Brief Mumbai - Mangalore news with pictures


Rons Bantwal
Kemmannu News Network, 11-08-2018 09:55:30


Write Comment     |     E-Mail To a Friend     |     Facebook     |     Twitter     |     Print


Mumbai,Aug.10: Mr. Deepak Kesarkar, Mr. Nimish Pandya, Mr. Shiamak Davar, Vidya Balan, Mr. Konrad Mizzi, Mr. Engelbert Grech, Mr. Vijay Krishna Acharya at the Malta India Film Festival announcement in Mumbai.

ರಾಮರಾಜ ಕ್ಷತ್ರೀಯ ಸಂಘ ಮುಂಬಯಿ ಸಂಸ್ಥೆಯಿಂದ ಸಾಧಕರಿಗೆ ಸನ್ಮಾನ - ಮಾತೃಸಮಾಜದ ಸನ್ಮಾನ ಸರ್ವಶ್ರೇಷ್ಠವಾದದು : ದೇವರಾಯ ಶೇರುಗಾರ್

ಮುಂಬಯಿ, ಅ.10: ರಾಮರಾಜ ಕ್ಷತ್ರೀಯ ಸಂಘ ಮುಂಬಯಿ (ರಿ.) ಕಳೆದ ಆದಿತ್ಯವಾರ ಆಗಸ್ಟ್ 05 ರಂದು ಅಂಧೇರಿ ಪೂರ್ವದ ಸಾಕಿನಾಕ ಅಲ್ಲಿನ ಕೆಪರ್ಸ್ ಸಭಾಗೃಹದಲ್ಲಿ ಸನ್ಮಾನ ಸಮಾರಂಭವು ಆಯೋಜಿಸಿತ್ತು. ಸಂಘದ ಅಧ್ಯಕ್ಷ ಬಿ.ಗಣಪತಿ ಶೇರೆಗಾರ್ ಅಧ್ಯಕ್ಷತೆಯಲ್ಲಿ ನೇರವೇರಿದ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ದೇವರಾಯ ಎಂ.ಶೇರುಗಾರ್, ಸಂಘದ ಗೌರವಾಧ್ಯಕ್ಷ ಮಲ್ಲಯ್ಯ ಆರ್.ಶೇರೆಗಾರ್, ಬಿ.ವಿ ಶೇರೆಗಾರ್, ಉಪಾಧ್ಯಕ್ಷ ಶಂಕರ ಮದ್ದೋಡಿ, ಕೋಶಾಧಿಕಾರಿ ಪ್ರಕಾಶ್ ಎಂ.ಶೇರೆಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕುಂಭಾಶಿಯಲ್ಲಿ ನೂತನ ನಿರ್ಮಿಸಿದ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ರಚಿಸಿ ಲೋಕಾರ್ಪಣೆ ಮಾಡಿದ ಸಮಾಜ ಸೇವಕ, ಧಾರ್ಮಿಕ ಮುಂದಾಳು ದೇವರಾಯ ಎಂ.ಶೇರುಗಾರ್ ಮತ್ತು ಅನಿತಾ ದೇವರಾಯ ದಂಪತಿ ಹಾಗೂ ಪರಿವಾರದ ವೃಷಭ ಡಿ.ಶೇರುಗಾರ್, ಮಿಥುನ್ ಡಿ.ಶೇರುಗಾರ್ ಅವರನ್ನು ಅಧ್ಯಕ್ಷ ಗಣಪತಿ ಶೇರೆಗಾರ್ ಶಾಲು ಹೊದಿಸಿ ಪೇಟಾ ತೊಡಿಸಿ ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಿದರು.

ದೇವರಾಯ ಶೇರುಗಾರ್ ಸನ್ಮಾನಕ್ಕೆ ಉತ್ತರಿಸಿ ತನ್ನದೇ ಸಮಾಜದವರಿಂದ ಸನ್ಮಾನ ದೊರಕುವುದು ಅತೀವ ಸಂತೋಷ ತಂದಿದೆ. ನನ್ನ ಎಲ್ಲಾ ಕೆಲಸ ಕಾರ್ಯಗಳಲ್ಲಿ ತಂದೆ ತಾಯಿ ಆಶೀರ್ವಾದ, ಪತ್ನಿ ಮತ್ತು ಮಕ್ಕಳಿಂದ ಸಿಕ್ಕಿದ ಬೆಂಬಲವೇ ಕಾರಣ. ನನ್ನನ್ನು ಈ ವೇದಿಕೆಯಲ್ಲಿ ಸನ್ಮಾನಿಸಿದ ತಮಗೆಲ್ಲರಿಗೂ ಅಭಾರಿಯಾಗಿರುವೆ ಎಂದರು.

ಸಮಾರಂಭದಲ್ಲಿ ಪ್ರಭಾಕರ ನಾಯ್ಕ, ವಿಪುಲ ನಾಯ್ಕ, ಕೆ.ವಿ ಹೆಗಡೆ, ನಾರಾಯಣ ಕೋಡಿ, ಸುಬ್ರಾಯ ಶೇರುಗಾರ ಉಪಸ್ಥಿತರಿದ್ದು ಶುಭಕೋರಿದರು. ಸಂಘದ ಕಾರ್ಯದರ್ಶಿ ದಯಾನಂದ ಬಿ.ಸನ್ಮಾನಿತರನ್ನು ಪರಿಚರಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ ರಸಮಂಜರಿ ಕಾರ್ಯಕ್ರಮ ನೇರವೇರಿಸಲ್ಪಟ್ಟಿತು.

ಬಂಟ್ಸ್ ಸೆಂಟರ್‍ನಲ್ಲಿ ಪೀಪಲ್’ಸ್ ಆರ್ಟ್ ಸೆಂಟರ್ ಮುಂಬಯಿ ಸಂಸ್ಥೆ - ಸಂಭ್ರಮಿಸಿದ ಸಂಗೀತಕಾರ ಕಿಶೋರ್ ಕುಮಾರ್ 89ನೇ ಜನ್ಮೋತ್ಸವ

ಮುಂಬಯಿ, ಆ.10: ದ ಪೀಪಲ್’ಸ್ ಆರ್ಟ್ ಸೆಂಟರ್ (ರಿ.) ಮುಂಬಯಿ ಸಂಸ್ಥೆಯು ಇತ್ತೀಚೆಗೆ ನವಿ ಮುಂಬಯಿ ಅಲ್ಲಿನ ಜು¬ೂ ನಗರದ ಬಂಟ್ಸ್ ಸೆಂಟರ್‍ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ವಿಶ್ವಕಂಡ ಅಪ್ರತಿಮ ಸಂಗೀತಕಾರ ಸ್ವರ್ಗೀಯ ಕಿಶೋರ್ ಕುಮಾರ್ ಅವರ 89ನೇ ಜನ್ಮೋತ್ಸವದ ಪ್ರಯುಕ್ತ `ಚಿರಂತನ ಕಿಶೋರ್ ಕುಮಾರ್’ ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಫೆಡರೇಶನ್ ಆಫ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್‍ಸ್ ಮಹಾರಾಷ್ಟ್ರ ಇದರ ಉಪಾಧ್ಯಕ್ಷ, ಮಹಾರಾಷ್ಟ್ರ ರಾಜ್ಯ ಸರಕಾರದ ವಿಶೇಷ ಕಾರ್ಯನಿರ್ವಹಣಾ ಅಧಿಕಾರಿ (ಎಸ್‍ಸಿಒ) ವಿರಾರ್ ಶಂಕರ್ ಬಿ.ಶೆಟ್ಟಿ ಉಪಸ್ಥಿತರಿದ್ದು ಪ್ರಧಾನ ಅಭ್ಯಾಗತರಾಗಿದ್ದ ನವಿ ಮುಂಬಯಿ ಮಹಾನಗರ ಪಾಲಿಕೆಯ ಆಯುಕ್ತ ಐಎಎಸ್ ಅಧಿಕಾರಿ ಡಾ| ರಮಸಮಿ ಎನ್., ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಅಖಿಲ ಭಾರತ ಮರಾಠಿ ಚಿತ್ರಪದ್ ಮಹಾ ಮಂಡಲದ ಮಾಜಿ ಅಧ್ಯಕ್ಷ ವಿಜಯ್ ಕೋಂಡ್ಕೆ ಅತಿಥಿüಗಳಾಗಿದ್ದರು. ಪೀಪಲ್’ಸ್ ಆರ್ಟ್ ಸೆಂಟರ್ ಇದರ ಕಾರ್ಯದರ್ಶಿ ಗೋಪ್‍ಕುಮಾರ್ ಕೃಷ್ಣ ಪಿಳ್ಳೈ ಸ್ವಾಗತಿಸಿದರು. ಡಾ|. ಕೆ.ಸತೀಶನ್ ಪುರಸ್ಕೃತರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ ಅಭಾರ ಮನ್ನಿಸಿ ಕಿಶೋರ್ ಕುಮಾರ್ ಜೀವನದ ಅಮರತ್ವ ಸಾರಿದರು.

ಮಹಿಳೆ ಸಂಸಾರ ಬಲಕ್ಕೆ ಪ್ರಮುಖ ಪಾತ್ರ : ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಂಸಾರ ಬಲಗೊಳ್ಳಲು ಮುಂದಾಗಿದ್ದಾರೆ. ಹಿಂದೆ ಹೆಂಡತಿ ತನ್ನ ಖರ್ಚಿಗೆ ಗಂಡನ ಬಳಿ ಹಣಕ್ಕಾಗಿ ಬೇಡಿಕೊಳ್ಳಬೇಕಿತ್ತು.

ಇಂದು 50 ಸಾವಿರ ರೂ ಅಷ್ಟು  ಹಣವನ್ನು ಬೇಕಾದರೆ ಗಂಡನಿಗೆ ಕೊಡುವಷ್ಟು ಮಹಿಳೆಯರು ಶಕ್ತರಾಗಿದ್ದಾರೆ. ಅದಕ್ಕೆ ಸ್ವ-ಸಹಾಯ ಸಂಘವೇ ಕಾರಣ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕಾರ್ಯಕ್ರಮವನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.
ತಾಲೂಕಿನ ಹಳೆ ಚಂದಾಪುರದಲ್ಲಿನ ಸನ್ ಪ್ಯಾಲೇಸ್ ವಿವಾಹ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಆಯೋಜಿಸದ್ದ ಒಕ್ಕೂಟಗಳ ಉದ್ಘಾಟನೆ ಹಾಗೂ ವಿವಿಧ ಅನುದಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ವ-ಸಹಾಯ ಸಂಘ ಅಂದರೆ ಸ್ವ-ಸಹಾಯಕ್ಕೆ ರೂಪಿತವಾಗಿರುವುದು. ಸಂಘ ಹಲವು ಮಕ್ಕಳ ತಾಯಿ ಇದ್ದಂತೆ ಹಾಗಾಗಿ ಸಭೆಗಳನ್ನು ನಡೆಸುವುದರ ಮೂಲಕ ಕಷ್ಟ, ಸುಖ ಹಂಚಿಕೊಳ್ಳಬಹುದಾಗಿದೆ. ಭವಿಷ್ಯದ ಕನಸುಗಳನ್ನು ಚಿಂತಿಸಿಕೊಳ್ಳುತ್ತಿರಿ. ಅದಕ್ಕೆ ಮಹಿಳೆ ಅಭಿವೃದ್ಧಿಗೆ ಸಂಘಕ್ಕೆ ಸೇರಿ ಕೊಳ್ಳಿ ಎಂದು ಅವರು ಹೇಳಿದರು.
ನಮ್ಮ ಜಿಲ್ಲೆಯಲ್ಲಿ ಮಳೆ ಜಾಸ್ತಿ ಇದೆ. ಆದರೆ, ಬೆಂಗಳೂರು ಭಾಗದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿದೆ. ಇದರಿಂದ ರೈತ ಕುಟುಂಬಗಳು ನೆಮ್ಮದಿಯಾಗಿ ಬದುಕು ನೀಗಿಸಲು ಸಹಾಯವಾಗಿದೆ. ಈ ಭಾಗದಲ್ಲಿ 218 ಡೈರಿಗಳಿಗೆ ಆರ್ಥಿಕ ಸಹಾಯ ನೀಡಲಾಗಿದೆ.

ಸ್ವಚ್ಛ ಮಾಡುವವರು ಇದ್ದಾರೆಂದು ಗಲೀಜು ಮಾಡುವುದು ಸರಿಯಲ್ಲ. : ಹೆಗ್ಗಡೆಯವರು
ರಾಜ್ಯದ 8000 ದೇವಾಲಯಗಳಲ್ಲಿ ಸ್ವಚ್ಛತೆ ಮಾಡುತ್ತಿದ್ದೇವೆ. ಸ್ವಚ್ಛತೆ ಮಾಡುವವರು ಇದ್ದಾರೆ ಎಂದು ನಾವು ಗಲೀಜು ಮಾಡಬಾರದು. ಅದೇ ನಮ್ಮ ಪುಣ್ಯದ ಕೆಲಸ ಎಂದು ಹೇಳಿದರು.

ಈ ಸಭೆಯಲ್ಲಿ ಇಷ್ಟು ಮಹಿಳೆಯರು ಸೇರಿದ್ದಾರೆಂದರೆ ಅವರ ಸಂತೋಷ ವ್ಯಕ್ತಪಡಿಸಲು ಎಂದು ನಾನು ಭಾವಿಸಿದ್ದೇನೆ. ಬದುಕಿನಲ್ಲಿ ಸಂತೋಷ ಬೇಕು. ನೆಮ್ಮದಿ ಆರೋಗ್ಯ ಭವಿಷ್ಯದ ಬಗ್ಗೆ ಅಭಯಬೇಕು ಇದೇ ಪ್ರತಿಯೊಬ್ಬ ಮನುಷ್ಯನಿಗೆ ಬೇಕಿರುವುದು ಎಂದರು.

ಉತ್ತರ ಕನ್ನಡದ ಜಿಲ್ಲೆಯಲ್ಲಿ ಎರಡು ವರ್ಷದಷ್ಟು ಮಳೆ ಬಂದಿದೆ. ಈ ಭಾಗದಲ್ಲಿ ಮಳೆಯೇ ಕಡಿಮೆ ಇದೆ. ಒಂದು ಕಡೆ ಅತಿವೃಷ್ಠಿ, ಅನಾವೃಷ್ಠಿ ಇದೆ ಹಾಗಾಗಿ ಎರಡು ಸಮನಾಗಿದ್ದರೆ ಮಾತ್ರ ಬದುಕು ಯಶಸ್ವಿಯಾಗಲಿದೆ ಎಂದರು.

ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಮುನಿರತ್ನ ನಾರಾಯಣಪ್ಪ, ಬಮೂಲ್ ಅಧ್ಯಕ್ಷರಾದ ಮುನಿರತ್ನ ನಾರಾಯಣಪ್ಪ ಮೊದಲಾದವರು ಉಪಸ್ಥಿತರಿದ್ದರು.

ಎಡನೀರುಶ್ರೀ ಚಾತುರ್ಮಾಸ್ಯ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ ಕಚೇರಿ - ಮುಂಬಯಿ (ಬದಿಯಡ್ಕ), ಆ.10: ಎಡನೀರು ಮಠಾಧೀಶ ಶ್ರೀ ಕೇಶವಾನಂದ

ಭಾರತೀ ಶ್ರೀಗಳ 58ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಪ್ರಯುಕ್ತ ಶ್ರೀಮದ್ ಎಡನೀರು ಮಠದ ಸಭಾಂಗಣದಲ್ಲಿ ನಡಯುತ್ತಿರುವ ಚಾತುರ್ಮಾಸ್ಯ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ ಕಾಸರಗೋಡುನ ವಿದುಷಿಃ ಉಷಾ ಈಶ್ವರ ಭಟ್ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ಜರುಗಿತು.

ಸಂಗೀತ ಕಚೇರಿ ಪಕ್ಕವಾದ್ಯದಲ್ಲಿ ಗಣರಾಜ ಕಾರ್ಲೆ (ವಯಲಿನ್), ಡಾ| ವಿ.ಆರ್.ನಾರಾಯಣ ಪ್ರಕಾಶ್ ಕೋಯಿಕ್ಕೋಡ್ (ಮೃದಂಗ) ಈಶ್ವರ ಭಟ್ (ಘಟಂ) ಹಾಗೂ ರಾಜೀವ್‍ಗೋಪಾಲ್ (ಮೌತ್ ಓರ್ಗನ್)ನಲ್ಲಿ ಸಹಕರಿಸಿದರು. ಇದಕ್ಕೂ ಮೊದಲು ಚಾತುರ್ಮಾಸ್ಯದ ಅಂಗವಾಗಿ ಬದಿಯಡ್ಕ ಪೇಟೆಯ ಭಕ್ತಾದಿಗಳಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಗೆ ಶ್ರೀಮಠಕ್ಕೆ ಆಗಮಿಸಿತು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಕೇಶವಾನಂದ ಭಾರತೀ ಶ್ರೀಗಳು, ಶ್ರೀದೇವರಿಗೆ ಸಮರ್ಪಿಸುವ ಹೊರೆ ಕಾಣಿಕೆ ಎಂಬ ಪರಿಕಲ್ಪನೆಯು ವಿಶಾಲ ಅರ್ಥಹೊಂದಿದ್ದು, ಬದುಕಿನ ಜಂಜಡಗಳಿಂದ ನಮ್ಮಲ್ಲುಂಟಾಗುವ ಕ್ಲೇಶಗಳ ಹೊರೆಯನ್ನು ಭಗವಂತನ ಸನ್ನಿಧಿಯಲ್ಲಿ ಇಳಿಸಿ ದುಖಃದಿಂದ ಪಾರಾಗುವುದು ಮತ್ತು ನಮ್ಮ ಅಗತ್ಯದ ವಸ್ತುಗಳಲ್ಲಿ ಒಂದಷ್ಟನ್ನು ಪರರಿಗೂ ಮೀಸಲಿಟ್ಟು ಬದುಕಿನ ಸಾರ್ಥಕತೆಯನ್ನು ಪಡೆಯುವುದು ಆಗಿದೆ ಎಂದು ತಿಳಿಸಿದರು. ಭಕ್ತಿ, ಶ್ರದ್ದೆ ಮತ್ತು ಭಗವದ್ ನಾಮ ಸಂಕೀರ್ತನೆಯ ನಿತ್ಯಾನುಷ್ಠಾನ ಪ್ರತಿಯೊಬ್ಬರ ಹೃದಯದಲ್ಲಿ ಹುಟ್ಟಿ ಬೆಳೆಯಲಿ ಎಂದು ಶ್ರೀಗಳು ಆಶೀರ್ವಚನಗೈದು ಹಾರೈಸಿದರು.

ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ ಡಾ| ಬಿ.ಎಸ್.ರಾವ್, ಪ್ರಧಾನ ಕಾರ್ಯದರ್ಶಿ ಕೆಯ್ಯೂರು ನಾರಾಯಣ ಭಟ್, ಜಯರಾಮ ಮಂಜತ್ತಾಯ ಎಡನೀರು, ಅರವಿಂದಕುಮಾರ ಅಲೆವೂರಾಯ, ಸೀತಾರಾಮ ಕುಂಜತ್ತಾಯ, ಚೇತನ್ ಕುಣಿಕುಳ್ಳಾಯ, ಅಶೋಕ ಪುಣಿಚಿತ್ತಾಯ, ಡಾ.ಗೋಪಾಲಕೃಷ್ಣ ಭಟ್ ಎರುಗಲ್ಲು, ನ್ಯಾಯವಾದಿ ನಾರಾಯಣ ಭಟ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ದಿನದ ವಿಶೇಷತೆಯಾಗಿ ಪ್ರದೋಷ ಸೇವೆಗಳು ನೆರವೇರಿದವು.

ಇಂದಿಲ್ಲಿ ಶುಕ್ರವಾರ ಸಂಜೆ ಯಕ್ಷಗಾನ ವೈಭವ ನಡೆಯಿತು. ಶನಿವಾರ ಸಂಜೆ 6.30 ರಿಂದ 8.00 ವರೆಗೆ ಮಂಗಳೂರಿನ ಪ್ರಸಿದ್ಧ ಭರತನಾಟ್ಯ ಕಲಾವಿದರಾದ ಅರ್ಥಾ ಪೆರ್ಲ ಮತ್ತು ಅಯನಾ ಪೆರ್ಲ ಅವರಿಂದ ವಿಶೇಷ ಭರತನಾಟ್ಯ ಪ್ರದರ್ಶನ ಜರಗಲಿದೆ. ಬಳಿಕ 9.00 ಗಂಟೆಯವರೆಗೆ ಅಂತರಾಷ್ಟ್ರೀಯ ಖ್ಯಾತಿಯ ಕಾಸರಗೋಡಿನ ಶ್ರೀಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ತಂಡದವರಿಂದ ಕೆ.ವಿ.ರಮೇಶ್ ನಿರ್ದೇಶನದಲ್ಲಿ ನರಕಾಸುರ ವಧೆ-ಗರುಡ ಗರ್ವಭಂಗ ಬೊಂಬೆಯಾಟ ಪ್ರದರ್ಶನ ನಡೆಯಲಿದೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

Obituary: Christopher Lewis (54), UppoorObituary: Christopher Lewis (54), Uppoor
Veez Konkani Illustrated Weekly e-Magazine # 74Veez Konkani Illustrated Weekly e-Magazine # 74
Charitable Foundation welcomes likeminded personnel for permanent directors post in MangaloreCharitable Foundation welcomes likeminded personnel for permanent directors post in Mangalore
Announcement from St Anne’s Church Thottam, UdupiAnnouncement from St Anne’s Church Thottam, Udupi
Kemmannu Church - Weekly Announcements.Kemmannu Church - Weekly Announcements.
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Manasa Vani - Manasa Pamboor News Letter - Vol 1 - Issue 1Manasa Vani - Manasa Pamboor News Letter - Vol 1 - Issue 1
PRIME LOCATION PROPERTY FOR SALE IN KEMMANNUPRIME LOCATION PROPERTY FOR SALE IN KEMMANNU
Admissions Open @ Milagres College, KallianpurAdmissions Open @ Milagres College, Kallianpur
Milarchi Lara - Easter Issue of Mlagres Parish Bulletin.Milarchi Lara - Easter Issue of Mlagres Parish Bulletin.
Appeal from Gudiam Shri Bhadrakali Temple, Kemmannu - Invitation Cards Released.Appeal from Gudiam Shri Bhadrakali Temple, Kemmannu - Invitation Cards Released.
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Milagres Tours and Travels upcoming Tours.Milagres Tours and Travels upcoming Tours.
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Milarchi Laram - Issue Jan 2019Milarchi Laram - Issue Jan 2019
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India