Brief Mumbai, Mangalore news with pictures


Rons Bantwal
Kemmannu News Network, 17-11-2018 19:57:56


Write Comment     |     E-Mail To a Friend     |     Facebook     |     Twitter     |     Print


 
ನ.25: ಸೂರತ್‍ನಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ - ಕರ್ನಾಟಕ ಸಮಾಜ ಸೂರತ್‍ನ ವಾರ್ಷಿಕೋತ್ಸವ-ಸಾಂಸ್ಕೃತಿಕ ವೈಭವ
ಮುಂಬಯಿ,ನ.17: ಕರ್ನಾಟಕ ಸಮಾಜ ಸೂರತ್ (ರಿ.) ಸಂಸ್ಥೆ ಇದೇ (ನ.25ನೇ) ಆದಿತ್ಯವಾರ ಮಧ್ಯಾಹ್ನ 1.00 ಗಂಟೆಯಿಂದ ಗುಜರಾತ್ ರಾಜ್ಯದ ಸೂರತ್ ನಗರದ ನಾನ್‍ಪುರಾ ಅಲ್ಲಿನ ಜೀವನ ಭಾರತಿ ಸಭಾಂಗಣದಲ್ಲಿ 2018ನೇ ವಾರ್ಷಿಕ ಕರ್ನಾಟಕ ರಾಜ್ಯೋತ್ಸವ ಆಚರಣೆಯೊಂದಿಗೆ ಯಕ್ಷಗಾನ ಪ್ರದರ್ಶಿಸಲಿದೆ.

ಸೂರತ್‍ನ ಸೂರತ್‍ನ ಹಿರಿಯ ಉದ್ಯಮಿ ವಸಂತ್ ಎನ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದಲ್ಲಿ ಎಲ್‍ಎನ್‍ಟಿ ಸೂರತ್ ಉದ್ಯಮದ ಪ್ರಧಾನ ಪ್ರಬಂಧಕ ಅನಿಲ್ ಬೋಂಟಡ್ಕ ಮುಖ್ಯ ಅತಿಥಿüಯಾಗಿ ಆಗಮಿಸಲಿದ್ದು ಮೌಂಟ್ ಕಾರ್ಮೆಲ್ ಕಾಥೋಲಿ ಚರ್ಚ್ ನಾನ್ಪುರ-ಸೂರತ್ ಇದರ ಸಹಾಯಕ ಧರ್ಮಗುರು ರೆ| ಫಾ| ಮಾರ್ಕ್ ರೋಬರ್ಟ್ ಡಿಸೋಜಾ  ಸಮಾರಂಭ ಉದ್ಘಾಟಿಸುವರು  ಎಂದು ಅಧ್ಯಕ್ಷ ಮನೋಜ್ ಸಿ.ಪೂಜಾರಿ ತಿಳಿಸಿದ್ದಾರೆ.


ಸಮಾರಂಭದಲ್ಲಿ ಕರ್ನಾಟಕ ಸಮಾಜದ ಗೌರವಾಧ್ಯಕ್ಷ ರಾಮಚಂದ್ರ ವಿ.ಶೆಟ್ಟಿ, ಉಪಾಧ್ಯಕ್ಷರುಗಳಾದ  ದಿನೇಶ್ ಶೆಟ್ಟಿ, ರಮೇಶ್ ಭಂಡಾರಿ, ಉಮೇಶ್ ಸಫಲಿಗ, ಅಜಿತ್ ಎಸ್.ಶೆಟ್ಟಿ ಅಂಕ್ಲೇಶ್ವರ, ಪ್ರಭಾಕರ ಶೆಟ್ಟಿ ಕೋಸಂಬಾ, ವನಿತಾ ಜೆ.ಶೆಟ್ಟಿ,  ಕೋಶಾಧಿಕಾರಿ ಚಂದ್ರಹಾಸ ಬಿ.ಸಫಲಿಗ, ಜೊತೆ ಕಾರ್ಯದರ್ಶಿ ಶಾಂತಿ ಡಿ.ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದು ಅತಿಥಿüಗಳನ್ನು ಸನ್ಮಾನಿಸುವರು ಹಾಗೂ ವಿಜೇತ ಸಂಘದ ಸದಸ್ಯರು ಮತ್ತು ಮಕ್ಕಳಿಗೆ ಬಹುಮಾನ ವಿತರಿಸುವರು.
 
