Brief Mumbai News with pictures


Rons Bantwal
Kemmannu News Network, 14-08-2018 22:43:57


Write Comment     |     E-Mail To a Friend     |     Facebook     |     Twitter     |     Print


Mumbai Aug. 13 :- A sailing on Indian flags outside CST station. Upcoming independence Day. The feeling magnanimous about loving your country so much and also being a selfless champion of the poor. in Mumbai on Monday.

Mumbai,Aug.14: Bollywood  Actor John Ibrahim  visited to the Bai-Jerbai Wadia Hospital on the occasion of Independence Day to encourage childrens suffering from heart attack / problem. ( Pics by Rons Bantwal)

ವಿವಿ ಸಂಧ್ಯಾ ಕಾಲೇಜಿನಲ್ಲಿ  ಆಂಗ್ಲಭಾಷಾ ಸ್ನಾತಕೋತ್ತರ ಪದವಿ ಕೋರ್ಸ್ ಉದ್ಘಾಟನೆ

ಮುಂಬಯಿ, ಆ.14: ವಿಶ್ವ ವಿದ್ಯಾನಿಲಯ ಸಂದ್ಯಾ ಕಾಲೇಜು ಮಂಗಳೂರು ಇಲ್ಲಿ 2018-19ನೇ ಶೈಕ್ಷಣಿಕ ಸಾಲಿನಲ್ಲಿ ಆರಂಭಗೊಂಡ ಆಂಗ್ಲಭಾಷಾ ಸ್ನಾತಕೋತ್ತರ ಪದವಿ ಕೋರ್ಸನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಕಲಾ ನಿಕಾಯದ ಮುಖ್ಯಸ್ಥರಾದ ಪೆÇ್ರ| ಕೆ.ಕಿಶೋರಿ ನಾಯಕ್ ಅವರು ಕಾಲೇಜು ಆವರಣದಲ್ಲಿರುವ ಶಿವರಾಮ ಕಾರಂತ ಭವನದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಉದ್ಘಾಟನೆಯ ಬಳಿಕ ವಿದ್ಯಾಥಿರ್üಗಳನ್ನು ಉದ್ದೇಶಿಸಿ ಮಾತನಾಡಿದ ಅವರು,  ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಆಂಗ್ಲ ಭಾಷಾ ಸ್ನಾತಕೋತ್ತರ ಪದವಿ ಆರಂಭಗೊಂಡಿರುವುದು ಅನಿವಾರ್ಯ ಕಾರಣಗಳಿಂದ ಸ್ನಾತಕೋತ್ತರ ಪದವಿಯಿಂದ ವಂಚಿತರಾದವರು ಹಾಗೂ ಹಗಲು ದುಡಿದು ಸ್ನಾತಕೋತ್ತರ ಪದವಿ ಗಳಿಸಿಕೊಳ್ಳುವ ಕನಸು ಹೊಂದಿರುವವರಿಗೆ ಸಹಕಾರಿ ಆಗಲಿದೆ ಹಾಗೂ ಆಂಗ್ಲಭಾಷೆಯನ್ನು ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿದವರಿಗೆ ಇತರೆ ಭಾಷೆಗಳ ಅಧ್ಯಯನ ಮಾಡಿದವರಿಗಿಂತ ಹೆಚ್ಚು ಉದ್ಯೋಗದ ಅವಕಾಶಗಳು ಒದಗಿ ಬರುತ್ತವೆ ಎಂದು ಆಭಿಪ್ರಾಯಪಟ್ಟರು. ಅದೇ ರೀತಿ ಆಂಗ್ಲಭಾಷಾ ಸ್ನಾತಕೋತ್ತರ ಪದವೀಧರರಿಗೆ ಉಪನ್ಯಾಸಕ ವೃತ್ತಿಯ ಹೊರತಾಗಿ ಇರುವ ಇನ್ನಿತರ ವೃತ್ತಿ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿüಯಾಗಿದ್ದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಉದಯ ಕುಮಾರ್ ಎಂ.ಎ ಅವರು ಸಂಧ್ಯಾ ಕಾಲೇಜಿನಲ್ಲಿ ಸ್ನಾತಕೋತ್ತರ ಆಂಗ್ಲಭಾಷಾ ವಿಭಾಗ ಆರಂಭಗೊಂಡಿರುವುದು ಉತ್ತಮ ಬೆಳವಣಿಗೆ ಹಾಗೂ ವಿಭಾಗದ ಬೆಳವಣಿಗೆಗೆ ವಿಶ್ವವಿದ್ಯಾನಿಲಯ ಕಾಲೇಜು ಸರ್ವರೀತಿಯಲ್ಲಿಯೂ ಸಹಕರಿಸಲಿದ್ದು, ವಿಭಾಗವು ಉತ್ತಮ ಅಭಿವೃದ್ಧಿಯನ್ನು ಹೊಂದಲಿ ಎಂದು ಶುಭ ಹಾರೈಸಿದರು.

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ರಾಮಕೃಷ್ಣ ಬಿ.ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಂಗ್ಲಬಾಷಾ ಸ್ನಾತಕೋತ್ತರ ಪದವೀಧರರಿಗೆ ಉತ್ತಮ ಬೇಡಿಕೆ ಇದ್ದು, ಅರ್ಹ ಪದವೀಧರರ ಕೊರತೆ ಇದೆ, ಆದುದರಿಂದ ತಮಗೆ ಒದಗಿ ಬಂದಿರುವ ಅವಕಾಶವನ್ನು ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ವಿದ್ಯಾಥಿರ್üಗಳಿಗೆ ಕಿವಿಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಆಂಗ್ಲಬಾಷಾ ವಿಭಾಗದ ಸಂಯೋಜಕರಾದ ಪೆÇ್ರ| ಶ್ಯಾಮ್ ಭಟ್, ವಿಶ್ವ ವಿದ್ಯಾನಿಲಯ ಕಾಲೇಜಿನ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥರಾದ ಡಾ| ಅಮ್ಮಾಳು ಕುಟ್ಟಿ, ಡಾ| ರಾಜಲಕ್ಷ್ಮಿ ಎನ್.ಕೆ. ಹಾಗೂ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಎಲ್ಲಾ ಸ್ನಾತಕೋತ್ತರ ವಿಭಾಗಗಳ ಸಂಯೋಜಕರು, ಉಪನ್ಯಾಸಕರು ಉಪಸ್ಥಿತರಿದ್ದರು. ಸ್ನಾತಕೋತ್ತರ ಆಂಗ್ಲಭಾಷಾ ವಿಭಾಗದ ಉಪನ್ಯಾಸಕಿ ಕುಮಾರಿ ಹಂಸಿತ ಕುಂಬ್ಳೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಉಳ್ಳಾಲ;  ಮಕ್ಕಳನ್ನು ಧೈರ್ಯವಂತಹ ಮನುಷ್ಯನನ್ನಾಗಿ ಮಾಡುವಂತಹ ಪ್ರಯತ್ನ ಆಗಬೇಕಿದೆ.  ಈ ಮೂಲಕ ಅವರಲ್ಲಿ ಸರಿ ದಾರಿ ಮತ್ತು ತಪ್ಪು ದಾರಿಗಳ ಜ್ಞಾನ ವೃದ್ಧಿಯಾಗಲು ಸಾಧ್ಯ ಎಂದು ಶ್ರೀ ಕ್ಷೇತ್ರ ಕೊಂಡಾಣ ಸಮಿತಿ ಅಧ್ಯಕ್ಷ ರಾಜೇಶ್ ರೈ ಕೋಟೆಕಾರ್ ಗುತ್ತು  ಅಭಿಪ್ರಾಯಪಟ್ಟರು.
ಅವರು ಎಸ್ಸೆಸ್ಸೆಫ್ ರಾಜ್ಯಾದಂತಹ ಹಮ್ಮಿಕೊಂಡ  "ನಮ್ಮ ಮಕ್ಕಳು ನಮ್ಮವರಾಗಲು" ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್ಸೆಸ್ಸೆಫ್ ಕೋಟೆಕಾರ್  ಸೆಕ್ಟರ್ ವತಿಯಿಂದ ಜನಜಾಗೃತಿ ಮೂಡಿಸುವ ಬೈಕ್ ರ್ಯಾಲಿಯ ಸಮಾರೋಪ ಹಾಗೂ ಎಸ್‍ವೈಎಸ್ ಕೆಸಿ ರೋಡು ಸೆಂಟರ್ ವತಿಯಿಂದ 72ನೇ ಸ್ವಾತಂತ್ರ್ಯದ ಅಂಗವಾಗಿ  ಬೀರಿ ಖಾಸಗಿ ಸಭಾಂಗಣದಲ್ಲಿ ಭಾನುವಾರ ಜರಗಿದ "ಭಾರತ ಭಾರತೀಯರದ್ದಾಗಲಿ" ಪ್ರಜಾ ಸಂಗಮ ಕಾರ್ಯಕ್ರಮದಲ್ಲಿ  ಸಂದೇಶ ಭಾಷಣ ಮಾಡಿದರು.
ಯುವಸಮುದಾಯ ಮಾರ್ಕಿನ ಹಿಂದುಗಡೆ ಓಡುವಂತಹ ವಾತಾವರಣ ಇದೆ.  ಹಿಂದೆ ಕೂಡು ಕೂಡು ಕುಟುಂಬವಿತ್ತು.  ಎಲ್ಲಾ ನೀತಿಪಾಠವನ್ನು ಮನೆಯೊಳಗೇ ಕಲಿಯುವಂತಹ ಸ್ಥಿತಿಯಿತ್ತು.  ಮಕ್ಕಳಿಗೆ ಮನೆಯೇ ಪಾಠಶಾಲೆ ಆಗಿತ್ತು.  ಆದರೆ ಇದೀಗ  ಹೊರಗಡೆ ಆಟವಾಡುವಂತಹ ಮಕ್ಕಳನ್ನು ಒಳಗೆ ಕರೆತಂದು ಬಂಧಿಯಲ್ಲಿಟ್ಟು ಓದಿಸುವ ಕೆಲಸವಾಗುತ್ತಿದೆ. ಸಾಮಾನ್ಯ ಜೀವನವನ್ನು ಎದುರಿಸುವ  ಜ್ಞಾನವನ್ನು ತುಂಬಲಾಗುತ್ತಿಲ್ಲ. ಪುಸ್ತಕದ ಅಕ್ಷರಗಳನ್ನು ಮಾತ್ರ ಓದಿಸುವ ಕಾರ್ಯವಾಗುತ್ತಿದೆ.   ಇದರಿಂದಾಗಿ ಮಕ್ಕಳು ಹೊರಜಗತ್ತಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಬೇಡದ ದಾಸ್ಯಗಳಿಗೆ ಬಲಿಯಾಗುತ್ತಿದ್ದಾರೆ ಎಂದರು.
