Billawa Guru Murthy Pratistapana celebrates 25th Anniversary


Rons Bantwal
Kemmannu News Network, 22-04-2019 11:09:17


Write Comment     |     E-Mail To a Friend     |     Facebook     |     Twitter     |     Print


ರಜತ ಮಹೋತ್ಸವದತ್ತ ಬಿಲ್ಲವ ಭವನ ಗುರುಮೂರ್ತಿ ಪ್ರತಿಷ್ಠಾಪನ ದಿನಾಚರಣೆ

ಮುಂಬಯಿ, ಎ.14: ಲೋನಾವಲ ಮುನ್ಸಿಪಾಲ್ ಕೌನ್ಸಿಲ್‍ನ ನಗರ ಉಪಾಧ್ಯಕ್ಷ, ಲೋನಾವಾಲ ಬಿಜೆಪಿ ಅಧ್ಯಕ್ಷ ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಲೋನಾವಲ ಸ್ಥಳೀಯ ಕಚೇರಿಯ ಗೌರವಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್ ಎಸ್.ಪೂಜಾರಿ ಇವರನ್ನು ಗಣ್ಯರು ಸನ್ಮಾನಿಸಿ ಅಭಿನಂದಿಸಿದರು.
ಮುಂಬಯಿ ಮಹಾ ನಗರದಲ್ಲಿ ಜನ್ಮ ತಳೆದ ಹಲವಾರು ಸಾಮಾಜಿಕ ಸಂಸ್ಥೆಗಳಲ್ಲಿ ತುಳು ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ಬಿಲ್ಲವರ ಎಸೋಸಿಯೇಶನ್, ಮುಂಬಯಿ ಕೂಡ ಒಂದು ನಿಸ್ವಾರ್ಥ ಭಾವದ ಹಿರಿಯರ ದೂರದೃಷ್ಠಿಯ ಫಲವೇ ಇಂದು 87 ಸಂವತ್ಸರಗಳನ್ನು ಪೂರೈಸಿ ಲಕ್ಷಾಂತರ ಜನರಿಗೆ ದಾರಿದೀಪವಾದ ಮೇರು ಸಂಸ್ಥೆ ಬಿಲ್ಲವರ ಎಸೋಸಿಯೇಶನ್. ಈ ಸಂಸ್ಥೆ ತ್ಯಾಗದ ಪ್ರತೀಕ. ಚತುರ್ ಸಂಸ್ಥೆಗಳು ಒಂದಾಗಿ 24.01.1932 ರಂದು ಸ್ಥಾಪಕಾಧ್ಯಕ್ಷರಾದ ದಿ| ಎಂ. ಅಪ್ಪಣ್ಣರ ಅಧ್ಯಕ್ಷತೆಯಲ್ಲಿ ಜನ್ಮ ತಳೆಯಿತು. ಕೋಟೆ ಪರಿಸರದಲ್ಲಿ ಸಮಾಜಬಾಂಧವರನ್ನು ಒಗ್ಗೂಡಿಸಲು ಸಂಘಟನೆಯ ಶಂಖ ಅಂದು ಮೊಳಗಿತು.

ಸಮಯ ಸಮಯಕ್ಕೆ ಈ ಸಂಸ್ಥೆಯ ಪ್ರಗತಿಯಲ್ಲಿ ಹೆಗಲು ಕೊಟ್ಟು ಅದರ ಯಜಮಾನತ್ವವನ್ನು ಪಡೆದವರು ಹಲವರು. ತಮ್ಮ ಅಧ್ಯಕ್ಷತೆಯಲ್ಲಿ ಎಸೋಸಿಯೇಶನ್ ನ ಸರ್ವಾಂಗೀಣ ಪ್ರಗತಿಗೆ ಅಂದಿನ ಕಾರ್ಯಕಾರಿ ಸಮಿತಿ ಶ್ರಮಿಸಿ ಭದ್ರ ಬುನಾದಿಯನ್ನು ನೀಡಿದೆ. ಇಂದು ಸಂಘಟನೆಯ ಚಿಗುರು ಬಾನೆತ್ತರಕ್ಕೆ ಏರಿದೆ, ಬೇರು ಪಾತಾಳಕ್ಕೆ ಸೇರಿದೆ.

ಪ್ರಥಮ ಸ್ಥಳೀಯ ಕಚೇರಿ  1969ರಲ್ಲಿ ಚೆಂಬೂರಿನಲ್ಲಿ ಪಾದಪರ್ಣೆಗೊಂಡು ಉಪನಗರಿಗೆ ತನ್ನ ಲಗ್ಗೆ ಇಟ್ಟಿತು. ಆರ್ಥಿಕವಾಗಿ ಬಲಗೊಳ್ಳಲು 1978 ಆಗಸ್ಟ್ ತಿಂಗಳ 21 ರಂದು ಅಂದಿನ ಅಧ್ಯಕ್ಷರಾದ ವರದ ಉಳ್ಳಾಲರ ಕಾರ್ಯಾಧ್ಯಕ್ಷತೆಯಲ್ಲಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಎಸೋಸಿಯೇಶನ್ ಉದರದಿ ಜನಿಸಿತು.1988 ರಲ್ಲಿ ಎಸೋಸಿಯೇಶನಿನ ಮುಖವಾಣಿ ಅಕ್ಷಯ ಮಾಸಿಕ ಸಾರಸ್ವತ ಲೋಕಕ್ಕೆ ಪಾದಾರ್ಪಣೆ ಗೈದರೆ ಇಂದು ಅಕ್ಷಯ ಜ್ಞಾನ ಗಂಗೆಯಾಗಿ ಓದುಗರ ಮನದಲ್ಲಿ ಹರಿಯುತ್ತಿದೆ.

1991ರ ಇಸವಿ ಎಸೋಸಿಯೇಶನ್‍ಗೆ ಪರಿವರ್ತನಾ ಯುಗ ಸಮರ್ಥ ಸಂಘಟಕ ಶತಮಾನದ ಶ್ರೇಷ್ಠ ಸಮಾಜ ಸೇವಕ ಸನ್ಮಾನ್ಯ ಜಯ ಸಿ. ಸುವರ್ಣರು ಎಸೋಸಿಯೇಶನ್‍ನ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರ ಅಧ್ಯಕ್ಷತೆಯಲ್ಲಿ ಹಲವಾರು ಯೋಜನೆಗಳು ರೂಪುಗೊಂಡವು. ಹಿರಿಯರ ಕನಸು ನನಸಾಗಿಸಲು ಪಣತೊಟ್ಟರು. ನಾರಾಯಣ ಗುರುಗಳ ತತ್ವ ಸಂದೇಶ ದಡಿಯಲ್ಲಿ ಎಸೋಸಿಯೇಶನ್ ಕಾರ್ಯವೆಸಗಲು ಒಂದು ಸ್ವಂತ ನೆಲೆಯಾಗಬೇಕೆಂದು ಕನಸು ಕಂಡರು. ಫಲವಾಗಿ ಬಿಲ್ಲವರ ರಾಜಕೀಯ ಶಕ್ತಿ ಸನ್ಮಾನ್ಯ ಬಿ. ಜನಾರ್ಧನ ಪೂಜಾರಿಯವರ ಸಹಕಾರದಿಂದ ಸಾಂತಾಕ್ರೂಜ್ ಪೂರ್ವದಲ್ಲಿ ನಾರಾಯಣ ಗುರುಗಳ ಅನುಗ್ರಹದಿಂದ ಸ್ವಂತ ಜಾಗ ಲಭಿಸಿತು. ಹಿರಿಯರ ಕನಸು ನನಸಾಗಿಸುವ ನಿಟ್ಟಿನಲ್ಲಿ 1992 ಡಿಸಂಬರ್ ತಿಂಗಳ 6ರಂದು ಶಿವಗಿರಿ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ಶಾಶ್ವತಿಕಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಮುಖ್ಯ ಅತಿಥಿ ಶ್ರೀ ಎಸ್. ಬಂಗಾರಪ್ಪರವರ ಉಪಸ್ಥಿತಿಯಲ್ಲಿ, ಶ್ರೀ ಬಿ. ಜನಾರ್ಧನ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಹಾಗೂ ಹಲವಾರು ರಾಜಕೀಯ ಮತ್ತು ಸಾಮಾಜಿಕ ಧುರೀಣರ ಸಮ್ಮುಖದಲ್ಲಿ ಶಿಲಾನ್ಯಾಸ ಗೈಯಲಾಯಿತು. ಪ್ರತಿಯೊಬ್ಬ ಬಿಲ್ಲವನ ಒಂದು ಇಟ್ಟಿಗೆಯಾದರೂ ಬಿಲ್ಲವ ಭವನದ ಕಟ್ಟಡಕ್ಕೆ ಸಲ್ಲಬೇಕೆಂದು ಜಯ ಸಿ. ಸುವರ್ಣರು ಸಾರಿದರು.

ಈ ತನ್ಮಧ್ಯೆ ಸಂಘಟನೆಗೆ ಪೂರಕವಾಗಿ ಅಲ್ಲಲ್ಲಿ ಸ್ನೇಹ ಸಮ್ಮಿಲನ ಜರಗಿಸಿ ಸಮಾಜಭಾಂದವರನ್ನು ಒಗ್ಗೂಡಿಸುವ ಕಾರ್ಯ ಸಫಲತೆಗೊಂಡಿತು. ಜನಗಣತಿಯ ಮುಖೇನ ಅಲ್ಲಲ್ಲಿ ಸ್ಥಳೀಯ ಸಮಿತಿಗಳ ರಚನೆಗೊಂಡಿತು. ಅದರ ಫಲವಾಗಿ ಇಂದು 22 ಸ್ಥಳೀಯ ಕಚೇರಿಗಳು ( 20 ಸ್ವಂತ ಜಾಗದೊಂದಿಗೆ) ಕಾರ್ಯವೆಸಗುತ್ತಿದ್ದು, ಜನಮನದ ಸೇವೆಯಲ್ಲಿ ತೊಡಗಿಕೊಂಡಿದೆ.

1995ರ ಎಪ್ರಿಲ್ ತಿಂಗಳ 16ನೇ ತಾರೀಕು ಆದಿತ್ಯವಾರ ಮುಂಬಯಿ ಬಿಲ್ಲವರಿಗೆ ಪರ್ವದಿನ. ಶೋಷಿತ ವರ್ಗಕ್ಕೆ ಕಾಮಧೇನುವಾಗಿ ಶತಮಾನಗಳ ಹಿಂದೆ ಬಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಶಿಲಾಮೂರ್ತಿಯನ್ನು ಬಿಲ್ಲವ ಭವನದಲ್ಲಿ ಪುರೋಹಿತ ಜನಾರ್ಧನ ಶಾಂತಿ ಕಾರ್ಕಳರವರ ಪೌರೋಹಿತ್ಯದಲ್ಲಿ  ಪ್ರತಿಷ್ಠಾಪಿಸುವುದರೊಂದಿಗೆ ಪ್ರಥಮ ಬಿಲ್ಲವ ಭವನವನ್ನು ಸನ್ಮಾನ್ಯ ಜಯ ಸಿ. ಸುವರ್ಣರ ನೇತೃತ್ವದಲ್ಲಿ ಅಂದಿನ ಕಾರ್ಯಕಾರಿ ಸಮಿತಿಯ ದಕ್ಷ ಕಾರ್ಯಕ್ಷಮತೆಯಲ್ಲಿ ಅಂಧೇರಿ ಕ್ರೀಡಾ ಸಂಕುಲದಲ್ಲಿ ಸೇರಿದ್ದ ಸಾವಿರಾರು ಸಮಾಜ ಬಾಂಧವರ ಸಮ್ಮುಖದಲ್ಲಿ ಮುಖ್ಯ ಅತಿಥಿ ಕೇಂದ್ರ ಸರ್ಕಾರದ ಸಮಾಜ ಕಲ್ಯಾಣ ಮಂತ್ರಿ ಶ್ರೀ ಸೀತಾರಾಮ ಕೇಸರಿಯವರ ಉಪಸ್ಥಿತಿಯಲ್ಲಿ ಗೌರವ ಅತಿಥಿಗಳಾದ ಶಿವಾಜಿರಾವ್ ದೇಶ್‍ಮುಖ್, ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್‍ರಾವ್ ದೇಶ್‍ಮುಖ್, ಪೆÇ್ರ. ಜಾವೇದ್ ಖಾನ್, ಶ್ರೀ ಸುಭಾಶ್ ಸಾವಂತ್ ಹಾಗೂ ಇನ್ನಿತರ ಗಣ್ಯರ ಉಪಸ್ಥಿತಿಯಲ್ಲಿ ಪರಮಪೂಜ್ಯ ಶ್ರೀ ಶ್ರೀ ಶಾಶ್ವತಿಕಾನಂದ ಸ್ವಾಮೀಜಿ ಹಾಗೂ ಶ್ರೀ ಶ್ರೀ ಸುವರ್ಣ ಬಾಬಾರವರ ಆಶೀರ್ವಾದದೊಂದಿಗೆ ಸನ್ಮಾನ್ಯ ಶ್ರೀ ಬಿ. ಜನಾರ್ಧನ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಲೋಕಾರ್ಪಣೆ ಗೈಯಲಾಯಿತು. ಅಂದಿನ 40,000 ಕ್ಕೂ ಮಿಕ್ಕಿದ ಜನಸಂದಣಿಯನ್ನು ನೋಡಿ ಬಿಲ್ಲವರ ಸಂಘಟನೆಗೆ ಬೆರಗಾದ ಸನ್ಮಾನ್ಯ ಸೀತಾರಾಮ್ ಕೇಸರಿಯವರು ಬಿಲ್ಲವರ ಸಮಾಜಕ್ಕೆ ಒ.ಬಿ. ಸಿ. ಸವಲತ್ತು ನೀಡಿರುವುದು ಈಗ ಇತಿಹಾಸ.

ಸಂಘಟನೆಯ ಕೇಂದ್ರ ಬಿಂದು ಬಿಲ್ಲವ ಭವನವು ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ ಕೇಂದ್ರವಾಗಿ ಮಾರ್ಪಟ್ಟಿತು. ಪ್ರತೀ ಗುರುವಾರ ಪೂಜೆ ಭಜನೆ ಜರಗಿದರೆ ಇನ್ನಿತರ ದಿನಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಎಡೆ ಬಿಡದೆ ಜರಗುತ್ತಿದೆ. ಅಲ್ಲಲ್ಲಿ ಸ್ಥಳೀಯ ಕಚೇರಿಗಳು ತಮ್ಮ ನಿರಂತರ ಕಾರ್ಯಕ್ರಮಗಳಿಂದ ಜನರ ಮನೆ ಮನೆಗೆ ಎಸೋಸಿಯೇಶನ್‍ನ ಸವಲತ್ತುಗಳನ್ನು ಮುಟ್ಟಿಸುವಲ್ಲಿ ಯಶಸ್ವಿಯಾದವು. ಪರಿಣಾಮವಾಗಿ ಬಿಲ್ಲವ ಭವನದ ಸ್ಥಳಾವಕಾಶ ಕಡಿಮೆಯಾಗುತ್ತಿದೆ ಎಂದು ಜಯ ಸಿ. ಸುವರ್ಣರಿಗೆ ಮನದಟ್ಟಾಯಿತು.

ಪೂರಕವಾಗಿ ಪ್ರಸ್ತುತ ಬಿಲ್ಲವ ಭವನ ಹವಾನಿಯಂತ್ರಿತ ಸಭಾಂಗಣದ ಕನಸು ಕಂಡರು. ದಕ್ಷ ಕಾರ್ಯಕಾರಿ ಸಮಿತಿಯೊಂದಿಗೆ ಚರ್ಚಿಸಿ ಕಾರ್ಯಪ್ರವೃತರಾದರು. ದಾನಿಗಳ ಪೆÇ್ರೀತ್ಸಾಹ ಹರಿದು ಬಂತು. ವಿಸ್ತೃತ ಬಿಲ್ಲವ ಭವನಕ್ಕೆ 2002ರ ಜೂನ್ ತಿಂಗಳ 19 ರಂದು ಆದಿತ್ಯವಾರ ಶ್ರೀ ಶ್ರೀ ಶ್ರೀ ನಿರಂಜನಾ ಸ್ವಾಮೀಜಿಯವರ ಹಸ್ತದಲ್ಲಿ ಶಿಲಾನ್ಯಾಸ ಗೈಯಲಾಯಿತು. 1995ರ ಎಪ್ರಿಲ್ ತಿಂಗಳ 16ನೇ ತಾರೀಕು ಆದಿತ್ಯವಾರ ಪ್ರಥಮ ಬಿಲ್ಲವ ಭವನ ಉದ್ಘಾಟನೆ ಬಳಿಕ 11 ವರ್ಷಗಳ ಅಂತರದಲ್ಲಿ 2006ರ ಎಪ್ರಿಲ್ ತಿಂಗಳ 16ನೇ ತಾರೀಕು ಆದಿತ್ಯವಾರ ವಿಸ್ತೃತ ಬಿಲ್ಲವ ಭವನವು ಲೋಕಾರ್ಪಣೆಗೊಂಡಿತು. ಅಂದಿನ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ರಘುನಾಥ ಗುರೂಜಿ ಆಶೀರ್ವದಿಸಿದರೆ ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್‍ರಾವ್ ದೇಶ್‍ಮುಖ್ ಬಿಲ್ಲವ ಭವನವನ್ನು ಉದ್ಘಾಟಿಸಿದರು. ಅಂದಿನ ಕಾರ್ಯಕ್ರಮದಲ್ಲಿ ರಾಜಕೀಯ ಧುರೀಣರಾದ ಬಿ. ಜನಾರ್ಧನ ಪೂಜಾರಿ, ಶ್ರೀ ವಿನಯ್ ಕುಮಾರ್ ಸೊರಕೆ, ಶ್ರೀ ಸುರೇಶ್ ಶೆಟ್ಟಿ, ಶ್ರೀ ಗೋಪಾಲ್ ಶೆಟ್ಟಿ, ಪೆÇ್ರ. ಜಾವೇದ್ ಖಾನ್, ಸಚಿವ ಸಚಿನ್ ಆಹಿರ್, ವಿನೋದ್ ತಾವ್ಡೆ, ಗುರುದಾಸ್ ಕಾಮತ್, ಕೃಪಾ ಶಂಕರ ಸಿಂಗ್, ಶ್ರೀಮತಿ ಪ್ರಿಯಾದತ್ತ್, ಶ್ರೀ ಜಗನ್ನಾಥ ಶೆಟ್ಟಿ, ಶ್ರೀ ಗಜಾನನ ಕೀರ್ತಿಕರ್, ಉಪಸ್ಥಿತರಿದ್ದರೆ, ಸಮಾಜದ ಧುರೀಣರಾದ ಜೆ. ಪಿ. ನಾರಾಯಣ ಸ್ವಾಮಿ ಹಾಗೂ ಎಲ್ಲಾ ಜಾತೀಯ ಸಮಾಜದ ಮುಖಂಡರು ವೇದಿಕೆಯಲ್ಲಿದ್ದು  ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.

ಎಸೋಸಿಯೇಶನ್‍ನ ಸುಪರ್ದಿಯಲ್ಲಿ ಹಲವಾರು ಉಪ ಸಮಿತಿಗಳು ಕಾರ್ಯವೆಸಗುತ್ತಿದೆ. ವಿದ್ಯಾ ಉಪಸಮಿತಿಯ ವತಿಯಿಂದ ಅಮೃತ ವಿದ್ಯಾನಿಧಿಯನ್ನು ಸ್ಥಾಪಿಸಿ ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುವುದಲ್ಲದೆ ಆರ್ಥಿಕ ನೆರವು, ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿದೆ. ಸಾಮಾನ್ಯ ಸಹಾಯಕ ಉಪಸಮಿತಿಯ ವತಿಯಿಂದ ಆರೋಗ್ಯ ನಿಧಿಯನ್ನು ಸ್ಥಾಪಿಸಿ ಅನಾರೋಗ್ಯ ಪೀಡಿತರಿಗೆ ಧನ್ವಂತರಿಯಾಗಿದೆ. ಯುವಾಭ್ಯುದಯ ಉಪ ಸಮಿತಿಯು ಕ್ರೀಡಾ ಕೂಟವನ್ನು ಆಯೋಜಿಸಿ ಯುವ ಜನಾಂಗಕ್ಕೆ ಕ್ರೀಡೆಗೆ ಉತ್ತೇಜನ ನೀಡುತ್ತಿದೆ. ಗುರು ನಾರಾಯಣ ರಾತ್ರಿ ಶಾಲೆ ಪ್ರತಿ ವರ್ಷ ನೂರು ಶೇಕಡ ಫಲಿತಾಂಶ ತಂದರೆ, ಉಡುಪಿಯ ಪಡುಬೆಳ್ಳೆಯಲ್ಲಿ ಶ್ರೀ ನಾರಾಯಣ ಗುರು ಪ್ರೌಢ ಶಾಲೆಯಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಸುಮಾರು 750 ವಿದ್ಯಾರ್ಥಿಗಳು ಜಾತಿಮತ ಭೇದವಿಲ್ಲದೆ ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಮಹಿಳಾ ವಿಭಾಗವು ವಿ-ಕೇರ್ ಯೋಜನೆಯ ಅಡಿಯಲ್ಲಿ ತನ್ನವರನ್ನು ಕಳೆದುಕೊಂಡ ಮಾತೆಯರಿಗೆ ಮಾಸಾಶನ ನೀಡಿ ಆಶ್ರಯ ನೀಡಿದೆ. ಸಾಂಸ್ಕøತಿಕ ಉಪಸಮಿತಿಯ ಮುಖೇನ ಗುರುನಾರಾಯಣ ಯಕ್ಷಗಾನ ಮಂಡಳಿಯು ಯಕ್ಷಲೋಕಕ್ಕೆ ಅಪಾರ ಸೇವೆಗೈದು ಅಪಾರ ಕಲಾಭಿಮಾನಿಗಳ ಮನ ತಣಿಸಿದೆ. ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿಯು ಆಧ್ಯಾತ್ಮಿಕ ಸಂಚಲನ ಮೂಡಿಸಿದೆ. ಶುಭ ಮಂಗಳ ಸಮಿತಿಯು ಸಮಾಜದ ವಧು ವರ ಅನ್ವೇಶಿತರ ಕಂಕಣ ಭಾಗ್ಯಕ್ಕಾಗಿ ಶ್ರಮಿಸುತ್ತಿದೆ. ಇನ್ನಿತರ ಹಿಂದುಳಿದ ವರ್ಗದ ಉಪ ಸಮಿತಿಯು ಪ್ರಮಾಣ ಪತ್ರ ದೊರಕಿಸಿಕೊಳ್ಳಲು ಕಾರ್ಯನಿರತವಾಗಿದೆ. ಶಿಸ್ತಿನ ಸಿಪಾಯಿ ಸೇವಾದಳದ ಅನುಪಮ ಸೇವೆ ಶ್ಲಾಘನೀಯ.  ಹೀಗೆ ಇನ್ನೂ ಹಲವು ಉಪ ಸಮಿತಿಗಳಿದ್ದು, ಕ್ಲಪ್ತ ಸಮಯದಲ್ಲಿ ಸಭೆ ಜರಗಿಸಿ ಕಾರ್ಯೊನ್ಮುಖವಾಗಿದೆ. ಸ್ಥಳೀಯ ಕಚೇರಿಗಳ ಸದಸ್ಯರ ದಂಡು ಅತೀ ಹುಮ್ಮಸ್ಸಿನಿಂದ ಕೇಂದ್ರ ಕಚೇರಿಯ ಸೂಕ್ತ ಮಾರ್ಗದರ್ಶನದಂತೆ ಕಾರ್ಯವೆಸಗುತ್ತಿದೆ. ಪ್ರಸ್ತುತ ವರ್ಷ ವಿಕ್ರೋಲಿ-ಕಂಜೂರ್ ಮಾರ್ಗ್ ಸ್ಥಳೀಯ ಕಚೇರಿ ಲೋಕಾರ್ಪಣೆಗೊಂಡರೆ ನವಿ ಮುಂಬಯಿಯಲ್ಲಿ ಸಮುದಾಯ ಭವನಕ್ಕೆ ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.

ಪ್ರಸ್ತುತ ಕಾರ್ಯಕಾರಿ ಸಮಿತಿಯ ಅವಧಿ 2018-2021ರ ಕಾಲಾವಧಿಗೆ ಎಸೋಸಿಯೇಶನ್‍ನ 26ನೇ ಅಧ್ಯಕ್ಷರಾಗಿ  ಜವಾಬ್ದಾರಿ ವಹಿಸಿಕೊಂಡವರು ಧಾರ್ಮಿಕ ಸಂಘಟಕ ಚಂದ್ರಶೇಖರ್ ಪೂಜಾರಿಯವರು ಎಲ್ಲರೊಂದಿಗೆ ಬೆರೆತು ಕಾರ್ಯವೆಸಗುವ ನೈಪುಣ್ಯತೆ ಹೊಂದಿದ ಪ್ರಸ್ತುತ ಅಧ್ಯಕ್ಷರು ಸನ್ಮಾನ್ಯ ಜಯ ಸಿ. ಸುವರ್ಣರ ಮಾಗದರ್ಶನದಂತೆ ಕಾರ್ಯಕಾರಿ ಸಮಿತಿಯ ಸಂಪೂರ್ಣ ಸಹಕಾರದೊಂದಿಗೆ ಕಾರ್ಯವೆಸಗುತ್ತಿದೆ. ಭುವನಡೊಂಜೇ ಬಿಲ್ಲವ ಭವನ ಎಂಬಂತೆ ಭವನವು 24 ಸಂವತ್ಸರಗಳನ್ನು ಕಳೆದು ರಜತ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿದೆ. ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠೆಗೊಂಡು 24 ವರ್ಷ ಸಂದಿದೆ. ಈ ಪರ್ವಕಾಲದಲ್ಲಿ  ನಾರಾಯಣ ಗುರುಗಳ ದಿವ್ಯ ಸನ್ನಿಧಿಯಲ್ಲಿ ಸಹಸ್ರ ಅಷ್ಟೋತ್ತರ ನಾಮಾವಳಿಯೊಂದಿಗೆ ಅಡವು ದೀದಾಂಡಲಾ ಬಡವು ತಗ್ಗಾವೊಡು ( ಅಡವಿಟ್ಟಾದರೂ ಹಸಿವು ನೀಗಿಸು) ಎಂಬಂತೆ ದಾನಿಗಳ ಸಹಕಾರದಿಂದ ಪ್ರತೀ ಗುರುವಾರ ಅನ್ನದಾನ ಪ್ರಾರಂಭಿಸಲು ಶ್ರೀ ಗುರು ಅನ್ನ ಪ್ರಸಾದ?ದ ಉದ್ಘಾಟನೆಯನ್ನು ಈ ಶುಭ ಸಂದರ್ಭದಲ್ಲಿ ಮಾಡಲಾಗುವುದು. ಲೋನಾವಾಲದ ರಾಜಕೀಯ ನೇತಾರ ಇತ್ತೀಚಿಗೆ ಲೋನಾವಾಲ ಬಿ.ಜೆ.ಪಿ.ಯ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀಧರ್ ಪೂಜಾರಿಯವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಶ್ರೀ ಜಯ ಸಿ. ಸುವರ್ಣ ( ಕಾರ್ಯಾಧ್ಯಕ್ಷರು, ಭಾರತ್ ಕೋ. ಆಪರೇಟಿವ್ ಬ್ಯಾಂಕ್), ಶ್ರೀ ವಾಸುದೇವ್ ಆರ್. ಕೋಟ್ಯಾನ್ (ನಿರ್ದೇಶಕರು, ಭಾರತ್ ಕೋ. ಆಪರೇಟಿವ್ ಬ್ಯಾಂಕ್), ಶ್ರೀ ಗಣೇಶ್ ಬೆರ್ಮು ಪೂಜಾರಿ ( ಉದ್ಯಮಿ), ಶ್ರೀ ಎನ್. ಟಿ. ಪೂಜಾರಿ (ಕಾರ್ಯಾಧ್ಯಕ್ಷರು, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಮತ್ತು ನಿರ್ದೇಶಕರು, ಭಾರತ್ ಕೋ. ಆಪರೇಟಿವ್ ಬ್ಯಾಂಕ್), ಶ್ರೀ ವಾಮನ್ ಡಿ. ಪೂಜಾರಿ (ಉದ್ಯಮಿ), ಶ್ರೀ ಶಿವರಾಮ್ ಸಿ. ಪೂಜಾರಿ ( ಮಾಲಕರು ಬಾಲಾಜಿ ಆಟೋ), ಶ್ರೀ ದಾಮೋದರ್ ಸಿ. ಕುಂದರ್ (ನಿರ್ದೇಶಕರು, ಭಾರತ್ ಕೋ. ಆಪರೇಟಿವ್ ಬ್ಯಾಂಕ್)ರವರು ಆಗಮಿಸಲಿರುವರು.

1991 ರಿಂದ ಸುವರ್ಣ ಯುಗ ಕಂಡ ಈ ಎಸೋಸಿಯೇಶನ್‍ಗೆ ಶ್ರಮಿಸಿದವರು ಹಲವರು. ದಿ| ವೈ. ನಾಗೇಶ್, ದಿ| ಈಶ್ವರ್ ಕೆ. ಹೆಜ್ಮಾಡಿ ದಿ| ಜಿ. ಸಿ. ಪೂಜಾರಿಯವರಲ್ಲದೇ, ವಾಸುದೇವ್ ಆರ್. ಕೋಟ್ಯಾನ್, ರಂಗ ಕೆ. ಪಾಲನ್, ಎಲ್. ವಿ. ಅಮೀನ್, ನಿತ್ಯಾನಂದ ಡಿ. ಕೋಟ್ಯಾನ್, ಎಂ.ಬಿ. ಕುಕ್ಯಾನ್,ಶ್ರೀ ಅಶ್ವಜಿತ್ ಹೆಜ್ಮಾಡಿಯವರಂತಹ ಸಹೃದಯಿ ಸೇವಕರನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು. 

ಇಂತಹ ಪ್ರತಿಷ್ಠಿತ ಸಂಸ್ಥೆ ರಜತ ಮಹೋತ್ಸಕ್ಕೆ ಪಾದಾರ್ಪಣೆ ಗೈಯುತ್ತಿರುವ ಈ ಸಂದರ್ಭದಲ್ಲಿ ತನ್ನ ಹಿತೈಷಿಗಳನ್ನು ಬರಮಾಡಿಸಿಕೊಳ್ಳುವ ಕಾತರದಲ್ಲಿದೆ. ಬನ್ನಿ ನಾವೆಲ್ಲ ಸದೃಢ ಸಮಾಜ ಕಟ್ಟೋಣ. ನಾರಾಯಣ ಗುರುಗಳ ತತ್ವ ಸಂದೇಶವನ್ನು ಪಾಲಿಸೋಣ ಎನ್ನುತ್ತಾ ತಮ್ಮೆಲ್ಲರ ಆಗಮನವನ್ನು ನಿರೀಕ್ಷಿಸುತ್ತೇವೆ.

ಬಿಲ್ಲವರಲ್ಲಿನ ಮಾಜಿ ಕೇಂದ್ರ ಸಚಿವ ಜನಾರ್ದಾ ಪೂಜಾರಿ, ಧುರೀಣ ಜಯ ಸುವರ್ಣರು ರಾಷ್ಟ್ರಕ್ಕೇ ಹೆಸರುವಾಸಿಯಾಗಿ ಪ್ರತೀಯೊಂದು ಸಮಾಜಕ್ಕೂ ಮೇರು ವ್ಯಕ್ತಿತ್ವವುಳ್ಳವರು. ಪ್ರಸಕ್ತ ಕಾಲಕ್ಕೆ ಇಂತವರ ಜೀವನವನ್ನೇ ಯುವಜನತೆ ಮೇಲ್ಫಂಕ್ತಿ, ಆದರ್ಶವಾಗಿಸುವ ಅಗತ್ಯವಿದೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi