Brief Mumbai, Mangalore News with pictures


Rons Bantwal
Kemmannu News Network, 26-10-2018 14:57:48


Write Comment     |     E-Mail To a Friend     |     Facebook     |     Twitter     |     Print


Mumbai Oct. 23 :- In pic L to R Mr. Ross Luo, Indian Market General Manager - Tuya, Mr. Rajesh Uttamchandani, Director, Syska Group, Mr. Agarwal, Mr. Mengda Zhao, Chief Strategic Investment Officer of Tuya Smart & Actor Kunal Kapoor.

Mumbai Oct. 23 :- Union Minister for Textiles Smt. Smriti Zuben Irani addressing the Young Thinkers Conference in Mumbai.

Mumbai,Oct.26: Bollywood actress Jacqueline Fernandez & Edgard Kagan at the launched of Skechers largest Store in India. In pic also seen Mr. Rahul Vira, CEO, Sketchers, South asia Pvt. Ltd.

Bhappi Lahiri hosted Lakshmi puja at his residence With ongoing festivity and post Durga Puja, Lakhi Pujo is celebrated with same zest and devotion, Bhappi lahiri hosted an evening at his home.
Govinda, Alka Yagnik, Sameer, Hollywood actress Lauren Maddox visited Bhappi lahiri says "This time of the year is to meet friends and family and devote in prayers and devotion.

ನ.03: ತುಳು ಸಂಘ ಅಂಕ್ಲೇಶ್ವರ ಉದ್ಘಾಟನೆ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಗುಜರಾತ್ ಘಟಕದ ವಾರ್ಷಿಕೋತ್ಸವ
ಮುಂಬಯಿ, ಅ.23: ಗುಜರಾತ್ ರಾಜ್ಯದ ಅಂಕ್ಲೇಶ್ವರ ಇಲ್ಲಿನ ಪುರಭವನದ ಮಾ ಶಾರದ ಭವನ ಸಭಾಗೃಹದಲ್ಲಿ ಇದೇ ನ.03ನೇ ಶನಿವಾರ ತುಳು ಸಂಘ ಅಂಕ್ಲೇಶ್ವರ ಉದ್ಘಾಟನೆ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಗುಜರಾತ್ ಘಟಕದ ವಾರ್ಷಿಕೋತ್ಸವ ಸಂಭ್ರಮಿಸಲಿದೆ.

ತುಳು ಸಂಘ ಅಂಕ್ಲೇಶ್ವರ ಅಧ್ಯಕ್ಷ ಶಂಕರ್ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10.00 ಗಂಟೆಗೆ ನಡೆಸಲ್ಪಡುವ ಉಭಯ ಕಾರ್ಯಕ್ರಮಗಳನ್ನು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ಉದ್ಘಾಟಿಸುವರು. ಮುಖ್ಯ ಅತಿಥಿüಯಾಗಿ ಶ್ರೀ ಮೂಕಾಂಬಿಕಾ ದೇವಸ್ಥಾನ ಘನ್ಸೋಲಿ ಇದರ ಸಮಿತಿ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ, ಗೌರವ ಅತಿಥಿüಗಳಾಗಿ ಗುಜರಾತ್ ಬಿಲ್ಲವ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‍ನ ಸಂಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಅಧ್ಯಕ್ಷ ಅಜಿತ್ ಎಸ್.ಶೆಟ್ಟಿ, ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ, ಮಾಜಿ ಅಧ್ಯಕ್ಷ ಐ.ವಿಶೆಟ್ಟಿ, ತುಳು ಐಸಿರಿ ವಾಪಿ ಗುಜರಾತ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಸಂಘ ಸೂರತ್ ಉಪಾಧ್ಯಕ್ಷ ಪ್ರಭಾಕರ್ ಶೆಟ್ಟಿ, ತುಳುಸಿರಿ ಅಂಕ್ಲೇಶ್ವರ ಅಧ್ಯಕ್ಷೆ ಸಂಧ್ಯಾ ಎಸ್.ಶೆಟ್ಟಿ, ಕರ್ನಾಟಕ ಸಂಘ ಅಂಕ್ಲೇಶ್ವರ ಅಧ್ಯಕ್ಷ ಉದಯ ಹೊನ್ನಾವರ್, ಶ್ರೀ ವೇದಛಲ ಸೇವಾ ಟ್ರಸ್ಟ್ ಮಣಿಪಾಲ ಉಡುಪಿ ಅಧ್ಯಕ್ಷ ಹರಿಪ್ರಸಾದ್ ರೈ ಬೆಳ್ಳಿಪಾಡಿ, ಕರ್ನಾಟಕ ಸಂಘ ಬರೋಡಾ ಗೌರವಾಧ್ಯಕ್ಷ ಜಯರಾಮ ಎಸ್.ಶೆಟ್ಟಿ, ಬಂಟ್ಸ್ ಸಂಘ ಅಹ್ಮದಾಬಾದ್ ಅಧ್ಯಕ್ಷ ಅಪ್ಪುಶೆಟ್ಟಿ, ತುಳುಸಿರಿ ವಾಪಿ ಗುಜರಾತ್ ಅಧ್ಯಕ್ಷ ಸುಕೇಶ್ ಶೆಟ್ಟಿ, ಹಿರಿಯ ಉದ್ಯಮಿಗಳಾದ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್, ರಾಧಾಕೃಷ್ಣ ಶೆಟ್ಟಿ ಸೂರತ್, ಪಾಂಡು ಶೆಟ್ಟಿ ವಸಾಯಿ, ಶಿವರಾಮ ಶೆಟ್ಟಿ ಸೂರತ್, ಪ್ರಕಾಶ್ ಶೆಟ್ಟಿ ಸೂರತ್, ಅಂಕ್ಲೇಶ್ವರದ ಉದ್ಯಮಿಗಳಾದ ಗಣಪತಿ ಆಚಾರ್ಯ, ಉದಯ ಸಿ.ಶೆಟ್ಟಿ, ಹರೀಶ್ ಪೂಜಾರಿ, ಕರುಣಾಕರ್ ಶೆಟ್ಟಿ ಮತ್ತಿತರ ಮಹಾನೀಯರು ಆಗಮಿಸಲಿದ್ದಾರೆ.


ಸಂಜೆ 6.00 ಗಂಟೆಗೆ ನಡೆಸಲ್ಪಡುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿsಗಳಾಗಿ ಗುಜರಾತ್ ರಾಜ್ಯದ  ಕ್ರೀಡೆ ಹಾಗೂ ಸಾರಿಗೆ ಸಚಿವ ಈಶ್ವರ್‍ಸಿಂಹ್ ಪಾಟೇಲ್, ಭರುಚ್ ಜಿಲ್ಲಾಧಿಕಾರಿ ರವಿ ಕುಮಾರ್ ಅರೋರಾ (ಐಎಎಸ್), ಭರುಚ್‍ನ ಪೆÇಲೀಸ್ ವರಿಷ್ಠಾಧಿಕಾರಿ ರಾಜೇಂದ್ರಸಿಂಹ್ ಚೂಡಸಾಮಾ, ಜಿಐಡಿಸಿ ಅಸೋಸಿಯೇಶನ್ ಅಂಕ್ಲೇಶ್ವರ ಅಧ್ಯಕ್ಷ ಮಹೇಶ್ ಪಾಟೇಲ್, ಅಂಕ್ಲೇಶ್ವರ ನಗರಪಾಲಿಕೆ ಅಧ್ಯಕ್ಷೆ ದಕ್ಷಾಬೆನ್ ಶ್ಹಾ, ಮುನಿಯಾಳ್ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿ ಉದಯ ಶೆಟ್ಟಿ ಮುನಿಯಾಳ್, ಬಂಟ್ಸ್ ಸಂಘ ಮುಂಬಯಿ ಇದರ ವಿೂರಾ ಭಯಂಧರ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಲ್ಲಾರ್, ಕರ್ನಾಟಕ ಸಮಾಜ ಸೂರತ್ ಅಧ್ಯಕ್ಷ ಮನೋಜ್ ಸಿ.ಪೂಜಾರಿ, ಉದ್ಯಮಿಗಳಾದ ಬಾಬುಭಾಯಿ ಪಾಟೇಲ್, ರಾಮಕೃಷ್ಣ ಗಂಭೀರ್, ಹರೀಶ್ ಬಿ.ಶೆಟ್ಟಿ, ಜಯಂತ್ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಇದರ ಉನ್ನತ ಶಿಕ್ಷಣ ಸಮಿತಿ ಉಪ ಕಾರ್ಯಾಧ್ಯಕ್ಷ ಕಿಶೋರ್ ಕುಮಾರ್ ಕುತ್ಯಾರ್ ಇನ್ನಿತರ ಗಣ್ಯರು ಭಾಗವಹಿಸಿ ಶ್ರೀ ಮಹಾಂತ್ ಶ್ರೀ ಮನ್‍ಮೋಹನ್ ದಾಸ್‍ಜಿ ಗುಮನ್ದೇವ್ ಪಿತಾದೀಸ್ ಅವರ ಗುರುವಂದನೆಗೈದು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸುವರು.


