ಜ.06: ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಅಮೃತಮಹೋತ್ಸವ
Kemmannu News Network, 04-01-2019 10:55:14
ಜ.06: ಸಯನ್ ಪೂರ್ವದಲ್ಲಿನ ಜಿಎಸ್ಬಿ ಸೇವಾ ಮಂಡಲ ಸಭಾಗೃಹದಲ್ಲಿ - ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಅಮೃತಮಹೋತ್ಸವ
ಮುಂಬಯಿ, ಜ.01: ಮಾಯನಗರಿ ಮುಂಬಯಿಯಲ್ಲಿ ಸಾಹಿತ್ಯ, ಸಾಂಸ್ಕøತಿಕ, ಸಾಮಾಜಿಕ, ಧಾರ್ಮಿಕ ಇನ್ನಿತರ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನಡೆಸಿ ಮುನ್ನಡೆಯುತ್ತಿರುವ ಸೇವಾ ನಿರತ `ರಾಮರಾಜ ಕ್ಷತೀಯ ಸೇವಾ ಸಂಘ (ರಿ.)’ವು ಮುಂಬಯಿ ಸಂಸ್ಥೆಯು ತನ್ನ 75 ಸಂವತ್ಸರಗಳನ್ನು ಪೂರೈಸುತ್ತಿದ್ದು, ಇದೇ ಜನವರಿ 06ನೇ ಭಾನುವಾರ ಸಯನ್ ಪೂರ್ವದಲ್ಲಿನ ಜಿಎಸ್ಬಿ ಸೇವಾ ಮಂಡಲ ಸಭಾಗೃಹದಲ್ಲಿ ಬೆಳ್ಳಿಗೆ 9.00 ರಿಂದ ರಾತ್ರಿ 8.00 ಗಂಟೆ ವರೆಗೆ ಕ್ಷತ್ರೀಯ ಸಂಘದ ಅಧ್ಯಕ್ಷ ರಾಜ್ಕುಮಾರ್ ಕಾರ್ನಾಡ್ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಅಮೃತಮಹೋತ್ಸವ ಅದ್ಧೂರಿಯಗಿ ಆಚರಿಸಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಂಘಕ್ಕಾಗಿ ಶ್ರಮಿಸಿದ ಹಿರಿಯ ಸದಸ್ಯರನ್ನು, ಸಮಾಜಕ್ಕೆ ಕೀರ್ತಿ ತಂದು ಕೊಟ್ಟ ಗಣ್ಯರÀನ್ನು, ಮಹಾದಾನಿಗಳನ್ನು ಸನ್ಮಾನಿಸಲಾಗುವುದು. ಹಾಗೂ ಸದಸ್ಯರೆಲ್ಲರಿಗೂ 75ನೇ ವರ್ಷದ ಸವಿನೆನಪಿನ ಕೊಡುಗೆ ಕೊಡಲಾಗುವುದು. ರಾಮರಾಜ ಕ್ಷತ್ರಿಯ ಸೇವಾ ಸಂಘ `ನಡೆದು ಬಂದ ದಾರಿ’ ಎಂಬ ಕಿರು ಸಾಕ್ಷ್ಯಚಿತ್ರ ಪ್ರದರ್ಶಿಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ಎನ್.ರವೀಂದ್ರನಾಥ್ ರಾವ್ ತಿಳಿಸಿದ್ದಾರೆ.
ಆ ನಿಮಿತ್ತ ಮಹಾನಗರ ಮುಂಬಯಿಯಲ್ಲಿನ ಸಮಸ್ತ ರಾಮರಾಜ ಕ್ಷತ್ರೀಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುವಂತೆ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಘದ ಕೋಶಾಧಿಕಾರಿ ನವಿನಾ ಎಸ್.ರಾವ್, ಜೊತೆ ಕಾರ್ಯದರ್ಶಿಗಳಾದ ರಿತೇಶ್ ಆರ್.ರಾವ್ ಮತ್ತು ನಿತ್ಯಾನಂದ ಸಿ.ರಾವ್, ಜೊತೆ ಕೋಶಾಧಿಕಾರಿ ರೂಪೇಶ್ ಆರ್.ರಾವ್ ಸೇರಿದಂತೆ ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು ಮತ್ತು ಸಂಘದ ಸರ್ವ ಸದಸ್ಯರ ಪರವಾಗಿ ಗೌ| ಪ್ರ| ಕಾರ್ಯದರ್ಶಿ ಕೇದರ್ನಾಥ ಆರ್.ಬೋಳಾರ್ ಈ ಮೂಲಕ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರಾಮರಾಜ ಕ್ಷತ್ರೀಯ ಸೇವಾ ಸಂಘ
ಹೆಚ್ಚಿನ ಉದ್ಯೋಗ ಅವಕಾಶಗಳಿಗಾಗಿ, ಉತ್ತಮ ಜೀವನೋಪಾಯಕ್ಕಾಗಿ ಅನೇಕ ಜನರು ಕರ್ನಾಟಕದಿಂದ ಮುಂಬಯಿ ನಗರಕ್ಕೆ ಬಂದರು. ಅದರಲ್ಲಿ ರಾಮರಾಜ ಕ್ಷತೀಯ ಸಮಾಜದ ಹಲವಾರು ಮಂದಿ ತಮ್ಮ ಸಮುದಾಯದ ಸದಸ್ಯರ ನಡುವೆ ಏಕತೆ, ಸಹಕಾರ ಮತ್ತು ಸಹವರ್ತಿ ಭಾವನೆಗಳನ್ನು ಉತ್ತೇಜಿಸಲು ಮತ್ತು ರಾಮರಾಜ ಕ್ಷತ್ರಿಯ ಸಾಂಸ್ಕøತಿಕ ಪರಂಪರೆಯನ್ನು ಅಭಿವೃದ್ಧಿ ಪಡಿಸಲು ಮುಂಬಯಿನಲ್ಲಿ ಸಂಘವನ್ನು ರೂಪಿಸಲು ನಿರ್ಧರಿಸಿದರು. ಮುಂಬಯಿಯಲ್ಲಿ ನಿಂತ ಎಲ್ಲ ರಾಮರಾಜ ಕ್ಷತ್ರಿಯ ಸಮಾಜ. ಬಾಂಧÀವರನ್ನು ಒಂದೇ ಛಾವಣಿಯ ಅಡಿಯಲ್ಲಿ ಒಟ್ಟು ಗೂಡಿಸಬೇಕೆಂದು ಮೂಲಭೂತ ಉದ್ದೆಶವಾಗಿತ್ತು. ಆದ್ದರಿಂದ 26 ಸದಸ್ಯರು 1944ರಲ್ಲಿ ಜನವರಿ-2 ರಂದು `ರಾಮರಾಜ ಕ್ಷತ್ರೀಯ ಸೇವಾ ಸಂಘ’ ಎಂಬ ನಾಮದಿಂದ ಪ್ರಾರಂಭಗೊಳಿಸಿದರು. ಶ್ರೀ ಬೋಳಾರ ದೇವರಾಯ ರಾವ್ ಪ್ರಪಥಮ ಅಧ್ಯಕ್ಷರಾಗಿ ಆಯ್ಕೆಗೊಂಡರು. ಶ್ರೀ ಜಿ.ಎಸ್ ಮಂಜುನಾಥ ಮೊದಲ ಉಪಾಧ್ಯಕ್ಷರಾದರು. ಹಾಗೆಯೇ 1944ರ ಮಾರ್ಚ್ 10ರಂದು ಮೊದಲ ವಾರ್ಷಿಕ ಸಭೆ 40 ಸದಸ್ಯರೊಂದಿಗೆ ನಡೆಯಿತು. ಹಾಗೂ ಅಣ್ಣಪ ರಾವ್, ರಾಮಚಂದ್ರ ರಾವ್, ಪದ್ಮನಾಭ ಉಳ್ಳಾಲ್, ಸುಬ್ರಾಯ ಬೇಕಲ್, ಪರಮೇಶ್ವರ್ ಬೋಳಾರ್, ರಾಮಯ್ಯ ಮಾಸ್ಟರ್, ವಾಸಪಯ್ಯ ಸೇರ್ವೆಗಾರ್ ಎಂ.ರಾಧಕೃಷ್ಣರಾವ್ ಮತ್ತು ಕೃಷ್ಣರಾವ್ ಬೋಳಾರ್ ಹಾಗೂ ಇತರರು ಸಂಸ್ಥಾಪಕ ಸಮಿತಿಯಲ್ಲಿ ಸದಸ್ಯರಾಗಿ ಸಂಘದ ಏಳಿಗೆಗಾಗಿ ದುಡಿದರು.
