Brief University College news with pictures
Kemmannu News Network, 04-10-2018 16:24:59
“ಗಾಂಧಿ ಜಯಂತಿ ರಾಷ್ಟ್ರೀಯ ಉತ್ಸವವಾಗಿ ಉಳಿದುಕೊಂಡಿಲ್ಲ”
ಮಂಗಳೂರು, ಅಕ್ಟೋಬರ್ 2: ಮಹಾತ್ಮಾ ಗಾಂಧಿ ತಮ್ಮ ಬದುಕನ್ನೇ ಪ್ರಯೋಗವಾಗಿಸಿಕೊಂಡು ತಪ್ಪುಗಳನ್ನು ತಿದ್ದಿಕೊಂಡರು. ನುಡಿದಂತೆ ನಡೆದು ತೋರಿಸಿದರು. ಇಂದಿನ ಜನರಿಗೆ ಗಾಂಧಿ ಬೇಕಾದರೂ ಅವರು ಜಗತ್ತಿಗೆ ನೀಡಿದ ತತ್ವಗಳು ಬೇಡವಾಗಿವೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಹಿರಿಯ ಕನ್ನಡ ಪ್ರಾಧ್ಯಾಪಕ ಡಾ. ನಾಗಪ್ಪ ಗೌಡ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ ರಿಬ್ಬನ್ ಕ್ಲಬ್ ಮಂಗಳವಾರದಂದು ಕಾರಂತ ಸಭಾಭವನದಲ್ಲಿ ಏರ್ಪಡಿಸಿದ್ದ ಮಹಾತ್ಮಾ ಗಾಂಧೀಜಿಯವರ 149ನೇ ಜನ್ಮದಿನೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ನಾಗಪ್ಪ ಗೌಡ, ಗಾಂಧಿ ಜಯಂತಿ ಅಹಿಂಸಾ ದಿನಾಚರಣೆಯೂ ಹೌದು. ಆದರೆ ಇದು ಈಗ ರಾಷ್ಟ್ರೀಯ ಉತ್ಸವವಾಗಿ ಉಳಿದುಕೊಂಡಿಲ್ಲ. ಮಹಾತ್ಮರ ಗ್ರಾಮಭಾರತ, ರಾಮರಾಜ್ಯದ ಕನಸನ್ನು ನನಸಾಗಿಸಬೇಕಿದೆ. ಅಂತರಂಗ ಶುದ್ಧಿ ಅಗತ್ಯವಾಗಿದೆ, ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಉದಯ್ ಕುಮಾರ್ ಎಂ.ಎ, ಬೆಂಕಿಯಂತಹ ದ್ವೇಷದಿಂದ ಸಾಧಿಸಲಾಗದ್ದನ್ನು ಪ್ರೀತಿಯೆಂಬ ಬೆಳಕಿನಿಂದ ಸಾಧಿಸಬಹುದು. ಮಹಾತ್ಮ ಗಾಂಧಿ ಪ್ರೀತಿ, ಸಹನೆ, ಸತ್ಯ, ಅಹಿಂಸೆಯನ್ನೇ ಅಸ್ತ್ರವಾಗಿಸಿಕೊಂಡರು, ಎಂದರು. ಜೀವನದಲ್ಲಿ ನಿಜವಾದ ಸ್ವರ್ಗಪ್ರಾಪ್ತಿ ಶಿಕ್ಷಣದಿಂದ ಮಾತ್ರ ಸಾಧ್ಯ. ಆದರೆ ದೊರೆತ ಶಿಕ್ಷಣವನ್ನು ಸಮಾಜಕ್ಕಾಗಿ ಬಳಸಿಕೊಳ್ಳಬೇಕು. ಯಾರ ಬಗ್ಗೆಯೂ ಪೂರ್ವಾಗ್ರಹ ಪೀಡಿತರಾಗದವರಿಗೆ ಗಾಂಧಿ ಪ್ರಾಪ್ತಿಯಾಗಬಹುದು, ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಹಾಗೂ ರೆಡ್ ರಿಬ್ಬನ್ ಕ್ಲಬ್ನ ಉಪಾಧ್ಯಕ್ಷೆ ಡಾ. ಭಾರತಿ ಪಿಲಾರ್ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಘಟಕಾಧಿಕಾರಿ ಡಾ. ಸಂಜಯ್ ಅಣ್ಣಾರಾವ್ ವಂದಿಸಿದರು. ಕುಮಾರಿ ಅಕ್ಷ್ಮಿತಾ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ತೆರಳಿ ಶ್ರಮಾದಾನ ಮಾಡಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮುಗಿಯಿತು...
‘ಶಿಕ್ಷಕರು, ಪತ್ರಕರ್ತರು ಜವಾಬ್ದಾರಿಯೊಂದಿಗೆ ರಾಜಿ ಮಾಡಿಕೊಳ್ಳಬಾರದು’ - ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ವಕೀಲ, ಸಾಹಿತಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಮಂಗಳೂರು, ಅಕ್ಟೋಬರ್ 3, 2018: ದೇಶದಲ್ಲಿ ಯಾವುದರ ಬಗ್ಗೆಯೂ ಮಾತನಾಡಲಾಗದ, ನಿಲುವು ತಾಳಲಾಗದ ಪರಿಸ್ಥಿತಿಯಿದೆ. ಇಂತಹ ಪರಿಸ್ಥಿತಿಯಲ್ಲಿ ಹೊಣೆಗೇಡಿ ರಾಜಕಾರಣಿಗಳನ್ನು ಸರಿ ದಾರಿಗೆ ತರುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಶಿಕ್ಷಕರು, ಮಾಧ್ಯಮದವರೂ ತಮ್ಮ ಜವಾಬ್ದಾರಿ ಮರೆತರೆ ದೇಶ ಉಳಿಸಬೇಕಾದ ಕರ್ತವ್ಯ ನ್ಯಾಯಾಂಗದ ಮೇಲಿರುತ್ತದೆ, ಎಂದು ಖ್ಯಾತ ವಕೀಲ ಮತ್ತು ಸಾಹಿತಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯ ಕಾಲೇಜಿನ ಮಾನವಿಕ ಸಂಘ ಮತ್ತು ಮಾಧ್ಯಮ ವೇದಿಕೆಯ ಜಂಟಿ ಆಶ್ರಯದಲ್ಲಿ ಬುಧವಾರದಂದು ರವೀಂದ್ರ ಕಲಾಭವನದಲ್ಲಿ ಆಯೋಜಿಸಲಾಗಿದ್ದ ‘ತಿಳಿವ ತೇಜದ ನುಡಿ’ ಮಾತುಕತೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಕರು ಮತ್ತು ಪತ್ರಕರ್ತರು ತಮ್ಮ ಜವಾಬ್ದಾರಿಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಬಾರದು. ಪತ್ರಕರ್ತರು ನ್ಯಾಯಾಲಯದ ತೀರ್ಪುಗಳ ಕುರಿತು ಬರೆಯುವ ಮೊದಲು ಕಾನೂನು ಸಲಹೆಗಾರರನ್ನು ಸಂಪರ್ಕಿಸುವುದು ಅಗತ್ಯ, ಎಂದರು.
ಸುಪ್ರೀಂಕೋರ್ಟ್ ನ ಇತ್ತೀಚಿನ ಕೆಲವು ತೀರ್ಪುಗಳನ್ನು ದುರದೃಷ್ಟಕರ ಎಂದು ಬಣ್ಣಿಸಿದ ಅವರು ನ್ಯಾಯಾಲಯ ಇನ್ನಷ್ಟು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬಹುದಿತ್ತು. ಸರ್ಕಾರೀ ಸೌಲಭ್ಯ ಪಡೆಯುವುದು ವ್ಯಕ್ತಿಯ ಮೂಲಭೂತ ಹಕ್ಕು. ಅದಕ್ಕೆ ಆಧಾರ್ನ ಅಗತ್ಯವೇಕೆ? ಅನೈತಿಕ ಸಂಬಂಧಗಳಿಗೆ ದಾರಿ ಮಾಡಿಕೊಡುವುದರಿಂದ ಆಗುವ ಪರಿಣಾಮಗಳೇನು? ಸಮಾನತೆಯ ಹೆಸರಲ್ಲಿ ಪುರುಷರನ್ನೇ ದೂಷಿಸುವುದೇಕೆ? ಧಾರ್ಮಿಕ ವಿಧಿವಿಧಾನಗಳಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಸರಿಯೇ? ಎಂಬ ಹಲವು ಜಿಜ್ಞಾಸೆಗಳನ್ನು ಹುಟ್ಟುಹಾಕಿದರು. ಇದೇ ವೇಳೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಒಂದು ಮಿತಿಯಿದೆ ಎಂದು ಎಚ್ಚರಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಸಂವಾದ ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ.ಎ ಅಧ್ಯಕ್ಷತೆ ವಹಿಸಿದ್ದರು. ಮಾಧ್ಯಮ ವೇದಿಕೆಯ ಉಪಾಧ್ಯಕ್ಷ ಡಾ. ಗಣಪತಿ ಗೌಡ ಸ್ವಾಗತಿಸಿದರು, ಮಾನವಿಕ ಸಂಘದ ಉಪಾಧ್ಯಕ್ಷ ಡಾ. ಲತಾ ಎ. ಪಂಡಿತ್ ಧನ್ಯವಾದ ಸಮರ್ಪಿಸಿದರು.
***
ಅಕ್ಟೋಬರ್ 5 ರಂದು ವಿದ್ಯಾರ್ಥಿಗಳಿಗಾಗಿ ವಚನಾಭಿರುಚಿ ಕಮ್ಮಟ
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಸಂಘದ ವತಿಯಿಂದ ಅಕ್ಟೋಬರ್ 5 ರಂದು ಬೆಳಿಗ್ಗೆ 9.30ಕ್ಕೆ ಶಿವರಾಮ ಕಾರಂತ ಸಭಾಭವನದಲ್ಲಿ ವಿದ್ಯಾರ್ಥಿಗಳಿಗಾಗಿ ವಚನಾಭಿರುಚಿ ಕಮ್ಮಟವನ್ನು ಆಯೋಜಿಸಲಾಗಿದೆ.
ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ನಾ. ದಾಮೋದರ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ.ಎ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಸುಧಾರಾಣಿ ಮತ್ತು ಪ್ರಜಾವಾಣಿಯ ಪತ್ರಕರ್ತರಾದ ರಾಜಲಕ್ಷ್ಮೀ ಕೊಡಿಬೆಟ್ಟು ಭಾಗವಹಿಸಲಿದ್ದಾರೆ.
ಪತ್ರಿಕಾ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಚಾರ ನೀಡಬೇಕಾಗಿ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಡಾ. ಉದಯ ಕುಮಾರ್ ಎಂ.ಎ, ಪ್ರಾಂಶುಪಾಲ,ಇ-ಮೇಲ್: uಛಿmಚಿಟಿgಚಿಟoಡಿe1@gmಚಿiಟ.ಛಿom, ಫೋನ್: 0824- 2424760
ಡಾ. ರತ್ನಾವತಿ ಟಿ, ಕನ್ನಡ ವಿಭಾಗದ ಮುಖ್ಯಸ್ಥರು, ಫೋನ್: 9480075307.
ಹಿಂದಿ ಸ್ನಾತಕೋತ್ತರ: ಅತೀ ಹೆಚ್ಚು ಅಂಕ, ಸನ್ಮಾನ
ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ದೂರ ಶಿಕ್ಷಣ ಕೇಂದ್ರದಲ್ಲಿ 2015-17 ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳೊಂದಿಗೆ ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಶ್ರೀಮತಿ ಶುಭಾ ನಾಯಕ್ (43) ರಿಗೆ ಜಿಎಸ್ಬಿ ಕೊಂಕಣಿ ಸಮುದಾಯ ಉಡುಪಿಯಲ್ಲಿ ಸಧ್ಯದಲ್ಲೇ ನಡೆಯಲಿರುವ ಕಾರ್ಯಕ್ರಮದಲ್ಲಿ ಪುರಸ್ಕರಿಸಲು ತೀರ್ಮಾನಿಸಿದೆ. ಕಾಲೇಜಿಗೆ ದೂರ ಶಿಕ್ಷಣ ಕೇಂದ್ರ ಆರಂಭಿಸಲು ಅನುಮತಿ ದೊರೆತ ಮೇಲೆ ಹಿಂದಿ ಸ್ನಾತಕೋತ್ತರ ಪದವಿಗೆ ಸೇರಿದ 31 ಮಂದಿಯ ಮೊದಲ ಬ್ಯಾಚ್ನಲ್ಲಿ ಇವರು ಅತೀ ಹೆಚ್ಚು ಅಂಕ ಪಡೆದಿದ್ದರು. ಸದ್ಯ ಬೆಳ್ತಂಗಡಿಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯದಲ್ಲಿ ವಾರ್ಡನ್ ಆಗಿರುವ ಶುಭಾ ನಾಯಕ್, ಹೆಬ್ರಿ ಹರಿದಾಸ್-ಭಾರತಿ ದಂಪತಿಯ ಪುತ್ರಿ ಮತ್ತು ಮೂಲ್ಕಿಯ ಗಿರೀಶ್ ನಾಯ್ಕ್ರ ಪತ್ನಿ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, Kemmannu
Annual Church Feast 2024 | St. Theresa’s Church, Kemmannu
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link