರೂಖ್ ಹಾಜಿ ಮಲಾಝ್, ಮೊಯ್ದಿನ್ ಹಾಜಿ ಮಲಾಝ್,  ಯು.ಎಸ್.ಅಬೂಬಕರ್ ಹಾಜಿ, ಮೊಯ್ದಿನ್ ಕುಟ್ಟಿ ಹಾಜಿ ಕೊಳಕೇರಿ, ಅಬೂಬಕರ್ ಕಡಂಬು, ಕೆ.ಎಂ.ಕೆ. ಮಂಜನಾಡಿ, ಮುಹಮ್ಮದ್ ಹಾಜಿ ಬಾಳೆಪುಣಿ, ಮಹ್ಮೂದ್ ಹಾಜಿ ಕಂಡಿಕ, ಬಶೀರ್ ಹಾಜಿ ಮುಡಿಪು, ಉಮರ್ ಸಖಾಫಿ ಮಿತ್ತೂರು ಮಸ್ಕತ್, ಡಿ.ಪಿ. ಯೂಸುಫ್ ಸಖಾಫಿ ಬೈತಾರ್, , ಇಕ್ಬಾಲ್ ಮದನಿ ತಾಯಿಫ್, ಅಬ್ದುಲ್ ಹಮೀದ್ ಜಿದ್ದ, ಶರೀಫ್ ಸಅದಿ ಮೂಡಬಿದ್ರೆ, ಮನ್ಸೂರ್ ಹಿಮಮಿ, ಬಶೀರ್ ಕಲ್ಕಟ್ಟ, ಆರಿಫ್ ಕಲ್ಕಟ್ಟ, ಅಬ್ದುರ್ರಹ್ಮಾನ್ ಲತೀಫಿ ಮುಂತಾದವರು ಉಪಸ್ಥಿತರಿದ್ದರು. 

 ಆ.12: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಾಂದಿವಲಿ ಸ್ಥಳೀಯ ಕಚೇರಿಯಲ್ಲಿ  ಆಟಿಡೊಂಜಿ ಕೂಟ ಹಾಗೂ ವಿದ್ಯಾಥಿರ್üಳಿಗೆ ಆಥಿರ್üಕ ಸಹಾಯ ವಿತರಣೆ ಕಾರ್ಯಕ್ರಮ ಮುಂಬಯಿ, ಆ.08: ತುಳು ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ಬಿಲ್ಲವರ ಅಸೋಸಿಯೇಶನ್, ಮುಂಬಯಿ ಆಥಿರ್üಕ, ಶೈಕ್ಷಣಿಕ, ಸಾಂಸ್ಕøತಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷವಾದ ಸೇವೆಯನ್ನು ನೀಡಿ ಕಳೆದ 86 ವರ್ಷಗಳಿಂದ ಮಹಾನಗರದಲ್ಲಿ ಆದರ್ಶ ಸಂಸ್ಥೆಯಾಗಿ ಬೆಳೆದು ನಿಂತಿದೆ. ಅಲ್ಲಲ್ಲಿ ಸಮನ್ವಯ ಸಮಿತಿ, ಸ್ಥಳೀಯ ಕಚೇರಿ ಸ್ಥಾಪಿಸಿ, ತನ್ಮೂಲಕ ಆ ಪರಿಸರದ ಜನರಿಗೆ ಅಸೋಸಿಯೇಶನ್‍ನ ಸವಲತ್ತುಗಳನ್ನು ಮನೆಮನೆಗೆ ತಲುಪಿಸುವಲ್ಲಿ ಸಫಲತೆ ಕಂಡಿದೆ.

ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಕಾಂದಿವಲಿ ಸ್ಥಳೀಯ ಕಚೇರಿಯ  ವತಿಯಿಂದ ಇದೇ ಆಗಸ್ಟ್.12ರ ಭಾನುವಾರ ಸಂಜೆ 5.00 ಗಂಟೆಗೆ ಸರಿಯಾಗಿ ವಿದ್ಯಾಥಿರ್üಗಳಿಗೆ ಆಥಿರ್üಕ ಸಹಾಯ ವಿತರಣೆ ಹಾಗೂ ತುಳು ನಾಡಿನ ವೈವಿಧ್ಯ ಖಾದ್ಯಗಳನ್ನೊಳಗೊಂಡ ವಿಶಿಷ್ಠ ಕಾರ್ಯಕ್ರಮ ಆಟಿಡೊಂಜಿ ಕೂಟವನ್ನು ಕಾಂದಿವಲಿ (ಪಶ್ಚಿಮ), ಮಹಾವೀರ್ ನಗರದಲ್ಲಿರುವ ಪಿ.ಜೆ ಪಾಂಚೋಲಿಯ ಹೈಸ್ಕೂಲ್‍ನಲ್ಲಿ ಆಯೋಜಿಸಿದೆ.

ಈ ಕಾರ್ಯಕ್ರಮಕ್ಕೆ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ, ಗೌ| ಪ್ರ| ಕಾರ್ಯದರ್ಶಿ ಧನಂಜಯ್ ಶಾಂತಿ, ಕಾಂದಿವಲಿ ಸ್ಥಳೀಯ ಕಚೇರಿ ಕಾರ್ಯಾಧ್ಯಕ್ಷ ಯೋಗೇಶ್ ಕೆ.ಹೆಜ್ಮಾಡಿ, ಗೌ| ಕಾರ್ಯದರ್ಶಿ ಉಮೇಶ್ ಸುರತ್ಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Welcome to Thonse Naturecure Hospital
View More

@ Rosario Grounds, Mangalore@ Rosario Grounds, Mangalore
Photo Album:

Ronald Andrade (67), laid to Rest.
Comments:

Obituary: Ronald Andrade (67), Kambla Thota, Kemmannu
Rozarich Gaanch September- 2018Rozarich Gaanch September- 2018
Flat For Sale in BrahmavarFlat For Sale in Brahmavar
Milarchi-Lara-September-2018Milarchi-Lara-September-2018
Welcome to Thonse Naturecure HospitalWelcome to Thonse Naturecure Hospital
Santhosh Villa short film by youth of Udupi Parish and ICYM.Santhosh Villa short film by youth of Udupi Parish and ICYM.
Crossland College, Year book 2017-18Crossland College, Year book 2017-18
Watch Eye to Eye by Avila D’souzaWatch Eye to Eye by Avila D’souza
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India