ಕರ್ನೂರು ಮೋಹನ್ ರೈ ಮತ್ತು ನವೀನ್ ಶೆಟ್ಟಿ ಯೆಡ್ಮೇಮರ್ ಕಾರ್ಯಕ್ರಮ ನಿರೂಪಿಸಲಿದ್ದು, ಮನೋರಂಜನಾ ಕಾರ್ಯಕ್ರಮವಾಗಿ ಉಭಯ ಸಂಸ್ಥೆಗಳ ಸದಸ್ಯರು ಹಾಗೂ ಮಕ್ಕಳು ಸಾಂಸ್ಕೃತಿಕ ವೈಭವ ಮತ್ತು ಯಕ್ಷಗಾನ ಕಲಾವಿದರು ಸತೀಶ್ ಶೆಟ್ಟಿ ಪಟ್ಲ ಭಾಗವತಿಕೆಯಲ್ಲಿ `ಕನಕಾಂಗಿ ಕಲ್ಯಾಣ’ ಯಕ್ಷಗಾನ ಪ್ರದರ್ಶಿಸುವರು ಎಂದು ತುಳು ಸಂಘ ಅಂಕ್ಲೇಶ್ವರ ಇದರ ಪ್ರಧಾನ ಕಾರ್ಯದರ್ಶಿ ಅಶೋಕ್ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗುಜರಾತ್ ಘಟಕದ ಗೌರವಾಧ್ಯಕ್ಷ ರವಿನಾಥ್ ವಿ.ಶೆಟ್ಟಿ, ಸಂಚಾಲಕ ಶಶಿಧರ್ ಬಿ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಶಾಲ್ ಶಾಂತಾ ತಿಳಿಸಿದ್ದಾರೆ.

ದಿನಪೂರ್ತಿ ನಡೆಸಲ್ಪಡುವ ಸಮಾರಂಭಂದಲ್ಲಿ ನಾಡಿನ ಎಲ್ಲಾ ತುಳು-ಕನ್ನಡಿಗರು ಮತ್ತು ಕಲಾಭಿನಾಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ಸಿಗೊಳಿಸುವಂತೆ ತುಳು ಸಂಘ ಅಂಕ್ಲೇಶ್ವರ ಉದರ ಗೌರವಾಧ್ಯಕ್ಷ ರವಿನಾಥ್ ವಿ.ಶೆಟ್ಟಿ, ಉಪಾಧ್ಯಕ್ಷ ಹರೀಶ್ ಪೂಜಾರಿ, ಕೋಶಾಧಿಕಾರಿ ಶಂಕರ್ ಆರ್.ಶೆಟ್ಟಿ,  ಜೊತೆ ಕಾರ್ಯದರ್ಶಿ ಯೋಗೇಶ್ ರೈ, ಜೊತೆ ಕೋಶಾಧಿಕಾರಿ ರವಿ ರೈ, ಸಂಘಟನಾ ಕಾರ್ಯದರ್ಶಿಗಳಾದ ಹರೀಶ್ ಬಿ.ಶೆಟ್ಟಿ ಮತ್ತು ಅಜಿತ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಬಾಲಕೃಷ್ಣ ಗಂಭೀರ್, ಕ್ರೀಡಾ ಕಾರ್ಯದರ್ಶಿ ಸಂತೋಷ್ ಜಿ.ಶೆಟ್ಟಿ, ಭಜನಾ ಕಾರ್ಯದರ್ಶಿ ಸತೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ಎಸ್.ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಮಮತಾ ಆರ್.ಶೆಟ್ಟಿ, ಕಾರ್ಯದರ್ಶಿ ಶೋಭಾ ಆರ್.ಗಂಭೀರ್, ಕೋಶಾಧಿಕಾರಿ ಸತಿತಾ ಆರ್.ಶೆಟ್ಟಿ, ಜೊತೆ ಕಾರ್ಯದರ್ಶಿ ಸುಮಾ ಎಸ್.ಶೆಟ್ಟಿ, ಜೊತೆ ಕೋಶಾಧಿಕಾರಿ ಶಾಂತಿ ಪಿ.ಶೆಟ್ಟಿ ಸೇರಿದಂತೆ ಸಲಹಾದಾರರು ಮತ್ತು ಸರ್ವ ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.  (ರೊನಿಡಾ ಮುಂಬಯಿ)

ಸ್ವಯಂವರ ಸಭಾಗೃಹದಲ್ಲಿ ಇಪ್ಪತ್ತನ್ನೇ ವಾರ್ಷಿಕ ಶ್ರೀ ಶಾರದಾ ಪೂಜಾ ಉತ್ಸವ ಆಚರಿಸಿದ ಜಿ.ಎಸ್.ಬಿ ಮಂಡಲ ಡೊಂಬಿವಲಿ
ಮುಂಬಯಿ, ಅ.23: ಜಿ.ಎಸ್.ಬಿ ಮಂಡಲ ಡೊಂಬಿವಲಿ ತನ್ನ 20ನೇ ವಾರ್ಷಿಕ ಶ್ರೀ ಶಾರದಾ ಪೂಜಾ ಮಹೋತ್ಸವವನ್ನು ಕಳೆದ ನವರಾತ್ರಿಗಳಲ್ಲಿ ಡೊಂಬಿವಲಿ ಪೂರ್ವದ ಸ್ವಯಂವರ ಸಭಾಗೃಹದಲ್ಲಿ ಅದ್ದೂರಿಯಾಗಿ ಸಂಭ್ರಮಿಸಿತು. ಸೋಮವಾರ (ಅ.15)ದಿಂದ ಗುರುವಾರ (ಅ.18) ವರೆಗೆ ವಾರ್ಷಿಕ ಶ್ರೀ ಶಾರದಾ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಸಿತು.

ಸೋಮವಾರ ಮೂಲಾ ನಕ್ಷತ್ರ ದಂದು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಆ ನಂತರ ಪ್ರಾಣ ಪ್ರತಿಷ್ಠೆ ನಡೆಸಿತು. ಪ್ರತಿದಿನ ಬೆಳಗ್ಗೆ ಚಂಡಿಕಾ ಹವನ, ಪಂಚದುರ್ಗಾ ಹವನ ಮತ್ತು ಲಕ್ಷ್ಮೀ ನಾರಾಯಣ ಹವನ, ಮಧ್ಯಹ್ನ ಪೂಜೆ, ಅನ್ನ ಸಂತರ್ಪಣೆ ಸಂಜೆ ವೇಳೆಗೆ ದುರ್ಗಾ ನಮಸ್ಕಾರ ರಾತ್ರಿ ಪೂಜೆ ಮತ್ತು ಭಜಕರಿಂದ ಭಜನೆ ನಡೆಯಿತು. ಮಂಗಳವಾರ ಮಹಿಳೆಯರಿಂದ ದೇವಿಗೆ ಸಹಸ್ರ ಕುಂಕುಮಾರ್ಕನೆ ನಡೆಯಿತು. ದುರ್ಗಷ್ಟಮಿ ದಿನ ದೇವಿಯ ವಿಶ್ವರೂಪ ದರ್ಶನ ಹಾಗೂ ದೀಪರಾಧನೆ ಸೇವೆ ನಡೆಯಿತು. ಗುರುವಾರ ದೇವಿಗೆ ಮಂಗಳೂರಿನ ಮಲ್ಲಿಗೆಜಲ್ಲಿ ಬಿಟ್ಟು (ಸೋನ್ ಫೂಲ್) ನಿಂದ ಅಲಂಕಾರ ಮಾಡಲಾಯಿತು. ದೇವಿಗೆ ಸರಸ್ವತಿ, ಲಕ್ಷಿ ್ಮದೇವಿ, ಲಲಿತಾ ದೇವಿ, ದುರ್ಗಾದೇವಿ ವಿವಿಧ ರೂಪದಲ್ಲಿ ಅಲಂಕಾರ ನಡೆಸಲಾಯಿತು.

ಗುರುವಾರ ಸಂಜೆ ಅಲಂಕೃತ ವಾಹನದಲ್ಲಿ ಪುರಮೆರವಣಿಗೆಯೊಂದಿಗೆ ಜಲಸ್ಥಂಬನೆ ಮಾಡಲಾಯಿತು. ಈ ಸಂದರ್ಭದಲ್ಲಿ ಡೊಂಬಿವಲಿ ಅಲ್ಲದೆ ಥಾಣೆ, ಮಂಬಯಿಯಿಂದ ಸಹಸ್ರಾರು ಭಕ್ತರು ಆಗಮಿಸಿ ಶ್ರೀದೇವಿ ಮಾತೆಯ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ಪ್ರತಿವರ್ಷದಂತೆ ಈ ವರ್ಷವೂ ಮಂಗಳೂರುನ ಕಲಾವಿದ ದೇವಿಮೂರ್ತಿಯನ್ನು ಕೋಟೇಶ್ವರದ ಅವೆ ಮಣ್ಣಿನಿಂದ ತಯಾರಿಸಿ ಬರಮಾಡಿಕೊಳ್ಳಲಾಯಿತು.

 

ಶಾಸಕರ ವಸತಿಗೃಹದಲ್ಲಿನ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯಿಂದ 45ನೇ ವಾರ್ಷಿಕ ನವರಾತ್ರಿ ಉತ್ಸವÀ ಮತ್ತು ದಸರಾ ಸಂಭ್ರಮ

ಮುಂಬಯಿ, ಅ.22: ಮುಂಬಯಿ ಚರ್ಚ್‍ಗೇಟ್ ಇಲ್ಲಿನ ಮಹಾರಾಷ್ಟ್ರ ರಾಜ್ಯ ಶಾಸಕರ ವಸತಿಗೃಹದಲ್ಲಿನ ಎಂಎಲ್‍ಎ ಹಾಸ್ಟೇಲ್ ಪ್ರಸಿದ್ಧಿಯ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಈ ಬಾರಿ 45ನೇ ವಾರ್ಷಿಕ ನವರಾತ್ರಿ ಉತ್ಸವÀ ಮತ್ತು ದಸರಾ ಸಂಭ್ರಮ ಆಚರಿಸಿತು.

ಹೊರನಾಡ ತುಳು-ಕನ್ನಡಿಗರನ್ನೊಳಗೊಂಡ ಕ್ಯಾಂಟೀನ್ ಮಾಲೀಕರು ಮತ್ತು ನೌಕರವೃಂದವು ಸುಮಾರು ನಾಕ್ಲುವರೆ ದಶಕಗಳ ಹಿಂದೆ ತಮ್ಮ ಇಷ್ಟಾದೇವತೆ ಶ್ರೀಶಾರದಾದೇವಿ ಆರಾಧನೆ ಪ್ರಾರಂಭಿಸಿ ತುಳುನಾಡ ಸಂಪ್ರದಾಯ, ಸಂಸ್ಕೃತಿ, ಪೂಜೆಗಳೊಂದಿಗೆ ಶರನ್ನವರಾತ್ರಿ ಶ್ರೀ ದುರ್ಗಾಂಬಿಕೆ ದೇವಿಯನ್ನು ಪ್ರತಿಷ್ಠಾಪಿಸಿ ಅಲಂಕರಿಸಿ ಆರಾಧಿಸಿ ನವರಾತ್ರಿ ಆಚರಣೆ ಆಚರಿಸಲಾರಂಭಿಸಿದ್ದರು.

ಭಜನಾ ಮಂಡಳಿಯ ಅಧ್ಯಕ್ಷ ಹರೇಶ್ ಎಸ್.ಖೆಡೇಕರ್, ಗೌರವಾಧ್ಯಕ್ಷ ಜಯರಾಮ ಬಿ.ಶೆಟ್ಟಿ (ಅಜಂತಾ ಕ್ಯಾಟರರ್ಸ್), ಉಪಾಧ್ಯಕ್ಷ ನವೀನ್ ಕೆ.ಶೆಟ್ಟಿ, ಕಾರ್ಯದರ್ಶಿ ರಾಜು ಪೂಜಾರಿ, ಖಜಾಂಜಿ ಸೋಮಶೇಖರ ಬಂಗೇರ, ಜೊತೆ ಕಾರ್ಯದರ್ಶಿಗಳಾದ ಚಂದ್ರ ಮೊಗವೀರ, ಯೋಗೇಶ್ ಪುತ್ರನ್, ಯೋಗೇಶ್ ಬಂಗೇರ, ಜೊತೆ ಖಜಾಂಜಿ ಮನು ಪಾಟೇಲ್, ಸಲಹಾದಾರ ವಿಠಲ್ ಶೇರಿಗಾರ್ ಕಟಪಾಡಿ ಹಾಗೂ ಸದಸ್ಯರ ಸೇವೆ ಮತ್ತು ಮುಂದಾಳುತ್ವದಲ್ಲಿ ಈ ಬಾರಿ ಅಶ್ವಯಜ ಶುಕ್ಲ ಪಕ್ಷ ಮಹಾನಕ್ಷತ್ರ ಚಿತ್ರಾ ದಿನ ಬಿದಿಗೆಯ ಶರದೃತು ಆರಂಭದ ಶುಭಾವಸರದಲ್ಲಿ ಘಟಸ್ಥಾಪನೆ ಗೊಳಿಸಿ ನವರಾತ್ರಿ ಉತ್ಸವಕ್ಕೆ ಚಾಲನೆಯನ್ನೀಡಲಾಯಿತು.

ಒಂಭತ್ತು ದಿನಗಳಲ್ಲಿ ನಿತ್ಯಪೂಜೆ, ಅಭಿಷೇಕ, ಭಜನೆ, ಗಣಹೋಮ, ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಪೂಜೆ, ಮಹಾಕಾಳಿ ಮಾತೆಗೆ ಪೂಜೆ, ವಿಜಯ ದಶಮಿ ದಿನ ಕಳಸಪೂಜೆ, ಭಜನೆ, ಅನ್ನಸಂತರ್ಪಣೆ, ಮೆರವಣಿಗೆ ಯೊಂದಿಗೆ ಚೌಪಟ್ಟಿಯಲ್ಲಿ ಕಳಸ ವಿಸರ್ಜನೆ ನಡೆಸಿ ವಾರ್ಷಿಕ ಶರನ್ನವರಾತ್ರಿ ಸಂಭ್ರಮ ಸಡಗರದಿಂದ ಆಚರಿಸಲ್ಪಟ್ಟಿತು. ಉತ್ಸವದಲ್ಲಿ ಹಲವಾರು ಗಣ್ಯರು, ರಾಜಕೀಯ ಧುರೀಣರು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾದರು.

ಗೋರೆಗಾಂವ್ ಮೋತಿಲಾಲ್ ನಗರÀದ ಶ್ರೀ ಶಾಂತ ದುರ್ಗಾದೇವಿ ಮಂದಿರದಲ್ಲಿ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ವಾರ್ಷಿಕ ಶರನ್ನವÀರಾತ್ರಿ ಉತ್ಸವ
ಮುಂಬಯಿ, ಅ.10: ಗೋರೆಗಾಂವ್ ಪಶ್ಚಿಮದಲ್ಲಿನ ಮೋತಿಲಾಲ್ ನಗರÀದ ತುಳು-ಕನ್ನಡಿಗರ ಶ್ರೀ ಶಾಂತ ದುರ್ಗಾ ಚಾರಿಟೇಬಲ್ ಟ್ರಸ್ಟ್ ಸಂಚಾಲಕತ್ವದ ಶ್ರೀ ಶಾಂತ ದುರ್ಗಾ ದೇವಿ ಮಂದಿರದಲ್ಲಿ 2018ನೇ ವಾರ್ಷಿಕ ಶರನ್ನವರಾತ್ರಿ ಉತ್ಸವ ಸಂಭ್ರಮ ಸಡಗರದಿಂದ ನಡೆಸಲ್ಪಟ್ಟಿತು. ಸಾತ್‍ರಸ್ತಾ ಹಾಗೂ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಅಮ್ಮನವರ ಆರಾಧಕರಾಗಿದ್ದು ದೈವಕ್ಯ ಶ್ರೀ ನಿರಂಜನ ಸ್ವಾಮಿಜೀ ಅವರ ಅನುಗ್ರಹ ಮತ್ತು ದೇವಸ್ಥಾನದ ಧರ್ಮಾಧಿಕಾರಿ ಶ್ರೀ ಶ್ಯಾಮನಂದ ಸ್ವಾಮೀಜಿ ಮುಂದಾಳುತ್ವದಲ್ಲಿ ಶರನ್ನವರಾತ್ರಿ ವಿಧಿವತ್ತಾಗಿ ಆಚರಿಸಲ್ಪಟ್ಟಿತು.

ದಸರಾ ಹಬ್ಬದ ನವದಿನಗಳಲ್ಲಿ ಮಹಾಗಣಪತಿ ಹೋಮ, ಪಂಚಾಮೃತ ಅಭಿಷೇಕ, ನವಕ ಕಲಶ ಅಭಿಷೇಕ, ಘಟಸ್ಥಾಪನೆ, ಅಶ್ಲೇಷ ಬಲಿ ಪೂಜೆ, ಹೋಮ ಮತ್ತು ತೀರ್ಥಪ್ರಸಾದ, ಶ್ರೀ ಶನೀಶ್ವರ ಕಲ್ಪಕತಾ ಪೂಜೆ, ಸತ್ಯನಾರಾಯಣ ಮಹಾ ಪೂಜೆ, ಶ್ರೀ ರಂಗಪೂಜೆ, ದೀಪೆÇೀತ್ಸವ, ದುರ್ಗಾಷ್ಟಮಿ, ದುರ್ಗಾಹೋಮ, ಕಲಶಾಭಿಷೇಕ ಮತ್ತು ಗುರುವಾರ ವಿಜಯ ದಶಮಿ ದಿನ ಬೆಳಿಗ್ಗೆ ಘಟ ವಿಸರ್ಜನೆ, ಶ್ರೀದೇವಿಗೆ ಅಭಿಷೇಕ,  ಮಹಾ ಮಂಗಳಾರತಿ ಭಜನೆ, ದೇವಿ ಅವೇಶ (ದರ್ಶನ) ಪೂಜೆ, ಪ್ರವಿೂಳಾ ಪೂಜಾರಿ ತಂಡ ಹಾಗೂ ಸದ್ಗುರು ಭಜನಾ ಮಂಡಳಿ ಮೀರಾರೋಡ್ ಇವರಿಂದÀ ಭಜನೆ, ಕಾರ್ತಿಕ್ ಪಿಳ್ಳೈ, ಸ್ವಾಮಿ ಪಿಳ್ಳೈ ವಿಷ್ಣು ವಿಶ್ವನಾಥ ರಾಣೆ ಹಾಗೂ ವಿಹಾ ವಿಷ್ಣು ರಾಣೆ ಸೇವಾರ್ಥ ಅನ್ನಸಂತರ್ಪಣೆ ಇತ್ಯಾದಿಗಳೊಂದಿಗೆ ವಾರ್ಷಿಕ ಶರನ್ನವರಾತ್ರಿ ಸಂಭ್ರಮ ಸಡಗರದೊಂದಿಗೆ ಆಚರಿಸಲ್ಪಟ್ಟಿದ್ದು, ಮಂದಿರದ ಪ್ರಧಾನ ಅರ್ಚಕ ಕೃಷ್ಣರಾಜ್ ತಂತ್ರಿ ತನ್ನ ಪೌರೋಹಿತ್ಯದಲ್ಲಿ ವಿವಿಧ ಪೂಜಾಧಿಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ನೆರೆದ ಸದ್ಭಕ್ತರಿಗೆ ಅನುಗ್ರಹಿಸಿದರು. ಮಂದಿರದ ಧರ್ಮಾಧಿಕಾರಿ ಶ್ಯಾಮನಂದ ಸ್ವಾಮೀಜಿ ಗಣ್ಯರಿಗೆ ಸನ್ಮಾನಿಸಿ ಸತ್ಕರಿಸಿದರು.

ಮಂದಿರದ ವಿಶ್ವಸ್ಥ ಸದಸ್ಯರುಗಳಾದ ಉದಯ ಎಸ್.ಸಾಲಿಯಾನ್ ಮತ್ತು ಸೂರಜ್ ಎಸ್.ಸಾಲಿಯಾನ್  ಮುಂದಾಳುತ್ವದಲ್ಲಿ ಜರುಗಿದ ವಾರ್ಷಿಕ ಶರನ್ನವರಾತ್ರಿ ಉತ್ಸವದಲ್ಲಿ ಸ್ಥಾನೀಯ ನಗರ ಸೇವಕರುಗಳಾದ ಸಂದೀಪ್ ದೀಪಕ್ ಠಾಕೂರ್, ಶ್ರೀಕಲಾ ಪಿಳ್ಳೈ ಮತ್ತಿತರ ಗಣ್ಯರನೇಕರು ಅತಿಥಿüಗಳಾಗಿ ಆಗಮಿಸಿದ್ದರು. ನಾಡಿನ ಭಕ್ತಮಹಾಶಯರನೇಕರು ಉತ್ಸವದಲ್ಲಿ ಪಾಲ್ಗೊಂಡು ವಿವಿಧ ಸೇವೆಗಳನ್ನು ನೆರವೇರಿಸಿ ಶ್ರೀ ಶಾಂತ ದುರ್ಗಾದೇವಿ ಕೃಪೆಗೆ ಪಾತ್ರರಾದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | UdupiFinal Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, KemmannuVespers 2024 | St. Theresa’s Church, Kemmannu
Annual Church Feast 2024 | St. Theresa’s Church, KemmannuAnnual Church Feast 2024 | St. Theresa’s Church, Kemmannu
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | UdupiCHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From KemmannuAnnual Day 2023 | Carmel English School, Live From Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, UdupiEaster 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, UdupiFocus Studio, Near Hotel Kidiyoor, Udupi