ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ
Kemmannu News Network, 14-12-2018 14:33:16
ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ
ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರೂ ಯುವ ಕೇಂದ್ರ ಸಂಘÀಟನೆ ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷ ನೀಡುತ್ತಾ ಬಂದಿರುವ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿಗೆ ಈ ಬಾರಿ ಕಾರ್ಕಳ ತಾಲೂಕಿನ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ಸಂಸ್ಥೆಗೆ ಪ್ರಶಸ್ತಿ ಮತ್ತು 25 ಸಾವಿರ ರೂ. ನಗದು ಹಾಗೂ ಪ್ರಶಂಸಾ ಪತ್ರವನ್ನು ನೀಡಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರನ್ನು ಗೌರವಿಸಲಾಯಿತು.
ಉಡುಪಿಯ ಪ್ರಗತಿ ಸೌಧದಲ್ಲಿ ಜರಗಿದ ಕರ್ನಾಟಕ ಮತ್ತು ಉತ್ತರಾಖಂಡ ರಾಜ್ಯದ ಅಂತರ್ ರಾಜ್ಯ ಯುವ ವಿನಿಮಯ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬುರವರು ಸಮಾರಂಭವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂಧರ್ಭದಲ್ಲಿ ಬೆಂಗಳೂರು ನೆಹರೂ ಯುವ ಕೇಂದ್ರ ಸಂಘಟನೆಯ ರಾಜ್ಯ ನಿರ್ದೇಶಕರಾದ ಸುನಿಲ್ ಮಲ್ಲಿಕ್, ಉಡುಪಿ ನೆಹರೂ ಯುವ ಕೇಂದ್ರ ಸಂಘಟನೆಯ ಜಿಲ್ಲಾ ಯುವ ಸಮಾನ್ವಯಾಧಿಕಾರಿ ವಿಲ್ಪ್ರೆಡ್ ಡಿ’ಸೋಜಾ, ಜಿಲ್ಲಾ ಪಂಚಾಯತ್ ಅಧಿಕಾರಿ ನಾಗೇಶ್ ರಾಯ್ಕರ್, ಕಾರ್ಪೋರೇಶನ್ ಬ್ಯಾಂಕಿನ ಉಡುಪಿ ವಲಯದ ಉಪ ಮಹಾಪ್ರಬಂಧಕಿ ಡೇಲಿಯಾ ಎ. ಡಯಾಸ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳಾದ ಅಶೋಕ್ ಹಾಗೂ ಮಮತಾ, ಇನ್ನ ಗ್ರಾಮ ಪಂಚಾಯತ್ ಸದಸ್ಯರಾದ ದೀಪಕ್ ಕೋಟ್ಯಾನ್ ಇನ್ನ, ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರಾದ ಮಿಥೇಶ್ ಪೂಜಾರಿ, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್ ನಂದಳಿಕೆ, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸ್ಥಾಪಕಾಧ್ಯಕ್ಷರಾದ ವಿಠಲ ಮೂಲ್ಯ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವ ಸಲಹೆಗಾರರಾದ ರವಿರಾಜ್ ಶೆಟ್ಟಿ, ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ದಿನೇಶ್ ಪೂಜಾರಿ ಬಿರೋಟ್ಟು, ಸುರೇಶ್ ಪೂಜಾರಿ ಕಾಸ್ರಬೈಲು, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಕೋಶಾಧಿಕಾರಿ ಹರಿಪ್ರಸಾದ್ ಆಚಾರ್ಯ ಅಬ್ಬನಡ್ಕ, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಮಾಜಿ ಕಾರ್ಯದರ್ಶಿ ಅಭಿಜಿತ್ ರಾವ್, ಭಜನಾ ಸಮಿತಿ ಅಧ್ಯಕ್ಷರಾದ ಬೋಳ ಮಂಜುನಾಥ ಆಚಾರ್ಯ, ಕಾರ್ಯದರ್ಶಿ ಸುಲೋಚನಾ ಕೋಟ್ಯಾನ್, ಸಂಘದ ಸದಸ್ಯರಾದ ಸುನಿಲ್ ಕುಲಾಲ್ ಅಬ್ಬನಡ್ಕ, ನಾರಾಯಣ ಪೂಜಾರಿ, ಸುಂದರ ದೇವಾಡಿಗ, ಲಲಿತಾ ಆಚಾರ್ಯ, ಲೀಲಾ ಪೂಜಾರಿ, ಮಮತಾ ಪ್ರಕಾಶ್, ಹರಿಣಾಕ್ಷಿ ಪೂಜಾರಿ, ಆರತಿ ಕುಮಾರಿ, ಅಶ್ವಿನಿ ಪ್ರಭಾಕರ್, ಗೀತಾ ಕುಲಾಲ್, ವೀಣಾ ಪೂಜಾರಿ, ಸುನೀತಾ ಪಿಂಟೋ, ಸರಿತಾ ಪೂಜಾರಿ ಅಬ್ಬನಡ್ಕ, ವಿಮಲ ದೇವಾಡಿಗ ಬೆಳ್ಮಣ್ಣು ಮೊದಲಾದವರು ಉಪಸ್ಥಿತಿತರಿದ್ದರು.
ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ವಿವಿಧ ಕಾರ್ಯಕ್ರಮಗಳ ವಿವರಗಳು
ದಿನಾಂಕ : 02-10-2000ನೇ ದಿನದಂದು ಭಾರತದ ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗೂ ಭಾರತದ ಮಾಜಿ ಪ್ರಧಾನಿ ಲಾಲ್ ಬಹೂದ್ದೂರ್ ಶಾಸ್ತ್ರಿಯವರ ಜನ್ಮದಿನದ ಶುಭದಿನದಂದು ಸ್ಥಾಪಿತಗೊಂಡ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ಕ್ರೀಡಾ ಉದ್ದೇಶದೊಂದಿಗೆ ಅಂದು ಮೂವರು ಸದಸ್ಯರಿಂದ ಆರಂಭಗೊಂಡ ಈ ಸಂಸ್ಥೆಯು ಇದೀಗ ಪರಿಸರದ 40 ಮಂದಿ ಯುವ ತಂಡದೊಂದಿಗೆ ಯಾವುದೇ ಜಾತಿ, ಮತ, ಧರ್ಮದ ಭೇಧ ಭಾವವಿಲ್ಲದೇ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಸೇವೆ, ಸಂಸ್ಕøತಿ, ಕ್ರೀಡೆಯೇ ಸಂಘದ ಮೂಲ ಉದ್ದೇಶವಾಗಿದ್ದರು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಂಘಟನಾ, ಸಾಂಸ್ಕøತಿಕ, ಕ್ರೀಡಾ ಕ್ಷೇತ್ರದಲ್ಲಿ ಕೈಗೊಂಡ ಯೋಜನೆಗಳು ಹಲವಾರು. 2000ದಿಂದ ಇಂದಿನವರೆಗೂ ನಿರಂತರವಾಗಿ 18 ವರ್ಷಗಳಿಂದ ಎಲೆಮರೆಯ ಕಾಯಿಯಂತೆ ಸದ್ದಿಲ್ಲದೆ ತನ್ನದೇಯಾದ ಕಾರ್ಯಕ್ರಮಗಳ ಮೂಲಕ ಪರಿಸರದ ನೂರಾರು ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿದ್ದು, 200ಕ್ಕೂ ಅಧಿಕ ವಿವಿಧ ಕ್ಷೇತ್ರದ ಸಾಧಕರನ್ನು ಮಾತ್ರವಲ್ಲದೇ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಈಗಗಲೇ ಅನಾರೋಗ್ಯವಂತರಿಗೆ, ಅಂಗವಿಕಲಕರಿಗೆ, ಆಶಕ್ತರಿಗೆ ಸಂಘದ ವತಿಯಿಂದ ಪ್ರತಿ ವರ್ಷ ಸಾವಿರಾರು ಮೊತ್ತದ ಸಹಾಯಧನವನ್ನು ಪ್ರತಿವರ್ಷ ನೀಡುತ್ತಾ ಬಂದಿರುತ್ತೇವೆ. ಸರಕಾರದಿಂದ ದೊರೆಯುವಂತಹ ಸೌಲಭ್ಯವನ್ನು ಪರಿಸರದ ಜನತೆಗೆ ದೊರೆಕಿಸಿ ಕೊಡುವಲ್ಲಿ ಯಶಸ್ವಿ ಪ್ರಯತ್ನ, ಪರಿಸರದ ರಸ್ತೆ ದುರಸ್ಥಿಯಾಗಿದ್ದಾಗಲೂ ಸಂಘದ ಮೂಲಕ ಶಾಸಕರ, ಸಚಿವರ, ಸಂಸದರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇವೆ.
ಸ್ಥಳೀಯ ದೇವಸ್ಥಾನಗಳ ಜಾತ್ರೆಯಲ್ಲಿ ಸಂಘದ ಸದಸ್ಯರ ಸ್ವಯಂಸೇವೆ, ವನಮಹೋತ್ಸವ, ಪರಿಸರ ಉತ್ಸವ, ಇಂಗು ಗುಂಡಿ ನಿರ್ಮಾಣ, ಗಿಡ ವಿತರಣೆ, ಕ್ರಿಕೆಟ್ ಟೂರ್ನಿಮೆಂಟ್, ಕ್ರೀಡೋತ್ಸವ, ಗ್ರಾಮೀಣ ಕ್ರೀಡಾಕೂಟ, ಕಬಡ್ಡಿ ಪಂದ್ಯಾಟ, ವಾಲಿಬಾಲ್ ಪಂದ್ಯಾಟ, ಸಾಂಸ್ಕøತಿಕ ಕಾರ್ಯಕ್ರಮಗಳು- ಯಕ್ಷಗಾನ, ತುಳು ಹಾಸ್ಯಮಯ ನಾಟಕ ಪ್ರದರ್ಶನ, ನೃತ್ಯ ವೈಭವ, ರಾಷ್ಟ್ರೀಯ ಹಬ್ಬಗಳ ಆಚರಣೆ, ರಾಷ್ಟ್ರನಾಯಕರ ಜನ್ಮದಿನಾಚರಣೆ - ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ, ಮಾಜಿ ಪ್ರಧಾನಿ ಲಾಲ್ ಬಹೂದ್ದೂರು ಜನ್ಮದಿನಾಚರಣೆ, ಸಂವಿಧಾನ ಶಿಲ್ಪಿ ಡಾ||ಬಿ.ಆರ್. ಅಂಬೇಡ್ಕರ್ ಜಯಂತಿ, ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ, ಲೋಕಮಾನ್ಯ ಬಾಲ ಗಂಗಾಧರ ತಿಲಕರ ಜನ್ಮದಿನಾಚರಣೆ, ಮಾಹಿತಿ ಶಿಬಿರ, ಕ್ರೀಯಾಶೀಲ ನಾಯಕತ್ವ ತರಬೇತಿ ಕಾರ್ಯಾಗಾರ, ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ, ರಸಪ್ರಶ್ನೆ, ಚಿತ್ರಕಲೆ, ಪ್ರತಿವರ್ಷ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭ, ಸಾರ್ವಜನಿಕ ಮಹಾಶಿವರಾತ್ರಿ ಪೂಜೆ, ಭಜನಾ ಕಾರ್ಯಕ್ರಮ, ಮೊಸರು ಕುಡಿಕೆ, ಶಾಲಾ ಮಕ್ಕಳಿಗೆ ಲೇಖನಾ ಸಾಮಾಗ್ರಿ, ಶಾಲಾ ಬ್ಯಾಗ್ ಮತ್ತು ಪುಸ್ತಕಗಳ ಕೊಡುಗೆ, ಸ್ನೇಹಕೂಟ, ಕುಟುಂಬೋತ್ಸವ, ಆಟಿದೊಂಜಿ ಕೂಟ, ಕುಟುಂಬ ಸಮ್ಮಿಲನ, ಸ್ನೇಹ ಸಮ್ಮಿಲನ ಕಾರ್ಯಕ್ರಮಗಳ ಆಯೋಜನೆ, ಮುದ್ದುಕೃಷ್ಣ ಸ್ಪರ್ಧೆ, ಪ್ರತಿವರ್ಷ ದಾನಿಯೋರ್ವರ ಸಹಕಾರದೊಂದಿಗೆ ಶಂಕರಪುರದ ಮಾನಸಿಕ ಅಸ್ವಸ್ಥರ ಅನಾಥಶ್ರಮದಲ್ಲಿ ರೂ.10,000/- ಮೊತ್ತದ ಹಣ್ಣುಹಂಪಲು, ಸಿಹಿತಿಂಡಿ ವಿತರಿಸಿ ಸೌಹರ್ದಯುತ ದೀಪಾವಾಳಿ ಸಂಭ್ರಮಾಚರಣೆ, ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಆರೋಗ್ಯ ತಪಾಸಣೆ, ದಂತ ಚಿಕಿತ್ಸೆ, ಕಣ್ಣಿನ ತಪಾಸಣೆ, ಮೂಳೆ ಸಾಂದ್ರತಾ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ರಕ್ತ ವರ್ಗೀಕರಣ ಶಿಬಿರ ಆಯೋಜನೆ, ಅನಾಥಶ್ರಮಕ್ಕೆ ಅಕ್ಕಿ, ಬಟ್ಟೆಗಳ ಕೊಡುಗೆ, ಅಂಗವಿಕಲರೋರ್ವರಿಗೆ ವೀಲ್ ಚೇಯರ್ ಕೊಡುಗೆ, ಬಡ ಕುಟುಂಬ ಒಂದಕ್ಕೆ ಸೋಲಾರ್ ವಿದ್ಯುತ್ ಕೊಡುಗೆ, ಶಾಶ್ವತ ದಾರಿ ಸೂಚಕ ನಾಮಫಲಕಗಳ ಲೋಕರ್ಪಣೆ, ಏಳುದಿನಗಳ ಯುವಸಪ್ತಾಹ ಸಮಾರಂಭ, ನಂದಳಿಕೆ ವರಕವಿ ಮುದ್ದಣನ ಜನ್ಮದಿನಾಚರಣೆ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ, ಸ್ವಚ್ಛತಾ ಕಾರ್ಯಕ್ರಮ, ಪತ್ರಿಕೆ ವಿತರಕರ ದಿನಾಚರಣೆ, ಮಹಿಳಾ ದಿನಾಚರಣೆ, ನಮ್ಮ ಅಬ್ಬನಡ್ಕ-ಸ್ವಚ್ಛ ಅಬ್ಬನಡ್ಕದ ಮೂಲಕ ಶ್ರಮದಾನ, ಅದ್ದೂರಿಯ ಅಬ್ಬನಡ್ಕ ಸಂಭ್ರಮ ಸಮಾರಂಭ ಆಯೋಜನೆ, ಕೆಸರ್ದ ಗೊಬ್ಬಲು, ನಮ್ಮ ನಡೆ-ಕೃಷಿಯ ಕಡೆ ಕಾರ್ಯಕ್ರಮದ ಮೂಲಕ ಕೃಷಿಯ ಕುರಿತು ಮಾಹಿತಿ ಕಾರ್ಯಾಗಾರ, ಕೆಸರಿನಲ್ಲಿ ಆಟೋಟ ಸ್ಪರ್ಧೆ, ಸಾಲು ನಾಟಿ ಪ್ರಾತ್ಯಕ್ಷಿಕೆ, ಶಾಲಾ ಮಕ್ಕಳಿಗೆ ತರಕಾರಿ ಬೀಜ ವಿತರಣೆ, ಸಾಂಪ್ರದಾಯಿಕ ನಾಟಿ ಕಾರ್ಯಕ್ರಮ, ಸಂಘದ ವಾರ್ಷಿಕೋತ್ಸವ ಆಯೋಜನೆ, ಮಣಿಪಾಲ ಆರೋಗ್ಯ ಕಾರ್ಡ್ ನೋಂದಾವಣೆ, ಪ್ಲಾಸ್ಟಿಕ್ ನಿಷೇದ ಆಂದೋಲನ, ವೈದ್ಯರ ದಿನಾಚರಣೆ, ಪತ್ರಿಕಾ ದಿನಾಚರಣೆ, ಶಿಕ್ಷಕರ ದಿನಾಚರಣೆ, ಸ್ಥಳೀಯ ಕ್ರೀಡಾಳುಗಳಿಗಾಗಿ ವಾಲಿಬಾಲ್ ಅಂಗಣ ನಿರ್ಮಾಣ, ಕಾರ್ಗಿಲ್ ವಿಜಯ್ ದಿವಸ್, ಸಂಘಕ್ಕೆ ಶಾಶ್ವತ ಆಡಳಿತ ಕಛೇರಿ, ರಂಗಮಂದಿರ, ದೇವರ ಪೂಜಾ ಕಟ್ಟೆ ನಿರ್ಮಿಸುವಲ್ಲಿ ನಮ್ಮ ಸಂಘದ ಕನಸು ನನಸಾಗಿದೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link