ಎಸ್‍ವೈಎಸ್ ರಾಜ್ಯ ಪ್ರ.ಕಾರ್ಯದರ್ಶಿ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಮಾತನಾಡಿ ದೇಶದಲ್ಲಿ ಸಹಸ್ರ ವರ್ಷಗಳಿಂದ ಪಾಲಿಸುತ್ತಿರುವ ಸಿದ್ಧಾಂತವಿದೆ. ಆದರೆ ಸದ್ಯ ಗುಂಪುಗಳಾಗಿ ವೈವಿದ್ಯತೆಯಲ್ಲಿ ಏಕತೆಯನ್ನು ಮರೆಯುವಂತಹ ಪ್ರಯತ್ನಗಳು ವಿವಿಧ ಶಕ್ತಿಗಳಿಂದ ಆಗುತ್ತಿದೆ. ಭವ್ಯ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ  ಭಾರತೀಯರಲ್ಲಿ ಜಾಗೃತಿಯನ್ನು  ಮೂಡಿಸುವ ಕಾರ್ಯ ಆಗಬೇಕಿದೆ.  ಸರ್ವರಿಗೂ ಸೇರಿದ ದೇಶವಾಗಬೇಕಿದೆ. ಹಿಂದೆ ದೇಶವನ್ನು ಆಡಳಿತ ನಡೆಸಿದವರು ಧರ್ಮದ ಆಧಾರದಲ್ಲಿ ದೇಶವನ್ನು ಬಯಸಿರಲಿಲ್ಲ. ಅವರವರ ಸಮುದಾಯದ ಸಾಮ್ರಾಜ್ಯವನ್ನು ಸ್ಥಾಪಿಸುತ್ತಾ ಹಿಂದೆ ಹೋಗಿದ್ದಾರೆ.  ಜಾತಿ, ಮತ, ಧರ್ಮ, ಪಕ್ಷ, ಮತಗಳ, ಪಂಗಡದ ಆಧಾರದಲ್ಲಿ  ದೇಶವನ್ನು ಒಡೆಯಲು ಯುವಜನ ಬಿಡಬಾರದು. ಯಾರನ್ನೂ ಅನ್ಯರನ್ನಾಗಿ ಕಾಣದೆ, ಎಲ್ಲರೂ ನಮ್ಮವರೆಂದು ಕಾಣುವ ವಾತಾವರಣ ನಿರ್ಮಾಣವಾಗಬೇಕಿದೆ. ಪವಿತ್ರವಾದ ಪರಂಪರೆ ದೇಶದಲ್ಲಿ ಇನ್ನೂ ಮುಂದುವರಿಯಬೇಕು. ಭಾರತ ಜಗತ್ತಿನಲ್ಲಿ ಸೂಪರ್ ಪವರ್ ಆಗಿ ಮೆರೆಯುವಂತಹ ತಾಕತ್ತು ಬರಬೇಕಿದೆ ಎಂದರು.
ಎಸ್‍ವೈಎಸ್ ಕೆ.ಸಿ ರೋಡು ಸೆಂಟರ್ ಅಧ್ಯಕ್ಷ ಎನ್. ಎಸ್ ಉಮ್ಮರ್ ಮಾಸ್ಟರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಯಾಗಿ ಅಲೋಶಿಯಸ್ ಕಾಲೇಜಿನ ನಿರ್ದೇಶಕ ಫಾದರ್ ಡೆನ್ಝಿಲ್ ಲೋಬೋ,  ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಸ್ ಅಳ್ವ, ತಾ.ಪಂ ಸದಸ್ಯ ಮೊೈದೀನ್ ಬಾವ, ಎಸ್‍ವೈಎಸ್ ಮಂಗಳೂರು ವಲಯಧ್ಯಕ್ಷ ಮುಹಮ್ಮದಾಲಿ ಸಖಾಫಿ ಸುರಿಬೈಲ್, ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಬಾರಿ ಸಅದಿ, ಎಸ್ ಎಂಎ ತಲಪಾಡಿ ರೇಂಜ್ ಅಧ್ಯಕ್ಷ ಎ.ಎಂ ಅಬ್ಬಾಸ್ ಹಾಜಿ, ಸ್ವಾಗತ ಸಮಿತಿ ಅಧ್ಯಕ್ಷ ಯು.ಬಿ ಮುಹಮ್ಮದ್ ಹಾಜಿ, ಬೀರಿ ಸಾರ್ವಜನಿಕ ಗಣೇಶೋತ್ಸ ಸಮಿತಿ ಅಧ್ಯಕ್ಷ ರಾಮನಾಥ್ ಕೋಟೆಕಾರ್, ಬೀರಿ ಯುವಕ ಮಂಡಲ ಹಿರಿಯ ಸದಸ್ಯ ಲಿಂಗಪ್ಪ ಗಟ್ಟಿ, ಉಚ್ಚೀಲ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ ಪೆರಿಬೈಲ್, ಕೆಳಗಿನ ಕೋಟೆಕಾರ್ ಗುತ್ತು ಮುತ್ತಣ್ಣ ಶೆಟ್ಟಿ,  ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹಮೀದ್ ಹಸನ್, ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಇಸ್ಮಾಯಿಲ್ ಕೆ.ಸಿ ನಗರ, ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಬಾರಿ ಸಅದಿ ಸ್ವಾಗತಿಸಿದರು. ಎಸ್‍ವೈಎಸ್ ಕೆ.ಸಿ ರೋಡು ಸೆಂಟರ್  ಕಾರ್ಯದರ್ಶಿ ಫಾರೂಖ್ ಕೋಟೆಪುರ ವಂದಿಸಿದರು.
ಕೆ.ಸಿ.ರೋಡು ಹಿದಾಯತ್ ನಗರದ  ಅಲ್ ಹಿದಾಯ ಮಸೀದಿ ವಠಾರದಿಂದ ಚಾಲನೆಗೊಂಡ  ಬೈಕ್ ರ್ಯಾಲಿ  ಕೋಟೆಕಾರು ಬೀರಿಯವರೆಗೆ  ಸಾಗಿತ್ತು. ಈ ನಡುವೆ  ಜರಗಿದ ಬೀದಿ ಭಾಷಣದಲ್ಲಿ  ಬಶೀರ್ ಮದನಿ ಕೂಳೂರು ದಿಕ್ಸೂಚಿ ಭಾಷಣ ನೆರವೇರಿಸಿದರು.

ಬಿಎಸ್‍ಕೆಬಿ ಅಸೋಸಿಯೇಶನ್ ಗೋಕುಲ ಆಶ್ರಯದಲ್ಲಿ ಸ್ವಾತಂತ್ರ ್ಯ ದಿನಾಚರಣೆ -ಗೋಕುಲದ ಪ್ರೇಮಾ ಎಸ್.ರಾವ್‍ಗೆ `ಗೋಕುಲ ಕಲಾಶ್ರೀ’ ಪ್ರಶಸ್ತಿ ಪ್ರದಾನ
ಮುಂಬಯಿ, ಆ.14: ಬಿಎಸ್‍ಕೆಬಿ ಅಸೋಸಿಯೇಶನ್ ಗೋಕುಲವು, ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದಿನಾಂಕ 15.8.2018ರ ಬುಧವಾರ  ನೇರೂಲ್ ನಲ್ಲಿರುವ ಹಿರಿಯ ನಾಗರಿಕರ ಆಶ್ರಯಧಾಮ ’ಆಶ್ರಯ’ ದಲ್ಲಿ ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಸಂಭ್ರಮಿಸಲಿದೆ. 

ಆ ನಿಮಿತ್ತ ಮಧ್ಯಾಹ್ನ 12 ಗಂಟೆಗೆ ಹಿರಿಯ ನಾಗರಿಕರಿಗೆ  ಸಹಾಯವಾಗುವಂತಹ ಅವಶ್ಯಕ  ವೈದ್ಯಕೀಯ ಸಲಕರಣೆಗಳನ್ನು ಅಲ್ಪ ಬಾಡಿಗೆ ದರದಲ್ಲಿ ಒದಗಿಸುವ ಸೇವೆ `ಆಶ್ರಯ ಸಂಜೀವನಿ-ಸೀನಿಯರ್ ಕೇರ್  ಸೆಂಟರ್’ನ್ನು   ಸಂಘದ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಹಾಗೂ ಸರ್ವ ಸದಸ್ಯರುಗಳ ಸಮ್ಮುಖದಲ್ಲಿ, ಮುಖ್ಯ ಅತಿಥಿüಯಾಗಿ ಆಗಮಿಸಲಿರುವ ಅಪೆÇೀಲೋ ಹಾಸ್ಪಿಟಲ್ಸ್, ನವಿಮುಂಬಯಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಡಾ| ನರೇಂದ್ರ ತ್ರಿವೇದಿ ಉದ್ಘಾಟಿಸಲಿದ್ದಾರೆ.

ಅಪರಾಹ್ನ  ಡಾ| ಸುರೇಶ್ ಎಸ್. ರಾವ್ ಅಧ್ಯಕ್ಷತೆಯಲ್ಲಿ ಜರಗಲಿರುವ ಸಭಾ ಕಾರ್ಯಕ್ರಮದಲ್ಲಿ, ಬೈಲೂರು  ಬಾಲಚಂದ್ರ ರಾವ್ ಅವರು ತಮ್ಮ ಮಾತಾಪಿತರ ಹೆಸರಿನಲ್ಲಿ ಸ್ಥಾಪಿಸಿದ `ಗೋಕುಲ ಕಲಾಶ್ರೀ’  ಪ್ರಶಸ್ತಿಯನ್ನು ಗೋಕುಲದ  ಕಾರ್ಯಕರ್ತೆ ಪ್ರೇಮಾ ಎಸ್.ರಾವ್ ಅÀವರಿಗೆ ಪ್ರದಾನಿಸುವರು. ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ಪ್ರತಿಭಾನ್ವಿತ ವಿದ್ಯಾಥಿರ್üಗಳನ್ನು ಪುರಸ್ಕರಿಸಲಿರುವರು. 

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ  `ಸಾಮಾ ಗ್ರೂಪ್’  ಇವರಿಂದ  ಸಂಗೀತ ರಸಮಂಜರಿ, ಪ್ರಶಾಂತ್ ಹೆರ್ಲೆ ಹಾಗೂ ವಿದುಷಿ ಸಹನಾ ಭಾರದ್ವಾಜ್ ನಿರ್ದೇಶನದಲ್ಲಿ ಸಂಘದ ಸದಸ್ಯರಿಂದ `ಕೃಷ್ಣ ಕೃಷ್ಣ, ಕೃಷ್ಣ’  ಪೌರಾಣಿಕ ಸಂಗೀತ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪತ್ರಿಕಾ ಪ್ರಕಟಣೆ  ತಿಳಿಸಿದೆ.   

ಕುತ್ಪಾಡಿ ರಾಮಚಂದ್ರ ಗಾಣಿಗ-ನಿರ್ಗತಿಕರ ಪಾಲಿನ ತಪೆÇೀನಿರತ ಋಷಿ - ಅಮೃತ ಜನ್ಮೋತ್ಸವಕ್ಕೆÀ ಮನೆಗಳನ್ನು ಕಟ್ಟಿಕೊಟ್ಟು ಪಡೆಯುವರೇ ಖುಷಿ 

ಮುಂಬಯಿ, ಆ.14: ತೆರೆಮರೆಯ ಅನನ್ಯ ಸಮಾಜ ಸೇವಕ, ನಿರ್ಗತಿಕರ ಪಾಲಿನ ತಪೆÇೀನಿರತ ಋಷಿ, ಗಾಣಿಗರತ್ನ ಎಂದೇ ಜನಜನಿತ, ಗಾಣಿಗ ಸಮಾಜ ಮುಂ¨ಯಿ ಸಂಸ್ಥೆಯ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ಅವರಿಗೆ ಇಂದು 75ರ ಹುಟ್ಟುಹಬ್ಬದ ಸುದಿನ. ಅಮೃತ ಜನ್ಮೋತ್ಸವದ ಸಂಭ್ರಮ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲೂಕಿ ಅಲ್ಲಿನ ಕುತ್ಪಾಡಿ ನಿವಾಸಿಗಳಾದ ಮಂಜಯ್ಯ ಗಾಣಿಗ ಮತ್ತು ರಾಧಾ ಗಾಣಿಗ ಅವರ ಸುಪುತ್ರರಾಗಿ ರಾಮಚಂದ್ರ ಜನಿಸಿದರು. ಹುಟ್ಟಿದ ಸಮಾಜದ ಸಂಘಟನಾ ನಾವೆಯನ್ನು ಹುಟ್ಟು ಹಾಕಿ, ಹುಟ್ಟ ಎಳೆದು ಸಾಗಿದ ನಾವಿಕರೂ ಇವರಾಗಿದ್ದಾರೆ.  ಹುಟ್ಟಿದ ಸಮುದಾಯ ನಮಗೆ ಜನ್ಮ ಕೊಟ್ಟ ತಾಯಿ ತಂದೆಗಳಂತೆ, ಸ್ವಜಾತಿ, ಸ್ವಸಮಾಜದ ಹೆಸರನ್ನು ಮರೆಮಾಚುವುದು ಸರ್ವಥಾ ತಪ್ಪು ಎನ್ನುವ ಮನೋಭಾವಿ ಇವರಾಗಿದ್ದಾರೆ. ಇಳಿ ವಯಸ್ಸಿನಲ್ಲೂ ನಗು ಬೀರುವ ಆಕರ್ಷಕ ವ್ಯಕ್ತಿತ್ವ, ಸಮಾಜವನ್ನು ಸಾಮರ್ಥವಾಗಿ ಮುನ್ನಡೆಸಬಲ್ಲ ಸಂಘಟನಾ ಚಾತುರ್ಯ, ಗಂಡುಗತ್ತಿನ ಧ್ವನಿ, ಸಂಸ್ಕೃತಿ, ಪರಂಪರೆಗಳ ಆಳವಾದ ಜ್ಞಾನವಿರುವ ಮೇಧಾವಿಯೂ ಹೌದು. ಕರ್ಮಭೂಮಿ ಮುಂಬಯಿಯಲ್ಲೂ ಹುಟ್ಟಿದ ಸಮಾಜದ ಸಂಸ್ಥೆಗೆ ಆಡಿಗಲ್ಲನ್ನಿಟ್ಟು ಸ್ವಸಮುದಾಯದ ಬಲವರ್ಧನೆಗೈದ ಸ್ವಾಭಿಮಾನಿ. ತಾವು ಮಾಡಿದ ಸೇವೆ, ಸಾಧನೆಗಳನ್ನು ಎಂದೂ ತೋರ್ಪಡಿಸದೆ ಸದ್ದುಗದ್ದಲವಿಲ್ಲದೆ ತೆರೆಮರೆಯಲ್ಲಿದ್ದೇ ಸಾಮಾನ್ಯರಲ್ಲಿ ಅಸಮಾನ್ಯರಾಗಿ ಉಡುಪಿ ರಂಗಭೂಮಿ ಸಂಸ್ಥೆಯ ಪ್ರಮುಖರಾಗಿದ್ದ ಇವರು ಸುಮಾರು ನಾಲ್ಕುವರೆ ದಶಕದ ಸಮಾಜ ಮತ್ತು ಕಲಾ ಸೆವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನಾನುರಾಗಿದ್ದರು. ರಾಜ್ಯೋತ್ಸವ, ನಾಟಕ ಅಕಾಡೆಮಿ, ಆರ್ಯಭಟ ಪುರಸ್ಕಾರಗಳ ಪ್ರತಿಷ್ಠಿತ ಪ್ರಸಸ್ತಿಗಳ ಸಹಿತ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿರುವ ಕುತ್ಪಾಡಿ ಆನಂದ ಗಾಣಿಗ ಅವರ ದೂರದೃಷ್ಠಿಯ ಹೆಜ್ಜೆಗಳಲ್ಲೇ ಮುನ್ನಡೆದವರು.

ಸುಮಾರು ನಾಲ್ಕುವರೆ ದಶಕದ ಅವಿರತ ಶ್ರಮದಿಂದ ಹತ್ತಾರು ತುಳು, ಕನ್ನಡ ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಯಕ್ಷಗಾನ ಕಲಾವಿದನಾಗಿಯೂ ಮೆರೆದು ರಂಗ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿ, ಸಮಾಜ ಸೇವೆ ಹಾಗೂ ಕಲಾ ಸೆವೆಯ ಪೆÇೀಷಣೆಗೈದ ಧೀಮಂತ ಹಾಗೂ ಮಹಾನ್ ಚೇತನ, ಗಾಣಿಗ ಸಮಾಜದ ಹಿರಿಯ ಮುತ್ಸದ್ಧಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಂಗಕರ್ಮಿ ಕುತ್ಪಾಡಿ ಆನಂದ ಗಾಣಿಗ ಇವರ ಸಹೋದರ ಎನ್ನಲೇ ಖುಷಿ, ಹೆಮ್ಮೆಪಡುವ ರಾಮಚಂದ್ರ ಗಾಣಿಗ ಓರ್ವ ಪರಿಸರ ಮತ್ತು ಅಪ್ಪಟ ಕಲಾಪ್ರೇಮಿ.

ಸಮಾಜಮುಖಿ ಚಿಂತನೆಯ ವಿಶೇಷ ಭಾವನೆ ಹೊಂದಿದ ಇವರು ಸಮಾಜವನ್ನು ನಾವು ಎಷ್ಟು ಪ್ರೀತಿಸುತ್ತಿದ್ದೇವೆ ಅದಕ್ಕಾಗಿ ಎಷ್ಟು ಸಮಯ ವಿನಿಯೋಗಿಸುತ್ತಿದ್ದೇವೆ ಎನ್ನುವುದನ್ನು ಇವರಿಂದ ತಿಳಿಯಬೇಕಾಗಿದೆ. ಬೇಧಭಾವವಿಲ್ಲದೆ ಸರ್ವರಲ್ಲೂ ಒಟ್ಟಿಗೆ ವೇದಿಕೆ ಹಂಚಿಕೊಳ್ಳುವ ಅವರನ್ನೆಲ್ಲಾ ಪ್ರೀತಿ ಮತ್ತು ಗೌರವದಿಂದ ಕಾಣುವ ಇವರು ಸರಳ ಸಜ್ಜನಿಕಾ ವ್ಯಕ್ತಿತ್ವವನ್ನು ಮೈಗೂಡಿಸಿದ ಮೃದು ಸ್ವಾಭಾವದ ವ್ಯಕ್ತಿ ಇವರು. ಸಾಕ್ಷತ್ ರಾಮಚಂದ್ರನ ಅವತಾರವಾಗಿಸಿ ಉದಾರ ನೆರವಿತ್ತವರು. ಕಷ್ಟಗಳ ಕುಲಕ್ಕೇ ರಾಮಬಾಣವಾಗಿ ನಲಿವಿನ ಸಾಮ್ರಾಜ್ಯವನ್ನು ರೂಪಿಸಿದವರು. ಆಥಿರ್üಕವಾಗಿ ಸಾಂತ್ವಾನವಿತ್ತು ಖುಷಿಯಿಂದ ಕೊಡುಗೈದಾನಿಯಾಗಿ ಋಷಿಯಾದವರು. ಕಾಲವೇನೋ ಬದಲಾದರೂ ಆಧುನಿಕತೆಗೆ ಹೊಂದಿದರೂ ಮನುಷ್ಯನ ಜೀವನದ ಪಾಡು ಬದಲಾಯಿಸದೆ ಮಾನವೀಯತೆಯನ್ನು ಮೆರೆದು ಬಾಳಿದವರು.

ಕೊಡುಗೆಯನ್ನು ಎಂದೂ ಉಡುಗೊರೆಯಾಗಿ ತೋರಿಸದೆ ಸೇವಾಂಕ್ಷಿಗಳಿಗೆ ತನ್ನ ಸಾಮರ್ಥ್ಯ ಮತ್ತು ಬೆಂಬಲ ನೀಡಿ ಬೆಂಬಲಿಸುವ ಧೀಮಂತ ಹೃದಯಶೀಲತೆವುಳ್ಳವರು. ಮಹಾನಗರದಲ್ಲಿ ವಾಸವಾಗಿದ್ದರೂ ತನ್ನ ಸುತ್ತಮುತ್ತಲಿನ ಊರುಕೇರಿಯ ಜನಜೀವನ ತಿಳಿದು ಅದರಲ್ಲೂ ಕಲಾವಿದರ ಪಾಡನ್ನು ತಿಳಿದು ಸದ್ದಿಲ್ಲದೆ ಸಹಾಯಹಸ್ತ ಚಾಚಿದವರು. ಸಾಮರಸ್ಯದ ಒಮ್ಮುಖ ತುಡಿತ ಇವರ ಉದಾರತೆಯಾಗಿದೆ. ಬಡವ ಬಲ್ಲಿದವರಲ್ಲೂ ನಲಿವು ಗೆಲುವಿನ ಹೊಳೆಹರಿಸಿ ಕಷ್ಟಕಂಟಕಗಳ ಕುಲವನ್ನೇ ಮರೆಯಾಗಿಸುವ ಕನಸು ಕಾಣುತ್ತಾ ಕೈಯಲಾದಷ್ಟು ಸಹಾಯ ಮಾಡಿ ಪುಣ್ಯ ಕಟ್ಟಿಕೊಂಡ ಮಹಾದಾನಿ. ಸೇವೆ ಮೂಲಕವೇ ಶ್ರೀರಾಮನನ್ನು ಕಂಡ ಓರ್ವ ಆಧ್ಯಾತ್ಮಿಕ ಸಾಧಕರೂ ಹೌದು. ಪ್ರೀತಿ, ಶ್ರದ್ಧೆ ಮತ್ತು ನಿಷ್ಠೆಯ ನಿಷ್ಕಳಂಕ ಯಜಮಾನನಾಗಿ ಸಮಾಜವನ್ನು ಮುನ್ನಡೆಸಿ ಮೆರೆದವರು. ಜನರು ತನ್ನನ್ನು ಮಹಾಸಾಧಕ, ಸೇವಕ, ಸದ್ಭಕ್ತನೆಂದು ಕೊಂಡಾಡಬೇಕು ಎನ್ನುವ ಆಶಯ ವಿರಿಸದ ಅಪದ್ಭಂಧವ, ಅಸಾದರಣ ಪ್ರತಿಭೆ ಆಗಿದ್ದ ಇವರೋರ್ವ ಶುದ್ಧ ಅಪರಂಜಿ ಸೇವಕನೆಂದರೂ ತಪ್ಪಾಗಲಾರದು.

ಅಪ್ಪಟ ಸಮಾಜ ಸೇವಕರೆಣಿಸಿದ ಇವರು ಗಾಣಿಗ ಸಂಘದ ಬೆಳವಣಿಗೆಗೆ ಅವಿರತ ಶ್ರಮ ನೀಡಿದ ಸಮಾಜದ ಹಿರಿಯ ದಿಗ್ಗಜರೂ ಆಗಿದ್ದು, ಗಾಣಿಗ ಸಮಾಜ ಮುಂ¨ಯಿ ಇದರ ಸ್ಥಾಪಕರಲ್ಲೊರ್ವರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಇದೀಗ ಅಧ್ಯಕ್ಷರಾಗಿ ಸೇವಾನಿರತರಾಗಿದ್ದಾರೆ. ಪ್ರವೃತ್ತಿಯಲ್ಲಿ ಸಮಾಜಸೇವಕಾರಿದ್ದರೂ ವೃತ್ತಿಯಲ್ಲಿ ಕ್ರೀಮ್‍ಚಿಲ್ಲ್‍ಸ್ ಮತ್ತು ಕೂಲ್‍ಕ್ಯಾಂಪ್ ಐಸ್‍ಕ್ರೀಂ ಸಂಸ್ಥೆಯ ಮಾಲಕರಾಗಿ ಮಹಾನಗರದಾದ್ಯಂತ ಚಿರಪರಿಚಯಿತರು.
 
ಎಲ್ಲ ವರ್ಗದ ಜನತೆ ಮತ್ತು ಸರ್ವ ಸಮುದಾಯ, ಸಮಾಜಗಳ  ವಿಶ್ವಾಸಕ್ಕೆ ಪಾತ್ರರಾದ ಹಿರಿಯ ಚೇತನರಿವರು. ಸದಾ ಯುವ ಜನತೆಗೆ ಪ್ರೇರೆಪಿಸುತ್ತಾ ಸದ್ದುಗದ್ದಲವಿಲ್ಲದೆ ಕೊಡುಗೈದಾನಿಯಾಗಿ ತೆರೆಮರೆಯಲ್ಲಿದ್ದೇ ಸಮಾಜ ಹಿತ ಬಯಸಿದವರು. ತನ್ನ ಕಾರ್ಯ ಬಾಹುಳ್ಯವನ್ನು ತಾಯ್ನಾಡಿಗೂ ವಿಸ್ತರಿಸಿ ಸುಮಾರು ಎರಡುವರೆ ದಶಕದಿಂದ ಶೈಕ್ಷಣಿಕ, ಸಾಮಾಜಿಕ ಮತ್ತು ಕಲಾರಂಗದಲ್ಲಿ ಕಾರ್ಯ ಪ್ರವೃತ್ತವಾಗಿದ್ದ ಇವರು ಗಾಣಿಗರ ಧೀಮಂತ ಸೇವಾ ವ್ಯಕ್ತಿತ್ವಕ್ಕೆ ಪುಟ ಕೊಟ್ಟಂತಿದೆ.

ಜನ್ಮದಿನಗಳು ಜೀವನದ ಮೈಲಿಗಲ್ಲುಗಳಲ್ಲಿ ಒಂದಾಗಿದೆ. ಇದು ಎಲ್ಲಾ ರೀತಿಯ ಚಿಂತನೆ ಮತ್ತು ಹಳೆ ನೆನಪುಗಳನ್ನು ಮೆಲುಕು ಹಾಕಿಸುತ್ತಾ ಸೇವೆಗೆ ಪ್ರೇರೇಪಿಸುತ್ತದೆ. ಕಾರಣಾಂತರಗಳಿಂದ ಅನೇಕರು ಹುಟ್ಟುಹಬ್ಬ ಆಚರಣೆ ಮರೆತು ಬಿಡುತ್ತಾ ಸೇವೆಯೊಂದಿಗೆ ಸಂಭ್ರಮಿಸುತ್ತಿರುವುದು ನನಗೆ ಪ್ರೇರÀಣೆ ನೀಡಿದೆ. ನಮ್ಮವರು ಹುಟ್ಟುಹಬ್ಬ ಆಚರಿಸಲು ಯೋಜಿಸುತ್ತಿದ್ದರೂ ಆ ಸಂಭ್ರಮ ನಮಗೆ ಮನಸ್ಸಿಲ್ಲದಿದ್ದರೆ, ಅದು ಅಪ್ರಸ್ತುತವಾಗುತ್ತದೆ.  ಆದರೆ ನಮ್ಮ ಗೌರವಾನ್ವಿತ ಸಾಧನೆಗಳು ಮೆಚ್ಚಿನ ಹವ್ಯಾಸಗಳು ಅಥವಾ ನಾವು ಮಾಡಲು ಇಷ್ಟಪಡುವ ವಿಷಯಗಳು ಹುಟ್ಟುಹಬ್ಬಗಳಂತೆಯೇ ಮೈಲಿಗಲ್ಲುಗಳಾಗಿದ್ದರೆ ಒಳಿತು. ಅಂತೆಯೇ ನಾನೂ ತನ್ನ ಬಾಲ್ಯಾರಂಭಿಕ ವರ್ಷಗಳ ಬಗ್ಗೆ ತಿಳಿದು ನಮ್ಮ ಜೀವನದ ಬಡತನ ಮರೆತು ಬಿಡುವುದು ಸರಿಯಲ್ಲ. ಇದಕ್ಕಾಗಿ ತನ್ನ ಹುಟ್ಟುಹಬ್ಬದ ಪ್ರಯುಕ್ತ ಶ್ರೀದೇವರು ತನಗೆ ಸದ್ಯ ಇಷ್ಟೊಂದು ಆಯುಷ್ಯವನ್ನು ನೆಮ್ಮದಿ, ಸಮೃದ್ಧಿಯುತವಾಗಿ ಪ್ರಾಪ್ತಿಸಿದ್ದಕ್ಕಾಗಿ ಬಡವರಿಗೆ ಉಳಕೊಳ್ಳಲು ಐದು ಮನೆಗಳನ್ನು ಕಟ್ಟಿಕೊಟ್ಟು ಜೀವನ ಪಾವನ ಆಗಿಸುವಂತಿದ್ದೇನೆ ಅನ್ನುತ್ತಾರೆ ರಾಮಚಂದ್ರ ಗಾಣಿಗರು.

75 ಅನ್ನು ತಿರುಗಿಸುವಂತೆ ಯೋಚಿಸಬೇಡ. 57 ವರ್ಷಗಳ ಅನುಭವದೊಂದಿಗೆ 18 ವರ್ಷಕ್ಕೆ ತಿರುಗುವಂತೆ ಯೋಚಿಸುವುದು ಒಳಿತು ಎನ್ನುವಂತೆ ರಾಮಚಂದ್ರರು ಈ ಸುದಿನವನ್ನು ರಂಗಕಲಾವಿದರು ಮತ್ತು ಸಮಾಜ ಸೇವಕರಿಗೆ ನಾಲ್ಕೈದು ಮನೆಗಳನ್ನು ಕಟ್ಟಿಕೊಟ್ಟು ತನ್ನ ಹುಟ್ಟು ಅಮೃತಮಹೋತ್ಸವ ಸಂಭ್ರಮಿಸುತ್ತಿರುವುದು ಇವರ ಜನ್ಮೋತ್ಸವದ ವೈಶಿಷ್ಟ ್ಯವಾಗಿದೆ. ಅಪಾರ ಸಂಖ್ಯೆಯ ಕಲಾಭಿಮಾನಿ, ಹಿತೈಷಿಗಳನ್ನು ಹೊಂದಿರುವ  ಗಾಣಿಗರು ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು, ಪೆÇೀಷಕರಾಗಿಯೂ ಶ್ರಮಿಸಿರುವರು. ಹಲವಾರು ಗೌರವಗಳಿಂದ ಪುರಸ್ಕೃತರಾಗಿರುವ ಇವರಿಗೆ ಕುಲದೇವರಾದ ಶ್ರೀ ವೇಣುಗೋಪಾಲಕೃಷ್ಣ ಆಯುರಾರೋಗ್ಯ ಭರಿತ ನೆಮ್ಮದಿ ಬಾಳನ್ನು ಕರುಣಿಸಿ ಶತಾಯುಷ್ಯವನ್ನು ಕಾಣುವಂತಾಗಲಿ ಎಂದೇ ನಮ್ಮ ಹಾರೈಕೆ.

Mumbai Aug. 13 :- Viviana Mall authorities including Ms. Rima Pradhan, Sr. VP Marketing, Viviana Mall along with former hockey coach J M Carvalho, former Olympic Gold medalist Merwyn Fernandes, Commonwealth Silver Medalist Dhananjay Mahadik & Internationalist Gymnast Pooja Surve pledged their support to the upliftment of sports by handing over a cheque to " I & G Partners in Sports - an NGO working in the field of sports for kids from less privileged background.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | UdupiFinal Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, KemmannuVespers 2024 | St. Theresa’s Church, Kemmannu
Annual Church Feast 2024 | St. Theresa’s Church, KemmannuAnnual Church Feast 2024 | St. Theresa’s Church, Kemmannu
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | UdupiCHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From KemmannuAnnual Day 2023 | Carmel English School, Live From Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, UdupiEaster 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, UdupiFocus Studio, Near Hotel Kidiyoor, Udupi