Brief Mumbai, Mangalore news with pictures


Rons Bantwal
Kemmannu News Network, 30-08-2018 20:44:48


Write Comment     |     E-Mail To a Friend     |     Facebook     |     Twitter     |     Print


ಸೆ.07:ಅಮೇರಿಕಾದ ವಾಷಿಂಟನ್‍ನಲ್ಲಿ ಇಂಟರ್‍ನೇಶನಲ್ ಕಲ್ಚರಲ್ ಫೆಸ್ಟಿವಲ್ `ಇಂಟರ್‍ನೇಶನಲ್ ಮ್ಯಾನ್ ಆಫ್ ದ ಈಯರ್’ ಪ್ರಶಸ್ತಿಗೆ
ಶಂಕರ್ ಶೆಟ್ಟಿ ವಿರಾರ್-ಹರೀಶ್ ಎನ್.ಶೆಟ್ಟಿ-ಚಂದ್ರಶೇಖರ ಬೆಳ್ಚಡ ಆಯ್ಕೆ

ಮುಂಬಯಿ, ಆ.28: ಗ್ಲೋಬಲ್ ಪೀಸ್ ಫೌಂಡೇಶನ್ ಸಂಸ್ಥೆಯು ಇಂಟರ್‍ನೇಶನಲ್ ಕಲ್ಚರಲ್ ಫೆಸ್ಟ್ (ಐಸಿಎಫ್) ಜೊತೆಗೂಡಿ ಇದೇ ಸೆ.07ರ ಶುಕ್ರವಾರ ಸಂಜೆ ಅಮೇರಿಕಾ ಅಲ್ಲಿನ ವಾಷಿಂಟನ್ ಡಿಸಿ ಇಲ್ಲಿ ಆಯೋಜಿಸಿರುವ 18ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಮತ್ತು ವಾರ್ಷಿಕ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭಾರತ ರಾಷ್ಟ್ರದ ಆಥಿರ್üಕ ರಾಜಧಾನಿ ಬೃಹನ್ಮುಂಬಯಿನ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಗಳ ಧುರೀರಾದ ವಿೂರಾ-ಡಹಾಣು ಬಂಟ್ಸ್ ಸಂಸ್ಥೆಯ ಗೌರವಾಧ್ಯಕ್ಷ, ರೈಲ್ವೇ ಯಾತ್ರಿ ಸಂಘ ಮುಂಬಯಿ ಅಧ್ಯಕ್ಷ ಶಂಕರ್ ಬಿ.ಶೆಟ್ಟಿ ವಿರಾರ್,  ಮಲಾಡ್ ಕನ್ನಡ ಸಂಘ ಇದರ ಅಧ್ಯಕ್ಷ ಹರೀಶ್ ಎನ್.ಶೆಟ್ಟಿ ಮತ್ತು ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಆರ್.ಬೆಳ್ಚಡ ಆಯ್ಕೆ ಗಿದ್ದಾರೆ. ಈ ಮೂವರೂ ಗಣ್ಯರಿಗೂ `ಇಂಟರ್‍ನೇಶನಲ್ ಮ್ಯಾನ್ ಆಫ್ ದ ಈಯರ್’ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು ಎಂದು ಜಿಪಿಎಫ್ ಕಾರ್ಯದರ್ಶಿ ಸುಪ್ರಿಯಾ ಸವಲ್ಗ್ ತಂಝಾನಿಯಾ ತಿಳಿಸಿದ್ದಾರೆ.

ಶಂಕರ್ ಬಿ.ಶೆಟ್ಟಿ ವಿರಾರ್,  ರತಿ ಶಂಕರ್ ಶೆಟ್ಟಿ,  ಹರೀಶ್ ಎನ್.ಶೆಟ್ಟಿ, ವನಿತಾ ಹರೀಶ್ ಶೆಟ್ಟಿ, ಚಂದ್ರಶೇಖರ ಆರ್. ಬೆಳ್ಚಡ ಮತ್ತು ದಿವಿಜಾ ಚಂದ್ರಶೇಖರ್ ದಂಪತಿಗಳು ಅಕ್ಕ ಸಮ್ಮೇಳನದಲ್ಲೂ ಪಾಲ್ಗೊಳ್ಳಲಿದ್ದಾರೆ. ಅಸೋಸಿಯೇಶನ್ ಆಫ್ ಕನ್ನಡ ಕೂಟ’ಸ್ ಆಫ್ ಅಮೇರಿಕಾ ಸಂಸ್ಥೆಯು ಉತ್ತರ ಟೆಕ್ಸಾಸ್ ಮಲ್ಲಿಗೆ ಕನ್ನಡ ಕೂಟ ಇದರ ಆಶ್ರಯದಲ್ಲಿ ಅಕ್ಕ ಸಂಸ್ಥೆಯು ಇದೇ ಆಗಸ್ಟ್.31 ನಿಂದ ಸೆ.02ರ ಮೂರು ದಿನಗÀಳಲ್ಲಿ ಅಮೆರಿಕದ ಡಾಲಸ್ ನಗರದ ಶೆರಟಾನ್ ಸಮಾವೇಶ ಸಭಾಗೃಹದಲ್ಲಿ ಹತ್ತನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಿದ್ದು  ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅನೇಕ ಮಂತ್ರಿಗಳೂ ಸಮಾರಂಭದಲ್ಲಿ ಭಾಗವಹಿಸಲಿರುವ ಅಕ್ಕ ಕನ್ನಡ ಸಮ್ಮೇಳನದಲ್ಲೂ ಅತಿಥಿü ಆಹ್ವಾನಿರಾಗಿ ಭಾಗವಹಿಸಲಿದ್ದಾರೆ.

