Brief Mumbai, Mangalore News with pictures
Kemmannu News Network, 13-10-2018 14:22:56
Mumbai Oct. 12 :- Mrs. Rani George, IAS - Tourism Secretary interact with media during the Trade Meet in Mumbai organised by Kerala Tourism. In pic an artist performing cultural dance.
Bollywood actor and co-founder Malaika Arora during launch of a premium Yoga Studio - DIVA YOGA, for women only,in mumbai on friday.
ಹೋಪ್ ಫೌಂಡೇಶನ್ ಧಾರಾವಿ ಸಂಸ್ಥೆಯಿಂದ ಅಧ್ಯಾಪಕತ್ವ ತರಗತಿ ಉದ್ಘಾಟನೆ ಶಿಕ್ಷಣದಲ್ಲಿ ಬಡವರ ಮಕ್ಕಳೆಂಬ ಕೀಳರಿಮೆ ಸಲ್ಲದು-ಕವಿ ಗೋಪಾಲ ತ್ರಾಸಿ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಅ.11: ಬಡವರ ಮಕ್ಕಳೆಂಬ ಕೀಳರಿಮೆ ಬೇಡ ನಿಮ್ಮಂತಹ ಮಕ್ಕಳು ಬರೇ ಅವಕಾಶ ವಂಚಿತರು ಅಷ್ಟೆ. ನಿಮ್ಮೊಳಗೂ ನಾನಾ ಪ್ರತಿಭೆಗಳು ಹುದುಗಿರ ಬಹುದು. ನೀವು ಸರ್ವರಿಗೂ ಸಮಾನರು ಎಂಬ ಆತ್ಮ ವಿಶ್ವಾಸ ತಮ್ಮಲ್ಲಿ ಸದಾ ಇರಲಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗೋದು ಮುಖ್ಯ. ಅಂಕಗಳು ಕಡಿಮೆ ಬರಬಹುದು ಚಿಂತಿಸಬೇಡಿ. ಆದರೆ ಶ್ರದ್ಧೆಯಿಂದ ಅಭ್ಯಾಸವನ್ನು ಮಾಡುತ್ತಿರಬೇಕು ಎಂದು ಯುಎಸ್ಎ ಅಮೇರಿಕಾದ ಮೊಂಟ್ಗೊಮೆರಿ ಕಂಟ್ರಿ ರಾಜ್ಯ ಕೌನ್ಸಿಲ್ ಗೌರವ ಸ್ವೀಕೃತ ಕನ್ನಡದ ಸಂವೇದನಾಶೀಲ ಕವಿ, ಕಥೆಗಾರ ಗೋಪಾಲ ತ್ರಾಸಿ ನುಡಿದರು.
ಸಯಾನ್ ಧಾರವಿ ಇಲ್ಲಿನ ರಾಜೀವ ಗಾಂಧಿ ನಗರದಲ್ಲಿನ ಹೋಪ್ ಫೌಂಡೇಶನ್ ಧಾರಾವಿ (ರಿ.) ಸಂಸ್ಥೆ ಇತ್ತೀಚೆಗೆ ಧಾರವಿ ಅಲ್ಲಿನ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ವಿದ್ಯಾಲಯದಲ್ಲಿ ಆಯೋಜಿಸಿದ್ದ ಅಧ್ಯಾಪಕತ್ವ ತರಗತಿ ಉದ್ಘಾಟನೆ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿದ್ದು ಗೋಪಾಲ ತ್ರಾಸಿ ಮಾತನಾಡಿ ಹೋಪ್ ಫೌಂಡೇಶನ್ ಸಂಘಟನೆಯ ಮುಂದಾಳುತನದಲ್ಲಿ ಬಡ ಮಕ್ಕಳಿಗಾಗಿ ಉಚಿತ ಟ್ಯೂಷನ್ ತರಗತಿಯಲ್ಲಿ ಪ್ರೇರಣಾ ಭಾಷಣಕಾರರಾಗಿ ನೆರೆದಿದ್ದ ಮಕ್ಕಳು ಮತ್ತು ಪಾಲಕರನ್ನು ಉದ್ದೇಶಿಸಿ ಮಾತನಾಡಿ ಫೌಂಡೇಶನ್ ಬಯಸಿದರೆ ಕಥೆ, ನಾಟಕ, ಚಿತ್ರಕಲೆ ಶಿಬಿರಗಳನ್ನು ಆಯೋಜಿಸಲು ನನ್ನ ಸಹಕಾರ ಇದೆ. ಧಾರಾವಿ ಪರಿಸರ ಶ್ರಮಜೀವಿ ಯುವಕರ ತಂಡ ಬಡ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಉಚಿತ ಟ್ಯೂಷನ್ ನೀಡಿ ಸಹಕರಿಸಲು ಮುಂದಾದದ್ದು ಉದಾತ್ತ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಇದೆ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವ್ಯಕ್ತಿತ್ವ ವಿಕಸನ, ಕಥೆ, ಕವಿತೆ, ನಾಟಕ, ಮುಂತಾದ ವಿಷಯಗಳ ಕುರಿತು ನನ್ನ ಸಹಕಾರ ಇದೆ ಎಂದು ತ್ರಾಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಫೆÇೀರ್ಟ್ ಎಜ್ಯುಕೇಶನ್ ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ್ ಮೂಡಬಿದ್ರೆ, ಮಹೇಂದ್ರ ಎಂಡ್ ಮಹೇಂದ್ರ ಸಂಸ್ಥೆಯ ಅಧಿಕಾರಿ ಡಾ| ಮೋನಾ ಐಯ್ಯರ್, ಸ್ಕೌಟ್ ಶಿಕ್ಷಕ ಕೃಷ್ಣ ಸುವರ್ಣ ಮತ್ತು ಕನ್ನಡ ಸಿರಿ ಧಾರವಿ ಸಂಸ್ಥೆಯ ಅಧ್ಯಕ್ಷ ಬಾಲಚಂದ್ರ ದೇವಾಡಿಗ ಅತಿಥಿüಗಳಾಗಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಫೌಂಡೇಶನ್ನ ಸಾಮಾಜಿಕ ಕಳಕಳಿ ಮತ್ತು ಶಿಕ್ಷಣ ಪೆÇ್ರೀತ್ಸಹವನ್ನು ಪ್ರಶಂಸಿಸಿ ಅಭಿನಂದಿಸಿದರು.
ಬಡತನವೇ ಮಕ್ಕಳ ವಿಕಾಸನಕ್ಕೆ ಅಡ್ಡಿಯಾಗಬಾರದು. ಅವರಲ್ಲಿನ ಪ್ರತಿಭೆಗಳಿಗೆ ಅವಕಾಶಗಳನ್ನು ಒದಗಿಸಿ ಕೊಡಬೇಕು. ಶಿಕ್ಷಣದಲ್ಲಿ ಮೇಲುಕೀಳು ಇಲ್ಲ, ಎಲ್ಲರೂ ಸಮಾನರು. ನಿಮ್ಮಲ್ಲಿ ನಾಚಿಕೆ ಸ್ವಭಾವ ಸಲ್ಲದು. ನಮ್ಮೊಲಗಿನ ಶಕ್ತಿಯನ್ನು ನಾವೇ ಕಡೆಗಣಿಸಬಾರದು. ಮಕ್ಕಳು ಮೊಬೈಲ್ನಿಂದ ದೂರವಿರಬೇಕು. ಶ್ರಮ ಪಟ್ಟು ಸಾಧನೆ ಮಾಡಿದರೆ ಬದುಕಿನಲ್ಲಿ ಎತ್ತರ ಸ್ಥಾನ ಏರಲು ಸಾಧ್ಯ," ಎಂದು ಹೇಳಿದರು. ಮುಂದೆ ಅವರು ತಮ್ಮ ಶ್ರೀಮತಿಯವರಿಂದ ಮಕ್ಕಳಿಗಾಗಿ ಇಂಗ್ಲಿಷ್ ಸ್ಪೀಕಿಂಗ್ ಕ್ಲಾಸ್ ನಡೆಸಿಕೊಡುವೆ ಎಂದು ಪ್ರಕಾಶ್ ಮೂಡಬಿದ್ರೆ ಭರವಸೆ ನೀಡಿದರು.
ತಮ್ಮ ಸಂಸ್ಥೆಯಲ್ಲಿ ಹನ್ನೊಂದು ಮಂದಿ ಬಡ ಯುವಕರು ಇದ್ದು, ನಾವು ಕಲಿಯುವಾಗ ಪಟ್ಟ ಕಷ್ಟ ಈ ಮಕ್ಕಳಿಗೆ ಬರಬಾರದು ಎಂಬ ಉದ್ದೇಶದಿಂದ ಉಚಿತ ಟ್ಯೂಷನ್ ತರಗತಿ ತೆರೆಯಲಾಗಿದೆ. ಮುಂದೆ ಇನ್ನೂ ಅನೇಕ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ ಅದಕ್ಕಾಗಿ ಎಲ್ಲರ ಪೆÇ್ರೀತ್ಸಾಹ, ಸಹಾಯ ಬೇಕೆಂದು ಹೋಪ್ ಫೌಂಡೇಶನ್ನ ಅಧ್ಯಕ್ಷ ಅನಿಲ್ ಬೋಡೋಲ್ ತಿಳಿಸಿ ಉಚಿತ ಟ್ಯೂಶನ್ ತರಗತಿಗಳನ್ನು ನಡೆಸಲು ಸ್ಥಳಾವಕಾಶ ಮಾಡಿಕೊಟ್ಟ ಎಕೆಡಿವಿ ಸಂಸ್ಥೆಯ ಕಾರ್ಯದರ್ಶಿ ನಿರಂಜನ್ ನಂದೇಪಲ್ಲಿ ಹಾಗೂ ಸಂಸ್ಥೆಯ ಎಲ್ಲ ಪದಾಧಿಕಾರಿಗಳಿಗೆ ಅಭಿವಂದಿಸಿ ಸಂಸ್ಥೆಯ ಹುಟ್ಟು ಮತ್ತು ಉದ್ದೇಶಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಹಲವು ವಿದ್ಯಾಥಿರ್üಗಳು ಮತ್ತು ಪಾಲಕರು ಹಾಜರಿದ್ದು, ಬೋಂಬೆ ಫೆÇೀರ್ಟ್ ರಾತ್ರಿ ಪ್ರೌಢ ಶಾಲೆಯ ಸ್ಕೌಟ್ ಶಿಕ್ಷಕ ಹಾಗೂ ಅಥಿüತಿಗಳಿಂದ ಮಕ್ಕಳಿಗೆ ಪುಸ್ತಕ-ಲೇಖನಿ ವಿತರಿಸಲಾಯಿತು. ಉಪಾಧ್ಯಕ್ಷ ಭೀಮರಾಯ ಚಿಲ್ಕ ಸ್ವಾಗತಿಸಿ ಅತಿಥಿüಗಳನ್ನು ಪರಿಚಯಿಸಿದÀರು. ಕು| ಕೆ.ಸೋನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ತಾಯಪ್ಪ ಅನಮೋಲ ಮತ್ತು ಸರ್ವರಿಗೂ ಧನ್ಯವಾದಗೈದರು.
ಅ.21ರಿಂದ ಚಂದನವಾಹಿನಿಯಲ್ಲಿ `ಕಟೀಲು ಶ್ರೀ ದೇವಿ ಚರಿತೆ’ ಕನ್ನಡ ಧಾರಾವಾಹಿ ಪ್ರಸಾರ
ಮಂಗಳೂರು: ಚೆಲ್ಲಡ್ಕ ದಡ್ಡಂಗಡಿ ಕುಸುಮೋದರ ಡಿ ಶೆಟ್ಟಿ ಅರ್ಪಿಸುವ ಚಂದ್ರಹಾಸ ಆಳ್ವ ಚೆಲ್ಲಡ್ಕ ನಿರ್ದೇಶನದ, ಭವಾನಿ ಕ್ರಿಯೇಶನ್ಸ್ ರವರ `ಕಟೀಲು ಶ್ರೀ ದೇವಿ ಚರಿತೆ’ ಕನ್ನಡ ಧಾರಾವಾಹಿ ಅ.21ರಿಂದ ಚಂದನ ವಾಹಿನಿಯಲ್ಲಿ ಮಧ್ಯಾಹ್ನ 12ರಿಂದ 12.30ರವರೆಗೆ ಪ್ರಸಾರವಾಗ ಲಿದೆ ಎಂದು ನಿರ್ದೇಶಕ ಚಂದ್ರಹಾಸ ಆಳ್ವ ಹೇಳಿದರು.
ಅವರು ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುರಾಣ ಕತೆಗಳನ್ನು ಆಧರಿಸಿ ಈ ಧಾರಾವಾಹಿ ಚಿತ್ರೀಕರಣ ಮಾಡಲಾ ಗಿದೆ ಜನರ ನಂಬಿಕೆಗೆ ದಕ್ಕೆ ಬರ ಬಾರದು. ಸೃಷ್ಠಿಯ ಮೂಲಕ ಕತೆ ಆರಂಭವಾಗುತ್ತದೆ.ಇದರಲ್ಲಿ ಪರಶುರಾಮ ಚರಿತೆ ಇದೆ ಪುರಾಣಗಳ ವಿಶಿಷ್ಠ ಅನುಭವನ್ನು ಜನತೆಗೆ ತಲುಪಿಸುವ ಉದೇಶ ಇಟ್ಟುಕೊಂಡಿ ದ್ದೇವೆ ಎಂದರು.
ಚೆಲ್ಲಡ್ಕ ದಡ್ಡಂಗಡಿ ರಾಧಾಕೃಷ್ಣ ಡಿ ಶೆಟ್ಟಿ ಮತ್ತು ಚೆಲ್ಲಡ್ಕ ದಡ್ಡಂಗಡಿ ಪ್ರಕಾಶ್ ಡಿ ಶೆಟ್ಟಿ ನಿರ್ಮಾಪಕರಾಗಿ ದ್ದಾರೆ. ಚಿತ್ರೀಕರಣಕ್ಕೆ ಶ್ರೀ ಬೆಂಗಳೂ ರಿನ ಆಕಾಶ ಪರ್ವ ಸಂಗೀತ ನೀಡಿದ್ದಾರೆ ಆರ್.ಕೆ. ಮಂಗಳೂರು ಛಾಯಾಗ್ರಹಣ, ದಯೇಶ್, ಸವಿರಾಜ್ ಕಲ್ಲಡ್ಕ ವರ್ಣಾಲಂಕಾರ ನೀಡಿದ್ದಾರೆ. ದಯೇಶ್ ಮತ್ತು ಕರುಣಾಕರ ರೈ ಚೆಲ್ಲಡ್ಕರವರ ಕಲೆಯಿದ್ದು, ರಾಜರಾಜೇಶ್ವರಿ ವಸ್ತ್ರಭಂಡಾರ ಮಸೂರುರವರ ವಸ್ತ್ರಾಭರಣ, ಪ್ರಕಾಶ್ ಬೆಂಗಳೂರುರವರ ಸಾಹಸ, ದಿನೇಶ್ ಆಚಾರ್ಯರವರ ಗ್ರಾಫಿಕ್ಸ್ ವೈಶಾಲಿ ಉಡುಪಿಯವರ ಸಂಕಲನ ಇದೆ. ಮದನ ಹರಿಣಿಯವರ ನೃತ್ಯ ನಿರ್ದೇಶನವಿದೆ. ಪ್ರಚಾರ: ಕರ್ನೂರು ಮೋಹನ್ ರೈ. ಹಿನ್ನಲೆ ಗಾಯಕರಾಗಿ ಸತೀಶ ಶೆಟ್ಟಿ ಪಟ್ಲ, ಅಶ್ವಿನ್ ಶರ್ಮ, ಐಶ್ವರ್ಯ ರಂಗರಾಜನ್, ಅನನ್ಯಾ ಭಗತ್, ದಿವ್ಯನಿಧಿ ರೈ ಇದ್ದಾರೆ. ತಾರಾಂಗಣದಲ್ಲಿ ಶಂಕರ ಭಟ್, ಹರೀಶ ಭಟ್ ಬೊಂತಿಮಗರು, ಶ್ರೀಪಾದ ಹೆಗಡೆ, ಪ್ರದೀಪ ಚಂದ್ರ ಕುತ್ವಾಡಿ, ಡಾ. ರಾಜೇಶ ಬೆಜ್ಪಂಗಳ, ಡಾ ರಾಘವೇಂದ್ರ ರಾವ್, ಶೀತಲ್ಶೆಟ್ಟಿ, ಅಶೋಕ ಪಕ್ಕಳ, ಜೀ ಡ್ರಾಮಾ ಜ್ಯೂನಿಯರ್ ತುಷಾರ್, ರೋಹಿತ್ ಕುಮಾರ್ ಕಟೀಲು, ಉದಯ ಕುಮಾರ್ ಶೆಟ್ಟಿ ಇನ್ನಾ, ಪುಷ್ಪಾಕರ ರೈ , ಕೀತಿ ಮೈಸೂರು, ರಾಜೇಶ ವಿಟ್ಲ, ಸುಕೃತಿ ಮೈಸೂರು, ಜಗಜೀವನರಾಮ ಶೆಟ್ಟಿ, ಶೇಖರ ಕಾರ್ಕಳ, ಲಿಖಿತ ಕುದ್ದುಪದವು, ಪ್ರತೀಕ ಆರ್ ಶೆಟ್ಟಿ, ಚರಿತ್ ಜಿ. ಆಳ್ವ, ರಾಜೇಶ್ ಎಸ್, ಸನತ್ ರೈ ಮೈರಾ ಸಹ ನಿರ್ದೇ ಶಕರಾಗಿ ಕೀರ್ತಿರಾಜಿ ಮೈಸೂರು, ಮಂಜುನಾಥ ತುಮಕೂರು, ದಯೇಶ, ಸಹಾಯಕ ನಿರ್ದೇಶಕರಾಗಿ ಕುಮಾರಿ ಐಶು ಇದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕರ್ನೂರು ಮೋಹನ್ ರೈ, ಡಾ.ರಾಘವೇಂದ್ರ ರಾವ್, ಜಗಜೀವನ್ ರಾಂ ಶೆಟ್ಟಿ, ಪುಷ್ಪಾಕರ ರೈ,ಚಲ್ಲಡ್ಕ ರಾಧಾಕೃಷ್ಣ ರೈ ಇದ್ದರು
ಮಂಗಳೂರು- ಕೊಲ್ಲೂರು ದಸರಾ-ಮಹಾನವಮಿ - ಆಕಾಶವಾಣಿಯ ನೇರಪ್ರಸಾರದಲ್ಲಿ ವೀಕ್ಷಕ ವಿವರಣೆ
ಮಂಗಳೂರು ಆಕಾಶವಾಣಿ ಕೇಂದ್ರವು ದಸರಾ ಹಾಗೂ ಮಹಾನವಮಿ ಉತ್ಸವದ ನೇರಪ್ರಸಾರ ಮಾಡಲು ಮಂಗಳೂರು ಹಾಗೂ ಕೊಲ್ಲೂರಿನಲ್ಲಿ ವ್ಯಾಪಕ ಸಿದ್ಧತೆ ಮಾಡಿಕೊಂಡಿದೆ. ಮಂಗಳೂರು ದಸರಾ ವೈಭವದ, ಮುಖ್ಯಮಂತ್ರಿಗಳ ಭೇಟಿ ಮತ್ತು ಶೋಭಾಯಾತ್ರೆಯ ಹಾಗೂ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಮಹಾನವಮಿ ರಥೋತ್ಸವ ವಿಜಯದಶಮಿಯ ನೇರಪ್ರಸಾರದ ವೀಕ್ಷಕ ವಿವರಣೆ ಬಿತ್ತರವಾಗಲಿದೆ.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ-2018 ರ ಉದ್ಘಾಟನಾ ಸಮಾರಂಭ ಅಕ್ಟೋಬರ 14 ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರವೇರಿಸಲಿದ್ದು ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರದ ಸಂತೋಷಿ ಕಲಾ ಮಂಟಪದಿಂದ ಸಾಯಂಕಾಲ 5 ಗಂಟೆ 30 ನಿಮಿಷಕ್ಕೆ ನೇರ ಪ್ರಸಾರ ಮಾಡಲಾಗುವುದು. ಆತ್ಮಶಕ್ತಿ ವಿವಿಧೊದ್ಧೇಶ ಸಹಕಾರಿ ಸಂಘದ ಸಹಯೋಗದೊಂದಿಗೆ ನೇರಪ್ರಸಾರ ಮೂಡಿ ಬರಲಿದೆ. ಅಕ್ಟೋಬರ್ 19 ರಂದು ನಡೆಯುವ ಬೃಹತ್ ಮಂಗಳೂರು ದಸರಾ ಮೆರವಣಿಗೆಯ ವೀಕ್ಷಕ ವಿವರಣೆಯನ್ನು ಸಾಯಂಕಾಲ 5 ಗಂಟೆ 30 ನಿಮಿಷದಿಂದ ಪ್ರಸಾರ ಮಾಡಲಾಗುವುದು.
ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ನಡೆಯುವ ಮಹಾನವಮಿ, ರಥೋತ್ಸವ ಹಾಗೂ ವಿಜಯದಶಮಿ ಕಾರ್ಯಕ್ರಮಗಳನ್ನು ಅಕ್ಟೋಬರ್ 18 ಮತ್ತು 19 ರಂದು ನೇರ ಪ್ರಸಾರ ಮಾಡಲಾಗುವುದು. ಅಕ್ಟೋಬರ್ 18 ರಂದು ಬೆಳಿಗ್ಗೆ 9 ಗಂಟೆಯಿಂದ ಚಂಡಿಕಾ ಹೋಮ ಹಾಗೂ ರಥೋತ್ಸವ ಹಾಗೂ ಅಕ್ಟೋಬರ್ 19 ರಂದು ಬೆಳಿಗ್ಗೆ 8 ಗಂಟೆ 30 ನಿಮಿಷದಿಂದ ವಿಜಯದಶಮಿ ದಿನ ನವಾನ್ನಪ್ರಾಶನದ ಹಾಗೂ ವಿದ್ಯಾರಂಭ ಕುರಿತ ವೀಕ್ಷಕ ವಿವರಣೆ ಮೂಡಿಬರಲಿದೆ.
ಆಕಾಶವಾಣಿ ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ಉಷಾಲತಾ ಸರಪಾಡಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಅಧಿಕಾರಿಗಳ ವೀಕ್ಷಕ ವಿವರಣೆಕಾರರ ತಂಡ ರಚಿಸಲಾಗಿದೆ. ಈ ದಸರಾ-ಮಹಾನವಮಿಯ ನೇರ ಪ್ರಸಾರವನ್ನು ಎಫ್ಎಂ 100.3 ಹಾಗೂ 1089 ಕಿಲೋಹಟ್ರ್ಸ್ನಲ್ಲಿ ಆಲಿಸುವಂತೆ ನಿಲಯದ ಪ್ರಕಟನೆ ಕೋರಿದೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link