ಆ ದಿನಗಳಲ್ಲಿ ಸಂಗಕ್ಕೆ ಯಾವುದೇ ಕಚೇರಿ ಇಲ್ಲದಿರುವುರಿಂದ ಸಿಯಾನ್ಯ ರಾಮಚಂದ್ರರಾವ್ ಅವರ ಮನೆಯನ್ನು ಸಂಘÀದ ಕಚೇರಿಯಾಗಿ ಬಳಸಲಾಯಿತ್ತು. ಹಾಗೂ 1960ರ ದಶಕದಲ್ಲಿ ಬಹುಪಾಲು ಸಮಿತಿಯ ಸಭೆಗಳು ಆooಞಥಿಚಿಡಿಜ ಖoಥಿ ಅhಚಿmbeಡಿs ನಲ್ಲಿರುವ ಪರಮೇಶ್ವರ ಬೋಳಾರರ ಮನೆಯಲ್ಲೆ ನಡೆಯುತ್ತಿತ್ತು. ನಂತರ 1970 ಜೂನ್ 28ರಂದು ಮಾಟುಂಗದ ಪೆÇೀದರ್ ಕಾಲೇಜ್ನ ಸಭಾಂಗಣದಲ್ಲಿ ಶ್ರೀ ವಾಸಪಯ್ಯ ಶೆರೆಗಾರ್ ಅವರ ಅಧ್ಯಕ್ಷತೆಯಲ್ಲಿ ಬೆಳ್ಳಿಹಬ್ಬ ಮಹೋತ್ಸವವನ್ನು ಆಚರಿಸಿತು. ಬೆಳ್ಳಿಹಬ್ಬದ ಸ್ಮಾರಕವಾಗಿ ಅದೇ ವರ್ಷ ಸಂಘವು ದಾದರ್ನ ಸಿದ್ಧಿ ವಿನಾಯಕ ದೇವಸ್ಥಾನದ ಹತ್ತಿರ `ರಾಯ್ಚಂದ್’ ನಿವಾಸದಲ್ಲಿ ಸುಮಾರು 200 ಚದರ ಅಡಿಗಳಷ್ಟು ಜಾಗವನ್ನು ಸಂಘದ ಕಚೇರಿಗಾಗಿ ಖರಿದಿಸಲಾಯಿತ್ತು. ಇದು ಆಗಿನ ಅಧ್ಯಕ್ಷರಾಗಿದ್ದ ಶ್ರೀ ವಾಸಪಯ್ಯ ಅವರ ಪ್ರಯತ್ನದ ಫಲಶೃತಿ ಎನ್ನಬಹುದು. ಪ್ರಾರಂಭದಲ್ಲಿ ಕರ್ನಾಟಕದಿಂದ ಬಂದ ಸಮಾಜ ಭಾಂದವರಿಗೆ ಉಳಿದು ಕೊಳ್ಳಲು ಅವಕಾಶವನ್ನು ಕೊಟ್ಟಿತು. ಕೆಲವು ಸಣ್ಣಪುಟ್ಟ ಕಾರಣಗಳಿಂದಾಗಿ ಸಂಘವು ಸ್ವಲ್ಪ ಅವಧಿ ತನಕ ಸಕ್ರಿಯವಾಗಿರಲಿಲ್ಲ. ಕ್ರಮೇಣ ಶ್ರೀ ಸೀತಾರಾಮ್ ಕೋಟೆಗಾರ, ಶ್ರೀಧರ್, ದಿನಕರ್ ರಾವ್ ಎಸ್.ಎನ್. ಬೃಕಲ್, ಟಿ.ಕೆ ಶಿವರಾಮ್, ಸತೀಶ್ರಾವ್, ಅನಿಲ್ ರಾವ್, ಸಿ.ಎಸ್ ರಾವ್ ಮತ್ತಿತರರು ಮರಳಿ ಸಕ್ರಿಯಗೊಳಿಸಿದರು.
ರಾಮರಾಜ ಕ್ಷತ್ರಿಯ ಸೇವಾ ಸಂಘವು ಸಮುದಾಯದಲ್ಲಿ ಆಥಿರ್üಕವಾಗಿ ಹಿಂದುಳಿದ ಜನತೆಯನ್ನು ಸಮಾಜಿಕ, ಸಾಂಸ್ಕøತಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಯುವಂತೆ ಪೆÇ್ರೀತ್ಸಾಹಿಸಿತ್ತು ಹಾಗೂ ಸಮಾಜದ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ, ಸಹಕರಿಸಿತ್ತು. ವೈದಕೀಯ ನೆರವನ್ನು ನೀಡಿತು. ಸಮಾಜ ಬಾಂಧವರ ಯಾವುದೇ ಸುಖ ಕಷ್ಟಗಳಲ್ಲಿ ಪಾಲುಗೊಂಡಿತ್ತು. ವಿಶೇಷದಾನಿಗಳಿಂದ ವಿದ್ಯಾಥಿರ್ü ವೇತನ ದೊರಕುವಂತಾಯಿತು. ವಾರ್ಷಿಕ ಕಾರ್ಯಕ್ರಮದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ, ಒಳಾಂಗಣ ಕ್ರೀಡೆ ಮಕ್ಕಳಿಗೆ ಹಾಗೂ ಸಂಘದ ಸದಸ್ಯರಿಗೆ ನಡೆಸಲಾಗುವುದು. ಹಾಗೂ ಚಿತ್ರಕಲಾ ಸ್ಪರ್ದೆ, ಸಾಂಸ್ಕøತಿಕ ಕಾರ್ಯಕ್ರಮ ಹೀಗೆ ಹತ್ತು ಹಲವಾರು ಗಮನಾರ್ಹ ಜನಹಿತ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ.
ಕಳೆದ ಮೂರು ವರ್ಷಗಳ ಹಿಂದೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ಉತ್ಸಾಹಿ ತರುಣ, ಸಮಾಜಮುಖಿ ಚಿಂತಕ, ಸಮರ್ಥ ಸಮಗಟಕ ರಾಮರಾಜ ಕ್ಷತ್ರಿಯ ಸೇವಾ ಸಂಘದ ನಾಯಕನಾಗಿ ರಾಜ್ಕುಮಾರ್ ಕಾರ್ನಾಡ್ ಹಲವಾರು ಗಮನರ್ಹ ಬದಲಾವಣೆಯನ್ನು ಸಮಾಜದ ಬಾಂಧವರಿಗೆ ತಂದು ಕೊಟ್ಟರು. ಆಧುನಿಕತೆಯ ಮೌಲ್ಯವನ್ನು ಅರಿತು ಮುಂದಿನ ಪೀಳಿಗೆಯ ಒಳಿತನ್ನು ಗಮನದಲ್ಲಿರಿಸಿಕೊಂಡು ಅದರಲ್ಲೂ ಮಹಿಳೆಯರಿಗೆ ಸಮಗದಲ್ಲಿ ಗೌರವವನ್ನು ಹೆಚ್ಚಿಸಲು 2016ರಲ್ಲಿ ರಾಜ್ಕುಮಾರ್ ಕಾರ್ನಾಡ್ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗ ಅಸ್ತಿತ್ವಕ್ಕೆ ತರಲಾಯಿತು.
ಸದ್ಯ ಸಂಘದಲ್ಲಿ ಹೆಚ್ಚಿನ ಉತ್ಸಾಹಿ ತರುಣಗಳನ್ನು ಕಾರ್ಯಕಾರಿ ಸಮಿತಿಯಲ್ಲಿ ಹೊಂದಿದೆ. ಇದೀಗ ಮಹಿಳಾ ವಿಭಾಗವೂ ಅತ್ಯಂತ ಹುರುಪಿನಿಂದ ಕಾರ್ಯನಿರತವಗಿದೆ. ಶ್ರಾವಣ ಸಂಭ್ರಮ, ಅರಸಿನ ಕುಂಕುಮ, ಯೋಗಾಭ್ಯಾಸ ವಾರ್ಷಿಕ ವಿಹಾರಕೂಟ, ವಾರ್ಷಿಕ ಕ್ರೀಡಾ ಸಂಭ್ರಮ, ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಅಷ್ಟೆ ಅಲ್ಲಮುಂಬಯಿನಲ್ಲಿ ಹುಟ್ಟಿ ಬೆಳೆದ ಸಮುದಾಯದ ಮಕ್ಕಳು ಕನ್ನಡ ಭಾಷೆಯ ಕಲಿಯುವಿಕೆಯಲ್ಲಿ ವಂಚಿತರಾಗಬಾರದೆಂಬ ಉದ್ದೆಶದಿಂದ ಸಂಘದ ಸದಸ್ಯರಿಂದ ಯುವ ಪಿಳಿಗೆಗೆ ಕನ್ನಡ ಅಕ್ಷರಾಭ್ಯಾಸವನ್ನು ಕಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದರಿಂದ ಈಗಾಗಲೇ ಸಾಧರಣ 100ಕ್ಕೂ ಅಧಿಕ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಿಂದ ಯುವಪೀಳಿಗೆಯೂ ಗಮನಾರ್ಹ ಸಂಖ್ಯೆಯಲ್ಲಿ ಸಂಘದಲ್ಲಿ ಭಾಗವಹಿಸುವಂತೆ ಮಾಡಿರುವುದು ಒಂದು ವಿಶೇಷ ಸಾಧನೆಯೆ ಎನ್ನಬಹುದು.
ಇದೀಗ ಸಂಸ್ಥೆಗೆ 75ನೇ ವರ್ಷದ ಸಂಭ್ರಮ, ನಮ್ಮ ಪೂರ್ವಜರು ಈ ಸಂಘವನ್ನು ಉಳಿಸಿ ಬೆಳೆಸಲು ಕಠಿಣ ಶ್ರಮ ಪಟ್ಟಿದ್ದಾರೆ. ಸಂಘವೂ ನಿರಂತರ ಬದಲಾಗುವ ಸಮಯಕ್ಕೆ ತಕ್ಕಂತೆ ಬದಲಾವಣೆಯನ್ನು ತಂದು ಮುಂದುವರಿಸುತ್ತಾ ಬಂದಿದೆ. ಸಂಘವು ಮುಂಬಯಿಯ ಮಹಾನಗರದಲ್ಲಿ `ರಾಮರಾಜ ಕ್ಷತ್ರಿಯ ಭವನ’ ಸ್ಥಾಪಿಸಬೇಕು ಅನ್ನುವ ಕನಸ್ಸನ್ನು ಹೊಂದಿದೆ. ಮುಂಬಯಿಂತಹ ದುಬಾರಿ ಮಹಾನಗರದಲ್ಲಿ ಸ್ಥಾಪಿಸಬೇಕು ಅದು ಈ ಮುಂಬಾಯಿಂತಹ ದುಬಾರಿ ಮಹಾನಗರದಲ್ಲಿ ಕಷ್ಟಕರ. ಅದರೆ ಸಮುದಾಯದ ಎಲ್ಲ ಸದಸ್ಯರು ಈ ಬಗ್ಗೆ ಚಿಂತಿಸಿದರೆ ಅದು ಸುಲಭ ಸಾದ್ಯ. ಮನಸ್ಸಿದ್ದರೆ ಮರ್ಗ ಎಂಬಂತೆ ಭವಿಷ್ಯದಲ್ಲಿ ನಾವು ಇದನ್ನು ಸಾಧಿಸಬಲ್ಲೆವು ಎಂಬ ಧೈರ್ಯ ನಮ್ಮ ಸಂಘದ್ದಾಗಿದೆ ಎಂದು ಕ್ಷತ್ರೀಯ ಸಂಘದ ಅಧ್ಯಕ್ಷ ರಾಜ್ಕುಮಾರ್ ಕಾರ್ನಾಡ್ ತಿಳಿಸಿದ್ದಾರೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link