ಈ ಬಾರಿ ದಶವಾರ್ಷಿಕ ಅಕ್ಕ ವಿಶ್ವ ಕನ್ನಡ 2018 ನಡೆಯಲಿದ್ದು, ಈ ಹಿಂದೆ ನಡೆದ ಎಲ್ಲ ಸಮ್ಮೇಳನಗಳಿಗಿಂತಲೂ ಈ ಬಾರಿಯ ಅಕ್ಕ ಸಮ್ಮೇಳನ ಹಲವು ವಿಶೇಷತೆಯಿಂದ ಕೂಡಿದೆ. ಸಮ್ಮೇಳನದಲ್ಲಿ ವಿಶ್ವದಾದ್ಯಂತದ ಸಾವಿರಾರು ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಅಕ್ಕ  ಸಮಿತಿ ಕಾರ್ಯಾಧ್ಯಕ್ಷ ಅಮರ್‍ನಾಥ್ ಗೌಡ ಮತ್ತು ಅಕ್ಕ ಸಂಸ್ಥೆಯ ಅಧ್ಯಕ್ಷ ಶಿವಮೂರ್ತಿ ಕೀಲರ ತಿಳಿಸಿದ್ದಾರೆ.


ಶಂಕರ್ ಬಿ.ಶೆಟ್ಟಿ ವಿರಾರ್
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಮೂಲ್ಕಿ ಸನಿಹದ  ಬಳ್ಕುಂಜೆ ಗ್ರಾಮದ ಚೆನ್ನಯಬೆನ್ನಿ ಅಲ್ಲಿನ `ನೇತ್ರ ನಿವಾಸ’ದ ಭೋಜಾ ಶೆಟ್ಟಿ ಮತ್ತು ನೇತ್ರಾವತಿ ಬಿ.ಶೆಟ್ಟಿ ಸುಪುತ್ರರೇ ಶಂಕರ್ ಬಿ.ಶೆಟ್ಟಿ. ಎಲ್ಲರಂತೆ ತಾನೂ ಎಳೆಯ ವಯಸ್ಸಿನಲ್ಲೇ ಹೊಟ್ಟೆಪಾಡನ್ನು ಹರಸಿ ಮುಂಬಯಿಗೆ ಬಂದವರು. ಬಾಲಕಾರ್ಮಿಕನಾಗಿ ದುಡಿದು ಕ್ರಮೇಣ ಹೊಟೆÉೀಲು ಮಾಲಿಕರಾಗಿ ಬೆಳೆದವರು. ಓರ್ವ ಯಶಸ್ವೀ ಉದ್ಯಮಿ ಆಗಿ ಸಾಧಕರೆಣಿಸಿದವರು. ಎಳೆಯ ವಯಸ್ಸಿನಲ್ಲೇ ತ್ಯಾಗಮಯ ಸಾಹಸ, ಶ್ರದ್ಧಾ ಬದುಕÀು ರೂಪಿಸಿ ಸಾಧನೆಯ ಮಜಲುಗಳನ್ನು ದಾಟಿ ತವರೂರು ಮತ್ತು ಕರ್ಮಭೂಮಿ ಮಹಾರಾಷ್ಟ್ರದ ನೆಲೆಯಲ್ಲಿ ಯುವಶಕ್ತಿ ವರ್ಜಸ್ಸನ್ನು ಸಾಧನಾಶೀಲರಾಗಿ ವಿನಿಯೋಗಿಸಿದ ಓರ್ವ ಅಸಾಧಾರಣ ಸಾಧಕರು. ಸಾಮಾಜಿಕ ಕಳಕಳಿ, ಅನನ್ಯ ಶ್ರವ್ಮಜೀವಿಯಾಗಿದ್ದು ದಕ್ಷ ನಾಯಕತ್ವಕ್ಕೆ ಸದಾ ಎತ್ತಿದಕೈ ಇವರದ್ದಾಗಿದೆ. ತನ್ನ ಸೇವಾತ್ಮಕ ಮನೋಭಾವದಿಂದ ಕಾರ್ಯಪ್ರವೃತ್ತರಾಗಿ ಹಲವಾರು ಸಂಘ-ಸಂಸ್ಥೆಗಳ ಚುಕ್ಕಾಣಿ ಹಿಡಿದು ಸಂಸ್ಥೆಗಳನ್ನು ಮುನ್ನಡೆಸಿದ ಹಿರಿಮೆ ಇವರದ್ದು. ಸದಾ ಸೇವಾ ಬಾಂಧವ್ಯದ ಬೆಸುಗೆಯಲ್ಲಿ ತುಳು ಕನ್ನಡಿಗ, ಮರಾಠಿಗರನ್ನು ಒಗ್ಗೂಡಿಸಿ ಯುವ ಜನಾಂಗಕ್ಕೆ ಆದರನೀಯರೆಣಿಸಿದ ಇವರು ಜನಸಾಮಾನ್ಯರನ್ನೂ ಜನಮಾನ್ಯರಾಗಿಸಿ ಎಲ್ಲರನ್ನೂ ಬಂಧುಗಳಾಗಿಸಿ, ಸ್ವಪರಿವಾರ ಸದಸ್ಯರಂತೆ ಕಾಣುವ ಸದ್ಗುಣವಂತರು.

ಬೃಹನ್ಮುಂಬಯಿನ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಗಳಲ್ಲಿ ವಿವಿಧ ಪದಗಳನ್ನು ಅಲಂಕರಿಸಿ ದಕ್ಷತೆಯ ಸೇವೆಗೈದಿರುವರು. ಇವರು ವಸಾಯಿ ತಾಲೂಕು ಹೊಟೇಲ್ ಅಸೋಸಿಯೇಶನ್‍ನ ಅಧ್ಯಕ್ಷರಾಗಿ, ನಲ್ಲಸೋಫರಾ ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಫೆಡರೇಶನ್ ಆಫ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್‍ಸ್ ಮಹಾರಾಷ್ಟ್ರ ಇದರ ಉಪಾಧ್ಯಕ್ಷರಾಗಿ, ಮಹಾರಾಷ್ಟ್ರ ರಾಜ್ಯ ಸರಕಾರದ ವಿಶೇಷ ಕಾರ್ಯನಿರ್ವಹಣಾ ಅಧಿಕಾರಿ (ಎಸ್‍ಸಿಒ), ವಿೂರಾ-ಡಹಾಣು ಬಂಟ್ಸ್ ಸಂಸ್ಥೆಯ ಗೌರವಾಧ್ಯಕ್ಷ, ರೈಲ್ವೇ ಯಾತ್ರಿ ಸಂಘ ಮುಂಬಯಿ ಅಧ್ಯಕ್ಷರಾಗಿ  ತುಳುಕನ್ನಡಿಗರ ಸೇವೆಯಲ್ಲಿ ಅವಿರತವಾಗಿ ಶ್ರಮಿಸಿದ ಪ್ರಭಾವಿ, ಧೀಮಂತ ನಾಯಕರಿವರು. 

ವಿೂರಾರೋಡ್ ಅಲ್ಲಿನ ಉಡುಪಿ ಶ್ರೀ ಪಲಿಮಾರು ಇದರ ಮುಂಬಯಿ ಶಾಖೆಯ ಬಾಲಾಜಿ ದೇವಸ್ಥಾನದ ಮುಂದಾಳುವಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಧಾರ್ಮಿಕ ಸೇವೆಯಲ್ಲೂ ಸದಾ ಮುಂಚೂಣಿಯಲ್ಲಿರುವ ಶಂಕರ್ ಶೆಟ್ಟಿ ಹತ್ತಾರು ದೈವ-ದೇವಸ್ಥಾನಗಳ ಜೀರ್ಣೋದ್ಧಾರಗಳಿಗೆ ಬೆನ್ನೆಲುಬುವಾಗಿ ನಿಂತವರು. ಅನನ್ಯ ಸಂಸ್ಕೃತಿ, ಶಿಕ್ಷಣಪ್ರೇಮಿ ಆಗಿರುವ ಶಂಕರ್ ಓರ್ವ ಹೃದಯಶೀಲ ಸದ್ಗುಣವಂತರು. ಅಸಮಾನ್ಯ ಸಮಾಜ ಸೇವಕರೆಂದೇ ಗುರುತಿಸಿ ಕೊಂಡ ಕೊಡುಗೈದಾನಿ ಆಗಿರುವ ಇವರು ಸಾಮಾಜಿಕ ಕಳಕಳಿಯುಳ್ಳವರಾಗಿದ್ದು ಜಾತಿ, ಮತ ಧರ್ಮವನ್ನು ಪರಿಗಣಿಸದೆ ತನ್ನೂರ ಸುಮಾರು ನೂರಾರು ಬಡವರಿಗೆ (ವಿದ್ಯಾಥಿರ್ü ವೇತನ, ವಿಧವಾ ವಿದ್ಯಾಥಿರ್ü ವೇತನ, ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಪಿಂಚಣಿ) ಪ್ರತೀ ತಿಂಗಳಿಗೂ ಸಹಾಯಧನ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. 

ವಿರಾರ್ ಶಂಕರಣ್ಣ ಎಂದೇ ಜನಜನಿತರಾಗಿರುವ ಇವರಿಗೆ ನೂರಾರು ಸನ್ಮಾನ, ಗೌರವಗಳು ಸಂದಿವೆ. ಕಲ್ವಾ ಫ್ರೆಂಡ್ಸ್ ಮುಂಬಯಿ ಏರ್ಪಡಿಸಿದ್ದ ಎಸ್‍ಎಂಎಸ್ ಮೂಲಕ `ಮುಂಬಯಿನ ಜನಪ್ರಿಯ ತುಳು ಕನ್ನಡಿಗ ವ್ಯಕ್ತಿ’ ಎಂಬ ಕೀರ್ತಿಗೆ ಪಾತ್ರರಾಗಿ ಸನ್ಮಾನಿಸಲ್ಪಟ್ಟವರು.  ದ ಪೀಪಲ್’ಸ್ ಆರ್ಟ್ ಸೆಂಟರ್ (ರಿ.) ಮುಂಬಯಿ ಇದರ ಆರನೇ `ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ-2018’ ಕ್ಕೆ ಭಾಜನರಾದವರು.

ಪತ್ನಿ ರತಿ ಶಂಕರ್ ಶೆಟ್ಟಿ, ಮಕ್ಕಳಾದ ಚೇತನ್, ಚರಣ್ ಮತ್ತು ದೇವಿಕಾ (ಮೂವರೂ ವಿವಾಹಿತರು) ಅವರ ಚೊಕ್ಕ ಸಂಸಾರರೊಂದಿಗೆ ಬೊರಿವಿಲಿ ಪಶ್ಚಿಮದ ಗೋರಾಯಿನಲ್ಲಿ ಮಕ್ಕಳು, ಮೊಮ್ಮಕ್ಕಳೊಂದಿಗೆ ವಾಸವಾಗಿದ್ದಾರೆ. ಹೊರನಾಡ ಅಪ್ರತಿಮ ಸಮಾಜಸೇವಕ ಆಗಿದ್ದು, ತಮ್ಮ ಗುರುತರ ಸೇವೆಯನ್ನು ಮನಗಂಡು ತಮ್ಮ ದುಡಿಮೆಯ ಸಾಹಸಗಾಥೆಂಯೊಂದಿಗೆ ಜನಮಾನಸದಲ್ಲಿ ನೆಲೆಯಾಗಿದ್ದಾರೆ.

 

ಹರೀಶ್ ಎನ್.ಶೆಟ್ಟಿ (ಅಧ್ಯಕ್ಷರು: ಮಲಾಡ್ ಕನ್ನಡ ಸಂಘ (ರಿ.)
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪ್ರತಿಷ್ಠಿತ ಮನೆತನ ಎಕ್ಕಾರು ಬೆಳ್ಳಿಮಾರು ಗುಪ್ತ ಶ್ರೀ ನಾರಾಯಣ ಮಲ್ಲಿ ಹಾಗೂ ಕಡಂದಲೆ ತುಲಮೊಗರು ಮನೆ ಶ್ರೀಮತಿ ದೇಜಮ್ಮ ಶೆಟ್ತಿ ಅವರ ದ್ವಿತೀಯ ಪುತ್ರನಾಗಿ  06.05.1955 ರಂದು ಜನಿಸಿದವರೇ ಹರೀಶ್ ಎನ್.ಶೆಟ್ಟಿ.

ಕಡಂದಲೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು ನಂತರ ಮುಂಡ್ಕೂರು ಅಲ್ಲಿನ ವಿದ್ಯಾವರ್ಧಕ ಹೈಸ್ಕೂಲ್ ಎಸ್‍ಎಸ್‍ಎಲ್‍ಸಿ ವಿದ್ಯಾಭ್ಯಾಸ ಗಳಿಸಿಕೊಂಡು ಸೈಂಟ್ ಜೋಸೆಫ್ ಜೂನಿಯರ್ ಕಾಲೇಜ್ ಬಜ್ಪೆ ಇಲ್ಲಿ ಪದವಿ ಪೂರ್ವ ಕಾಲೇಜು ಶಿಕ್ಷಣ ಪಡೆದರು. ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಬಿ.ಎ ಪದವಿ ಪೂರೈಸಿ ತದನಂತರ ಇಲ್ಲೇ ಕಾನೂನು ಪದವಿಧರರಾದರು. ವಿದ್ಯಾಭ್ಯಾಸದಲ್ಲಿ ಸದಾ ಮುಂದಿದ್ದ ಇವರು ಶಾಲಾ ಕಾಲೇಜು ವ್ಯಾಸಂಗದ ಸಮಯದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಯಕ್ಷಗಾನ, ನಾಟಕ್ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಹರೀಶ್ ಅಂತರ್ ಕಾಲೇಜು ಬಾಸ್ಕೇಟ್‍ಬಾಲ್ ಟೂರ್ನಮೆಂಟ್‍ನಲ್ಲಿ ಎಂಜಿಎಂ ಕಾಲೇಜ್‍ನ್ನು ಪ್ರತಿನಿಧಿಸಿ ಅತ್ತ್ಯುತ್ತಮ ಕ್ರೀಡಾಪಟು.   ಇಂಟರ್ ಯೂನಿವರ್ಸಿಟಿ ನಾಟಕ ಸ್ಪರ್ದೆಯಲ್ಲೂ ಉಡುಪಿ ಲಾ ಕಾಲೇಜನ್ನು ಪ್ರತಿನಿಧಿಸಿ ಡಾ| ಕೊಪ್ಪಿಕಾರ್ ಫಲಕ ಗೆದ್ದುಕೊಂಡು ಕಾಲೇಜಿಗೆ ಕೀರ್ತಿ ತಂದೊದಗಿಸಿದ್ದ ಅಪ್ರತಿಮ ಕಲಾವಿದ.

ತಮ್ಮ ಹುಟ್ಟೂರು ಕಡಂದಲೆಯಲ್ಲಿ ಸಾರ್ವಜನಿಕ ಗನೇಶೋತ್ಸವ ಸಮಿತಿಯನ್ನು ಸಂಘಟಿಸಿ ಅಸರ ಪ್ರಥಮ ಅಧ್ಯಕ್ಷರಾಗಿ ತಮ್ಮ ಸಂಘಟನಾ ಸಾಮಥ್ರ್ಯವನ್ನು ಮರೆದವರು. ಕಳೆದ ಮೂವತ್ತೇಳು ವರ್ಷಗಳಿಂದ ಈ ಗಣೇಶೋತ್ಸವ ಸಮಿತಿಯು ಅತಿ  ಸಂಭ್ರಮದಿಂದ ಗಣೇಶೋತ್ಸವವನ್ನು ಅನೇಕ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಾ ಬಂದಿರುವುದಕ್ಕೆ ಹೆಮ್ಮೆ ಪಡುತ್ತಾರೆ.

ಜೀವನೋಪಾಯಕ್ಕಾಗಿ ಮುಂಬಯ್ ಮಹಾನಗರವನ್ನು ಆರಿಸಿದ ಇವರು ತಮ್ಮ ಅಗ್ರಜ ಜಯರಾಂ ಎನ್ ಶೆಟ್ಟಿಯವರ ಹೋಟೆಲ್ ಉದ್ಯಮದೊಂದಿಗೆ ವ್ಯವಹಾರವನ್ನು ನಡೆಸಿಕೊಂಡು ದಣಿವರಿಯದೆ ದುಡಿದು ಉದ್ಯಮದ ಒಳ ಹೊರಗನ್ನು ಚೆನ್ನಾಗಿ ಆರಿತುಕೊಂಡು ಕ್ರಮೇಣ ತಮ್ಮದೇ ಆದ ಹೊಟೇಲನ್ನು ಸ್ಥಾಪಿಸಿ ಓರ್ವ ಯಶಸ್ವಿ ಉದ್ಯಮಿ ಎನಿಸಿಕೊಂಡರೂ ಉದ್ಯಮದೊಂದಿಗೆ ಸಾಮಾಜಿಕ ಹಾಗೂ ಕಲಾರಂಗದಲ್ಲಿ ಶ್ರೇಷ್ಟ ಸಾಧನೆ ಗೈದು ಕೊಂಡು, ಮಲಾಡ್ ಪರಿಸರದ ತುಳು ಕನ್ನಡಿಗರನ್ನು ಒಗ್ಗೂಡಿಸಿಕೊಂಡು ಪರಿಸರದ ತುಳು ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು 1990ರಲ್ಲಿ ಮಲಾಡ್ ಕನ್ನಡ ಸಂಘ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷರಾಗಿ ಆಯ್ಕೆಯಾದರು. ಸಂಘದ ಆಶ್ರಯದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಜನಾಕರ್ಷಣೆಯನ್ನು ಪಡೆಯುತ್ತಾ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಉನ್ನತ ರೀತಿಯಲ್ಲಿ ಬೆಳೆಯುತ್ತಾ, ಬಂದ ಸಂಸೈಯು ತನ್ನ ದಶಮಾನೋತ್ಸವ ಸಂದರ್ಭದಲ್ಲಿ ತನ್ನದೇ ಆದ ಕಚೇರಿಯನ್ನು ಹೊಂದುವಲ್ಲಿ ಸಂಘ ಅಧ್ಯಕ್ಷರಾದ ಇವರ ಮುತುವರ್ಜಿ ಶ್ರಮ ಹಾಗೂ ಸಂಘಟನಾ ಚತುರತೆ ಪೂರಕಲಾಯಿತು. ತಾವು ಹಾಕಿ ಕೊಂಡ ಯೋಜನೆ ಯಶಸ್ವಿಯಾಯಿತು. ದಶಮಾನೋತ್ಸವ ಸಂದರ್ಭದಲ್ಲಿ ಸಂಘಕ್ಕೆ ಇವರು ನೀಡಿದ ವಿಶೇಷ ಕೊಡುಗೆಗಾಗಿ `ಸಂಸ್ಕøತಿ ಸೇನಾಸಿ’ ಎಂಬ ಬಿರುದು ನೀಡಿ ಸನ್ಮಾನ ಗೊಂಡರು.

ಮುಂಬಯಿ ಮಹಾಬಗರದ ಅನೇಕ ಸಂಘಸಂಸ್ಥೆಗಳಲ್ಲಿ ಜರಗುವ ಕಾರ್ಯಕ್ರಮಗಳಲ್ಲಿ ಅತಿಥಿüಗಳಾಗಿ ಪಾಲ್ಗೊಂಡು ಹಲವಾರು ಸನ್ಮಾನ, ಗೌರವಗಳಿಗೆ ಪಾತ್ರರಾಗಿದ್ದಾರೆ. ಜನಸಾಮಾನ್ಯರೊಂದಿಗೆ ಬೆರೆಯುವ ಸದ್ಗುಣ ಸಂಪನ್ನರೂ, ಸಜ್ಜನರೂ, ಪರೋಪಕಾರಿ, ಕೊಡುಗೈದಾನಿಯೂ ಆಗಿರುವ ಹರೀಶ್ ಅವರ ಪತ್ನಿ ವನಿತಾ ಹಾಗೂ ಮಕ್ಕಳು ಜೀತೇಶ, ಶೋಭಿತ್ ಹಾಗೂ ಸೊಸೆ ಕೃತಿ ಅವರೊಂದಿಗೆ ಚೊಕ್ಕ ಸಂಸಾರ ನಡೆಸುತ್ತಿದ್ದಾರೆ.

ಶ್ರೀ ಚಂದ್ರಶೇಖರ್ ಬೆಳ್ಚಡ: 
ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಆಗಿರುವ ಶ್ರೀ ಚಂದ್ರಶೇಖರ್ ಬೆಳ್ಚಡ ಇವರು ಕಳೆದ ಜುಲಾಯಿನಲ್ಲಿ ರಷ್ಯಾ ರಾಷ್ಟ್ರದ ಟಶ್ಖೆಂಟ್‍ನಲ್ಲಿ ಗ್ಲೋಬಲ್ ಫೌಂಡೇಶನ್ ಅಚೀವರ್ (ಜಿಎಫ್‍ಎ) ಸಂಸ್ಥೆಯಿಂದ `ಏಷಿಯಾ ಪೆಸಿಫಿಕ್ ಅಚೀವರ್ಸ್ ಅವಾರ್ಡ್’ (ಂsiಚಿ Pಚಿಛಿiಜಿiಛಿ ಂಛಿhieveಡಿs ಂತಿಚಿಡಿಜ) ಪುರಸ್ಕಾರಕ್ಕೆ ಪಾತ್ರರಾಗಿದ್ದರು. 

ಮಂಗಳೂರು ತಾಲೂಕಿನ ವಿಶ್ವಪ್ರಸಿದ್ಧ ಕಟೀಲು ಅಲ್ಲಿನ ನಂದಿನಿ ನದಿಯ ಮೇಲ್ದಂಡೆಯ ನಿವಾಸಿಗಳೇ ರಾಮ ತಿಮ್ಮಪ್ಪ ಮತ್ತು ಸೀತು ರಾಮ ದಂಪತಿ. ಅವರ ಸುಪುತ್ರರೇ ಚಂದ್ರಶೇಖರ್ ಬೆಳ್ಚಡ. ವಾಣಿಜ್ಯ ಪದವಿಧರರಾಗಿ ರಿಫ್ರ್ಯಾಕ್ಚರ್ ಮಟೀರಿಯಲ್ ಕಂಪೆನಿಯಲ್ಲಿ ಕೆಲಸ ಆರಂಭಿಸಿದ್ದರು. ಸದ್ಯ ಥಾಣೆಯಲ್ಲಿ ತನ್ನದೇ ಆದ ಸ್ವಂತದ ಪಿ.ಪಿ ರೆಫ್ರಕ್ಟೊರೀಸ್ ಕಾಪೆರ್Çೀರೇಶನ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ದೇಶದ ಅನೇಕ ಭಾಗಗಳಲ್ಲಿ ಹಾಗೂ ಲಾಗೊಸ್, ಸಿಂಗಾಪುರ, ಥೈಲ್ಯಾಂಡ್ ಮತ್ತು ದುಬಾಯಿ (ಯುಎಇ) ದೇಶಗಳಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಿದ ನಿಸ್ಸೀಮಾ ಯುವ ಉದಯೋನ್ಮುಖ ಉದ್ಯಮಿಯಾಗಿ ಗುರುತಿಸಿ ಕೊಂಡ ಇವರ ಪತ್ನಿ ದಿವಿಜಾ ಚಂದ್ರಶೇಖರ್ ಇವರು ಓರ್ವ ಅಪ್ರತಿಮ ಪ್ರತಿಭೆಯಾಗಿದ್ದು ಮುಂಬಯಿ ಅಲ್ಲಿನ ಕೆ.ಜೆ ಸೊಮಯ್ಯ ಕಾಲೇಜು ಆರ್ಟ್ಸ್ ಮತ್ತು ಕಾಮರ್ಸ್ ಕಾಲೇಜ್ ವಿದ್ಯಾವಿಹಾರ್ ಇದರ ಉಪ ಪ್ರಾಂಶುಪಾಲೆ ಆಗಿ ಶೈಕ್ಷಣಿಕ ಸೇವೆಗೈದಿದ್ದಾರೆ. ಸುಪುತ್ರ ಮೆಹೂಲ್ ಸಿ.ಬೆಳ್ಚಡ ಮತ್ತು ಸೊಸೆ ಅಸ್ಮಿತಾ ಎಂ.ಬೆಳ್ಚಡ ಅವರೊಂದಿಗೆ ಮುಲುಂಡ್ ಪೂರ್ವದಲ್ಲಿ ಸುಖಸಂಸಾರ ನಡೆಸುತ್ತಿದ್ದಾರೆ.

ಜಿ.ಎಸ್.ಬಿ. ಮಂಡಲ ಡೊಂಬವಲಿ ವತಿಯಿಂದ ಕಲ್ಯಾಣದಲ್ಲಿ ಸಾಮೂಹಿಕ ಚೂಡಿ ಪೂಜಾ ಹಾಗೂ ಶ್ರೀ ಸತ್ಯನಾರಾಯಣ ಪೂಜೆ
ಮುಂಬಯಿ, ಆ.30: ಜಿ.ಎಸ್.ಬಿ. ಮಂಡಲ ಡೊಂಬವಲಿ ವತಿಯಿಂದ 7ನೇ ವರ್ಷದ ಸಾಮೂಹಿಕ ಚೂಡಿ ಪೂಜೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯು ಕಲ್ಯಾಣ ಪೂರ್ವದ ಜಲರಾಮ್ ಸಭಾಗೃಹದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.

ಬೆಳಗ್ಗೆ ಗಂಟೆಗೆ ದೇವತಾ ಪ್ರಾರ್ಥನೆ ನಂತರ ಸಮಾಜದ ಸುಹಾಸಿನಿಯರಿಂದ ತುಳಸಿಮಾತೆಗೆ ವಿವಿಧ ಹೂಗಳಿಂದ ಕಟ್ಟಿಮಾಡಿದ ಚೂಡಿಯನ್ನಟ್ಟು ಪೂಜೆ ಮಾಡಿದರು.

ಆನಂತರ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಆರತಿ ಮತ್ತು ಪ್ರಸಾದ ವಿತರಣೆ ಮಾಡಲಿಯಿತು. ಈ ಸಂದರ್ಭದಲ್ಲಿ ಕಲ್ಯಾಣ ಮತ್ತು ಡೊಂಬವಲಿ ಆಸುಪಾಸಿನ ಸಮಾಜ ಭಾಂದವರು ಮತ್ತು ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದಶವಾರ್ಷಿಕ ಅಕ್ಕ ಸಮ್ಮೇಳನದಲ್ಲಿ ರಿಸರ್ವೇಶನ್ ಚಿತ್ರದ ಪ್ರದರ್ಶನ ಸಂವಾದ  ಕಾರ್ಯಕ್ರಮದಲ್ಲಿ ಚಿತ್ರ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ಭಾಗಿ

ಮುಬಯಿ, ಆ.30: ಅಮೆರಿಕಾದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದ ಶರಟನ್ ಕನ್ವೆನ್ಶನ್ ಸೆಂಟರ್‍ನಲ್ಲಿ ನಾಳೆಯಿಂದ (ಆ.31 ರಿಂದ) ಸೆ.2ರ ವರೆಗೆ ನಡೆಯಲಿರುವ ಅಮೆರಿಕ ಕನ್ನಡ ಕೂಟಗಳ ಆಗರ" ಅಕ್ಕ ಸಮ್ಮೇಳನ"ದಲ್ಲಿ ಗುಲ್ವಾಡಿ ಟಾಕೀಸ್ ಬ್ಯಾನರ್ ನಡಿ ಕುಂದಾಪ್ರ ಕನ್ನಡದಲ್ಲಿ ಸಿದ್ಧಗೊಂಡು ಕಳೆದ ಬಾರಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದು ದೇಶಾದ್ಯಂತ ಗಮನ ಸೆಳೆದಿದ್ದ  ರಿಸರ್ವೇಶನ್ ಚಿತ್ರದ ವಿಶೇಷ ಪ್ರದರ್ಶನ ನಡೆಯಲಿದೆ. ಹಾಗೂ ಇದೇ ಚಿತ್ರದ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಈಗಾಗಲೇ ಆಸ್ಟೇಲಿಯಾದ ಮೆಲ್ಬೋರ್ನ್ ಅಂತರಾಷ್ಟ್ರೀಯ ಚಿತ್ರೋತ್ಸವ, ಬಾಂಗ್ಲಾದೇಶದ ಢಾಕÀ ಅಂತರಾಷ್ಟ್ರೀಯ ಚಿತ್ರೋತ್ಸವ, ರಷ್ಯಾದ ಕಝಾನ್ ಅಂತರಾಷ್ಟ್ರೀಯ ಚಿತ್ರೋತ್ಸವ, ಭಾರತತ ಕೋಲ್ಕತ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಧಿಕೃತವಾಗಿ ಆಯ್ಕೆಯಾಗಿ ಪ್ರದರ್ಶನ ಕಂಡಿದ್ದಲ್ಲದೇ ಲಂಡನ್ನಿನ ಬ್ರಿಸ್ಟೆಲ್ ಕನ್ನಡಿಗರಿಗಾಗಿ ವಿಶೇಷ ಪ್ರದರ್ಶನ ಕೂಡ ಕಂಡಿದೆ ಈ ಚಿತ್ರವನ್ನು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದ ಯುವ ನಿರ್ದೇಶಕ ನಿಖಿಲ್ ಮಂಜೂ ಲಿಂಗೇಗೌಡ ನಿರ್ದೇಶಿಸಿದ್ದರೆ ಬಿ.ಶಿವಾನಂದ್, ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು ಚಿತ್ರ ಕಥೆಯ ಪ್ರಮುಖ ರೂವಾರಿಗಳು. ಸಮೀರ್ ಕುಲಕರ್ಣಿ ಚಿತ್ರಕ್ಕೆ ಸಂಗೀತ ನೀಡಿದ್ದು. ಆದಿತ್ಯ ಕುಣಿಗಲ್ ರವರ ಸಂಕಲನದಲ್ಲಿ ಕ್ಯಾಮರಾಮ್ಯಾನ್ ಪಿವಿಆರ್ ಸ್ವಾಮಿ ಚಿತ್ರದ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ.

ಬೆಸ್ಟ್ ಫೀಚರ್ ಫಿಲ್ಮ್ ಈ ಚಿತ್ರ ಪ್ರಾದೇಶಿಕ ಭಾಷಾ ವಿಭಾಗದಲ್ಲಿ 2017 ರಲ್ಲಿ ಕನ್ನಡದ ಅತ್ಯುತ್ತಮ ರೂಪಕ ಚಿತ್ರ (ಬೆಸ್ಟ್ ಫೀಚರ್ ಫಿಲ್ಮ್ (ರಜತ ಕಮಲ) ಮತ್ತು 2018 ರಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಬಿಫ್ಸ್) ನಲ್ಲಿ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದು ಕೊಂಡಿದೆ.

ವೃತ್ತಿಯಲ್ಲಿ ಗುಜರಿ ವ್ಯಾಪಾರಿಯಾಗಿರುವ ಯಾಕೂಬ್ ಖಾದರ್ ಗುಲ್ವಾಡಿ ಖುದ್ಧಾಗಿ ಚಿತ್ರ ಪದರ್ಶನದಲ್ಲಿ ನಾನು ಭಾಗಿವಹಿಸಲಿದ್ದಾರೆ. ಈಗಾಗಲೇ ಅಮೆರಿಕ, ಇಂಗ್ಲೆಂಡ್, ಕೆನಡ, ಸಿಂಗಾಪುರ, ಕಿನ್ಯಾ, ತಾಂಜಾನಿಯ, ಮಲೇಷಿಯಾ, ಸೌದಿ ಅರೇಬಿಯಾ, ದುಬೈ, ಒಮಾನ್, ಕತಾರ್, ಶ್ರೀಲಂಕಾ, ಮಾಲ್ಡೀವ್ಸ್-  ಬ್ಯಾಂಕಾಕ್ ಮುಂತಾದ ಸುಮಾರು ಹದಿನೈದು ದೇಶಗಳಿಗೆ ಕನ್ನಡ ಕಟ್ಟುವ ಕೆಲಸಕ್ಕಾಗಿ 25 ಕ್ಕೂ ಹೆಚ್ಚು ಬಾರಿ ವಿದೇಶಳಿಗೆ ಸುತ್ತಾಡಿದ ಯಾಕೂಬ್ ಗುಲ್ವಾಡಿ ಮೂರು ಪುಸ್ತಕಗಳನ್ನು ಬರೆದಿರುವರು.

ನನಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ (2016 ರಾಜ್ಯ ಪ್ರಶಸ್ತಿ) (2017 ರಲ್ಲಿ ರಿಸರ್ವೇಶನ್ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ) (2018 ರಲ್ಲಿ ರಿಸರ್ವೇಶನ್ ಚಿತ್ರಕ್ಕಾಗಿ ಬಿಫ್ಸ್ ಅಂತರಾಷ್ಟ್ರೀಯ ಪ್ರಶಸ್ತಿ). ಸತತ ಮೂರು ವರ್ಷ ಹ್ಯಾಟ್ರಿಕ್ ಪ್ರಶಸ್ತಿಗಳು ಬಂದಿವೆ ಅಲ್ಲದೇ ದೇಶ ವಿದೇಶಗಳ ಹಲವು ಕನ್ನಡ ಸಂಘಗಳು ಪ್ರಶಸ್ತಿ ನೀಡಿ ಗೌರವಿಸಿದೆ.  ಂಟಿಣiಛಿ ವಸ್ತುಗಳ ಸಂಗ್ರಹಕಾರರಾಗಿ *ರಾಷ್ಟ್ರ, ರಾಜ್ಯ ಪ್ರಶಸ್ತಿ ಪಡೆದ ಹಲವು ಚಲನ ಚಿತ್ರಗಳಿಗೆ ವಸ್ತ್ರ ವಿನ್ಯಾಸಕಾರರಾಗಿ ದುಡಿದಿದ್ದಲ್ಲದೆ ಗುಲ್ವಾಡಿ ಸಾಂಸ್ಕ್ರತಿಕ ಪ್ರತಿಷ್ಟಾನ ಸ್ಥಾಪಿಸಿ ಗುಲ್ವಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ವರ್ಷಕ್ಕೆರಡು ಸಾಹಿತ್ಯ-ಸಂಸ್ಕೃತಿ ಉತ್ಸವ ನಡೆಸುತ್ತಿರುವ ನಾನು  ಕರ್ನಾಟಕ ಚಲನ ಚಿತ್ರ ಪ್ರಶಸ್ತಿ ಕಮಿಟಿಯ ಸದಸ್ಯನಾಗಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯನಾಗಿ ಹತ್ತಾರು ವರ್ಷಗಳಿಂದ ಕೋಮು ಸೌಹಾರ್ದತೆಗೋಸ್ಕರ ತನ್ನನ್ನು ಸತತವಾಗಿ ತೊಡಗಿಸಿ ಕೊಂಡಿದ್ದಾರೆ.

ಸೆ.01: ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ
ಬಂಟರ ಸಂಘದ ಅಂಧೇರಿ ಬಾಂದ್ರಾ ಸಮಿತಿಯ `ದಿಶಾ’ ದತ್ತುಸ್ವೀಕಾರ ಕಾರ್ಯಕ್ರಮ
ಮುಂಬಯಿ, ಆ.29: ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕನಸಿನ ಕೂಸು `ದಿಶಾ’  ವಿದ್ಯಾಥಿರ್üಗಳ ದತ್ತು ಸ್ವೀಕಾರ ಕಾರ್ಯಕ್ರಮ ಇದೇ ಸೆ.01ರ ಮಧ್ಯಾಹ್ನ 2.30ರಿಂದ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ನಡೆಯಲಿದೆ.

ಈ ವರ್ಷ ಶೈಕ್ಷಣಿಕ ಸೇವೆಯಾಗಿಸಿ ವಿದ್ಯಾಥಿರ್üಗಳ ದತ್ತು ಸ್ವೀಕಾರದೊಂದಿಗೆ ಸಮಾಜಸೇವೆ ಮಾಡುವ ಧ್ಯೇಯೋದ್ದೇಶದ ಪಥದಲ್ಲಿ ಒಂದು ಹೆಜ್ಜೆ ಮುಂದಿರಿಸಿರುವ ಸಮಿತಿಯು ಅಂಧೇರಿ ಬಾಂದ್ರಾ ಪ್ರದೇಶದ ಸುತ್ತಮುತ್ತಲಿನ ಪರಿಸರದಲ್ಲಿ ಆಥಿರ್üಕವಾಗಿ ಹಿಂದುಳಿದ ಕುಟುಂಬಗಳನ್ನು ದತ್ತು ಸ್ವೀಕರಿಸಿ ಬದುಕು ಕಟ್ಟಿಕೊಳ್ಳಲು ಆಸರೆಯಾಗುವ ಸದುದ್ದೇಶ ಹೊಂದಿ ಆ ಕುಟುಂಬಕ್ಕೆ ಬೇಕಾದ ಅಗತ್ಯ ಸೌಲಭ್ಯವನ್ನು ಒದಗಿಸಿ ಸಹಾಯ ಹಸ್ತ  ನೀಡುವ ಯೋಜನೆ ಹಮ್ಮಿಕೊಂಡಿದ್ದೇವೆ.

ಬಂಟ್ಸ್ ಸಂಘದ ವಿಶ್ವಸ್ಥರು, ಪದಾಧಿಕಾರಿಗಳ ಉಪಸ್ಥಿತಿ ಮತ್ತು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮವನ್ನು ವಿಕೇ ಸಮೂಹದ ಕಾರ್ಯಾಧ್ಯಕ್ಷ ಕರುಣಾಕರ ಎಂ.ಶೆಟ್ಟಿ ಉದ್ಘಾಟಿಸಲಿದ್ದಾರೆ.

ಸಹೃದಯತೆಯ ಈ ಕಾರ್ಯದಲ್ಲಿ  ಅಂಧೇರಿ ಬಾಂದ್ರಾ ಪ್ರದೇಶದ ಜನತೆಯ ಉಪಸ್ಥಿತಿ ನಮ್ಮ ಉತ್ಸಾಹಕ್ಕೆ ಪ್ರೇರಣೆ ನೀಡಲಿದೆ. ಪರಹಿತ ಚಿಂತನೆ ನಮ್ಮ ನೈತಿಕ ಜವಾಬ್ದಾರಿ ಅದು ನಮ್ಮ ಕರ್ತವ್ಯ ಎಂದು ತಿಳಿದು ನಿಷ್ಠೆಯಿಂದ ಮುಂದಡಿಯಿಡುವ ಈ  ಸತ್ಕಾರ್ಯಕ್ಕೆ ಪೆÇ್ರೀತ್ಸಾಹಿಸ ಬೇಕಾಗಿ ಬಂಟರ ಸಂಘಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ.ಶೆಟ್ಟಿ, ಗೌರವ ಕಾರ್ಯದರ್ಶಿ ರವಿ ಆರ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂದ, ಯುವ ವಿಭಾಗದ ಕಾರ್ಯಾಧ್ಯಕ್ಷ ರಕ್ಷಿತ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಪದಾಧಿಕಾರಿಗಳು ಈ ಮೂಲಕ ತಿಳಿಸಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi