ಭಾರತ್ ಬ್ಯಾಂಕ್ ನಿರ್ದೇಶಕ ಮಂಡಳಿಗೆ ನಡೆಸಲ್ಪಟ್ಟ ಚುನಾವಣೆ - ಭರ್ಜರಿ ಜಯಭೇರಿ ಸಾಧಿಸಿದ ಜಯ ಸಿ.ಸುವರ್ಣ ಬಳಗ
Kemmannu News Network, 08-10-2018 05:54:02
ಭಾರತ್ ಬ್ಯಾಂಕ್ ನಿರ್ದೇಶಕ ಮಂಡಳಿಗೆ ನಡೆಸಲ್ಪಟ್ಟ ಚುನಾವಣೆ ಮೂರು ರಾಜ್ಯಗಳ 45 ಮತದಾನ ಕೇಂದ್ರಗಳಲ್ಲಿ ನಡೆದ ಚುನಾವಣಾ ಪ್ರಕ್ರಿಯೆ
ಮುಂಬಯಿ, ಅ.02: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ರಾಷ್ಟ್ರದ ಪ್ರತಿಷ್ಠಿತ ಹಣಕಾಸು ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 2018-2021ರ ಸಾಲಿನ ನಿರ್ದೇಶಕ ಮಂಡಳಿಗೆ ಸ್ಪರ್ಧೆ ಏರ್ಪಟ್ಟ ಕಾರಣ ಇಂದಿಲ್ಲಿ ಮಂಗಳವಾರ ಚುನಾವಣೆ ನಡೆಸಲ್ಪಟ್ಟಿತು. ಒಟ್ಟು ಇಪ್ಪತ್ತೆರಡು ಸ್ಥಾನಗಳಿರುವ ಬ್ಯಾಂಕ್ನ ನಿರ್ದೇಶಕ ಮಂಡಳಿಗೆ ಇಬ್ಬರು ಮಹಿಳಾ ಸದಸ್ಯೆಯರು, ಇಬ್ಬರು ಸಹ ಸದಸ್ಯರು (ಕೋ.ಆಪ್ಟೆಡ್) ಮತ್ತು ಒಂದು ಹಿಂದುಳಿದ ಜಾತಿ ಮತ್ತು ಪರಿಶಿಷ್ಟ ವರ್ಗದ ಸ್ಥಾನಗಳನ್ನು ಹೊರತು ಪಡಿಸಿ ಉಳಿದ ಹದಿನೇಳು ಸ್ಥಾನಗಳಿಗೆ ಹತ್ತೊಂಬತ್ತು ಆಕಾಂಕ್ಷಿಗಳು ಕಣದಲ್ಲಿದ್ದು ಹೆಚ್ಚುವರಿ ಎರಡು ಉಮೇದುವಾರರ ನಿಮಿತ್ತ ಚುನಾವಣೆ ಏರ್ಪಟ್ಟಿತು.
ಭಾರತ್ ಬ್ಯಾಂಕ್ ಒಟ್ಟು 102 ಶಾಖೆಗಳನ್ನು ಹೊಂದಿದ್ದು ಮಲ್ಟಿಸ್ಟೇಟ್ ಬ್ಯಾಂಕ್ ಆಗಿ ದೇಶದ ಮೂರು ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಕಾರ್ಯನಿರ್ವಾಹಿಸುತ್ತಿದ್ದು, ಬ್ಯಾಂಕ್ ಮಂಡಳಿಗೆ ಚುನಾವಣೆ ಮೂಲಕವೇ ಆಯ್ಕೆಪ್ರÀಕ್ರಿಯೆ ನಡೆಸುವುದು ಅನಿವಾರ್ಯ ಆಯಿತೆಂದು ಬಲ್ಲ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ರಾಜ್ಯದ ವಿಶೇಷವಾಗಿ ಮುಂಬಯಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಶಾಖೆಗಳಂತೆ 13 ಮತದಾನ ಕೇಂದ್ರಗಳು ಮತ್ತು ಸ್ಥಾನೀಯ ಶಾಲೆಗಳಲ್ಲಿ 11 ಮತದಾನ ಕೇಂದ್ರಗಳು, ಕರ್ನಾಟಕ ರಾಜ್ಯದ ಬೆಂಗಳೂರುನಲ್ಲಿ 4 ಮತದಾನ ಕೇಂದ್ರಗಳು, ಮಂಗಳೂರುನಲ್ಲಿ 10 ಮತದಾನ ಕೇಂದ್ರಗಳು, ಬೆಳಗಾವಿಯಲ್ಲಿ 1 ಮತ್ತು ಹುಬ್ಬಳ್ಳಿನಲ್ಲಿ 1 ಮತದಾನ ಕೇಂದ್ರ, ಹಾಗೂ ಗುಜರಾತ್ ರಾಜ್ಯದಲ್ಲಿ 5 ಮತದಾನ ಹೀಗೆ ಒಟ್ಟು 45 ಕೇಂದ್ರಗಳನ್ನು ರಚಿಸಿ ಬ್ಯಾಂಕ್ನ ಷೇರುದಾರರಿಗೆ ಚುನಾವಣಾ ಅಧಿಕಾರಿಗಳು ಮತದಾನ ಮಾಡುವ ವ್ಯವಸ್ಥೆ ಮಾಡಿದ್ದರು. ಬಹುತೇಕವಾಗಿ ಎಲ್ಲಾ ಮತದಾನ ಕೇಂಂದ್ರಗಳಲ್ಲಿ ಬಿರುಸಿನ ಮತ್ತು ಶಾಂತಿಯುತ ಮತದಾನ ನಡೆದಿದ್ದು ಆಸಕ್ತ ಯುವಕರು ಮತ್ತು ನೂರಾರು ಹಿರಿಯ ನಾಗರೀಕರೂ ಬೆಳಗಿನಿಂದಲೇ ಆಯಾಯ ಮತದಾನ ಕೇಂದ್ರಕ್ಕೆ ಸ್ಪಚ್ಛೆಯಿಂದಲೇ ಆಗಮಿಸಿ ಮತದಾನಗೈದರು.
ಬ್ಯಾಂಕ್ ಮಂಡಳಿಗೆ ಹಿಂದುಳಿದ ಜಾತಿ ಮತ್ತು ಪರಿಶಿಷ್ಟ ವರ್ಗದ ಸದಸ್ಯತ್ವ ಮತ್ತು ಇಬ್ಬರು ಮಹಿಳಾ ಸ್ಥಾನಗಳಿಗೆ ಹೊರತು ಪಡಿಸಿ ಉಳಿದ ಸಾಮಾನ್ಯ ವಿಭಾಗದ 17 ಸದಸ್ಯತ್ವಕಾಗಿ ಒಟ್ಟು 19 ಅಭ್ಯಥಿರ್üಗಳು ಕಣದಲ್ಲಿದ್ದರು. ಆ ಪಯ್ಕಿ ಅವಿೂನ್ ಲಿಂಗಪ್ಪ ವೆಂಕಪ್ಪ, ಅವಿೂನ್ ಸೋಮನಾಥ್ ಬಾಬು, ಸತೀಶ್ ಎನ್.ಬಂಗೇರ, ಕೋಟ್ಯಾನ್ ಜಯ ಐತಪ್ಪ, ಕೋಟ್ಯಾನ್ ಪ್ರೇಮನಾಥ್ ಪ್ರಮೇಶ್ವರ್, ಕೋಟ್ಯಾನ್ ಪುರುಷೋತ್ತಮ್ ಶ್ರೀನಿವಾಸ್, ಕೋಟ್ಯಾನ್ ವಾಸುದೇವ ರಾಜು, ಕುಂದರ್ ದಾಮೋದರ್ ಚಂದು, ಪೂಜಾರಿ ನಾರಾಯಣ ತಿಮ್ಮ, ಪೂಜಾರಿ ಗಂಗಾಧರ್ ಜಾರಪ್ಪ, ಪೂಜಾರಿ ಕೊರಗಪ್ಪ ಬೂಬ, ಪೂಜಾರಿ ಮೋಹನ್ದಾಸ್ ಅಂಗರ, ಪೂಜಾರಿ ಶಿವಾಜಿ ಉಪ್ಪೂರು, ಸಾಲ್ಯಾನ್ ಬಾಸ್ಕರ್ ಮುದ್ದು, ಸುವರ್ಣ ಜಯ ಚಂದು, ಸುವರ್ಣ ಜ್ಯೋತಿ ಕೃಷ್ಣ, ಸುವರ್ಣ ನಾರಾಯಣ ಕಾರ್ನಾಡ್, ಸುವರ್ಣ ರೋಹಿತ್ ಮೋಹನ್ಚಂದ್ರ, ಸುವರ್ಣ ಸೂರ್ಯಕಾಂತ್ ಜಯ ಸ್ಪರ್ಧಿಸಿದ್ದರು.
ಬೆಳಿಗ್ಗಿನಿಂದ ಸಂಜೆ ವರೆಗೆ ನಡೆದ ಮತದಾನದಲ್ಲಿ ಸುಮಾರು 13,958 ಮತಗಳು ಚಲಾವಣೆ ಗೊಂಡಿರುವ ಬಗ್ಗೆ ತಿಳಿದಿದ್ದು, ಇದೇ ಗುರುವಾರ (ಅ.04) ಮುಂಬಯಿನಲ್ಲಿ ಮತಎಣಿಕೆ ನಡೆಸಿ ಸ್ಪರ್ಧಿಗಳ ಫಲಿತಾಂಶ ಪ್ರಕಟವಾಗಲಿ ದ್ದು, ಅ.05ನೇ ಶುಕ್ರವಾರ ಒಟ್ಟು ನೂತನ ಬ್ಯಾಂಕ್ ಮಂಡಳಿಯ ಫಲಿತಾಂಶ ಚುನಾವಣಾಧಿಕಾರಿಗಳು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಭಾರತ್ ಬ್ಯಾಂಕ್ನ 2018-2021ರ ಸಾಲಿನ ನಿರ್ದೇಶಕ ಮಂಡಳಿಯ ಚುನಾವಣೆ ಭರ್ಜರಿ ಜಯಭೇರಿ ಸಾಧಿಸಿದ ಜಯ ಸಿ.ಸುವರ್ಣ ಬಳಗ
ಮುಂಬಯಿ, ಅ.04: ರಾಷ್ಟ್ರದ ಪ್ರತಿಷ್ಠಿತ ಹಣಕಾಸು ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 2018-2021ರ ಸಾಲಿನ ನಿರ್ದೇಶಕ ಮಂಡಳಿಗೆ ಬ್ಯಾಂಕ್ನ ಸರ್ವಾಂಗೀಣ ಅಭಿವೃದ್ಧಿಯ ರೂವಾರಿ, ಹಾಲಿ ಕಾರ್ಯಧ್ಯಕ್ಷ ಜಯ ಸಿ.ಸುವರ್ಣ ಅವರ ಬಳಗ ಎಲ್ಲಾ ಸ್ಪರ್ಧಿಗಳು ಭಾರೀ ಮತಗಳಿಂದ ಭರ್ಜರಿ ಜಯಭೇರಿ ಸಾಧಿಸಿದೆ.
ಇಂದಿಲ್ಲಿ ಗುರುವಾರ ಗೋರೆಗಾಂವ್ ಪೂರ್ವದ ಬ್ರಿಜ್ವಾಸಿ ಪ್ಯಾಲೇಸ್ ಸಭಾಗೃಹದಲ್ಲಿ ನಡೆಸಲ್ಪಟ್ಟ ಮತ ಎಣಿಕೆಯಲ್ಲಿ ದೇಶದ ಮೂರು ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ನಲ್ಲಿ ಕಳೆದ ಮಂಗಳವಾರ ನಡೆದ ಚುನಾವಣೆಯ ಓಟಿನ ಚೀಟಿಗಳುಳ್ಳ (ಬ್ಯಾಲೆಟ್ ಪೇಪರ್) ಮತಪೆಟ್ಟಿಗೆಗಳನ್ನು ಭದ್ರತಾಧಿಕಾರಿಗಳು, ಚುನಾವಣಾಧಿಕಾರಿಗಳು ಮತ್ತು ಆಕಾಂಕ್ಷಿಗÀಳೆಲ್ಲರ ಸಮ್ಮುಖದಲ್ಲೇ ತೆರೆದು ಮುಖ್ಯ ಚುನಾವಣಾಧಿಕಾರಿ ಆಗಿದ್ದ ಕೋ.ಆಪರೇಟಿವ್ ಸೊಸೈಟಿ ಹೆಚ್ಚುವರಿ ರಿಜಿಸ್ತ್ರಾರ್ ಎ.ಕೆ ಚವ್ಹಾಣ್ ತನ್ನ ನೇತೃತ್ವದಲ್ಲಿ ಬೆಳಿಗ್ಗಿನಿಂದ ಮತ ಎಣಿಕೆ ನಡೆಸಿದರು.
ಸಂಜೆ ತನಕ ಭಾರತ್ ಬ್ಯಾಂಕ್ನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಉಪಸ್ಥಿತಿಯಲ್ಲಿ ಎ.ಕೆ ಚವ್ಹಾಣ್ ಮತದಾನ ಫಲಿತಾಂಶ ಘೋಷಿಸಿ ವಿಜೇತರ ಯಾದಿ ಪ್ರಕಟಿಸಿದ್ದು ಹದಿನೇಳು ಸ್ಥಾನಗಳಿಗೆ ಹತ್ತೊಂಬತ್ತು ಆಕಾಂಕ್ಷಿಗಳು ಕಣದಲ್ಲಿದ್ದು ಹೆಚ್ಚುವರಿ ಎರಡು ಸ್ಪರ್ಧಿಗಳ ನಿಮಿತ್ತ ನಡೆದ ಚುನಾವಣೆಯಲ್ಲಿ ಜಯ ಸುವರ್ಣರ ತಂಡದ ಪ್ರತಿಸ್ಪರ್ಧಿ ಬ್ಯಾಂಕ್ನ ಮಾಜಿ ನಿರ್ದೇಶಕ ರೋಹಿತ್ ಎಂ.ಸುವರ್ಣ 2,871 ಮತಗಳೊಂದಿಗೆ ಸ್ಥಾನ ಕಳಕೊಂಡರೆ ಇದೇ ಬ್ಯಾಂಕ್ನಲ್ಲೇ ಉದ್ಯೋಗಿಯಾಗಿದ್ದು ನಿವೃತ್ತಿಯಾಗಿ ನಿರ್ದೇಶಕ ಮಂಡಳಿಗೆ ಸವಾಲೆರೆದು ಸ್ಪರ್ಧಿಸಿದ ಸತೀಶ್ ಎನ್.ಬಂಗೇರ 2,672 ಮತಗಳನ್ನು ಗಳಿಸುವುದರೊಂದಿಗೆ ಸೋಲುಂಡು ತೀವ್ರ ಮುಖಭಂಗ ಅನುಭವಿಸುವಂತಾಯಿತು.
ವಿಜೇತರಲ್ಲಿ ಎಲ್.ವಿ ಅವಿೂನ್ (12,685) ಮತಗಳನ್ನು ಪಡೆದರೆ, ನ್ಯಾ| ಎಸ್.ಬಿ ಅವಿೂನ್ (12,213), ಜೆ.ಎ ಕೋಟ್ಯಾನ್ (12,560), ಪ್ರೇಮನಾಥ್ ಪಿ.ಕೋಟ್ಯಾನ್ (12,467), ಪುರುಷೋತ್ತಮ ಎಸ್.ಕೋಟ್ಯಾನ್ (12,673), ವಾಸುದೇವ ಆರ್.ಕೋಟ್ಯಾನ್ (12,684), ದಾಮೋದರ ಸಿ.ಕುಂದರ್ (12,543), ಎನ್.ಟಿ ಪೂಜಾರಿ (12,803), ಗಂಗಾಧರ್ ಜೆ.ಪೂಜಾರಿ (12,741), ಕೆ.ಬಿ ಪೂಜಾರಿ (12,645), ಮೋಹನ್ದಾಸ್ ಎ.ಪೂಜಾರಿ (12,652), ಯು.ಎಸ್ ಪೂಜಾರಿ (12,540), ಭಾಸ್ಕರ್ ಎಂ.ಸಾಲ್ಯಾನ್ (12,620), ಜಯ ಸಿ.ಸುವರ್ಣ (12,729), ಜ್ಯೋತಿ ಕೆ.ಸುವರ್ಣ (12,503), ಕೆ. ಎನ್ ಸುವರ್ಣ(12,039), ಸೂರ್ಯಕಾಂತ್ ಜೆ.ಸುವರ್ಣ (11,863) ಮತಗಳನ್ನು ಪಡೆದು ವಿಜೇತರಾದರು.
ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಈ ಮೂರು ರಾಜ್ಯಗಳಲ್ಲಿನ ಬ್ಯಾಂಕ್ ಕಾರ್ಯಾಚರಣಾ ಪ್ರದೇಶಗಳಲ್ಲಿ ಒಟ್ಟು 45 ಕೇಂದ್ರಗಳನ್ನು ರಚಿಸಿ ಬ್ಯಾಂಕ್ನ ಷೇರುದಾರರಿಗೆ ಮತದಾನ ಮಾಡುವ ಅವಕಾಶ ಒದಗಿಸಲಾಗಿತ್ತು. ಎಲ್ಲೆಡೆ ಸೇರಿ ಒಟ್ಟು 13,958 ಮತಗಳು ಚಲಾವಣೆ ಗೊಂಡಿವೆ ಎಂದು ಚುನಾವಣಾಧಿಕಾರಿ ಚವ್ಹಾಣ್ ಮಾಹಿತಿ ನೀಡಿದರು. ಸಂದೀಪ್ ದೇಶ್ಮುಖ್, ಬಿ.ಡಿಗೋಸ್ವಾಮಿ, ಡಾ| ರಾಜರಾಮ್ ಧೊಣ್ಕರ್ ಮತ್ತು ವಿದ್ಯಾನಂದ ಎಸ್.ಕರ್ಕೇರ ಹೆಚ್ಚುವರಿ ಚುನಾವಣಾಧಿಕಾರಿಗಳಾಗಿದ್ದು ಮತಎಣಿಕಾ ಪ್ರಕ್ರಿಯೆಯಲ್ಲಿ ಸಹಕರಿಸಿದ್ದರು.
ಒಟ್ಟು ಇಪ್ಪತ್ತೆರಡು ಸ್ಥಾನಗಳಿರುವ ಬ್ಯಾಂಕ್ನ ನಿರ್ದೇಶಕ ಮಂಡಳಿಗೆ ಇಬ್ಬರು ಮಹಿಳಾ ಸದಸ್ಯೆಯರು, ಇಬ್ಬರು ಸಹ ಸದಸ್ಯರು (ಕೋ.ಆಪ್ಟೆಡ್) ಮತ್ತು ಒಂದು ಹಿಂದುಳಿದ ಜಾತಿ ಮತ್ತು ಪರಿಶಿಷ್ಟ ವರ್ಗದ ಸ್ಥಾನಗಳನ್ನು ಹೊರತು ಪಡಿಸಿ ಉಳಿದ ಸ್ಥಾನಗಳಿಗೆ ಮತದಾನ ನಡೆಸಲಾಗಿತ್ತು. ಇಂದು ಶುಕ್ರವಾರ (ಅ.05) ಬ್ಯಾಂಕ್ನ 2018-2021ರ ಸಾಲಿನ ಒಟ್ಟು ಮಂಡಳಿಯನ್ನು ಚುನಾವಣಾಧಿಕಾರಿ ಅಧಿಕೃತವಾಗಿ ಪ್ರಕಟಿಸಲಿರುವರು ಎಂದು ಬ್ಯಾಂಕ್ನ ಉನ್ನತ ಮೂಲಗಳು ತಿಳಿಸಿವೆ.
ಜಯ ಸುವರ್ಣರ ಅಭಿಮಾನಿ-ಹಿತೈಷಿಗಳಿಂದ ಸಂಭ್ರಮಾಚರಣೆ:
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ರಾಷ್ಟ್ರದ ಪ್ರತಿಷ್ಠಿತ ಹಣಕಾಸು ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಆಗಿ ಹೆಗ್ಗಳಿಕೆಗೆ ಪಾತ್ರವಾದ ಬ್ಯಾಂಂಕ್ನ ಚುನಾವಣೆ ಶಾಂತಿಯುತವಾಗಿಯೇ ನಡೆಸಲ್ಪಟ್ಟ ಕಾರಣ ಅಸೋಸಿಯೇಶನ್ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಎಲ್ಲಾ ಮತದಾರರನ್ನು,ಚುನಾವಣಾಧಿಕಾರಿ, ಸಿಬ್ಬಂದಿಗಳನ್ನು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ ಎಲ್ಲರನ್ನೂ ಅಭಿವಂದಿಸಿದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್ನ ಉಪಾಧ್ಯಕ್ಷರುಗಳಾದ ಹರೀಶ್ ಜಿ.ಅವಿೂನ್, ದಯಾನಂದ್ ಆರ್. ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎನ್.ಕೋಟ್ಯಾನ್ ಸೇರಿದಂತೆ ಇತರೇ ಪದಾಧಿಕಾರಿಗಳು, ಸದಸ್ಯರನೇಕರು ಬ್ಯಾಂಕ್ನ ಮಾಜಿ ನಿರ್ದೇಶಕರಾದ ನ್ಯಾ| ರೋಹಿಣಿ ಜೆ.ಸಾಲ್ಯಾನ್, ಎನ್.ಎಂ ಸನಿಲ್, ಜಗನ್ನಾಥ್ ವಿ. ಕೋಟ್ಯಾನ್, ನ್ಯಾ| ರಾಜಾ ವಿ.ಸಾಲ್ಯಾನ್, ಅನ್ಭಲ್ಗನ್ ಸಿ.ಹರಿಜನ್, ಹೊಟೇಲು ಉದ್ಯಮಿಗಳಾದ ರವಿ ಎಸ್.ಶೆಟ್ಟಿ (ಸಾಯಿ ಪ್ಯಾಲೇಸ್), ಶಾರದಾ ಎಸ್.ಕರ್ಕೇರ, ಹರೀಶ್ ಪೂಜಾರಿ, ರಾಮ ಜಿ.ಸುವರ್ಣ ಗೋರೆಗಾಂವ್, ಲಕ್ಷ ್ಮಣ್ ಸಿ.ಪೂಜಾರಿ (ಎನ್ಸಿಪಿ), ಧರ್ಮಪಾಲ್ ಜಿ.ಅಂಚನ್, ನಾರಾಯಣ ಪೂಜಾರಿ ಕಲ್ವಾ, ಶೋಭಾ ಹರೀಶ್ ಪೂಜಾರಿ ವಡಲಾ, ರತ್ನಾಕರ್ ಶೆಟ್ಟಿ ಮುಂಡ್ಕೂರು, ಉಳ್ತೂರು ಮೋಹನ್ದಾಸ್ ಶೆಟ್ಟಿ ಸೇರಿದಂತೆ ಬ್ಯಾಂಕ್ನ ಉನ್ನತಾಧಿಕಾರಿಗಳನೇಕರು ಹಾಜರಿದ್ದು ಫಲಿತಾಂಶವನ್ನು ಸಂಭ್ರಮಿಸಿದರು.
ಭಾರತ್ ಬ್ಯಾಂಕ್ನ ನೂತನ ನಿರ್ದೇಶಕ ಮಂಡಳಿ ಫಲಿತಾಂಶ ಪ್ರಕಟ ಚುನಾವಣಾ ಅಧಿಕಾರಿಗಳಿಂದ ನಿರ್ದೇಶಕರಿಗೆ ಅಧಿಕಾರ ಪ್ರದಾನ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ,ಅ.05: ಹಣಕಾಸು ವ್ಯವಹಾರದೊಂದಿಗೆ ಸಹಕಾರಿ ರಂಗದಲ್ಲೇ ರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರರಾಗಿ ಉತ್ಕೃಷ್ಟ ಆಥಿರ್üಕ ಸಂಸ್ಥೆಯಾಗಿ ಮನ್ನಣೆ ಪಡೆದಿರುವ ತುಳು-ಕನ್ನಡಿಗರ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಪಥಸಂಸ್ಥೆಯ 2018-2023ರ ಸಾಲಿನ ನೂತನ ನಿರ್ದೇಶಕ ಮಂಡಳಿಯ ಒಟ್ಟು ಫಲಿತಾಂಶವನ್ನು ಪ್ರಕಟಿಸಲಾಯಿತು. ಮಹಾರಾಷ್ಟ್ರ ರಾಜ್ಯ ಸಹಕಾರಿ ಸೊಸೈಟಿಗಳ ಕ್ರಮಾನುಸಾರ ಬ್ಯಾಂಕ್ ಮಂಡಳಿಯ ಮುಂದಿನ ಅವಧಿಯ ಸಾಮಾನ್ಯ ಸ್ಥಾನಗಳಿಗೆ ಮುಖ್ಯ ಚುನಾವಣಾಧಿಕಾರಿ ಕಾರ್ಯನಿರ್ವಹಿಸಿದ್ದ ಮಹಾರಾಷ್ಟ್ರ ರಾಜ್ಯ ಸಹಕಾರಿ ಕೋ.ಆಪರೇಟಿವ್ ಸೊಸೈಟಿಯ ಹೆಚ್ಚುವರಿ ರಿಜಿಸ್ತ್ರಾರ್, ಎ.ಕೆ ಚವ್ಹಾಣ್ ಅಧ್ಯಕ್ಷತೆಯಲ್ಲಿ ಇಂದಿಲ್ಲಿ ಶುಕ್ರವಾರ ಗೋರೆಗಾಂವ್ ಪೂರ್ವದ ಬ್ರಿಜ್ವಾಸಿ ಪ್ಯಾಲೇಸ್ ಸಭಾಗೃಹದಲ್ಲಿ ಭಾರತ್ ಬ್ಯಾಂಕ್ನ ನಿರ್ದೇಶಕ ಮಂಡಳಿ ಸಭೆಯಲ್ಲಿ ಬ್ಯಾಂಕ್ನ ನೂತನ ಎಲ್ಲಾ ನಿರ್ದೇಶಕರ ನೇಮಕಾತಿ ಯಾದಿ ಅಧಿಕೃತವಾಗಿ ಪ್ರಕಟಿಸಿ ನಿರ್ದೇಶಕರುಗಳಿಗೆ ಆಯ್ಕೆ ದೃಢೀಕರಣಪತ್ರ (ಸರ್ಟಿಫಿಕೇಟ್) ಪ್ರದಾನಿಸಿ ಶುಭಾರೈಸಿದರು.
ಸಭೆಯ ಆದಿಯಲ್ಲಿ ಬಿಲ್ಲವರ ಅಸೋಸಿಯೇಶನ್ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅವರು ಬ್ರಹ್ಮಶ್ರೀನಾರಾಯಣ ಗುರು ಅವರ ಭಾವಚಿತ್ರಕ್ಕೆ ಪುಷ್ಪವೃಷ್ಠಿಗೈದು ನಮಿಸಿ ದೀಪ ಬೆಳಗಿಸಿ ಸಂಕೇತಿಕವಾಗಿ ಸಭೆಗೆ ಚಾಲನೆಯನ್ನೀಡಿದರು. ಹೆಚ್ಚುವರಿ ಚುನಾವಣಾಧಿಕಾರಿ ಸಂದೀಪ್ ದೇಶ್ಮುಖ್, ಸಹ ಹೆಚ್ಚುವರಿ ಚುನಾವಣಾಧಿಕಾರಿ ಡಿ.ಬಿ ಗೋಸ್ವಾಮಿ, ಭಾರತ್ ಬ್ಯಾಂಕ್ನ ಮುಖ್ಯ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಸಹ ಹೆಚ್ಚುವರಿ ಚುನಾವಣಾಧಿಕಾರಿ ವಿದ್ಯಾನಂದ ಎಸ್.ಕರ್ಕೇರ (ಭಾರತ್ ಬ್ಯಾಂಕ್ನ ಪ್ರಧಾನ ಪ್ರಬಂಧಕ), ಬಿಲ್ಲವರ ಅಸೋಸಿಯೇಶನ್ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ವೇದಿಕೆಯಲ್ಲಿ ಅಸೀನರಾಗಿದ್ದರು.
ಈ ಸಂದರ್ಭದಲ್ಲಿ ಬ್ಯಾಂಕ್ ಮಂಡಳಿಗೆ ನೂತನ ನಿರ್ದೇಶಕರಾಗಿ ಚುನಾಯಿತರಾದ ಜಯ ಸಿ.ಸುವರ್ಣ, ವಾಸುದೇವ ಆರ್.ಕೋಟ್ಯಾನ್, ಎಲ್.ವಿ ಅವಿೂನ್, ನ್ಯಾ| ಎಸ್.ಬಿ ಅವಿೂನ್, ಜೆ.ಎ ಕೋಟ್ಯಾನ್, ದಾಮೋದರ ಸಿ.ಕುಂದರ್, ಎನ್.ಟಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಕೆ.ಬಿ ಪೂಜಾರಿ, ಯು.ಎಸ್ ಪೂಜಾರಿ, ಜ್ಯೋತಿ ಕೆ.ಸುವರ್ಣ, ಕೆ.ಎನ್ ಸುವರ್ಣ, ಭಾಸ್ಕರ್ ಎಂ.ಸಾಲ್ಯಾನ್, ಸೂರ್ಯಕಾಂತ್ ಜೆ.ಸುವರ್ಣ, ಪ್ರೇಮನಾಥ್ ಪಿ. ಕೋಟ್ಯಾನ್, ಮೋಹನ್ದಾಸ್ ಎ.ಪೂಜಾರಿ, ಪುರುಷೋತ್ತಮ ಎಸ್.ಕೋಟ್ಯಾನ್, ಐಕ್ಯಮತದಿಂದ ಆಯ್ಕೆಯಾದ ಮಹಿಳಾ ಮೀಸಲು ನಿರ್ದೇಶಕಿಯರಾದ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಮತ್ತು ಶಾರದಾ ಸೂರು ಕರ್ಕೇರ, ಹಿಂದುಳಿದ ಜಾತಿ-ಪರಿಶಿಷ್ಟ ವರ್ಗದ ಸದಸ್ಯತ್ವ ನಿರ್ದೇಶಕ ಅನ್ಭಲ್ಗನ್ ಸಿ.ಹರಿಜನ್ (ಅನುಪಸ್ಥಿತಿ) ಅªರಿಗೆ ಎ.ಕೆ ಚವ್ಹಾಣ್ ಅವರು ಅಧಿಕೃತವಾಗಿ ಹುದ್ದೆಗಳನ್ನು ಹಸ್ತಾಂತರಿಸಿ ಅಭಿನಂದಿಸಿದರು.
ಬ್ಯಾಂಕ್ ಅಧಿಕಾರಿ ವಂದನಾ ಶೆಟ್ಟಿ ಪ್ರಾರ್ಥನೆಗೈದರು. ಸಿ.ಆರ್ ಮೂಲ್ಕಿ ಸ್ವಾಗತಿಸಿ ಪ್ರಸ್ತಾವನೆಗೈದರು. ವಿದ್ಯಾನಂದ ಎಸ್.ಕರ್ಕೇರ ಸಭಾ ಕಲಾಪಗಳನ್ನು ನಡೆಸಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆ ಕೊನೆಗೊಂಡಿತು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link