Brief University College news with pictures


Guru Prasad
Kemmannu News Network, 04-04-2019 17:26:49


Write Comment     |     E-Mail To a Friend     |     Facebook     |     Twitter     |     Print


‘ಅಧ್ಯಯನಕ್ಕೆ ರಾಜಮಾರ್ಗವನ್ನು  ಬಳಸದೇ ಒಳಮಾರ್ಗ ಬಳಸಿ’
ಅಂಬಿಗರ ಚೌಡಯ್ಯರ ವಚನಗಳ ವಿದ್ಯಾರ್ಥಿ ಉಪನ್ಯಾಸ ಸ್ಪರ್ಧೆಯಲ್ಲಿ ಪ್ರೊ ಎ ವಿ ನಾವಡ ಅಭಿಮತ
ಮಂಗಳೂರು: ಅಧ್ಯಯನಕ್ಕೆ ರಾಜಮಾರ್ಗವನ್ನು  ಬಳಸದೇ ಒಳಮಾರ್ಗಗಳನ್ನು ಹುಡುಕಿಕೊಳ್ಳಬೇಕು. ಅಂಬಿಗರ ಚೌಡಯ್ಯರ ವಚನಗಳ ಕುರಿತು ತಳಮಟ್ಟದ ಬಹುಮುಖೀ, ಬಹುಕಾಲಿಕ ಅಧ್ಯಯನ ಆತನ ಆಶಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗಬಹುದು, ಎಂದು ವಿದ್ವಾಂಸ ಪ್ರೊ ಎ ವಿ ನಾವಡ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಬುಧವಾರ ನಡೆಸಿದ ಅಂಬಿಗರ ಚೌಡಯ್ಯರ ವಚನಗಳ  ಅಂತರ್ಕಾಲೇಜು ವಿದ್ಯಾರ್ಥಿ ಉಪನ್ಯಾಸ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಧ್ಯಯನ ಪೀಠವು ಬಯಲು ವಿಶ್ವವಿದ್ಯಾನಿಲಯದಂತೆ ಜ್ಞಾನದ ವಿತರಣೆ ಮಾಡುತ್ತವೆ. ಸಾಮಾಜಿಕ ನ್ಯಾಯದ ಪರವಾಗಿದ್ದ ಚೌಡಯ್ಯರ ವಚನ ಸಂಪುಟಗಳನ್ನು ವಿಶ್ವವಿದ್ಯಾನಿಲಯ ಮಕ್ಕಳಿಗೆ ಒದಗಿಸಬೇಕು, ಎಂದರು. 
ಸಮಾಜದಲ್ಲಿ ಮಹಿಳೆಯರೂ ಧಮನಿತರೇ ಎಂದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ. ಕಿಶೋರಿ ನಾಯಕ್, ವಚನ ಸಾಹಿತ್ಯವನ್ನು ಓದುತ್ತಿದ್ದಂತೆ ಅದು ಹವ್ಯಾಸವಾಗಿಬಿಡುತ್ತದೆ. ಧಮನಿತರ ಪರವಾಗಿ ನಿಂತ ಚೌಡಯ್ಯರ ವಚನಗಳ ವಿಮರ್ಶಾತ್ಮಕ ಅಧ್ಯಯನ ಸಂಪುಟಗಳನ್ನು ಒದಗಿಸುವ ಕುರಿತು ಪೀಠ ಕೆಲಸ ಮಾಡಬೇಕು ಎಂದರು.
ಅಧ್ಯಯನ ಪೀಠದ ಸಂಯೋಜಕ ಡಾ. ನಾಗಪ್ಪ ಗೌಡ, ಅಂಬಿಗರ ಚೌಡಯ್ಯ 12ನೇ ಶತಮಾನದಲ್ಲೇ ವಚನ ಚಳುವಳಿ ಆರಂಭಿಸಿದರು. ಅವರ ವಚನಗಳು ವಿಶ್ವ ಸಾಹಿತ್ಯಕ್ಕೊಂದು ದೊಡ್ಡ ಕೊಡುಗೆ. ಈ ಮೂಲಕ ಮೊಗವೀರ ಸಮುದಾಯದ ಸಂಸ್ಕೃತಿಯ ಅಧ್ಯಯನ ನಡೆಯುತ್ತಿದೆ, ಎಂದು ಅಭಿಪ್ರಾಯಪಟ್ಟರು. ಪೀಠದ ಸಲಹಾ ಸಮಿತಿಯ ಸದಸ್ಯೆ ಡಾ. ಯು. ತಾರಾ ರಾವ್, ಇಂಟರ್ನೆಟ್ ಯುಗದಲ್ಲಿ ವಿದ್ಯಾರ್ಥಿಗಳ ಸಂಶೋಧನೆಯ ಭಾವನೆಯ ಜಾಗೃತಿ  ಮೂಡಿಸುವುದೇ ಕಾರ್ಯಕ್ರಮದ ಆಶಯ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಲೇಞಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ.ಎ, ಚೌಡಯ್ಯರ ಕಾಲದ ಮೌಲ್ಯಗಳು ಈಗಿನ ಸಮಾಜಕ್ಕೂ ಪ್ರಸ್ತುತವಾಗಿವೆ ಎಂದರು.
ಸುಮಾರು 10 ಕಾಲೇಜುಗಳ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತೀರ್ಪುಗಾರರಾಗಿ, ವಿಶ್ವನಾಥ ಬದಿಕಾನ, ಚಂದ್ರಕಲಾ ನಂದಾವರ ಮತ್ತು ವಾಸುದೇವ ಉಚ್ಚಿಲ ಉಪಸ್ಥಿತರಿದ್ದರು.  ವಿದ್ಯಾರ್ಥಿ ಪ್ರಜ್ವಲ್ ವಚನ ಗಾಯನದ ಮೂಲಕ ಸ್ವಾಗತ ಕೋರಿದರು. ಶಿವರಾಜ್ ನಿರೂಪಿಸಿದರೆ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಧನ್ಯವಾದ ಸಮರ್ಪಿಸಿದರು.

ಪ್ರಥಮ- ಅರ್ಪಿತಾ, ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ
ದ್ವಿತೀಯ- ಶಶಾಂಕ್‍, ಎಸ್‍ಡಿಎಮ್‍ ಕಾಲೇಜು ಉಜಿರೆ’
ತೃತೀಯ- ಶ್ರೀನಿಧಿ ಪೂಜಾರಿ, ಶಾರದಾ ಕಾಲೇಜು, ಬಸ್ರೂರು

ಜನಮನವನ್ನು ತಲುಪಬಲ್ಲ ಸ್ಕ್ರಿಪ್ಟ್ ಚಲನಚಿತ್ರದ ಜೀವಾಳ: ಸುಧೀರ್ ಶ್ಯಾನ್ಬೋಗ್
ಮಂಗಳೂರು: ಚಲನಚಿತ್ರ ಒಂದು ಪ್ರಭಾವಶಾಲಿ ಮಾಧ್ಯಮವಾಗಿರುವುದರಿಂದ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು, ಎಂದು ಚಲನಚಿತ್ರ ನಿರ್ದೇಶಕ ಸುಧೀರ್ ಶ್ಯಾನ್ಬೋಗ್ ಅಭಿಪ್ರಾಯಬಿಟ್ಟರು.
ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ನಡೆದ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ‘ಮಂಗಳ ಸಿರಿ’ ಮತ್ತು ಕಿರುಚಿತ್ರ ‘ಮಡಕೆ ಮಾತಾಡಿದಾಗ’ ಬಿಡುಗಡೆ ಮಾಡಿ ಮಾತನಾಡಿದ ಅವರು, ಚಲನಚಿತ್ರದ ಜೀವಾಳವಾಗಿರುವ ಸ್ಕ್ರಿಪ್ಟ್ನ್ನು ಉದ್ದೇಶಿತ ವೀಕ್ಷಕರಿಗೆ ತಲುಪುವಂತೆ ತಯಾರಿಸಬೇಕು. ಚಲನಚಿತ್ರ ಅನಕ್ಷರಸ್ಥರೂ ಅರ್ಥಮಾಡಿಕೊಳ್ಳಬಲ್ಲ ಮಾಧ್ಯಮವಾದರೂ ಹೊಸ ತಂತ್ರಜ್ಞಾನದ ಸ್ಪರ್ಶ ಇದಕ್ಕಿರಬೇಕು, ಎಂದರು.
ಅಧ್ಯಕ್ಷೀಯ ಭಾಷಣ ಮಾಡಿದ ಪ್ರಾಂಶುಪಾಲ ಡಾ ಉದಯ ಕುಮಾರ್ ಎಂ ಎ, ಚಲನಚಿತ್ರಕ್ಕೆ ನಮ್ಮ ದೈನಂದಿನ ಆಗುಹೋಗುಗಳೇ ವಸ್ತುವಾಗಬಹುದು. ಸಾಕ್ಷ್ಯಚಿತ್ರಗಳು, ಜಾಹೀರಾತುಗಳು ಒದಗಿಸುವ ಜ್ಞಾನದಿಂದ ಸಂವಹನ ಕಲೆಗಿರುವ ಶಕ್ತಿಯನ್ನು ಸಂದೇಶ ಸಾರಲು ಬಳಸಿಕೊಳ್ಳಬಹುದು, ಎಂದರು.
ಇದೇ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ವಿಶ್ವಾಸ್ ಅಡ್ಯಾರ್ ಅವರನ್ನು ಸನ್ಮಾನಿಸಲಾಯಿತು. ಎಡಿಟರ್ಗಳಾದ ಫೈನಲ್ ಕಟ್ ಪ್ರೊಡಕ್ಷನ್ನ ನಿಧಿ ರೈ ಮತ್ತು ವಿನಯ್ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಲಾಯಿತು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ ಗಣಪತಿ ಗೌಡ, ಉಪನ್ಯಾಸಕರಾದ ಗುರುಪ್ರಸಾದ್ ಟಿ ಎನ್, ಮಹಾಂತೇಶ್ ಹಿರೇಮಠ, ಮಾಧ್ಯಮ ವೇದಿಕೆ ಕಾರ್ಯದರ್ಶಿ ಪವನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತೇಜಶ್ರೀ ಕಾರ್ಯಕ್ರಮ ನಿರೂಪಿಸಿದರೆ, ಅರ್ಪಿತಾ ಅತಿಥಿಗಳನ್ನು ಸ್ವಾಗತಿಸಿದರು.
ಕಿರುಚಿತ್ರದ ಕುರಿತು: (ಬಾಕ್ಸ್ನಲ್ಲಿ ಬಳಸಬಹುದು)
ಸುಮಾರು 20 ನಿಮಿಷಗಳ ‘ಮಡಕೆ ಮಾತಾಡಿದಾಗ’ ಕಿರುಚಿತ್ರವನ್ನು ಕಾಲೇಜಿನ ಹಳೆವಿದ್ಯಾರ್ಥಿ ವಿಶ್ವಾಸ್ ಅಡ್ಯಾರ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಸುಮಾರು 12 ಮಂದಿ ವಿದ್ಯಾರ್ಥಿಗಳು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪಾರಂಪರಿಕ ಮಡಕೆ ತಯಾರಿಕೆಯ ಮೇಲೆ ಆಧುನಿಕತೆಯ ಸವಾರಿ, ಇದನ್ನು ತಪ್ಪಿಸಲು ಯುವಜನತೆಯ ಜವಾಬ್ದಾರಿಯನ್ನು ತಿಳಿಸಿಕೊಡಲು ಚಿತ್ರ ಪ್ರಯತ್ನಿಸಿದೆ.  ಮಂಗಳೂರಿನ ಸ್ಟೇಟ್ಬ್ಯಾಂಕ್ ಮತ್ತು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi