Brief Udupi News with pictures 12-04-19


Rons Bantwal
Kemmannu News Network, 13-04-2019 17:39:26


Write Comment     |     E-Mail To a Friend     |     Facebook     |     Twitter     |     Printಮತಗಟ್ಟೆಯಲ್ಲಿ ಮತದಾರರಿಗೆ ಮಾಹಿತಿ ನೀಡಲು ಪೋಸ್ಟರ್

ಜಿಲ್ಲೆಯಲ್ಲಿ ಏಪ್ರಿಲ್ 18 ರಂದಿ ನಡೆಯುವ ಚುನಾವಣೆಯಲ್ಲಿ, ಮತದಾರರಿಗೆ ಮತಗಟ್ಟೆಯ ಕುರಿತು ಮಾಹಿತಿ ನೀಡಲು ವಿವಿಧ ಬಗೆಯ ಪೋಸ್ಟರ್ ಗಳನ್ನು ಚುನಾವಣಾ ಆಯೋಗ ಬಿಡುಗಡೆಗೊಳಿಸಿದೆ.
ಮತಗಟ್ಟೆಯಲ್ಲಿ ವಿವಿಧ ಅಧಿಕಾರಿಗಳು ನಿರ್ವಹಿಸುವ ಕರ್ತವ್ಯಗಳ ವಿವರದ ಪೋಸ್ಟರ್ ನೀಡಲಾಗಿದ್ದು, ಇದರಿಂದ ಮತದಾರರು ಮತಗಟ್ಟೆಯಲ್ಲಿ ಯಾವ ಅಧಿಕಾರಿಗಳ ಬಳಿ ತೆರಳಬೇಕು , ಏನು ಮಾಡಬೇಕು  ಮುಂತಾದ ಅನವಶ್ಯಕ ಗೊಂದಲಕ್ಕೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ.
ಮತದಾನ ಕೇಂದ್ರದಲ್ಲಿ ಯಾವ ಗುರುತಿನ ದಾಖಲೆ ತೋರಿಸಿ ಮತದಾನ ಮಾಡಬಹುದು  ಮಾಹಿತಿಯಿದ್ದು, ಮತದಾರರ ಪೋಟೋ ಸ್ಲಿಪ್ ಮಾಹಿತಿಗಾಗಿಯೇ ಹೊರತು ಮತಗಟ್ಟೆಯಲ್ಲಿ ಗುರುತಿನ ದಾಖಲೆಯಾಗಿ ಉಪಯೋಗಿಸಲು ಬರುವುದಿಲ್ಲ ಎಂದ ಮಾಹಿತಿ ನೀಡಲಾಗಿದೆ.
 ಇವಿಎಂ ಬಳಕೆ ಮತ್ತು ವಿವಿ ಪ್ಯಾಟ್ ಯಂತ್ರ ಬಳಿಸಿ ಹೇಗೆ ಮತ ಚಲಾಯಿಸಬಹುದು  ಎಂಬ ಸಚಿತ್ರ ಮಾಹಿತಿಯನ್ನು ನೀಡಲಾಗಿದ್ದು, ಮತದಾರರು ಮತ ಚಲಾಯಿಸುವ ವಿಧಾನವನ್ನು ಹಾಗೂ ಈ ಯಂತ್ರಗಳ  ಕಾರ್ಯ ವಿಧಾನವನ್ನೂ ಸಹ ವಿವರಿಸಲಾಗಿದೆ.
ಮತದಾನ ಕೇಂದ್ರದಲ್ಲಿ ಅಂಗವಿಕಲರಿಗೆ, ಹಿರಿಯ ನಾಗರೀಕರಿಗೆ, ಅಂಧರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಇದೆ.
      ಈ ಎಲ್ಲಾ ಪೋಸ್ಟರ್ ಗಳನ್ನು ಮಸ್ಟರಿಂಗ್ ಸಮಯದಲ್ಲಿ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಿಲು ಕ್ರಮ ಕೈಗೊಂಡಿದ್ದು, ಮತಕೆಂದ್ರಕ್ಕೆ ತೆರಳಿದ ಕೂಡಲೇ ಮತಗಟ್ಟೆ ಅಧಿಕಾರಿಗಳು ಈ ಪೋಸ್ಟರ್ ಗಳನ್ನು ಮತಕೇಂದ್ರ ಪ್ರವೇಶಿಸುವ ಮುನ್ನ ಮತದಾರರಿಗೆ ಸ್ಪಷ್ಟವಾಗಿ ಕಾಣುವ ಕಡೆಗಳಲ್ಲಿ ಅಳವಡಿಸುವಂತೆ ಸೂಚನೆ ನೀಡಲಾಗಿದೆ.

ಸೋಲುವ ಭೀತಿ  ನನಗಿಲ್ಲ, ಪ್ರಮೋದ್ ಹತಾಶರಾಗಿರುವುದಕ್ಕೆ ಅವರ ಹೇಳಿಕೆಗಳೇ ಸಾಕ್ಷಿ : ಶೋಭಾ  ಕರಂದ್ಲಾಜೆ

 ಉಡುಪಿ :  ಚುನಾವಣಾ ನಾಮ ಪತ್ರ ಸಲ್ಲಿಕೆಯಾದ ನಂತರ  ನಾನು ವ್ಯಾಪಕವಾಗಿ  ಚುನಾವಣಾ  ಕಾರ್ಯದಲ್ಲಿ ತೊಡಗಿಕೊಂಡಿದ್ದ 7 ಜನ ಶಾಸಕರು ಹಾಗೂ 2 ಜಿಲ್ಲೆಯ ಅದ್ಯಕ್ಷರುಗಳು, ಸಾವಿರಾರು ಮುಖಂಡರು ಹಾಗೂ ಕಾರ್ಯಕರ್ತರ ಏಕದ್ದೇಯವಾಕ್ಯದೊಂದಿಗೆ “ಮತ್ತೊಮ್ಮೆ ಮೋದಿ‘’ ಪ್ರಧಾನಿ ಎಂದು  ಅಹೋರಾತ್ರಿ ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದು ಈ ಚುನವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚು ಅಂತರದಿಂದ ಪಕ್ಷದ ಕಾರ್ಯಕರ್ತರ ಸಂಘಟನೆ ಬಲದಿಂದ ಗೆಲ್ಲುವುದಲ್ಲಿ ಸಂಶಯ ನನಗಿಲ್ಲ, ಸೋಲುವ ಭೀತಿ ಇರುವುದು ಮೈತ್ರಿ ಪಕ್ಷದ ಅಭ್ಯರ್ಥಿಗೆ. ಬಿಜೆಪಿಗೆ ಎಂದೂ ಸೋಲು ಇಲ್ಲ ಎಂದು ಶೋಭಾ ಕರಂದ್ಲಾಜೆ  ಕಾಪು ಕ್ಷೇತ್ರದ ಹಿರಿಯಡ್ಕದಲ್ಲಿ  ಸಾರ್ವಜನಿಕ ಸಭೆಯಲ್ಲಿ ಹೇಳಿದರು.
ಕಾಂಗ್ರೇಸ್ ನವರು ಸುಮಾರು 60 ವರ್ಷಗಳಿಂದ ಇವತ್ತಿಗೂ ಇಂದಿರಾ ಗಾಂಧಿಯ ಹೆಸರನ್ನು ಹೇಳುತ್ತಾ ಅವರ ಮತ್ತು ರಾಜೀವ ಗಾಂಧಿಯವರ ಅಂತ್ಯಸಂಸ್ಕಾರದ ವೀಡಿಯೊ ತುಣುಕುಗಳನ್ನು ತೋರಿಸಿ  ಮತ ಕೇಳಬಹುದಾದರೇ ಬಿಜೆಪಿ ಕಾರ್ಯಕರ್ತರು ಈ ದೇಶಕ್ಕೆ ಗೌರವ  ತಂದ, 5 ವರ್ಷಗಳ ಅದ್ಭುತ ಸಾಧನೆ ಮಾಡಿದ, ಜಗತ್ತಿಗೆ ಬಲಿಷ್ಠ ಭಾರತವನ್ನು ಪರಿಚಯಿಸಿದ ಅದ್ಭುತ ಆಡಳಿತಗಾರ, ನವಭಾರತ, ಕನಸುಗಾರರ ಹೆಮ್ಮೆಯ ಪ್ರಧಾನಿಯ ಹೆಸರನ್ನು ನಾವೇಕೆ ಬಳಸಬಾರದು? ಮೈತ್ರಿ ಪಕ್ಷದವರಿಗೆ  ಇದನ್ನು ಪ್ರಶ್ನಿಸಲು  ನೈತಿಕತೆ ಇದೆಯೇ ? 
ಈ ಬಾರಿ ಚುನವಣೆಯಲ್ಲಿ  ಕನಿಷ್ಠ ಚಿಹ್ನೆ ಯನ್ನು ಉಳಿಸಿಕೊಳ್ಳಲು  ಸಾದ್ಯವಾಗದ ಕಾಂಗ್ರೇಸಿಗರು  ಹತಾಷರಾಗಿ ಪಕ್ಷ ಬಿಟ್ಟ  ಪ್ರಮೋದ್ ರವರಿಂದ  ದೆವ್ವದ ಬಾಯಿಯಿಂದ ಸಂಸ್ಕøತ ಎಂಬಂತೆ ಹತಾಶರಾಗಿ ಹೇಳಿಕೆ ನೀಡುತ್ತಿರುವುದು ಹಾಸ್ಯಸ್ಪದವಾಗಿದೆ. ಪ್ರಮೋದ್ ಮಂತ್ರಿಯಾಗಿ, ಉಸ್ತುವಾರಿ ಸಚಿವರಾಗಿ ಉಡುಪಿಯಲ್ಲಿ ತಿರಸ್ಕರಿಸಲ್ಪಟ್ಟು,  ಉಡುಪಿ ವಿಧಾನ ಸಭಾ  ಕ್ಷೇತ್ರದಲ್ಲಿ  ತನ್ನ ಅಸ್ಥಿತ್ವವನ್ನು  ಕಳೆದುಕೊಂಡ ಒಬ್ಬ  ದುರ್ಬಲ  ಅಭ್ಯರ್ಥಿಯಾಗಿದ್ದು  ತನ್ನ ವಿಧಾನ ಸಭಾ ಕ್ಷೆತ್ರದಲ್ಲಿ  ಒಂದೇ ಒಂದು ಸ್ಥÀ್ತಳೀಯ ಸಂಸ್ಥೆಯ  ಚುನಾವಣೆಯಲ್ಲಿ  ಗೆಲ್ಲಲು ಆಗದೆ, ರಾಜಕೀಯದಲ್ಲಿ ಸಂಪೂರ್ಣ ಹತಾಷಗೊಂಡು, ನಿರಂತರವಾಗಿ ಬೇರೆ ಪಕ್ಷಗಳ  ಬಾಗಿಲು ಬಡಿಯುತ್ತಿರುವ ದುರ್ಬಲ ವ್ಯಕ್ತಿಯ  ಹೇಳಿಕೆಗಳಿಗೆ ಉತ್ತರಿಸುವ ಅಗತ್ಯ ಬಿಜೆಪಿಗರಿಗಿಲ್ಲ ಎಂದು  ತಿಳಿಸಿದ್ದಾರೆ.
ದೇಶದ ಪ್ರಧಾನಿ ನರೇಂದ್ರ ಮೋದೀಜಿ ಆಯುಷ್ಮಾನ್ ಭಾರತ ಯೋಜನೆ ಮೂಲಕ ಒಂದು ಕುಟುಂಬಕ್ಕೆ  5 ಲಕ್ಷವರೆಗಿನ  ವೈಧ್ಯಕೀಯ  ವೆಚ್ಚ  ಭರಿಸುವ ಅದ್ಭುತ ಯೊಜನೆಯಾಗಿದ್ದು, ಕೋಟ್ಯಾಂತರ ಜನರಿಗೆ  ಇದರ ಫಲಾನುಭವಿಗಳಾಗಿದ್ದಾರೆ. ಜನರಿಗೆ ಔಷಧಿ ಮಳಿಗೆಯನ್ನು  ತೆರೆಯುವುದÀರೊಂದಿಗೆ, ಅಗ್ಗದ ದರದಲ್ಲಿ ಔಷಧಿ  ನೀಡಿ ಬಡಜನರ ಪಾಲಿಗೆ  ಭಾಗ್ಯ ದೇವತೆಯಾಗಿದ್ದಾರೆ. ಉಜ್ವಲ  ಯೋಜನೆ ಜಾರಿಗೆ ತರುವ ಮೂಲಕ ಕೋಟ್ಯಾಂತರ ಮಹಿಳೆಯರ ಕಣ ್ಣೀರು ಒರೆಸುವ ಕೆಲಸ ಮಡಿದ್ದು, 18,000 ಹಳ್ಳಿಗಳಿಗೆ ದೀನದಯಾಳು  ಗ್ರಾಮೀಣ ವಿದ್ಯುಧೀಕರಣದ ಮೂಲಕ ಬಡವರ  ಮನೆಯನ್ನು ಬೆಳಗಿಸಿದ್ದು,  ಸ್ವಚ್ಛ ಭಾರತ ಯೋಜನೆಯ ಮೂಲಕ ಸ್ವಚ್ಛ ಭಾರತದ  ನಿರ್ಮಾತೃ , ಲಕ್ಷ-ಲಕ್ಷಾಂತರ ಉದ್ಯೋಗ  ಸೃಷ್ಟಿಸಿ ಯುವಕರ ಬಾಳಿಗೆ  ಭದ್ರತೆಯನ್ನು ನೀಡಿದ್ದು, ವಿವಿಧ ವಿಮಾ  ಯೊಜನೆ ಮೂಲಕ ಅಶಕ್ತರ ಬಾಳಿಗೆ ಶಕ್ತಿ ತುಂಬಿದ,  ಶತ್ರು ರಾಷ್ಟ್ರಗಳಿಂದ, ಉಗ್ರಗಾಮಿಗಳಿಂದ, ದೇಶವನ್ನು ಮುಕ್ತಗೊಳಿಸಿದ, ಈ ದೇಶದ ಪ್ರಧಾನಿಯನ್ನು ಜನ ಮರೆಯುವರೇ? ಸಂಕಲ್ಪಿತ ಭಾರತ, ಸಶಕ್ತ ಭಾರತಕ್ಕಾಗಿ ಮೋದಿಯವರೊಂದಿಗೆ ಕೈ ಜೋಡಿಸಿ  ಎಂದು ಶೋಭಾ ಕರಂದ್ಲಾಜೆ ವಿನಂತಿಸಿದರು.
ಸಭೆಯಲ್ಲಿ ಕುಯಿಲಾಡಿ ಸುರೇಶ್ ನಾಯಕ್, ಗುರ್ಮೆ ಸುರೇಶ್ ಶೆಟ್ಟಿ, ಶಾಸಕ ಲಾಲಾಜಿ. ಆರ್. ಮೆಂಡನ್, ಕುತ್ಯಾರು ನವೀನ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉಮೇಶ್ ಶೆಟ್ಟಿ, ಹರೀಶ್, ಪ್ರವೀಣ್ ಪೂಜಾರಿ, ಸಂಧ್ಯಾ ಕಾಮತ್, ಜಿಯಾನಂದ ಹೆಗ್ಡೆ, ಸುರೇಶ್ ಶೆರ್ವೆಗಾರ್, ಸತ್ಯಾನಂದ ನಾಯಕ್,  ಅಶೋಕ್ ಜೋಗಿ,  ಸವಿತಾ ನಾಯಕ್. ಮೊದಲಾದವರು ಉಪಸ್ಥಿತರಿದ್ದರು.

                                 
                                                               ದಿನಾಂಕ: 11-04-2019
ಮತದಾನದ ಮಹತ್ವ ಸಾರಿದ ಯಕ್ಷಗಾನ
     ಉಡುಪಿ, ಎಪ್ರಿಲ್ 11 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಮಹತ್ವವನ್ನು ಸಾರುವ ಯಕ್ಷಗಾನ ಹಾಗೂ ಚಿತ್ರಕಲಾ ಪ್ರದರ್ಶನ ಗುರುವಾರ ಉಡುಪಿ ನಿರ್ಮಿತಿ ಕೇಂದ್ರದ ಆವರಣದಲ್ಲಿ ನಡೆಯಿತು.
     ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪದ್ಧತಿಯಿಂದ ಪ್ರಜಾಡಳಿತ ಜಾರಿಗೆ ಬಂದು, ಜನಪ್ರತಿನಿಧಿಗಳ ಪಾತ್ರ ಹಾಗೂ ಅವರ ಆಯ್ಕೆಯಲ್ಲಿ ಮತದಾರರು ವಹಿಸಬೇಕಾದ ಜಾಗರೂಕತೆ, ಹಣ ಆಮಿಷಕ್ಕೊಳಗಾಗಿ ಮತದಾನ ಮಾಡುವುದರ ಕೆಡುಕುಗಳು, ಚುನಾವಣೆ ಪ್ರಕ್ರಿಯೆಯಲ್ಲಿ ಜನಸಮಾನ್ಯರ ಪಾತ್ರ ಮತ್ತಿತರ ವಿಷಯಗಳ ಬಗ್ಗೆ ಕೋಟ ಕಲಾಪೀಠ ತಂಡದವರು ಯಕ್ಷಗಾನದ ಮೂಲಕ ಬಹಳ ಮನಮೋಹಕವಾಗಿ ನಡೆಸಿದರು. ನಿರ್ಮಿತಿ ಕೇಂದ್ರದ ಬಯಲು ವೇದಿಕೆಯಲ್ಲಿ ನಡೆದ ಈ ಯಕ್ಷಗಾನ ಕಾರ್ಯಕ್ರಮ ನೋಡುಗರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
   ಇದೇ ಸಂದರ್ಭದಲ್ಲಿ ಮತದಾನದ ಮಹತ್ವ ಸಾರುವ ಚಿತ್ರಕಲೆಗಳ ಪ್ರದರ್ಶನವೂ ನಡೆಯಿತು.  
    ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಚುನಾವಣಾ ವೆಚ್ಚ ನೋಡಲ್ ಅಧಿಕಾರಿ ಸಚಿನ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
    ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ನಿರೂಪಿಸಿದರು.

ತೆಂಕನಿಡಿಯೂರು: ಯುವ ಜನತೆ ಮತ್ತು ಸಮೂಹ ಮಾಧ್ಯಮ-ಉಪನ್ಯಾಸ

  ಉಡುಪಿ, ಎಪ್ರಿಲ್ 11 (ಕರ್ನಾಟಕ ವಾರ್ತೆ): ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಕಲಾ ಸಂಘ ಹಾಗೂ ಐಕ್ಯೂಎಸಿ ಘಟಕದ ವತಿಯಿಂದ ಬುಧವಾರ “ಯುವ ಜನತೆ ಮತ್ತು ಸಮೂಹ ಮಾಧ್ಯಮ” ಎನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
 ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಮಂಜಪ್ಪ ಡಿ. ಗೋಣಿ ಮಾತನಾಡಿ, ಸಮೂಹ ಮಾಧ್ಯಮ ಅದರಲ್ಲೂ ವಿಶೇಷವಾಗಿ ಸೋಶಿಯಲ್ ಮೀಡಿಯಾಗಳು ಇತ್ತೀಚಿನ ದಿನಗಳಲ್ಲಿ ಯುವ ಜನರ ಅತ್ಯಂತ ಪ್ರಾಮುಖ್ಯ ಮತ್ತು ಆಕರ್ಷಿತ ವಿಷಯವಾಗಿದೆ.  ಸೋಶಿಯಲ್ ಮೀಡಿಯಾಗಳಿಂದ ಹಲವಾರು ಪ್ರಯೋಜನವಿದೆ ಆದರೂ ಅದರ ಅವಲಂಬನೆ ಯುವ ಜನರಲ್ಲಿ ಜಾಸ್ತಿಯಾದಲ್ಲಿ ಅಪಾಯವು ಕೂಡಾ ಇದೆ ಎನ್ನುತ್ತಾ, ಯುವಕರು ಸೋಶಿಯಲ್ ಮೀಡಿಯಾಗಳನ್ನು ಹದವರಿತು ಉಪಯೋಗಿಸಿ ಒಳ್ಳೆಯದನ್ನು ಸಾಧಿಸಲು ಉಪಯೋಗಿಸಬೇಕೆಂದರು. 
ಪ್ರಾಂಶುಪಾಲ ಪೆÇ್ರ. ಬಾಲಕೃಷ್ಣ ಎಸ್. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.  ಐಕ್ಯೂಎಸಿ ಸಂಚಾಲಕ ಡಾ. ಸುರೇಶ ರೈ ಕೆ. ಉಪಸ್ಥಿತರಿದ್ದರು.  ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್ ಕಾರ್ಯಕ್ರಮ ಸಂಘಟಿಸಿ ನಿರ್ವಹಿಸಿದರು.

ಬಿಜೆಪಿಯ ಧ್ವಂದ ನಿಲುವಿಗೆ ಜನತೆ ಉತ್ತರಿಸಲಿ - ಎಂ. ಎ. ಗಫೂರ್

ಭಾರತದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಶಾಂತಿ ಮಾತುಕತೆ ನಡೆಸುವ ಅವಕಾಶಗಳು ಹೆಚ್ಚು ಎಂಬ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್‍ರ ಹೇಳಿಕೆ ಪಾಕಿಸ್ತಾನ ಮೋದಿ ಜೊತೆ ಮೈತ್ರಿಯಲ್ಲಿದೆ ಎಂಬುವುದನ್ನು ಅಧಿಕೃತವಾಗಿ ದೃಡಪಡಿಸಿದೆ. 2014ರ ಚುನಾವಣೆಯ ಸಮಯ ಒಬ್ಬ ಸೈನಿಕನ ತಲೆಗೆ ಬದಲಾಗಿ ಪಾಕಿಸ್ತಾನ ಹತ್ತು ತಲೆ ತರಬೇಕು ಎನ್ನುತ್ತಲೇ ಅಧಿಕಾರಕ್ಕೆ ಬಂದ ಮೋದಿಯವರು ಯಾವುದೇ ಅಧಿಕೃತ ವೇಳಾಪಟ್ಟಿ ಇಲ್ಲದೆ ನವಾಜ್ ಶರೀಪರ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗಿಯಾದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಕಾಶ್ಮೀರ ಸಮಸ್ಯೆ ಇತ್ಯರ್ಥದ ಸಾಧ್ಯತೆ ತೀರಾ ಕಡಿಮೆ ಎಂಬ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‍ರ ಹೇಳಿಕೆಯು ಬಿಜೆಪಿಯ ನಡೆಯನ್ನೇ ಪ್ರಶ್ನಿಸುವಂತಿದೆ. ಒಂದು ಕಡೆಯಲ್ಲಿ ಪಾಕಿಸ್ತಾನದ ವಿರುದ್ಧ ಹೀರೋ ಎನಿಸಿಕೊಳ್ಳುವ ಪ್ರಧಾನ ಮಂತ್ರಿಗಳು ಮತ್ತೊಂದೆಡೆ ಪಾಕಿಸ್ತಾನದ ಪ್ರಧಾನಿಗಳ ಜೊತೆ ಯಾವ ಸಂಭಂದವಿದೆ ಇವರ ವಿದೇಶಾಂಗ ನೀತಿ ಎಂತಹದು ಎಂಬುದನ್ನು ಜನತೆಗೆ ವಿವರಿಸಬೇಕಾಗಿದೆ. ದೇಶದ ಭದ್ರತೆಯ ವಿಷಯಗಳು ಬಂದಾಗ ರಾಜಕೀಯ ಮರೆತು ಕಾಂಗ್ರೆಸ್ ಪಕ್ಷ ಎಂದೂ ರಾಜಿ ಮಾಡಿಕೊಳ್ಳದೆ ದೇಶದ ಪ್ರಧಾನ ಮಂತ್ರಿಗಳಿಗೆ ಬೆಂಬಲ ನೀಡಿಕೊಂಡು ಬಂದಿರುವುದು ಇತಿಹಾಸ.

ರಫೇಲ್ ಪ್ರಕರಣದ ತನಿಖೆಯ ಸಂದರ್ಭ ಸುಪ್ರೀಂ ಕೋರ್ಟಿಗೆ ಕೇಂದ್ರ ರಕ್ಷಣಾ ಸಚಿವಾಲಯವು ರಫೇಲ್ ದಾಖಲೆಗಳು ಕಳುವಾಗಿದೆ ಎಂದು ಮಾಹಿತಿ ನೀಡಿ ಪ್ರಕರಣವನ್ನು ಹಳ್ಳಹಿಡಿಯುವಂತೆ ಪ್ರಯತ್ನಿಸಿದರೂ ಸುಪ್ರೀಂ ಕೋರ್ಟ್ ಮರುಪರಿಶೀಲನಾ ಅರ್ಜಿಯನ್ನು ಸ್ವೀಕರಿಸಿ ತನಿಖೆಗೆ ಸಮ್ಮತಿಸಿದೆ. ‘ದ ಹಿಂದೂ’ ಪತ್ರಿಕೆ ಪ್ರಕಟಿಸಿದ ದಾಖಲೆಗಳನ್ನು ದೇಶದ ಭದ್ರತೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮವಾದ ಮತ್ತು ಪ್ರಮುಖವಾದ ದಾಖಲೆಗಳೆಂದು ಈ ದಾಖಲೆಗಳನ್ನು ಸಾಕ್ಷಿ ಎಂದು ಪರಿಗಣಿಸಬಾರದು ಎಂದು ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‍ನಲ್ಲಿ ವಾದ ಮಂಡಿಸಿದರೂ ಸುಪ್ರೀಂ ಕೋರ್ಟ್ ಈ ದಾಖಲೆಗಳನ್ನು ಸಾಕ್ಷಿಯಾಗಿ ಪರಿಗಣಿಸಿ ತನಿಖೆಗೆ ಸಮ್ಮತಿ ನೀಡಿದೆ. ಸುಪ್ರೀಂ ಕೋರ್ಟಿನ ಈ ನಡೆಯಿಂದ ರಾಫೆಲ್ ಒಪ್ಪಂದ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪುಷ್ಠಿ ನೀಡುತ್ತದೆ ಎಂದು ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಶ್ರೀ ಎಂ.ಎ. ಗಫೂರ್ ಹೇಳಿದ್ದಾರೆ ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡುತ್ತಿದ್ದರು.

ಸಬೆಯಲ್ಲಿ ಮಾಜಿ ಶಾಸಕರಾದ ಶ್ರೀ ಯು.ಆರ್.ಸಭಾಪತಿ, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಶ್ರೀ ಮುರಳಿ ಶೆಟ್ಟಿ, ಜೆ.ಡ.ಎಸ್. ಜಿಲ್ಲಾಧ್ಯಕ್ಷರಾದ ಶ್ರೀ ಯೋಗಿಶ್ ಶೆಟ್ಟಿ, ಜೆ.ಡಿ.ಎಸ್. ನಾಯಕರಾದ ಶ್ರೀ ದಿಲ್ಲೇಶ್ ಶೆಟ್ಟಿ, ಶ್ರೀ ಸುಧಾಕರ ಶೆಟ್ಟಿ, ಶ್ರೀಮತಿ ಜ್ಯೋತಿ ಕೋಟ್ಯಾನ್, ಕಾಂಗ್ರೆಸ್ ಮುಖಂಡರಾದ ಶ್ರೀ ಬಿ. ನರಸಿಂಹ ಮೂರ್ತಿ, ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀ ದಿನೇಶ್ ಪುತ್ರನ್, ಮೀನುಗಾರ ನಾಯಕರಾದ ಶ್ರಿ ಕೇಶವ ಎಂ. ಕೋಟ್ಯಾನ್, ಶ್ರೀ ಹಬೀಬ್ ಅಲಿ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶ್ರೀ ವಿಶ್ವಾಸ್ ಅಮೀನ್, ಶ್ರೀ ಹರೀಶ್ ಕಿಣಿ, ಶ್ರೀ ದಿವಾಕರ ಕುಂದರ್, ಬ್ಲಾಕ್ ಅಧ್ಯಕ್ಷರಾದ ಶ್ರೀ ಸತೀಶ್ ಅಮೀನ್ ಪಡುಕೆರೆ, ಶ್ರೀ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಶ್ರೀ ಜನಾರ್ದನ ಭಂಡಾರ್ಕಾರ್, ಶ್ರಿ ಪ್ರಶಾಂತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Nirmala Thonse organizes Awareness Campaign agains
View More

Veez Konkani Illustrated Weekly e-Magazine # 77Veez Konkani Illustrated Weekly e-Magazine # 77
Congratulations to Rons BantwalCongratulations to Rons Bantwal
Charitable Foundation welcomes likeminded personnel for permanent directors post in MangaloreCharitable Foundation welcomes likeminded personnel for permanent directors post in Mangalore
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Milarchi Lara - Easter Issue of Mlagres Parish Bulletin.Milarchi Lara - Easter Issue of Mlagres Parish Bulletin.
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India