Brief Mumbai, Mangalore news with pictures


Rons Bantwal
Kemmannu News Network, 10-12-2018 21:43:19


Write Comment     |     E-Mail To a Friend     |     Facebook     |     Twitter     |     Print


Ryan Minithon 2018

     Ryan Minithon 2018, one of the largest minithon road race series for the school students in the country.  161st Race was held on 9th December in Navi Mumbai witnessed the enthusiastic participation of 12173 students of 16 different schools of Mumbai.  The race was flagged off from Ryan International School, Nerul by respected CEO of Ryan Group of Institutions Mr. Ryan Pinto, Mr. Ravindra Ithape ( Corporator), Mrs. Surekha Ithape ( Ex.Corporator), Mr. sunil Lokhande ( Deputy Commissioner of Traffic), Mr. Revappa Gurav (DSO officer, NMMC), Mr. Sharad Doke (MAntralaya), Mr. Harsharan Singh (General Secretary Nerul Ghymkhana), Mr. Shekhar Lad (Inspector Central Excise), Pastor Ashish Srivastava ( Jeevan Jyot A G Church), Mr. Dinesh Jadhav (DY Commandant Indian Coast Guard), Mr. Mohan Suresh Dass (Head Coach Mumbai City).  Following the well established tradition of the Ryan Group of Schools, the galaxy of guests hailing from different walks of  life   planted saplings after the mega  Ryan Minithon 2018 kicked off.

Sporty students from U- 12 to U- 18 clad in P T uniform ran the race along the marathon route lined with a continuous human chain of teachers of all the participating schools. Ryan International Group of Institutions, India, has been organizing such races in Bengaluru, Delhi, Chandigarh, Nagpur, Surat, Jalna, Jaipur and Navi Mumbai since 1998 to develop a sports culture in the country conducive for grooming young students for national and international sporting events. A average of 70,000 students and above 350 Institutions participate every year. Our Honourable Chairman Sir Dr. A. F. Pinto believes that this minithon is a tribute to all the athletes throughout India and such minithons promote an interest in sports in the minds of youth and helps them remain physically fit.

The winners of different age groups were awarded in a scintillating ceremony with a number of distinguished guests in attendance. The prize distribution ceremony got off with a prayer followed by welcome speeches, melodious songs and captivating dance performances. St. Joseph’s High School CBSE Panvel with 49 points, received the Championship Trophy.  St. Joseph High School (S.S.C. Panvel) securing the second position with 42 Points and St. Xavier High School Goregaon securing the Third Position with 29 points.
Six  prizes  in  each  category  were  awarded  to  students. The overall points of each  race    decided  the  Championship  Trophy.  The   second   session of  the  event  was  an  entertaining  programme   organized  by  various  participating  schools  for  the  invited  dignitaries.

ಡಿ.16: ಕನ್ನಡ ಸಂಘ ಸಾಂತಾಕ್ರೂಜ್ ವಜ್ರಮಹೋತ್ಸವ ಸಂಭ್ರಮ ಕುರ್ಲಾ ಪೂರ್ವದ ಬಂಟರ ಭವನÀದಲ್ಲಿ ಅರ್ವತ್ತರ ಸಮಾರಂಭ
ಮುಂಬಯಿ, ಡಿ.01: ವಜ್ರದ ಮಹೋತ್ಸವವು ಸಾಂಪ್ರದಾಯಿಕ ಅರವತ್ತು ವರ್ಷಗಳ ಸೇವಾ ಚಕ್ರದೊಂದಿಗೆ ಸೇರಿಕೊಳ್ಳುತ್ತದೆ. ಇದನ್ನು `ವಜ್ರ ಉತ್ಸವ ಯಾ ಹೀರಕ ಮಹೋತ್ಸವ’ ಎಂದು ಕರೆಯಲಾಗುತ್ತಿದ್ದು ಇದೊಂದು ಮೈಲಿಗಲ್ಲು ಎಂದೇ ಪರಿಗಣಿಸಲಾಗುತ್ತಿದೆ. ಆದುದರಿಂದಲೇ ಈ ಆಚರಣೆ ವಿಶೇಷ ಪ್ರಾಮುಖ್ಯತೆ ಪಡೆದು ಪ್ರತಿಷ್ಠೆಯ ಹೆಜ್ಜೆಗುರುತುವಾಗಿ ಪ್ರಕಾಶಮಾನ ಆಗುತ್ತಿರುವುದು ಸಹಜ. ಸಂಘ-ಸಂಸ್ಥೆಗಳೂ ಇಂತಹ ಉತ್ಸವಗಳನ್ನು ಒಂದೆಡೆ ಸೇವಾ ಸಂಭ್ರಮವಾಗಿ ಆಚರಿಸುತ್ತಿರುವುದು ಸ್ತುತ್ಯರ್ಹ. ಅಂತೆಯೇ ತಮ್ಮ ಸೇವೆಗಳನ್ನು ನೆನಪಿಟ್ಟುಕೊಳ್ಳಲು ಇದೊಂದು ಸ್ಮರಣ ಉಡುಗೊರೆಯೇ ಸರಿ. ಮಹೋತ್ಸವದ ಸಂಕೇತವನ್ನು ಸಂಭ್ರಮವಾಗಿ ವಿನ್ಯಾಸಗೊಳಿಸುತ್ತಿರುವುದು ವಾಡಿಕೆ. ಆದುದರಿಂದಲೇ ಇಂತಹ ಆಚರಣೆಗಳನ್ನು ಹೆಮ್ಮೆಯಿಂದ ತೋರಿಸಿ ಕೊಟ್ಟು ಸುದೀರ್ಘವಾದ ಇತಿಹಾಸವನ್ನು ಭದ್ರ ಪಡಿಸಿಕೊಳ್ಳುವಲ್ಲಿ ಹೆಜ್ಜೆಗುರುತನ್ನು ರೂಪಿಸಲು ಭರದ ಸಿದ್ಧತೆಯಲ್ಲಿದೆ ಕನ್ನಡ ಸಂಘ ಸಾಂತಾಕ್ರೂಜ್. 

ಇದೇ ಡಿ.16ರ ಆದಿತ್ಯವಾರ ಬೆಳಿಗ್ಗೆ 9.00 ಗಂಟೆಯಿಂದ ರಾತ್ರಿ 9.00 ಗಂಟೆ ತನಕ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‍ನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ದಿನಪೂರ್ತಿಯಾಗಿಸಿ ಸಂಘದ ಅಧ್ಯಕ್ಷ ಎಲ್.ವಿ ಅಮೀನ್ ಅಧ್ಯಕ್ಷತೆಯಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್.ವಿ ಅವಿೂನ್ ಅಧ್ಯಕ್ಷತೆಯಲ್ಲಿ ವಜ್ರಮಹೋತ್ಸವ ಸಂಭ್ರಮಿಸಲಿದೆ.

ಉದ್ಘಾಟನಾ ಸಮಾರಂಭ
ಅಂದು ಬೆಳಿಗ್ಗೆ 9.00 ಗಂಟೆಗೆ  ಅತಿಥಿs ಗಣ್ಯರಿಂದ ಉದ್ಘಾಟನೆಗೊಳ್ಳಲಿದೆ. ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಕೃಷ್ಣ ಪ್ಯಾಲೇಸ್ ಹೊಟೇಲು ಸಮೂಹದ ಆಡಳಿತ ನಿರ್ದೇಶಕ ಕೃಷ್ಣ ವೈ.ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಉದ್ಯಮಿ ಕೃಪಾ ಭೋಜರಾಜ್ ಕುಳಾಯಿ, ಭಾರತ್ ಬ್ಯಾಂಕ್‍ನ ನಿರ್ದೇಶಕರಾದ ದಾಮೋದರ ಸಿ.ಕುಂದರ್, ಪುರುಷೋತ್ತಮ ಎಸ್.ಕೋಟ್ಯಾನ್, ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಟ್ರಸ್ಟಿ ಬಿ.ಆರ್ ರಾವ್, ಪ್ರಸಿದ್ಧ ವಾಸ್ತುತಜ್ಞ ಅಶೋಕ್ ಪುರೋಹಿತ್, ಹೊಟೇಲ್ ಉದ್ಯಮಿ ಬೆಳಗಾಂ ರಘುರಾಮ ಕೆ.ಶೆಟ್ಟಿ, ಶ್ರೀಮತಿ ಶಾರದಾ ಭಾಸ್ಕರ್ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ಕಲ್ಯಾಣ್ ಇದರ ಸಂಸ್ಥಾಪಕಾಧ್ಯಕ್ಷ ಭಾಸ್ಕರ್ ಎಸ್.ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಉದ್ಯಮಿಗಳಾದ ವಾಮನ ಡಿ.ಪೂಜಾರಿ, ಗಣೇಶ್ ಆರ್.ಪೂಂಜ, ಗ್ರೆಗೋರಿ ಡಿ’ಅಲ್ಮೇಡಾ, ಮಂಜುನಾಥ ಬನ್ನೂರು, ಜಗನ್ನಾಥ ಶೆಟ್ಟಿ, ರತ್ನಾಕರ್ ವೈ.ಶೆಟ್ಟಿ, ಸುರೇಶ್ ಆರ್.ಕಾಂಚನ್, ವಿಠ್ಠಲ ಎಸ್.ಅವಿೂನ್, ಪ್ರಮೋದಾ ಶಿವಣ್ಣ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಉಪಾಧ್ಯಕ್ಷ ಅಶೋಕ್ ಆರ್.ಶೆಟ್ಟಿ, ಹೆಸರಾಂತ ಲೆಕ್ಕಪರಿಶೋಧಕಾರಾದ ಸಿಎ| ಅಶ್ವಜಿತ್ ಹೆಜಮಾಡಿ, ಸಿಎ| ಜಗದೀಶ್ ಶೆಟ್ಟಿ, ಆಹಾರ್ ಮಾಜಿ ಅಧ್ಯಕ್ಷ ನಾರಾಯಣ ಆಳ್ವ, ವಸಾಯಿ ಕನ್ನಡ ಸಂಘ ಅಧ್ಯಕ್ಷ ಓ.ಪಿ ಪೂಜಾರಿ, ಶ್ರೀ ಕಟೀಲು ಯಕ್ಷಾ ವೇದಿಕೆ ವಸಾಯಿ ಕಾರ್ಯಾಧ್ಯಕ್ಷ ಪಾಂಡು ಎಲ್.ಶೆಟ್ಟಿ, ರಜಕ ಸಂಘ ದಹಿಸರ್-ವಿರಾರ್ ವಲಯ ಮಾಜಿ ಕಾರ್ಯಾಧ್ಯಕ್ಷ ದೇವೆಂದ್ರ ಬುನ್ನಾನ್ ಮತ್ತಿತರ ಗಣ್ಯರು ಆಗಮಿಸಿ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. 

ದಿನಪೂರ್ತಿ ನಡೆಯಲಿರುವ ಸಂಭ್ರಮದಲ್ಲಿ ಸಂಘದ ಸದಸ್ಯರು ಮತ್ತು ಮಕ್ಕಳು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಶ್ರೀ ದುರ್ಗಾಪರಮೇಶ್ವರಿ ಕೃಪಾ ಪೆÇೀಷಿತ ಯಕ್ಷಗಾನ ಕಲಾ ಮಿತ್ರ ಮಂಡಳಿ ಸಾಕಿನಾಕ ಇದರ ಬಾಲ ಕಲಾವಿದರು `ವೀರ ಅಭಿಮನ್ಯು’ ಯಕ್ಷಗಾನ ಪ್ರದರ್ಶಿಸಲಿದ್ದಾರೆ. ಅಭಿನಯ ಮಂಟಪ ಮುಂಬಯಿ ಸಂಸ್ಥೆಯು ಕರುಣಾಕರ ಕೆ.ಕಾಪು ನಿರ್ದೇಶನದಲ್ಲಿ ರವಿಕುಮಾರ್ ಕಡೆಕಾರು ರಚಿತ ತುಳು ಹಾಸ್ಯ ನಾಟಕ `ಪುರ್ಸೊತ್ತಿಜ್ಜಿ’ ಪ್ರದರ್ಶಿಸಲಿದ್ದಾರೆ.

ಸಮಾರೋಪ ಸಮಾರಂಭ
ಸಂಜೆ 3.15 ಗಂಟೆಗೆ  ಅಧ್ಯಕ್ಷ ಎಲ್.ವಿ ಅಮೀನ್ ಘನಾಧ್ಯಕ್ಷತೆಯಲ್ಲಿ ವಜ್ರೋತ್ಸವ ಸಮಾರೋಪ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿsಯಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಸಂಘದ ವಿಶೇಷ ಸ್ಮರಣಿಕೆ ಬಿಡುಗಡೆ ಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರುಗಳಾಗಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬೊರಿವಲಿ ಲೋಕಸಭಾ ಸದಸ್ಯ ಗೋಪಾಲ ಸಿ.ಶೆಟ್ಟಿ, ಬಿಲ್ಲವರ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ.ಶೆಟ್ಟಿ, ಹೆಸರಾಂತ ವಾಸ್ತುತಜ್ಞ, ಪುರೋಹಿತ ಡಾ| ಎಂ.ಜೆ ಪ್ರವೀಣ್ ಭಟ್ ಸಯಾನ್, ವಿ.ಕೆ (ಮ್ಯಾಕೊೈೀ) ಸಮೂಹದ ಆಡಳಿತ ನಿರ್ದೇಶಕ ಕೆ.ಎಂ ಶೆಟ್ಟಿ, ಭವಾನಿ ಫೌಂಡೇಶನ್ ನವಿಮುಂಬಯಿ ಸಂಸ್ಥಾಪಕ ಅಧ್ಯಕ್ಷÀ ಚೆಲ್ಲಡ್ಕ ಕುಸುಮೋದರ ಡಿ.ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಉಪಾಧ್ಯಕ್ಷ ಹರೀಶ್ ಜಿ.ಅಮೀನ್, ಸೋನಿ ಸ್ಟೀಲ್ ಆ್ಯಂಡ್ ಎಪ್ಲಾಯನ್ಸಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಪಾಂಡುರಂಗ ಎಸ್.ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ಜಯಕೃಷ್ಣ ಎ.ಶೆಟ್ಟಿ,  ಕರ್ನಾಟಕ ಮಲ್ಲ ಕನ್ನಡದೈನಿಕದ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾ| ಸುಭಾಷ್ ಬಿ.ಶೆಟ್ಟಿ, ತೀಯಾ ಸಮಾಜ ಮುಂಬಯಿ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ, ದಿವ್ಯಾ ಸಾಗರ್ ಸಮೂಹದ ಆಡಳಿತ ನಿರ್ದೇಶಕ ಮುದ್ರಾಡಿ ದಿವಾಕರ ಶೆಟ್ಟಿ, ಭಾರತ್ ಬ್ಯಾಂಕ್‍ನ ನಿರ್ದೇಶಕ ನ್ಯಾ| ಸೋಮನಾಥ್ ಬಿ.ಅಮೀನ್ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಘದ ಅರ್ವತ್ತರ ನಡಿಗೆ ಪ್ರಾತ್ಯಕ್ಷಿಕೆ ನಡೆಸಿ ಸಂಘದ ಶಾಶ್ವತ ವಿದ್ಯಾನಿಧಿಗೆ ಮಹಾದಾನಿಗಳಾಗಿ ಶೈಕ್ಷಣಿಕ ಪೆÇ್ರೀತ್ಸಹ ನೀಡಿದ ದಾನಿಗಳಿಗೆ ಸನ್ಮಾನಿಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ಗುಣಪಾಲ ಶೆಟ್ಟಿ ಐಕಳ (ಕಾರ್ಯಾಧ್ಯಕ್ಷರು, ನಿಧಿ ಸಂಗ್ರಹ ಸಮಿತಿ), ಗೌ| ಪ್ರ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್,ವಜ್ರಮಹೋತ್ಸವ ಸಮಿತಿಯ  ಗೌರವಾಧ್ಯಕ್ಷರಾದ  ನಾರಾಯಣ ಎಸ್.ಶೆಟ್ಟಿ ಮತ್ತು ಎನ್.ಎಂ ಸನಿಲ್, ಕಾರ್ಯಧ್ಯಕ್ಷ ಬಿ.ಆರ್ ಪೂಂಜ, ಸ್ಮರಣ ಸಂಚಿಕೆ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್, ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂದ ತಿಳಿಸಿದ್ದಾರೆ.

ಮಹಾನಗರದಲ್ಲಿನ ಸಮಸ್ತ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಘದ ವಜ್ರೋತ್ಸವ ಸಂಭ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಘದ ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಮತ್ತು ವಜ್ರೋತ್ಸವ ಆಚರಣಾ ಸಮಿತಿಯ ಮುಖ್ಯಸ್ಥರು ವಿನಂತಿಸಿದ್ದಾರೆ.


ಡಿ.15: ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ 74ನೇ ವಾರ್ಷಿಕ ಶನಿಪೂಜೆ-ಅಮೃತ ಮಹೋತ್ಸವ ಸಂಭ್ರಮಕ್ಕೆ ಚಾಲನೆ

ಮುಂಬಯಿ, ಡಿ.06: ಮುಂಬಯಿ ಫೆÇೀರ್ಟ್ (ವಿಟಿ) ಪರಿಸರದಲ್ಲಿ ಕಳೆದ ಸುಮಾರು ಏಳುವರೆ ದಶಕಗಳ ಹಿಂದೆ ಸ್ವರ್ಗೀಯ ಕೆ.ಕೆ ಕೋಟ್ಯಾನ್ ಮುಂದಾಳತ್ವ ಹಾಗೂ ನಾರಾಯಣ ಬಿ.ಸಾಲ್ಯಾನ್ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಗೊಂಡ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ (ರಿ.) ತನ್ನ 74ನೇ ವಾರ್ಷಿಕ ಶನಿ ಮಹಾ ಪೂಜೆ ಮತ್ತು ಅಮೃತ ಮಹೋತ್ಸವ ವರ್ಷದÀ ಉದ್ಘಾಟನಾ ಸಂಭ್ರಮಕ್ಕೆ ಇದೇ ಡಿ.15ನೇ ಶನಿವಾರ ಅದ್ದೂರಿಯಾಗಿ ಚಾಲನೆಯನ್ನೀಡಲಿದೆ.

