Brief Udupi news with pictures


Richard Dsouza
Kemmannu News Network, 06-12-2018 20:02:22


Write Comment     |     E-Mail To a Friend     |     Facebook     |     Twitter     |     Print


ಪ.ಜಾತಿ ಪಂಗಡ ಕಾಯ್ದೆ ಅರಿವು ಇರಲಿ- ಜಿಲ್ಲಾಧಿಕಾರಿ
     ಉಡುಪಿ, ಡಿಸೆಂಬರ್ 6 (ಕರ್ನಾಟಕ ವಾರ್ತೆ) : ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆ 1989 ಹಾಗೂ ಪಿ.ಟಿ.ಸಿಎಲ್ ಕಾಯ್ದೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಹೊಂದಿರುವುದು ಅವಶ್ಯಕ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
     ಅವರು ಗುರುವಾರ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರ 62 ನೇ ಪುಣ್ಯ ಸ್ಮರಣೆ ನಿಮಿತ್ತ  ಪುಷ್ಪಾರ್ಚನೆ ಮತ್ತು ನಮನ ಕಾರ್ಯಕ್ರಮ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆ 1989 ಹಾಗೂ ಪಿ.ಟಿ.ಸಿಎಲ್ ಕಾಯ್ದೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
     ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆ ಕುರಿತು ಎಲ್ಲಾ ಇಲಾಖಾಧಿಕಾರಿಗಳು ಅಗತ್ಯ ಮಾಹಿತಿ ಹೊಂದಿರಬೇಕು, ದೈನಂದಿನ ಕರ್ತವ್ಯದಲ್ಲಿ ಈ ಕಾಯ್ದೆಯ ಉಲ್ಲಂಘನೆ ಕುರಿತು ಬರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಹೇಳಿದರು.
     ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆ 1989 ಕುರಿತು ಮಾತನಾಡಿದ ವಕೀಲ ಸತೀಶ್ ಕಾಳಾವರ್ಕರ್, ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಗಳೂ ಸಹ ಈ ಕಾಯ್ದೆಯ ಕುರಿತು ಅರಿವು ಹೊಂದಿರಬೇಕು, ಕಾಯ್ದೆ ಅರಿಯದೇ ದೌರ್ಜನ್ಯ ಪ್ರಕರಣಗಳಲ್ಲಿ ನಿರ್ಲಕ್ಷ ವಹಿಸಿದರೆ ಶಿಕ್ಷೆಗೆ ಒಳಗಾಗುವ ಸಾಧ್ಯತೆಯಿದೆ, ಸರಿಯಾದ ಕಾಲಂಗಳಡಿ  ಪ್ರಕರಣ ದಾಖಲಿಸಬೇಕು, 60 ದಿನಗಳಲ್ಲಿ ಆರೋಪ ಪಟ್ಟಿ ಸಲ್ಲಿಸುವುದರೊಂದಿಗೆ ಕಾಯಿದೆಯಲ್ಲಿ ನಿಗಧಿಪಡಿಸಿದ ಎಲ್ಲಾ ಕರ್ತವ್ಯಗಳನ್ನು ನೆರವೇರಿಸಬೇಕು. ದೌರ್ಜನ್ಯ ಕಾಯ್ದೆಯಡಿ ವ್ಯಕ್ತಿ ಆಪಾದಿತನಾದರೆ ಆತನ ಚರ ಮತ್ತು ಸ್ಥಿರಾಸ್ತಿಯನ್ನು ಪ್ರಕರಣ ಮುಗಿಯುವವರೆಗೂ ಮುಟ್ಟುಗೋಲು ಹಾಕಿಕೊಳ್ಳುವ ಮತ್ತು ಅಪರಾಧಿ ಎಂದು ಘೋಷಿತನಾದರೆ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಕಾನೂನಿನಲ್ಲಿದೆ, ಪ್ರಕರಣ ನಡೆದ ಸ್ಥಳಗಳಿಗೆ ಜಿಲ್ಲಾಧಿಕಾರಿ, ಎಸಿ, ಎಸ್ಪಿ, ಡಿವೈಎಸ್ಪಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು, ಜಿಲ್ಲಾಧಿಕಾರಿಗಳು ಮತ್ತು ಇತರೆ ದಂಡಾಧಿಕಾರಿಗಳು ಸಂತ್ರಸ್ಥರಿಗೆ ಮತ್ತು ಅವರ ಕುಟುಂಬದವರಿಗೆ ಅಗತ್ಯ ಪರಿಹಾರ ಮತ್ತು ಸವಲತ್ತುಗಳನ್ನು ಒದಗಿಸಬೇಕು, ಪರಿಹಾರ ನೀಡಿದ ಕುರಿತು ವಿಶೇಷ ನ್ಯಾಯಾಲಯಕ್ಕೆ ವರದಿ ಕಳುಹಿಸಬೇಕು, ನೊಂದವರಿಗೆ ಸೂಕ್ತ ರಕ್ಷಣೆ ಒದಗಿಸುವುದರ ಜೊತೆಗೆ, ಪ್ರಕರಣದ ವಿಚಾರಣೆಗೆ ಹಾಜರಾಗಲು ಅವರ ವಾಸಸ್ಥಳದಿಂದ ತನಿಖಾ ಸ್ಥಳ ಅಥವಾ ವಿಚಾರಣಾ ಸ್ಥಳಕ್ಕೆ ಹಾಜರಾಗಲು ಸೂಕ್ತ ಪ್ರಯಾಣಭತ್ಯೆ ವಿತರಿಸಬೇಕು  ಎಂದು ಹೇಳಿದ ಅವರು, ಪ್ರತಿಯೊಬ್ಬ ಸರಕಾರಿ  ಅಧಿಕಾರಿಗಳು ಮತ್ತು ಪಾತ್ರ ಮತ್ತು ಜವಾಬ್ದಾರಿಯನ್ನು ನಿರ್ವಹಿಸಿ ಸಂತ್ರಸ್ಥರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಹೇಳಿದರು.
    ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಭುಜಬಲಿ , ವಕೀಲ ಮಹಾಬಲ ಹಾಗೂ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು
ಬೈಂದೂರು ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ-ಸಂಸದ ಬಿ.ವೈ. ರಾಘವೇಂದ್ರ

ದಿನಾಂಕ: 05-12-2018
ಪ್ರತಿ ಬೂತ್‍ನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ- ಅಪರ ಜಿಲ್ಲಾಧಿಕಾರಿ
    ಉಡುಪಿ, ಡಿಸೆಂಬರ್ 5 (ಕರ್ನಾಟಕ ವಾರ್ತೆ) : ಜನವರಿ 25 ರಂದು ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರದ ಪ್ರತಿ ಮತಗಟ್ಟೆಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ, ಮತದಾನದ ಪ್ರಾವಿತ್ಯತೆ ಮತ್ತು ಮಹತ್ವ ಕುರಿತಂತೆ ನಾಗರೀಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ತಿಳಿಸಿದ್ದಾರೆ.
    ಅವರು ಬುಧವಾರ, ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ರಾಷ್ಟ್ರೀಯ ಮತದಾರರ ದಿನ ಆಚರಣೆ ಕುರಿತ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಮತದಾರರ ನೊಂದಣಿ ಸೇರಿದಂತೆ, ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಉತ್ತೇಜಿಸಲು, ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಲು ಮತದಾರರ ದಿನಾಚರಣೆ ಕಾರ್ಯಕ್ರಮ ಆಯೋಜಿಸುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲೂ ಸಹ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಪ್ರತಿ ವಿಧಾನ ಸಭೆಯ ಎಲ್ಲಾ ಮತಗಟ್ಟೆಗಳಲ್ಲಿ ಬಿಎಲ್‍ಓಗಳ ಮೂಲಕ ಕಾರ್ಯಕ್ರಮ ಆಯೋಜಿಸುವಂತೆ ಎಲ್ಲಾ ತಹಸೀಲ್ದಾರ್ ಗಳಿಗೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು.
    ಮತದಾರರ ದಿನದ ಅಂಗವಾಗಿ ಸ್ವೀಪ್ ಸಮಿತಿ ವತಿಯಿಂದ ಜಿಲ್ಲೆಯ ಎಲ್ಲಾ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಬಂದ ಮತ್ತು ಕ್ವಿಜ್ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸುವಂತೆ ಹಾಗೂ ಮತದಾರರ ದಿನದಂದು ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನಡೆಸುವಂತೆ ಸೂಚಿಸಿದರು.
    ಸಭೆಯಲ್ಲಿ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಭೂ ಬಾಲನ್ ಮತ್ತು ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
  
ತಾರಸಿ ತೋಟ, ಕೈತೋಟ ಬೇಸಾಯ-ಉಚಿತ ತರಬೇತಿ ಹಾಗೂ ಮಿನಿ ಕಿಟ್ ವಿತರಣೆ
     ಉಡುಪಿ, ಡಿಸೆಂಬರ್ 5 (ಕರ್ನಾಟಕ ವಾರ್ತೆ) : ತೋಟಗಾರಿಕೆ ಇಲಾಖೆಯಿಂದ ಉಡುಪಿ ನಗರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ತಾರಸಿ ತೋಟ ಮತ್ತು ಕೈ ತೋಟ ಬೇಸಾಯ ಕುರಿತು ಉಚಿತವಾಗಿ ತರಬೇತಿ ಆಯೋಜಿಸಲಾಗುತ್ತಿದೆ.
   ಆಸಕ್ತರು ಹೆಸರು ನೋಂದಾಯಿಸಲು ಡಿಸೆಂಬರ್ 10 ಕೊನೆಯ ದಿನ. ನೋಂದಾವಣೆಗೆ ಕಚೇರಿ ಸಮಯದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿದೇಶಕರು, ಜಿಲ್ಲಾ ಪಂಚಾಯತ್, ಉಡುಪಿ ದೂರವಾಣಿ ಸಂಖ್ಯೆ:0820-2522837 / 2520590 ಅಥವಾ ಇ-ಮೇಲ್ hoಡಿಣiಛಿಟiಟಿiಛಿuಜuಠಿi@gmಚಿiಟ.ಛಿom  ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
    ತರಬೇತಿ ಪಡೆದ ಸಾರ್ವಜನಿಕರಿಗೆ ತರಕಾರಿ ಗಿಡ, ಬಯೋಮಿಕ್ಸ, ಗೊಬ್ಬರ ಒಳಗೊಂಡ ಮಿನಿಕಿಟ್‍ಗಳನ್ನು ಉಚಿತವಾಗಿ ನೀಡಲಾಗುತ್ತದೆ.
   ಆಸಕ್ತ ಸಾರ್ವಜನಿಕರು ಆಧಾರ್ ಪ್ರತಿ, ಭಾವಚಿತ್ರಗಳನ್ನು ನಿಗದಿತ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬಹುದಾಗಿದೆ. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೊಗ ಪಡೆದುಕೊಳ್ಳುವಂತೆ ಹಿರಿಯ ತೋಟಗಾರಿಕೆ ನಿರ್ದೇಶಕರು, ಜಿಲ್ಲಾ ಪಂಚಾಯತ್, ಉಡುಪಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂತರ್ ರಾಜ್ಯ ಯುವ ವಿನಿಮಯ ಕಾರ್ಯಕ್ರಮ
     ಉಡುಪಿ, ಡಿಸೆಂಬರ್ 5 (ಕರ್ನಾಟಕ ವಾರ್ತೆ) :ನೆಹರು ಯುವ ಕೇಂದ್ರ ಉಡುಪಿ, ನೆಹರು ಯುವ ಕೇಂದ್ರ ಸಂಘಟನೆ ಕರ್ನಾಟಕ, ಯುವ ಹಾಗೂ ಕ್ರೀಡಾ ಸಚಿವಾಲಯ, ಜಿಲ್ಲಾ ಆಡಳಿತ ಉಡುಪಿ ಇವರ ಸಹಯೋಗದಲ್ಲಿ ಅಂತರ್ ರಾಜ್ಯ ಯುವ ವಿನಿಮಯ ಕಾರ್ಯಕ್ರಮವು ಡಿಸೆಂಬರ್ 7 ರಿಂದ 21 ರ ವರೆಗೆ ನಡೆಯಲಿದೆ.
     ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಡಿಸೆಂಬರ್ 10 ರಂದು ಸಂಜೆ 4.30 ಕ್ಕೆ ಓISಖಿ ಪ್ರಗತಿ ಸೌಧ, ಬ್ರಹ್ಮಗಿರಿ, ಉಡುಪಿಯಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಕನ್ನಡ ಸಂಸ್ಕøತಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಉದ್ಘಾಟಿಸಲಿದ್ದು, ಉಡುಪಿ ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಹಿರಿಯಡಕ: ಪುರಾತತ್ತ್ವ ಶಾಸ್ತ್ರದ ವಿಶೇಷ ಉಪನ್ಯಾಸ
 ಉಡುಪಿ, ಡಿಸೆಂಬರ್ 5 (ಕರ್ನಾಟಕ ವಾರ್ತೆ) :ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತುಳುನಾಡಿನಲ್ಲಿ ಪ್ರಾಗೈತಿಹಾಸ ಕಾಲಕ್ಕೆ ಸಂಬಂಧಿಸಿದ ಹಲವಾರು ಅವಶೇಷಗಳು ದೊರೆತಿದ್ದು, ಈ ಪ್ರದೇಶವು ಪ್ರಾಚೀನ ಮಾನವ ಬದುಕಿದ ಸ್ಥಳಗಳಲ್ಲಿ ಒಂದಾಗಿದೆ ಎಂದು ಎಂ. ಎಸ್. ಆರ್. ಎಸ್ ಕಾಲೇಜು, ಶಿರ್ವ ಇಲ್ಲಿನ ಚರಿತ್ರೆ ಮತ್ತು ಪುರಾತತ್ತ್ವ ವಿಭಾಗದ ಮುಖ್ಯಸ್ಥ ಪ್ರೊ. ಟಿ. ಮುರುಗೇಶಿ ತಿಳಿಸಿದರು.  
ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕದಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಇತಿಹಾಸ ಮತ್ತು ಪುರಾತತ್ತ್ವ ವಿಭಾಗದ ಸಹಯೋಗದೊಂದಿಗೆ ನಡೆದ ಪುರಾತತ್ತ್ವಶಾಸ್ತ್ರ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ| ನಿಕೇತನ ಅಧ್ಯಕ್ಷತೆ ವಹಿಸಿ, ಮಾತನಾಡಿ ಪ್ರಾಗೈತಿಹಾಸ ಕಾಲದ ಮಹತ್ವವನ್ನು ಅರ್ಥೈಸಿಕೊಂಡು ವರ್ತಮಾನದ ಬದುಕಿಗೆ ಅದನ್ನು ಅನ್ವಯಿಸಿಕೊಳ್ಳಬೇಕಾದ ಅಗತ್ಯತೆಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಚಾಲಕಿ ಸುಮನಾ ಬಿ., ಇತಿಹಾಸ ಹಾಗೂ ಪುರಾತತ್ತ್ವ ವಿಭಾಗದ ಮುಖ್ಯಸ್ಥ ವಿ. ಎನ್. ಗಾಂವ್ಕರ್ ಉಪಸ್ಥಿತರಿದ್ದರು. ಸಫ್ರೀನಾ ಸ್ವಾಗತಿಸಿ, ಪ್ರಿಯಾಂಕ ಕಾರ್ಯಕ್ರಮವನ್ನು ನಿರ್ವಹಿಸಿ, ಸಂಧ್ಯಾ ವಂದಿಸಿದರು.

ದಿನಾಂಕ: 06-12-2018

    ಉಡುಪಿ, ಡಿಸೆಂಬರ್ 6 (ಕರ್ನಾಟಕ ವಾರ್ತೆ) :ಬೈಂದೂರು ರೈಲ್ವೆ ನಿಲ್ದಾಣವನ್ನು ಇನ್ನಷ್ಟು ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
    ಅವರು ಬೈಂದೂರಿನಲ್ಲಿ ಇಂದು ಸಂಸದರ ಕಚೇರಿ ಉದ್ಘಾಟನೆ ಹಾಗೂ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು. ಬೈಂದೂರು ರೈಲ್ವೆ ನಿಲ್ದಾಣದ ಮೂಲ ಸೌಕರ್ಯಗಳನ್ನು ಬಲಪಡಿಸಲಾಗುವುದು, ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
    ಬೈಂದೂರು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡು ಬಂದಿರುವ ಸಮಸ್ಯೆಗಳ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ತರಲಾಗುವುದು. ಮರವಂತೆ ಬ್ರೇಕ್ ವಾಟರ್ ಕಾಮಗಾರಿ ತ್ವರಿತಗೊಳಿಸಲಾಗುವುದು ಎಂದು ಹೇಳಿದರು.
    ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆಯಲ್ಲಿ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಯಾವುದೇ  ವಿವರ ಕೇಳದೆ ಚಿಕಿತ್ಸೆ ನೀಡಬೇಕು. ಇದರಲ್ಲಿ ವಿಳಂಬ ಸಲ್ಲದು ಎಂದು ಸೂಚಿಸಿದ ಸಂಸದರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದರು.
    ಬೈಂದೂರು ತಾಲೂಕು ಆಸ್ಪತ್ರೆಗೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇಲ್ಲಿಗೆ ಡಯಾಲಿಸಿಸ್ ಯಂತ್ರ ಒದಗಿಸಲಾಗುವುದು ಎಂದು ಸಂಸದರು ತಿಳಿಸಿದರು.
    ಸ್ಮಶಾನಕ್ಕೆ ಜಾಗ ಕೋರಿ ಬಂದಿರುವ ಪ್ರಸ್ತಾವನೆಗಳಿಗೆ ಕೂಡಲೇ ಜಾಗ ಮಂಜೂರು ಮಾಡಬೇಕು. ವಸತಿ ಯೋಜನೆಗಳಿಗೂ ಅಗತ್ಯ ಜಾಗ ಒದಗಿಸಲು ಅವರು ತಿಳಿಸಿದರು.
    ಬೈಂದೂರಿನಲ್ಲಿ ಇಂದು ಸ್ಥಾಪಿತವಾಗಿರುವ ಸಂಸದರ ಕಚೇರಿಯಲ್ಲಿ ನಿರಂತರವಾಗಿ ಸಾರ್ವಜನಿಕರ ಆಹ್ವಾನ ಸ್ವೀಕರಿಸಲಾಗುವುದು ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಶಾಸಕ ರುದ್ರೇಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿಂಧು ಬಿ ರೂಪೇಶ್, ಕುಂದಾಪುರ ಸಹಾಯಕ ಆಯುಕ್ತ ಭೂಬಾಲನ್ ಉಪಸ್ಥಿತರಿದ್ದರು.

ಸರ್ಕಾರಿ ಜಮೀನಿನ ಅನಧೀಕೃತ ಸಾಗುವಳಿ ಸಕ್ರಮಗೊಳಿಸಲು ಅರ್ಜಿ ಆಹ್ವಾನ
    ಉಡುಪಿ, ಡಿಸೆಂಬರ್ 6 (ಕರ್ನಾಟಕ ವಾರ್ತೆ) :ಸರ್ಕಾರಿ ಜಮೀನುಗಳಲ್ಲಿ ಅನಧೀಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆಯಡಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು, ಅದರಂತೆ ಕ್ರಮವಹಿಸಲು ಕರ್ನಾಟಕ ಭೂ ಕಂದಾಯ ನಿಯಮದ 108 ಸಿಸಿ ನಂತರ 108 ಸಿಸಿಸಿ ಅನ್ನು ಸೇರ್ಪಡಿಸಿ ಹೊಸದಾಗಿ ನಮೂನೆ -57 ರ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
   ಅನಧೀಕೃತವಾಗಿ ಅತಿಕ್ರಮಿಸಿರುವ ಜಮೀನಿನ ಸಕ್ರಮಕ್ಕಾಗಿ ಮಾರ್ಚ್ 16, 2019 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಆದ್ದರಿಂದ ಸಾರ್ವಜನಿಕರು ನಿಗದಿತ ನಮೂನೆಯೊಂದಿಗೆ ಸಂಬಂಧಿಸಿದ ಜಮೀನಿನ ಆರ್.ಟಿ.ಸಿ, ಅರ್ಜಿದಾರರು ಸಾಗುವಳಿ ಮಾಡಿದ ಬಗ್ಗೆ ಅರ್ಜಿದಾರರೊಂದಿಗೆ ತೆಗೆದ ಛಾಯಾ ಚಿತ್ರ, ಟಿ.ಟಿ ಪಾವತಿಸಿದ್ದಲ್ಲಿ ರಸೀದಿ, ಆಧಾರ್ ಕಾರ್ಡ್ ಪ್ರತಿ, ಅರ್ಜಿದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದಲ್ಲಿ ಸಂಬಂಧಿಸಿದ ತಹಶೀಲ್ದಾರರಿಂದ ಪಡೆದ ಜಾತಿ ಪ್ರಮಾಣ ಪತ್ರಗಳೊಂದಿಗೆ ಅರ್ಜಿ ಶುಲ್ಕ 100 ರೂ. ನ್ನು ಪಾವತಿಸಿ, ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಉಡುಪಿ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಡೂರು ಗ್ರಾಮ ಪಂಚಾಯತ್: ಪರಿಶಿಷ್ಟ ಜಾತಿ- ಪಂಗಡದ ವಿಶೇಷ ಗ್ರಾಮ ಸಭೆ
     ಉಡುಪಿ, ಡಿಸೆಂಬರ್ 6 (ಕರ್ನಾಟಕ ವಾರ್ತೆ) : ಪರಿಶಿಷ್ಟ ಜಾತಿ - ಪಂಗಡದ ನಾಗರಿಕರಿಗೆ ಪಂಚಾಯತ್ ಹಂತದಲ್ಲಿ ಹಾಗೂ ಇಲಾಖಾ ಹಂತದಲ್ಲಿ ಹಲವಾರು ಸೌಲಭ್ಯಗಳನ್ನು ಪಡೆಯುವ ಅವಕಾಶವಿದ್ದು, ಇದರ ಸದುಪಯೋಗ ಅಗತ್ಯವಿದೆ ಎಂದು ಕಾಡೂರು ಗ್ರಾಮ ಪಂಚಾಯತ್ ಸದಸ್ಯ ಸತ್ಯನಾರಾಯಣ ಶೆಟ್ಟಿ ತಿಳಿಸಿದರು.
     ಇವರು ಕಾಡೂರು ಗ್ರಾಮ ಪಂಚಾಯತ್ ವತಿಯಿಂದ ನಡೂರಿನ ಶ್ರೀವಾಣಿ ಪ್ರೌಢಶಾಲೆಯಲ್ಲಿ ನಡೆದ ಪರಿಶಿಷ್ಟ ಜಾತಿ - ಪಂಗಡದ ನಾಗರಿಕರ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿ,  ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವುದು ಅಗತ್ಯ ಎಂದು ತಿಳಿಸಿದರು.
     ಕಾಡೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ ಮಾತನಾಡಿ, ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ವಸತಿ ಯೋಜನೆ, 25%ರ ನಿಧಿ ಸೇರಿದಂತೆ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ನೀಡಲಾಗಿದ್ದು, ನಿವೇಶನ ಹಂಚಿಕೆಗೆ ಹಾಗೂ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಪೂರಕವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಪ್ರಾಥಾಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅನಿಲ್ ಕುಮಾರ್ ಸ್ವಚ್ಚತೆ ಹಾಗೂ ಘನ-ದ್ರವ ತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
     ಸಭೆಯಲ್ಲಿ ಕಾಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ನಾಯ್ಕ, ನೋಡಲ್ ಅಧಿಕಾರಿ ಚಂದ್ರಶೇಖರ ಶೆಟ್ಟಿ., ಶ್ರೀವಾಣಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ವಿಶ್ವನಾಥ ಶೆಟ್ಟಿ, ಶಿಕ್ಷಣ ಇಲಾಖೆಯ ಇಂದಿರಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹೇಮಲತಾ, ಪಂಚಾಯತ್ ಸದಸ್ಯರುಗಳಾದ ಸಂತೋಷ್, ವನಜಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 25% ರ ನಿಧಿಯಲ್ಲಿನ ಹಲವು ಸವಲತ್ತುಗಳನ್ನು ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ವಿತರಿಸಲಾಯಿತು.

ರಾಜ್ಯ ಮಟ್ಟದ ಭಾಷಣ ಸ್ಪರ್ಧೆ: ದ್ವಿತೀಯ ಸ್ಥಾನ
    ಉಡುಪಿ, ಡಿಸೆಂಬರ್ 6 (ಕರ್ನಾಟಕ ವಾರ್ತೆ) : ಭಾರತದ ಗಣತಂತ್ರ ದಿವಸದ ಪ್ರಯುಕ್ತ ಹಾಗೂ “ಸಂವಿಧಾನ ದಿವಸ” ವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ “ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು”(Pಚಿಣಡಿioಣism & ಓಚಿಣioಟಿ ಃuiಟಜiಟಿg) ಕುರಿತ ಇಂಗ್ಲೀಷ್ ಭಾಷೆಯ ಭಾಷಣ ಸ್ಪರ್ಧೆಯನ್ನು  ನೆಹರು ಯುವ ಕೇಂದ್ರ ತಾಲೂಕು, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ  ಆಯೋಜಿಸಿತ್ತು.
    ಉಡುಪಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಶೆರ್‍ಲಿನ್ ಡಿ’ಅಲ್ಮೇಡಾ ರವರು ಡಿಸೆಂಬರ್ 2 ರಂದು ಬೆಂಗಳೂರಿನ ಒSಒಇ ಆeveಟoಠಿmeಟಿಣ Iಟಿsಣiಣuಣe ನಲ್ಲಿ ನಡೆದ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ, ಜಿಲ್ಲೆಗೆ ಹಾಗೂ ಕಾಲೇಜಿಗೆ ಗೌರವವನ್ನು ತಂದಿದ್ದು, 10,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಗಳಿಸಿರುತ್ತಾರೆ.
    ಇವರು ಉಡುಪಿಯ ಎಂಜಿಎಂ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಹಾಗೂ ಉಡುಪಿಯ ಮೂಡುಬೆಳ್ಳೆ ನಿವಾಸಿ ಐವನ್ ಡಿ’ಅಲ್ಮೇಡಾ ಹಾಗೂ ಸಮಂತಾ ಡಿ’ಅಲ್ಮೇಡಾ ರವರ ಪುತ್ರಿಯಾಗಿದ್ದಾರೆ. ಕಾಲೇಜಿನ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ಸನ್ನು ಕಂಡಿರುವ ಶೆರ್‍ಲಿನ್ ಎನ್.ಎಸ್.ಎಸ್ ನ ಕ್ರೀಯಾಶೀಲ ಸದಸ್ಯರಾಗಿದ್ದಾರೆ ಎಂದು ವಿಲ್ ಫ್ರೆಡ್ ಡಿ ಸೋಜಾ, ಜಿಲ್ಲಾ ಯುವ ಸಮನ್ವಯ ಅಧಿಕಾರಿ, ನೆಹರು ಯುವ ಕೇಂದ್ರ, ಉಡುಪಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Nirmala Thonse organizes Awareness Campaign agains
View More

Passport at Milagres Cathedral on 24thPassport at Milagres Cathedral on 24th
Gandhi March in Udupi on 25th.Gandhi March in Udupi on 25th.
Milagres Tours and Travels upcoming Tours.Milagres Tours and Travels upcoming Tours.
Land for Sale in Kemmannu - Santhekatte - UdupiLand for Sale in Kemmannu - Santhekatte - Udupi
Kemmannu Church - Weekly Announcements.Kemmannu Church - Weekly Announcements.
Mount Rosary Church Annoucement for the weekMount Rosary Church Annoucement for the week
Free Eye Camp at Mount Rosary, KallianpurFree Eye Camp at Mount Rosary, Kallianpur
An Appeal from vittal churchAn Appeal from vittal church
Foundation Stone Laying Ceremony of Nayaab Residency by B. M. Zaffer & fly, Dubai, UAE.Foundation Stone Laying Ceremony of Nayaab Residency by B. M. Zaffer & fly, Dubai, UAE.
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Pedruchi Chavi January 2019Pedruchi Chavi January 2019
Delite Catering, SanthekatteDelite Catering, Santhekatte
Milarchi Laram - Issue Jan 2019Milarchi Laram - Issue Jan 2019
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Funeral Photographs:

Robert lewis (92), St. Theresa B ward, Kemmannu<font color=red><center>Funeral Photographs:<P> </font color=red></center> Robert lewis (92), St. Theresa  B ward, Kemmannu
ROZARICHO GAANCH DECEMBER 2018ROZARICHO GAANCH DECEMBER 2018
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India