Brief University College news with pictures


Rons Bantwal
Kemmannu News Network, 12-10-2018 13:53:43


Write Comment     |     E-Mail To a Friend     |     Facebook     |     Twitter     |     Print


‘ಜ್ಞಾನ ಸಾಹಿತ್ಯಕ್ಕೆ ಮರುಹುಟ್ಟು ನೀಡಿದ ಕಾರಂತರು’
‘ಕಾರಂತ ನಮನ’ ಒಂದು ದಿನದ ವಿಚಾರಗೋಷ್ಠಿಯಲ್ಲಿ ಡಾ. ವರದರಾಜ ಚಂದ್ರಗಿರಿ

ಮಂಗಳೂರು: ಜ್ಞಾನಪೀಠ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರು ಜ್ಞಾನ ಸಾಹಿತ್ಯ ಪ್ರಯೋಗಕ್ಕೆ ಮರುಹುಟ್ಟು ನೀಡಿದವರು. ವಿದ್ಯಾರ್ಥಿಗಳು ಮಾಹಿತಿ ಹಾಗೂ ಜ್ಞಾನದ ವ್ಯತ್ಯಾಸವನ್ನು ಅರಿಯಬೇಕು. ಮಾಹಿತಿಯನ್ನು ಜ್ಞಾನವಾಗಿ ಬದಲಾಯಿಸಿಕೊಳ್ಳಬೇಕು, ಎಂದು ಕಾರ್ಕಳ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ. ವರದರಾಜ ಚಂದ್ರಗಿರಿ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಕೆ ಶಿವರಾಮ ಕಾರಂತ ಪೀಠ, ಮತ್ತು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಸಂಘದ ಜಂಟಿ ಆಶ್ರಯದಲ್ಲಿ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಬುಧವಾರದಂದು ಆಯೋಜಿಸಲಾಗಿದ್ದ ಡಾ. ಕೆ ಶಿವರಾಮ ಕಾರಂತರ ಜನ್ಮದಿನಾಚರಣೆಯ ಪ್ರಯುಕ್ತ ‘ಕಾರಂತ ನಮನ’, ಒಂದು ದಿನದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು 21ನೆಯ ಶತಮಾನದಲ್ಲಿ ಮನುಷ್ಯರಲ್ಲಿ ಆತ್ಮಗೌರವ ಮತ್ತು ಆತ್ಮವಿಶ್ವಾಸ ಇವೆರಡೂ ಮುಖ್ಯ, ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಬಿ. ಶಿವರಾಮ ಶೆಟ್ಟಿ ಮಾತನಾಡಿ, ಕಾರಂತರ ‘ತಿಳುವಳಿಕೆಯಿಂದ ಕಲಿಯುವ’ ಮನೋಬಲವನ್ನು ವಿದ್ಯಾರ್ಥಿಗಳು ರೂಢಿಸಿಕೊಂಡರೆ ಶಿಕ್ಷಣವು ಪ್ರಯೋಗಶೀಲತೆಯಿಂದ ನಡೆಯಲು ಸಾಧ್ಯ, ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ.ಎ, ನಾವು ಸಮಾಜ ಪರಿವರ್ತನೆ ಮಾಡುವುದಕ್ಕಿಂತ ನಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಬೇಕು. ಆಗ ದೇಶವನ್ನೇ ಕಟ್ಟಲು ಸಾಧ್ಯ, ಎಂದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಪುತ್ತೂರಿನ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ, ಯುವ ತಲೆಮಾರು ಸಾಮಾಜಿಕ ಜಾಲತಾಣಗಳಿಗೆ ಮೊರೆಹೋಗಿ ಪುಸ್ತಕದ ಅಭಿರುಚಿಯನ್ನು ಮರೆತುಹೋಗಿದ್ದಾರೆ. ವಿಶ್ವವಿದ್ಯಾನಿಲಯದ ಮೆಟ್ಟಿಲನ್ನೇ ಏರದ ಕಾರಂತರು 400ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಬರೆಯಲು ಸಾಧ್ಯವಾದದ್ದು ಅವರ ಓದುವಿಕೆಯ ಆಸಕ್ತಿಯಿಂದ. ಈ ಗುಣವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು, ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷ ಅಧಿಕಾರಿ ಡಾ. ನಾಗಪ್ಪ ಗೌಡ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ಕಾರಂತ ಪೀಠದ ಸಂಯೋಜಕಿ ಡಾ. ನಾಗರತ್ನ ರಾವ್, ವಿಶ್ವವಿದ್ಯಾನಿಲಯ ಕಾಲೇಜು ಕನ್ನಡ ಸಂಘದ ನಿರ್ದೇಶಕಿ ಡಾ. ರತ್ನಾವತಿ, ಕನ್ನಡ ಪ್ರಾಧ್ಯಾಪಕ ಡಾ. ಗಿರಿಯಪ್ಪ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸ್ಪೂರ್ತಿ, ತೇಜಶ್ರೀ ಕಾರ್ಯಕ್ರಮ ನಿರೂಪಿಸಿದರು.
****

ವಿವಿ ಕಾಲೇಜಿನಲ್ಲಿ ಪ್ಲಾಸ್ಟಿನೇಷನ್ ತಂತ್ರಜ್ಞಾನ ಕಾರ್ಯಗಾರ - ಥರ್ಮಾಕೋಲ್ ಬಳಸಿ ಪ್ರಾಣಿಗಳ ಅಂಗಾಂಗ ಸಂರಕ್ಷಣೆ ಕುರಿತ ಪ್ರಾತ್ಯಕ್ಷಿಕೆ

ಮಂಗಳೂರು: ಪ್ರಾಣಿ ಹಾಗೂ ಅವುಗಳ ಅಂಗಾಂಗಗಳನ್ನು ಕಡಿಮೆ ಖರ್ಚಿನಲ್ಲಿ ಮತ್ತು ಪರಿಸರಕ್ಕೆ ಸಹ್ಯವಾಗುವಂತೆ ಸಂರಕ್ಷಿಸುವ “ಪ್ಲಾಸ್ಟಿನೇಷನ್ ಕಾರ್ಯಾಗಾರ”ವನ್ನು ವಿಶ್ವವಿದ್ಯಾನಿಲಯ ಕಾಲೇಜಿನ ರಸಾಯನಶಾಸ್ತ್ರ ವಿಭಾಗÀ ಮತ್ತು ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾರ್ಯಾಗಾರದಲ್ಲಿ ಬೆಂಗಳೂರಿನ ನಿವೃತ್ತ ಪಶುವಿಜ್ಞಾನಿ ಡಾ. ವಿ. ರಾಮಕೃಷ್ಣ ಪ್ರಾತ್ಯಕ್ಷಿಕೆ ನೀಡಿದರು. ಸಾಂಪ್ರದಾಯಕವಾಗಿ ಪ್ರಾಣಿಗಳನ್ನು ಫಾರ್ಮಾಲಿನ್ ರಾಸಾಯನಿಕ ದ್ರವ್ಯದಲ್ಲಿ ಇಟ್ಟು ಸಂರಕ್ಷಿಸುವುದು ವಾಡಿಕೆ. ಆದರೆ ಫಾರ್ಮಾಲಿನ್ ಕ್ಯಾನ್ಸರ್‍ಕಾರಕವಾಗಿದ್ದು ಅದರ ಬಳಕೆ ಸರಿಯಲ್ಲ. ಹೀಗಾಗಿ ಥರ್ಮಾಕೋಲ್ ನಂತಹ ನಿರುಪಯುಕ್ತ ವಸ್ತುವನ್ನು ಬಳಸಿ, ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಏಳು ವರ್ಷಗಳ ಸುದೀರ್ಘ ಸಂಶೋಧನೆಯ ಮೂಲಕ ಡಾ. ವಿ. ರಾಮಕೃಷ್ಣ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನ ಕ್ರಾಂತಿಕಾರಿಯೆಂದೇ ಹೇಳಲಾಗುತ್ತಿದೆ.
ಈ ಕಾರ್ಯಾಗಾರದಲ್ಲಿ ವಿವಿಧ ಬಗೆಯ ಮೀನುಗಳನ್ನು ಪ್ಲಾಸ್ಟಿನೇಟ್ ಮಾಡುವ ಮೂಲಕ ಪ್ರಾತ್ಯಕ್ಷಿಕೆ ನಡೆಸಲಾಯಿತು. ಪ್ರಾಂಶುಪಾಲ ಡಾ. ಉದಯಕುಮಾರ್ ಎಂ.ಎ. ಕಾರ್ಯಾಗಾರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ.ಎಸ್. ಪಿ. ಶಿವಪ್ರಕಾಶ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.
ರಸಾಯನಶಾಸ್ತ್ರ ವಿಭಾಗದ ಡಾ. ಕೆ.ಎಮ್. ಉಷಾ, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ಭಾಗವಹಿಸಿದ್ದರು. ಸ್ನಾತಕೋತ್ತರ  ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಲಕ್ಷಣ ಕೆ ಧನ್ಯವಾದ ಸಮರ್ಪಿಸಿದರು.
***

Workshop on International Financial Reporting Standards

Mangalore, October, 06: Mangalore University, Department of P G Studies and Research in Commerce Mangalagangothri, International Skill Development Corporation London, UK and University College, Mangaluru jointly organized a workshop on International Financial Reporting Standards (IFRS) on Saturday at Dr. Shivarama Karantha Hall of University College, Mangalore. 
Addressing the gathering, resource person C.A.Deepak Agarwal stressed on the perception of the people and said, “How other see you is not important, how you see yourself means everything”. Mangalore University Registrar  Prof. A M Khan, in his presidential remark spoke on  transparency of business institutions and advised the students to enhance the knowledge on IFRS. Prof. T. Mallikarjunappa, Department of M.B.A, Mangalore University addressed on the importance of IFRS.

Department of Commerce Dean and Chairman Prof. Ishwara P briefed on the workshop. BOS Commerce Chairman Prof. Y Muniraju informed on CBCS at post-graduation level. The delegates from various colleges of Mangalore University and other invitees were present on the occasion.

University College Principal Prof. Uday Kumar M A welcomed the gathering and the programme was concluded with vote of thanks by Programme Coordinator Prof. A Siddiq. Dr. Preethi Keerthi D’souza of Mangalore University Department of Commerce Mastered the ceremony.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Welcome to Thonse Naturecure Hospital
View More

40th Wedding Anniversary Wishes to Dr. Frank and Mrs. Alice Fernandes40th Wedding Anniversary Wishes to Dr. Frank and Mrs. Alice Fernandes
ಖಾಝಿ ಉಸ್ತಾದ್ ಅಹಮದ್ ಸಾಹೇಬ್ ನಿಧನ.ಖಾಝಿ ಉಸ್ತಾದ್ ಅಹಮದ್ ಸಾಹೇಬ್ ನಿಧನ.
Free Eye Camp at Mount Rosary, KallianpurFree Eye Camp at Mount Rosary, Kallianpur
Kemmannu Church - Weekly Announcements.Kemmannu Church - Weekly Announcements.
Veez Konkani Weekly e-Magazine # 58Veez Konkani Weekly e-Magazine # 58
Mount Rosary Church Annoucement for the weekMount Rosary Church Annoucement for the week
An Appeal from vittal churchAn Appeal from vittal church
Foundation Stone Laying Ceremony of Nayaab Residency by B. M. Zaffer & fly, Dubai, UAE.Foundation Stone Laying Ceremony of Nayaab Residency by B. M. Zaffer & fly, Dubai, UAE.
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Pedruchi Chavi January 2019Pedruchi Chavi January 2019
Konkani writters workshop in Udupi on 17th Feb.Konkani writters workshop in Udupi on 17th Feb.
Delite Catering, SanthekatteDelite Catering, Santhekatte
Milarchi Laram - Issue Jan 2019Milarchi Laram - Issue Jan 2019
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Funeral Photographs:

Robert lewis (92), St. Theresa B ward, Kemmannu<font color=red><center>Funeral Photographs:<P> </font color=red></center> Robert lewis (92), St. Theresa  B ward, Kemmannu
ROZARICHO GAANCH DECEMBER 2018ROZARICHO GAANCH DECEMBER 2018
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India