Brief Udupi News with pictures


Richard Dsouza
Kemmannu News Network, 03-11-2018 16:48:02


Write Comment     |     E-Mail To a Friend     |     Facebook     |     Twitter     |     Print



    “ಸಹಕಾರ ಭಾರತಿಯ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಹಕಾರಿ ಕಾರ್ಯಕರ್ತ ಬಂಧುಗಳಿಗೆ ಅಭ್ಯಾಸ ವರ್ಗವನ್ನು ದಿನಾಂಕ 27-10-2018 ರಂದು ಶಿವಕೃಪಾ ಕಲ್ಯಾಣ ಮಂಟಪ, ಸಾಸ್ತಾನ ಇಲ್ಲಿ ನಡೆಯಿತು ಈ ಸಂದರ್ಭ ಬ್ರಹ್ಮಾವರ ತಾಲೂಕಿನ ಪದಾಧಿಕಾರಿಗಳ ಪಟ್ಟಿಯನ್ನು ಸಹಕಾರ ಭಾರತಿಯ ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀ ಬೋಳ ಸದಾಶಿವ ಶೆಟ್ಟಿ ಇವರು ವಾಚಿಸಿದರು.
ಸಹಕಾರ ಭಾರತಿ ಬ್ರಹ್ಮಾವರ ತಾಲೂಕಿನ ಪದಾಧಿಕಾರಿಗಳ ಪಟ್ಟಿ :- ಅಧ್ಯಕ್ಷರಾಗಿ ಅಶೋಕ್ ಪ್ರಭು, ಉಪಾಧ್ಯಕ್ಷರಾಗಿ ರಾಜೀವ ದೇವಾಡಿಗ, ನರಸಿಂಹ ನಾಯ್ಕ, ಮಹಾಬಲ ಕುಂದರ್, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕೆ. ನಾಯ್ಕ, ಕಾರ್ಯದರ್ಶಿಗಳಾಗಿ ರಾಘವೇಂದ್ರ ಕರ್ಕೇರ, ಎಚ್ ಅಮರ್ ಹಂದೆ, ಕೋಶಾಧಿಕಾರಿಗಳಾಗಿ ಪ್ರಶಾಂತ್ ಕುಲಾಲ್, ಮಹಿಳಾ ಸಂಘಟನಾ ಪ್ರಮುಖ್ ಆಗಿ ಸವಿತಾ, ಪೂರ್ಣಿಮಾ ಪುತ್ರನ್, ಪ್ರೇಮ ಆರ್, ಶ್ಯಾಮಲಾ ಪಾಂಡೇಶ್ವರ, ಸಮಿತಿ ಸದಸ್ಯರಾಗಿ 24 ಜನ ಆಯ್ಕೆಯಾದರು. ವಿಶೇಷ ಆಹ್ವಾನಿತರಾಗಿ ಶ್ರೀ ಮಂಜುನಾಥ್ ಎಸ್.ಕೆ, ಶ್ರೀ ಅಶೋಕ್ ಕುಮಾರ್ ಶೆಟ್ಟಿ, ಶ್ರೀ ಗಿರೀಶ್ ಪೈ ಇವರುಗಳ ಹೆಸರುಗಳನ್ನು ತಿಳಿಸಲಾಯಿತು.

ನವೆಂಬರ್ 1 (ನಾಳೆ) ಬೆಳಗ್ಗೆ 9 ಗಂಟೆಗೆ ಬೀಡಿನಗುಡ್ಡೆಯ ಮಹಾತ್ಮ ಗಾಂಧೀ ಬಯಲು ರಂಗ ಮಂದಿರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸುವ ಜಿಲ್ಲಾಧಿಕಾರಿಗಳ ಕಾರ್ಯಕ್ರಮದಲ್ಲಿ ಪತ್ರಕರ್ತರು ಭಾಗವಹಿಸಲು ಕೋರಿದೆ.
  
 ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಪಡೆಯಿರಿ- ಅಪರ ಜಿಲ್ಲಾಧಿಕಾರಿ
     ಉಡುಪಿ, ಅಕ್ಟೋಬರ್ 31 (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳು, ಅಲ್ಲಿನ ವೈವಿಧ್ಯತೆ ಇವುಗಳ ಬಗ್ಗೆ ಸ್ಥಳೀಯರು ಸಹ ಹೆಚ್ಚಿನ ಮಾಹಿತಿ ಹೊಂದಿರುವುದು ಅಗತ್ಯ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹೇಳಿದ್ದಾರೆ.
     ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅಳವಡಿಸಿದ್ದ ಡಿಜಿಟಲ್ ಸ್ಟಾಂಡಿ ಉದ್ಘಾಟಿಸಿ ಮಾತನಾಡಿದರು.
     ಉಡುಪಿ ಜಿಲ್ಲೆಯಲ್ಲಿರುವ ಹಲವು ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಸ್ಥಳೀಯರಿಗೆ ಸಹ ಮಾಹಿತಿ ಇರುವುದಿಲ್ಲ, ಸ್ಥಳೀಯರು ಜಿಲ್ಲೆಯ ಎಲ್ಲಾ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿ, ಮಾಹಿತಿ ಹೊಂದಿರಬೇಕು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಳವಡಿಸಿರುವ ಡಿಜಿಟಲ್ ಸ್ಟಾಂಡಿಯಲ್ಲಿ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳ ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ಅಳವಡಿಸಿದ್ದು,  ಪ್ರವಾಸೋದ್ಯಮ ಇಲಾಖೆಯಿಂದ ಮುಂದಿನ ದಿನಗಳಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ಸಹ ಪ್ರದರ್ಶಿತವಾಗುತ್ತದೆ. ಈ ಸ್ಟಾಂಡಿಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಮಾರ್ಗಸೂಚಿ,  ಹೋಟೆಲ್‍ಗಳು, ವಸತಿಗೃಹಗಳ ಮಾಹಿತಿಯನ್ನು ಸಹ ಅಳವಡಿಸಲು ನಿರ್ಧರಿಸಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾಯೋಗಿಕವಾಗಿ ಅಳವಡಿಸಿರುವ ಈ ಸ್ಟಾಂಡಿಯನ್ನು, ಮುಂದಿನ ದಿನಗಳಲ್ಲಿ ಬಸ್ ನಿಲ್ಧಾಣ, ರೈಲ್ವೆ ನಿಲ್ದಾಣ ಮತ್ತು ಶ್ರೀಕೃಷ್ಣ ಮಠದಲ್ಲಿ ಸಹ ಅಳವಡಿಸುವ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಪ್ರವಾಸಿಗರಿಗೆ ಸಮಗ್ರ ಮಾಹಿತಿ ಒದಗಿಸಲಾಗುವುದು ಎಂದು ವಿದ್ಯಾ ಕುಮಾರಿ ತಿಳಿಸಿದರು.
   ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಉಪಸ್ಥಿತರಿದ್ದರು.
ಏಕತಾ ದಿನಾಚರಣೆ- ಪ್ರತಿಜ್ಞಾ ಸ್ವೀಕಾರ
    ಉಡುಪಿ, ಅಕ್ಟೋಬರ್ 31 (ಕರ್ನಾಟಕ ವಾರ್ತೆ) : ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಎಲ್ಲಾ ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು.
ಮರಳು ದಿಬ್ಬ ತೆರವುಗೊಳಿಸುವ ಅರ್ಜಿದಾರರ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಸೂಚನೆ
    ಉಡುಪಿ, ಅಕ್ಟೋಬರ್ 31 (ಕರ್ನಾಟಕ ವಾರ್ತೆ) : ಉಡುಪಿ ಜಿಲ್ಲೆಯ ಉಡುಪಿ ಹಾಗೂ ಬ್ರಹ್ಮಾವರ ತಾಲೂಕಿನಲ್ಲಿನ ಮರಳು ದಿಬ್ಬ ತೆರವುಗೊಳಿಸಲು ಅರ್ಜಿ ಸಲ್ಲಿಸಿರುವ ಪರವಾನಿಗೆದಾರರ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿರುತ್ತದೆ.         
    ಅರ್ಜಿದಾರರ ಪಟ್ಟಿಯನ್ನು ಹಿರಿಯ ಭೂ ವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಡುಪಿ ಇವರ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಈ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಇದ್ದಲ್ಲಿ, ಸೂಕ್ತ ದಾಖಲೆಗಳೊಂದಿಗೆ 3 ದಿನಗಳೊಳಗೆ ಹಿರಿಯ ಭೂ ವಿಜ್ಞಾನಿಯವರ ಕಛೇರಿಗೆ ಸಲ್ಲಿಸುವಂತೆ ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಡುಪಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ: ಅರ್ಜಿ ಆಹ್ವಾನ
     ಉಡುಪಿ, ಅಕ್ಟೋಬರ್ 31 (ಕರ್ನಾಟಕ ವಾರ್ತೆ) : 2018-19 ನೇ ಸಾಲಿನ ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಸಿ.ಎಂ.ಇ.ಜಿ.ಪಿ) ಯಡಿ ಸ್ವಉದ್ಯೋಗ ಸ್ಥಾಪಿಸಲು ಆಸಕ್ತಿ ಇರುವ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ / ಯುವತಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಯು ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ(ಕೆ.ವಿ.ಐ.ಬಿ) ಗಳ ಮುಖಾಂತರ ಜಾರಿಗೊಳಿಸಲಾಗಿರುತ್ತದೆ.
      ಈ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ /ಯುವತಿಯರಿಗೆ  ಗರಿಷ್ಠ ಯೋಜನಾ ವೆಚ್ಚ ರೂ. 10 ಲಕ್ಷ ಬ್ಯಾಂಕ್ ಸಾಲದೊಂದಿಗೆ ಹೊಸ ಕೈಗಾರಿಕೆ ಉತ್ಪಾದನೆ ಚಟುವಟಿಕೆ ಹಾಗೂ ಆಯ್ದ ಕೆಲವು ಸೇವಾ ಘಟಕ ಸ್ಥಾಪಿಸುವವರಿಗೆ ಅವಕಾಶವಿದ್ದು, ಪ್ರಸ್ತುತ ಹೊಂದಿರುವ ಚಟುವಟಿಕೆ / ಘಟಕಗಳ ವಿಸ್ತರಣೆಗೆ ಅವಕಾಶ ಇರುವುದಿಲ್ಲ. ಯೋಜನಾ ವೆಚ್ಚದ ಶೇ. 25 ರಿಂದ 35 ರವರೆಗೆ ಸಹಾಯಧನ ನೀಡಲಾಗುವುದು.
    ಅಭ್ಯರ್ಥಿಯು ಕನಿಷ್ಠ 8 ನೇ ತರಗತಿ ಉತ್ತೀರ್ಣರಾಗಿದ್ದು, ಅರ್ಜಿದಾರರು ಕನಿಷ್ಠ 18 ವರ್ಷದವರಾಗಿರಬೇಕು. ಸಾಮಾನ್ಯ ವರ್ಗದವರಿಗೆ ಗರಿಷ್ಠ 35 ವರ್ಷ ಮತ್ತು ವಿಶೇಷ ವರ್ಗದವರಿಗೆ (ಮಹಿಳೆ/ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗ/ ಅಲ್ಪ ಸಂಖ್ಯಾತರು/ ಮಾಜಿ ಯೋಧರು/ ಅಂಗವಿಕಲರು) ಗರಿಷ್ಟ 45 ವರ್ಷ.
ನಿರುದ್ಯೋಗಿ ಯುವಕ/ ಯುವತಿಯರು  ಅರ್ಜಿಯನ್ನು ವೆಬ್‍ಸೈಟ್  hಣಣಠಿs://ಛಿmegಠಿ.ಞಚಿಡಿ.ಟಿiಛಿ.iಟಿ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿಯನ್ನು ನೋಂದಾಯಿಸಿ, ಅರ್ಜಿ ಪ್ರತಿಯನ್ನು ನಿಗದಿತ ದಾಖಲಾತಿಗಳೊಂದಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಳ್ಳಿ, ಕೈಗಾರಿಕಾ ಪ್ರದೇಶ, ಮಣಿಪಾಲ, ಉಡುಪಿ (ದೂರವಾಣಿ ಸಂಖ್ಯೆ: 0820-2575650 /2575655) ಹಾಗೂ ಜಿಲ್ಲಾ ಅಧಿಕಾರಿಗಳು, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ರಜತಾದ್ರಿ, ಮಣಿಪಾಲ, ಉಡುಪಿ (ದೂರವಾಣಿ ಸಂಖ್ಯೆ: 0820-2574855) ಗೆ ಸಲ್ಲಿಸಬೇಕು.
    ಹೆಚ್ಚಿನ ವಿವರಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಳ್ಳಿ ಕೈಗಾರಿಕಾ ಪ್ರದೇಶ, ಮಣಿಪಾಲ ಹಾಗೂ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಯವರ ಕಚೇರಿ ಹಾಗೂ ಕೆವಿಐಬಿ, ರಜತಾದ್ರಿ, ಮಣಿಪಾಲ ಕಚೇರಿಯಲ್ಲೂ ಸಹ ಪಡೆಯಬಹುದಾಗಿದೆ.
    ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 13 ರ ವರೆಗೆ ಅವಕಾಶವಿರುತ್ತದೆ. ಇಂಟರ್‍ನೆಟ್‍ನಲ್ಲಿ ತೆಗೆದ ಅರ್ಜಿಯ ಪ್ರಿಂಟ್ ಪ್ರತಿ ಹಾಗೂ ಇತರೆ ದಾಖಲೆಗಳನ್ನು ಕಚೇರಿಗೆ ಅಥವಾ ಕೆ.ವಿ.ಐ.ಬಿ. ಕಚೇರಿಗೆ ಸಲ್ಲಿಸಲು ನವೆಂಬರ್ 15 ಕೊನೆಯ ದಿನ.
    ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಯೋಜನೆಯಲ್ಲಿ ಸಹಾಯಧನ ಪಡೆದವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಈ ಯೋಜನೆಯಲ್ಲಿ ಯಾವುದೇ ಆದಾಯ ಮಿತಿ ಇರುವುದಿಲ್ಲ. ಸರ್ಕಾರದ ನಿಯಮಾನುಸಾರ ವಿಶೇಷ ವರ್ಗದ ಅರ್ಜಿದಾರರಿಗೆ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳು ಒಂದು ವಾರದ ಉದ್ಯವi ಶೀಲತಾ ತರಬೇತಿ ಪಡೆಯುವುದು  ಕಡ್ಡಾಯವಾಗಿರುತ್ತದೆ ಎಂದು ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಮೀನುಗಾರಿಕಾ ಸಲಕರಣೆ ಕಿಟ್ ವಿತರಣಾ ಕಾರ್ಯಕ್ರಮ
    ಉಡುಪಿ, ಅಕ್ಟೋಬರ್ 31 (ಕರ್ನಾಟಕ ವಾರ್ತೆ) :  2018-19 ನೇ ಸಾಲಿನಲ್ಲಿ ಮೀನುಗಾರಿಕಾ ಇಲಾಖೆಯ ರಾಜ್ಯ ವಲಯ/ಜಿಲ್ಲಾ ವಲಯದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಮೀನುಗಾರಿಕೆಯಲ್ಲಿ ಆಸಕ್ತಿ, ಅನುಭವ ಇರುವ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಮೀನುಗಾರಿಕಾ ಸಲಕರಣೆ ಕಿಟ್ಟನ್ನು ವಿತರಣೆ ಮತ್ತು ಇತರ ಕಾರ್ಯಕ್ರಮಗಳು ಇರುತ್ತದೆ.
    ನಿಗದಿತ ನಮೂನೆಯಲ್ಲಿ ಅವಶ್ಯ ದಾಖಲೆಗಳೊಂದಿಗೆ ನವೆಂಬರ್ 20 ರೊಳಗೆ ಮೀನುಗಾರಿಕಾ ಸಹಾಯಕ ನಿರ್ದೇಶಕರು, (ಶ್ರೇಣಿ-2), ಉಡುಪಿ, ಕುಂದಾಪುರ, ಕಾರ್ಕಳ ಕಛೇರಿಗಳಿಗೆ ಪ್ರಸ್ತಾವನೆಗಳನ್ನು ಸಲ್ಲಿಸಬಹುದಾಗಿದೆ ಎಂದು ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಉಡುಪಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಂದ ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ: ಅವಧಿ ವಿಸ್ತರಣೆ
    ಉಡುಪಿ, ಅಕ್ಟೋಬರ್ 31 (ಕರ್ನಾಟಕ ವಾರ್ತೆ) : ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಮತ್ತು ಅಲೆಮಾರಿ / ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2018-19 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ಮೆಟ್ರಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ- ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅಂತಿಮ ದಿನವನ್ನು ಅಕ್ಟೋಬರ್ 31 ಕ್ಕೆ ನಿಗಧಿಪಡಿಸಲಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವಂತೆ ಪೋಷಕರು/ ವಿದ್ಯಾರ್ಥಿಗಳು/ ಶಿಕ್ಷಣ ಸಂಸ್ಥೆಗಳು ಮನವಿ ಸಲ್ಲಿಸಿದ್ದು, ಆ ಪ್ರಯುಕ್ತ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಅರ್ಜಿ ಸಲ್ಲಿಸುವ ದಿನವನ್ನು ನವೆಂಬರ್ 5 ರ ವರೆಗೆ ವಿಸ್ತರಿಸಲಾಗಿದೆ.
    ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವೆಬ್‍ಸೈಟ್ ವಿಳಾಸ ಏಚಿಡಿeಠಿಚಿss.ಛಿgg.gov.iಟಿ   ಹಾಗೂ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ, ಕಾರ್ಯಕ್ರಮಗಳ ವಿವರ, ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಮಾಹಿತಿಗಾಗಿ ವೆಬ್‍ಸೈಟ್  ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ  ಅನ್ನು ಸಂಪರ್ಕಿಸಬಹುದಾಗಿದೆ.
    ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 0820-2573881, 2574881 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಉಡುಪಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ : ಮಲ್ಲಿಗೆ ರೋಗ ಮತ್ತು ಕೀಟ ಹತೋಟಿ ಕ್ರಮಗಳು
         ಉಡುಪಿ, ಅಕ್ಟೋಬರ್ 31 (ಕರ್ನಾಟಕ ವಾರ್ತೆ) : ಉಡುಪಿ ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು ಮಲ್ಲಿಗೆ ಬೆಳೆ ಮೇಲೆ ಪರಿಣಾಮ ಬೀರಿದೆ. ನಿರಂತರ ಮಳೆಯಿಂದಾಗಿ, ಹವಾಮಾನ ವೈಪರೀತ್ಯದಿಂದಾಗಿ ಉಷ್ಣಾಂಶದಲ್ಲಿ ವ್ಯತ್ಯಾಸವಾದಾಗ ಮತ್ತು ತೇವಾಂಶದ ವಾತಾವರಣದಿಂದ ಮಲ್ಲಿಗೆ ತಾಕುಗಳಲ್ಲಿ ವಿವಿಧ ರೋಗ, ಕೀಟಗಳ ಬಾಧೆ ತೀವ್ರವಾಗುತ್ತದೆ. ಪ್ರಮುಖವಾಗಿ ಸೊರಗು ರೋಗ, ಎಲೆಚುಕ್ಕೆ ರೋಗ ತೀವ್ರವಾಗಿ ಭಾದಿಸಿದ್ದು, ಅಲ್ಲದೆ ಪಾಚಿಯ ಭಾದೆಯು ಅಲ್ಲಲ್ಲಿ ಭಾದಿಸಿದ್ದು ಕಂಡುಬಂದಿದೆ. ಸೆಪ್ಟಂಬರ್ 29 ರಂದು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರದ ವಿಜ್ಞಾನಿಗಳು ಬಂಟಕಲ್ಲು, ಶಿರ್ವ ಗ್ರಾಮಗಳಲ್ಲಿ ನಡೆಸಿದ ಮಲ್ಲಿಗೆ ತಾಕುಗಳ ಪರಿಶೀಲನೆ ಸಮಯದಲ್ಲಿ ಕಂಡು ಬಂದ ರೋಗ ಮತ್ತು ಕೀಟಗಳ ನಿಯಂತ್ರಣಕ್ಕಾಗಿ ಈ ಕೆಳಕಂಡ  ಕ್ರಮಗಳನ್ನು ಶಿಫಾರಸ್ಸು ಮಾಡಲಾಗಿದೆ.
 1. ಮಲ್ಲಿಗೆ ಸೊರಗು ರೋಗ ಹಾಗೂ ಹತೋಟಿಗಾಗಿ ಅನುಸರಿಸಬೇಕಾದ ಕ್ರಮಗಳು: ಸೊರಗು ರೋಗಗಳಿಗೆ ಪ್ರಮುಖ ಕಾರಣಗಳೆಂದರೆ ಗೊಬ್ಬರಗಳನ್ನು ಗಿಡದ ಬುಡದ ಭಾಗಕ್ಕೆ ಯಥೇಚ್ಚವಾಗಿ ಸುರಿಯುವುದು, ನೀರು ಬಸಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು. ಇದರಿಂದಾಗಿ ಮಲ್ಲಿಗೆ ಬುಡಭಾಗದಲ್ಲಿ ಉಷ್ಣತೆ ಹೆಚ್ಚಾಗಿ, ವಾತಾವರಣದ ಆದ್ರತೆ ಜಾಸ್ತಿ ಇದ್ದಾಗ ಸೊರಗು ರೋಗದ ರೋಗಾಣುವಿಗೆ ಸೂಕ್ತ ಪರಿಸರ ಒದಗಿಸಿಕೊಟ್ಟಂತಾಗುತ್ತದೆ.
    ಮಲ್ಲಿಗೆಯಲ್ಲಿ ಸೊರಗು ರೋಗವು ಪ್ಯೂಸೇರಿಯಂ ಎಂಬ ಶೀಲೀಂದ್ರದಿಂದ ಬರುತ್ತದೆ. ಇದರ ಬೀಜಕಣಗಳು ಹಲವಾರು ವರ್ಷಗಳವರೆಗೆ ಮಣ್ಣಿನಲ್ಲಿಯೇ ಸುಪ್ತವಾಗಿರುತ್ತವೆ. ಅದಕ್ಕೆ ಬೇಕಾದ ಉಷ್ಣಾಂಶ ಮತ್ತು ಆದ್ರತೆ ಅನುಕೂಲ ವಾತಾವರಣ ಲಭ್ಯವಾದಾಗ ಅದು ಮಲ್ಲಿಗೆಯಲ್ಲಿ ಸೊರಗು ರೋಗವನ್ನು ಉಂಟು ಮಾಡುತ್ತದೆ.
  ಸೊರಗು ರೋಗದ ಹತೋಟಿಗಾಗಿ ಪ್ರತಿ ಗಿಡಕ್ಕೆ 200 ಗ್ರಾಂ ಮ್ಯೂರೇಟ್ ಆಫ್ ಪೋಟ್ಯಾಶ್ ಗೊಬ್ಬರವನ್ನು ಒದಗಿಸುವುದು. ಜೈವಿಕಗೊಬ್ಬರವಾದ ಟ್ರೈಕೋಡರ್ಮಾವನ್ನು ಕೊಟ್ಟಿಗೆ ಗೊಬ್ಬರ ಅಥವಾ ಬೇವಿನ ಹಿಂಡಿ ಜೊತೆ ಬೆರೆಸಿ ಮಣ್ಣಿಗೆ ಹಾಕುವುದು. ಮಲ್ಲಿಗೆ ಗಿಡದ ರೆಂಬೆಗಳನ್ನು, ನೆಲವನ್ನು ಮುಟ್ಟದ ಹಾಗೆ ಆಧಾರವಾಗಿ ಕೋಲನ್ನು ಕೊಡುವುದು.
  ಮಣ್ಣಿಗೆ ಬ್ಲೈಟಾಕ್ಸ್- 2 ಗ್ರಾಂ 1ಲೀ.ನೀರಿಗೆ ಅಥವಾ ರಿಡೋಮಿಲ್ ಗೋಲ್ಡ್ 2ಗ್ರಾಂ             1ಲೀ.ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.
  ನೀರು ಗಿಡದ ಬುಡದಲ್ಲಿ ನಿಲ್ಲದೆ ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸುವುದು.
  ಸಾವಯವ ಗೊಬ್ಬರಗಳನ್ನು ಮಳೆಗಾಲದ ಪೂರ್ವದಲ್ಲಿ ಗಿಡಗಳಿಗೆ ನೀಡದೆ ಸೆಪ್ಟೆಂಬರ್ ಮಾಹೆಯಲ್ಲಿ ಗಿಡಗಳಿಗೆ ಒದಗಿಸುವುದು. ಗೊಬ್ಬರ ಒದಗಿಸುವ ಸಮಯದಲ್ಲಿ ಗಿಡದ ಬುಡದಿಂದ 1 ಅಡಿ ದೂರದಲ್ಲಿ ಗೊಬ್ಬರ ನೀಡುವುದು.

2. ಎಲೆಚುಕ್ಕೆ ರೋಗದ ಹತೋಟಿಗಾಗಿ ಅನುಸರಿಸಬೇಕಾದ ಕ್ರಮಗಳು; ಎಲೆ ಚುಕ್ಕೆ ರೋಗದ ಹತೋಟಿಗಾಗಿ 2ಗ್ರಾಂ ಮ್ಯಾಂಕೋಜೆಬ್ 1ಲೀ. ನೀರಿಗೆ ಬೆರೆಸಿ ಎಲೆಗಳಿಗೆ ಸಿಂಪರಣೆ ಮಾಡಿ ರೋಗವನ್ನು ಹತೋಟಿ ಮಾಡಬಹುದು.
3. ಮಲ್ಲಿಗೆಯಲ್ಲಿ ಬರುವ ರಸ ಹೀರುವ ಕೀಟಗಳು ಹಾಗೂ ಹತೋಟಿ ಕ್ರಮಗಳು :ಮುಖ್ಯವಾಗಿ ಮಲ್ಲಿಗೆಯಲ್ಲಿ ಬಿಳಿನೊಣದ ಬಾಧೆ ಹಾಗೂ ಥ್ರಿಪ್ಸ್ ನುಸಿ ಬಾಧೆ ಉಡುಪಿ ಜಿಲ್ಲೆಯ ಹಲವು ಭಾಗದಲ್ಲಿ ಕಂಡು ಬರುತ್ತದೆ. ಅವುಗಳ ಬೆಳವಣಿಗೆಗೆ ಸೂಕ್ತ ವಾತಾವರಣವಿರುವಾಗ ಹೆಚ್ಚಾಗಿರುತ್ತದೆ.
     ಇವುಗಳ ನಿರ್ವಹಣೆಗೆ ಅಜಾಡಿರೆಕ್ಟಿನ್ 1500 ಪಿಪಿಎಮ್ 5ಮಿ.ಲೀ 1 ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡಿ, ಇದರ ಬಳಕೆಯಿಂದಲೂ ಕಡಿಮೆಯಾಗದಿದ್ದಲ್ಲಿ ಥಯೋಮೆಥೋಕ್ಸಾಮ್ 5ಗ್ರಾಂ. 15 ಲೀ. ನೀರಿಗೆ ಬೆರೆಸಿ ಸಿಂಪರಣೆಯನ್ನು ಮಾಡುವುದು.
4. ಮಲ್ಲಿಗೆಯಲ್ಲಿ ನುಸಿ ಬಾಧೆ: ಮಳೆಗಾಲದ ನಂತರ ನುಸಿ ಬಾಧೆ ಹೆಚ್ಚಾಗುತ್ತವೆ. ಇದರ ನಿರ್ವಹಣೆಗಾಗಿ ಫೆನಾಜಾಕ್ವಿನ್ 10 ಇಸಿ 2ಮಿ.ಲೀ 1ಲೀ.ನೀರಿಗೆ ಹಾಕಿ ಸಿಂಪಡಿಸುವುದು.
5. ಮಲ್ಲಿಗೆ ಗಿಡಕ್ಕೆ ಪಾಚಿ ಬರುವುದನ್ನು ತಡೆಯಲು ಸುಣ್ಣದ ಪೇಸ್ಟ್ ತಯಾರಿಸಿ ಕಾಂಡಕ್ಕೆ ಲೇಪಿಸುವುದು.

         ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರ ಕಛೇರಿ, (ಜಿ.ಪಂ), ಉಡುಪಿ ದೂ: 0820-2531950, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿ.ಪಂ), ಉಡುಪಿ ದೂ: 0820-2522837, ಕುಂದಾಪುರ ದೂ:08254-230813, ಕಾರ್ಕಳ ದೂ: 08258-230288, ತೋಟಗಾರಿಕೆ ಮಾಹಿತಿ ಮತ್ತು ಸಲಹಾಕೇಂದ್ರ, ಉಡುಪಿ ದೂ: 0820-2520590, ಹಾಗೂ ಸ್ಥಳೀಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಲ್ಲಾ ಪಂಚಾಯತ್, ಉಡುಪಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದಿರಾ ಗಾಂಧಿಯವರು ಬಡ ಜನತೆಯ ಹೃದಯದಲ್ಲಿ ಸ್ಥಿರಸ್ಥಾಯಿಯಾಗಿದ್ದಾರೆ – ಜನಾರ್ದನ ತೋನ್ಸೆ

ಉಡುಪಿ: ಇಂದಿರಾ ಗಾಂಧಿಯವರು ತನ್ನ ಅಧಿಕಾರಾವಧಿಯಲ್ಲಿ ಮಾಡಿದ ಭೂ ಸುಧಾರಣೆ, ರಾಜಧನ ರದ್ದತಿ, ಜೀತ ವಿಮೋಚನೆ, ಬ್ಯಾಂಕ್ ರಾಷ್ಟ್ರೀಕರಣ ಮೊದಲಾದ ಜನಪರ ಕಾರ್ಯಕ್ರಮಗಳಿಂದಾಗಿ  ಬಡ ಜನತೆಯ ಜೀವನಮಟ್ಟ ಸುಧಾರಣೆಗೊಂಡು ಅವರು ನೆಮ್ಮದಿಯ ಬದುಕು ಬದುಕುವಂತಾಗಿದೆ. ಹಾಗಾಗಿ ಇಂದು ಇಂದಿರಾ ಗಾಂಧಿಯವರು ಬಡ ಜನತೆಯ ಹೃದಯದಲ್ಲಿ ಸ್ಥಿರಸ್ಥಾಯಿಯಾಗಿದ್ದಾರೆ. ದೇಶಕ್ಕೆ ಇಂತಹ ಇನ್ನೊಂದು ಧೀಮಂತ ಪ್ರಧಾನಿ ಬರಲು ಸಾಧ್ಯವಿಲ್ಲ. ಶ್ರೀಮತಿ ಇಂದಿರಾ ಗಾಂಧಿಯವರು 1971ರ ಪಾಕಿಸ್ಥಾನ ಯುದ್ಧದ ಸಂದರ್ಭದಲ್ಲಿ ತೋರಿದ ದಿಟ್ಟತನದಿಂದಾಗಿ ವಿರೋಧ ಪಕ್ಷದ ನಾಯಕರಿಂದಲೂ ಹೊಗಳಲ್ಪಟ್ಟ ಘಟನೆಯನ್ನು ನೆನಪಿಸಿ ಭವ್ಯ ಭಾರತದ ಸಮಗ್ರತೆಗೆ ಮತ್ತು ಏಕತೆಗಾಗಿ ತನ್ನ ಪ್ರಾಣವನ್ನೇ ಧಾರೆ ಎರೆದ ಧೀಮಂತ ಪ್ರಧಾನಿ ಇಂದಿರಾ ಗಾಂಧಿಯವರು. ಇಂದಿರಾ ಗಾಂಧಿಯವರು ತಂದ 20 ಅಂಶಗಳ ಜನಪರ ಕಾರ್ಯಗಳನ್ನು ಬಿಟ್ಟು ಯಾವುದೇ ಸರಕಾರ ಕಾರ್ಯಕ್ರಮ ರೂಪಿಸಲು ಸಾಧ್ಯವಿಲ್ಲ. ಯಾಕೆಂದರೆ ಆ ಕಾರ್ಯಕ್ರಮಗಳು ಜನತೆಯ ಜೀವನ ಮಟ್ಟ ಸುಧಾರಿಸುವ ದೂರಾಲೋಚನೆಯಿಂದ ರಚಿಸಲ್ಪಟ್ಟ ಕಾರ್ಯಕ್ರಮಗಳು. ಈ 35ನೇ ಪುಣ್ಯತಿಥಿಯಂದು ನಾವೆಲ್ಲಾ ಸೇರಿ ಅವರನ್ನು ನೆನೆಯುವುದು ಅವರಿಗೆ ನೀಡುವ ನಿಜವಾದ ಗೌರವ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಜನಾರ್ದನ ತೋನ್ಸೆಯವರು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಜಂಟಿಯಾಗಿ ಆಯೋಜಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 35ನೇ ಪುಣ್ಯತಿಥಿ ಆಚರಣೆಯ ಸಂದರ್ಭದಲ್ಲಿ ನುಡಿದರು.
  ಹಿಂದುಳಿದ ವರ್ಗದವರಿಗೆ ಶ್ರೀ ನಾರಾಯಣ ಗುರುಗಳು ಧಾರ್ಮಿಕ ಸ್ವಾತಂತ್ರ್ಯವನ್ನು ತಂದುಕೊಟ್ಟರೆ ಶ್ರೀಮತಿ ಇಂದಿರಾ ಗಾಂಧಿಯವರು ಉಳುವವನೇ ಹೊಲದೊಡೆಯ ಕಾಯ್ದೆಯ ಮೂಲಕ ಆರ್ಥಿಕ ಸ್ವಾತಂತ್ರವನ್ನು ತಂದು ಕೊಟ್ಟರು. ಈ ಕಾಯಿದೆ ಕರ್ನಾಟಕದಲ್ಲಿ ಅದರಲ್ಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಂಡು ಜಿಲ್ಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆಯನ್ನು ಕೊಟ್ಟಿದೆ. ತನ್ನ ಅಂಗರಕ್ಷಕರಿಂದಲೇ ತನಗೆ ಅಪಾಯ ಇದೆ ಎನ್ನುವ ಗುಪ್ತಚರ ವರದಿ ಗೊತ್ತಿದ್ದರೂ ಕೂಡಾ ತಾನು ಅಂಗರಕ್ಷಕರನ್ನು ಬದಲಾಯಿಸುವುದು ಈ ದೇಶದ ಸೌಹಾರ್ದತೆಗೆ ಕೊಡುವ ದೊಡ್ಡ ಪೆಟ್ಟಾಗುತ್ತದೆ ಎಂದು ಮನಗಂಡು ದೇಶದ ಸೌಹಾರ್ದತೆಗೆ ತನ್ನ ಪ್ರಾಣವನ್ನೇ ಬಲಿಕೊಟ್ಟ ಧೀಮಂತ ಮಹಿಳೆ ಇಂದಿರಾ ಗಾಂಧಿ ಎಂದು ಶ್ರೀ ಉದ್ಯಾವರ ನಾಗೇಶ್ ಕುಮಾರ್ ಹೇಳಿದರು.
    ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ, ಕೆ.ಪಿ.ಸಿ.ಸಿ. ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಲೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆ, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಿಕಾ ಶೆಟ್ಟಿ, ಕಾಪು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪ್ರಭಾವತಿ ಸಾಲ್ಯಾನ್,  ಕಾಂಗ್ರೆಸ್ ಮುಖಂಡರಾದ ಹಬೀಬ್ ಆಲಿ, ಜ್ಯೋತಿ ಹೆಬ್ಬಾರ್, ಲಕ್ಷ್ಮಿ ಭಟ್, ಜಯಶ್ರೀ ಶೇಟ್, ಜ್ಯೋತಿ ಮೆನನ್, ಆನಂದ ಕಿದಿಯೂರು, ವಿಠಲ್ ಕಾವ, ಪೃಥ್ವಿರಾಜ್ ಶೆಟ್ಟಿ, ಕುಶಲ್ ಶೆಟ್ಟಿ ಇಂದ್ರಾಳಿ, ಫೆರ್ನಾಂಡಿಸ್, ನಾಗರಾಜ್ ಗಾಣಿಗ, ಪ್ರಸಾದ್ ಉಪಸ್ಥಿತರಿದ್ದರು.
 ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಗೀತಾ ವಾಗ್ಲೆಯವರು ಸ್ವಾಗತಿಸಿ, ವಂದಿಸಿದರು.

     “ಬಿನ್ ಸಂಸ್ಕಾರ್ ನಹೀ ಸಹಕಾರ್”        “ ಬಿನ್ ಸಹಕಾರ್ ನಹೀ ಉದ್ಧಾರ್”

    “ಸಹಕಾರ ಭಾರತಿಯ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಹಕಾರಿ ಕಾರ್ಯಕರ್ತ ಬಂಧುಗಳಿಗೆ ಅಭ್ಯಾಸ ವರ್ಗವನ್ನು ದಿನಾಂಕ 27-10-2018 ರಂದು ಶಿವಕೃಪಾ ಕಲ್ಯಾಣ ಮಂಟಪ, ಸಾಸ್ತಾನ ಇಲ್ಲಿ ಏರ್ಪಡಿಸಲಾಗಿತ್ತು. ಉದ್ಘಾಟನೆಯನ್ನು ಸಹಕಾರ ಭಾರತಿಯ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀಯುತ ಕೊಂಕೋಡಿ ಪದ್ಮಾನಾಭ, ಇವರು ನೆರವೇರಿಸಿದರು ಈ ಸಂದರ್ಭ ರಾಜ್ಯ ಸಹ ಸಂಘಟನ್ ಪ್ರಮುಖ್ ಶ್ರೀ ಹರೀಶ್ ಆಚಾರ್ಯ, ಸಹಕಾರ ಭಾರತಿಯ ರಾಜ್ಯ ಮಹಿಳಾ ಪ್ರಮುಖ್ ಶ್ರೀಮತಿ ಸುಮನಾ ಶರಣ್, ಸಹಕಾರ ಭಾರತಿಯ ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಶ್ರೀ ಅಶೋಕ್ ಪ್ರಭು, ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಸಿ.ಇ.ಓ ಭುವನೇಶ್ ಪ್ರಭು ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಕಾರ್ಯಕರ್ತ ಮತ್ತು ಕಾರ್ಯ ಪದ್ದತಿ ಕುರಿತಾಗಿ ಉಪನ್ಯಾಸವನ್ನು ಶ್ರೀಯುತ ಕೊಂಕೋಡಿ ಪದ್ಮಾನಾಭರವರೂ, ಸಹಕಾರ ಭಾರತಿಯ ಪರಿಚಯದ ಕುರಿತಾಗಿ ಉಪನ್ಯಾಸವನ್ನು ಶ್ರೀಯುತ ಹರೀಶ್ ಆಚಾರ್ಯರವರೂ, ಸಹಕಾರ ಕಾಯಿದೆಯ ಕುರಿತಾಗಿ ಉಪನ್ಯಾಸವನ್ನು ಶ್ರೀಮತಿ ಸುಮನಾ ಶರಣ್‍ರವರೂ ನೀಡಿದರು.

ಸಮಾರೋಪ :- ಸಮಾರೋಪ ಭಾಷಣವನ್ನು ಸಹಕಾರ ಭಾರತಿಯ ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀ ಬೋಳ ಸದಾಶಿವ ಶೆಟ್ಟಿ ಇವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬೇರೆ ಬೇರೆ ಸಹಕಾರಿಗಳ 93 ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಸಹಕಾರ ಭಾರತಿಯ ಬ್ರಹ್ಮಾವರ ತಾಲೂಕು ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಸತೀಶ್ ನಾಯ್ಕ ಇವರೂ, ಕಾರ್ಯಕ್ರಮದ ನಿರೂಪಣೆಯನ್ನು ಸಹಕಾರ ಭಾರತಿಯ ಬ್ರಹ್ಮಾವರ ತಾಲೂಕು ಕಾರ್ಯದರ್ಶಿಯವರಾದ ಶ್ರೀ ರಾಘವೇಂದ್ರ ಕರ್ಕೇರ ಇವರೂ ನೆರವೇರಿಸಿದರು.


 ನವೆಂಬರ್ 3 (ನಾಳೆ) ನಡೆಯುವ ಲೋಕಸಭಾ ಉಪ ಚುನಾವಣೆಯ ಬೈಂದೂರು ವ್ಯಾಪ್ತಿಯ  ಮತಗಟ್ಟೆ ವೀಕ್ಷಣೆಗೆ ಪತ್ರಕರ್ತರಿಗೆ ವಾಹನ ವ್ಯವಸ್ಥೆ  ಮಾಡಲಾಗಿದೆ.
ವಾಹನವು ನಾಳೆ ಬೆಳಗ್ಗೆ 8.30 ಕ್ಕೆ ವಾರ್ತಾ ಇಲಾಖೆಯಿಂದ ಹೊರಡಲಿದ್ದು, ಪತ್ರಕರ್ತರು ಆಗಮಿಸಲು ಕೋರಿದೆ.

ಸ್ಪರ್ಶ ಕುಷ್ಟರೋಗ ನಿರ್ಮೂಲನಾ ಆಂದೋಲನ ಕಾರ್ಯಕ್ರಮದ ಪರಿಶೀಲನೆ
  
    ಉಡುಪಿ, ನವೆಂಬರ್ 2 (ಕರ್ನಾಟಕ ವಾರ್ತೆ) : ಬೆಂಗಳೂರು ಆರೋಗ್ಯ ಮತ್ತು ಕು.ಕ ಸೇವೆಗಳ ನಿರ್ದೇಶನಾಲಯದ ಜಂಟಿ ನಿರ್ದೇಶಕರು (ಕುಷ್ಟ) ಡಾ||ಕೆ.ಎಮ್.ಮುನಿರಾಜ್, ಹಾಗೂ ಬೆಂಗಳೂರು ಆರೋಗ್ಯ ಮತ್ತು ಕು.ಕ ನಿರ್ದೇಶನಾಲಯದ ಐ.ಇ.ಸಿ ವಿಭಾಗದ ಪಿ.ಷಣ್ಮುಖ ಸ್ವಾಮಿ, ಇವರು ನವೆಂಬರ್ 2 ರಂದು ಉಡುಪಿ ಜಿಲ್ಲೆಯ ಆರೋಗ್ಯ ಮತ್ತು ಕು.ಕ ಕಚೇರಿಗೆ, ಆಗಮಿಸಿ “ಸ್ಪರ್ಶ ಕುಷ್ಟರೋಗ ನಿವಾರಣಾ” ಆಂದೋಲನದ ಪರಿಶೀಲನಾ ಸಭೆಯನ್ನು ,ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿ ಡಾ||ರೋಹಿಣಿ ಹಾಗೂ ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಡಾ||ಸುರೇಂದ್ರ ಚಿಂಬಾಳ್ಕರ್.ಪಿ ಹಾಗೂ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳ ಮತ್ತು ಆರೋಗ್ಯ ಮೇಲ್ವಿಚಾರಕರ ಸಮ್ಮುಖದಲ್ಲಿ ನಡೆಸಿದರು.
      
     ಉಡುಪಿ ಜಿಲ್ಲೆಯಲ್ಲಿ 13,27,327 ಜನಸಂಖ್ಯೆ ಇದ್ದು,  2,66,622 ಮನೆ ಗಳಿವೆ , ಜಿಲ್ಲೆಯಲ್ಲಿ ಸ್ಪರ್ಶ ಕುಷ್ಟರೋಗ ನಿರ್ಮೂಲನಾ ಆಂದೋಲನಕ್ಕಾಗಿ  952 ತಂಡ ರಚನೆ ಮಾಡಲಾಗಿದೆ ಮತ್ತು ಸುಮಾರು 200 ಮೇಲ್ವಿಚಾರಣಾ ತಂಡ ರಚಿಸಲಾಗಿದೆ. ಈ ತಂಡಗಳಿಂದ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಯುತ್ತಿದ್ದು, ಅಕ್ಟೋಬರ್ 22 ರಿಂದ ನವೆಂಬರ್ 4 ರ ವರೆಗೆ ಈ ಕಾರ್ಯಕ್ರಮವು ನಡೆಯಲಿದೆ. ಆದರೆ ಇಲ್ಲಿಯವರೆಗೆ ಉಡುಪಿ ಜಿಲ್ಲೆಯಲ್ಲಿ ಮನೆ ಮನೆ ಭೇಟಿಯ ಸಮೀಕ್ಷೆಯಲ್ಲಿ  ಯಾವುದೇ ಹೊಸ ರೋಗಿಯ ಪ್ರಕರಣ ಪತ್ತೆಯಾಗಿರುವುದಿಲ್ಲ. ಸದರಿ ಕಾರ್ಯಕ್ರಮದಲ್ಲಿ ಎಲ್ಲಾ ಜನ ಸಮೂಹದವರು ಸಹಕರಿಸಲು ಮತ್ತು ಸಾರ್ವಜನಿಕರಲ್ಲಿ ಅಡಗಿರುವ ಕುಷ್ಟರೋಗಿಗಳನ್ನು ಪತ್ತೆಹಚ್ಚಲು ಕೋರಿದರು.
     ಕುಷ್ಟರೋಗ ಭಯಾನಕ ರೋಗ ಅಲ್ಲ. ಇದು ಸಾಮಾನ್ಯ ರೋಗ. ಇದಕ್ಕೆ ಸಂಪೂರ್ಣ ಉಚಿತ ಚಿಕಿತ್ಸೆಯಿದೆ. ಹಾಗೂ ಸಂಪೂರ್ಣವಾಗಿ ಗುಣಪಡಿಸಲಾಗುತ್ತದೆ. ಸ್ಪರ್ಶಜ್ಞಾನ ರಹಿತ ಚರ್ಮದ ಮಚ್ಚೆಗಳು ಕಾಣಿಸಿಕೊಂಡ ತಕ್ಷಣ ಹತ್ತಿರದ ಆರೋಗ್ಯ ಕಾರ್ಯಕರ್ತೆಯರನ್ನು/ವೈದ್ಯಾಧಿಕಾರಿಯವರನ್ನು ಸಂಪರ್ಕಿಸಿ ರೋಗವನ್ನು ಖಚಿತ ಪಡಿಸಿಕೊಂಡು ಚಿಕಿತ್ಸೆಯನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
     ರೋಗದ ಪ್ರಥಮ ಚಿಹ್ನೆಯಾದ ಚರ್ಮದ ಮಚ್ಚೆಯನ್ನು ಸಕಾಲದಲ್ಲಿ ಪತ್ತೆಹಚ್ಚಿ ಚಿಕಿತ್ಸೆ  ತೆಗೆದುಕೊಳ್ಳದಿದ್ದಲ್ಲಿ ಅಂಗವಿಕಲತೆ ಆಗುತ್ತದೆ. ಇದಕ್ಕೆ ಅವಕಾಶ ನೀಡದಿರಲು ಕೋರಿದರು. ಒಂದು ವೇಳೆ ಅಂಗವಿಕಲತೆ ಉಂಟಾದಲ್ಲಿ ಅದನ್ನು  ಸರಿಪಡಿಸಲು ಕಷ್ಟಸಾಧ್ಯ ಎಂದು ತಿಳಿಸಿದರು.
     ಕುಷ್ಟರೋಗವು 6 ತಿಂಗಳಿನಿಂದ 12 ತಿಂಗಳವರೆಗೆ ಬಹುಔಷಧಿಗಳ ಸೇವನೆ ಮುಖಾಂತರ ಸಂಪೂರ್ಣ ಗುಣಹೊಂದುತ್ತದೆ. ಈ ರೀತಿ ಉಚಿತ ಚಿಕಿತ್ಸೆ ಪಡೆದವರೂ ಚರ್ಮದ ಮಚ್ಚೆ ಹಾಗೂ ಅಂಗವಿಕಲತೆ ಉಳಿದಿದ್ದರೆ ಅಂತವರು ರೋಗವನ್ನು ಮತ್ತೊಬ್ಬರಿಗೆ ಹರಡಿಸುವುದಿಲ್ಲ. ಕುಷ್ಟ ರೋಗವು ಯಾವುದೇ ದೇವರ ಶಾಪದಿಂದಾಗಲೀ, ಮಾಡಿದ ಪಾಪದ ಫಲದಿಂದಾಗಲೀ ಬರುವ ರೊಗವೆಂದು ಮೂಢನಂಬಿಕೆ ಇಟ್ಟುಕೊಳ್ಳಬೇಡಿ. ಇದು ಮೈಕ್ರೋಬ್ಯಾಕ್ಟೀರಿಯಾದಿಂದ ಬರುವ ರೋಗ. ಇದು ಅಂಟುರೋವಾಗಿರುತ್ತದೆ ಎಂದು ಜಂಟೀ ನಿರ್ದೇಶಕರು (ಕುಷ್ಟ) ಇವರು ತಿಳಿಸಿದರು.
     ಕುಷ್ಟರೋಗಿಗಳನ್ನು ಸಮಾಜದಿಂದ ಬಹಿಷ್ಕರಿಸುವ ಇಲ್ಲವೇ ಮನೆಯಿಂದ ದೂರವಿಡುವುದು ತಪ್ಪು , ಕುಷ್ಟರೋಗದಿಂದ ಗುಣಮುಖ ಹೊಂದಿದವರು ಎಲ್ಲಾರಂತೆಯೇ ಸಹಜೀವನ ನಡೆಸಬಹುದು. ಅವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಹಾಗೂ ಗೌರವಿಸುವುದು ನಮ್ಮೆಲ್ಲರ ಧರ್ಮವಾಗಿರುತ್ತದೆ ಎಂದು ಜಂಟೀ ನಿರ್ದೇಶಕರು ತಿಳಿಸಿದರು.
     ಕಾರ್ಯಕ್ರಮದ ಅಂಗವಾಗಿ ಪ್ರಾ.ಆ.ಕೇಂದ್ರ ಕಾಪು/ಪಡುಬಿದ್ರಿ ಹಾಗೂ ಅವುಗಳ ಕ್ಷೇತ್ರ ಭೇಟಿ ಮಾಡಿ ಐ.ಇ.ಸಿ ಕಾರ್ಯಕ್ರಮ ಮತ್ತು ಕಾರ್ಯ ಚಟುವಟಿಕೆಗಳ ವರದಿ ಪರಿಶೀಲಿಸಿದ ತಂಡವು ಮೆಚ್ಚುಗೆ ಸೂಚಿಸಿತು ಎಂದು ಜಿಲ್ಲಾ ಕುಷ್ಟ ರೋಗ ನಿವಾರಣಾಧಿಕಾರಿ ಡಾ. ಸುರೇಂದ್ರ ಚಿಂಬಾಲ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಉಚಿತ  ಕಂಪ್ಯೂಟರ್ ತರಬೇತಿ: ನೋಂದಣಿ ಬಗ್ಗೆ 
    ಉಡುಪಿ, ನವೆಂಬರ್ 2 (ಕರ್ನಾಟಕ ವಾರ್ತೆ) : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಉಡುಪಿ, ಇವರ  ವತಿಯಿಂದ ಸಾಫ್ಟ್ ಸ್ಕಿಲ್ಸ್ ಮತ್ತು ಬೇಸಿಕ್ ಕಂಪ್ಯೂಟರ್, ಕನ್ನಡ ನುಡಿ ಟೈಪಿಂಗ್ ಇತರೆ ತರಬೇತಿಯನ್ನು ಪಡೆಯಲು ಇಚ್ಚಿಸುವ ಆಸಕ್ತ ಯುವಕ, ಯುವತಿ ವಿದ್ಯಾರ್ಥಿಗಳು ನೋಂದಾವಣಿ ಮಾಡಬಹುದಾಗಿದೆ.
    ತರಬೇತಿಯು ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಉಡುಪಿ ಜಿಲ್ಲೆ. ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಅಥವಾ 9480259790, 0820-2574869 ಅನ್ನು ಸಂಪರ್ಕಿಸುವಂತೆ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಉಡುಪಿ ಇವರ ಪ್ರಕಟಣೆ ತಿಳಿಸಿದೆ.

ಉದ್ಯಮಶೀಲ ತರಬೇತಿ ಕಾರ್ಯಕ್ರಮ

    ಉಡುಪಿ, ನವೆಂಬರ್ 2 (ಕರ್ನಾಟಕ ವಾರ್ತೆ): ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಉಡುಪಿ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಪೆರ್ಡೂರು ಇವರ ಆಶ್ರಯದಲ್ಲಿ, ಸ್ಟಡಿ ಸರ್ಕಲ್ ಯೋಜನೆಯಡಿಯಲ್ಲಿ ಉದ್ಯಮಶೀಲ ತರಬೇತಿ ಕುರಿತು ನವೆಂಬರ್ 5 ರಿಂದ ಸರ್ಕಾರಿ ಐ.ಟಿ.ಐ. ಪೆರ್ಡೂರು, ಇಲ್ಲಿ ಉಚಿತ ತರಬೇತಿ ಕಾರ್ಯಕ್ರಮ ನಡೆಯಲಿದೆ.
    ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2574869, ಮತ್ತು 9480259790 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ
    ಉಡುಪಿ, ನವೆಂಬರ್ 2 (ಕರ್ನಾಟಕ ವಾರ್ತೆ): ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನವನ್ನು, ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆ; ಕರ್ನಾಟಕದ ಕೊಡುಗೆ ಎಂಬ ಕೇಂದ್ರ ವಿಷಯದಡಿ ನವೆಂಬರ್ 23 ಮತ್ತು 24 ,2018 ರಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ, ಧಾರವಾಡ ವಿಶ್ವವಿದ್ಯಾಲಯದ ಆವರಣದಲ್ಲಿರುವ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸುತ್ತಿದೆ. ಈ ಸಮ್ಮೇಳನದಲ್ಲಿ ಸಂಪನ್ಮೂಲ ತಜ್ಞರುಗಳಿಂದ ಬಾಹ್ಯಾಕಾಶ, ವಿದ್ಯುನ್ಮಾನ, ಕೃಷಿಯಲ್ಲಿ ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿದ್ವತ್ ಪೂರ್ಣ ವಿನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ.
     ಈ ಸಮ್ಮೇಳನದಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಸ್ನಾತಕೋತ್ತರ / ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು/ ಪ್ರಾಧ್ಯಾಪಕರುಗಳು, ವಿಜ್ಞಾನಿಗಳು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಾಸಕ್ತರು ಒಳಗೊಂಡಂತೆ ಸುಮಾರು 1000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಲ್ಲದೇ ಪ್ರತಿನಿಧಿಗಳು ತಮ್ಮ ಸಂಶೊಧನಾ ಫಲಿತಾಂಶಗಳನ್ನು ಕನ್ನಡದಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ಪ್ರಸ್ತುತಪಡಿಸಲು ಸಮ್ಮೇಳನದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಮೂಲ ಮತ್ತು ಅನ್ವಯಿಕ ವಿಜ್ಞಾನಗಳಿಗೆ ಸಂಬಂಧಿಸಿದ ಯಾವುದೇ ವಿಷಯದ ಪ್ರಾತ್ಯಕ್ಷಿಕೆಗಳನ್ನು ಮಂಡಿಸಬಹುದಾಗಿದೆ. ತಜ್ಞ ಸಮಿತಿಯು ಆಯ್ಕೆ ಮಾಡುವ 3 ಅತ್ಯುತ್ತಮ ಪ್ರಾತ್ಯಕ್ಷಿಕೆಗಳಿಗೆ ನಗದು ಬಹುಮಾನ ನೀಡಲಾಗುವುದು.
    ಸಮ್ಮೇಳನದ ಪ್ರತಿನಿಧಿಗಳಾಗಿ ನೋಂದಾಯಿಸಿಕೊಳ್ಳಲು ಹಾಗೂ ಸಂಶೋಧನಾ ಪ್ರಸ್ತುತಿಯ ಸಾರಾಂಶವನ್ನು ಕಳುಹಿಸಲು ನವೆಂಬರ್ 10 ಕೊನೆಯ ದಿನ.
    ಹೆಚ್ಚಿನ ವಿವರಗಳನ್ನು ಅಕಾಡೆಮಿಯ ಹಾಗೂ ವಿಶ್ವವಿದ್ಯಾಲಯದ ವೆಬ್‍ಸೈಟ್‍ಗಳಲ್ಲಿ (ತಿತಿತಿ.ಞsಣಚಿಛಿಚಿಜemಥಿ.iಟಿ & ತಿತಿತಿ.ಜhಚಿಡಿತಿಚಿಜsಛಿieಟಿಛಿeಛಿeಟಿಣಡಿe.oಡಿg ) ಪಡೆಯಬಹುದಾಗಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಎಂ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರ: ಶೇ.50 ರ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ
  
    ಉಡುಪಿ, ನವೆಂಬರ್ 2 (ಕರ್ನಾಟಕ ವಾರ್ತೆ): ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಎಲ್ಲಾ ಪ್ರಾಕಾರದ ಸಾಹಿತ್ಯ ಕೃತಿಗಳನ್ನು ಈವರೆಗೆ ಪ್ರಕಟಿಸುತ್ತಾ ಬಂದಿದ್ದು, ಇವುಗಳಲ್ಲಿ ವ್ಯಕ್ತಿ ಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ, ಕೃಷಿ ಹೀಗೆ ಹಲವು ಪ್ರಾಕಾರಗಳಲ್ಲಿ ಸಾಹಿತ್ಯ ಕೃತಿಗಳನ್ನು ಸುಮಾರು 360 ಶೀರ್ಷಿಕೆಗಳನ್ನು ಮುದ್ರಿಸಿ ಪ್ರಕಟಿಸಿದೆ.
     ಅತ್ಯಂತ ಮೌಲಿಕವಾದ, ಪ್ರಾಜ್ಞರಿಂದ ರಚಿತವಾದ ಕೃತಿಗಳನ್ನು ಜನ ಸಾಮಾನ್ಯರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬ ಉದ್ದೇಶದಿಂದ ಕನ್ನಡ ಪುಸ್ತಕ ಪ್ರಾಧಿಕಾರವು, 2018 ನವೆಂಬರ್ ತಿಂಗಳು ಪೂರ್ತಿ ಎಲ್ಲಾ ಪುಸ್ತಕಗಳನ್ನು ಶೇ.50 ರ ರಿಯಾಯಿತಿಯಲ್ಲಿ ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಎಲ್ಲಾ ಜಿಲ್ಲಾಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ, ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಜಿಲ್ಲಾವಾರು ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಲ್ಲಿ ಮಾರಾಟಕ್ಕೆ ಲಭ್ಯವಿದೆ.
ಅಲ್ಲದೇ ಪುಸ್ತಕ ಪ್ರಾಧಿಕಾರದ ಪುಸ್ತಕಗಳನ್ನು ಅಂತರ್ಜಾಲದಲ್ಲಿಯೂ ಸಹ ಶೇ.50 ರ ರಿಯಾಯಿತಿಯಲ್ಲಿ ಅಂದರೆ ತಿತಿತಿ.ಞಚಿಟಿಟಿಚಿಜಚಿಠಿusಣಚಿಞಚಿಠಿಡಿಚಿಜhiಞಚಿಡಿಚಿ.ಛಿom ನಲ್ಲಿ, ನಮ್ಮ ಪುಸ್ತಕಗಳು ವಿಭಾಗದಲ್ಲಿ ಆಯ್ಕೆ ಮಾಡಿ, ಆನ್‍ಲೈನ್ ಮೂಲಕ ಹಣ ಪಾವತಿಸಿ, ಪುಸ್ತಕಗಳನ್ನು ನೇರವಾಘಿ ಪಡೆಯಬಹುದಾಗಿದೆ.
    ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22484516 / 22107704/05 ಅನ್ನು ಸಂಪರ್ಕಿಸುವಂತೆ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಬ್ರಹ್ಮಾವರ: ಬಾದಾಮಿ ಮೂಲದ ಬಾಲ ಕಾರ್ಮಿಕನÀ ರಕ್ಷಣೆ
ಉಡುಪಿ, ನವೆಂಬರ್ 2 (ಕರ್ನಾಟಕ ವಾರ್ತೆ): ಕಾರ್ಮಿಕ ಇಲಾಖೆ ಉಡುಪಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಉಡುಪಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೋಲೀಸ್ ಇಲಾಖೆ, ಬ್ರಹ್ಮಾವರ ಠಾಣೆ ಇವರ ಜಂಟಿ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಆಕಾಶವಾಣಿ ಸಮೀಪದ ಬಾರ್ ಒಂದರಲ್ಲಿ ಬಾದಾಮಿ ಮೂಲದ 12 ವರ್ಷದ ಬಾಲ ಕಾರ್ಮಿಕನನ್ನು ರಕ್ಷಿಸಿ, ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ, ನಿಟ್ಟೂರು, ಉಡುಪಿರವರ ವಶಕ್ಕೆ ನೀಡಲಾಯಿತು.
ಕಾರ್ಯಾಚರಣೆಯಲ್ಲಿ 2ನೇ ವೃತ್ತ ಉಡುಪಿಯ(ಪ್ರಭಾರ), ಕಾರ್ಮಿಕ ನಿರೀಕ್ಷಕ ಸತ್ಯನಾರಾಯಣ. ಡಿ.ಎಸ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಪ್ರಭಾಕರ್ ಆಚಾರ್, 1ನೇ ವೃತ್ತ ಉಡುಪಿಯ(ಪ್ರಭಾರ) ಕಾರ್ಮಿಕ ನಿರೀಕ್ಷಕ ಪ್ರವೀಣ್‍ಕುಮಾರ್, ಬ್ರಹ್ಮಾವರ ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕಿ ಶಾಲಿನಿ.ಕೆ, ಬ್ರಹ್ಮಾವರ ಪೋಲೀಸ್‍ಠಾಣೆಯ ಹೆಡ್‍ಕಾನ್‍ಸ್ಟೇಬಲ್ ಗಣೇಶ್, ಸುರೇಶ್, ಭಾಗವಹಿಸಿದ್ದರು.



ಕರ್ನಾಟಕ ಶಿಲ್ಪಕಲಾ ಅಕಾಡೆಮಿ:  ಶೇ.50 ರ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ
     ಉಡುಪಿ, ನವೆಂಬರ್ 2 (ಕರ್ನಾಟಕ ವಾರ್ತೆ):  ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಕಟವಾಗಿರುವ ಎಲ್ಲಾ ಪುಸ್ತಕಗಳನ್ನು, ನವೆಂಬರ್ ತಿಂಗಳಲ್ಲಿ ಶೇ.50 ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ಇ- ಮೇಲ್ shiಟಠಿಚಿಞಚಿಟಚಿ.ಚಿಛಿಚಿಜemಥಿ@gmಚಿiಟ.ಛಿom    ಹಾಗೂ ವೆಬ್ ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿshiಟಠಿಚಿಞಚಿಟಚಿಚಿಛಿಚಿಜemಥಿ.oಡಿg , ದೂರವಾಣಿ ಸಂಖ್ಯೆ: 080-22278725 ಅನ್ನು ಸಂಪರ್ಕಿಸುವಂತೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕರ್ನಾಟಕ ಲಲಿತಕಲಾ ಅಕಾಡೆಮಿ:  ಶೇ.50 ರ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ
   ಉಡುಪಿ, ನವೆಂಬರ್ 2 (ಕರ್ನಾಟಕ ವಾರ್ತೆ): ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಕಟವಾಗಿರುವ ಎಲ್ಲಾ ಪುಸ್ತಕಗಳನ್ನು, ನವೆಂಬರ್ ತಿಂಗಳಲ್ಲಿ ಶೇ.50 ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು.
    ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ಇ- ಮೇಲ್ ಞಟಚಿ.ಞಚಿಡಿಟಿಚಿಣಚಿಞಚಿ@gmಚಿiಟ.ಛಿom     ಹಾಗೂ ವೆಬ್ ಸೈಟ್ ತಿತಿತಿ.ಟಚಿಟiಣಞಚಿಟಚಿಞಚಿಡಿಟಿಚಿಣಚಿಞಚಿ.oಡಿg  , ದೂರವಾಣಿ ಸಂಖ್ಯೆ: 080-22480297 ಅನ್ನು ಸಂಪರ್ಕಿಸುವಂತೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

ಮೃತ ವ್ಯಕ್ತಿಯ ವಾರಸುದಾರರ ಪತ್ತೆ ಬಗ್ಗೆ
    ಉಡುಪಿ, ನವೆಂಬರ್ 2 (ಕರ್ನಾಟಕ ವಾರ್ತೆ): ಜಿಲ್ಲಾ ಆಸ್ಪತ್ರೆ ಉಡುಪಿಯಲ್ಲಿ ಒಳರೋಗಿಯಾದ ದಾಖಲಾದ ಮಲ್ಪೆಯ ಸಂಕಪ್ಪ (65 ವರ್ಷ) ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುತ್ತಾರೆ.
    ವಾರಸುದಾರರು ಯಾರಾದರು ಇದ್ದಲ್ಲಿ, ಜಿಲ್ಲಾ ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0820-2520555 / 9449827833 ನ್ನು ಸಂಪರ್ಕಿಸುವಂತೆ ಉಡುಪಿ ಜಿಲ್ಲಾ ಆಸ್ಪತ್ರೆಯ, ಜಿಲ್ಲಾ ಶಸ್ತ್ರಚಿಕಿತ್ಸಕರ ಪ್ರಕಟಣೆ ತಿಳಿಸಿದೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | UdupiFinal Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, KemmannuVespers 2024 | St. Theresa’s Church, Kemmannu
Annual Church Feast 2024 | St. Theresa’s Church, KemmannuAnnual Church Feast 2024 | St. Theresa’s Church, Kemmannu
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | UdupiCHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From KemmannuAnnual Day 2023 | Carmel English School, Live From Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, UdupiEaster 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, UdupiFocus Studio, Near Hotel Kidiyoor, Udupi