ಸಮಿತಿಯ ಬೆಳ್ಳಿ ಹಬ್ಬ, ಕನಕ ಮಹೋತ್ಸವ, ವಜ್ರಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ್ದು, ಇದೀಗ ವೈಭವೋಲ್ಲಾಸದಿಂದ ಅಮೃತ ಮಹೋತ್ಸವ ಆಚರಿಸುವ ಪೂರ್ವಸಿದ್ಧತೆ ನಡೆಸಿದೆ. ಆ ಪ್ರಯುಕ್ತ ಸಮಿತಿಯ ವಠಾರದಲ್ಲಿ ನಿತ್ಯಪೂಜೆ, ಪ್ರತಿ ಶನಿವಾರ ಗ್ರಂಥ ಪಾರಾಯಣ, ಶನಿಪೂಜೆ ಹರಕೆ ಸೇವೆಗಳು ನಿರಂತರ ನಡೆಸಲಾಗುತ್ತಿದ್ದು, ವಿವಿಧ ಸಂಘಸಂಸ್ಥೆಗಳ ಆಹ್ವಾನದ ಮೇರೆಗೆ ಹಾಗೂ ಶನೈಶ್ವರ ಭಕ್ತರ ಪ್ರೀತಿಯ ಕರೆಯೋಲೆಗೆ ಸ್ಪಂದಿಸಿ ಶ್ರೀ ಶನಿ ಗ್ರಂಥ ಪಾರಾಯಣ ಯಕ್ಷಗಾನ ತಾಳಮದ್ದಲೆ ರೂಪದಲ್ಲಿ ಅಲ್ಲಲ್ಲಿ ನಡೆಸಿ ಕೊಡುತ್ತಿದೆ. ಸಮಿತಿಯಲ್ಲಿ ನುರಿತ ಅರ್ಥಧಾರಿಗಳು ಮತ್ತು ವಚನಾಕಾರರ ಮಾರ್ಗದರ್ಶನದಲ್ಲಿ ಸಮಿತಿಯಲ್ಲಿ ವಿಶೇಷವಾಗಿ ಗುರುಪೂರ್ಣಿಮಾ, ಶನಿ ಜಯಂತಿ, ಗಣೇಶ ಚತುಥಿರ್s, ನವರಾತ್ರಿ ಪೂಜೆಗಳನ್ನು ನೇರವೇರಿಸುತ್ತಾ ಸಮಿತಿಯನ್ನು ಮುನ್ನಡೆಸಲಾಗುತ್ತಿದೆ.

ಅಮೃತ ಮಹೋತ್ಸವ ಪ್ರಯುಕ್ತ ಸಮಿತಿಯು 74ನೇ ವಾರ್ಷಿಕ ಶನಿ ಮಹಾಪೂಜೆ ಮತ್ತು ಅಮೃತಉತ್ಸವದ ಉದ್ಘಾಟನಾ ಕಾರ್ಯಕ್ರಮಮನ್ನು ಫೆÇೀರ್ಟ್ ಕೋಟೆಯ (ವಿಟಿ) ಮಿಂಟ್ ರಸ್ತೆಯಲ್ಲಿನ ಖಾಂಜಿ ಕೇತ್ಸೀ ಸಭಾಗೃಹದಲ್ಲಿ ಇದೇ ಡಿ.15ರ ಶನಿವಾರ ಆಯೋಜಿಸಿದೆ. ಅಂದು ಬೆಳಿಗ್ಗೆ 6.00 ಗಂಟೆಯಿಂದ ಗಣಹೋಮ, ಹರೀಶ್ ಶಾಂತಿ ಹೆಜ್ಮಾಡಿ ಪೌರೋಹಿತ್ಯದಲ್ಲಿ 9.00 ಗಂಟೆ ವರೆಗೆ  ಸತ್ಯನಾರಾಯಣ ಪೂಜೆ. 6.00 ಗಂಟೆಯಿಂದ ಶ್ರೀ ವೆಸ್ಟರ್ನ್ ಇಂಡಿಯಾ ಶ್ರೀ  ಶನಿಮಹಾತ್ಮ ಸೇವಾ ಸಮಿತಿ ಮತ್ತು ವಿದ್ಯಾದಾಯಿನಿ ಭಜನಾ ಮಂಡಳಿ ಕೋಟೆ ಇವರಿಂದ ಭಜನೆ. 11.30 ಗಂಟೆÉಯಿಂದ  ಶ್ರೀ ಶನಿದೇವರ ಕಲಶ ಪ್ರತಿಷ್ಠಾಪನೆ ಮತ್ತು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಶನಿಗ್ರಂಥ ಪಾರಾಯಣ ಹಾಗೂ ಮದ್ಯಾಹ್ನ 12.30 ಯಿಂದ ಅನ್ನಸಂತರ್ಪಣೆ ನೆರವೇರಿಸಲಿದೆ. ರಾತ್ರಿ 8.30 ಗಂಟೆಗೆ ಶ್ರೀ ಶನಿದೇವರಿಗೆ ಮಹಾ ಮಂಗಳಾರತಿ ತೀರ್ಥಪ್ರಸಾದ ಮತ್ತು ಅನ್ನಸಂತರ್ಪಣೆ ಜರುಗಿಸಲಿದೆ.


ಅಮೃತ ಮಹೋತ್ಸವದ ಉದ್ಘಾಟನೆ:
ಸಂಜೆ 6.00 ಗಂಟೆಯಿಂದ ರಾತ್ರಿ 8.00 ಗಂಟೆ ವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಅಮೃತ ಮಹೋತ್ಸವ ಸಾಲಿನ ಉದ್ಘಾಟನೆ ನಡೆಸಲಾಗುತ್ತಿದ್ದು ವೆಸ್ಟೆರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ ಗೌರವಾಧ್ಯಕ್ಷ ಹಾಗೂ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ಹರೀಶ್ ಜಿ.ಅವಿೂನ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಮಹಾಶೇಷ ರುಂಡಮಾಲಿನಿ ಮಂದಿರ ಪೆÇವಾಯಿ ಇದರ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ  ಅಮೃತ ಮಹೋತ್ಸವಕ್ಕೆ ಚಾಲನೆಯನ್ನೀಡುವರು. ಪ್ರಸಿದ್ಧ ವಾಸ್ತು ತಜ್ಞ ಅಶೋಲ್ ಪುರೋಹಿತ, ಆನಂದಾತ ಫೌಂಡೇಶನ್ ಅಪ್ಪಾಜಿಬೀಡು ರಮೇಶ್ ಗುರು ಸ್ವಾಮಿ ಉಪಸ್ಥಿತರಿದ್ದು ಆರ್ಶಿರ್ವಚನ ನೀಡಲಿದ್ದಾರೆ.

ಅತಿಥಿü ಅಭ್ಯಾಗತರುಗಳಾಗಿ ಶ್ರೀ ಸದ್ಗುರು ನಿತ್ಯಾನಂದ ಸೇವಾ ಸಂಘ ಸಿಬಿಡಿ ಬೇಲಾಪುರ ಗೌರವಾಧ್ಯಕ್ಷ ಭಾಸ್ಕರ ಶೆಟ್ಟಿ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ನೊರ್ಡಿಕ್ ಶಿಪ್ಪಿಂಗ್ ಆ್ಯಂಡ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್‍ನ ಪ್ರಮೋದ್ ಕರ್ಕೇರ, ಭಾರತ್ ಬ್ಯಾಂಕ್ ನಿರ್ದೇಶಕ ನ್ಯಾ| ಎಸ್.ಬಿ ಅವಿೂನ್, ಕರ್ನಾಟಕ ಸಂಘ ನಾಲಾಸೋಫಾರ ಅಧ್ಯಕ್ಷ ಸದಾಶಿವ ಎ.ಕರ್ಕೇರ ಮತ್ತಿತರ ಗಣ್ಯರು ಉಪಸ್ಥಿತರಿರುವರು. ಮಂದಿರದಲ್ಲಿ 50 ವರ್ಷಗಳ ಕಾಲ ಅರ್ಚಕರಾಗಿ, ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಿ| ನಾರಾಯಣ ಬಿ.ಸಾಲ್ಯಾನ್ ಸ್ಮರಣರ್ಥ ಪ್ರಶಸ್ತಿಯನ್ನು ಕಾರ್ಯಕ್ರಮದಲ್ಲಿ ಪ್ರದಾನಿಸಲಾಗುವುದು.

ಆ ನಿಮಿತ್ತ ನೇರವೇರಲಿರುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾಡಿನ ಸಮಸ್ತ ಭಕ್ತರು ಸಕ್ರೀಯರಾಗಿ ಭಾಗವಹಿಸಿ ಶ್ರೀ ಶನಿದೇವರ ಕೃಪೆಗೆ ಪಾತ್ರರಾಗುವಂತೆ ವೆಸ್ಟೆರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ ಅಧ್ಯಕ್ಷ ಜೆ.ಜೆ ಕೋಟ್ಯಾನ್, ಉಪಾಧ್ಯಕ್ಷರುಗಳಾದ ರವಿ ಬಂಗೇರ ಮತ್ತು ಜನಾರ್ದನ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಭಂಡಾರಿ, ಕೋಶಾಧಿಕಾರಿ ಶರತ್ ಜಿ.ಪೂಜಾರಿ ಮತ್ತು ಸರ್ವ ಪರಾಧಿಕಾರಿಗಳು ಈ ಮೂಲಕ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


ಡಿ.08: ಮಲಾಡ್ ಪಶ್ಚಿಮದ ಸೈಂಟ್ ಜೂಡ್ ಹೈಸ್ಕೂಲ್‍ನಲ್ಲಿ  ಮಲಾಡ್ ಕನ್ನಡ ಸಂಘದ ಮಕ್ಕಳಿಗಾಗಿ ಪ್ರತಿಭಾನ್ವೇಷಣೆ ಸ್ಪರ್ಧೆ

ಮುಂಬಯಿ, ಡಿ.08: ಮುಂಬಯಿ ಮಹಾನಗರದ ಹೆಸರಾಂತ ಸಂಸ್ಥೆ ಮಲಾಡ್ ಕನ್ನಡ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳಿಗಾಗಿ ಪ್ರತಿಭಾನ್ವೇಷಣೆ ಸ್ಪರ್ಧೆಯನ್ನು (ಖಿಚಿಟeಟಿಣ Seಚಿಡಿಛಿh ಅomಠಿeಣiಣioಟಿ) ಆಯೋಜಿಸಿದೆ.

ಇದೇ ಡಿ. 09ರ ರವಿವಾರ ಬೆಳಿಗ್ಗೆ 9.30 ಘಂಟೆಗೆ ಸೈಂಟ್ ಜೂಡ್‍ಸ್ ಹೈಸ್ಕೂಲ್ ವಠಾರ, ಅಭ್ಯುದಯ ಬ್ಯಾಂಕ್‍ನ ಹತ್ತಿರ, ಜನಕಲ್ಯಾಣ ನಗರ, ಮಾರ್ವೆ ರೋಡ್, ಮಲಾಡ್ ಪಶ್ಚಿಮ, ಮುಂಬಯಿ ಇಲ್ಲಿ  ನಡೆಸಲ್ಪಡುವ ಸ್ಪರ್ಧೆಲ್ಲಿ ಪ್ರಬಂಧ ಸ್ಪರ್ಧೆ, ಸಾಮಾನ್ಯ ಜ್ಞಾನ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಗಾಯನ ಹಾಗೂ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮಧ್ಯಾಹ್ನ 1.00 ಘಂಟೆಗೆ ಸಂಘದ ಅಧ್ಯಕ್ಷ ಹರೀಶ್ ಎನ್.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಂಘದ ಗೌರವಾಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಉಪಸ್ಥಿತಿಯಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಹೋಟೇಲ್ ಉದ್ಯಮಿ ಬಾಬು ಎಸ್.ಶೆಟ್ಟಿ ಹಾಗೂ ಅತಿಥಿüಯಾಗಿ ಏರ್‍ಇಂಡಿಯಾ ಸಂಸ್ಥೆಯ ನಿವೃತ್ತ ಅಧಿಕಾರಿ ಮಾರಿ ಮುತ್ತು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪರಿಸರದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಾಗೂ ತಮ್ಮ ಮಕ್ಕಳನ್ನು ಪಾಲಕರು ಭಾಗವಹಿಸಲು ಪ್ರೇರೇಪಿಸುವಂತೆ ಸಂಘದ ಗೌ| ಪ್ರ| ಕಾರ್ಯದರ್ಶಿ ಶಂಕರ್ ಡಿ.ಪೂಜಾರಿ ಹಾಗೂ ಕೋಶಾಧಿಕಾರಿ ಪ್ರಕಾಶ್ ಎಸ್.ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಈಮೂಲಕ ವಿನಂತಿಸಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi