Brief Udupi News with pictures 23rd October


Richard Dsouza
Kemmannu News Network, 24-10-2018 12:12:37


Write Comment     |     E-Mail To a Friend     |     Facebook     |     Twitter     |     Print


 ಅಕ್ಟೋಬರ್ 24 (ನಾಳೆ) ಬೆಳಗ್ಗೆ 10.30 ಗಂಟೆಗೆ ಅಂಬೇಡ್ಕರ್ ಭವನ, ಆದಿ ಉಡುಪಿಯಲ್ಲಿ ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಪತ್ರಕರ್ತರು ಭಾಗವಹಿಸಲು ಕೋರಿದೆ.

ಅನ್ಯಾಯ,ಅಸಮಾನತೆ ವಿರುದ್ದ ಹೋರಾಟಕ್ಕೆ ರಾಣಿ ಚೆನ್ನಮ್ಮ ಪ್ರೇರಣೆ- ಡಿಸಿ
      ಉಡುಪಿ, ಅಕ್ಟೋಬರ್ 23 (ಕರ್ನಾಟಕ ವಾರ್ತೆ) : ಸಮಾಜದಲ್ಲಿನ ಅನ್ಯಾಯ , ಅಸಮಾನತೆ, ಸಾಮಾಜಿಕ ಪಿಡುಗುಗಳು ನಿವಾರಣೆಯಾಗುವವರೆಗೂ ಹೋರಾಟ ನಿರಂತರವಾಗಿರಬೇಕು, ಇಂತಹ ಹೋರಾಟಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಎಲ್ಲರಿಗೂ ಮಾದರಿಯಾಗಲಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
      ಅವರು ಮಂಗಳವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ, ವಳಕಾಡು ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆದ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

      ಕಿತ್ತೂರ ರಾಣಿ ಚೆನ್ನಮ್ಮ ಬ್ರಿಟೀಷರು ನಡೆಸುತ್ತಿದ್ದ ಅನ್ಯಾಯ, ಅಸಮಾನತೆಯ ವಿರುದ್ದ ಹೋರಾಟ ಮಾಡಿದವರು, ಸ್ವಾತಂತ್ರ್ಯ ಪೂರ್ವದಲ್ಲಿ ಚೆನ್ನಮ್ಮ ನಡೆಸಿದ ಹೋರಾಟದ ಕಾರಣಗಳು ಇಂದಿನ ಸಮಾಜದಲ್ಲೂ ಮುಂದುವರೆದಿವೆ, ಸಮಾಜದಲ್ಲಿ ಇಂದಿಗೂ ಆಚರಣೆಯಲ್ಲಿರುವ ಸಾಮಾಜಿಕ ಪಿಡುಗು, ಅಸಮಾನತೆ ವಿರುದ್ದ  ಹೋರಾಟ ನಡೆಸಲು ಚೆನ್ನಮ್ಮ  ಪ್ರೇರಣೆಯಾಗಬೇಕು, ಚೆನ್ನಮ್ಮರ ಬದುಕು ಎಲ್ಲರಿಗೂ ಮಾರ್ಗದರ್ಶಕವಾಗಿರಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
      ಕಿತ್ತೂರ ರಾಣಿ ಚೆನ್ನಮ್ಮ ಕುರಿತು ವಿಶೇಷ ಉಪನ್ಯಾಸ ನೀಡಿದ ಶ್ರೀಕಾಂತ ಶೆಟ್ಟಿ, ದೇಶದ  ಮೊದಲನೇ ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ಮುಂಚೆ ಬ್ರಿಟೀಷರ ವಿರುದ್ದ ಕಿತ್ತೂರ ರಾಣಿ ಚೆನ್ನಮ್ಮ ಹೋರಾಡಿದ್ದರು, ಬ್ರಿಟೀಷರ ನಿರಂತರ ದಬ್ಬಾಳಿಕೆ, ದೌರ್ಜನ್ಯ ವಿರುದ್ದ ಹೋರಾಡಿದ್ದ ಅವರ ಬದುಕು ಯುವ ಜನತೆಗೆ  ಪ್ರೇರಣೆಯಾಗಬೇಕು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಜೀವ ಬಲಿದಾನ ಮಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಎಲ್ಲಾ ಮಹನೀಯರನ್ನು ನೆನೆಯಬೇಕು ಎಂದರು.
      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅಧ್ಯಕ್ಷತೆ ವಹಿಸಿದ್ದರು. ಎಎಸ್ಪಿ ಕುಮಾರ ಚಂದ್ರ ಉಪಸ್ಥಿತರಿದ್ದರು. ಹಿರಿಯಣ್ಣ ಶೆಟ್ಟಿಗಾರ್ ಮತ್ತು ಬಳಗದವರಿಂದ ಕಿತ್ತೂರ ರಾಣಿ ಚೆನ್ನಮ್ಮ ಯಕ್ಷಗಾನ ಪ್ರಸಂಗ ಕಾರ್ಯಕ್ರಮ ನಡೆಯಿತು.
      ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಸ್ವಾಗತಿಸಿದರು, ವಳಕಾಡು ಪ್ರೌಢಶಾಲೆಯ ಮುಖ್ಯೋಪಧ್ಯಾಯನಿ ನಿರ್ಮಲಾ ವಂದಿಸಿದರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ನಿರೂಪಿಸಿದರು.

ಬೈಂದೂರು: ವಿದ್ಯುನ್ಮಾನ ಮತ ಯಂತ್ರಗಳ ಪ್ರಾತ್ಯೆಕ್ಷತೆ
    ಉಡುಪಿ, ಅಕ್ಟೋಬರ್ 23 (ಕರ್ನಾಟಕ ವಾರ್ತೆ) : ಶಿವಮೊಗ್ಗ ಲೋಕಸಭಾ ಉಪ ಚುನಾವಣೆ 2018 ಕ್ಕೆ ಸಂಬಂಧಿಸಿದಂತೆ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮ ಪಂಚಾಯತ್‍ಗಳಲ್ಲಿ ಈ ಕೆಳಕಂಡ ದಿನಾಂಕಗಳಂದು ವಿದ್ಯುನ್ಮಾನ ಮತ ಯಂತ್ರಗಳ ಪ್ರಾತ್ಯೆಕ್ಷತೆಯು ನಡೆಯಲಿದೆ.
    ಅಕ್ಟೋಬರ್ 24 ರಂದು ಶಿರೂರು, ಕಾಲ್ತೋಡು, ನಾಡಾ, ಹೊಸಾಡು, ಗುಲ್ವಾಡಿ, ಕಾವ್ರಾಡಿ, ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಮತ ಯಂತ್ರಗಳ ಪ್ರಾತ್ಯೆಕ್ಷತೆ ನಡೆಯಲಿದೆ.
    ಅಕ್ಟೋಬರ್ 25 ರಂದು ಗೋಳಿಹೊಳೆ, ಉಪ್ಪುಂದ, ಆಲೂರು, ಹೆಮ್ಮಾಡಿ, ಕುರ್ಕುಂಜೆ ಮತ್ತು ಅಂಪಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಮತ ಯಂತ್ರಗಳ ಪ್ರಾತ್ಯೆಕ್ಷತೆ ನಡೆಯಲಿದೆ.
    ಅಕ್ಟೋಬರ್ 26 ರಂದು ಕೊಲ್ಲೂರು, ಕಿರಿಮಂಜೇಶ್ವರ, ಹಕ್ಲಾಡಿ, ಕಟ್ ಬೆಲ್ತೂರು, ಆಜ್ರಿ, ಶಂಕರನಾರಾಯಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಮತ ಯಂತ್ರಗಳ ಪ್ರಾತ್ಯೆಕ್ಷತೆ ನಡೆಯಲಿದೆ.
    ಅಕ್ಟೋಬರ್ 29 ರಂದು ಜೆಡ್ಕಲ್, ನಾವುಂದ, ತ್ರಾಸಿ, ಪಡುವರಿ, ಕೆರಾಡಿ, ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಮತ ಯಂತ್ರಗಳ ಪ್ರಾತ್ಯೆಕ್ಷತೆ ನಡೆಯಲಿದೆ.
    ಅಕ್ಟೋಬರ್ 30 ರಂದು ಇಡೂರು-ಕುಂಜ್ಞಾಡಿ, ಹೇರೂರು, ಗುಜ್ಜಾಡಿ, ಹಟ್ಟಿಯಂಗಡಿ, ಹಳ್ಳಿಹೊಳೆ, ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಮತ ಯಂತ್ರಗಳ ಪ್ರಾತ್ಯೆಕ್ಷತೆ ನಡೆಯಲಿದೆ.
    ಅಕ್ಟೋಬರ್ 31 ರಂದು ಚಿತ್ತೂರು, ಮರವಂತೆ, ಗಂಗೊಳ್ಳಿ, ವಂಡ್ಸೆ, ಯಡಮೊಗೆ, 74 ಉಳ್ಳೂರು, ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಗಿಗಿPಂಖಿ ಬಗ್ಗೆ ಅರಿವು ಮೂಡಿಸುವ ಪ್ರಾತೆಕ್ಷತೆ ನಡೆಯಲಿದೆ.
ಬೈಂದೂರು ಚುನಾವಣೆ: ಎಂಸಿಎಂಸಿ ರಚನೆ
     ಉಡುಪಿ, ಅಕ್ಟೋಬರ್ 23 (ಕರ್ನಾಟಕ ವಾರ್ತೆ) : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆ ಪ್ರಯುಕ್ತ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ(ಎಂಸಿಎಂಸಿ) ರಚಿಸಲಾಗಿದೆ.
     ಬೈಂದೂರು ತಹಶೀಲ್ದಾರ್ ಕಚೇರಿಯಲ್ಲಿ ಸಮಿತಿ ಕಾರ್ಯಾಚರಿಸಲಿದೆ. ಚುನಾವಣೆಗೆ ಸಂಬಂಧಪಟ್ಟ ಎಲ್ಲಾ ಕೇಬಲ್ ಟಿವಿ ಜಾಹಿರಾತುಗಳನ್ನು ಎಂಸಿಎಂಸಿ ಸಮಿತಿಯಿಂದ ಪ್ರಮಾಣೀಕರಿಸಬೇಕಿದೆ. ಸಾರ್ವಜನಿಕರು ಎಂಸಿಎಂಸಿ ಸಮಿತಿಯ ದೂರವಾಣಿ ಸಂಖ್ಯೆ: 08254-251657 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಶೇಷ ಚೇತನರಿಗೆ ಚುನಾವಣಾ  ಸಹಾಯವಾಣಿ
    ಉಡುಪಿ, ಅಕ್ಟೋಬರ್ 23 (ಕರ್ನಾಟಕ ವಾರ್ತೆ) : ನವೆಂಬರ್ 3 ರಂದು ನಡೆಯಲಿರುವ ಲೋಕಸಭಾ ಉಪ ಚುನಾವಣೆ-2018 ಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯ ವಿಶೇಷ ಚೇತನರಿಗೆ ಮತಗಟ್ಟೆಯಲ್ಲಿನ ವ್ಯವಸ್ಥೆಗಳ ಬಗ್ಗೆ ಸಹಾಯವಾಣಿ ಸಂಖ್ಯೆ: 0820-2574811 ರಡಿ ಮಾಹಿತಿ ನೀಡಲಾಗುವುದು.
    ಗಾಲಿ ಕುರ್ಚಿ, ಭೂತಗನ್ನಡಿ, ಮತಗಟ್ಟೆಗೆ ಹೋಗಿ ಬರಲು ವಿಶೇಷ ಚೇತನ ಮತ್ತು ಹಿರಿಯ ನಾಗರಿಕ ಅಶಕ್ತ ಮತದಾರರಿಗೆ ವಾಹನದ ವ್ಯವಸ್ಥೆಗಳ ಅವಶ್ಯಕತೆ ಇರುವ, ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿಶೇಷ ಚೇತನ ಮತದಾರರು, ಕಚೇರಿ ವೇಳೆಯಲ್ಲಿ (ಸರಕಾರಿ ರಜಾ ದಿನ ಹೊರತುಪಡಿಸಿ) ಮಾಹಿತಿಗಾಗಿ ಮೇಲಿನ  ಸಹಾಯವಾಣಿಯನ್ನು ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪ ಚುನಾವಣೆ: ವೀಕ್ಷಕರ ನೇಮಕ- ದೂರು ಸ್ವೀಕಾರ
    ಉಡುಪಿ ಅಕ್ಟೋಬರ್ 23 (ಕರ್ನಾಟಕ ವಾರ್ತೆ):- ಭಾರತ ಚುನಾವಣಾ ಆಯೋಗವು ಅಕ್ಟೋಬರ್ 6 ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ಘೋಷಿಸಿದ್ದು, ಅದರಂತೆ 118-ಬೈಂದೂರು ವಿಧಾನ ಸಭಾ ಕ್ಷೇತ್ರದ ಚುನಾವಣಾ ಸಂಬಂಧ ದೂರುಗಳ ಸ್ವೀಕಾರಕ್ಕಾಗಿ ಬೈಂದೂರು ತಹಶೀಲ್ದಾರರ ಕಚೇರಿಯಲ್ಲಿ ಅomಠಿಟಚಿiಟಿಣ ಒoಟಿiಣoಡಿiಟಿg ಅeಟಟ ಅನ್ನು ತೆರೆಯಲಾಗಿದೆ. ಚುನಾವಣಾ ಸಂಬಂಧ ಯಾವುದಾದರೂ ದೂರುಗಳು ಇದ್ದಲ್ಲಿ, ಸಾರ್ವಜನಿಕರು ದೂ.ಸಂಖ್ಯೆ: 08254-251657 ಗೆ ಕರೆಮಾಡಿ ದೂರು ನೀಡಬಹುದಾಗಿದೆ.
    ಅಲ್ಲದೇ ಚುನಾವಣಾ ಆಯೋಗವು, ಚುನಾವಣಾ ವೀಕ್ಷಕರಾಗಿ ಸಂಜಯ್ ಕುಮಾರ್ ರಾಕೇಶ್ ಅವರನ್ನು (ದೂ.ಸಂಖ್ಯೆ: 09013900600), ಪೊಲೀಸ್ ವೀಕ್ಷರನ್ನಾಗಿ ಸೋಲೋಮನ್ ಯಶ್ ಕುಮಾರ್ ಮಿನ್ಜಾರನ್ನು (ದೂ.ಸಂಖ್ಯೆ: 07389941114) ಹಾಗೂ ಚುನಾವಣಾ ಖರ್ಚು ವೆಚ್ಚದ ವೀಕ್ಷಕರನ್ನಾಗಿ ವಿಜಯ ನಾರಾಯಣ ಕೊಠಾರಿಯವರನ್ನು (ದೂ.ಸಂಖ್ಯೆ: 09998994779) ನೇಮಕ ಮಾಡಲಾಗಿರುತ್ತದೆ.
    ಚುನಾವಣಾ ಸಂಬಂಧ ಈ ಮೇಲೆ ತಿಳಿಸಿದ ವೀಕ್ಷಕರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳುವಂತೆ ಬೈಂದೂರು ತಾಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಲೋಕಾಯುಕ್ತ ಕಾಯ್ದೆಯಡಿ ದೂರು ಸಲ್ಲಿಕೆ

      ಉಡುಪಿ ಅಕ್ಟೋಬರ್ 23 (ಕರ್ನಾಟಕ ವಾರ್ತೆ):- ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ವಿಚಾರಣೆ ಬಯಸುವ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬಹುದು.
     ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಹಾಗೂ ಗಂಭೀರವಲ್ಲದ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ದೃಷ್ಠಿಯಿಂದ ದೂರು ಅರ್ಜಿಗಳನ್ನು ಅಕ್ಟೋಬರ್ 25 ರಂದು ಬೆಳಿಗ್ಗೆ 11 ಗಂಟೆಯಿಂದ 12.30 ರವರೆಗೆ ಕಾರ್ಕಳ ಪ್ರವಾಸಿ ಮಂದಿರ, ಅಕ್ಟೋಬರ್ 26 ರಂದು ಬೆಳಿಗ್ಗೆ 11 ಗಂಟೆಯಿಂದ 12.30 ರವರೆಗೆ ಕುಂದಾಪುರ ಪ್ರವಾಸಿ ಮಂದಿರದಲ್ಲಿ ಹಾಗೂ ಅಕ್ಟೋಬರ್ 27 ರಂದು ಬೆಳಗ್ಗೆ 11 ಗಂಟೆಯಿಂದ 12.30 ರವರೆಗೆ ಬೈಂದೂರು ಪ್ರವಾಸಿ ಮಂದಿರದಲ್ಲಿ ದೂರು ಸ್ವೀಕರಿಸಲಾಗುವುದು. 
     ಉಡುಪಿ ತಾಲೂಕಿಗೆ ಸಂಬಂದಪಟ್ಟಂತೆ ದೂರು ಅರ್ಜಿಗಳನ್ನು ನೀಡುವವರು ನೇರವಾಗಿ ಕರ್ನಾಟಕ ಲೋಕಾಯಕ್ತ ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
    ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಉಡುಪಿ, ದೂರವಾಣಿ ಸಂಖ್ಯೆ 0820-2527770, ಪೊಲೀಸ್ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ, ಉಡುಪಿ ದೂರವಾಣಿ ಸಂಖ್ಯೆ: 0820-2536661 ಸಂಪರ್ಕಿಸಬಹುದು ಎಂದು ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ವಿಭಾಗ, ಕರ್ನಾಟಕ ಲೋಕಾಯುಕ್ತ, ಉಡುಪಿ  ಇವರ  ಪ್ರಕಟಣೆ ತಿಳಿಸಿದೆ.


“ಮುಖ್ಯಮಂತ್ರಿ ಕಪ್” : ದಸರಾ ರಾಜ್ಯ ಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಉಡುಪಿ ಡಿವೈಇಎಸ್ ತಂಡಕ್ಕೆ ದ್ವಿತೀಯ ಸಮಗ್ರ ಪ್ರಶಸ್ತಿ

       ಉಡುಪಿ ಅಕ್ಟೋಬರ್ 23 (ಕರ್ನಾಟಕ ವಾರ್ತೆ):- ಮೈಸೂರು ಎನ್‍ಐಇ ಕಾಲೇಜಿನ, ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 9 ರಿಂದ 12 ರವರೆಗೆ ನಡೆದ ಮುಖ್ಯಮಂತ್ರಿ ಕಪ್ ದಸರಾ ರಾಜ್ಯ ಮಟ್ಟದ ಭಾರ ಎತ್ತುವ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಉಡುಪಿ ಜಿಲ್ಲಾ ಕ್ರೀಡಾಂಗಣದ ಡಿವೈಇಎಸ್ ತಂಡವು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.
ತಂಡದ ಸದಸ್ಯರು: ಸುಮನಾ ಎಂ., ವಿಶ್ಮಾ, ಶವೀನಾ, ಪ್ರತೀಕ್ಷಾ ಜಿ.ಎಂ, ರಜನಿ ನಾಯ್ಕ, ಪ್ರತೀಕ್ಷಾ ಶೆಟ್ಟಿ, ಐಶ್ವರ್ಯ, ಶರಣಿತಾ, ಶ್ರಾವ್ಯ.
    ರಾಜ್ಯ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಎನ್‍ಐಎಸ್ ತರಬೇತುದಾರರಾದ ರಘುನಾಥ್.ಬಿ.ಎಸ್ ಇವರು ಈ ತಂಡಕ್ಕೆ ತರಬೇತಿಯನ್ನು ನೀಡಿರುತ್ತಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮೃತ ವ್ಯಕ್ತಿಯ ಮಾಹಿತಿ ಪತ್ತೆ ಬಗ್ಗೆ
      ಉಡುಪಿ ಅಕ್ಟೋಬರ್ 23 (ಕರ್ನಾಟಕ ವಾರ್ತೆ):- ಜಿಲ್ಲಾ ಆಸ್ಪತ್ರೆ ಉಡುಪಿಯಲ್ಲಿ ಒಳರೋಗಿಯಾದ ದಾಖಲಾದ ಪರಂಪಳ್ಳಿ ಗ್ರಾಮದ ಶೇಖರ ಪೂಜಾರಿ (54 ವರ್ಷ)  ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುತ್ತಾರೆ. ವಾರಸುದಾರರು ಯಾರಾದರು ಇದ್ದಲ್ಲಿ ಜಿಲ್ಲಾ ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0820-2520555 / 9449827833 ನ್ನು  ಸಂಪರ್ಕಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸರ ಪ್ರಕಟಣೆ ತಿಳಿಸಿದೆ.
ರಾಜ್ಯ ಮಟ್ಟಕ್ಕೆ ಆಯ್ಕೆ
     ಉಡುಪಿ ಅಕ್ಟೋಬರ್ 23 (ಕರ್ನಾಟಕ ವಾರ್ತೆ):- ಮೂಕಾಂಬಿಕಾ ದೇಗುಲದ ಪ್ರೌಢಶಾಲೆ, ಅರೆಶಿರೂರು, ಗೋಳಿಹೊಳೆ ಇಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಸೈಂಟ್ ಸಿಸಿಲಿ ಆಂಗ್ಲ ಮಾ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಾದ ತ್ರಿಶಾ(100 ಮೀ.,200 ಮೀ.,400 ಮೀ.,ಓಟ ಹಾಗೂ 4*100 ರಿಲೇಯಲ್ಲಿ ಪ್ರಥಮ),  ಧ್ರುವ ಬಲ್ಲಾಳ್( 100 ಮೀ.,ಹಾಗೂ 200 ಮೀ. ಓಟ ಪ್ರಥಮ) ಮತ್ತು ರೆಬೆಕ್ಕಾ ಮರಿಯಾ ರೋಡ್ರಿಗಸ್ (ಉದ್ದ ಜಿಗಿತ ದ್ವಿತೀಯ, 4*100ಮೀ. ರಿಲೇ ಪ್ರಥಮ) ಭಾಗವಹಿಸಿ, ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನವೀನ್‍ಚಂದ್ರ ಸುವರ್ಣ ಹಾಗೂ ಹಿರಿಯಡ್ಕ ಬ್ಲಾಕ್ ಅಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಆಯ್ಕೆ

ಉಡುಪಿ ಜಿಲ್ಲಾ ಕಾಂಗ್ರೆಸ್ ವ್ಯಾಪ್ತಿಯ ಕಾಪು ವಿಧಾನಸಭಾ ಕ್ಷೇತ್ರದ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ(ದಕ್ಷಿಣ)ಗೆ ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ರೀ ನವೀನ್‍ಚಂದ್ರ ಸುವರ್ಣ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಶ್ರೀ ಪ್ರವಿಣ್ ಶೆಟ್ಟಿಯವರನ್ನು ಕಾಪು ಉತ್ತರ ಬ್ಲಾಕ್ ಸಮಿತಿ ಅಧ್ಯಕ್ಷರನ್ನಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ದಿನೇಶ್ ಗುಂಡೂರಾವ್‍ರವರು ನೇಮಕ ಮಾಡಿ ಆದೇಶಿಸಿದ್ದಾರೆ. ಅಲ್ಲದೆ ಕಾಪು ವಿಧಾನಸಭಾ ಕ್ಷೇತ್ರದ ಕಾಪು ನಗರ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರನ್ನಾಗಿ ಶ್ರೀ ಮಹಮ್ಮದ್ ಸಾಧಿಕ್‍ರವರನ್ನು ನೇಮಕ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಜನಾರ್ದನ ತೋನ್ಸೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi