ಗಣರಾಜ್ಯೋತ್ಸವ - ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್
ಕಾರ್ಪೊರೇಟ್ ರಾಷ್ಟ್ರೀಯತೆ ಸಂವಿಧಾನಕ್ಕೆ ಅಪಾಯ: ಡಾ. ರಾಜಾರಾಮ್ ತೋಳ್ಪಾಡಿ - ವಿವಿ ಕಾಲೇಜಿನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ರಾಜಕೀಯ ಶಾಸ್ತ್ರ ತಜ್ಞ
ಮಂಗಳೂರು: ಕಾರ್ಪೊರೇಟ್ ರಾಷ್ಟ್ರೀಯತೆ ಎಂಬ ಅಪಾಯ ಈ ದಿನಗಳಲ್ಲಿ ಭಾರತದ ಸಂವಿಧಾನದ ಮೂಲ ಆಶಯಗಳಾದ ಬಹುತ್ವತೆ, ವೈವಿಧ್ಯತೆ ಮತ್ತು ಜಾತ್ಯಾತೀತತೆಗಳಿಗೆ ಕಂಟಕವಾಗುತ್ತಿದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಜಕೀಯ ಶಾಸ್ತ್ರ ವಿಭಾಗದ ಮಾಜೀ ಮುಖ್ಯಸ್ಥ ಡಾ. ರಾಜಾರಾಮ್ ತೋಳ್ಪಾಡಿ ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದ 70 ನೇ ಗಣರಾಜ್ಯೋತ್ಸವದ ವೇಳೆ, ಶನಿವಾರ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ಈಗ ಕೆಲವರು ತಾವು ಭಾವಿಸುವುದೇ ರಾಷ್ಟ್ರೀಯವಾದವೆಂದು ನಂಬಿದ್ದಾರೆ. ದೇಶದ ಹಿತದೃಷ್ಟಿಯಿಂದ ಏನನ್ನಾದರೂ ಮಾತನಾಡುವುದೂ ಕೂಡ ಅವರ ಪ್ರಕಾರ ದೇಶವಿರೋಧಿ. ಸಂವಿಧಾನದ ಮೌಲ್ಯಗಳನ್ನೂ ಅವರೇ ನಿರ್ಧರಿಸುತ್ತಾರೆ,” ಎಂದು ಹೇಳಿದ ಅವರು, ಸಂವಿಧಾನವನ್ನು ಆಧ್ಯಾತ್ಮಿಕ ಗ್ರಂಥಗಳಿಗೆ ಹೋಲಿಸುವುದನ್ನು ವಿರೋಧಿಸಿದರು. “ಸಂವಿಧಾನವನ್ನು ನಾವು ನಮ್ಮ ಅನುಕೂಲಕ್ಕೆಂದು ರೂಪಿಸಿಕೊಂಡಿದ್ದೇವೆ ಮತ್ತಿದು ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ,” ಎಂದರು.
ಪ್ರಾಂಶುಪಾಲ ಡಾ.ಉದಯ ಕುಮಾರ್ ಎಮ್.ಎ, ಭಾರತೀಯ ಸಂವಿಧಾನವನ್ನು, ಬಹುಜನರ ಆಲೋಚನೆಗಳನ್ನು ಕ್ರೋಢೀಕರಿಸಿ, ಭಿನ್ನ ಜಾತಿ-ಸಮುದಾಯ- ವಿಚಾರಧಾರೆಗಳಿಗೆ ಸೇರಿದ ಜನರು ಒಟ್ಟಾಗಿ ಬಾಳುವಂತೆ ಮಾಡುವ ಆಶಯದಿಂದ ರೂಪಿಸಿದ ಒಂದು ವ್ಯವಸ್ಥೆ ಎಂದು ವ್ಯಾಖ್ಯಾನಿಸಿದರು. “ನಾವು ಇನ್ನೊಬ್ಬರ ಮಾತನ್ನು ಕೇಳುವುದರಿಂದ ಮೌಲ್ಯಯುತ ಅವಕಾಶವನ್ನು ಪಡೆಯಲು ಸಾಧ್ಯವಾಗುತ್ತದೆ,” ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿ ಸಂಘದ ಉಪನಿರ್ದೇಶಕ ಡಾ. ಹರೀಶ್ ಕುಮಾರ್, ಸಿಪಿಇ ಸಂಚಾಲಕಿ ಡಾ. ಲತಾ ಎ. ಪಂಡಿತ್, ಎನ್ಸಿಸಿ ನೌಕಾ ದಳ ಅಧಿಕಾರಿ ಡಾ. ಯತೀಶ್ ಕುಮಾರ್, ಭೂ ದಳ ಅಧಿಕಾರಿ ಡಾ. ಜಯರಾಜ್, ಎನ್ಎಸ್ಎಸ್ ಅಧಿಕಾರಿ ಡಾ. ಸಂಜಯ್ ಅಣ್ಣಾರಾವ್, ದೈಹಿಕ ಶಿಕ್ಷಣ ಅಧಿಕಾರಿ ಹರಿದಾಸ್ ಕೂಳೂರು ಅವರು ಉಪಸ್ಥಿತರಿದ್ದರು. ಎನ್ಎಸ್ಎಸ್ ಅಧಿಕಾರಿ ಡಾ. ಭಾರತೀ ಪಿಲಾರ್ ಕಾರ್ಯಕ್ರಮ ನಿರ್ವಹಿಸಿದರು.
ಈ ಮೊದಲು, ಧ್ವಜಾರೋಹಣ ಮಾಡಿದ ಡಾ. ರಾಜಾರಾಮ್ ತೋಳ್ಪಾಡಿ ಎನ್ಸಿಸಿ ಕೆಡೆಟ್ಗಳಿಂದ ಗೌರವ ವಂದನೆ ಸ್ವೀಕರಿಸಿದರು. ಎನ್ಸಿಸಿ ಮತ್ತು ಎನ್ಎಸ್ಎಸ್ ವಿದ್ಯಾರ್ಥಿಗಳು ಸಾಂಸ್ಕೃತಿಕ ವೈವಿಧ್ಯವನ್ನು ಪ್ರದರ್ಶಿಸಿದರು.
Cultural programme: NSS students perform a cultural programme during the Republic Day celebration at University College Mangalore on Saturday.
Principal: University College Mangalore Principal Dr. Uday Kumar M A speaks during Republic Day celebration at the college on Saturday.
Dr. Rajaram Tholpadi: Mangalore University Political Science department retired Chairman Dr. Rajaram Tholpadi addresses gathering during Republic Day celebration at University College Mangalore on Saturday.
NCC: NCC cadets pay tribute to tricolour during 70th Republic Day celebration at University College Mangalore on Saturday.
NCC Song: NCC cadets sing a song during the Republic Day celebration at University College Mangalore on Saturday.
Flag Hoist: Mangalore University Political Science department retired Chairman Dr. Rajaram Tholpadi unfurls tricolour on the occasion of 70th Republic Day celebration at University College Mangalore on Saturday.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link