Brief Mumbai, Mangalore News with pictures


Rons Bantwal
Kemmannu News Network, 12-10-2018 13:28:04


Write Comment     |     E-Mail To a Friend     |     Facebook     |     Twitter     |     Print


Mumbai Oct. 10 :- (Front L-R) Actors Karan Wahi, Parina Chopra, Akshay Oberoi and Simran Kaur Mundi along with (back L-R) Sidhartha Roy (COO of Hungama Digital Media), Producer Abhishek Pathak, Executive Producer Sanjeev Lamba and Writer/Director Vignesh Shetty at the launch of Hungama original - Bar Code

Mumbai Oct. 08 :-  Actors Neha Dhupia, Soha Ali Khan, Sophie Choudry, Angad Bedi & Gaurav Kapoor during launch the new show #NoFilterNeha in Mumbai.

Mumbai Oct. 10 :- Inauguration of Operation Theater & Paralysis treatment Centre at KEM Hospital by Shiv Sena Chief Shri. Udhav Thackeray in presence of Mumbai Mayor Mahadeshwar Mahadik, BMC Commissioner Ajoy Mehta.

Mumbai Oct. 10 :- CM Devendra Fadnavis chaired a meeting to review progress of initiatives and development works at #Aurangabad Collector Office earlier today. Assembly Speaker Haribhau Bagde, Minister Dr Deepak Sawant, senior officials were present


ಬಂಟರ ಭವನದಲ್ಲಿ ಬಂಟ್ಸ್ ಲಾ ಫೆÇೀರಮ್‍ನ ವಾರ್ಷಿಕ ಮಹಾಸಭೆ, ನೂತನ ಅಧ್ಯಕ್ಷರಾಗಿ ಡಿ.ಕೆ ಶೆಟ್ಟಿ ಆಯ್ಕೆ - ಫೆÇೀರಮ್‍ಗೆ ಸದಸ್ಯರೆಲ್ಲರ ಸಹಕಾರ ನಿರಂತರವಾಗಿರಲಿ: ಅಡ್ವಕೇಟ್ ಅಶೋಕ್ ಡಿ.ಶೆಟ್ಟಿ

ಮುಂಬಯಿ, ಅ.09:ನನ್ನ ಅಧ್ಯಕ್ಷತೆಯ ಕಾಲಾವಧಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಸಂಸ್ಥೆಯನ್ನು ಬೆಳೆಸುವ ಕೆಲಸ ಮಾಡಿದ್ದೇನೆ. ಇದು ನನಗೆ ತೃಪ್ತಿ ಮತ್ತು ಸಂತೋಷ ನೀಡಿದೆ. ಮುಂದಿನ ಅಧ್ಯಕ್ಷರು ಅವರ ಅವಧಿಯಲ್ಲಿ ಒಳ್ಳೆಯ ಕಾರ್ಯಗಳನ್ನು ನಿರ್ವಹಿಸುವವರು ತುಂಬಾ ಭರವಸೆ ಇದೆ. ಇದಕ್ಕಾಗಿ ಫೆÇೀರಮ್ ಎಲ್ಲಾ ಸದಸ್ಯರ ಬೆಂಬಲ ಮತ್ತು ಸಹಕಾರ ಅಗತ್ಯ ಎಂದು ತಿಳಿಸಿದರು.

ಬಂಟ್ಸ್ ಲಾ ಫೆÇೀರಮ್‍ನ ವಾರ್ಷಿಕ ಮಹಾಸಭೆಯು ಕಳೆದ ಶುಕ್ರವಾರ (05.10.2018)ಸಂಜೆ ಬಂಟರ ಭವನದ ಎನೆಕ್ಸ್ ಕಟ್ಟಡದ ಸಭಾಗೃಹದಲ್ಲಿ ಫೆÇೀರಮ್‍ನ ಅಧ್ಯಕ್ಷ ಅಶೋಕ್ ಡಿ.ಶೆಟ್ಟಿ ಅವರು ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದರು.

ಗತ ವಾರ್ಷಿಕ ವರದಿಯನ್ನು ಗೌ| ಪ್ರ.ಕಾರ್ಯದರ್ಶಿ ಜಗದೀಶ್ ಎಸ್.ಹೆಗ್ಡೆ ಮಂಡಿಸಿದರು. ಕೋಶಾಧಿಕಾರಿ ಮೋರ್ಲ ರತ್ನಾಕರ್ ಶೆಟ್ಟಿ ಲೆಕ್ಕ ಪತ್ರ ದಾಖಲೆಗಳ ವರದಿ ಸಲ್ಲಿಸಿದರು. ಸಭಿಕರು ಅಂಗೀಕರಿಸಿದರು. ವೇದಿಕೆಯಲ್ಲಿ ಬಂಟ್ಸ್ ಲಾ ಫೆÇೀರಮ್‍ನ ಉಪಾಧ್ಯಕ್ಷ ಪ್ರಭಾಕರ್ ಕೆ.ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ 2018-2021ರ ಅವಧಿಗೆ ನೂತನ ಅಧ್ಯಕ್ಷರಾಗಿ ಅಡ್ವಕೇಟ್ ಡಿ.ಕೆ.ಶೆಟ್ಟಿ ಅವರು ಆಯ್ಕೆಗೊಂಡರು. ಅಡ್ವಕೇಟ್ ಎಚ್.ಎಂ ಶೆಟ್ಟಿ, ಅಡ್ವಕೇಟ್ ಕರುಣಾಕರ ಶೆಟ್ಟಿ, ಡಾ| ದಯಾನಂದ್ ಬಿ.ಶೆಟ್ಟಿ, ಅಡ್ವಕೇಟ್ ಜಗನ್ನಾಥ್ ಎನ್.ಶೆಟ್ಟಿ, ಅಡ್ವಕೇಟ್ ಜಗದೀಶ್ ಶೆಟ್ಟಿ, ಅಡ್ವಕೇಟ್ ಉಪ್ಪೂರು ಶೇಖರ್ ಶೆಟ್ಟಿ, ಅಡ್ವಕೇಟ್ ರಾಜಶೇಖರ್ ಶೆಟ್ಟಿ, ಅಡ್ವಕೇಟ್ ಶೇಖರ್ ಶೆಟ್ಟಿ, ಅಡ್ವಕೇಟ್ ಶೇಖರ್ ಆರ್.ಶೆಟ್ಟಿ, ಅಡ್ವಕೇಟ್ ಮೋರ್ಲ ರತ್ನಾಕರ್ ಶೆಟ್ಟಿ, ಅಡ್ವಕೇಟ್ ಮಂಜುನಾಥ್ ಹೆಗ್ಡೆ, ಅಡ್ವಕೇಟ್ ಗುಣಕರ್ ಶೆಟ್ಟಿ, ಅಡ್ವಕೇಟ್ ಎಮ್.ಮಾಧವ್ ಶೆಟ್ಟಿ, ಅಡ್ವಕೇಟ್ ರಾಮ್‍ಪ್ರಸಾದ್ ಶೆಟ್ಟಿ  ಸೇರಿದಂತೆ 15 ಮಂದಿಯನ್ನು ಸಮಿತಿಗೆ ಆಯ್ಕೆ ಮಾಡಲಾಯಿತು.

ಧರ್ಮಸ್ಥಳದಲ್ಲಿ ಸ್ವಚ್ಛತಾ ಸೇನಾನಿಗಳಿಗೆ ತರಬೇತಿ ಕಾರ್ಯಾಗಾರ - ಚಿತ್ರಶೀರ್ಷಿಕೆ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಾಗಾರವನ್ನು ಉದ್ಘಾಟಿಸಿದರು

ನಾಗರಿಕ ಪ್ರಜ್ಞೆಯೊಂದಿಗೆ ಜೀವನ ಶೈಲಿಯಲ್ಲಿ ಸುಧಾರಣೆ ಆಗಬೇಕು

ಉಜಿರೆ: ಜನಸಂಖ್ಯಾ ನಿಯಂತ್ರಣದೊಂದಿಗೆ ಕಳೆದ ಅರುವತ್ತು ವರ್ಷಗಳಲ್ಲಿ ಭಾರತದಲ್ಲಿ ಅದ್ಭುತ ಪ್ರಗತಿಯಾಗಿದೆ. ಕೃಷಿ, ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಶೋಧನೆಯಲ್ಲಿ ನಮ್ಮ ದೇಶವು ಜಾಗತಿಕಮಟ್ಟದಲ್ಲಿ ವಿದೇಶಗಳೊಂದಿಗೆ ಸ್ಪರ್ಧಿಸುವ ಅರ್ಹತೆ ಹೊಂದಿದೆ. ಸುಂದರ ಬದುಕು ಹಾಗೂ ಸುಖೀ ಜೀವನಕ್ಕಾಗಿ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ಬಗ್ಗೆ ಸಾಮಾಜಿಕ ಕಾಳಜಿ ಹಾಗೂ ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು, ನಮ್ಮ ಜೀವನ ಶೈಲಿಯಲ್ಲಿ ಸುಧಾರಣೆಯಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
    ಅವರು ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ವಚ್ಛತಾ ಜಾಗೃತಿ ವೇದಿಕೆಯ ಜಂಟಿ ಆಶ್ರಯದಲ್ಲಿ ಮಂಗಳವಾರ ಆಯೋಜಿಸಲಾದ ಸ್ವಚ್ಛತಾ ಸೇನಾನಿಗಳಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
    ವಿದೇಶಗಳಲ್ಲಿ ವಿಮಾನದಲ್ಲಿ, ಹೋಟೆಲ್‍ಗಳಲ್ಲಿ, ಶೌಚಾಲಯಗಳಲ್ಲಿ ಸ್ವಚ್ಛತೆ ಹಾಗೂ ಜನರ ನಾಗರಿಕ ಪ್ರಜ್ಞೆಯನ್ನು ಶ್ಲಾಘಿಸಿದ ಅವರು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯನ್ನು ನಾವು ಎದುರಿಸಬೇಕಾದರೆ ಸಾಮಾಜಿಕ ಕಳಕಳಿ, ಬದ್ಧತೆ ಹಾಗೂ ಹೊಣೆಗಾರಿಕೆಯನ್ನು ಹೊಂದಿರಬೇಕು. ಕರ್ತವ್ಯ ಪ್ರಜ್ಞೆಯೊಂದಿಗೆ, ನಮ್ಮ ಜೀವನ ಶೈಲಿಯಲ್ಲಿ ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಇಂದು ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ. ಹೇಮಾವತಿ ಹೆಗ್ಗಡೆಯವರ ನೇತೃತ್ವದಲ್ಲಿ ಜ್ಞಾನದೀಪ ಮತ್ತು ಜ್ಞಾನವಿಕಾಸ ರ್ಕಾಕ್ರಮದಡಿಯಲ್ಲಿ ಮಹಿಳಾ ಸಬಲೀಕರಣವಾಗಿದೆ. ಮಹಿಳೆಯರು ಕೂಡಾ ಇಂದು ವ್ಯವಹಾರ ತಜ್ಞರಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.
    ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬಿ. ಶುಭಾಶಂಸನೆ ಮಾಡಿ, ವೈಯಕ್ತಿಕ ಸ್ವಚ್ಛತೆಯೊಂದಿಗೆ ಮನೆಯಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿ ಸ್ವಚ್ಛತೆ ಕಾಪಾಡಬೇಕು. ತ್ಯಾಜ್ಯ ನಿರ್ವಹಣೆ ಎಲ್ಲರ ಹೊಣೆಗಾರಿಕೆಯಾಗಿದೆ ಎಂದು ಅವರು ಹೇಳಿದರು.
    ಹೇಮಾವತಿ ವಿ. ಹೆಗ್ಗಡೆ, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಮಡಂತ್ಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಅಂಡಿಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ ಅಂಡಿಂಜೆ ಮತ್ತು ಹೊಸಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ವಸಂತ್ ಉಪಸ್ಥಿತರಿದ್ದರು.
    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ        ಡಾ.ಎಲ್. ಎಚ್.ಮಂಜುನಾಥ್ ಸ್ವಾಗತಿಸಿದರು. ಯೋಜನಾಧಿಕಾರಿ ಜಯಕರ ಶೆಟ್ಟಿ ಧನ್ಯವಾದವಿತ್ತರು. ಶ್ರೀನಿವಾಸ್‍ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಮುಖ್ಯಾಂಶಗಳು:
1.    ಗ್ರಾಮ ಮಟ್ಟದಲ್ಲಿ ಸ್ವಚ್ಛತೆ ಕಾಪಾಡಲು ಸ್ಥಳೀಯ ಸ್ವಯಂ ಸೇವಕರ ತಂಡ (ಸೇನಾನಿಗಳು) ರಚನೆ.
2.    ಬೆಳ್ತಂಗಡಿ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ “ಸ್ವಚ್ಛತಾಜಾಗೃತಿ ವೇದಿಕೆ” ಯನ್ನು ಮುಂದೆ ರಾಜ್ಯ ಮಟ್ಟಕ್ಕೆ ವಿಸ್ತರಿಸಲಾಗುವುದು.
3.    ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 124 ಕೆರೆಗಳ ಹೂಳೆತ್ತಿ ಸ್ವಚ್ಛ ಗೊಳಿಸಲಾಗಿದೆ.
4.    ನೂರು ಮಂದಿ ಸ್ವಚ್ಛತಾ ಸೇನಾನಿಗಳಿಗೆ ತರಬೇತಿ.
5.    ಕಳೆದ ಮೂರು ವರ್ಷಗಳಿಂದ ಮಕರ ಸಂಕ್ರಾಂತಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತದೆ.
6.    ಸೇನಾನಿಗಳಿಗೆ ಸ್ವಚ್ಛತಾ ಪರಿಕರಗಳನ್ನು ವಿತರಿಸಲಾಯಿತು.
7.    ನಮ್ಮ ನಡಿಗೆ, ಸ್ವಚ್ಛತೆ ಕಡೆಗೆ.
8.    ನಾವು ಇರುವ ಭೂಮಿ ಹಾಗೂ ಪ್ರಶಾಂತ ಪರಿಸರವನ್ನು ಮುಂದಿನ ಜನಾಂಗಕ್ಕೆ ಸುಸ್ಥಿತಿಯಲ್ಲಿ ಬಿಟ್ಟು ಕೊಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.

ದಹಿಸರ್‍ನ ಜಿಎಸ್‍ಬಿ ಗಾರ್ಡನ್‍ನ ಮಾಧವೇಂದ್ರ ಸಭಾ ಮಂಟಪದಲ್ಲಿ ಸಾರಸ್ವತ ಕಲ್ಚರಲ್‍ನಿಂದ 11ನೇ ವಾರ್ಷಿಕ `ದಹಿಸರ್ ದಸರಾ’ ಸಂಭ್ರಮಕ್ಕೆ ಚಾಲನೆ 

ಮುಂಬಯಿ, ಅ.10: ಗೌಡ ಸಾರಸ್ವತ್ ಬ್ರಾಹ್ಮಣ್ ಸಭಾ ದಹಿಸರ್ ಬೊರಿವಲಿ ಸಂಸ್ಥೆಯು ವಾರ್ಷಿಕವಾಗಿ ಆಚರಿಸುವಂತೆ ಈ ಬಾರಿ ಹನ್ನೊಂದನೇ ವಾರ್ಷಿಕ ನವರಾತ್ರಿ ಉತ್ಸವವನ್ನು ಸಂಭ್ರಮ ಸಡಗರ, ಸಂಪ್ರದಾಯಿಕ ಪೂಜಾಧಿಗಳಿಂದ ಆಚರಿಸುತ್ತಿದ್ದು ಇಂದಿಲ್ಲಿ ಬುಧವಾರ ಬೆಳಿಗ್ಗೆ ನವರಾತ್ರಿ ಉತ್ಸವ 2018ಕ್ಕೆ ಧಾರ್ಮಿಕ ವಿಧಿಗಳೊಂದಿಗೆ ಚಾಲನೆಯನ್ನೀಡಿತು. ಕುಲಗುರು ದೈವಕ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳ ಕೃಪೆ ಮತ್ತು ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಆಶೀರ್ವಾದಗಳೊಂದಿಗೆ ದಹಿಸರ್ ಪೂರ್ವದ ಎನ್.ಎಲ್ ಕಾಂಪ್ಲೆಕ್ಸ್‍ನ ಸಾರಸ್ವತ ಕಲ್ಚರಲ್ ಎಂಡ್ ರಿಕ್ರಿಯೇಷನ್ ಸೆಂಟರ್ ಮೈದಾನದಲ್ಲಿ ನಿರ್ಮಿತ ಮಾಧವೇಂದ್ರ ಸಭಾ ಮಂಟಪÀದಲ್ಲಿ ರಚಿತÀ ಪುಷ್ಪಾಲಂಕೃತ ಭವ್ಯ ಮಂಟಪದಲ್ಲಿ ರಜತ ಪ್ರಭಾವಳಿಯೊಂದಿಗೆ ಸ್ವರ್ಣಮುಕುಟ, ವಜ್ರ, ಚಿನ್ನಾಭರಣ, ಶ್ರೀಸರಸ್ವತಿ ದೇವಿಯನ್ನು ಬೆಳಿಗ್ಗೆ ಶ್ರೀ ಹರಿ ಗುರು ಸೇವಾ ಪ್ರತಿಷ್ಠಾನ ಗೊಳಿಸಿ ನಂತರ ಪ್ರಾಣ ಪ್ರತಿಷ್ಠೆ ನಡೆಸುವ ಮುಖೇನ ಹನ್ನೊಂದನೇ ವಾರ್ಷಿಕ `ದಹಿಸರ್ ದಸರಾ’ ಮಹೋತ್ಸವಕ್ಕೆ ಭಕ್ತಿಪೂರ್ವಕವಾಗಿ ಚಾಲನೆ ನೀಡಲಾಯಿತು.

ವೇದಮೂರ್ತಿ ಲಕ್ಷ್ಮೀ ನಾರಾಯಣ ಭಟ್ ತಮ್ಮ ಪೌರೋಹಿತ್ಯದಲ್ಲಿ ವಿವಿಧ ಪೂಜಾಧಿಗಳನ್ನು ನೆರವೇರಿಸಿ ಸದ್ಭಕ್ತರನ್ನು ಹರಸಿದರು. ಪುರೋಹಿತರಾದ ವೇ| ಮೂ| ಉಲ್ಲಾಸ್ ಭಟ್, ವೇ| ಮೂ| ಮಂಜುನಾಥ್ ಪುರಾಣಿಕ್, ವೇ| ಮೂ| ಪ್ರಶಾಂತ್ ಪುರಾಣಿಕ್, ವೇ| ಮೂ| ವಿನಾಯಕ ಭಟ್, ವೇ| ಮೂ| ಮೋಹನ್ ಭಟ್, ವೇ| ಮೂ| ಹರೀಶ್ ಭಟ್ ಮತ್ತಿತರ ವಿದ್ವಾನರು ಪೂಜಾಧಿಗಳ ಸಹಭಾಗಿತ್ವ ವಹಿಸಿದ್ದರು. ಮಧ್ಯಾಹ್ನ ಸುಧೀಂದ್ರ ನಗರ ಭಜನಾ ಮಂಡಳಿ ಮತ್ತು ಸಂಜೆ ಮಕ್ಕಳಿಂದ ಭಜನೆ ನಡೆಸಲ್ಪಟ್ಟಿತು. 

ಈ ಸಂದರ್ಭದಲ್ಲಿ ಗೌಡ ಸಾರಸ್ವತ್ ಬ್ರಾಹ್ಮಣ್ ಸಭಾ ದಹಿಸರ್ ಬೊರಿವಲಿ ಸಂಸ್ಥೆಯ ಸಂಚಾಲಕರಾದ ಕುಂದಾಪುರ ಶ್ರೀನಿವಾಸ ಪ್ರಭು, ಜಿ.ಡಿ ರಾವ್, ಸಿ.ಎಂ.ಎಸ್ ರಾವ್, ಶೋಭಾ ವಿ.ಕುಲ್ಕರ್ಣಿ, ಸಗುಣಾ ಕೆ. ಕಾಮತ್, ಅಧ್ಯಕ್ಷ ಕೆ.ಆರ್.ಮಲ್ಯ, ಉಪಾಧ್ಯಕ್ಷ ಸಾಣೂರು ಮೋಹನ್ ವಿ.ಕಾಮತ್, ಗೌ| ಪ್ರ| ಕಾರ್ಯದರ್ಶಿ ಎಂ.ಉದಯ ಪಡಿಯಾರ್, ಗೌ| ಕೋಶಾಧಿಕಾರಿ ಮೋಹನ್ ಎ.ಕಾಮತ್, ಜತೆ ಕಾರ್ಯದರ್ಶಿಗಳಾದ ವಿನೋದ್ ಕೆ.ಪ್ರಭು ಮತ್ತು ಶಿವಾನಂದ ಇ.ಭಟ್ ಸೇರಿದಂತೆ ಸೇವಾಕರ್ತರು, ಭಕ್ತರÀನೇಕರು ಉಪಸ್ಥಿತರಿದ್ದರು.

ಉತ್ಸವದ ಒಂಭತ್ತು ದಿನಗಳಲ್ಲಿ
ಹರಿಗುರು ಸೇವಾ ಪ್ರತಿಷ್ಠಾನ ಮತ್ತು ಪ್ರಾಣ್ ಪ್ರತಿಷ್ಠಾನ ಇವುಗಳ ಸೇವೆಯೊಂದಿಗೆ ಸರಸ್ವತಿ ದೇವಿ ಪ್ರತಿಷ್ಠಾಪನೆಗೈದು ಪೂಜೆ ನೆರವೇರಿಸಿ ನವರಾತ್ರಿ ಉತ್ಸವಕ್ಕೆ ಚಾಲನೆಯನ್ನೀಡಲಾಯಿತು. ಉತ್ಸವದ 9 ದಿನಗಳಲ್ಲೂ ಶ್ರೀ ದೇವಿಯನ್ನು ವಿಭಿನ್ನ ಸ್ವರೂಪಳಿಂದ ಶೃಂಗರಿಸಿ ಪೂಜಿಸಲಾಗುವುದು. ಅಂತೆಯೇ ಕ್ರಮವಾಗಿ ಇಂದು (ಅ.11) ಗುರುವಾರ ಅನ್ನಪೂರ್ಣೇಶ್ವರಿ, ಚಾಮುಂಡೇಶ್ವರಿ, ಮಹಾಲಕ್ಷ್ಮೀ, ದುರ್ಗಾ ಪರಮೇಶ್ವರಿ, ಶಾಂತಾದುರ್ಗಾ, ಚಂಡಿಕಾ ದೇವಿ, ಮಹಾಕಾಳಿ, ವೈಷ್ಣೋದೇವಿ, ಅ.19ರ ಶುಕ್ರವಾರ ವಿಜಯದಶಮಿ ದಿನ ಶಾರದಾ ದೇವಿಯನ್ನು ಪೂಜಿಸಿ ಸಂಜೆ ವಿಸರ್ಜನೆ ನಡೆಸಲಾಗುವುದು.

ಇಂದು (ಅ.11) ಗುರುವಾರ ಬೆಳಿಗ್ಗೆ ಬಂಟ್ಸ್ ಸಂಘ ಜೋಗೇಶ್ವರಿ ದಹಿಸರ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನೆ, ಸಂಜೆ ಸಂಸ್ಕೃತಿ ಕಲ್ಚರಲ್ ಅಕಾಡೆಮಿ ದಹಿಸರ್‍ನ ಕಲಾವಿದರಿಂದ ಭರತನಾಟ್ಯಂ ಪ್ರದರ್ಶನ. ಅ.12ನೇ ಶುಕ್ರವಾರ ಬೆಳಿಗ್ಗೆ ಮನೀಷಾ ಬುರ್ಡೆ ಬಳಗದ ಮೌಲಿ ಭಜನಾ ಮಂಡಳಿಯಿಂದ ಭಜನೆ. ಸಂಜೆ ಮಾಧವಿ ನೃತ್ಯಾ ವಿದ್ಯಾಲಯದ ಕಲಾವಿದರಿಂದ ಗುರು ಉಣ್ಣಿ ಕೃಷ್ಣನ್ ವಾಸು ನಿರ್ದೇಶನದಲ್ಲಿ ನೃತ್ಯ ಪ್ರದರ್ಶನ ಮತ್ತು ಅಕ್ಷಯ್ ಅಹಿರೆ ಮತ್ತು ಬಳಗದ ಭರತನಾಟ್ಯಂ. ಅ.13ನೇ ಶನಿವಾರ ಬೆಳಿಗ್ಗೆ ಹರಿಬೋಲ ಭಜನಾ ಮಂಡಳಿಯಿಂದ ಭಜನೆ, ಸಂಜೆ ವಿದ್ಯಾ ಶ್ರೀರಾಮ್ ಅವರಿಂದ ಆಧ್ಯಾತ್ಮಿಕ ಆರಾಧನಾ ಕೀರ್ತಿನೋಟ, ಮಹಿಳೆಯರಿಂದ ಹಳದಿಕುಂಕುಮ, ಅ.14ನೇ ಆದಿತ್ಯವಾರ ಬೆಳಿಗ್ಗೆ ಆಶ್ವಿನಿ ಪ್ರಭು ಮತ್ತು ಪೂರ್ವಿ ಪ್ರಭು ಅವರಿಂದ ಭಜನೆ, ಸಂಜೆ ಶಕ್ತಿ ಬಳಗದಿಂದ ನೃತ್ಯಾವಳಿಗಳು ಮತ್ತು ಸಂಜೆ ಸುಜಾತಾ ಎ.ಶೆಟ್ಟಿ ಪ್ರಾಯೋಜಕತ್ವದಲ್ಲಿ ಮನೋರಂಜನಾ ವೈವಿಧ್ಯತೆ. ಅ.15ನೇ ಸೋಮವಾರ ಬೆಳಿಗ್ಗೆ ಸ್ವರಾಂಜಲಿ ಭಜನಾ ಮಂಡಳಿಯಿಂದಭಜನೆ, ಸಂಜೆ ಗುರುವಾರಿಯಾ ರೂಪಾಲಿ ದೇಸಾಯಿ ಇವರ ಸಂಕಲ್ಪನೆ ಮತ್ತು ನಿರ್ದೇಶನದಲ್ಲಿ ಸಂಸ್ಕೃತಿ ಕಲಾಮಂದಿರದ ಪ್ರತಿಭೆಗಳಿಂದ ನೃತ್ಯವೈವಿಧ್ಯ ಕಾರ್ಯಕ್ರಮ ಅ.16ನೇ ಮಂಗಳವಾರ ಸಿನೀಯರ್ ಸಿಟಿಝನ್ ಸಹಯೋಗ್ ಸೆಂಟರ್ ದಹಿಸರ್ ಅವರಿಂದ ಭಜನೆ, ಸಂಜೆ ಉಮಾ ನಂಬಿಯಾರ್ ಇವರ ಮುದ್ರಾ ಡ್ಯಾನ್ಸ್ ಅಕಾಡೆಮಿ ಇವರಿಂದ ಭರತನಾಟ್ಯಂ. ಅ.17ನೇ ಬುಧವಾರ ಬೆಳಿಗ್ಗೆ ವಿಘ್ನಾರ್ಥ ಭಜನಾ ಮಂಡಳಿಯಿಂದ ಭಜನೆ. ಸಂಜೆ ದೀಪೆÇೀತ್ಸವ. ಅ.18ನೇ ಗುರುವಾರ ಬೆಳಿಗ್ಗೆ ಮಹಿಷಾ ಮರ್ಧಿನಿ ಭಜನಾ ಮಂಡಳಿಯಿಂದ ಭಜನೆ. ಸಂಜೆ ರಿತೂ ಮಣಿಕ್ ಇವರಿಂದ ಭರತನಾಟ್ಯಂ. ಅ.19ನೇ ಶುಕ್ರವಾರ ಬೆಳಿಗ್ಗೆ 9.00 ಗಂಟೆಗೆ ವಿದ್ಯಾಥಿರ್sಗಳಿಗೆ ಪುಸ್ತಕ ವಿತರಣೆ, ನಂತರ ಜಿಎಸ್‍ಬಿ ಸಮಾಜ ಮುಂಬಯಿ ಬಾಲ ಭಜನಾ ಮಂಡಳಿಯಿಂದ ಭಜನೆ. ಸಂಜೆ 4.00 ಘಂಟೆಗೆ ಭಕ್ತರಿಂದ ಶ್ರೀದೇವಿಗೆ ಬಂದ ಸೀರೆಗಳ ಲಕ್ಕಿಡ್ರಾ  ಕಾರ್ಯಕ್ರಮ, ಸಂಜೆ 5.00 ಗಂಟೆಗೆ  ವಿಸರ್ಜನಾ ಮೆರವಣಿಗೆ ನೇರವೇರಲಿದೆ. ಉತ್ಸವದ ಎಲ್ಲಾ ದಿನಗಳಲ್ಲೂ ಸಂಜೆ 7.00 ಗಂಟೆಯಿಂದ ರಾತ್ರಿ  10.00 ಗಂಟೆ ವರೇಗೆ ಗರ್ಭಾ ದಾಂಡಿಯಾರಾಸ್ ನೃತ್ಯ ನೇರವೇರಲಿದೆ.

ಆ ಪ್ರಯುಕ್ತ ವಾರ್ಷಿಕವಾಗಿ ನಡೆಸಲ್ಪಡುವ ಈ ಶರನ್ನವರಾತ್ರಿ ಮಹೋತ್ಸವದಲ್ಲಿ ನಾಡಿನ ಸಮಸ್ತ ಭಕ್ತರು ಆಗಮಿಸಿ ಶ್ರೀಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ಉತ್ಸವದ ಪ್ರಧಾನ ಸಂಘಟಕ, ಉಪಾಧ್ಯಕ್ಷ ಸಾಣೂರು ಮೋಹನ್ ವಿ.ಕಾಮತ್ ಮತ್ತು ಗೌ| ಪ್ರ| ಕಾರ್ಯದರ್ಶಿ ಉದಯ ಪಡಿಯಾರ್ ತಿಳಿಸಿದ್ದಾರೆ.

ಧರ್ಮೋತ್ಥಾನ ಟ್ರಸ್ಟ್ ವತಿಯಿಂದ 241 ಸ್ಮಾರಕ ರಕ್ಷಣೆ

ಪರಂಪರೆಯ ಪುನರುತ್ಥಾನದ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಧರ್ಮಾಧಿಕಾರಿಯವರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ 1991ರಲ್ಲಿ ಸ್ಥಾಪನೆಗೊಂಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಈವರೆಗೆ 241 ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಪುರಾತನ ಸ್ಮಾರಕಗಳ ಸಂರಕ್ಷಣಾ ಕಾರ್ಯವನ್ನು ರೂ.27.00 ಕೋಟಿಗಳ ವೆಚ್ಚದಲ್ಲಿ ಕೈಗೊಂಡಿದೆ.
ಧರ್ಮೋತ್ಥಾನ ಟ್ರಸ್ಟ್ ಈತನಕ ಕರ್ನಾಟಕ ಸರ್ಕಾರದ ಪ್ರಾಚ್ಯವಸ್ತು ಇಲಾಖೆಯ ಸಹಭಾಗಿತ್ವದೊಂದಿಗೆ ವಾರ್ಷಿಕ ಕ್ರಿಯಾಯೋಜನೆಯಡಿಯಲ್ಲಿ ಕಳೆದ 15 ವರ್ಷಗಳಿಂದ 25 ಜಿಲ್ಲೆಗಳ ವ್ಯಾಪ್ತಿಯಲ್ಲಿ 170 ಪುರಾತನ ದೇವಾಲಯಗಳ ಜೀರ್ಣೋದ್ದಾರ ಕಾರ್ಯ ಕೈಗೊಂಡಿದೆ.
ಸರ್ಕಾರೇತರ ಸಾರ್ವಜನಿಕ ಸಂಸ್ಥೆಯಾದ ಜೆ.ಎಸ್.ಡಬ್ಲ್ಯೂ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ 2 ದೇವಸ್ಥಾನಗಳು ಹಾಗೂ ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದ ಸಹಭಾಗಿತ್ವದೊಂದಿಗೆ ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿ 6 ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯವನ್ನು  ಧರ್ಮೋತ್ಥಾನ ಟ್ರಸ್ಟ್ ಕೈಗೊಂಡಿದೆ.
ಶಿಥಿಲಗೊಂಡಿರುವ ದೇವಾಲಯಗಳ ಪುನರ್ ನಿರ್ಮಾಣ ಸಮರ್ಪಕ ರೀತಿಯಲ್ಲಿ ನಿರ್ವಹಿಸುವ ಉದ್ದೇಶದಿಂದ  ಧರ್ಮೋತ್ಥಾನ ಟ್ರಸ್ಟ್ ಪುರಾತತ್ವ ಇಲಾಖೆಯ ಅಧಿಕೃತ ಸಂರಕ್ಷಣಾ ಕೈಪಿಡಿಯಲ್ಲಿ ನಮೂದಿಸಿದ ನಿಯಮಾವಳಿಗನುಗುಣವಾಗಿ ಹಿರಿಯ ತಜ್ಞರನ್ನೊಳಗೊಂಡ ಪ್ರತ್ಯೇಕ ಸಲಹಾ ಸಮಿತಿಯ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ.

ಟ್ರಸ್ಟ್ ಸಲಹಾ ಸಮಿತಿ ಸದಸ್ಯರ ಸಭೆ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‍ನ ಸಲಹಾ ಸಮಿತಿ ಸದಸ್ಯರ ಸಭೆ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು.
ಸಭೆಯಲ್ಲಿ ಧರ್ಮೋತ್ಥಾನ ಟ್ರಸ್ಟ್‍ನ ಕಾರ್ಯಕ್ಷೇತ್ರದ ವಿವರಗಳನ್ನು ಅವಲೋಕಿಸಿ, ಜೀರ್ಣೋದ್ದಾರಗೊಂಡಿರುವ ಸ್ಮಾರಕಗಳಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಗಳು ಹಾಗೂ ಕಟ್ಟಡ ನಿರ್ವಹಣೆಯ ನಿಟ್ಟಿನಲ್ಲಿ ಸ್ಥಳೀಯರನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುವ ಬಗ್ಗೆ ಸದಸ್ಯರಿಂದ ಸಲಹೆಗಳನ್ನು  ಪಡೆಯಲಾಯಿತು.
ಧರ್ಮೋತ್ಥಾನ ಟ್ರಸ್ಟ್‍ನ ಸಲಹಾ ಸಮಿತಿಯ ಸದಸ್ಯರಾದ  ಶ್ರೀ ಡಿ. ಸುರೇಂದ್ರಕುಮಾರ್‍ರವರು, ಕರ್ನಾಟಕ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ಡಾ. ಸಿ.ಎಸ್. ಕೇದಾರ್, ಇತಿಹಾಸ ತಜ್ಞೆ ಡಾ. ಚೂಡಾಮಣಿ ನಂದಗೋಪಾಲ್, ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಡಾ.ಜಿ. ಅಶ್ವತ್ಥನಾರಾಯಣ, ಹಿರಿಯ ಸಾಹಿತಿ ನಾಡೋಜ ಹಂ.ಪ. ನಾಗರಾಜಯ್ಯ, ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ನಿವೃತ್ತ  ನಿರ್ದೇಶಕ ಡಾ.ಎ.ಎಸ್. ಹಲಕಟ್ಟಿ ಮೈಸೂರು ವಿಶ್ವವಿದ್ಯಾಲಯದ  ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್. ರಂಗರಾಜು, ಪ್ರಾಚೀನ ದೇವಾಲಯಗಳ ಹವ್ಯಾಸಿ ಸಂಶೋದಕ ಶ್ರೀ ಕೆಂಗೇರಿ ಚಕ್ರಪಾಣಿಯವರು ಉಪಸ್ಥಿತರಿದ್ದರು.
ಟ್ರಸ್ಟ್‍ನ ನಿರ್ದೇಶಕ ಹರಿರಾಮಶೆಟ್ಟಿ ಸ್ವಾಗತಿಸಿದರು.  ಕಾರ್ಯದರ್ಶಿ ಎ.ವಿ. ಶೆಟ್ಟಿ ಟ್ರಸ್ಟ್‍ನ ಪ್ರಗತಿಯ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Nirmala Thonse organizes Awareness Campaign agains
View More

40th Wedding Anniversary Wishes to Dr. Frank and Mrs. Alice Fernandes40th Wedding Anniversary Wishes to Dr. Frank and Mrs. Alice Fernandes
ಖಾಝಿ ಉಸ್ತಾದ್ ಅಹಮದ್ ಸಾಹೇಬ್ ನಿಧನ.ಖಾಝಿ ಉಸ್ತಾದ್ ಅಹಮದ್ ಸಾಹೇಬ್ ನಿಧನ.
Free Eye Camp at Mount Rosary, KallianpurFree Eye Camp at Mount Rosary, Kallianpur
Kemmannu Church - Weekly Announcements.Kemmannu Church - Weekly Announcements.
Veez Konkani Weekly e-Magazine # 58Veez Konkani Weekly e-Magazine # 58
Mount Rosary Church Annoucement for the weekMount Rosary Church Annoucement for the week
An Appeal from vittal churchAn Appeal from vittal church
Foundation Stone Laying Ceremony of Nayaab Residency by B. M. Zaffer & fly, Dubai, UAE.Foundation Stone Laying Ceremony of Nayaab Residency by B. M. Zaffer & fly, Dubai, UAE.
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Pedruchi Chavi January 2019Pedruchi Chavi January 2019
Konkani writters workshop in Udupi on 17th Feb.Konkani writters workshop in Udupi on 17th Feb.
Delite Catering, SanthekatteDelite Catering, Santhekatte
Milarchi Laram - Issue Jan 2019Milarchi Laram - Issue Jan 2019
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Funeral Photographs:

Robert lewis (92), St. Theresa B ward, Kemmannu<font color=red><center>Funeral Photographs:<P> </font color=red></center> Robert lewis (92), St. Theresa  B ward, Kemmannu
ROZARICHO GAANCH DECEMBER 2018ROZARICHO GAANCH DECEMBER 2018
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India