ಸೂರತ್‍ನ ಕಲಾವಿದರು ವೈವಿಧ್ಯಮಯ ನೃತ್ಯಾವಳಿ, ಮನೋರಂಜನಾ ಕಾರ್ಯಕ್ರಮ ನೀಡಲಿದ್ದು ಶ್ರೀ ಗೀತಾಂಬಿಕಾ ಕೃಪಾ ಪೆÇೀಷಿತ ಯಕ್ಷಗಾನ ಮಂಡಳಿ ಅಸಲ್ಫಾ, ಘಾಟ್ಕೋಪರ್ ಇದರ ಕಲಾವಿದರು `ಶಬರಿಮಲೈ’ ಯಕ್ಷಗಾನ ಪ್ರದರ್ಶಿಸುವರು  ಎಂದು ಸಂಘಟನಾ ಕಾರ್ಯದರ್ಶಿ ಸಂತೋಷ್ ವಿ.ಶೆಟ್ಟಿ ತಿಳಿಸಿದ್ದಾರೆ.

ಆ ಪ್ರಯುಕ್ತ ನಾಡಿನ ಸಮಸ್ತ ತುಳುಕನ್ನಡಿಗ ಬಂಧುಗಳು, ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಕನ್ನಡಾಭಿಮಾನಿಗಳು ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಗೌ| ಪ್ರ| ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ ಈ ಮೂಲಕ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. (ರೋನಿಡಾ ಮುಂಬಯಿ)

ವಜ್ರಮಹೋತ್ಸವದ ಸಡಗರದಲ್ಲಿ ಅರುಣೋದಯ ಕಲಾ ನಿಕೇತನ
ನ.25: ಚೆಂಬೂರುನ ಫೈನ್‍ಆಟ್ರ್ಸ್ ಸಭಾಗೃಹದಲ್ಲಿ 60ನೇ ವಾರ್ಷಿಕೋತ್ಸವ ಆಚರಣೆ
ಮುಂಬಯಿ, ನ.17: ಮಹಾನÀಗರದ ಪ್ರತಿಷ್ಠಿತ ಹಾಗೂ ಹಿರಿಯ ಕಲಾಸಂಸ್ಥೆ `ಅರುಣೋದಯ ಕಲಾ ನಿಕೇತನ ಮುಂಬಯಿ ಸಾರ್ಥಕ ಆರು ದಶಕಗಳನ್ನು ಪೂರೈಸಿದ್ದು 60ನೇ ವಾರ್ಷಿಕೋತ್ಸವವನ್ನು ಇದೇ ನ.25ನೇ ಆದಿತ್ಯವಾರ ಚೆಂಬೂರು ಅಲ್ಲಿನ ಫೈನ್ ಆಟ್ರ್ಸ್ ಕಲ್ಚರಲ್ ಸೆಂಟರ್‍ನ ಶಿವಸ್ವಾಮಿ ಆಡಿಟೋರಿಯಂನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಸಂಭ್ರಮಿಸಲಿದೆ.

ಸಂಸ್ಥೆಯ ನೃತ್ಯ ಗುರು ನಿರ್ದೇಶಕಿ ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್‍ರವರ ನೇತೃತ್ವದಲ್ಲಿ ನೃತ್ಯ ರೂಪಕಗಳ ಪ್ರದರ್ಶನ, ನೃತ್ಯ ವೈವಿಧ್ಯಮಯ ಸಂಗೀತಮೇಳ, ಜುಗಲ್ ಬಂದಿ, ಸಂಗೀತ ನೃತ್ಯ ಇತ್ಯಾದಿಗಳ ಮೆಲೈಕೆಗಳೊಂದಿಗೆ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಅತಿಥಿüಯಾಗಿ ಮುಂಬಯಿ ಗಣ್ಯಾಧಿಗಣ್ಯರು, ತವರೂರಿನ ಗಣ್ಯರು, ಚಲನಚಿತ್ರ ಕ್ಷೇತ್ರದ ಮತ್ತು ರಾಜಕೀಯ ರಂಗದ ದಿಗ್ಗಜರು ಆಗಮಿಸಿ ಕಲಾವಿದರಿಗೆ ಗೌರವಾರ್ಪಣೆ, ಸಾಧಕರಿಗೆ ಸಮ್ಮಾನ, `ಸುವರ್ಣ ಭಾರತ ರತ್ನ ಪ್ರಶಸ್ತಿ’ ಪ್ರದಾನಿಸಿ ಸಡಗರಕ್ಕೆ ಕಳೆ ನೀಡಲಿದ್ದಾರೆ.

ವಜ್ರಮಹೋತ್ಸವದ ಅಂಗವಾಗಿ ಒಂದೇ ವೇದಿಕೆಯಲ್ಲಿ ಒಂದೇ ಕಾಲಕ್ಕೆ ಸುಮಾರು 60 ಕಲಾವಿದರು ವಿವಿಧ ಭಾರತದ ಶಾಸ್ತ್ರೀಯ ನೃತ್ಯ, ಜುಗಲ್ ಬಂದಿ ನೃತ್ಯ ನಡೆಯಲಿದೆ. ಭರತನಾಟ್ಯಂ, ಮೋಹಿನಿಯಾಟ್ಟಂ, ಕಥಕ್, ಓಡಿಸ್ಸಿ, ಕೊಚುಪುಡಿ, ಮಣಿಪುರಿ, ಕಥ್‍ಕಳಿ ನೃತ್ಯ ಜುಗಲ್‍ಬಂದಿ  ನಡೆಯಲಿದೆ.

ಜುಗಲ್ ಬಂದಿ: ಒಂದೇ ವೇದಿಕೆಯಲ್ಲಿ ಒಂದೇ ಸಮಯದಲ್ಲಿ 60 ಕಲಾವಿದರಿಂದ ತಾಳ- ವಾದ್ಯ, ಜುಗಲ್ ಬಂದಿ ನಡೆಯಲಿದೆ. ಸಂಗೀತ ವಾದನ ಮತ್ತು ಸ್ಟ್ರಿಂಗ್ ಸಲಕರಣೆ, ತಾಳವಾದ್ಯ, ಗಾಯ£, ಗಾಳಿ ವಾದ್ಯ ವಿವಿಧ ತರದ ಸಂಗೀತ ಸಾಧನಗಳಿಂದ ಜುಗಲ್ ಬಂದಿ ನಡೆಯಲಿದೆ.

ಸುವರ್ಣ ಭಾರತ ರತ್ನ ಪ್ರಶಸ್ತಿ: ಗುರುವಿನ ಸಂಸ್ಮರಣೆಯಲ್ಲಿ ಸದಾ  ನಾಟ್ಯಗುರು ಸ್ವರ್ಗೀಯ ಮಹಾಬಲ ಎಂ. ಸುವರ್ಣ ಅವರ ಸ್ಮಾರಣಾರ್ಥ ಪ್ರಶಸ್ತಿ ಗುರುವಿನ ಸವಿ ನೆನಪಿನ ಸ್ಮರಣೆಯಲ್ಲಿ ಕೂಡುಮಾಡುವ ಈ ಪುರಸ್ಕಾರ ಭಾವ-ರಾಗ-ತಾಳ-ಭಾವ-ಅಭಿನಯಕ್ಕೆ ಕೊಡಮಾಡಲಾಗುತ್ತಿದ್ದು ಈ ಬಾರಿಯ ಪ್ರಶಸ್ತಿಗೆ ಬಾಲಿವುಡ್ ನಟಿ, ಹಿರಿಯ ಕಲಾವಿದೆ ಹೇಮಾ ಮಾಲಿನಿ, ರಾಗ-ಹಾಡುಗಾರಿಕೆ ಗಾಯನಕ್ಕೆ ಕೊಡಮಾಡುವ ಪ್ರಶಸ್ತಿಗೆ ಸುರೇಶ್ ವಾಡ್ಕರ್ ಮತ್ತು ತಾಳವಾದ್ಯಕ್ಕೆ ಕೊಡಮಾಡುವ ಪ್ರಶಸ್ತಿಗೆ ಶಿವಮಣಿ (ಡ್ರಮಾರ್) ಆಯ್ಕೆಯಾಗಿದ್ದಾರೆ. ಈ ಸುವರ್ಣ ಭಾರತ ರತ್ನ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಒಳಗೊಂಡಿದೆ.

ಅರುಣೋದಯ ಕಲಾನಿಕೇತನದ ಹುಟ್ಟು: ಸ್ಥಾಪಕ, ಕಲಾರಾಧಕ, ಭರತನಾಟ್ಯ ಮೇರು ಕಲಾವಿದ ದಿವಂಗತ ಮಹಾಬಲ ನಾರಾಯಣ ಸುವರ್ಣ (ಎಂ.ಎನ್ ಸುವರ್ಣ). ಅವರಿಂದ ಹುಟ್ಟು ಪಡೆದ ಅರುಣೋದಯ ಕಲಾ ನಿಕೇತನವು ಕಳೆದ ಆರು  ದಶಕಗಳಿಂದ ಭರತನಾಟ್ಯ ಕಲಾರಾಧನೆಯಲ್ಲಿ ಸಲ್ಲಿಸಿದ, ಸಲ್ಲಿಸುತ್ತಿರುವ ಸೇವೆ ಅನುಪ. ಪ್ರಸ್ತುತ ಮಹಾನಗರದ ಮನೆ-ಮನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. 1958 ರಲ್ಲಿ ಅರುಣೋದಯ ಕಲಾನಿಕೇತನ, ಈ ಸಂಸ್ಥೆ ಸ್ಥಾಪಿಸಿ ಚೆಂಬೂರ್‍ನಲ್ಲಿ ಸುಸಜ್ಜಿತವಾದ ನೃತ್ಯವಿದ್ಯಾಲಯ ನಿರ್ಮಿಸಿದ್ದಾರೆ. ಕನ್ನಡಿಗರೊಬ್ಬರಿಂದ ಸ್ಥಾಪನೆಗೊಂಡ ಈ ಸಂಸ್ಥೆಯು ಕೇವಲ ತುಳು-ಕನ್ನಡಿಗರಲ್ಲದೆ ಅನ್ಯಭಾಷಿಕರಿಗೂ ಭರತನಾಟ್ಯ ಕಲಿಸುಸುವಲ್ಲಿ ಯಶ ಕಂಡಿದೆ.

ಎಂ.ಎನ್ ಸುವರ್ಣ ಅವರು ಉಡುಪಿ ಜಿಲ್ಲೆಯ ಹೆಜಮಾಡಿ ಪಡುವಲಿಮಾರಿ ಮೂಲದವರು. ತಮ್ಮ 4ರ ಹರೆಯದಲ್ಲಿ ಮುಂಬಯಿಗೆ ಆಗಮಿಸಿ ರಾತ್ರಿಶಾಲೆಯಲ್ಲಿ ಕಲಿತು ಬದುಕು ಕಟ್ಟಿಕೊಂಡವರು. ತಂಜಾವೂರು ಪುರಾಣದ ಮೂಲಕ ಪಳಗಿದ ಗುರು ಸುವರ್ಣ ಅವರ ಸಾವಿರಾರು ಶಿಷ್ಯಂದಿರು ಇಂದು ದೇಶ-ವಿದೇಶಗಳಲ್ಲಿ ಭರತನಾಟ್ಯವನ್ನು ಕಲಿಸುವ ಮೂಲಕ ಇತರರಿಗೆ ಧಾರೆಯೆರೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಭಾರತೀಯ ನೃತ್ಯ ಪರಂಪರೆಯನ್ನು ದೇಶ ವಿದೇಶಗಳಲ್ಲಿ ಪಸರಿಸಿದ ಖ್ಯಾತಿ ಕಲಾನಿಕೇತನಕ್ಕೂ ಸಲ್ಲುತ್ತದೆ.


ಅರುಣೋದಯ ಸಾಧಕಿ ನೃತ್ಯ ಗುರು ಡಾ| ಮೀನಾಕ್ಷಿ ರಾಜು ಶ್ರೀಯಾನ್
ಗುರು ಎಂ.ಎನ್ ಸುವರ್ಣ (ತಂದೆ) ಅವರಿಂದ ಬಳುವಳಿಯಾಗಿ ಪಡೆದ ಭರತನಾಟ್ಯವನ್ನು ಅವರು ಹಾಕಿಕೊಟ್ಟ ಆದರ್ಶದ ಪಥದಲ್ಲಿ ಮುನ್ನೆಡೆಸುತ್ತಿರುವ ಪುತ್ರಿ ನಾಟ್ಯಪ್ರವೀಣೆ ಗುರು ಡಾ| ಮೀನಾಕ್ಷಿ ರಾಜು ಶ್ರೀಯಾನ್ ಅವರದ್ದು. ಅವರತ ಸಾಧನೆ ತಂದೆಯಂತೆ ಎಳೆವಯಸ್ಸಿನಿಂದಲೇ ನೃತ್ಯದತ್ತ ಆಕರ್ಷಿತರಾದ ಮೀನಾಕ್ಷಿ ಅವರದ್ದು ಬಹುಮುಖ ಪ್ರತಿಭೆ. ಮೋಹಿನಿಯಟ್ಟಾ, ಕೊಚುಪುಡಿ, ಮಣಿಪುರಿ, ಕಥಕ್, ಭರತನಾಟ್ಯಂ, ಒಡಿಸ್ಸಿ ಮೊದಲಾದ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಕರಗತ ಮಾಡಿಕೊಂಡಿರುವುದಲ್ಲದೆ ಜಾನಪದ ನೃತ್ಯ ಪ್ರಕಾರದಲ್ಲೂ ವಿಶೇಷ ಪರಿಣಿತಿಯನ್ನು ಹೊಂದಿದ್ದಾರೆ.

ಅದರಂತೆ ನಾಟ್ಯ, ಕಲಾಪ್ರತಿಭೆಗೆ ಮನೆಯನ್ನೇ ಮೊದಲ ಪಾಠ ಶಾಲೆಯನ್ನಾಗಿರಿಸಿಕೊಂಡ ಆರಂಭದ ಶಿಕ್ಷಣವನ್ನು ತನ್ನ ತಂದೆಯಿಂದಲೇ ಕಲಿತುಕೊಂಡದ್ದಲ್ಲದೆ ಗುರು ವೇಣುಗೋಪಾಲ ಪಿಳ್ಳೆಯಿಂದ ಕಲಿತರು. `ನಾಟ್ಯ ವಿಶಾರದೆ’ ಪದವಿ ಮತ್ತು ದಾದರ್ ಮಾಟುಂಗಾ ಸಾಂಸ್ಕೃತಿಕ ಕೇಂದ್ರದ ಮೂಲಕ ಕೊರಿಯೋಗ್ರಾಫ್ (ರಂಗರೇಖೆ) ಪ್ರಮಾಣಪತ್ರಕ್ಕೆ ಭಾಜನರಾಗಿದ್ದಾರೆ. ತಮ್ಮದೇ ಸ್ವಂತ ಕಲ್ಪನೆಯಲ್ಲಿ ಅಚ್ಚುಕಟ್ಟಾಗಿ ಆಕರ್ಷಣಿಯವಾಗಿ ಪ್ರಬುದ್ಧರೆಣಿಸಿ ನರ್ತಿಸಿ ಭಾರತ ರಾಷ್ಟ್ರದಾದ್ಯಂತ ಸಂಚರಿಸಿ ಕಲಾರಸಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ತನ್ನ ತಾಯಿಯಿಂದಲೇ ಪಿಟೀಲು, ಸಿತಾರ್, ವೀಣೆಯನ್ನು ನುಡಿಸುವ ಪ್ರಾಥಮಿಕ ಶಿಕ್ಷಣ ಪಡೆದು ಮುಂದೆ ವೀಣೆ ಇತ್ಯಾದಿಗಳಲ್ಲಿ ಗುರು ಶ್ರೀಮತಿ ಸರೋಜ ಹರಿಹರನ್ ಅವರಿಂದ ಹೆಚ್ಚಿನ ಶಿಕ್ಷಣವನ್ನು ಪಡೆದ ಮೀನಾಕ್ಷಿ, ಈ ಕ್ಷೇತ್ರದಲ್ಲೂ ಹಲವಾರು ಕಾರ್ಯಕ್ರಮಗಳನ್ನು ನೀಡಿ ಗಮನ ಸೆಳೆದಿದ್ದಾರೆ. ಉತ್ತಮ ಹಾಡುಗಾರ್ತಿ ಆಗಿರುವ ಈಕೆ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಕರಗತ ಮಾಡಿಕೊಂಡಿರುವುದಲ್ಲದೆ ಜಾನಪದ ನೃತ್ಯ ಪ್ರಕಾರದಲ್ಲೂ ವಿಶೇಷ ಪರಿಣತಿಯನ್ನು ಹೊಂದಿದ್ದಾರೆ.

ನಗರಗಳಲ್ಲಿ ವಿವಿಧ ಶಾಖೆಗಳ ಸ್ಥಾಪನೆ:
ಅರುಣೋದಯ ಕಲಾನಿಕೇತನ ಸಂಸ್ಥೆಯ ಗುರು ಎಂ.ಎನ್ ಸುವರ್ಣ ಮತ್ತು ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ಅವರು ವಿಶ್ವಮಟ್ಟದಲ್ಲಿ ಬೆಳೆಸುವಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ಪರಿಪೂರ್ಣ ನೃತ್ಯ ಶಿಕ್ಷಕಿಯಾಗಿರುವ ಡಾ| ಮೀನಾಕ್ಷಿ ಚೆಂಬೂರ್‍ನಲ್ಲಿ ಮುಖ್ಯ ಶಾಖೆ ಹೊಂದಿದ್ದು ಉಪನಗರಗಳಾದ ಘಾಟ್‍ಕೋಪರ್, ಸಯಾನ್, ಚುನಾಭಟ್ಟಿ, ಕಲೀನಾ, ಸಾಂತಾಕ್ರೂಜ್, ಮೀರಾರೋಡ್ ಇನ್ನಿತರೆಡೆಗಳಲ್ಲೂ ಶಾಖೆಗಳನ್ನು ತೆರೆದು ಸಾವಿರಾರು ಮಕ್ಕಳಿಗೆ ಶಾಸ್ತ್ರೀಯ ಪ್ರಕಾರದ ನೃತ್ಯಗಳನ್ನು ಧಾರೆ ಎರೆಯುತ್ತಿದ್ದಾರೆ.

ದೇಶ ವಿದೇಶಗಳಲ್ಲಿ ನೃತ್ಯ ಪ್ರದರ್ಶನ: ಅರುಣೋದಯ ಕಲಾನಿಕೇತನ ಸಂಸ್ಥೆಯು ಪ್ರಸ್ತುತ ದೇಶ ವಿದೇಶಗಳಲ್ಲೂ ಪ್ರಸಿದ್ಧಿಯನ್ನು ಪ್ರಡೆದಿದೆ. ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯ ಪ್ರವೀಣೆ ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ಅವರು ತಮ್ಮ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಸಿಂಗಾಪುರ, ಮಲೇಶಿಯಾ, ಜರ್ಮನಿ, ಥೈಲ್ಯಾಂಡ್, ಇಂಗ್ಲೆಂಡ್, ಎಡರ್ನ್‍ಬರ್ಗ್, ಲಂಡನ್, ಬೆಹರೇನ್, ಮಾರಿಷಸ್, ದುಬೈ, ಶ್ರೀಲಂಕಾ, ಅಮೆರಿಕಾ, ಕೆನಡಾ ಇತ್ಯಾದಿ ರಾಷ್ಟ್ರಗಳಲ್ಲಿ ನೃತ್ಯರೂಪಕಗಳನ್ನು ವೈವಿಧ್ಯಮಯ ನೃತ್ಯಗಳನ್ನು ಪ್ರದರ್ಶಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಭಾರತದ ರಾಷ್ಟ್ರೀಯ ರಾಯಭಾರಿ ಆಗಿ ಜರ್ಮನ್ ರಾಷ್ಟ್ರಕ್ಕೆ ತೆರಲಿದ ಪ್ರಥಮ ಕನ್ನಡತಿ-ನೃತ್ಯಗಾರ್ತಿ:
ಇಂಡಿಯನ್ ಕಲ್ಚರಲ್ ಕೌಂಸಿಲ್ ರಿಲೇಶನ್ (ಐಸಿಸಿಆರ್) ಸಹಯೋಗದಲ್ಲಿ ಭಾರತ ರಾಷ್ಟ್ರದ ರಾಯಭಾರಿ ಆಗಿ ಜರ್ಮನಿಗೆ ತೆರಳಿ ನಮ್ಮ ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿ ಅವರಿಗೆ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಉಣಬಡಿಸಿದ ಪ್ರಪ್ರಥಮ ಕನ್ನಡದ ನೃತ್ಯಗಾರ್ತಿ ಎಂಬ ಶ್ರೇಯಸ್ಸು ಮೀನಾಕ್ಷಿ ಇವರಿಗೆ ಸಲ್ಲುತ್ತಾ ಪ್ರಶಂಸೆಗೆ ಪಾತ್ರರಾಗಿದ್ದಾರೆ.

40 ಕ್ಕೂ ಅಧಿಕ ನೃತ್ಯರೂಪಕಗಳ ನಿರ್ದೇಶನ: ದಿ| ಗುರು ಎಂ.ಎನ್ ಸುವರ್ಣ ಹಾಗೂ ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ಅವರು ಕಳೆದ 60 ವರ್ಷಗಳಿಂದ 40ಕ್ಕೂ ಅಧಿಕ ನೃತ್ಯ ರೂಪಕಗಳನ್ನು ನಿರ್ದೇಶಿಸಿ ಪ್ರದರ್ಶಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಸಂಸ್ಕೃತ, ಮಲಯಾಳಂ, ತಮಿಳು, ತೆಲುಗು, ಹಿಂದಿ, ಮರಾಠಿ, ಗುಜರಾತಿ ಭಾಷೆಗಳಲ್ಲಿ ನೃತ್ಯ ರೂಪಕಗಳನ್ನು ನಿರ್ದೇಶಿಸಿ ಪ್ರದರ್ಶಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಶಾಕುಂತಲಾ, ಭಕ್ತ ಮಾರ್ಕಂಡೇಯ, ಶ್ರಾವಣ ಕುಮಾರ, ಅಯ್ಯಪ್ಪವತಾರಂ, ವಿಷ್ಣು ಪುರಾಣ ದಶಾವತಾರ, ಕೃಷ್ಣಲೀಲೆ, ಭಸ್ಮಾಸುರ ಮೋಹಿನಿ, ಲವ-ಕುಶ, ಭಕ್ತ ದ್ರುವ, ನಾರಾಯಂ, ದೇವಿನಮಃ ಸಮಯ ಕಾಲಚಕರ, ಕಾಳಿದಾಸ, ಮೇಘದೂತ, ಶಿವತಾಂಡವ, ಲಿಂಗಭೈರವಿ, ಭಜ ಗೋವಿದಂ, ಅಷ್ಟಲಕ್ಷ್ಮೀ ನಮದುರ್ಗ, ಕಿನ್ನರಿಜೋಗಿ, ದ್ರೌಪದಿ, ಧೇಡ್-ರೊಟ್ಟಿ, ಜಯ ವಿಜಯ, ತಾಯಿಯೇ ಯಶೋಧಾ, ಕಾಳಿಂಗ ನರ್ತನ, ತ್ರಿಪುರ ಸಮರ, ಅಷ್ಟನಾಯಿಕಾ ಶ್ರೀಚಕ್ರ, ಶಕ್ತಿ ಮಾಯೇ ನವಸಂಧಿ ಇತ್ಯಾದಿ ನೃತ್ಯರೂಪಕಗಳು ಪ್ರಸಿದ್ಧಿಯನ್ನು ಪಡೆದಿದೆ.

ಸಿದ್ಧಿ-ಸಾಧನೆಗಳಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು:
ಭರತನಾಟ್ಯವನ್ನೇ  ಜೀವಾಳವನ್ನಾಗಿಸಿಕೊಂಡು ಕಳೆದ ನಾಲ್ಕು ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ ಗುರು ದಿ| ಎಂ.ಎನ್ ಸುವರ್ಣ ಅವರಂತೆಯೇ ಗುರು ಡಾ| ಮೀನಾಕ್ಷಿ ರಾಜು ಶ್ರೀಯಾನ್ ಅವರ ಸಿದ್ಧಿ-ಸಾಧನೆಗಳಿಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜಕರಾಗಿದ್ದಾರೆ. ನಾಟ್ಯ ಸರಸ್ವತಿ, ನಾಟ್ಯ ಮಯೂರಿ, ಸಿಂಗಾಪುರದ ಗಲ್ಲಾಬಲ್ ಅವಾರ್ಡ್, ಕರ್ನಾಟಕದ ಸುವರ್ಣರತ್ನ, ಸ್ವಾಮಿ ವಿವೇಕಾನಂದ ನ್ಯಾಷನಲ್ ಆವಾರ್ಡ್, ಸಮಾಜರತ್ನ ಅವಾರ್ಡ್, ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ನ್ಯಾಷನಲ್ ಅವಾರ್ಡ್ , ಆರ್ಯ ಭಟ್ಟ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಅವಾರ್ಡ್, ಬೆಸ್ಟ್ ಡಾನ್ಸ್ ಕೊರಿಯೊಗ್ರಾಫರ್ ಅವಾರ್ಡ್, ಬಸವಜ್ಯೋತಿ ಅವಾರ್ಡ್, ಇನ್ನಿತರ ನೂರಾರು ಪ್ರಶಸ್ತಿ ಪುರಸ್ಕಾರ ವಿವಿಧ ಸಂಘಟನೆಗಳ ಸಮ್ಮಾನ ಗೌರವಗಳು ಗುರು ಡಾ| ಮೀನಾಕ್ಷಿ ಶ್ರೀಯಾನ್ ಅವರಿಗೆ ಲಭಿಸಿದೆ. ಸಂಸ್ಥೆಯ ವಜ್ರ ಮಹೋತ್ಸವಕ್ಕೆ ತುಳು-ಕನ್ನಡಿಗರು ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.  ರೋನಿಡಾ, ಮುಂಬಯಿ



ಧರ್ಮಸ್ಥಳ ಯಕ್ಷಗಾನ ಮೇಳದ ತಿರುಗಾಟ ಪ್ರಾರಂಭ

ಉಜಿರೆ: ಧರ್ಮಸ್ಥಳದಲ್ಲಿ ಬುಧವಾರ ಮತ್ತು ಗುರುವಾರ ಸೇವೆ ಬಯಲಾಟ ಪ್ರದರ್ಶನದ ಬಳಿಕ ಶುಕ್ರವಾರ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯು ಪ್ರಸ್ತುತ ವರ್ಷದ ತಿರುಗಾಟವನ್ನು ಪ್ರಾರಂಭಿಸಿದೆ.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

 

ನ.25:ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಸಂಸ್ಥೆಯಿಂದ ಹವ್ಯಕರ ಸಭಾಗೃಹದಲ್ಲಿ
ಕವಿ ಜಿ.ವಿ ಭಟ್ ಸ್ಮಾರಣಾರ್ಥ ಕವಿಗೋಷ್ಠಿ-ಕವನ ಸ್ಪರ್ಧೆಯ ಬಹುಮಾನ ವಿತರಣೆ
ಮುಂಬಯಿ, ನ.18: ಮಹಾನಗರದಲ್ಲಿನ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಸಂಸ್ಥೆಯು ಇದೇ ನ.25ನೇ ರವಿವಾರ ಸಂಜೆ 4.00 ಗಂಟೆಗೆ ಘಾಟ್ಕೋಪರ್ ಪಶ್ಚಿಮದಲ್ಲಿನ ದೀಪ್ತಿ ಸೊಲಿಟೇರ್ ಕಟ್ಟಡದಲ್ಲಿನ ಹವ್ಯಕರ ಸಭಾಗೃಹದಲ್ಲಿ ನಾಡಿನ ಹೆಸರಾಂತ ಕವಿವರ್ಯ ಜಿ.ವಿ ಭಟ್ ಸ್ಮಾರಣಾರ್ಥ ಕವಿಗೋಷ್ಠಿ ಮತ್ತು ಕವನ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಿದೆ.

ಕವಿಗೋಷ್ಠಿಯಲ್ಲಿ  ಗೋಪಾಲ್ ತ್ರಾಸಿ, ಡಾ| ಕರುಣಾಕರ್ ಶೆಟ್ಟಿ ಪಣಿಯೂರು, ಸಾ.ದಯಾ, ಕೆ.ಗೋವಿಂದ ಭಟ್, ವಿಶ್ವನಾಥ ಶೆಟ್ಟಿ ಪೇತ್ರಿ, ಶಾಂತಾ ಶಾಸ್ತ್ರಿ, ಮಹೇಶ್ ಹೆಗ್ಡೆ ಪುಣೆ, ನ್ಯಾ| ಅಮಿತಾ ಭಾಗವತ್, ಡಾ| ಜಿ.ಪಿ ಕುಸುಮಾ, ಶೈಲಜಾ ಹೆಗ್ಡೆ, ಅನಿತಾ ಪಿ.ಪೂಜಾರಿ ತಾಕೋಡೆ, ಸುನಂದ ಭಟ್, ಡಾ| ದಾಕ್ಷಾಯನಿ ಯೆಡಹಳ್ಳಿ, ಶಾರದಾ ಅಂಬಸಂಗೆ ಪಾಲ್ಗೊಂಡು ತಮ ಕವಿತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ಕವಿಗೋಷ್ಠಿ ಬಳಿಕ ಟ್ರಸ್ಟ್ ಆಯೋಜಿಸಿದ್ದ ಕವನ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಹವ್ಯಕ ವೆಲ್ಫೇರ್ ಟ್ರಸ್ಟ್‍ನ ಅಧ್ಯಕ್ಷ ಶಿವಕುಮಾರ್ ಪಿ.ಭಾಗ್ವತ್ ಅಧ್ಯಕ್ಷತೆಯಲ್ಲಿ ಜರುಗಲಿದೆ. ಅತಿಥಿüಗಳಾಗಿ ಲೇಖಕ,ಕವಿ ಶರದ್ ಸೌಕೂರು, ಲೇಖಕಿ ತುಳಸಿ ವೇಣುಗೋಪಾಲ್ ಉಪಸ್ಥಿತರಿರುವರು.

ಕವನ ಸ್ಪರ್ಧೆಯ  ವಿಜೇತರು:
ಪ್ರಜ್ಞಾ  ಮತ್ತಿಹಳ್ಳಿ, ಧಾರವಾಡ (ಪ್ರಥಮ),  ಸ್ಮಿತಾ ಅಮೃತ್‍ರಾಜ್ ಸಂಪಾಜೆ (ದ್ವಿತೀಯ), ಧೀರೇಂದ್ರ ನಾಗರಹಳ್ಳಿ, ಬೆಂಗಳೂರು (ತೃತೀಯ), ಹೇಮಾ ಎಸ್.ಅಮೀನ್ ಮುಂಬಯಿ (ಸಮಾಧಾನಕರ) ಇವರಿಗೆ ಪ್ರಾಪ್ತಿಯಾಗಿದೆ ಎಂದು ಹವ್ಯಕ ವೆಲ್ಫೇರ್ ಟ್ರಸ್ಟ್‍ನ ಕಾರ್ಯದರ್ಶಿ ಎನ್.ಆರ್ ಆಕದಾಸ ತಿಳಿಸಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi